Connect with us

ದಿನದ ಸುದ್ದಿ

ಇಸ್ರೊ ನನ್ನ ಉಸಿರೆಂದು ನಂಬಿದ್ದ ವಿಜ್ಞಾನಿಗೆ ಪೊಲೀಸರು ಕೊಟ್ಟ ಟಾರ್ಚರ್ ಹೇಗಿತ್ತು ಗೊತ್ತಾ?

Published

on

ಭಾರತವು ಸ್ವದೇಶಿ ನಿರ್ಮಿತ ರಾಕೆಟ್ ಎಂಜಿನ್ ಅಭಿವೃದ್ಧಿಪಡಿಸುತ್ತಿತ್ತು. ಹೊಟ್ಟೆ ಕಿಚ್ಚು ತಾಳಲಾರದೆ ಅಮೆರಿಕ ನಡೆಸಿದ ಗೂಢಚರ್ಯೆ ಕಥಾ ಪ್ರಸಂಗದಲ್ಲಿ ಸಿಕ್ಕಿಬಿದ್ದವರು ಇಸ್ರೊದ ಖ್ಯಾತ ವಿಜ್ಞಾನಿ ನಂಬಿ ನಾರಾಯಣನ್.
ಬಹಳ ತಡವಾಗಿಯಾದರೂ ನಂಬಿ ಅವರಿಗೆ ನ್ಯಾಯ ಸಿಕ್ಕಿದೆ. 50 ಲಕ್ಷ ರೂ. ಪರಿಹಾರ ನೀಡಬೇಕಂದೂ ಸುಪ್ರೀಂ ಕೋರ್ಟ್ ಹೇಳಿದೆ. ನಂಬಿ ಅವರನ್ನು ಈ ಪ್ರಕರಣದಲ್ಲಿ ತಳಕುಹಾಕಿದ್ದಾದರೂ ಹೇಗೆ? ನಂಬಿ ಅವರೇ ಬರೆದಿರುವ ರೆಡಿ ಟು ಫೈರ್ ಪುಸ್ತಕದಲ್ಲಿ ತಮಗಾದ ಅನ್ಯಾಯ ಹಾಗೂ ಪೊಲೀಸರು ಕೊಟ್ಟ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಖುದ್ದು ವಿವರಿಸಿದ್ದಾರೆ. ಈ ಕುರಿತು ಸ್ಕ್ರಾಲ್ ಪ್ರಕಟಿಸಿರವ ವರದಿಯ ಕನ್ನಡ ಅವತರಣಿಕೆ ಇಲ್ಲಿದೆ.

ಸತ್ಯ ಮತ್ತು ಧರ್ಮ ಎಂದು ಹೇಳಿಕೊಂಡು ಬಂದ ಇಬ್ಬರು ನನ್ನ ಹಿಂದೆ ನಿಂತುಕೊಂಡರು. ಅವರಿಬ್ಬರು ನನ್ನ ಕುತ್ತಿಗೆ ಹಿಡಿದು ಅದುಮಿ ಕೆಳಗೆ ಕೂರಿಸಲಿದ್ದಾರೆ ಎಂಬುದನ್ನು ತಿಳಿಯಲು ನನಗೆ ಹೆಚ್ಚು ಕಾಲ ಹಿಡಿಯಲಿಲ್ಲ.
ಅವರಲ್ಲಿ ಹಿರಿಯ ಅಧಿಕಾರಿಯಂತೆ ಕಾಣುತ್ತಿದ್ದ ಒಬ್ಬ ನನ್ನನ್ನು ಹೀಗೆ ಕೇಳಿದ. “ನೀನೊಬ್ಬ ಹಿರಿಯ ವಿಜ್ಞಾನಿ. ಒಬ್ಬ ಬುದ್ದಿವಂತ ವ್ಯವಸ್ಥಾಪಕ. ದೇಶದ ಆಸ್ತಿ. ನೀನ್ಯಾಕೆ ಹೀಗೆ ಮಾಡಿದೆ?

ನಂಬಿ: ನಾನು ಏನು ಮಾಡಿದೆ?

ಅಧಿಕಾರಿ: ಗೂಢಚರ್ಯೆ.

ನಂಬಿ: ಯಾವ ಗೂಢಚರ್ಯೆ?

ಅಧಿಕಾರಿ: ಗಂಟಲು ಸರಿ ಮಾಡಿಕೊಂಡು ಹೇಳಿದ ಮಿಸ್ಟರ್ ನಂಬಿ, ಸಾರಿ ಡಾಕ್ಟರ್ ನಂಬಿ.

ನಂಬಿಎ: ನಾನು ಡಾಕ್ಟರ್ ಅಲ್ಲ ಮಿಸ್ಟರ್ ಸರಿ ಹೊಂದುತ್ತದೆ.

ಅಧಿಕಾರಿ: ಸರಿ ನನಗ್ಯಾಕೊ ಡಾಕ್ಟರ್ ಅನ್ನುವುದೇ ಸೂಕ್ತ ಎನಿಸುತ್ತದೆ. ಮತ್ತೊಮ್ಮೆ ಗಂಟಲು ಸರಿಮಾಡಿಕೊಂಡು ಕೇಳಿದ. ಹೇಳು ಯಾಕೆ ಹೀಗೆ ಮಆಡಿದೆ.

ನಂಬಿ: ದಯವಿಟ್ಟು ಅರ್ಥ ಮಾಡಿಕೊಳ್ಳಿ ನಾನು ಯಾವುದೇ ಅಪರಾಧ ಮಾಡಿಲ್ಲ. ನಿಮಗೆ ನಿಜವಾಗಿ ಏನು ಬೇಕು ಹೇಳಿ?

ಅಧಿಕಾರಿ: ನಿಜ ಬೊಗಳು.. ನೀನು ಒಪ್ಪಿಕೊಂಡ್ಯೋ ಸರಿ. ಇಲ್ದಿದ್ರೆ ನಿನ್ನನ್ನು ಒಪ್ಪಿಸೋದು ಹೇಗೆಂದು ನನಗೆ ಗೊತ್ತು.

ನಂಬಿ: ಅದು ಬೆದರಿಕೆಯ ಮೊದಲ ಹೆಜ್ಜೆಯಾಗಿತ್ತು (ಸ್ವಗತ)

ನಂಬಿ: ನನ್ನ ಅಪರಾಧವಾದರೂ ಏನು?

“ನಿಂಗೆ ಗೊತ್ತಿಲ್ಲವಾ? ಎದ್ದುನಿಂತು ಹೇಳಿದ. ನೀನು ದೇಶದ ರಕ್ಷಣೆಗೆ ಸಂಬಂಧಿಸಿದ ದಾಖಲೆಗಳನ್ನು ಪಾಕಿಸ್ತಾನಕ್ಕೆ ಮಾರಿದ್ದೀಯ. ಈಗ ಏನೂ ಗೊತ್ತಿಲ್ಲದವನಂತೆ ನಾಟಕ ಮಾಡ್ತಿದ್ದೀಯಾ? ಬೊಗಳು ಇದೆಲ್ಲ ಹೇಗೆ ಮಾಡಿದೆ ಅಂತ. ಇದಕ್ಕಾಗಿ ಅವರು ಕೊಟ್ಟ ಇನಾಮು ಎಷ್ಟು ಹೇಳು?
ಅದೇ ಸಮಯಕ್ಕೆ ಮತ್ತೆ ಮೂವರು ಅಧಿಕಾರಿಗಳು ರೂಂನೊಳಗೆ ಬಂದರು. ಅದರಲ್ಲಿ ಒಬ್ಬ ಬೂದಿ ಬಣ್ಣದ ಸಫಾರಿ ಸೂಟ್ ಹಾಕಿದ್ದ. ಅವರು ಇಂಟೆಲಿಜನ್ಸ್ ಬ್ಯೂರೋದ ಮುಖ್ಯಸ್ಥರು ಸಣ್ಣಗೆ ಕುಳ್ಳಗಿದ್ದ ಒಬ್ಬ ಅಧಿಕಾರಿಯು ನನಗೆ ಪರಿಚಯ ಮಾಡಿಸಿದ.

ಸಣ್ಣಗಿದ್ದ ಅಧಿಕಾರಿಯು ಇದ್ದಕ್ಕಿದ್ದಂತೆ ನನ್ನ ಮುಖದ ಮೇಲೆ ತಿವಿದು. ಹೇಳು ಸೂಳೆ ಮಗನೆ? ನಿನಗೆ ಗೊತ್ತಿಲ್ವಾ ನೀನು ಮಾಡಿದ ಅಪರಾಧ ಏನಂತ? ಇಲ್ಲ ನಂಗೆ ಗೊತ್ತಿಲ್ಲ ಎಂದೆ. ಕೆಲವು ಪೇಪರ್‍ಗಳನ್ನು ನನ್ನ ಮುಖಕ್ಕೆ ಎಸೆದು ಬೋಳಿಮಗನೆ ನೋಡು ನೀನು ಮಾಡಿರುವ ಅನಾಚಾರ ಯಾರ್ಗೂ ಗೊತ್ತಾಗಲ್ಲ ಅಂದುಕೊಂಡಿದ್ದೀಯಾ? ಭಾರತದ ರಾಕೆಟ್ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಮಾರಿದ್ದೀಯಾ? ನಿಂಗೆ ಗೊತ್ತಾ ಇದು ಎಷ್ಟು ದೊಡ್ಡ ಅಪರಾಧ ಹದಿನಾಲ್ಕು ವರ್ಷ ಕಂಬಿ ಎಣಿಸಬೇಕಾಗುತ್ತೆ ಹುಷಾರ್ ಅಂದ.

ಐಬಿಯ ದೊಡ್ಡ ವ್ಯಕ್ತಿ ಎಂದು ಪರಿಚಯಿಸಿದ್ದ ವ್ಯಕ್ತಿ ಕಡೆಗೆ ಬೊಟ್ಟುಮಾಡಿ. ನೋಡು ಅವರು ಈಗಿಂದೀಗಲೇ ದಿಲ್ಲಿಗೆ ಹೊರಡಬೇಕು. ಅವರ ವಿಮಾನಕ್ಕೆ ತಡವಾಗುತ್ತಿದೆ. ಬೇಗ ಒಪ್ಪಿಕೊ. ನಡೆದದ್ದು ಏನೆಂತ ಹೇಳಿಬಿಡು ಎಂದು ಪಿಸುಗುಟ್ಟಿದ.

ಕೆಲವೇ ಹೊತ್ತಿನ ನಂತರ ಗೊತ್ತಾಯಿತು. ಐಬಿಯ ದೊಡ್ಡ ವ್ಯಕ್ತಿ ಎಂದು ಹೇಳಿದ್ದ ವ್ಯಕ್ತಿ ವಾಸ್ತವದಲ್ಲಿ ಇಂಟೆಲಿಜೆನ್ಸ್ ಬ್ಯೂರೊದ ಜಂಟಿ ನಿರ್ದೇಶಕ ಎಂ ಕೆ. ಧರ್.

ನಾನೊಬ್ಬ ನಿರಪರಾಧಿ. ಯಾವ ತಪ್ಪ ಮಾಡಿಲ್ಲ. ನೀವು ನನ್ನನ್ನು ತಪ್ಪು ತಿಳಿದುಕೊಂಡಿದ್ದೀರ ಎಂದು ನಾನು ಮೆಲ್ಲ ಧ್ವನಿಯಲ್ಲೇ ಹೇಳಿದೆ.

ಇಲ್ಲ ಎಂದು ಜೋರಾಗಿ ಅರುಚಿದ ಅಧಿಕಾರಿ, ಬೋಳಿಮಗನೆ ಹೇಳು ಮಾರಿಯಂ ರಶೀದಾಳನ್ನು ಎಲ್ಲಿ ಭೇಟಿಯಾಗಿದ್ದೆ?

ನಂಬಿ: ನಾನು ಯಾವಾಗಲೂ ಭೇಟಿಯಾಗಿಲ್ಲ

ಅಧಿಕಾರಿ: ಬಡವ ರಾಸ್ಕಲ್ ಎಷ್ಟು ಧೈರ್ಯವಿದ್ದರೆ ನನ್ನ ಹತ್ತಿರನೇ ಸುಳ್ಳು ಹೇಳುತ್ತಿದ್ದೀಯಾ? ನೀವಿಬ್ಬರು ಭೇಟಿಯಾಗಿದ್ದಾಗೆ ಮೇರಿಯಂ ಖುದ್ದು ಒಪ್ಪಿಕೊಂಡಿದ್ದಾಳೆ. ನಿಜ ಬೊಗಳು.

ನಂಬಿ: ನೀವು ಹೇಳುತ್ತಿರುವ ಮಾಲ್ಡೀವಿಯಾ ಪ್ರಜೆಯನ್ನು ನಾನು ಎಂದಿಗೂ ಭೇಟಿಯಾಗಿಲ್ಲ. ದಯವಿಟ್ಟು ನನ್ನನ್ನು ನಂಬಿ. ನನಗೆ ಗೊತ್ತೇ ಇಲ್ಲದ ವ್ಯಕ್ತಿಯನ್ನು ನಾನು ಹೇಗೆ ಭೇಟಿಯಾಗಲಿ?

ಅಧಿಕಾರಿ: ನೀನು ನಿಜ ಬೊಗಳಲಿಲ್ಲ ಅಂಧ್ರೆ ಫೌಜಿಯಾಳನ್ನು ಇಲ್ಲಿಗೆ ಕರೆಸುತ್ತೇನೆ. ನೀವಿಬ್ಬರು ಜತೆಯಲ್ಲಿರುವ ಫೋಟೊಗಳು ನಾಳೆ ಪೇಪರ್‍ನಲ್ಲಿ ಬರುತ್ತವೆ ಸರಿನಾ?

ಮಾರಿಯಂಳನ್ನು ನಾನು ಯಾವಾಗ ಭೇಟಿ ಮಾಡಿದ್ದೆ? ಪೊಲೀಸರು ಯಾಗಿ ಸುಳ್ಳು ಕತೆ ಹೆಣೆಯುತ್ತಿದ್ದಾರೆ ಎಂದು ನನ್ನ ಮನಸ್ಸು ಮಂಥನವಾಗುತ್ತಾಹೋಯಿತು. ಅಷ್ಟರಲ್ಲಿ ಐಬಿಯ ದೊಡ್ಡ ಅಧಿಕಾರಿ ಹಾಗೂ ಆತನ ಸಹಾಯಕ ಅಲ್ಲಿಂದ ಹೊರಟರು. ಮುಖ್ಯ ವಿಚಾರಣಾಧಿಕಾರಿ ಮುಂದುವರಿಸಿದ.

ಅಧಿಕಾರಿ: ನಾವು ಹೇಳುತ್ತಿರುವ ಇಬ್ಬರು ಮಹಿಳೆಯರಷ್ಟೆ ಅಲ್ಲ. ನಿನ್ನ ಸಹೋದ್ಯೋಗಿ ಸಸಿಕುಮಾರನ್ ಕೂಡ ನಿಜ ಒಪ್ಪಿಕೊಂಡಿದ್ದಾನೆ. ನೀನು ನಮ್ಮ ಬಳಿ ಏನೂ ಮುಚ್ಚಿಡಲು ಸಾಧ್ಯವಿಲ್ಲ.

ವಿಷಯ ಕೇಳಿ ನಾನು ಚೇರ್‍ನಿಂದ ಕುಸಿದುಬಿದ್ದೆ. ಸಸಿಕುಮಾರ್ ಎಲ್ಲ ಒಪ್ಪಿಕೊಂಡಿಬಿಟ್ಟನಾ?

ಅಧಿಕಾರಿ: ನೀನ್ಯಾಕೆ ಇಷ್ಟು ಗಾಬರಿಯಾಗಿದ್ದೀಯಾ? ಮದ್ರಾಸ್, ತಿರುವನಂತಪುರಂನಲ್ಲಿ ನಡೆದ ಎರಡು ಭೇಟಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳಿಗೆ ನೀನು ಕ್ರಯೋಜನಿಕ್ ಎಂಜಿನ್‍ನ ಸ್ಕೆಚ್‍ಗಳನ್ನು ಮಾರಾಟ ಮಾಡಿದ್ದೀಯ ಎಂದು ಸಸಿಕುಮಾರ್ ಒಪ್ಪಿಕೊಂಡಿದ್ದಾನೆ. ಇದಕ್ಕೆ ಸಸಿಕುಮಾರ್ ಮಧ್ಯವರ್ತಿಯಾಗಿದ್ದ ಎಂದೂ ಬಾಯ್ಬಿಟ್ಟಿದ್ದಾನೆ. ಹೇಳು ಪಾಕಿಸ್ತಾನದಿಂದ ಎಷ್ಟು ಹಣ ತೆಗೆದುಕೊಂಡೆ?

ನಂಬಿ: ಸಸಿ ನಿಮ್ಮ ಬಳಿ ಏನು ಹೇಳಿದ್ದಾನೋ ಗೊತ್ತಿಲ್ಲ. ನಾನು ಯಾವ ತಪ್ಪೂ ಮಾಡಿಲ್ಲ ಯಾರನ್ನೂ ಭೇಟಿಯಾಗಿಲ್ಲ.

ಈ ಮಧ್ಯೆ ಒಬ್ಬ ಹುಡುಗ ಅನ್ನ ಸಾಂಬರ್ ತಂದ. ವಿಚಾರಣೆ ನಡೆಸಿದ ವ್ಯಕ್ತಿ ಅಲ್ಲಿಂದ ಹೋದ ಮತ್ತಿಬ್ಬರು ಹೊಸ ವ್ಯಕ್ತಿಗಳು ಬಂದರು.

ಮತ್ತೆ ಅದೇ ಪ್ರಶ್ನೆ ಕೇಳಿದರು. ಹೇಳು ಯಾಕೆ ಹೀಗೆ ಮಾಡಿದೆ? ವಿಚಾರಣೆ ನಡೆಸುವವರು ಹೊಸಬರೇ ಆದರೂ, ಅವರು ಕೇಳಿದ್ದ ಪ್ರಶ್ನೆಗಳೆಲ್ಲಾ ಹಳೆಯವು.

ಅಧಿಕಾರಿ: ವಿಕಾಸ್ ಎಂಜಿನ್ ಹಾಗೂ ಕ್ರಯೋಜನಿಕ್ ಎಂಜಿನ್ ಡ್ರಾಯಿಂಗ್‍ಗಳನ್ನು ಪಆಕಿಸ್ತಾನಕ್ಕೆ ಏಕೆ ಮಾರಾಟ ಮಾಡಿದೆ?

ನಂಬಿ: ನಿಮಗೆ ರಾಕೆಟ್ ವಿಜ್ಞಾನದ ಬಗ್ಗೆ ಅರಿವಿದೆಯಾ? ಯಾವುದೇ ಡ್ರಾಯಿಂಗ್‍ಗಳು ಇಸ್ರೊದ ಹೊರಗೆ ಹೋಗಲು ಸಾಧ್ಯವೇ ಇಲ್ಲ. ಬರೀ ಡ್ರಾಯಿಂಗ್ ಇಟ್ಟುಕೊಂಡು ಯಾವುದೇ ಎಂಜಿನ್‍ಗಳನ್ನು ತಯಾರಿಸಲು ಸಾಧ್ಯವೇ ಇಲ್ಲ. ಅದನ್ನು ತಯಾರಿಸಿದ ವಿಜ್ಞಾನಿಗಳು ಇದ್ದರೆ ಮಾತ್ರ ಅದು ಸಾಧ್ಯವಾಗುತ್ತೆ.

ಅಧಿಕಾರಿ: ಹಾಗಾದ್ರೆ ನೀನು ಡ್ರಾಯಿಂಗ್‍ಗಳನ್ನು ಪಾಕಿಸ್ತಾನಕ್ಕೆ ಕೊಟ್ಟಿದ್ದೀಯಾ?

ನಂಬಿ: ಡ್ರಾಯಿಂಗ್‍ಗಳು, ದಾಖಲೆಗಳಿಗೆ ಯಾರೂ ಕಾಸು ಕೊಡಲ್ಲ. ನೀವು ಹೇಳುತ್ತಿರುವ ವಿಕಾಸ್ ಎಂಜಿನ್ ತಯಾರಿಸಲು ಫ್ರಾನ್ಸ್‍ನ ವೆರ್ನಾನ್ ಎಂಬಲ್ಲಿರುವ ಬಾಹ್ಯಾಕಾಶ ಕೇಂದ್ರದಲ್ಲಿ ಫ್ರಾನ್ಸ್ ವಿಜ್ಞಾನಿಗಳೊಂದಿಗೆ ನಾವು 150 ಮಂದಿ ತಂಡ ಒಂದು ಅಧಿಕೃತ ಗುತ್ತಿಗೆ ಮೇರೆಗೆ ಕೆಲಸ ಮಾಡಿದ್ದೇವೆ. ನಿತ್ಯವೂ ಪ್ರಯೋಗಗಳು, ಬದಲಾವಣೆಗಳು ನಡೆಯುತ್ತಲೇ ಇದ್ದವು. ಅಷ್ಟೆಲ್ಲ ಇದ್ದರೂ ಆ ಎಂಜಿನ್ ತಯಾರಿಸಲು ನಮಗೆ ಹದಿನಾರು ವರ್ಷ ಹಿಡಿಯಿತು.

ಈಗ ವಿಚಾರಣೆ ನಡೆಸಿದ ಅಧಿಕಾರಿಗಳು ನನ್ನ ಹೇಳಿಕೆಯನ್ನು ಸ್ವಲ್ಪ ಇಂಪ್ರೂ ಮಾಡಿಕೊಂಡು ತಮ್ಮದೇ ಧಾಟಿಯಲ್ಲಿ ಪ್ರಶ್ನೆ ಕೇಳಲು ಮುಂದಾದರು. ಪಾಕಿಸ್ತಾನದವರು ವಿಕಾಸ್ ಎಂಜಿನ್‍ಅನ್ನು ನಕಲು ಮಾಡಬೇಕಾದರೆ ನೀನು ನೀಡಿರುವ ಡ್ರಾಯಿಂಗ್‍ಗಳು ಅವರಿಗೆ ಉಪಯೋಗಕ್ಕೆ ಬರುತ್ತವೆ ಅಲ್ಲವೇ?

ನಂಬಿ: ನನ್ನನ್ನು ನಂಬಿ ಎಂದು ಎಷ್ಟೇ ಬೇಡಿಕೊಂಡರೂ ಅವರು ಕೇಳಲಿಲ್ಲ. ತರ್ಕವಿಲ್ಲದ ಪ್ರಶ್ನೆಗಳು. ತಂತ್ರಜ್ಞಾನ ವೈಜ್ಞಾನಿಕ ಅರಿವಿಲ್ಲದವರ ಬಳಿ ನಾನು ಎಷ್ಟೇ ಬಾಯಿ ಬಡಿದುಕೊಂಡರೂ ಅರ್ಥ ಮಾಡಿಕೊಳ್ಳಲಿಲ್ಲ. ನೀನು ಹೇಳುತ್ತಿರುವುದು ಡ್ರಾಯಿಂಗ್‍ಗಳೂ ನಿಷ್ಪ್ರಯೋಜಕ. ಹಾಗಾದ್ರೆ ನೀವ್ಯಾಕೆ ಇಟ್ಟುಕೊಡಿದ್ದೀರಾ?

ನಂಬಿ: ರಾಕೆಟ್ ಎಂಜಿನ್ ತಯಾರಿಕೆಯಲ್ಲಿ ಡ್ರಾಯಿಂಗ್‍ಗಳು ಒಂದು ಚಿಕ್ಕ ಪಾತ್ರವಷ್ಟೆ. ಅವಕ್ಕೆ ಯಾರೂ ಕಾಸು ಕೊಡುವುದಿಲ್ಲ. ಪಠ್ಯ ಪುಸ್ತಕದಲ್ಲಿರುವ ರಾಕೆಟ್ ಡ್ರಾಯಿಂಗ್ ನೋಡಿ ರಾಕೆಟ್ ಮಾಡಲು ಸಾಧ್ಯವೇ? ಅದಕ್ಕೆ ಯಾರಾದರೂ ಕಾಸು ಕೊಡುತ್ತಾರಾ?

ಆಗ ಹೊಸ ಅಧಿಕಾರಿಗಳ ತಂಡವೊಂದು ಬಂತು. ಅದರಲ್ಲೊಬ್ಬ ಜೋರು ಧ್ವನಿಯಲ್ಲಿ ಎದ್ದೇಳು ಸೂಳೇಮಗನೆ. ನೀನು ಕೂರಲು ಯೋಗ್ಯ ವ್ಯಕ್ತಿಯಲ್ಲ. ನಿಂತುಕೊಂಡೇ ಮಾತಾಡು ಅಂದ. ನಾನು ನೀರಿಗಾಗಿ ಬೆಳಗ್ಗೆ ಇಂದ ಪರಿಪರಿಯಾಗಿ ಬೇಡಿಕೊಂಡೆ ಆದರೆ ಯಾರೂ ಕೊಡಲಿಲ್ಲ. ನಿನ್ನನ್ನು ಪಠಾಣ್‍ಕೋಟ್ ಅಥವ ಕಾಶ್ಮೀರದ ಬ್ಲಾಕ್ ಸೆಲ್‍ನಲ್ಲಿ ಹಾಕಿ ಕೊಂದು ಹಿಮದ ರಾಶಿಯಲ್ಲಲಿ ಹಾಕುವುದಾಗಿ ಅವರು ಬೆದರಿಸಿದರು. ನನ್ನ ದೇಹ ಹಿಮದ ರಾಶಿಯಲ್ಲಿ ಬಿದ್ದಿರುವಂತೆ ಚಿತ್ರವು ಮನಸ್ಸಿನಲ್ಲಿ ಮೂಡಿತು.

ಆ ರಾತ್ರಿ ನನ್ನನ್ನು ಮಲಗಲು ಬಿಡಲಿಲ್ಲ 30 ಗಂಟೆಗಳ ಕಾಲ ಅದೇ ಪ್ರಶ್ನೆ. ಅನ್ನ, ನೀರು ಏನೂ ಎಲ್ಲದೆ ನಿತ್ರಾಣನಾಗಿದ್ದೆ. ಸಿಮೆಂಟ್ ನೆಲವಾಗಿದ್ದರಿಂದ ದೇಹವು ತಣ್ಣಗಾಗಿಹೋಯಿತು.
ಹೀಗೇ ಇದ್ದರೆ ಅಧಿಕಾರಿಗಳು ನನ್ನನ್ನು ಮುಗಿಸಿಬಿಡುತ್ತಾರೆ ನಾನು ಈಗ ಹೋರಾಟ ನಡೆಸಲೇಬೇಕೆಂದು ತೀರ್ಮಾನಿಸಿ ಜೋರಾಗಿ ಉಸಿರೆಳೆದುಕೊಂಡು ಎದ್ದು ನಿಂತೆ.

ನಂಬಿ: ನೀವು ಒಂದು ದೊಡ್ಡ ಅಪರಾಧ ಮಾಡುತ್ತಿದ್ದೀರ. ಇದಕ್ಕಾಗಿ ನೀವು ಬಹಳ ದೊಡ್ಡ ಶಿಕ್ಷೆ ಅನುಭವಿಸುತ್ತೀರ. ನಾನು ನಿಮ್ಮನ್ನು ಬಿಡಲ್ಲ ನೆನಪಿಟ್ಟುಕೊಳ್ಳಿ ನಿಮಗೂ ಕುಟುಂಬ ಇದೆ. ಇದನ್ನ ಕೇಳಿಸಿಕೊಂಡ ಅಧಿಕಾರಿ ನೀನು ಇಲ್ಲಿಂದ ಜೀವ ಸಮೇತ ಹೋದರೆ ತಾನೆ ಎಂದು ನಕ್ಕ.

ನಿಮ್ಮನ್ನೆಲ್ಲ ನೆನಪಿಟ್ಟುಕೊಂಡಿದ್ದೇನೆ. ಒಬ್ಬೊಬ್ಬರನ್ನಾಗಿ ಕೊಂದುಬಿಡುತ್ತೇನೆ ಎಂದೆ.

ಅಧಿಕಾರಿಯೊಬ್ಬ ತಣ್ಣನೆ ಧ್ವನಿಯಲ್ಲಿ ಹೇಳಿದ. ಸರ್ ನಾವು ನಮ್ಮ ಡ್ಯೂಟಿ ಮಾಡ್ತಿದ್ದೀವಿ. ತಪ್ಪಿದ್ದರೆ ನಿಮ್ಮ ಚಪ್ಪಲಿಯಲ್ಲಿ ಹೊಡೆಯಿರಿ.
22 ವರ್ಷಗಳಾಗಿವೆ ನನ್ನ ಚಪ್ಪಲಿಯನ್ನು ಹಾಗೇ ಇಟ್ಟಿದ್ದೇನೆ.

ಮತ್ತೆ ಅಧಿಕಾರಿ ನನ್ನನ್ನ ಪ್ರಶ್ನಿಸಿದ. ಹೇಳು ಮಹಮದ್ ಅಸ್ಲಮ್ ಯಾರು?

ನಂಬಿ: ಯಾವ ಅಸ್ಲಂ ನನಗೆ ಗೊತ್ತಿಲ್ಲ.

ಅಧಿಕಾರಿ: ಸರಿ ನಾನು ನೆನಪಿಸುತ್ತೇನೆ. ಮೊಹಮದ್ ಅಸ್ಲಾಂ ಪಾಕಿಸ್ತಾನದ ಅಣು ವಿಜ್ಞಾನಿ. 1985ರಲ್ಲಿ ಆತ ನಿನ್ನನ್ನು ಭೇಟಿಯಾಗಿ ರಾಕೆಟ್ ತಂತ್ರಜ್ಞಾನದ ಬಗ್ಗೆ ಮಾತನಾಡಿದ್ದ.

ನಾನು ತಲೆ ಚಚ್ಚಿಕೊಂಡೆ.
ನಂಬಿ: ನನಗೆ ಯಾವ ಅಸ್ಲಂ ಕೂಡ ಗೊತ್ತಿಲ್ಲ. ಆದರೆ, ರಾಕೆಟ್ ಟೆಕ್ನಾಲಜಿ ತಿಳಿಯಲು ಪಾಕಿಸ್ತಾನ ಏಕೆ ಅಣು ವಿಜ್ಞಾನಿ ಕಳಿಸುತ್ತೆ? ಅಬ್ದುಲ್ ಕಲಾಂ ಅವರ ಹತ್ತಿರಾನೋ ಅಥವಾ ಯು ಆರ್ ರಾವ್ ಅವರನ್ನೋ ಸಂಪರ್ಕಿಸಬೇಕಲ್ವಾ? ನಿಮ್ಮ ಕತೆ ನಿಮಗೇ ಒಪ್ಪಿಗೆಯಾಗುತ್ತಾ?
ಆ ಇಬ್ಬರೂ ವ್ಯಕ್ತಿಗಳೂ ತಾವು ಹೇಳಿದ್ದ ಹೇಳಿಕೆ ಎಷ್ಟು ತಮಾಷೆಯಾಗಿತ್ತು ಎಂದುಕೊಂಡರು. ಒಬ್ಬರ ಮುಖ ಒಬ್ರು ನೋಡಿಕೊಂಡು ನಮಗೆ ಅದು ಗೊತ್ತು. ನೀನು ಈ ಪ್ರಶ್ನೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತೀಯಾ ಎಂಬುದು ನಮಗೆ ಗೊತ್ತಾಗಬೇಕು ಎಂದ.

ಇವರು ಮುಂಚೆಯೇ ಹೆಣೆದಿರುವ ಕತೆಯಲ್ಲಿ ನನ್ನನ್ನು ಸೇರಿಸಿದ್ದಾರೆ. ಇವರೇ ಸೃಷ್ಟಿಸಿದ ಪಾತ್ರಗಳಿಗೆ ನಾನು ಹೆಸರಿಡಬೇಕು ಎಂದು ಆಗ ನನಗೆ ಅರ್ಥವಾಯಿತು. ನನಗೆ ಗೊತ್ತಿಲ್ಲದ ವ್ಯಕ್ತಗಳ ಹೆಸರನ್ನು ಕೇಳುವ ತಂತ್ರ ಮುಂದುವರಿಯುತ್ತಲೇ ಹೋಯಿತು.

ಅಧಿಕಾರಿ: ಮಿಸ್ಟರ್ ನಂಬಿ. ನಮ್ಮನ್ನು ಮೂರ್ಖರೆಂದು ತಿಳಿದಿದ್ದೀಯಾ? ನಮಗೆ 25 ವರ್ಷದ ಅನುಭವ ಇದೆ. ನಿನ್ನಿಂದ ನಿಜ ಕಕ್ಕಿಸುವುದು ಹೇಗೆಂದುನನಗೆ ಗೊತ್ತು. ನಿನ್ನ ನಟ್ಟು ಬೋಲ್ಟು ಬಿಚ್ಚುತ್ತೀವಿ. ರೊಟ್ಟಿಗಾಗಿ ಅಂಗಲಾಚುವಂತೆ ಮಾಡುತ್ತೀವೆ. ಸೂಳೆ ಮಕ್ಕಳಾ ದೇಶದ ಆಸ್ತಿನ ಮಾರ್ಕೊತೀರಾ? ಎಂದು ಕೇಳಿದ.

ಮತ್ತೊಬ್ಬ ಅಧಿಕಾರಿ ಇದ್ದಕ್ಕಿದ್ದಂತೆ ಬಂದ. ಏನೂ ಕೇಳದೆ ದಿಢೀರನೆ ಮುಖದ ಮೇಲೆ ಹೊಡೆದ. ನಮ್ಮಪ್ಪ ಕೂಡ ನನಗೆ ಒಂದೇಟೂ ಹೊಡೆದಿರಲಿಲ್ಲ. ಈತ ಹೊಡೆದದ್ದು ನನಗೆ ದೈಹಿಕ ಹಿಂಸೆಗಿಂತ ಮಾನಸಿಕವಾಗಿ ಘಾಸಿಗೊಳಿಸಿತು.
ನಾನು ಯಾರಿಗೂ ಹೆದರುವುದಿಲ್ಲ. ನಿಜ ಒಪ್ಪಿಕೊಂಡರೆ ಸರಿ ಎಂದು ಅರುಚುತ್ತಿದ್ದ.
ಇನ್ನೊಬ್ಬ ಅಧಿಕಾರಿ ನನ್ನ ಕಿವಿ ಹತ್ತಿರ ಬಂದು ಹೌದು ಎಂದು ಒಪ್ಪಿಕೊ ಎಂದ. ನಾನು ಧೈರ್ಯವಾಗಿ ಇಲ್ಲ ಎಂದು ಹೇಳಿದೆ.
ಕನ್ನಡಕ ಹಾಕಿದ್ದ ಆ ವ್ಯಕ್ತಿ ಒಮ್ಮೆ ನನ್ನನ್ನು ಗುರಾಯಿಸಿ ತನ್ನ ಸಹಾಯಕನೊಂದಿಗೆ ಹೊರಗೆ ನಡೆದ.
ಚುಟ್ಟಾ ಸೇದುತ್ತಿದ್ದ ವ್ಯಕ್ತಿ ನನ್ನ ಹತ್ತಿರ ಬಂದು ನೀನ್ಯಾಕೆ ನಿಜ ಒಪ್ಪಿಕೊಳ್ಳಬಾರದು? ನನಗೆ ನಿಜಕ್ಕೂ ನೀವು ಹೇಳುತ್ತಿರವ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ ಎಂದೆ.

ಅಧಿಕಾರಿ ಹೇಳಿದ ನೋಡು. ನಾವು ಹೇಳಿದ ಹೆಸರಿನವರು ಗೊತ್ತಿಲ್ಲ ಎಂದರೆ ಬಿಟ್ಟುಬಿಡು. ನಿನಗೆ ಗೊತ್ತಿರುವ ಯಾರಾದರೂ ಮುಸ್ಲಿಮರ ಹೆಸರು ಹೇಳು ಎಂದ.

ನನಗೆ ಗೊತ್ತಿದ್ದದ್ದು ನನ್ನ ಬಾಲ್ಯದ ಗೆಳೆಯ ಒಬ್ಬ ಮುಸ್ಲಿಂ. ಆತ ಈಚೆಗೆ ಸಿಕ್ಕಿ ಇಸ್ರೊದಲ್ಲಿ ತನ್ನ ಮಗನಿಗೆ ಕೆಲಸ ಕೊಡಿಸು ಎಂದಿದ್ದ. ಎಕ್ಸಾಂ ಬರೆದು ಪಾಸಾದ್ರೆ ನೋಡುವಾ ಎಂದಿದ್ದೆ. ಆತ ಎಕ್ಸಾನಲ್ಲಿ ಫೇಲ್ ಆಗಿದ್ದ.

ಮತ್ತೆ ನೀರಿಗಾಗಿ ಬೇಡಿಕೊಂಡೆ. ಆಗ ಅಧಿಕಾರಿಯೊಬ್ಬ ಹೇಳಿದ. ನೀನು ನಾವು ಹೇಳಿದ ಹೇಳಿಕೆಯನ್ನೇ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ನೀರು ಸಿಗಲ್ಲ ಎಂದ. ನನಗೆ ನೀಡುತ್ತಿದ್ದ ಟ್ರೀಟ್‍ಮೆಂಟ್ ಥರ್ಡ್ ಡಿಗ್ರಿಯವು ಎಂದು ಗೊತ್ತಾಯಿತು. ನಾನು ಧೈರ್ಯವಾಗಿ ಮತ್ತೊಮ್ಮೆಎದ್ದು ನಿಂತು ಹೇಳಿದೆ.

ನನಗೆ ನೀರು ಬೇಡ. ನಾನು ಹೆಚ್ಚು ಹೊತ್ತು ಕೂರುವುದೂ ಇಲ್ಲ. ನಾನೊಬ್ಬ ನಿರಪರಾಧಿ ಎಂದು ನೀವು ಒಪ್ಪುವ ವರೆಗೆ ನಾನು ಅನ್ನಾಹಾರ ಇಲ್ಲದೆ ಇಲ್ಲೇ ನಿಲ್ಲುತ್ತೇನೆ ಎಂದೆ.

ಪೊಲೀಸರು ಕತೆಯನ್ನು ಮುಂಚೆಯೇ ಹೆಣೆದಿದ್ದರು. ನಾನೊಬ್ಬ ಹರಕೆಯ ಕುರಿಯಾಗಿದ್ದೆ. ಅವರು ಬಿಟ್ಟಿದ್ದ ಸ್ಥಳಗಳಲ್ಲಿ ನನು ಹೆಸರು ಸೇರಿಸಬೇಕಿತ್ತು ಅಷ್ಟೆ. 22 ವರ್ಷ ನರಕದಲ್ಲಿ ಕಳೆದೆ.

ಕೃಪೆ: ಸ್ಕ್ರಾಲ್ ಡಾಟ್ ಇನ್

ದಿನದ ಸುದ್ದಿ

ದಾವಣಗೆರೆ | ಇಂದು ಕರೆಂಟ್ ಇರಲ್ಲ

Published

on

ಸುದ್ದಿದಿನ,ದಾವಣಗೆರೆ:ಬೆಸ್ಕಾಂ ಜಗಳೂರು ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಜಂಗಲ್ ಕಟಿಂಗ್ ಮತ್ತು ಫೀಡರ್‌ಗಳ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 26 ರಂದು ಬೆಳಿಗ್ಗೆ 09-00 ರಿಂದ ಸಂಜೆ 05-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಕೊರಚರ ಹಟ್ಟಿ ಸರ್ಕಲ್, ಅಂಜನೆಯ ಬಡಾವಣೆ, ಶಕ್ತಿ ನಗರ, ಭಗೀರಥ ಲೇಔಟ್ ಸರ್ಕಲ್, ಕೊಟ್ಟುರೇಶ್ವರ ಬಡಾವಣೆ, , ಡಿ.ಸಿ.ಎಂ ಎಬಿಸಿ ಬ್ಲಾಕ್, ರಾಜೇಂದ್ರ ಬಡಾವಣೆ, ಭೂಮಿಕಾ ನಗರ, ಎಸ್.ಎಸ್ ಹೈ-ಟೆಕ್ ಮೇನ್ ರೋಡ್, ಶೇಶಾಂ ಲೇಔಟ್, ಹೊಂ ಟೈಲಾರ್ ರೋಡ್, ಬನಶಂಕರಿ ದೇವಸ್ಥಾನ, ಶ್ರೀರಾಮ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ. ಎ ಬ್ಲಾಕ್, ನಿಜಲಿಂಗಪ್ಪ ಲೇಔಟ್, ಅಶ್ವಿನಿ ಆರ್ಯುವೇಧಿಕ್ ಆಸ್ಪತ್ರೆ, ಜೊಲ್ಲಿಗುರು ಕಾಂಪೌಡ್, ಮುದ್ದೊಳ್ಳಿ ತೋಟ, ನರಹರಿಶೇಟ ಕಲ್ಯಾಣ ಮಂದಿರ, ಪೊಲೀಸ್ ಹಳೆಯ ವಸತಿ ಗೃಹಗಳು, ವಿನೋಬ ನಗರ 1ನೇ ಮತ್ತು 2ನೇಯ ಮುಖ್ಯ ರಸ್ತೆ ಚರ್ಚ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಬಿದರಕೆರೆ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಎಫ್- ಕಟ್ಟಿಗೆಹಳ್ಳಿ, ಎನ್‌ಜೆವೈ (NJY) ಜಗಳೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಅರಿಶಿನಗುಂಡಿ ಹಾಗೂ ಜ್ಯೋತಿಪುರ ಎನ್‌ಜೆವೈ (NJY) 11ಕೆವಿ ಮಾರ್ಗಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರತಿದಿನದ ಹಾಜರಾತಿಯನ್ನು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯ ಮೂಲಕ ಕಡ್ಡಾಯವಾಗಿ ನಿರ್ವಹಿಸಲು ದಿನಾಂಕ: 12-07-2022 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರು ಸುತ್ತೋಲೆ ಹೊರಡಿಸಿದ್ದಾರೆ.

ಸದರಿ ಸುತ್ತೋಲೆಯಲ್ಲಿ ‘ಎಲ್ಲಾ ನಿಲಯಪಾಲಕರು/ ಮೇಲ್ವಿಚಾರಕರು ಬೆಲಗ್ಗೆ ತಿಂಡಿ ಸಮಯದಲ್ಲಿ ಹಾಗೂ ರಾತ್ರಿ ಊಟದ ಸಮಯದಲ್ಲಿ ವಸತಿ ಶಾಲೆ/ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಹಾಜರಿದ್ದು, ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ಪಡೆಯತಕ್ಕದ್ದು’ ಎಂಬುದಾಗಿ ಸೂಚಿಸಲಾಗಿದೆ.

‘ಬಯೋಮೆಟ್ರಿಕ್ ಹಾಜರಾತಿ ಪಡೆಯದೆ ಆಹಾರ ವೆಚ್ಚ ಭರಿಸಿದ್ದಲ್ಲಿ ಸಂಬAಧಪಟ್ಟ ನಿಲಯಪಾಲಕರು, ಅಲ್ಪಸಂಖ್ಯಾತರ ತಾಲ್ಲೂಕು ವಿಸ್ತರಣಾಧಿಕಾರಿಗಳು/ ಪ್ರಾಂಶುಪಾಲರು, ಜಿಲ್ಲಾ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು’ ಎಂಬುದಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿರುತ್ತದೆ.

ಆದರೆ ದಾವಣಗೆರೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೆ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವ ಮಾಹಿತಿ ಆಧಾರದಲ್ಲಿ ದಿನಾಂಕ: 28-11-2025 ರಂದು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರಿಗೆ ದಿನಾಂಕ: 28-11-2025 ರಂದು ದೂರು ನೀಡಿ ‘ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಅಳವಡಿಸಿರುವ ಬಯೋಮೆಟ್ರಿಕ್ ಹಾಜರಾತಿ ನಿರ್ವಹಣೆಯನ್ನು ತನಿಖೆಗೆ ಒಳಪಡಿಸುವಂತೆ’ ಕೋರಲಾಗಿತ್ತು.

ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರು ನೀಡಿದ ಹಿಂಬರಹದಲ್ಲಿ ‘ಈ ಸಂಬAಧ ಜಿಲ್ಲೆಯ ಕೆಲವು ವಸತಿ ನಿಲಯಗಳಲ್ಲಿ ಬಯೋಮೆಟ್ರಿಕ್ ಯಂತ್ರದಲ್ಲಿನ ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲು ಸಾಧ್ಯವಾಗಿರುವುದಿಲ್ಲವೆಂದು ಹಾಗೂ ಮತ್ತೆ ಕೆಲವು ವಸತಿ ಶಾಲೆ ಮತ್ತು ವಸತಿ ನಿಲಯಗಳಿಗೆ ಹೊಸ ಬಯೋಮೆಟ್ರಿಕ್ ಯಂತ್ರವನ್ನು ಪೂರೈಕೆ ಮಾಡುವಂತೆ ಪ್ರಾಂಶುಪಾಲರುಗಳು ಮತ್ತು ತಾಲ್ಲೂಕು ವಿಸ್ತರಣಾಧಿಕಾರಿಗಳು ಕೋರಿರುವ ಪತ್ರವನ್ನು ಲಗತ್ತಿಸಿ’ ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶಕರು, ಬೆಂಗಳೂರು ಇವರಿಗೆ ಪತ್ರ ಬರೆಯಲಾಗಿದೆ ಎಂಬುದಾಗಿ ತಿಳಿಸಿರುತ್ತಾರೆ.

ಆದ ಕಾರಣ ದಿನಾಂಕ: 17-02-2026 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರಿಗೆ ದೂರು ನೀಡಿ ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಒಂದು ತಿಂಗಳ ಒಳಗಾಗಿ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಕೋರಲಾಗಿತ್ತು. ಆದರೆ ದೂರು ನೀಡಿ 3 ತಿಂಗಳು ಕಳೆದರೂ ಅಲ್ಪಸಂಖ್ಯಾತರ ನಿರ್ದೇಶನಾಲಯ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?

Published

on

ಗಿರೀಶ್ ಬಳ್ಳಾರಿ

ಸುದ್ದಿದಿನ,ಬಳ್ಳಾರಿ:ನಗರದ ಗಾಂಧಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯ ನಂತರ ಕೊಂಡಯ್ಯ ಫ್ಯಾಕ್ಟರಿಯ ಹುಸೇನ್ ನಗರದ ಜಾಲಿ ಬೇಲಿಯ ಒಳಭಾಗದಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದಾರೆ ಜೊತೆಗೆ ಆ ಪ್ರದೇಶಕ್ಕೆ ಹೋಗುವ ಈ ಜೂಜಾಟ ಆಡುವವರು ಬೈಕ್ ಗಳ ಶಬ್ದ ಮಾಡಿಕೊಂಡು, ಮನೆಗಳಲ್ಲಿ ಇರುವ ಮಹಿಳೆಯರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎನ್ನುವ ಆರೋಪ ಸ್ಥಳೀಯ ನಿವಾಸಿಗಳಿಂದ ಕೇಳಿ ಬಂದಿದೆ.

ಇನ್ನು ಈ ಇಸ್ಪೀಟ್ ಜೂಜಾಟ ಆಡಿಸುತ್ತಿರುವ ವ್ಯಕ್ತಿಗಳು ದುಬ್ಬ ರಾಜು, ದಾದು ಮತ್ತು ಜಾನಿ, ರಘು ಎಂದು ತಿಳಿದು ಬಂದಿದೆ. ಇನ್ನು ಗಾಂಧಿನಗರ ಠಾಣೆಯ ಸಿಪಿಐ ಮತ್ತು ಪಿ.ಎಸ್.ಐ ಮತ್ತು ಕ್ರೈಂ ಸಿಬ್ಬಂದಿಗಳಿಗೆ ಮಾಹಿತಿ ಇದ್ದರು ಅವರಿಂದ ಹಣ ಪಡೆದುಕೊಂಡು ಈ ಜೂಜಾಟ ಆಡಿಸುತ್ತಿರುವ ಮಾಹಿತಿ ಸಹ ಲಭ್ಯವಾಗಿದೆ.

ಸಾಧಿಕ್ ಪೊಲೀಸರಿಗೆ ಸಾಥ್

ಇನ್ನು ಸಾಧಿಕ್ ಎನ್ನುವ ವ್ಯಕ್ತಿ ಗಾಂಧಿನಗರ ಠಾಣೆಯ ಅನೇಕ ಪೊಲೀಸರಿಗೆ ಪರಿಚಯ ಇದ್ದಾನೆ ಅಂತ ಹೇಳಿ ಜನ ಸಾಮಾನ್ಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡಿ ಅವರ ವಿರುದ್ಧ ಠಾಣೆಯಲ್ಲಿ ಕೇಸ್ ಹಾಕಿಸುತ್ತೇನೆ ಎಂದು ಹಣ ವಸೂಲಿ ಸಹ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

ಇನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ನ ಪನ್ನಿಕರ್ ಪೊಲೀಸ್ ಠಾಣೆಯ ಸಿಪಿಐ ಮತ್ತು ಪಿಎಸ್ಐ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ. ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಕರೆಯನ್ನು ಸ್ವೀಕರಿಸಿಲಿಲ್ಲ.

“ಇನ್ನು ಗಾಂಧಿನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವಿಚಂದ್ರ ಅವರಿಗೆ ದೂರವಾಣಿ ಮೂಲಕ ಮಾತನಾಡಿಸಿದಾಗ ನಮ್ಮ ಗಮನಕ್ಕೆ ಇಲ್ಲ, ಗೋತ್ತಾದ್ರೆ ರೈಡ್ ಮಾಡುತ್ತೇವೆ ಎಂದರು.”

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ8 hours ago

ದಾವಣಗೆರೆ | ಇಂದು ಕರೆಂಟ್ ಇರಲ್ಲ

ಸುದ್ದಿದಿನ,ದಾವಣಗೆರೆ:ಬೆಸ್ಕಾಂ ಜಗಳೂರು ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಜಂಗಲ್ ಕಟಿಂಗ್ ಮತ್ತು ಫೀಡರ್‌ಗಳ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 26 ರಂದು ಬೆಳಿಗ್ಗೆ 09-00 ರಿಂದ ಸಂಜೆ 05-00...

ದಿನದ ಸುದ್ದಿ3 days ago

ಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ:ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ದೂರು ನೀಡಿ ನಿಗಧಿತ ಅವಧಿ...

ದಿನದ ಸುದ್ದಿ4 days ago

ಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?

ಗಿರೀಶ್ ಬಳ್ಳಾರಿ ಸುದ್ದಿದಿನ,ಬಳ್ಳಾರಿ:ನಗರದ ಗಾಂಧಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯ ನಂತರ ಕೊಂಡಯ್ಯ ಫ್ಯಾಕ್ಟರಿಯ ಹುಸೇನ್ ನಗರದ ಜಾಲಿ ಬೇಲಿಯ ಒಳಭಾಗದಲ್ಲಿ ಅಕ್ರಮವಾಗಿ...

ದಿನದ ಸುದ್ದಿ4 days ago

ಪಂಚಪಾಡಿ ಪದ್ಧತಿಯಲ್ಲಿ ವಿದ್ಯಾಭ್ಯಾಸ | ತ್ಯಾವಣಿಗೆಯ ಮಂದಾರ ಶಾಲೆಯಲ್ಲಿ ಪ್ರವೇಶ ಪ್ರಾರಂಭ

~ವಿದ್ಯಾನಾಯ್ಕ್ ಅರೇಹಳ್ಳಿ ಸುದ್ದಿದಿನ,ದಾವಣಗೆರೆ:ಚನ್ನಗಿರಿ ತಾಲೂಕು ವ್ಯಾಪ್ತಿಯ ತ್ಯಾವಣಿಗೆ ಗ್ರಾಮದಲ್ಲಿ ಪಂಚಪಾಡಿ ಮತ್ತು ಆಧುನಿಕ ಪದ್ಧತಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಒಂದು ವಿನೂತನ ಕಾರ್ಯಕ್ಕೆ ಮುಂದಡಿ ಇಟ್ಟಿದ್ದಾರೆ. ಪಂಚಪಾಡಿ...

ಅಂಕಣ4 days ago

ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ

ವಿದ್ಯಾನಾಯ್ಕ್ ಅರೇಹಳ್ಳಿ ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ....

ದಿನದ ಸುದ್ದಿ5 days ago

ಕೀಲು ಮತ್ತು ಮೂಳೆ ಚಿಕಿತ್ಸೆ ; ರೋಬೋಟಿಕ್ ಮತ್ತು ಮಿನಿಮಲಿ ಇನ್ನೇಸಿವ್ ಸರ್ಜರಿಗಳಲ್ಲಿ‌ ಮಹತ್ವದ ಬದಲಾವಣೆ : ಡಾ.ಲೋಕೇಶ್ ಎ. ವೀರಪ್ಪ

ಸುದ್ದಿದಿನ,ದಾವಣಗೆರೆ:ವಯೋಸಹಜವಾಗಿ ಕಂಡುಬರುವ ಮೊಣಕಾಲು, ಸೊಂಟ, ಭುಜ ಮತ್ತು ಕ್ರೀಡಾ ಸಂಬಂಧಿತ ಸಂಧಿ ಸಮಸ್ಯೆಗಳಿಗೆ ಸಮಯೋಚಿತ ಚಿಕಿತ್ಸೆ ಮತ್ತು ನೂತನ ಶಸ್ತ್ರಚಿಕಿತ್ಸಾ ತಂತ್ರಜ್ಞಾನಗಳು ಹೇಗೆ ಸಹಾಯವಾಗುತ್ತಿವೆ ಹಾಗೂ ಈ...

ದಿನದ ಸುದ್ದಿ5 days ago

ದಾವಣಗೆರೆ | ಇದೇ 22 ರಂದು ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026 ಕಾರ್ಯಕ್ರಮ

ಸುದ್ದಿದಿನ,ದಾವಣಗೆರೆ:ಬೆಂಗಳೂರಿನ ಜಿಎಂಕೆ ಎಡು ಟೆಕ್ ರಾಜ್ಯದ ಸಮಸ್ತ ಖಾಸಗಿ ಅನುದಾನರಹಿತ ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಣ ಕ್ಷೇತ್ರದ ಆಸಕ್ತರಿಗಾಗಿ ನಾಳೆ (ಮೇ22) ರಂದು...

ದಿನದ ಸುದ್ದಿ7 days ago

ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ...

ದಿನದ ಸುದ್ದಿ1 week ago

ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಯುವಜನತೆಗೆ ಪ್ರೇರಣೆ ; ವಿಶ್ವನಾಥ.ಡಿ. ಅರ್

ಸುದ್ದಿದಿನ,ಬನ್ನಿಕೋಡು:ಮಾ.ಸ.ಬ. ಕಾಲೇಜ್, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್‌.ಎಸ್‌.ಎಸ್‌. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ....

ದಿನದ ಸುದ್ದಿ1 week ago

ಲೋಕಾಯುಕ್ತ ಪೋಲಿಸ್ ಇನ್ಸ್‌ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು

ಸುದ್ದಿದಿನ,ಬನ್ನಿಕೋಡು: ಮಾ.ಸ.ಬ. ಕಾಲೇಜು, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್‌.ಎಸ್‌.ಎಸ್‌. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಅಧ್ಯಕ್ಷತೆಯನ್ನು ಮಾ.ಸ.ಬ. ಕಾಲೇಜಿನ ವಾಣಿಜ್ಯ...

Trending