Connect with us

ಲೈಫ್ ಸ್ಟೈಲ್

ಹತ್ತೂರಲ್ಲೂ ಇಲ್ಲದ ‘ಕುಲಂಕಾರೇಶ್ವರ’ನ ಉತ್ಸವ

Published

on

ನಮ್ಮ ದೇಶದ ಹಬ್ಬಗಳಿಗೆ ಹೆಸರುವಾಸಿಯಾಗಿದೆ. ಭಾರತದಲ್ಲಿ ಜರಗುವ ಹಿಂದೂ ಹಬ್ಬಗಳಿಗೆ ವಿಶೇಷ ಮಾನ್ಯತೆ ಇದೆ. ವರ್ಷದುದ್ದಕ್ಕೂ ಪ್ರತಿ ತಿಂಗಳು ಸಾಮಾನ್ಯವಾಗಿ ಎರಡರಿಂದ ಮೂರು ಜಾತ್ರೆಗಳು ಬಂದೆ ಬರುತ್ತವೆ. ಹಬ್ಬ ಬಂದರೆ ಸಾಕು ಮನೆಗಳಲ್ಲಿ ಹೆಣ್ಣಮಕ್ಕಳಿಗೆ ಕೆಲಸಗಳ ಸರಮಾಲೆ ಶುರುವಾಗುತ್ತದೆ. ಪ್ರತಿ ತಿಂಗಳು ಬರುವ ಹಬ್ಬಗಳಿಗಿಂತಲೂ ವರ್ಷಕ್ಕೋಮ್ಮೆ ಬರುವ ಕೆಲವು ಹಬ್ಬಗಳು ವಿಶೇಷವಾಗಿವೆ. ಅವುಗಳಲ್ಲಿ ಯುಗಾದಿ, ನಾಗರಪಂಚಮಿ, ದಿಪಾವಳಿ, ಮಹಾನವಮಿ, ಗಣೇಶ ಚತುರ್ಥಿ, ಹೀಗೆ ಅನೇಕ ಹಬ್ಬಗಳು ಬರುತ್ತವೆ.

ಈ ಹಬ್ಬಗಳಿಗೂ ಒಂದೊಂದು ವಿಶೇಷಗಳು ಇವೆ. ಈಗ ನಾನು ಹಿಂದೂ ವಾರ್ಷಿಕ ಪಂಚಾಂಗದ ಪ್ರಕಾರ ಬರುವ ವರ್ಷದ ಎರಡನೇ ಹಬ್ಬವಾದ ಅಕ್ಷಯ ತೃತೀಯದ ಬಗ್ಗೆ ಮಾತಾಡುತ್ತಿದ್ದೆನೆ.‌ ಅಕ್ಷಯ ತೃತೀಯ ಅಂದರೆ ಏನು? ಇದರ ಅರ್ಥ ವೇನು? ಅದರ ಮಹತ್ವವೇನು? ಅನ್ನೊದು ತಿಳಿದರೆ ಸೂಕ್ತವಾಗಿರುತ್ತದೆ. ಅಕ್ಷಯ ತೃತೀಯ ಹಬ್ಬವು ಹಿಂದೂಗಳು ಮತ್ತು ಜೈನರ ವಾರ್ಷಿಕ ವಸಂತಕಾಲದ ಉತ್ಸವವಾಗಿದೆ. ಇದು ವೈಶಾಖ ತಿಂಗಳಿನ ಶುಕ್ಲ ಪಕ್ಷದ ಮೂರನೇ ತಿಥಿಯ ಚಂದ್ರ ದಿನದಂದು ಬರುತ್ತದೆ. ಭಾರತ ಮತ್ತು ನೇಪಾಳದಲ್ಲಿರುವ ಹಿಂದೂ ಹಾಗೂ ಜೈನ ಜನಾಂಗದವರು ಒಟ್ಟಾಗಿ ಪ್ರಾದೇಶಿಕ ಹಬ್ಬವಾಗಿ ಆಚರಿಸುತ್ತಿದ್ದಾರೆ. ಹಬ್ಬದ ದಿನಾಂಕವು ಬದಲಾಗುತ್ತದೆ. ಹಾಗೂ ಲುನಿಜೊಲಾರ್ ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಂದಿಸಲಾಗಿದೆ ಮತ್ತು ಗ್ರಗೋರಿಯನ್ ಕ್ಯಾಲೆಂಡರ್‍ನಲ್ಲಿ ಪ್ರತಿವರ್ಷ ಏಪ್ರೀಲ್ ಅಥವಾ ಮೇ ತಿಂಗಳಲ್ಲಿ ಬರುತ್ತದೆ.

“ಅಕ್ಷಯ ಅಂದರೆ ಅಕ್ತಿ ಅಥವಾ ಅಖಾ ತೇಜ್ ಎಂಬರ್ಥ ನೀಡುತ್ತದೆ.” ಇದು ಶಾಶ್ವತವಾದ ಮೂರನೇ ದಿನವಾಗಿದೆ ಎಂದು ಹೇಳಲಾಗುತ್ತದೆ. ಸಂಸ್ಕøತದಲ್ಲಿ ‘ಅಕ್ಷಯ’ ಪದಕ್ಕೆ ಸಮೃದ್ಧತೆ, ಭರವಸೆ, ಸಂತೋಷ, ಯಶಸ್ಸು ಎನ್ನುವ ಅರ್ಥಗಳಿವೆ. ಇವುಗಳ ಜೊತೆಗೆ ನಾಶವಾಗದ, ಶಾಶ್ವತವಾದ, ಎಂದಿಗೂ ಕಡಿಮೆಯಾಗದೆ ಇರುವ, ಎನ್ನುವ ಅರ್ಥವನ್ನು ಸಹ ನೀಡುತ್ತವೆ.
ತೃತೀಯಾ ಅಂದರೆ “ಮೂರುನೇಯದು” ಎಂದರ್ಥ ನೀಡುತ್ತದೆ. ಇದು ವಸಂತ ತಿಂಗಳ ‘ಮೂರನೇ ಚಂದ್ರನ ದಿನ’ ಎಂದು ಹೆಸರಿಸಲಾಗಿದೆ. ಈ ದಿನದಂದು ಜನರು ಯಾವುದೇ ಪಂಚಾಂಗನೋಡುವುದಿಲ್ಲ ಏಕೆಂದರೇ ಈ ದಿನ ಅತ್ಯಂತ ಶ್ರೇಷ್ಠವಾಗಿದೆ.

ಈ ದಿನದಂದು ಜನರು ಹೊಸ ಕೆಲಸಗಳಿಗೆ ಕೈಹಾಕುತ್ತಾರೆ. ವಿವಾಹ ಮಾಡುವುದು, ಚಿನ್ನ, ಆಸ್ತಿಗಳ ಖರೀದಿ, ಹಣ ಹೂಡಿಕೆ ಮಾಡುವುದು, ಹೀಗೆ ಅನೇಕ ಶುಭಕಾರ್ಯಗಳಿಗೆ ನಾಂದಿಹಾಡುತ್ತಾರೆ. ಹಿಂದೂ ಹಾಗೂ ಜೈನರುಗಳು ಈ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ವಿವಾಹಿತ ಮಹಿಳೆಯರು ತಮ್ಮ ಪತಿಯ ಯೋಗಕ್ಷೇಮಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಅಕ್ಷಯ ತೃತೀಯ ಹಬ್ಬವು ಸೋಮವಾರದಂದು ರೋಹಿಣಿ ನಕ್ಷತ್ರ ಬಂದರೆ ಇದು ಮತ್ತಷ್ಟು ಮಂಗಳಕರವಾದ ದಿನವೆಂದು ನಂಬಲಾಗಿದೆ. ಈ ದಿನದಂದು ಉಪವಾಸ, ದಾನ, ಹೋಮ ಹವನಗಳು, ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.

ಹಿಂದೂ ಧರ್ಮದಲ್ಲಿ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಹುಟ್ಟಿದ ದಿನವಾಗಿ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಇಷ್ಟೆಲ್ಲ ವಿಶೇಷತೆ ಇರುವ ಅಕ್ಷಯ ತೃತೀಯ ಹಬ್ಬದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದಲ್ಲಿ ಆರಾಧ್ಯದೇವರಾದ ಕುಲಂಕಾರೇಶ್ವರ ಹಾಗೂ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಜರಗುತ್ತದೆ. ಅಕ್ಷಯ ತೃತೀಯದ ಹಿಂದಿನ ದಿನದಂದು ಜಾತ್ರಾ ಉತ್ಸವ ಪ್ರಾರಂಭವಾಗಿ ಸುಮಾರು ಐದು ದಿನಗಳವರೆಗೆ ಅಂದರೆ ಅಕ್ಷಯ ತೃತೀಯದ ಬಸವ ಜಯಂತಿಯ ದಿನದಂದು ಅತಿ ವಿಜ್ರಂಭಣೆಯಿಂದ ನಡೆಯುತ್ತದೆ.
ಈ ಗ್ರಾಮದ ಆರಾಧ್ಯ ದೇವರಾದ ಕುಲಂಕಾರೇಶ್ವರ ಇತಿಹಾಸ ಇಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಐತಿಹಾಸಿಕ ಗ್ರಂಥಗಳಲ್ಲಿ ದಾಖಲೆಯಿಲ್ಲ. ದೇಶದಲ್ಲಿಯೇ ಮತ್ತೊಂದು ಬೇರೆ ಯಾವುದೇ ಅಥರ್ಗಾ ಎನ್ನುವ ಊರಿಲ್ಲ ಹಾಗೂ ಕುಲಂಕಾರೇಶ್ವರ ಎನ್ನುವ ದೇವರಿಲ್ಲ ಎಂದು ಹಿರಿಯರೂ ಕಿರಿಯರಿಗೆ ಶ್ರೀ ಕುಲಂಕಾರೇಶ್ವರ ದೇವರ ಪವಾಡ ಹಾಗೂ ಆಲಯದ ಸ್ಥಾಪನೆಯ ಕುರಿತಾದ ಇತಿಹಾಸವನ್ನು ತಿಳಿಸುತ್ತಾರೆ.

ಆದಿ ಕಾಲದಲ್ಲಿ ಬಂಗಾಲ ದೇಶದಿಂದ ಲೋಕಸಂಚಾರ ಮಾಡುತ್ತಾ ಬಂದ ಕುದುರೆ ಸವಾರನ ವೇಶದಲ್ಲಿದ್ದ ಶಿವನ ಸ್ವರೂಪಿ ಮಹಾನ ತಪಸ್ವಿಯೊಬ್ಬಾತ ದಟ್ಟವಾದ ಅರಣ್ಯ ಅದರ ಪಕ್ಕದಲ್ಲಿಯೇ ತುಂಬಿ ಸಮೃದ್ಧವಾಗಿ ಹರಿಯುತ್ತಿರುವ ಗಂಗೆ, ಈ ಗಂಗೆಯ ದಡದಲ್ಲಿ ಬೃಹತ್ ಆಕಾರವಾಗಿ ಬೆಳದು ನಿಂತ ರೇವಡಿಮರ, ಈ ಮರವನ್ನು ನೋಡಿದ ಮಹಾತಪಸ್ವೀಯಾದ ದೈವಿ ಪುರುಷ ಮರದ ಕೆಳಗೆ ದ್ಯಾನಕ್ಕೆ ಕುಳಿತರು. ಇವರು ಕುಳಿತ ಸ್ಥಳವೇ ಇಂದು ಪುಣ್ಯ ಸ್ಥಳವಾಗಿದೆ. ಅಂದಿನ ಕಾಲದಲ್ಲಿ ಆ ದಟ್ಟರಣ್ಯದಲ್ಲಿ ಸಮಾನ್ಯ ಜನರು ಹೋಗಲು ಹೆದರುತ್ತಿದ್ದರು. ಪರಿಸ್ಥಿತಿ ಹೀಗಿರುವಾಗ ಕಳ್ಳರ ಗುಂಪೊಂದು ಎಮ್ಮೆಗಳನ್ನು ಹೊಡೆದುಕೊಂಡು ದಟ್ಟಅರಣ್ಯದಲ್ಲಿ ಹೋಗುತ್ತಾರೆ. ಕಳ್ಳರ ಎದುರಿಗೆ ಶಿವನ ಸ್ಪರೂಪಿಯ ಜಟಾಧಾರಿ ದ್ಯಾನಕ್ಕೆ ಕುಳಿತ್ತಿದ್ದರು. ಕಳ್ಳರನ್ನು ಊರಿನ ಜನರು ಹಿಂಬಾಲಿಸುತ್ತಿರುವುದು ತಿಳಿಯಿತು. ಕಳ್ಳರು ಶಿವ ಸ್ವರೂಪಿಯಾದ ತಪಸ್ವಿಯ ಎದುರು ತಮ್ಮನ್ನು ಈ ಸಂಕಷ್ಟದಿಂದ ರಕ್ಷಿಸು ಎಂದು ಕೇಳುತ್ತಾರೆ ಕರುಣಾಮಯಿಯಾದ ಕುಲಂಕಾರೇಶ್ವರರು ಅವರನ್ನು ರಕ್ಷಿಸಿದರು.

ಜ್ಞಾನದ ಅರಿವು ನೀಡಿದರು. ಊರಿನ ಜನರು ಬರುವಷ್ಟರಲ್ಲಿಯೆ ತಮ್ಮ ದಿವ್ಯ ಶಕ್ತಿಯಿಂದ ಪಕ್ಕದಲ್ಲಿಯೇ ಇದ್ದ ಭಸ್ಮವನ್ನು ತೆಗೆದುಕೊಂಡು ಕಳ್ಳರು ತಂದಿದ್ದ ಎಮ್ಮೆಗಳ ಮೇಲೆ ಹಚ್ಚುತ್ತಾರೆ ಕರಿ ಎಮ್ಮೆಗಳನ್ನು ಬಿಳಿ ಎಮ್ಮೆಗಳನ್ನಾಗಿಸಿ ಬದಲಾಯಿಸುತ್ತಾರೆ ಇದನ್ನು ನೋಡಿದ ಕಳ್ಳರು ಆಶ್ಚರ್ಯದಿಂದ ಅಲ್ಲೇ ಅಡಗಿ ಕುಳಿತ್ತುಕೊಳ್ಳುತ್ತಾರೆ. ಅರಣ್ಯದಲ್ಲಿ ಬಂದ ಊರಿನ ಜನರು ಈ ಎಮ್ಮೆಗಳು ತಮ್ಮದಲ್ಲೆಂದು ಹೇಳಿ ಹೋಗುತ್ತಾರೆ. ನಂತರ ಅಡಗಿ ಕುಳಿತ ಕಳ್ಳರು ಹೊರಬಂದು ತಮ್ಮ ತಪ್ಪನ್ನು ಅರಿತು ಶಿವ ಸ್ವರೂಪಿಯಾದ ತಪಸ್ವಿಯ ಪಾದಗಳಿಗೆ ಶರಣಾಗಿ ನಮ್ಮ ತಪ್ಪುಗಳನ್ನು ಕ್ಷಮಿಸು ಎಂದು ಕೇಳುತ್ತಾರೆ. ಕುಲಂಕಾರೇಶ್ವರರು ಕ್ಷಮಿಸಿ ಜ್ಞಾನದ ಬೆಳಕನ್ನು ಬೆಳಗಿ ಆಶೀರ್ವಾದ ಮಾಡುತ್ತಾರೆ. ಈ ಸ್ಥಳದಲ್ಲಿ ಜ್ಞಾನದ ಬೆಳಕಿನಿಂದ ಕೆಡಿನ ಕತ್ತಲೆ ಇಲ್ಲ. ಮುಂದೆ ಕಾಲ ಕಳೆದಂತೆ ಈ ಸ್ಥಳದಲ್ಲಿ ಆಲಯವನ್ನು ನಿರ್ಮಿಸಿ ವರ್ಷಕ್ಕೊಮ್ಮೆ ಬರುವ ಅಕ್ಷಯ ತೃತೀಯದಂದು ಜಾತ್ರೆ ಮಾಡುತ್ತಾರೆ.
ನಂಬಿದವರನ್ನು ಎಂದಿಗೂ ಕೈ ಬಿಡಲಾರನು, ನಿಂದನೆ ಮಾಡಿದವರ ಬಿಟ್ಟಪ್ಪನಲ್ಲ ಎಂಬ ಮಾತು ಈಗಲೂ ಭಕ್ತರಲ್ಲಿ ಮನೆಮಾತಾಗಿದೆ. ಅಂದಿನ ಕಾಲದಲ್ಲಿ ರೋಗ ರುಜಿನಗಳ ಹಾವಳಿ ಹೆಚ್ಚಾಗಿತ್ತು. ಆಗ ಅಥರ್ಗಾ ಊರಿನ ಮಹಿಳೆಯೊಬ್ಬಳಿಗೆ ಮಾಹಾರೋಗ ಬಂದಿತ್ತು.

ರೋಗ ನಿವಾರಣೆಗೆ ತೋರಿಸದ ವೈದ್ಯರು ಉಳಿಯಲಿಲ್ಲ. ನಂತರ ಆ ಮಹಿಳೆ ಯಾರಿಗೂ ಕಾಣದ ರೀತಿಯಲ್ಲಿ ಕುಲಂಕಾರೇಶ್ವರ ದೇವಾಲಯಕ್ಕೆ ಬಂದು ಪ್ರತಿನಿತ್ಯವು ಆಲಯದ ಆವರಣವನ್ನು ತನ್ನ ಸೀರೆಯ ಸೆರಗಿನಿಂದ ಕಸವನ್ನು ಗುಡಿಸುತ್ತಿದ್ದಳು. ಆಗ ಭಕ್ತೆಯ ಭಕ್ತಿಗೆ ಮೆಚ್ಚಿದ ಕುಲಂಕಾರೇಶ್ವರ ಅವಳ ಮಹಾರೋಗವನ್ನು ನಿವಾರಿಸುತ್ತಾನೆ. ಈ ರೀತಿಯಲ್ಲಿ ಕುಲಂಕಾರೇಶ್ವರ ದೇವರ ಪವಾಡಗಳು ಅನಂತವಾಗಿ ನಡೆದಿವೆ ಆದರೂ ಸಹ ಈ ಆಲಯದ ಬಗ್ಗೆ ಯಾವುದೇ ಗ್ರಂಥಗಳಲ್ಲಿ ಉಲ್ಲೇಖಗಳಿಲ್ಲ.ಅಕ್ಷಯ ತೃತೀಯದ ಮೊದಲ ದಿನದಂದು ವೀರಭದ್ರೇಶ್ವರ ಆಲಯದಲ್ಲಿ ಕಾಶಿಕಟ್ಟಿಸುತ್ತಾರೆ. ಕಾಶಿ ಕಟ್ಟಿದ ದಿನದಿಂದ ಹಿಡಿದು ಅಕ್ಷಯ ತೃತೀಯದ ಬಸವಜಯಂತಿಯ ವರೆಗೆ ಊರಿನ ಜನರು ತಮ್ಮ ಮನೆಗಳಲ್ಲಿ ಜ್ಯೋತಿ ಬೆಳಗಿಸುವುದು, ಉಪವಾಸ ಮಾಡುವುದು. ಊರುಳುಸೇವೆ ಮಾಡುವುದು ಹೀಗೆ ಅನೇಕ ಸೇವೆಗಳನ್ನು ಮಾಡುತ್ತಾರೆ.

ಜಾತ್ರಾ ಉತ್ಸವ ಹಿಂದಿನ ದಿನ ದಾಸೋಹ ನಡೆಸುತ್ತಾರೆ. ಗ್ರಾಮದ ಜನರು ಹಾಗೂ ಪುರುವಂತರು ಸೇರಿ ಅಗ್ನಿ ಪುಟುವು ಮಾಡುತ್ತಾರೆ. ಜಾತ್ರೆಯ ದಿನದಂದು ಕುಲಂಕಾರೇಶ್ವರ ಪಲ್ಲಕ್ಕಿಯ ಎಡಬಲವಾಗಿ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಬೀರಲಿಂಗೇಶ್ವರರು ಜೊತೆಯಾಗಿ ಆಗಮಿಸುತ್ತಾರೆ. ಊರಿನ ಗೌಡರ ಮನೆಯಿಂದ ಮೆರವಣಿಗೆ ಜರುಗಿ ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ದೇವಸ್ಥಾನ ತಲುಪುತ್ತದೆ. ಈ ಜಾತ್ರೆಯ ಉತ್ಸವದಲ್ಲಿ ಊರಿನ ಹಾಗೂ ಪರೂರಿನಿಂದ ಪುರುವಂತರು ಬಂದಿರುತ್ತಾರೆ. ಸುಡುವ ಬಿಸಿಲಲ್ಲಿ ದೇವರು ಅಗ್ನಿ ಪ್ರವೇಶ ಮಾಡಿದ ನಂತರ ಮಂಗಳಾರುತಿ ಆಗುತ್ತದೆ.

ದೇವರು ಅಗ್ನಿ ಪ್ರವೇಶ ಮಾಡಿದ ನಂತರ ಗ್ರಾಮದ ಭಕ್ತರು ಅಗ್ನಿಯನ್ನು ಪ್ರವೇಶ ಮಾಡುತ್ತಾರೆ. ನಂತರ ಕುಲಂಕಾರೇಶ್ವರ, ವೀರಭಧ್ರೇಶ್ವರ ಹಾಗೂ ಬೀರಲಿಂಗೇಶ್ವರ ಎಲ್ಲರೂ ತಮ್ಮ ಆಲಯಗಳಿಗೆ ಮರಳಿ ಮೂಲ ಸ್ಥಳದಲ್ಲಿ ಸ್ಥಾಪಿತರಾಗುತ್ತಾರೆ. ಅದೆ ದಿನ ಸಂಜೆ ಬಸವಜಯಂತಿ ಇರುವ ಕಾರಣದಿಂದಾಗಿ ಜಗಜ್ಯೋತಿ ಬಸವೇಶ್ವರ ಅವರು ಇರುವ ಭಾವಚಿತ್ರವನ್ನು ಗಾಡಿಯಲ್ಲಿ ಊರಿನ ಪ್ರಮುಖ ಭೀದಿಗಳಲ್ಲಿ ಮೆರವಣಿ ಮಾಡಲಾಗುತ್ತದೆ. ಸಂಜೆ 7 ರಿಂದ ಚಿತ್ರ-ವಿಚಿತ್ರವಾಗಿ ಮದ್ದು ಸುಡಲಾಗುತ್ತದೆ. ರಾತ್ರಿ ನಾಟಕಗಳನ್ನು ಏರ್ಪಡಿಸಲಾಗುತ್ತದೆ.

ಮಕ್ಕಳಿಗೆ ಇಷ್ಟವಾಗುವ ಆಟಿಕೆ ಸಾಮಾನುಗಳ ಅಂಗಡಿ, ಬಳೆ ಅಂಗಡಿಗಳು, ಬಂದಿರುತ್ತವೆ. ಈ ದಾಸೋಹ ಸತತವಾಗಿ ನಾಲ್ಕುದಿನಗಳ ಕಾಲ ನಡೆಸುತ್ತಾರೆ. ಈ ದಾಸೋಹದಲ್ಲಿ ಹಾಲುಗ್ಗಿ, ಸಜ್ಜಿರೋಟ್ಟಿ, ಅನ್ನ, ಸಾರು, ಶೇಂಗಾದ ಹೋಳಿಗೆ ಜೊಳದ ರೋಟ್ಟಿ, ಮೊಸರು, ತುಪ್ಪ, ಹೀಗೆ ಅನೇಕ ಖಾಧ್ಯಗಳನ್ನು ಮಾಡಿರುತ್ತಾರೆ. ಜಾತ್ರೆಯ ಮರುದಿನ ಮಧ್ಯಾಹ್ನದಿಂದ ಜಗಜಟ್ಟಿಗಳ ಜಂಗಿಕುಸ್ತಿ, ಬಾರ ಎತ್ತುವುದು ಶುರುವಾಗಿ ಸಂಜೆ 6ಗಂಟೆಗೆ ಮುಗಿಯುತ್ತದೆ. ರಾತ್ರಿ ವೇಳೆಯಲ್ಲಿ ನಾಟಕ ಇರುತ್ತವೆ.

ಈ ಜಾತ್ರಗೆ ಆಲಯದ ಟ್ರಸ್ಟನ ಸದಸ್ಯರುಗಳು ಒಂದು ತಿಂಗಳ ಮುಂಚಿತವಾಗಿಯೆ ಧೇಣಿಗೆಯನ್ನು ಸಂಗ್ರಹಿಸಲು ಪ್ರಾರಂಭಿಸುತ್ತಾರೆ. ಈ ಜಾತ್ರಾ ಉತ್ಸವದಲ್ಲಿ ಸುಮಾರು ಒಂದು ಲಕ್ಷ ಜನರು ಸೇರುತ್ತಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುವ ಜಾತ್ರೆಗೆ ಬರುವ ಜನರಿಗೆ ಉಳಿದುಕೊಳ್ಳಲ್ಲು ವ್ಯವಸ್ಥಿವಾದ ಸ್ಥಳ ಹಾಗೂ ಸೌಚಾಲಯದ ಕೊರತೆ ಇದೆ. ದೇವಸ್ಥಾನದ ಟ್ರಸ್ಟ್ ಸದಸ್ಯರು ಹಾಗೂ ಊರಿನ ಹಿರಿಯರು ಸೇರಿ ಮೂಲಭೂತ ಸೌಕರ್ಯಗಳನ್ನು ಪುರೈಸಬೇಕು ಎಂದು ಗ್ರಾಮಸ್ಥರು ಹಾಗೂ ಭಕ್ತರು ಬೇಡಿಕೆ ಇಡುತ್ತಿದ್ದಾರೆ.

  • ನೆನೆದವರ ಹೃದಯದಲಿ ಹೂವಾಗಿ ಅರಳಿದವ ಶ್ರೀ ಕುಲಂಕಾರೇಶ್ವರ ದೇವರು ಬೂದಿ ಮುಚ್ಚಿದ ಕೆಂಡದಂತೆ. ಶರಣಾಗಿ ಬಂದವರಿಗೆ ಬೇಡಿದ ವರಗಳನ್ನು ಕೊಡುವ ಕರುಣಾಮಯಿ. ಈ ನನ್ನ ದೇವರ ಕುರಿತು ಎಷ್ಟು ಹೇಳಿದರು ಸಾಲದು. ಅಥರ್ಗಾ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಒಬ್ಬರಂತು ಕುಲಂಕಾರ ಹೆಸರಿನವರು ಇದ್ದಾರೆ. ನಾನು ಹಾಗೂ ನಮ್ಮ ನಮ್ಮಯಲ್ಲಿರುವ ಎಲ್ಲ ಸದಸ್ಯರು ಪ್ರತಿ ರವಿವಾರದಂದು ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯುತ್ತೆವೆ. ಹಾಗೂ ಅಂದು ಇಡೀ ದಿನ ಉಪವಾಸ ವ್ರತ ಮಾಡುತ್ತೆವೆ.
    ದರೇಪ್ಪ ಸಿಂದಗಿ ಅಥರ್ಗಾದ ಗ್ರಾಮದ ಭಕ್ತರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

Published

on

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.

ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮತ್ತಿನ ಕುಣಿಕೆ

Published

on

  • ಗುರು ಸುಳ್ಯ

ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ

ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ

ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…

ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ

ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ

ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)

ಕವಿ : ಗುರು ಸುಳ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರಡ್‍ಸೆಟ್ ಸಂಸ್ಥೆ ವತಿಯಿಂದ ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದೆ, ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದೆ.

ತರಬೇತಿ ಏಪ್ರಿಲ್ 17 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ತರಬೇತಿ ವಸತಿಯುತವಾಗಿದ್ದು, ಉಚಿತ ಊಟ, ವಸತಿ ನೀಡಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9740982585 ಗೆ ಸಂಪರ್ಕಿಸಬಹುದು ಎಂದು ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ಪ್ರವಾಸೋದ್ಯಮ ಇಲಾಖೆ | ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿಗೆ ಸೇರಿದ 292 ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ...

ದಿನದ ಸುದ್ದಿ1 day ago

ಜಯಲಕ್ಷ್ಮಿ ಕಾರಂತ್‌ ಅವರಿಗೆ ‘ಯಕ್ಷ ಧ್ರುವ’ ರಾಜ್ಯ ಪ್ರಶಸ್ತಿ ಪ್ರದಾನ

ಸುದ್ದಿದಿನ,ದಾವಣಗೆರೆ:ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆಯ ಅಧ್ಯಕ್ಷರೂ, ಹಿರಿಯ ಸಾಹಿತಿ, ಯಕ್ಷಗಾನ ವಿದ್ವಾಂಸರು, ತಾಳಮದ್ದಳೆಯ ಅರ್ಥಧಾರಿಗಳಾದ ಜಯಲಕ್ಷ್ಮಿ ಕಾರಂತ್‌ರವರಿಗೆ ಇತ್ತೀಚಿಗೆ ದಕ್ಷಿಣ ಕನ್ನಡ...

ಅಂಕಣ3 days ago

ಕವಿತೆ | ಅಲರ್ಟ್..!

ಸುನೀತ ಕುಶಾಲನಗರ ನದಿಯ ನೇವರಿಸಿದ ಗಾಳಿ ಮುದಗೊಳಿಸಿ ಸರಿಯಿತು. ಜಡಿ ಮಳೆ ಧೋ ಎಂದು ಸಕಾಲಿಕವಾಗಿ ಸುರಿದು ಹೊಸ ಹುಟ್ಟು. ಆದರೇನು? ಹಿಂಗಾರು, ಮುಂಗಾರು ಆಗೊಮ್ಮೆ ಈಗೊಮ್ಮೆ...

ದಿನದ ಸುದ್ದಿ6 days ago

ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ...

ದಿನದ ಸುದ್ದಿ6 days ago

ದಾವಣಗೆರೆ | ನಾಳೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ, 81 ಕೇಂದ್ರಗಳಲ್ಲಿ 22579 ವಿದ್ಯಾರ್ಥಿಗಳು

ಸುದ್ದಿದಿನ,ದಾವಣಗೆರೆ:2024-25 ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯು ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಜರುಗಲಿವೆ. ಹೊಸದಾಗಿ ಒಟ್ಟು 21704 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಇದರಲ್ಲಿ 10587...

ಅಂಕಣ6 days ago

ಸಿದ್ಧಾಂತ ಮತ್ತು ಪತ್ರಿಕೋದ್ಯಮ

ಹರ್ಷಕುಮಾರ್‌ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್ ಇದು ಸುಮಾರು 2002-03ರ ಸಂದರ್ಭ. ಶಿವಮೊಗ್ಗದಲ್ಲಿ ನಾವು ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಕಾಲ. ಒಬ್ಬ ಪತ್ರಕರ್ತ ಮಿತ್ರರೊಂದಿಗೆ ಹೀಗೇ ಚರ್ಚೆ ನಡೆಯುತ್ತಿತ್ತು....

ದಿನದ ಸುದ್ದಿ6 days ago

ಅಮಾನವೀಯ ಕೃತ್ಯ | ಹೆಣ್ಣು ಮಗು ಮಾರಾಟ ಮಾಡಿದ ಪೋಷಕರು

ಸುದ್ದಿದಿನಡೆಸ್ಕ್:ರಾಜ್ಯದಲ್ಲಿ ಮಕ್ಕಳ ಮಾರಾಟ ಜಾಲ ಎಗ್ಗಿಲ್ಲದೆ ನಡೆಯುತ್ತಿದೆ. ಇಂತಹ ಸಂಧರ್ಭದಲ್ಲಿ ಮೈಸೂರಿನಲ್ಲೊಂದು ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಅಮಾನವೀಯ ಕೃತ್ಯ ನಡೆದಿದೆ. 14ಸಾವಿರ ರೂ ಗೆ ಹೆಣ್ಣು...

ದಿನದ ಸುದ್ದಿ6 days ago

ಕ್ಯೂ-ಸ್ಪೈಡರ್ಸ್ ವತಿಯಿಂದ ಉಚಿತ ಉದ್ಯೋಗದರಿತ ಕೌಶಲ್ಯ ತರಬೇತಿ ಆಯ್ಕೆ ಪ್ರಕ್ರಿಯೆ

(ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಅಡಿಯಲ್ಲಿ ಆಯೋಜನೆ) ಸುದ್ದಿದಿನ,ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ನೇತೃತ್ವದಲ್ಲಿ ಖ್ಯಾತ ಐಟಿ ತರಬೇತಿ...

ದಿನದ ಸುದ್ದಿ7 days ago

ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಆರಂಭಿಸಿ : ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ

ಸುದ್ದಿದಿನ,ದಾವಣಗೆರೆ: ಕ್ಷೇತ್ರದ ವ್ಯಾಪ್ತಿಯ ಕಲ್ಪನಹಳ್ಳಿ ಬಳಿ ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಸ್ಥಾಪಿಸಲು ಭೂಮಿ ಖರೀದಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲೇ ಅನುದಾನ...

ದಿನದ ಸುದ್ದಿ7 days ago

ಕೆರೆಬಿಳಚಿ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ; 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಸುದ್ದಿದಿನ,ಚನ್ನಗಿರಿ:ತಾಲೂಕಿನ ಕೆರೆಬಿಳಚಿಯಲ್ಲಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ ,ಕ್ರಿಶ್ಚಿಯನ್, ಜೈನ್ ,ಬೌದ್ಧ ಸಿಖ್...

Trending