Connect with us

ದಿನದ ಸುದ್ದಿ

ಬಿ.ಐ.ಇ.ಆರ್.ಟಿ ಹುದ್ದೆಗಳಿಗೆ ವಿಶೇಷ ಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Published

on

ಸುದ್ದಿದಿನ ಡೆಸ್ಕ್ : ಸಾರ್ವಜನಿಕ ಸಮಗ್ರ ಶಿಕ್ಷಣ ಇಲಾಖೆಯ ಸಮಗ್ರ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ಸಮನ್ವಯ ಶಿಕ್ಷಣ ಚಟುವಟಿಕೆಯ ದಾವಣಗೆರೆ ಜಿಲ್ಲಾ ವ್ಯಾಪ್ತಿಯ 06 ತಾಲ್ಲೂಕುಗಳಲ್ಲಿ ಖಾಲಿ ಇರುವ ಬಿ.ಐ.ಇ.ಆರ್.ಟಿ(ಪ್ರಾಥಮಿಕ) ಮತ್ತು ಬಿ.ಐ.ಇ.ಆರ್.ಟಿ(ಫ್ರೌಡ) ಹುದ್ದೆಗಳಿಗೆ ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಆರ್.ಸಿ.ಐ ನಿಯಮದಂತೆ ವಿಶೇಷ ಡಿ.ಇಡಿ ಮತ್ತು ವಿಶೇಷ ಬಿ.ಇಡಿ ಪದವಿಯ ವಿದ್ಯಾರ್ಹತೆ ಹೊಂದಿರುವವರನ್ನು 2022-23ನೇ ಸಾಲಿಗೆ ನೇರಗುತ್ತಿಗೆ ಮೂಲಕ ತಾತ್ಕಾಲಿಕ ಆಯ್ಕೆ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಯ ಎಲ್ಲಾ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು ಮತ್ತು ಆರ್.ಸಿ.ಐ ನೊಂದಣಿ(2022-23ನೇ ಸಾಲಿಗೆ) ಪ್ರಮಾಣ ಪತ್ರದೊಂದಿಗೆ ಸ್ವವಿವರವುಳ್ಳ ಮಾಹಿತಿಯನ್ನು ಜೂ.06 ಸಂಜೆ 5 ಗಂಟೆಯೊಳಗೆ ಅಂಚೆ ಅಥವಾ ಮುದ್ದಾಂ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಮಗ್ರ ಶಿಕ್ಷಣ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ, ಅಂಬೇಡ್ಕರ್ ವೃತ್ತ ದಾವಣಗೆರೆ-577002 ಇಲ್ಲಿಗೆ ತಲುಪಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-296445, ಮೊ.ಸಂ:9448999394ನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಕ್ರೈಸ್ ಇಲಾಖೆಯ ನೇಮಕಾತಿ ಪರೀಕ್ಷೆ: ಶೇ. 49.69ರಷ್ಟು ಅಭ್ಯರ್ಥಿಗಳು ಹಾಜರು

Published

on

ಸುದ್ದಿದಿನ,​ದಾವಣಗೆರೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ಕ್ರೈಸ್ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ಸಂಸ್ಥೆಯ ಉಳಿಕೆ ಮೂಲ ವೃಂದ ಮತ್ತು ಕಾರಾಗೃಹ ಇಲಾಖೆಯ ಕಲ್ಯಾಣ ಕರ್ನಾಟಕ ವೃಂದದ ಜೈಲರ್, ವಾರ್ಡರ್ ( ವೀಕ್ಷಕರು ), ವಾರ್ಡರ್ ಕಮ್ ನರ್ಸಿಂಗ್, ದ್ವಿತೀಯ ದರ್ಜೆ ಭೋದಕರು -2, ಹುದ್ದೆಗಳ ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ನವೆಂಬರ್ 28 ರಂದು ದಾವಣಗೆರೆ ನಗರದ ಒಟ್ಟು 05 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು.

​ಪರೀಕ್ಷೆ ಬರೆಯಲು ಒಟ್ಟು 2998 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 1490 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1508 ಅಭ್ಯರ್ಥಿಗಳು ಗೈರುಹಾಜರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ. ಎಂ ಅವರು ತಿಳಿಸಿದ್ದಾರೆ.

Continue Reading

ಅಂತರಂಗ

ಕವಿತೆ | ಬಿಡಿಸಿಕೊಳ್ಳುತ್ತದೊಂದು ಚಿತ್ರ

Published

on

~ರಮ್ಯ ಕೆ.ಜಿ.ಮೂರ್ನಾಡು

ಕುಂಚ ತಾಕುವ ಮೊದಲೇ
ಮೂಡುತ್ತದೊಂದು ಚಿತ್ರ!
ಎದೆನೆತ್ತರು ನಡುಗಿ
ಪ್ರವಾಹದಂತೆ ತೆರೆದುಕೊಂಡ
ಬ್ರಹ್ಮಾಂಡದಲಿ ಗಡಿ ಮರೆತ
ಗೆರೆಗಳು ಕ್ಯಾನ್ವಾಸಿಂದಾಚೆ
ಅಲೆದು ಜೀವದ್ರವ್ಯಗಳಲಿ
ಈಜಿ ಮೂಲೆಗಳ ತುದಿ ಮುಟ್ಟಿ
ಬರೆಯುತ್ತದೆ ಬೆರಳ
ಗುರುತಿನ ಇತಿಹಾಸನು…

ಖಾಲಿತನಗಳಲಿ ಉಸಿರಾಡುವ
ಮೌನ-ಮಾತುಗಳ ವೇಗವನು
ಅಣಕಿಸುವಾಗ ತೂರುವ
ಬೆಳಕು ಸರಿದೂಗಿಸುತ್ತದೆ
ಒಡಕುಗಳ…
ಅಳಿಸಿದ ಮುಖಗಳು ಬಣ್ಣಗಳ
ಎರಕ ಹೊಮ್ಮಿಸಿಕೊಂಡು
ಬದಲಿಸುತ್ತವೆ ಬಣ್ಣಾ!

ಪದರುಗಳಾಗಿ ತೆರೆದುಕೊಳ್ಳುವ ಚಿತ್ರ
ನೆರಳಿನಲಿ ಸರಿದಾಡುವ
ಆತ್ಮದಂತೆ ಕಲೆಗಳ
ಉಳಿಸಿಬಿಡುತ್ತದೆ ಪೂರ್ತಿಯಾಗದ
ಆಕಾರದೊಳಗೆ ಚಿತ್ರಕಾರನೇ
ಲಯವಾಗುತ್ತಿರುವಾಗ
‘ಬಿಡಿಸಿ’ಕೊಳ್ಳುತ್ತದೆ ಚಿತ್ರ
ಗೆರೆಗಳಿಂದ ಬಣ್ಣಗಳಿಂದ
ಹಾಳೆಗಳಿಂದ ಚೌಕಟ್ಟಿನಿಂದ.

 

Continue Reading

ಅಂತರಂಗ

ಸಂತೆಬೆನ್ನೂರು ಫೈಜ್ನಟ್ರಾಜ್ ಕೃತಿಗೆ ಸೇಡಂ ನ ಅಮ್ಮ ಪ್ರಶಸ್ತಿ ಪ್ರದಾನ

Published

on

ಸಂತೆಬೆನ್ನೂರು ಫೈಜ್ನಟ್ರಾಜ್ ಕೃತಿಗೆ ಅಮ್ಮ ಪ್ರಶಸ್ತಿ ಪ್ರದಾನ

ಸುದ್ದಿದಿನ ಡೆಸ್ಕ್ : ಸೇಡಂನ ಸಾಹಿತ್ಯಿಕ, ಸಾಂಸ್ಕೃತಿಕ ಹಿರಿಮೆಗೆ ಅಮ್ಮ ಪ್ರಶಸ್ತಿ ಮಹತ್ವದ ಕೊಡುಗೆ ನೀಡಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಗೂ ತೆರಳಿದಾಗ ಸಾಹಿತ್ಯಿಕರು, ಕವಿಗಳು ಹಾಗೂ ರಾಜಕಾರಣಿಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸೇಡಂ ಎಂದಾಕ್ಷಣ ಬಸವರಾಜ ಪಾಟೀಲ್ ಸೇಡಂ ಹಾಗೂ ಅಮ್ಮ ಪ್ರಶಸ್ತಿ ನೆನಪಾಗುತ್ತದೆ. ಇದು ಸೇಡಂಗೆ ಗೌರವದ ಕಿರೀಟವಾಗಿದೆ ಎಂದು ಸೇಡಂ ನ ಮಾಜಿ ಶಾಸಕರಾದ ರಾಜಕುಮಾರ ತೇಲ್ಕೂರ ಹೇಳಿದರು.

ತಾಯಿಯ ಪ್ರೀತಿ, ತ್ಯಾಗ, ಬಲಿದಾನ, ದೇಶಪ್ರೇಮ ಹಾಗೂ ಬದುಕಿನ ಮೌಲ್ಯಗಳನ್ನು ನೆನಪಿಸುವ ಉದ್ದೇಶದಿಂದ 26 ವರ್ಷಗಳಿಂದ ಪ್ರಶಸ್ತಿ ನೀಡುತ್ತಿರುವ ಸಂಸ್ಥಾಪಕ ಮಹಿಪಾಲರೆಡ್ಡಿ ಮುನ್ನೂರು ಅವರ ಕಾರ್ಯ ಶ್ಲಾಘನೀಯ. ಪ್ರಶಸ್ತಿ ಯನ್ನು ಹಣದ ಮೌಲ್ಯದಲ್ಲಿ ಅಳೆಯಲು ಸಾಧ್ಯವಿಲ್ಲ ಎಂದರು.

ಹಿರಿಯ ಸಾಹಿತಿ ಸಂಗಮೇಶ ಬಾದವಾಡಗಿ ಮಾತನಾಡಿ, ಪ್ರಶಸ್ತಿ ಆಯ್ಕೆಯಲ್ಲಿ ಪಾರದರ್ಶಕತೆ ಹಾಗೂ ಶಿಫಾರಸಿಗೆ ಅವಕಾಶವಿಲ್ಲದಿರುವುದರಿಂದ ಅಮ್ಮ ಪ್ರಶಸ್ತಿ ಕನ್ನಡ ಸಾಹಿತ್ಯ ವಲಯದಲ್ಲಿ ತನ್ನದೇ ಮಹತ್ವ ಗಳಿಸಿದೆ ಎಂದರು.
ಹಿರಿಯ ಪತ್ರಕರ್ತ ಟಿ.ವಿ. ಶಿವಾನಂದನ್ ಮಾತನಾಡಿ, ಎಲ್ಲರ ಅಮ್ಮನ ಅಂತಃಕರಣದಿಂದ ಹುಟ್ಟಿದ ಈ ಪ್ರಶಸ್ತಿ ತನ್ನದೇ ಮೌಲ್ಯ ಹೊಂದಿದೆ ಎಂದರು.

ಈ ಬಾರಿ ಪ್ರಶಸ್ತಿಗೆ ಹತ್ತು ಜನ ಭಾಜನರಾಗಿದ್ದರು. ಅದರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದ ಕನ್ನಡ ಉಪನ್ಯಾಸಕರಾದ ಸಂತೆಬೆನ್ನೂರು ಫೈಜ್ನಟ್ರಾಜ್ ಕೂಡ ಒಬ್ಬರು.

ಅವರ ದ್ರೌಪದಿಯ ವಾಷಿಂಗ್ ಮಿಷನ್ ಕವನ ಸಂಕಲನಕ್ಕೆ ಅಮ್ಮ ಪ್ರಶಸ್ತಿ ಲಭಿಸಿದೆ ಇವರ ಜೊತೆಯಲ್ಲಿ ಉಳಿದ ಸಾಧಕರಿಗೂ ಅಮ್ಮ ಪ್ರಶಸ್ತಿ ಪ್ರದಾನಿಸಲಾಯಿತು.ಮಾತೋಶ್ರೀ ಪ್ರತಿಷ್ಟಾನದ ವತಿಯಿಂದ ನೀಡುವ ಈ ಪ್ರಶಸ್ತಿ ನೀಡುವ ಸಂಸ್ಥಾಪಕ ಮಹಿಪಾಲರೆಡ್ಡಿ ಅವರ ಕಾರ್ಯ ಶ್ಲಾಘನೀಯ. ಪ್ರಶಸ್ತಿ ಯನ್ನು ಹಣದ ಮೌಲ್ಯದಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ಸಂಚಾಲಕಿ ಚಂದ್ರಕಲಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅಮ್ಮ ಪ್ರಶಸ್ತಿ ಕೇವಲ ವ್ಯಕ್ತಿಯ ಸಾಧನೆಗೆ ನೀಡುವ ಗೌರವವಲ್ಲ; ತಾಯಿಯ ಪ್ರೀತಿ, ತ್ಯಾಗ ಮತ್ತು ಅಂತಃಕರಣಕ್ಕೆ ಸಲ್ಲಿಸುವ ಗೌರವವಾಗಿದೆ. 26 ವರ್ಷಗಳಿಂದ ನಿರಂತರವಾಗಿ ಪ್ರಶಸ್ತಿ ನೀಡುತ್ತಿರುವುದು ಸೇಡಂನ ಸಾಹಿತ್ಯಿಕ ಹಿರಿಮೆಗೆ ಹೆಮ್ಮೆಯ ಸಂಗತಿಯಾಗಿದೆ. ಎಂದು ಪ್ರಸಯೋಜಕರಾದ ಮಹಿಪಾಲ ರೆಡ್ಡಿ ಹೇಳಿದರು.

ಸಂತೆಬೆನ್ನೂರು ಫೈಜ್ನಟ್ರಾಜ್ ಈಗಾಗಲೇ ‌ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯ ಜೊತೆಗೆ ನಾಡಿನ ಪ್ರತಿಷ್ಠಿತ ಹಲವಾರು ಪ್ರಶಸ್ತಿಗಳನ್ನು ಸಾಹಿತ್ಯ ಸೇವೆಗೆ ಪಡೆದಿದ್ದಾರೆ
ಕಥೆ, ಕವನ, ಪ್ರಬಂಧ, ಆಧುನಿಕ ವಚನ ಮುಂತಾದ ಪ್ರಕಾರ ಗಳಲ್ಲಿ ಹದಿನೈದಕ್ಕೂ ಹೆಚ್ಚು ಕೃತಿ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ
ಇವರಿಗೆ ಈ ಅಮ್ಮ ಪ್ರಶಸ್ತಿ ಗೆ ಕವಿ ಸನಾವುಲ್ಲಾ ನವಿಲೇಹಾಳು, ಕತೆಗಾರ ಇಂದ್ರಕುಮಾರ್, ಕವಿ ಫಕ್ಕಿತೇಶ ಅದಾಪುರ ಮುಂತಾದವರು ಅಭಿನಂದನೆ ತಿಳಿಸಿದ್ದಾರೆ.

Continue Reading

Trending