Connect with us

ಲೈಫ್ ಸ್ಟೈಲ್

ಟ್ರೆಂಡ್ ಆಗುತ್ತಿದೆ ಫಂಕೀ ಫೇಸ್ ಮಾಸ್ಕ್ ಫ್ಯಾಷನ್..!

Published

on

  • ಚಿತ್ರಶ್ರೀ ಹರ್ಷ

ಗತ್ತಿನಲ್ಲಿ ಕರೋನ ಭೀತಿ ಮನೆ ಮಡಿದ್ದು,  ಜನರಲ್ಲಿ ಆತಂಕ ಸೃಷ್ಟಿಸಿರುವುದು ಒಂದೆಡೆ ಆದರೆ, ಜನರ ದಿನನಿತ್ಯದ ಜೀವನೋಪಾಯಕ್ಕೆ ಪೆಟ್ಟು ಬಿದ್ದಿರುವುದೂ ಅಷ್ಟೇ ನಿಜ.ಕಾಲೇಜು-ಕಛೇರಿಗಳಿಗೆ ತೆರಳುವವರಂತೂ ಕರೋನ ಭೀತಿಗೆ ತತ್ತರಿಸುತ್ತಿರುವುದು ಸುಳ್ಳಲ್ಲ. ಇನ್ನು ಕೆಲವರು , ಆಗಿದ್ದು ಆಗಲೇ ಅಂತ ಕೆಲಸಕ್ಕೆಂದು ಹೊರ ಬರುವುದು ತಪ್ಪಿಲ್ಲ. ಈ ಎಲ್ಲದರ ನಡುವೆ ಸದ್ಯ ಅಧಿಕ ಲಾಭ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಫೇಸ್ ಮಾಸ್ಕ್ ತಯಾರಕರು. ಮಾಲಿನ್ಯ ಮತ್ತು  ವೈರಸ್-ಬ್ಯಾಕ್ಟೀರಿಯಾ ಗಳಿಂದ ಸಂರಕ್ಷಿಸಿಕೊಳ್ಳಲು ಜನರು ಫೇಸ್ ಮಾಸ್ಕ್ ಮೊರೆ  ಹೋಗುತ್ತಿದ್ದಾರೆ. ಎಲ್ಲದರಲ್ಲೂ ಫ್ಯಾಷನ್ ಹುಡುಕುವ ಫ್ಯಾಷನ್ ಪ್ರಿಯರು,ಫ್ಯಾನ್ಸೀ ಮತ್ತು ಫಂಕೀ ಫೇಸ್ ಮಾಸ್ಕ್ ಫ್ಯಾಷನ್ ಅರಸಿ ಹೊರಟಿದ್ದು , ಮಾರುಕಟ್ಟೆಯಲ್ಲಿ ಸದ್ಯ ಫಂಕೀ ಫೇಸ್ ಮಾಸ್ಕ್ ಭಾರೀ ಸದ್ದು ಮಾಡುತ್ತಿದೆ.

ಫ್ಯಾಷನ್ ಲೋಕಕ್ಕೂ ಕರೋನ ಬಿಸಿ ತಟ್ಟಿರುವುದು ಸುಳ್ಳಲ್ಲ. ಜನಸಂದಣಿ ನಿಷೇಧಿಸಿರುವ ಬೆನ್ನಲ್ಲೇ, ಫ್ಯಾಷನ್ ಫೇಸ್ ಮಾಸ್ಕ್ ಧರಿಸಿ ರಾಂಪ್ ಮೇಲೆ ಹೆಜ್ಜೆ ಹಾಕಲು ಮುಂದಾಗಿದ್ದಾರೆ ಲಲನೆಯರು. ಸದ್ಯ ಫ್ಯಾಷನ್ ಶೋಗಳಲ್ಲಿ ಉಡುಪಿಗೆ ಮ್ಯಾಚ್ ಆಗುವ ಸ್ಟೈಲಿಶ್ ಹಾಗೂ ಫಂಕೀ ಫೇಸ್ ಮಾಸ್ಕ್ ಫ್ಯಾಷನ್ ಬೇರೂರಿದೆ .

ಕಲರ್ಫುಲ್ ಫೇಸ್ ಮಾಸ್ಕ್ ಟ್ರೆಂಡ್ ..!

ಹೆಚ್ಚುತ್ತಿರುವ ಕರೋನ , ಹೆಚ್1ಎನ್1 , ಫ್ಲೂ, ಮಾಲಿನ್ಯ ಭೀತಿಯಿಂದ ಫೇಸ್ ಮಾಸ್ಕ್ ಧರಿಸುವುದೂ ಇಂದಿನ ಜಗತ್ತಿನಲ್ಲಿ ಅನಿವಾರ್ಯ ವಾಗಿದೆ. ಎಲ್ಲದರಲ್ಲೂ ವಿಭಿನ್ನತೆ ಹಾಗೂ ಫ್ಯಾಷನ್ ಹುಡುಕುವ ಫ್ಯಾಷನ್ ಪ್ರಿಯರು, ಸಾಧಾರಣ   ಫೇಸ್ ಮಾಸ್ಕ್ ಗಳನ್ನು ಒಲ್ಲೆ ಅಂದಿದ್ದು , ನೂತನ ಟ್ರೆಂಡೀ ಫೇಸ್ ಮಾಸ್ಕ್ಗಳಿಗೆ ನಾಂದಿ ಹಾಡಿದೆ. ಬಣ್ಣ ಬಣ್ಣದ,  ವಿವಿಧ ಪ್ರಿಂಟ್ ಇರುವ , ಕಾರ್ಟೂನ್,  ಫಂಕೀ ಫೇಸ್ ಮಾಸ್ಕ್ ಫ್ಯಾಷನ್ ಆವರಿಸಿಕೊಂಡಿದೆ.

ಕಾರ್ಟೂನ್ ಫೇಸ್ ಮಾಸ್ಕ್ 

ಚಿಕ್ಕ ಮಕ್ಕಳು ಫೇಸ್ ಮಾಸ್ಕ್ ಧರಿಸಲು ಇಷ್ಟ ಪಡದಿದ್ದರೆ ಕಾರಣ , ಅವರಲ್ಲಿ ಫೇಸ್ ಮಾಸ್ಕ್ ಕ್ರೇಜ್ ಹುಟ್ಟಿಸುವ ಕಾರ್ಟೂನ್ ಪ್ರಿಂಟ್ ನ ಫೇಸ್ ಮಾಸ್ಕ್ ಮಾರುಕಟ್ಟೆಯಲ್ಲಿ ಲಭ್ಯ ಇದ್ದು,  ಡೋರೇಮಾನ್,  ಬಾರ್ಬೀ,  ಮಿಕ್ಕಿ ಮೌಸ್,  ಪೋಕೇಮಾನ್,  ಅನಿಮಲ್ ಕಾರ್ಟೂನ್ ಪ್ರಿಂಟ್ ನ ಫೇಸ್ ಮಾಸ್ಕ್ ಮಕ್ಕಳನ್ನು ಆಕರ್ಷಿಸುತ್ತಿದೆ.

ಎಂಬ್ಲಿಷ್ಡ್ ಫೇಸ್ ಮಾಸ್ಕ್ 

ಇನ್ನು ಮುತ್ತು- ರತ್ನ, ಮಣಿಗಳಿಂದ ಕೂಡಿದ ಫೇಸ್ ಮಾಸ್ಕ್ ಫ್ಯಾಷನ್ ರಾಂಪ್ ಗಳಲ್ಲಿ ಹೆಚ್ಚು ಹೆಚ್ಚು ಸ್ಟೈಲಿಶ್ ಲುಕ್ ನೀಡುತ್ತದೆ.  ಇತ್ತೀಚಿನ ಫ್ಯಾಷನ್ ಶೋಗಳಲ್ಲಂತೂ ಎಂಬ್ಲಿಷ್ಡ್ ಫೇಸ್ ಮಾಸ್ಕ್ ಫ್ಯಾಷನ್ ಟ್ರೆಂಡ್ ಸೃಷ್ಟಿಸಿದ್ದು,  ಯುವಪೀಳಿಗೆ ಯಲ್ಲಿ ಈ ಫೇಸ್ ಮಾಸ್ಕ್ ಗಳಿಗೆ ಭಾರೀ ಕ್ರೇಜ್ ಹುಟ್ಟಿ ಹಾಕಿದೆ.

ಗ್ಲಿಟರ್ ಪಾರ್ಟಿ ವೇರ್ ಫೇಸ್ ಮಾಸ್ಕ್

ವೈರಸ್-ಬ್ಯಾಕ್ಟೀರಿಯಾ ಗಳಿಗೆ ಹೆದರಿ ಪಾರ್ಟಿ ಮಾಡುವುದನ್ನು ನಿಲ್ಲಿಸಿದ್ದ ಪಾರ್ಟಿ ಪ್ರಿಯರು , ಈಗ ಮಾರುಕಟ್ಟೆ ಗೆ ಲಗ್ಗೆ ಇಟ್ಟಿರುವ ಗ್ಲಿಟರ್ ಫೇಸ್ ಮಾಸ್ಕ್ ಧರಿಸಿ ಪಾರ್ಟಿ ಫೀವರ್ ನ ಟೆಂಪರೇಚರ್ ಹೆಚ್ಚಿಸುತ್ತಿವೆ ಈ ಗ್ಲಿಟರ್ ಸೀಕ್ವೀನ್ ಫೇಸ್ ಮಾಸ್ಕ್ ಫ್ಯಾಷನ್!

ಫ್ಲೋರಲ್ ಪ್ರಿಂಟ್ ಫೇಸ್ ಮಾಸ್ಕ್

ಇನ್ನು ಸ್ಪ್ರಿಂಗ್ ಸೀಸನ್ ಶುರುವಾಗಿದ್ದು,  ಸ್ಪ್ರಿಂಗ್ ಸ್ಪೆಷಲ್ ಔಟ್ಫಿಟ್ ಮಾರುಕಟ್ಟೆ ಗೆ ಲಗ್ಗೆ ಇಟ್ಟಿರುವ ಬೆನ್ನಲ್ಲೇ , ಫ್ಲೋರಲ್ ಪ್ರಿಂಟ್ ಫೇಸ್ ಮಾಸ್ಕ್ ಕೂಡಾ ಬೇಡಿಕೆ ಗಿಟ್ಟಿಸಿದಕೊಂಡಿದೆ.  ಫ್ಲೋರಲ್ ಪ್ರಿಂಟ್ ಸ್ಪ್ರಿಂಗ್ ನ ಬಹು ಮುಖ್ಯ ಫ್ಯಾಷನ್ ಆಗಿದ್ದು,  ಇದಕ್ಕೆ ಹೊಂದುವ ಫೇಸ್ ಮಾಸ್ಕ್ ಗಳೂ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.

ಫಂಕೀ ಫೇಸ್ ಮಾಸ್ಕ್ ಫ್ಯಾಷನ್ 

ಇನ್ನು  ಟೀನೇಜ್ ಹುಡುಗಿಯರಿಗೆ ಫೇವರಿಟ್ ಅನಿಸಿದೆ ಫಂಕೀ ಫೇಸ್ ಮಾಸ್ಕ್ ಫ್ಯಾಷನ್.  ಚಿತ್ರ ವಿಚಿತ್ರ,  ತರಲೆ ಶೈಲಿಯ ಎಂಬೋಜ್ಡ್ ಫಂಕೀ ಫೇಸ್ ಮಾಸ್ಕ್ ಫ್ಯಾಷನ್ ಟ್ರೆಂಡ್ ಯುವಪೀಳಿಗೆ ಯಲ್ಲಿ ಹೆಚ್ಚಿದೆ .

ಸೈ-ಫೈ ಫೇಸ್ ಮಾಸ್ಕ್ 

ಇನ್ನೂ  ಹೈ -ಫೈ ಸ್ಟೈಲಿಶ್ ಲುಕ್ ನೀಡುವ ದುಬಾರಿ ಬೆಲೆಯ ಸೈ-ಫೈ ಕ್ಲಾಸಿಕ್ ಫೇಸ್ ಮಾಸ್ಕ್ ಗಳು ಬಹಳ ಅದ್ದೂರಿ ಅವತರಣಿಕೆ ಗೆ ಸಾಕ್ಷಿ ಆಗಿದ್ದು,  “ಕಾಸಿಗೆ ತಕ್ಕ ಕಜ್ಜಾಯ” , ಎಂಬಂತೆ ಬೆಲೆಗೆ ತಕ್ಕಂತೆ ಫೇಸ್ ಮಾಸ್ಕ್ ದೊರೆಯುತ್ತದೆ.

ಟಿಪ್ಸ್..!

ಮಾರುಕಟ್ಟೆಯಲ್ಲಿ ಡಿಸ್ಪೋಸಬಲ್ ಕಾರ್ಟೂನ್ ಹಾಗೂ ಪ್ರಿಂಟ್ ಫೇಸ್ ಮಾಸ್ಕ್ ದೊರೆಯುತ್ತಿದ್ದು , ಕೇವಲ ಒಂದು ಬಾರಿ ಅಷ್ಟೆ ಇದನ್ನು ಬಳಸಿ ಬಹುದಾಗಿದೆ. ಒಂದು ಬಾರಿ ಬಳಸಿದ ಮಾಸ್ಕ್ ಅನ್ನು ಮತ್ತೆ ಬಳಸಬೇಡಿ. ಮರುಬಳಕೆ ಮಾಡುವ ಬಹುದಾದ ಮಾಸ್ಕ್ ಅನ್ನು ಡೆಟಾಲ್ ಅಥವಾ ಡಿಸ್ ಇಂಫೆಕ್ಟಂಟ್ ಬಳಸಿ ಸ್ಟೆರಿಲೈಸ್ ಮಾಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಹೆಸರಲ್ಲೇ ಕಲೆ ಬೆರತಿರುವವಳು ನಾನು ಚಿತ್ರಶ್ರೀ ಹರ್ಷ. ವೃತ್ತಿಯಲ್ಲಿ ಉಪನ್ಯಾಸಕಿ. ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದ ದ M.A Economics ಪದವೀಧರೆ. M.phil ಕೂಡ ಮುಗಿದಿದ್ದು ಬಿ.ಬಿ.ಎಂ.ಪಿ ಕಾಲೇಜಿನಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಫ್ಯಾಷನ್ ಸೆಳೆತ ಚಿಕ್ಕಂದಿನಿಂದಲೂ ಇದ್ದೇ ಇತ್ತು. ಅದಕ್ಕೆ ತಕ್ಕಂತೆ ಫ್ಯಾಷನ್ ಲೋಕವೂ ಕೈ ಬೀಸಿ ಕರೆಯುತ್ತಿತ್ತು. ಬಾಲ್ಯದ ಆಸೆ ಈಗ ಈಡೇರಿದೆ. ಫ್ಯಾಷನ್ ಲೋಕದಲ್ಲಿ "ನೈಲ್ ಆರ್ಟ್ ಸ್ಪೆಷಲಿಸ್ಟ" ಎಂಬ ಬಿರದು ನನ್ನದಾಗಿದೆ. ಹಲವಾರು ಖಾಸಗಿ ವಾಹಿನಿಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರ ಪತ್ರಿಕೆ ಗಳಿಗೆ ಫ್ಯಾಷನ್ ಲೇಖನ ಬರೆಯುತ್ತಿದ್ದೇನೆ. ಬ್ಯೂಟಿ ಟ್ರೆಂಡ್ ಹಾಗೂ ನೈಲ್ ಆರ್ಟ್ ನಲ್ಲಿ ವಿನೂತನ ಹಾಗೂ ಟ್ರೆಂಡೀ ಲುಕ್ ಸೃಷ್ಟಿಸುವುದು ನನ್ನ ಹವ್ಯಾಸ. ಹಲವಾರು ಕವನಗಳನ್ನು ಬರೆದಿದ್ದು, ಪ್ರತಿಷ್ಠಿತ ದಿನಪತ್ರಿಕೆ ಗಳಲ್ಲಿ ಪ್ರಕಟವಾಗಿದೆ.

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂಕಣ

Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?

Published

on

indian birthwort, Aristolochia tagala

‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.

ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:

ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.

ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?

ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.

‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?

ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.

ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.

ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Continue Reading

ದಿನದ ಸುದ್ದಿ

ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ

Published

on

ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.

ಗೃಹ ಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.

ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending