ದಿನದ ಸುದ್ದಿ
ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಸ್ತ್ರೋಕ್ತ ಪರಿಹಾರ : ಕರೆಮಾಡಿ
ಶ್ರೀ ದತ್ತಾತ್ರೇಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ರಾಶಿಗಳ ಶುಭಾಶುಭಫಲಗಳನ್ನು ತಿಳಿಯೋಣ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಷಯ, ದಾಂಪತ್ಯ, ಕೌಟುಂಬಿಕ ಕಲಹ, ಇನ್ನು ಇತ್ಯಾದಿ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಸ್ತ್ರೋಕ್ತ ತಾಂತ್ರಿಕ್ ವಿಧಾನಗಳಿಂದ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ: 9945410150
ಮೇಷ ರಾಶಿ
ಸಕಾರಾತ್ಮಕ ಚಿಂತೆಯ ಫಲಗಳಿಂದ ಶುಭಕರವಾದ ವಾತಾವರಣ ನಿರ್ಮಿಸಲಿದ್ದೀರಿ. ಯೋಜನೆಗಳಲ್ಲಿ ಉತ್ತಮ ರೀತಿಯ ಪಾಲ್ಗೊಳ್ಳುವಿಕೆ ಕಂಡುಬರುತ್ತದೆ. ವ್ಯವಹಾರ ನಿಮಿತ್ತ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ ಇದು ಲಾಭಾಂಶ ತಂದುಕೊಡುತ್ತದೆ. ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ಸೂಕ್ತ. ಸಂಗಾತಿಯ ಇಷ್ಟಾರ್ಥಗಳನ್ನು ಕಡೆಗಣಿಸದೆ ಅವರನ್ನು ಸಂತುಷ್ಟ ಪಡಿಸಿ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ವೃಷಭ ರಾಶಿ
ಸಂತೋಷದ ವಿಷಯಗಳನ್ನು ಈ ದಿನ ಆಲಿಸಲಿದ್ದೀರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಯ ಸಾಧ್ಯತೆಗಳು ಕಂಡು ಬರುತ್ತದೆ. ನಿಮ್ಮ ವಿಚಾರದಂತೆ ಆರ್ಥಿಕ ವ್ಯವಸ್ಥೆ ನಡೆಯಲಿದ್ದು ಸಮಯದ ಗತಿಯಲ್ಲಿ ಉತ್ತಮ ಫಲಿತಾಂಶ ತಂದುಕೊಡಲಿದೆ. ನಂಬಿಕಸ್ಥ ಜನಗಳಿಂದ ವಂಚನೆಗಳು ಬರಬಹುದಾದ ಸಾಧ್ಯತೆಯಿದೆ ಎಚ್ಚರ. ಹೊಸ ಒಪ್ಪಂದಗಳು ಕಂಡುಬರಲಿದ್ದು ಸಕಾರಾತ್ಮಕವಾಗಿ ನಿಮ್ಮಂತೆಯೇ ಆಗುವುದು ನಿಶ್ಚಿತ. ವ್ಯಾಪಾರ-ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ಕಾಣಬಹುದಾಗಿದೆ. ಮಕ್ಕಳನ್ನು ಆದಷ್ಟು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವುದು ಕ್ಷೇಮ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಮಿಥುನ ರಾಶಿ
ನಿಮ್ಮ ಪ್ರಯತ್ನ ಹಾಗೂ ಶ್ರಮದ ಫಲಗಳು ನಿಮ್ಮ ಗೆಲುವಿಗೆ ಸಹಕಾರಿಯಾಗಲಿದೆ. ಯೋಜನೆಗಳಲ್ಲಿ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಅಚಾತುರ್ಯವಾಗಿ ನಡೆಯುವ ತಪ್ಪುಗಳಿಂದ ಮಾನಸಿಕ ಗೊಂದಲ ಏರ್ಪಡು ಬಹುದು ಆದಷ್ಟು ತಪ್ಪಾಗದಂತೆ ಕಾರ್ಯನಿರ್ವಹಿಸಿ. ಕೌಟುಂಬಿಕ ವ್ಯಾಜ್ಯಗಳಲ್ಲಿ ನಿಮ್ಮ ಪರವಾಗಿಯೇ ಗೆಲುವು ಕಂಡುಬರುತ್ತದೆ. ಹಿರಿಯರು ನಿಮ್ಮ ವಿಚಾರಕ್ಕೆ ಮನಸೋತು ಪ್ರಶಂಸೆ ಹಾಗೂ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಕಾಣಬಹುದು. ಕಮಿಷನ್ ಏಜೆಂಟ, ಮಧ್ಯವರ್ತಿಗಳಿಗೆ ಉತ್ತಮ ಫಲಿತಾಂಶ ವಿದೆ. ಶೈಕ್ಷಣಿಕವಾಗಿ ನಿಮ್ಮ ಆಸಕ್ತಿ ಇನ್ನೂ ಹೆಚ್ಚಿನದಾಗಿ ಕಂಡುಬರುತ್ತದೆ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಕರ್ಕಾಟಕ ರಾಶಿ
ನಿಮ್ಮನ್ನು ಅನಗತ್ಯವಾಗಿ ಪ್ರೇರೇಪಿಸುವ ಜನಗಳು ಶಾಂತಿಯನ್ನು ಕದಡ ಬಹುದಾಗಿದೆ ಆದಷ್ಟು ತಾಳ್ಮೆ ಇರಲಿ. ಕೆಲಸದಲ್ಲಿ ನಿರುತ್ಸಾಹದ ವಾತಾವರಣ ತೆಗೆದುಹಾಕಲು ಪ್ರಯತ್ನಿಸಿ. ಆತುರದ ನಿರ್ಣಯಗಳಿಂದ ಸಮಸ್ಯೆ ಬರಬಹುದು ಎಚ್ಚರ. ವ್ಯವಹಾರದಲ್ಲಿ ಗೊಂದಲಗಳು ಹೆಚ್ಚಾಗಲಿದ್ದು ಇದು ಪ್ರತಿಕೂಲ ಪರಿಣಾಮ ಬೀರಬಹುದು ಆದಷ್ಟು ಸಮಾಧಾನಚಿತ್ತದಿಂದ ಅಧ್ಯಯನ ನಡೆಸಿ. ಪತ್ನಿಯ ಬೇಡಿಕೆಗಳ ಪಟ್ಟಿ ಬೆಳೆಯುತ್ತಾ ಸಾಗಲಿದೆ ನಿಮ್ಮ ಕೈಲಾದಷ್ಟು ಸ್ಪಂದಿಸುವುದು ಒಳಿತು.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಸಿಂಹ ರಾಶಿ
ಮೋಸದ ಜಾಲಗಳು ವಿಷವರ್ತುಲದಂತೆ ಸುತ್ತುತ್ತಿದೆ, ಇದು ನಿಮ್ಮ ವ್ಯವಹಾರಗಳನ್ನು ನಷ್ಟ ಮಾಡಬಹುದು ಎಚ್ಚರ. ಸಾಲ ನೀಡುವ ಗೋಜಿಗೆ ಹೋಗಬೇಡಿ. ನಯವಂಚನೆಯ ಮಾತುಗಳಿಂದ ನಿಮ್ಮ ವ್ಯವಸ್ಥೆಯನ್ನು ಹಾಳು ಮಾಡಬಹುದು ಎಚ್ಚರವಿರಲಿ. ಕೆಲಸದ ಒತ್ತಡದಿಂದ ಕುಟುಂಬದ ಬಗ್ಗೆ ಗಮನಹರಿಸಲು ಸಾಧ್ಯವಾಗದಿರಬಹುದು ಆದಷ್ಟು ಕುಟುಂಬಕ್ಕಾಗಿ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳಿ. ಇಬ್ಬರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವುದು ತಪ್ಪಾಗಬಹುದು. ಗೃಹ ಕಟ್ಟಡ ಕಾಮಗಾರಿಗಳಿಗೆ ಉತ್ತಮವಾದ ವಾತಾವರಣ ಇರಲಿದೆ. ಆರೋಗ್ಯದ ಹಿತದೃಷ್ಟಿ ಗಮನವಹಿಸುವುದು ಸೂಕ್ತ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಕನ್ಯಾ ರಾಶಿ
ಚರ್ಚಾಸ್ಪದ ವಿಷಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ನಿಮ್ಮ ವಿಚಾರಗಳು ಕೆಲವರಿಗೆ ಅಪಹಾಸ್ಯ ಎನಿಸಬಹುದು ಆದರೆ ಅವುಗಳು ಉತ್ತಮವಾದದ್ದು ಎಂಬುದು ನಂತರವೇ ಮನವರಿಕೆ ಆಗಲಿದೆ. ಹೊಸತನದತ್ತ ನಿಮ್ಮ ಪ್ರಯಾಣ ಸಾಗಲಿದೆ. ನೂತನ ಉದ್ಯಮವನ್ನು ಸ್ಥಾಪಿಸುವ ಗುರಿ ಈಡೇರುವ ಸಾಧ್ಯತೆಗಳನ್ನು ಕಾಣಬಹುದು. ಸಂಗಾತಿಯೊಡನೆ ಗೃಹಾಲಂಕಾರಕ್ಕೆ ಖರೀದಿ ಪ್ರಕ್ರಿಯೆಗಳನ್ನು ಆರಂಭಿಸುವ ಸಾಧ್ಯತೆ ಇದೆ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ತುಲಾ ರಾಶಿ
ಶೈಕ್ಷಣಿಕ ಅಧ್ಯಯನದಲ್ಲಿ ಹಿನ್ನಡೆಯಾಗಬಹುದು. ಏಕಾಗ್ರತೆಯನ್ನು ರೂಢಿಸಿಕೊಳ್ಳಲು ಮುಂದಾಗಿ. ಮಕ್ಕಳ ಸ್ವಭಾವವನ್ನು ಆದಷ್ಟು ಕೂಲಂಕುಷವಾಗಿ ಅಧ್ಯಯನ ಮಾಡುವುದು ಒಳಿತು. ಶುಭ ಕಾರ್ಯದ ಬಗ್ಗೆ ಕುಟುಂಬದಲ್ಲಿ ಪ್ರಸ್ತಾಪನೆ ನಡೆಯಲಿದೆ. ಸಾಂಪ್ರದಾಯಿಕ ವಿಚಾರಗಳನ್ನು ಕಡೆಗಣಿಸಬೇಡಿ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ವೃಶ್ಚಿಕ ರಾಶಿ
ಉದ್ಯೋಗದಲ್ಲಿ ಮತ್ಸರ ಸಾಧಿಸುವ ಜನಗಳು ಕಂಡುಬರುತ್ತಾರೆ, ನಿಮ್ಮ ಉತ್ತಮ ಮಾತುಗಳಿಂದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಪ್ರಯತ್ನ ಮಾಡಿ. ನಿಮ್ಮ ಗುರಿ ತಲುಪುವರೆಗೆ ಛಲ ಬಿಡಬೇಡಿ, ಆತ್ಮವಿಶ್ವಾಸದಿಂದ ಸಾಧನೆಗೆ ಮುಂದಾಗಿ. ಕುಟುಂಬಸ್ಥರಿಂದ ಅನುಕೂಲಕರ ಸಂಗತಿಗಳು ಈ ದಿನ ಕಾಣಬಹುದು. ದುಂದುವೆಚ್ಚವನ್ನು ಆದಷ್ಟು ನಿಲ್ಲಿಸುವುದು ಸೂಕ್ತ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಧನಸ್ಸು ರಾಶಿ
ಮಾತಿಗಿಂತ ಕೃತಿ ಮುಖ್ಯ ಸಂಗತಿ ಎಂಬುದನ್ನು ನೆನಪಿಡಿ. ಯಶಸ್ವಿಗೆ ಶ್ರಮ ಅಗತ್ಯವಿದೆ, ಆದಷ್ಟು ಸೋಮಾರಿತನವನ್ನು ತೆಗೆದುಹಾಕುವುದು ಒಳ್ಳೆಯದು. ಕೆಲವರು ಹೊಗಳಬಹುದು ಅಥವಾ ನಿಮ್ಮನ್ನು ನೀವೇ ಉತ್ತಮ ದರ್ಜೆಯಲ್ಲಿ ತೋರ್ಪಡಿಸಿ ಕೊಳ್ಳಬಹುದು ಇವುಗಳು ಶಾಶ್ವತವಲ್ಲ ಬದುಕಿನ ಗೆಲುವಿಗೆ ನಿರಂತರ ಹೋರಾಟ ಅಗತ್ಯ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150.
ಮಕರ ರಾಶಿ
ನಿಮ್ಮಲ್ಲಿನ ಬೇಜವಾಬ್ದಾರಿತನದಿಂದ ಇಂದು ಕೆಲವು ಸಂಕಷ್ಟಗಳು ಈಡಾಗಬಹುದು ಎಚ್ಚರವಿರಲಿ. ಕೆಲವು ಆಮಂತ್ರಣಗಳು ನಿಮಗೆ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮನಸ್ಥಿತಿ ತರುತ್ತದೆ. ಆದಷ್ಟು ನಿಮ್ಮ ಕೆಲಸವನ್ನು ನೀವೇ ಮಾಡಿ ಅನ್ಯರ ನಂಬಿ ಸಮಸ್ಯೆಗಳಲ್ಲಿ ಸಿಲುಕಬೇಡಿ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಕುಂಭ ರಾಶಿ
ನೀವು ಈ ದಿನ ಪರಿಶ್ರಮ ಹಾಗೂ ಹೆಚ್ಚಿನ ಒತ್ತಡ ಅನುಭವಿಸುವ ಸೂಚನೆ ಕಂಡು ಬರುತ್ತದೆ. ಕೆಲವು ವ್ಯವಹಾರಗಳು ನಿಮ್ಮ ಇಚ್ಛೆಯ ವಿರುದ್ಧವಾಗಿ ನಡೆಯಬಹುದಾದ ದಿನವಿದು. ಹಣಕಾಸಿನಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಬಹುದು.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಮೀನ ರಾಶಿ
ನಿಮ್ಮ ಮನಸ್ಸು ಗೊಂದಲ ಮತ್ತು ಅಸಮತೋಲನದಿಂದ ವರ್ತಿಸಲಿದೆ, ನೀವು ಈ ದಿನ ಯೋಗ, ವ್ಯಾಯಾಮದಲ್ಲಿ ತೋಡಗುವುದು ಒಳಿತು. ಸಣ್ಣಪುಟ್ಟ ವಿಷಯಗಳನ್ನು ಹೆಚ್ಚಾಗಿ ಚರ್ಚಿಸಿ ಅಥವಾ ಚಿಂತೆಗೆ ತೆಗೆದುಕೊಂಡು ಕೊರಬೇಡಿ. ಪತ್ನಿಯ ಹಿತನುಡಿಗಳು ಹಾಗೂ ಪ್ರೇಮಭರಿತ ನೋಟವು ನಿಮಗೆ ಸಮಾಧಾನ ತರುವುದು ನಿಶ್ಟಿತ. ಸಂಜೆಯ ವೇಳೆಗೆ ಶುಭ ಸುದ್ದಿ ಕೇಳುವಿರಿ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ನಿಮ್ಮ ಸಮಸ್ಯೆಗಳ ಸಮಾಲೋಚನೆಗಾಗಿ ಲಭ್ಯರಿದ್ದಾರೆ. ಪರಿಹಾರ ಮಾರ್ಗದರ್ಶನಕ್ಕಾಗಿ
ಇಂದೇ ಕರೆ ಮಾಡಿ: 9945410150

ದಿನದ ಸುದ್ದಿ
ಆಯುರ್ವೇದ ಆರೋಗ್ಯಕರ ಜೀವನ ಶೈಲಿ
ಸುದ್ದಿದಿನ,ದಾವಣಗೆರೆ:ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ ಎಂದು ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಅವರು ಶನಿವಾರ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಸಂಸ್ಥೆಯು ಏರ್ಪಡಿಸಿದ್ದ ದ್ವಿತೀಯ ಘಟಿಕೋತ್ಸವ ಸಮಾರಂಭವನ್ನು ಉದ್ಪಾಟಿಸಿ ಮಾತನಾಡಿದರು.
ಈಗಿನ ದಿನಮಾನಗಳಲ್ಲಿ ಇಡೀ ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ, ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ. ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಆರೋಗ್ಯ ಸೇವೆಗಳು ಇಂದಿನ ವೈದ್ಯಕೀಯ ಕ್ಷೇತ್ರದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿವೆ. ಇಂತಹ ತಾಂತ್ರಿಕ ಕ್ರಾಂತಿಯ ಯುಗದಲ್ಲಿ ಪದವಿ ಪಡೆದು ಹೊರಬರುತ್ತಿರುವ ನೂತನ ವೈದ್ಯರು ಕೇವಲ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನಕ್ಕೆ ಸೀಮಿತವಾಗದೆ, ಆಧುನಿಕ ವಿಜ್ಞಾನದ ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಭಯ ಕ್ಷೇತ್ರಗಳ ನಡುವೆ ಬಲವಾದ ಸೇತುವೆಯಾಗಿ ಕೆಲಸ ಮಾಡಬೇಕಾದ ತುರ್ತು ಅಗತ್ಯವಿದೆ ಎಂದರು.
ಕೃತಕ ಬುದ್ಧಿಮತ್ತೆಯು ರೋಗನಿರ್ಣಯವನ್ನು ಹೆಚ್ಚು ನಿಖರ ಹಾಗೂ ವೇಗವಾಗಿಸಲು ನೆರವಾದರೆ, ಡಿಜಿಟಲ್ ಆರೋಗ್ಯ ಸೇವೆಗಳು ದೂರದ ಊರುಗಳಿಗೂ ಚಿಕಿತ್ಸೆಯನ್ನು ತಲುಪಿಸಲು ಸಹಕಾರಿಯಾಗಿವೆ. ಆದ್ದರಿಂದ, ಹೊಸ ತಲೆಮಾರಿನ ವೈದ್ಯರು ಕೇವಲ ದಿನನಿತ್ಯದ ಕ್ಲಿನಿಕ್ ಅಥವಾ ಆಸ್ಪತ್ರೆಯ ಚಿಕಿತ್ಸೆಗೆ ಸೀಮಿತವಾಗದೆ, ತಂತ್ರಜ್ಞಾನದ ದತ್ತಾಂಶಗಳನ್ನು ಬಳಸಿಕೊಂಡು ಹೊಸ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ತಮ ಸಂಶೋಧಕರಾಗಬೇಕು. ಇದರೊಂದಿಗೆ, ಸಮಾಜದಲ್ಲಿ ತಂತ್ರಜ್ಞಾನ ಮತ್ತು ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರಾಗಿಸಿ, ಮಾನವೀಯ ಕಾಳಜಿಯೊಂದಿಗೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನೈಜ ಮಾರ್ಗದರ್ಶಕರಾಗಿ ಹೊರಹೊಮ್ಮಬೇಕಿದೆ ಎಂದು ತಿಳಿಸಿದರು.
ವೈದ್ಯಕೀಯ ಸೇವೆಯು ಅತ್ಯಂತ ಪವಿತ್ರವಾದ ಮಾನವೀಯ ಸೇವೆಯಾಗಿದೆ. ರೋಗಿಗಳಿಗೆ ಔಷಧಿಗಿಂತ ಮುಂಚಿತವಾಗಿ ವೈದ್ಯರ ಪ್ರೀತಿಯ ನುಡಿಗಳು ಹಾಗೂ ಸಕಾರಾತ್ಮಕ ನಡವಳಿಕೆಯ ಅಗತ್ಯವಿರುತ್ತದೆ. ಆದ್ದರಿಂದ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಗ್ಲೋಬಲ್ ಟ್ರೆಡಿಷನಲ್ ಮೆಡಿಸಿನ್ ಸೆಂಟರ್’ ಸ್ಥಾಪಿಸುತ್ತಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ: ಶ್ರೀನಿವಾಸ್ ಬನ್ನಿಗೊಳ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಎಸ್.ವಿ.ಹಲಸೆ, ತಪೋವನ ಸಂಸ್ಥೆಯ ಅಧ್ಯಕ್ಷ ಡಾ. ಶಶಿಕುಮಾರ್ ವಿ.ಎಂ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಅಶ್ವಿನಿ ಕೆ.ಆರ್., ಡಾ.ಸುಮನ ಭಟ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಸತಿ ಯೋಜನೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.
ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
-
ದಿನದ ಸುದ್ದಿ5 days agoವಸತಿ ಯೋಜನೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days agoರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
-
ದಿನದ ಸುದ್ದಿ6 days agoಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ6 days agoಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
-
ದಿನದ ಸುದ್ದಿ7 hours agoಆಯುರ್ವೇದ ಆರೋಗ್ಯಕರ ಜೀವನ ಶೈಲಿ

