ದಿನದ ಸುದ್ದಿ
38,32,50,000- ಈ ಸಂಖ್ಯೆಯೊಂದಿಗೆ ಬೆಂಗಳೂರಿನ ನಂಟೇನು? ಗಾಯಕ ವಾಸು ದೀಕ್ಷಿತರಿಗೆ ಇದರಿಂದ ಸ್ಪೂರ್ತಿ ಏನು?
ಬಿಬಿಸಿ ಮೀಡಿಯಾ ಆಕ್ಷನ್ ಮತ್ತು ಗಾಯಕ ವಾಸು ದೀಕ್ಷಿತ್ ಸಹಯೋಗದಲ್ಲಿ, ಬೆಂಗಳೂರಿನ ಸರ್ಕುಲಾರ್ ಎಕಾನಮಿಯಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಪಾತ್ರದ ಕುರಿತು ಹ್ಯಾಪಿ ನಂಬರ್ ಹಾಡು ಮಾತನಾಡುತ್ತದೆ.
ಸುದ್ದಿದಿನ,ಬೆಂಗಳೂರು: ಬೆಂಗಳೂರಿನ ಸರ್ಕುಲಾರ್ ಎಕಾನಮಿಯಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಪಾತ್ರ ಮತ್ತು ಕೊಡುಗೆಯನ್ನು ಹೈಲೈಟ್ ಮಾಡುವ “Invaluables”ನ ಎರಡನೇ ಹಂತದ #Invaluable Recyclers ಪ್ರಾರಂಭಿಸುವುದಾಗಿ ಬಿಬಿಸಿ ಮೀಡಿಯಾ ಆಕ್ಷನ್ ಇಂದು ಘೋಷಿಸಿತು.
ಬಿಬಿಸಿ ಮೀಡಿಯಾ ಆಕ್ಷನ್ ಗಾಯಕ ವಾಸು ದೀಕ್ಷಿತ್ ಅವರ ಸಹಯೋಗದೊಂದಿಗೆ ‘ಹ್ಯಾಪಿ ನಂಬರ್’ ಎಂಬ ಶೀರ್ಷಿಕೆಯ ಹಾಡನ್ನು ಬಿಡುಗಡೆ ಮಾಡಿದೆ. ಇದು ನಗರದಲ್ಲಿ ತ್ಯಾಜ್ಯ ಸಂಗ್ರಾಹಕರ ಕೊಡುಗೆಯನ್ನು ಎತ್ತಿ ತೋರಿಸುತ್ತದೆ. ನಗರದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಮತ್ತು ಇತರ ಮರುಬಳಕೆ ಮಾಡಬಹುದಾದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವುದು ಮತ್ತು ಮರುಬಳಕೆ ಮಾಡುವುದರ ಮೂಲಕ ಭೂಮಿಯ ಒಡಲು ಸೇರಬಹುದಾದ 383,250 ಟನ್ ತ್ಯಾಜ್ಯವನ್ನು ಬೇರೆಡೆ ವರ್ಗಾಯಿಸುವ ಪ್ರಕ್ರಿಯೆಯಾಗಿದೆ.
ಭೂಮಿಯ ಒಡಲಲ್ಲಿ ತ್ಯಾಜ್ಯ ಸಂಗ್ರಹವಾಗುವುದರಿಂದ ಅಪಾರ ಪ್ರಮಾಣದಲ್ಲಿ ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಇದು ಗಾಳಿ, ನೀರು ಮತ್ತು ಮಣ್ಣಿನ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಗೂ ಕಾರಣವಾಗುತ್ತದೆ.
ಬಿಬಿಸಿ ಮೀಡಿಯಾ ಆಕ್ಷನ್ ಮತ್ತು ಅದರ ಪಾಲುದಾರರು ಇಂದು ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಗಾಯಕ ವಾಸು ದೀಕ್ಷಿತ್, ಪರಿಸರವಾದಿ ವಾಣಿ ಮೂರ್ತಿ ಮತ್ತು ನಟಿ ಶ್ರದ್ಧಾ ಜೈನ್ ಅವರ ಉಪಸ್ಥಿತಿಯಲ್ಲಿ ಹಾಡನ್ನು ಬಿಡುಗಡೆ ಮಾಡಲಾಯಿತು. ಬೆಂಗಳೂರಿಗರಲ್ಲಿ ತ್ಯಾಜ್ಯವನ್ನು ಆರಿಸುವ ಸಮುದಾಯದ ಬಗ್ಗೆ ಜಾಗೃತಿ ಮತ್ತು ಸಹಾನುಭೂತಿ ಮೂಡಿಸುವುದು ಇದರ ಉದ್ದೇಶ.
ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಮತ್ತು 22,500 ಕ್ಕೂ ಹೆಚ್ಚು ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರಿಗೆ ನೆಲೆಯೂ ಹೌದು. ಅವರು ನಗರದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದ್ದಾರೆ. ಮರುಬಳಕೆ ಮಾಡಲಾಗದ ವಸ್ತುಗಳು ಮಾತ್ರ ಲ್ಯಾಂಡ್ ಫಿಲ್‌ನಲ್ಲಿ ಉಳಿಯವಂತೆ ಅವರು ನೋಡಿಕೊಳ್ಳುತ್ತಾರೆ.
Invaluable Recyclers ಬಗ್ಗೆ ಮಾತನಾಡಿದ ಬಿಬಿಸಿ ಮೀಡಿಯಾ ಆಕ್ಷನ್‌ನ ಕಾರ್ಯನಿರ್ವಾಹಕ ಕ್ರಿಯೇಟಿವ್ ಡೈರೆಕ್ಟರ್ ಸೋಮಾ ಕಟಿಯಾರ್, “ಸಾಂಕ್ರಾಮಿಕ ಸಂಕಷ್ಟದ ಪರಿಣಾಮ ಅಂಕಿ-ಸಂಖ್ಯೆಗಳು ಭಯಾನಕವಾಗಿವೆ. ಕೆಟ್ಟ ಸಂಭವನೀಯ ಸುದ್ದಿಗಳ ಮುನ್ನುಡಿ ಇದು! ಆದರೆ, ನಾವು ತಿಳಿದುಕೊಳ್ಳಬೇಕಾದ ಮತ್ತು ಆಚರಿಸಬೇಕಾದ ‘ಸಂತೋಷದ ಸಂಖ್ಯೆ’ ಇಲ್ಲಿದೆ – ಅಂದಾಜು 38,32,50,000 ಕಿಲೋಗ್ರಾಂ ತ್ಯಾಜ್ಯವನ್ನು ಬೆಂಗಳೂರಿನ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರು ಈಗಾಗಲೇ ತುಂಬಿರುವ ಲ್ಯಾಂಡ್ ಫಿಲ್‌ಗಳಿಗೆ ಸೇರದಂತೆ ತಡೆದಿದ್ದಾರೆ.
ನಾವು ಅವರನ್ನು ಸದ್ದಿಲ್ಲದೇ ಕೆಲಸ ಮಾಡುವ ಪರಿಸರವಾದಿಗಳಂತೆ ಕಾಣುತ್ತೇವೆ. ತ್ಯಾಜ್ಯ ಮರುಬಳಕೆಯ ವ್ಯಾಲ್ಯೂ ಚೇನ್‌ನಲ್ಲಿ ಅವರೇ ಮೊದಲಿಗರು. ಅವರು ನಗರಕ್ಕಾಗಿ ಮಾಡುವ ಈ ಅಮೂಲ್ಯವಾದ ಕೆಲಸವನ್ನು “#InvaluableRecyclers ” ಈ ಹಾಡು ಕೊಂಡಾಡುತ್ತದೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತದೆ. ಬಿಬಿಸಿ ಮೀಡಿಯಾ ಆಕ್ಷನ್ ನಗರದ ಸರ್ಕುಲಾರ್ ಎಕಾನಮಿಯಲ್ಲಿ ಈ ಹ್ಯಾಪಿ ನಂಬರ್ ಹಾಡು ಮತ್ತು ಅಭಿಯಾನದ ಮೂಲಕ, ತ್ಯಾಜ್ಯವನ್ನು ಆರಿಸುವ ವೃತ್ತಿಗೆ ಕೌಶಲ್ಯ ಮತ್ತು ಪರಿಣತಿಯನ್ನು ತಂದು ಅವರ ಪಾತ್ರವನ್ನು ಹೈಲೈಟ್ ಮಾಡುತ್ತದೆ.
ಹ್ಯಾಪಿ ನಂಬರ್ ಹಾಡನ್ನು ಸಂಯೋಜಿಸಿದ ಸಂಗೀತಗಾರ ವಾಸು ದೀಕ್ಷಿತ್ (@dixitvasu), “ಬೆಂಗಳೂರಿನ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ವಿಚಾರದಲ್ಲಿ ನಾಗರಿಕರಾದ ನಮಗೆ ಹೊಣೆಗಾರಿಕೆ ಇದೆ.ನಮ್ಮ ಪರಿಸರವನ್ನು ರಕ್ಷಿಸುವ ಅವರಿಗೆ ಅರ್ಹ ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುವ ಹೊಣೆಗಾರಿಕೆ ಅದು. ನಾವು ಅವರಿಗೆ ನೀಡುವ ತ್ಯಾಜ್ಯ ಮರುಬಳಕೆಗೆ ಯೋಗ್ಯವಾದುದು ಎಂಬುದನ್ನು ನಾವು ಖಾತರಿಪಡಿಸಬೇಕು. ಹ್ಯಾಪಿ ನಂಬರ್ ಹಾಡು ಅವರನ್ನು ಮತ್ತು ಅವರ ಕೆಲಸವನ್ನು ಪರಿಚಯಿಸಿ ಸಂಭ್ರಮಿಸುವುದಕ್ಕೆ ನನಗೆ ಸಿಕ್ಕ ಉತ್ತಮ ಅವಕಾಶ.
ಬೆಂಗಳೂರಿಗರು ಜೊತೆಯಲ್ಲಿ ಹಾಡಿದರೆ ಮತ್ತು ತ್ಯಾಜ್ಯ ತೆಗೆಯುವವರನ್ನು ಗುರುತಿಸಿದರೆ ಆ ಕನಸು ನನಸಾದಂತೆ ಆಗುತ್ತದೆ ಎಂದು ಹೇಳಿದರು.
ಬಿಬಿಸಿ ಮೀಡಿಯಾ ಆಕ್ಷನ್‌ನ ಸಂಶೋಧನೆಯ ಪ್ರಕಾರ, ಬೆಂಗಳೂರಿನ ಬೀದಿಗಳಲ್ಲಿ ತ್ಯಾಜ್ಯವು ಗೋಚರಿಸುತ್ತಿದೆ. ವಾಸ್ತವದಲ್ಲಿ ಇದು ಕಳವಳಕಾರಿಯಾಗಿದ್ದರೂ, ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರು ವರ್ಚುವಲ್ ಆಗಿ ಹೆಚ್ಚಿನ ಜನರಿಗೆ ‘ಅಗೋಚರ’ವಾಗಿದ್ದಾರೆ ಎಂಬುದು ವ್ಯಕ್ತವಾಗಿದೆ. ಅಧ್ಯಯನ ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು ಶೇಕಡ 55% ರಷ್ಟು ಜನ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರನ್ನು ನೋಡುವುದಕ್ಕೆ ಕೊಳಕಾಗಿ ಇರುತ್ತಾರೆ ಎಂದಿದ್ದಾರೆ.
ಶೇಕಡ 56% ರಷ್ಟು ಜನ ಕಟ್ಟಡ ಸಂಕೀರ್ಣಗಳು ಮತ್ತು ಸಮಾಜದೊಳಗೆ ಅವರ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಹೇಳಿದ್ದಾರೆ.
ಪ್ರಚಾರ ಪೂರ್ವದಲ್ಲಿ ಸಹಕರಿಸಿದ ಜನಪ್ರಿಯ ಹಾಸ್ಯ ನಿರೂಪಕಿ ಮತ್ತು ನಟಿ ಶ್ರದ್ಧಾ ಜೈನ್ (@AiyyoShraddha), “ಈ ಹ್ಯಾಪಿ ನಂಬರ್ ಹಾಡನ್ನು ಇನ್ನಷ್ಟು ಹೆಚ್ಚು ಜನರಿಗೆ ತಲುಪಿಸುವ ಅವಕಾಶ ಸಿಕ್ಕಿದ್ದು ಒಂದು ಸುಯೋಗವೆಂದು ಭಾವಿಸುತ್ತೇನೆ. ತ್ಯಾಜ್ಯ ಆಯುವವರು ಬೆಂಗಳೂರಿಗೆ ಏನು ಮಾಡುತ್ತಾರೆ ಎಂಬುದು ಮುಖ್ಯ. ಅವರ ಕೌಶಲ್ಯಪೂರ್ಣ ಕೆಲಸವು ನಮ್ಮ ಜೀವನವನ್ನು ಹಗುರಾಗಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹ್ಯಾಪಿ ನಂಬರ್ ಮತ್ತು #InvaluableReclyers ಅಭಿಯಾನವು ಅವರ ಪಾತ್ರದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಬೆಂಗಳೂರಿನ ಜನರು ಅವರ ಕೊಡುಗೆಯನ್ನು ಗುರುತಿಸಬೇಕಾಗಿದೆ” ಎಂದು ಹೇಳಿದರು.
ಪ್ಲಾಸ್ಟಿಕ್ ಅನ್ನು ಪರಿಣಾಮಕಾರಿಯಾಗಿ ಮರುಬಳಕೆ ಮಾಡುವುದಕ್ಕಾಗಿ ತ್ಯಾಜ್ಯ ಆಯುವವರು, ಗೋಡೌನ್ ಪ್ರಕಾರವನ್ನು ಅವಲಂಬಿಸಿ ಅವುಗಳನ್ನು 35 ರಿಂದ 70 ಕ್ಕೂ ಹೆಚ್ಚು ವರ್ಗಗಳಾಗಿ ವಿಂಗಡಿಸುತ್ತಾರೆ. ನೋಟ, ಸ್ಪರ್ಶದ ಧ್ವನಿ ಮತ್ತು ದಪ್ಪದ ಆಧಾರದ ಮೇಲೆ ವಸ್ತುಗಳನ್ನು ಗುರುತಿಸುವಲ್ಲಿ ಇವರು ಪರಿಣತರು ಮತ್ತು ಅನುಭವಿಗಳು.
ಗೊಬ್ಬರ ತಯಾರಿಕೆ ಮತ್ತು ನಗರ ಕೃಷಿ ಬಗ್ಗೆ ಒಲವು ಹೊಂದಿರುವ ಪರಿಸರವಾದಿ ವಾಣಿ ಮೂರ್ತಿ (@WormRani), “ನಗರದಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಮತ್ತು ಪೆಟ್ ತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಮಾಡುವಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರು ಪ್ರಮುಖ ಪಾತ್ರ ವಹಿಸುತ್ತಾರೆ. ನಾವು ಪ್ಲಾಸ್ಟಿಕ್ ಆಹಾರದ ಪಾತ್ರೆಗಳನ್ನು ತ್ಯಾಜ್ಯವೆಂದು ಬಿಸಾಡುವ ಮೊದಲು ತೊಳೆಯುವಂತಹ ಸರಳ ಕ್ರಮಗಳನ್ನು ಅನುಸರಿಸಿದರೆ ಸಾಕು.
ಈ ಕ್ರಮವು ಪ್ಲಾಸ್ಟಿಕ್ ಅನ್ನು ಮರುಬಳಕೆಗೆ ಯೋಗ್ಯವಾಗಿಸುತ್ತದೆ. ಮಾತ್ರವಲ್ಲದೆ ತ್ಯಾಜ್ಯ ಸಂಗ್ರಾಹಕರ ಕೆಲಸವನ್ನು ಸುಲಭ ಮಾಡುತ್ತದೆ. ಅದೇ ರೀತಿ, ಆಹಾರ ಅಥವಾ ತ್ಯಾಜ್ಯ ಕೊಳೆತು ಸಂಗ್ರಾಹಕರಿಗೆ ಆಗಬಹುದಾದ ಅಪಾಯದಿಂದ ರಕ್ಷಿಸುತ್ತದೆ. ಒಟ್ಟಾಗಿ, ನಾವು ಬಿಸಾಡುವ ತ್ಯಾಜ್ಯದ ಮೌಲ್ಯವನ್ನು ತಿಳಿದಿರುವ ಜನರನ್ನು ಆದರಿಸೋಣ ಮತ್ತು ಗೌರವಿಸೋಣ”.
ಬೆಂಗಳೂರು ನಗರದಲ್ಲಿ ತ್ಯಾಜ್ಯ ಸಂಗ್ರಹ ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಬಗ್ಗೆ ಇರುವ ಗ್ರಹಿಕೆಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ಬಿಬಿಸಿ ಮೀಡಿಯಾ ಆಕ್ಷನ್‌ನ #Invaluables ಸಾಮಾಜಿಕ ಮಾಧ್ಯಮ ಅಭಿಯಾನದ ಎರಡನೇ ಹಂತ ಈ #InvaluableRecyclers. ಹಿಂದಿನ ಹಂತದ ಈ ಅಭಿಯಾನದ ನಂತರದಲ್ಲಿ ನಡೆದ ಸಂಶೋಧನೆಯು ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಜಾಗೃತಿ ವಿಚಾರಕ್ಕೆ ಪ್ರತಿಕ್ರಿಯಿಸಿದವರಲ್ಲಿ ಸುಮಾರು ಶೇಕಡ 6% ರಷ್ಟು ಹೆಚ್ಚಳವಾಗಿದೆ.
ತ್ಯಾಜ್ಯವನ್ನು ಆರಿಸುವ ಮತ್ತು ವಿಂಗಡಿಸುವ ಮೂಲಕ ಪರಿಸರಕ್ಕೆ ಸಹಾಯ ಮಾಡುವಲ್ಲಿ ಅವರ ಕೊಡುಗೆಯ ಅರಿವು ಅವರಿಗೆ ಆಗಿದೆ.
ಬೆಂಗಳೂರಿನಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಜೀವನವನ್ನು ಸುಧಾರಿಸುವುದಕ್ಕಾಗಿ ಬಿಬಿಸಿ ಮೀಡಿಯಾ ಆಕ್ಷನ್ ಮಾಡುತ್ತಿರುವ ಕೆಲಸವು ಎಚ್&ಎಂ ಫೌಂಡೇಶನ್ ಅನುದಾನಿತ ಸಾಮೂಹಿಕ ಶಕ್ತಿ ಉಪಕ್ರಮದ ಭಾಗವಾಗಿದೆ. ಕೇರ್ ಇಂಡಿಯಾ, ಹಸಿರು ದಳ, ಲೇಬರ್‌ನೆಟ್, ಸೇವ್ ದಿ ಚಿಲ್ಡ್ರನ್, ಸೋಷಿಯಲ್ ಆಲ್ಫಾ ಮತ್ತು ವಾಟರ್‌ಏಡ್, ಜೊತೆಗೆ ದಿ ನಡ್ಜ್ ಫೌಂಡೇಶನ್ ಮಧ್ಯಸ್ಥಿಕೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತ ಈ ಸಹಯೋಗದ ಪಾಲುದಾರಿಕೆ ಹೊಂದಿವೆ.
ಬಿಬಿಸಿ ಮೀಡಿಯಾ ಆಕ್ಷನ್‌ನ ಕಿರುಪರಿಚಯ
ಬಿಬಿಸಿ ಮೀಡಿಯಾ ಆಕ್ಷನ್ ಎಂಬುದು ಬಿಬಿಸಿ ಅಂತಾರಾಷ್ಟ್ರೀಯ ಚಾರಿಟಿಯಾಗಿದೆ. ನಾವು ಮಾಧ್ಯಮ ಮತ್ತು ಸಂವಹನವಿರುವುದು ಒಳಿತಿಗಾಗಿ ಎಂದು ನಂಬುತ್ತೇವೆ. ಪ್ರಪಂಚದ ಕೆಲವು ಬಡ ಮತ್ತು ಅತ್ಯಂತ ದುರ್ಬಲ ದೇಶಗಳಲ್ಲಿ ನಾವು ಪ್ರತಿ ವರ್ಷ 100 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ತಲುಪುತ್ತೇವೆ. ನಮ್ಮ ಯೋಜನೆಗಳು ಮತ್ತು ಕಾರ್ಯಕ್ರಮಗಳು ಜೀವಗಳನ್ನು ಉಳಿಸುತ್ತವೆ ಹಾಗೂ ಜೀವನೋಪಾಯವನ್ನು ರಕ್ಷಿಸುತ್ತವೆ. ಅದೇ ರೀತಿ ತಪ್ಪು ಮಾಹಿತಿಯನ್ನು ನಿವಾರಿಸುತ್ತವೆ. ಪೂರ್ವಾಗ್ರಹಗಳಿಗೆ ಸವಾಲೊಡ್ಡಿ ಪ್ರಜಾಪ್ರಭುತ್ವಕ್ಕೆ ಬಲ ತುಂಬುತ್ತೇವೆ ಮಾನವ-ಕೇಂದ್ರಿತ ವಿನ್ಯಾಸ ವಿಧಾನವನ್ನು ಬಳಸಿಕೊಂಡು ಮಾಡುವ ನಮ್ಮ ಕೆಲಸವು ಪುರಾವೆಗಳು ಮತ್ತು ಒಳನೋಟಗಳಿಂದ ಕೂಡಿಕೊಂಡಿದೆ.
ಸಾಮಾಜಿಕ ಮತ್ತು ನಡವಳಿಕೆಯ ಬದಲಾವಣೆಯನ್ನು ತರುವುದಕ್ಕಾಗಿ ಪ್ರಭಾವ-ಪರೀಕ್ಷಿತ, ಸ್ಕೇಲೆಬಲ್, ದೊಡ್ಡ ಆಲೋಚನೆಗಳನ್ನು ನಿಯಂತ್ರಿಸುತ್ತ ಮುನ್ನಡೆಯುತ್ತೇವೆ. ಭಾರತದಲ್ಲಿ ಕಳೆದ ಎರಡು ದಶಕಗಳಲ್ಲಿ, ನಾವು ಆರೋಗ್ಯ (ಎಚ್‌ಐವಿ ತಡೆಗಟ್ಟುವಿಕೆ, ಕ್ಷಯರೋಗ, ರೋಗನಿರ್ಣಯ ಮತ್ತು ಚಿಕಿತ್ಸೆ, ಸಂತಾನೋತ್ಪತ್ತಿ, ತಾಯಿಯ, ನವಜಾತ ಶಿಶುಗಳು ಮತ್ತು ಮಕ್ಕಳ ಆರೋಗ್ಯ), ನೈರ್ಮಲ್ಯ, ಲಿಂಗ ಸಮಾನತೆ, ಹವಾಮಾನ ಬದಲಾವಣೆ ಮತ್ತು ಜೀತ ತಡೆಗಟ್ಟುವಿಕೆಯಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ್ದೇವೆ.
ವೆಬ್‌ಸೈಟ್:https://www.bbc.co.uk/mediaaction/where-we-work/asia/india/
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಾಡಿನೆಲ್ಲೆಡೆ ಆಯುಧಪೂಜೆ ಸಡಗರ; ಮೈಸೂರು ಅರಮನೆಯಲ್ಲಿ ಪಟ್ಟದ ಹಸು, ಆನೆ, ಆಯುಧಗಳಿಗೆ ಯದುವೀರ್ ಒಡೆಯರ್ ಪೂಜೆ
ಸುದ್ದಿದಿನಡೆಸ್ಕ್:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿಯ 9ನೇ ದಿನವಾದ ಇಂದು ಸಾಂಪ್ರದಾಯಿಕವಾಗಿ ಆಯುಧಪೂಜೆ ನೆರವೇರಿತು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧಪೂಜೆ ನೆರವೇರಿಸಿದರು.
ಅರಮನೆ ಮುಂಭಾಗದಲ್ಲಿ ಪಟ್ಟದ ಹಸು, ಆನೆ, ಕುದುರೆ, ಒಂಟೆಗಳಿಗೆ, ಪಲ್ಲಕ್ಕಿ ಹಾಗೂ ರಾಜರ ಕಾರುಗಳಿಗೆ ಪೂಜೆ ಸಲ್ಲಿಸಿದರು. ಅರಮನೆಯ ಪೂರ್ವಜರು ಬಳಸುತ್ತಿದ್ದ ಆಯುಧಗಳನ್ನು ಸ್ವಚ್ಛಗೊಳಿಸಿ, ಅವುಗಳಿಗೂ ಪೂಜೆ ನೆರವೇರಿಸಲಾಯಿತು. ದಸರಾ ವೈಭವ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಲಕ್ಷಾಂತರ ಪ್ರವಾಸಿಗರು ಆಗಮಿಸಿದ್ದಾರೆ.
ರಾಜ್ಯಾದ್ಯಂತ ನವರಾತ್ರಿಯ 9ನೇ ದಿನವಾದ ಇಂದು ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ದಾವಣಗೆರೆ ಜಿಲ್ಲೆಯಲ್ಲಿ ಆಯುಧಪೂಜೆ ಮತ್ತು ದಸರಾ ಮಹೋತ್ಸವದ ಸಂಭ್ರಮ ಇಮ್ಮಡಿಗೊಂಡಿದೆ. ಆಯುಧ ಪೂಜೆಯ ಭಾಗವಾಗಿ ಬೆಳಿಗ್ಗೆಯಿಂದ ಜನರು ವಾಹನಗಳನ್ನು ತೊಳೆದು ಹೂವು, ಬಾಳೆಕಂದುಗಳನ್ನು ಕಟ್ಟಿ ಪೂಜೆ ಸಲ್ಲಿಸುತ್ತಿರುವುದು ಸಾಮಾನ್ಯವಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಆಯುಧಪೂಜೆಯನ್ನು ಶ್ರಧಾ ಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ತಮ್ಮ ವಾಹನಗಳಿಗೆ ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು. ಕೋಲಾರ ಜಿಲ್ಲಾದ್ಯಂತ ಆಯುಧ ಪೂಜೆ ಹಾಗೂ ದಸರಾ ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಯುಧ ಪೂಜೆ ಹಿನ್ನಲೆ ಜಿಲ್ಲೆಯ ಹಲವು ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಆಯುಧಪೂಜೆ ಸಂಭ್ರಮ ಇಮ್ಮಡಿಗೊಂಡಿದ್ದು, ಕಾಫಿ ತೋಟಗಳಲ್ಲಿ ಮಾಲೀಕರು ತೋಟದ ಯಂತ್ರೋಪಕರಣಗಳನ್ನು ಶೃಂಗರಿಸಿ ಪೂಜೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹಾವೇರಿ ಜಿಲ್ಲೆಯಾದ್ಯಂತ ಆಯುಧ ಪೂಜೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಉದ್ಯಮಿ ರತನ್ ಟಾಟಾ ನಿಧನ; ಗಣ್ಯರಿಂದ ಸಂತಾಪ
ಸುದ್ದಿದಿನಡೆಸ್ಕ್:ದೇಶದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಮತ್ತು ಉದ್ಯಮಿಗಳು ಸಂತಾಪ ಸೂಚಿಸಿದ್ದಾರೆ.
ಟಾಟಾ ಸಮೂಹ ಸಂಸ್ಥೆಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದ್ದ ಅವರು, ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಬೆಳಗ್ಗೆ ಅವರ ಆರೋಗ್ಯಸ್ಥಿತಿಯಲ್ಲಿ ಮತ್ತೆ ಏರುಪೇರು ಕಾಣಿಸಿಕೊಂಡ ಕಾರಣ, ಅವರನ್ನು ಮುಂಬೈಗೆ ಬ್ರೀಚ್ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಅವರು ನಿಧನರಾದರು.
ರತನ್ ಟಾಟಾ ಅವರ ನಿಧನದಿಂದ, ಭಾರತವು ಸಾಂಸ್ಥಿಕ ಬೆಳವಣಿಗೆಯನ್ನು ರಾಷ್ಟ್ರ ನಿರ್ಮಾಣದೊಂದಿಗೆ ಮತ್ತು ಶ್ರೇಷ್ಠತೆಯನ್ನು ನೀತಿಯೊಂದಿಗೆ ಸಂಯೋಜಿಸಿದ ವ್ಯಕ್ತಿಯನ್ನು ಕಳೆದುಕೊಂಡಿದೆ. ರತನ್ ಟಾಟಾ ಅವರು ಶ್ರೇಷ್ಠ ಟಾಟಾ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ದರು ಮತ್ತು ಹೆಚ್ಚು ಪ್ರಭಾವಶಾಲಿ ಜಾಗತಿಕ ಉಪಸ್ಥಿತಿಯನ್ನು ನೀಡಿದರು. ಅನುಭವಿ ವೃತ್ತಿಪರರು ಹಾಗೂ ಯುವ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ರತನ್ ಟಾಟಾ ಅವರ ನಿಧನದಿಂದಾಗಿ ತೀವ್ರ ದುಃಖವಾಗಿದೆ. ಅವರು ದೊಡ್ಡ ಕನಸು ಕಾಣುವ ಮತ್ತು ಸಮಾಜಕ್ಕೆ ಮರಳಿ ನೀಡುವ ಉತ್ಸಾಹವನ್ನು ಹೊಂದಿದ್ದರು. ದೇಶದಲ್ಲಿ ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯ ಮತ್ತು ಪ್ರಾಣಿ ಕಲ್ಯಾಣದಂತಹ ಪ್ರಮುಖ ಕ್ಷೇತ್ರಗಳಲ್ಲಿ ಟಾಟಾ ಸಮೂಹ ಮುಂಚೂಣಿಯಲ್ಲಿದೆ. ರತನ್ ಟಾಟಾ ಅವರು ಅಸಾಧಾರಣ ಮತ್ತು ದೂರದೃಷ್ಟಿಯ ಉದ್ಯಮಿಯಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ಅ.12ರಂದು ಮದ್ಯ ಮಾರಾಟ ನಿಷೇಧ
ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಅಕ್ಟೋಬರ್ 11 ಮತ್ತು 12 ರಂದು ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬ ಆಚರಿಸಲಿದ್ದು. ಈ ವೇಳೆ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಟೋಬರ್ 12 ರ ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಮದ್ಯದಂಗಡಿ ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಗುರುಕುಲ ಶಾಲೆಯ ಮಕ್ಕಳೊಂದಿಗೆ ಬೆರೆತ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ5 days ago
ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಅ.9 ರಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಅಹವಾಲು ಸ್ವೀಕಾರ
-
ದಿನದ ಸುದ್ದಿ6 days ago
ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ವಸತಿ ಯೋಜನೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ದಾವಣಗೆರೆ | ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಕಾರ್ಯಾರಂಭ ಸಮಾರಂಭ ; ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟನೆ
-
ದಿನದ ಸುದ್ದಿ5 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಗ್ರಾಮ ಸಭೆ ಕಡ್ಡಾಯ : ಸಚಿವ ಪ್ರಿಯಾಂಕ ಖರ್ಗೆ