Connect with us

ದಿನದ ಸುದ್ದಿ

ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ಗೆ ’ವರ್ಷದ ಬ್ಯಾಂಕರ್‌ಗಳ ಬ್ಯಾಂಕ್’ ಪ್ರಶಸ್ತಿ

Published

on

ಸುದ್ದಿದಿನ ಡೆಸ್ಕ್ : ಲಂಡನ್‌ನಲ್ಲಿ ಕಳೆದ ತಿಂಗಳ 29ರಿಂದ ಈ ತಿಂಗಳ 1 ರವರೆಗೆ ನಡೆದ ಜಾಗತಿಕ ಬ್ಯಾಂಕಿಂಗ್ ಸಮಾವೇಶದಲ್ಲಿ ಭಾರತೀಯ ವಿಭಾಗದಡಿ ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ಗೆ ’ವರ್ಷದ ಬ್ಯಾಂಕರ್‌ಗಳ ಬ್ಯಾಂಕ್’ ಪ್ರಶಸ್ತಿ ಲಭಿಸಿದೆ.

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಲ್.ವಿ. ಪ್ರಭಾಕರ್ ಸಮಾವೇಶ ಆಯೋಜಕರಿಂದ ಪ್ರಶಸ್ತಿ ಸ್ವೀಕರಿಸಿದರು. ಕಳೆದ 12 ತಿಂಗಳಲ್ಲಿ ಕಾರ್ಯತಂತ್ರ, ಲಾಭ, ಆವಿಷ್ಕಾರ, ತಂತ್ರಜ್ಞಾನ ಮತ್ತು ಗ್ರಾಹಕರಿಗೆ ಒದಗಿಸಲಾದ ವಿವಿಧ ಸೇವೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯ 5 ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷದ ವಯೋಮಿತಿಯ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ (Mandatory Biometric Update) ಮಾಡಿಸಲು ಜಿಲ್ಲಾಡಳಿತವು ವಿಶೇಷ ಅವಕಾಶ ಕಲ್ಪಿಸಿದೆ. ಜಿಲ್ಲೆಯ ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಸೆಪ್ಟೆಂಬರ್ 30, 2026 ರವರೆಗೆ ಈ ಸೇವೆಯು ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ.

ಆಧಾರ್ ನಿಯಮಗಳ ಪ್ರಕಾರ, ಮಕ್ಕಳಿಗೆ 5 ಮತ್ತು 15 ವರ್ಷ ತುಂಬಿದಾಗ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಈ ನವೀಕರಣದಿಂದ ಶಾಲಾ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ವಿದ್ಯಾರ್ಥಿ ವೇತನ ಹಾಗೂ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ.

ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಮತ್ತು ಪೂರಕ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜಿಲ್ಲೆಯ ಎಲ್ಲಾ ಪೋಷಕರು ಈ ಜವಾಬ್ದಾರಿಯನ್ನು ಅರಿತು, ನಿಗದಿತ ಅವಧಿಯೊಳಗೆ ತಮ್ಮ ಮಕ್ಕಳ ಆಧಾರ್ ನವೀಕರಿಸುವ ಮೂಲಕ ಸರ್ಕಾರದ ಯೋಜನೆಗಳು ತಲುಪಲು ಸಹಕರಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಹಿರಿಯ ಕ್ರಿಕೆಟ್ ಪಟು ಎನ್ಆರ್‌ಎಚ್ ರಮೇಶ್ ನಿಧನ

Published

on

ಸುದ್ದಿದಿನ,ದಾವಣಗೆರೆ: ನಗರದ ಎನ್ಆರ್‌ಎಚ್‌ ಸೈಕಲ್ ಮಾರ್ಟ್ ಮಾಲೀಕ, ದಾವಣಗೆರೆ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ನ ನಾಯಕನಾಗಿದ್ದ ಎನ್.ಆರ್‌.ಎಚ್‌.ರಮೇಶ ಇಲ್ಲಿನ ಕೆಟಿಜೆ ನಗರದ 15ನೇ ಕ್ರಾಸ್‌, 2ನೇ ಮೇನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸಂಜನೆ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಓರ್ವ ಸಹೋದರ, ಮೂವರು ಸಹೋದರಿಯರು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ದಾವಣಗೆರೆ ಗಾಂಧಿ ನಗರ ಸಮೀಪದ ವೀರಶೈವ ರುದ್ರಭೂಮಿಯಲ್ಲಿ ಮೇ.7ರಂದು ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

90ರ ದಶಕದಲ್ಲಿ ದಾವಣಗೆರೆ ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳಲ್ಲಿ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯ, ಪಂದ್ಯಾವಳಿಗಳಲ್ಲಿ ಭರ್ಜರಿ ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಆಟಗಾರನಾಗಿ ರಮೇಶ ಸಾಧನೆ ಮಾಡಿದ್ದರು. ಎನ್ಆರ್‌ಎಚ್‌ ರಮೇಶ ನಿಧನಕ್ಕೆ ಎಫ್‌ಸಿಸಿ ತಂಡದ ಹಿರಿಯ ಆಟಗಾರರು, ದಾವಣಗೆರೆ ಕ್ರಿಕೆಟ್ ಕ್ಲಬ್‌ ಸೇರಿದಂತೆ ವಿವಿಧ ಕ್ರಿಕೆಟ್ ಕ್ಲಬ್‌ಗಳ ಹಿರಿಯ ಆಟಗಾರರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ

Published

on

ಸುದ್ದಿದಿನ,ದಾವಣಗೆರೆ : ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಭರತ್ ಕುಮಾರ್ ಅವರು ಅಣಬೆಯ ಹೊಸ ಮೂರು ಶೀಲಿಂದ್ರ ಜಾತಿಗಳನ್ನು ಪತ್ತೆ ಹಚ್ಚಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ಕರ್ನಾಟಕದ ಪಶ್ಚಿಮ ಘಟ್ಟಗಳ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಅರಣ್ಯ ಪ್ರದೇಶಗಳಲ್ಲಿ ನಡೆಸಿದ ಸಮಗ್ರ ಸಂಶೋಧನೆಯ ಫಲವಾಗಿ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಪಿಎಚ್‌ಡಿ ಸಂಶೋಧಕರಾದ ಭರತ್ ಕುಮಾರ್ ಎಸ್ ಅವರು ಮೂರು ಹೊಸ ಶಿಲೀಂಧ್ರ (ಮಶ್ರೂಮ್) ಜಾತಿಗಳನ್ನು ಪತ್ತೆಹಚ್ಚಿದ್ದಾರೆ.

ಮರಕುಲುಷಣ ಶಿಲೀಂಧ್ರಗಳ ವೈವಿಧ್ಯತೆ, ದಾಖಲೆಗೊಳಿಸುವಿಕೆ ಹಾಗೂ ಜೈವ ನಿಯಂತ್ರಣ ಸಾಮರ್ಥ್ಯದ ಅಧ್ಯಯನದ ಅಂಗವಾಗಿ ಈ ಸಂಶೋಧನೆ ಕೈಗೊಳ್ಳಲಾಗಿತ್ತು.
ಈ ಅಧ್ಯಯನವನ್ನು ಕ್ರಮಬದ್ಧ ವೈಜ್ಞಾನಿಕ ವಿಧಾನದಲ್ಲಿ ನಡೆಸಲಾಗಿದ್ದು, ಕ್ಷೇತ್ರ ಸಂಗ್ರಹಣೆಯ ವೇಳೆ ತಾಜಾ ಹಾಗೂ ಪರಿಪಕ್ವ ಫಲಧಾರಕ ದೇಹಗಳನ್ನು ಅವುಗಳ ಸ್ವಾಭಾವಿಕ ವಾಸಸ್ಥಳಗಳಿಂದ ಸಂಗ್ರಹಿಸಿ, ಸ್ಥಳದ ವಿವರಗಳು (GPS, ಎತ್ತರ), ಸಬ್ಸ್ಟ್ರೇಟ್ (ಮಣ್ಣು, ಮರ, ಆತಿಥೇಯ ಸಸ್ಯ), ದಿನಾಂಕ ಮತ್ತು ಪರಿಸರ ಮಾಹಿತಿ ದಾಖಲಿಸಲಾಗಿದೆ.

ಡಾ. ಎನ್. ಪ್ರವೀಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮತ್ತು ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ ಸಂಸ್ಥೆಯ ಅರಣ್ಯ ಪಥಾಲಜಿ ವಿಭಾಗದ ಹಿರಿಯ ವಿಜ್ಞಾನಿಯಾಗಿರುವ ಡಾ. ಮುತ್ತು ಕುಮಾರ್ ಅವರ ಸಹಯೋಗದಲ್ಲಿ ನಡೆದ ಈ ಸಂಶೋಧನೆಯಲ್ಲಿ Ganoderma swietenium, Fulvifomes ficicola ಹಾಗೂ Lachnocladium sevyakrishnarum ಎಂಬ ಮೂರು ಹೊಸ ಶಿಲೀಂಧ್ರ ಜಾತಿಗಳನ್ನು ಗುರುತಿಸಲಾಗಿದೆ.

ಮೊದಲ ಎರಡು ಜಾತಿಗಳಿಗೆ ಅವುಗಳ ಆತಿಥೇಯ ಮರಗಳಾದ Swietenia mahagoni ಮತ್ತು Ficus religiosa ಆಧಾರದ ಮೇಲೆ ಹೆಸರು ನೀಡಲಾಗಿದ್ದು, ಮೂರನೇ ಜಾತಿಯನ್ನು ಸಂಶೋಧಕರ ತಂದೆಯಾದ ಸೇವ್ಯ ನಾಯ್ಕ ಅವರ ಗೌರವಾರ್ಥವಾಗಿ Lachnocladium sevyakrishnarum ಎಂದು ನಾಮಕರಣ ಮಾಡಲಾಗಿದೆ.

ವರ್ಗೀಕರಣ (Taxonomy) ಮತ್ತು ವಂಶವೃಕ್ಷ (Phylogenetic) ಅಧ್ಯಯನಗಳ ಆಧಾರದ ಮೇಲೆ ಈ ಜಾತಿಗಳನ್ನು ಜಾಗತಿಕ ವಿಜ್ಞಾನ ಸಮುದಾಯಕ್ಕೆ ಪರಿಚಯಿಸಲಾಗಿದ್ದು, ಈ ಸಂಶೋಧನಾ ಫಲಿತಾಂಶಗಳು ಅಂತರರಾಷ್ಟ್ರೀಯ ಮಟ್ಟದ ಪೀರ್-ರಿವ್ಯೂ ಪತ್ರಿಕೆಗಳಾದ Journal of Sustainable Forestry (Taylor & Francis) ಮತ್ತು Indian Phytopathology (Springer Nature)ಗಳಲ್ಲಿ ಪ್ರಕಟವಾಗಿವೆ.

ಪಶ್ಚಿಮ ಘಟ್ಟಗಳು ಜಗತ್ತಿನ ಪ್ರಮುಖ ಜೈವ ವೈವಿಧ್ಯತೆಯ ಹಾಟ್‌ಸ್ಪಾಟ್ ಆಗಿರುವುದರಿಂದ, ಈ ಪತ್ತೆಗಳು ಅಲ್ಲಿ ಇನ್ನೂ ಅನಾವರಣಗೊಳ್ಳದ ಶಿಲೀಂಧ್ರ ವೈವಿಧ್ಯತೆಯನ್ನು ಹೈಲೈಟ್ ಮಾಡುತ್ತವೆ.

ಭರತ್ ಕುಮಾರ್ ಎಸ್ ಅವರು ತಮ್ಮ ಪಿಎಚ್‌ಡಿ ಸಂಶೋಧನಾ ಪಯಣದಲ್ಲಿ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕ ಕ್ಷೇತ್ರ ಕಾರ್ಯ, ಅಪರೂಪದ ಶಿಲೀಂಧ್ರ ಮಾದರಿಗಳ ಸಂಗ್ರಹಣೆ ಹಾಗೂ ಪ್ರಯೋಗಾಲಯದ ಅಣುಮಟ್ಟದ ವಿಶ್ಲೇಷಣೆಗಳ ಮೂಲಕ ಹಲವು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಇವರ ಸಂಶೋಧನೆ ಶಿಲೀಂಧ್ರಗಳ ವೈವಿಧ್ಯತೆಯನ್ನು ದಾಖಲಿಸುವುದರೊಂದಿಗೆ, ಅವುಗಳ ಜೈವ ನಿಯಂತ್ರಣ ಸಾಮರ್ಥ್ಯವನ್ನು ಅನ್ವೇಷಿಸಿ ಪರಿಸರ ಸ್ನೇಹಿ ರೋಗ ನಿಯಂತ್ರಣ ವಿಧಾನಗಳಿಗೆ ಹೊಸ ದಾರಿಯನ್ನು ತೆರೆದಿದೆ.

ಇದರ ಜೊತೆಗೆ, ಅವರು ತಮ್ಮ ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಂಡಿಸಿದ್ದು, 2025ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ “ಯುವ ಸಂಶೋಧನಾ ವಿದ್ವಾಂಸ ಪ್ರಶಸ್ತಿ-2025” ಅನ್ನು ಪಡೆದಿದ್ದಾರೆ.

ಈ ಸಾಧನೆಗೆ ಪ್ರೋತ್ಸಾಹ ನೀಡಿದ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ಫಾ. ರೋಷನ್ ಕ್ಯಾಸ್ಟೀಲಾನೊ ಹಾಗೂ ಉಪಕುಲಪತಿಗಳಾದ ರೆವ್. ಡಾ. ಫಾ. ವಿಕ್ಟರ್ ಲೋಬೋ ಎಸ್.ಜೆ ಅವರಿಗೆ, ಜೊತೆಗೆ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನೀಲಂ ಮಿಶ್ರಾ ಅವರಿಗೆ ಸಂಶೋಧಕರು ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಶಿಲೀಂಧ್ರಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ಈ ಪತ್ತೆಗಳು ಸಹಕಾರಿಯಾಗಿದ್ದು, ಭವಿಷ್ಯದ ಸಂಶೋಧನೆಗಳಿಗೆ ಮಹತ್ವದ ದಿಕ್ಕು ನೀಡುವಂತಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending