ದಿನದ ಸುದ್ದಿ
ಹೊಸಕೆರೆಹಳ್ಳಿ ಕೆರೆಗೆ ವಿಷಪಾಷಾಣ : ಕೆರೆ ಉಳಿಸಲು ಬಂದರು ಹಸಿರು ಪಡ್ಡೆಗಳು
ನಮ್ಮಹೊಸಕೆರೆಹಳ್ಳಿ ಕೆರೆ ಉಳಿಸಿ ಅಭಿಯಾನ
ಸುದ್ದಿದಿನ ವಿಶೇಷ : ಕೆಂಪೇಗೌಡರ ಆಳ್ವಿಕೆಯಲ್ಲಿ ನಿರ್ಮಾಣವಾದ ಬೆಂಗಳೂರಿನ ಹೊಸಕೆರೆಹಳ್ಳಿ ಗ್ರಾಮದ ಮೂಕಾಂಬಿಕಾ ನಗರದಲ್ಲಿರುವ ಕೆರೆ ಹೊಸಕೆರೆಹಳ್ಳಿ ಕೆರೆ ಎಂದೇ ಹೆಸರು ವಾಸಿ. ಆದರೀಗ ಈ ಕೆರೆ ಒಡಲಿಗೆ ಕೊಳಚೆ, ಕಸದ ವಿಷವಸ್ತುಗಳು ಸೇರುತ್ತಿವೆ.
ಸ್ವಚ್ಛ, ಸುಂದರ ಪರಿಸರದಲ್ಲಿರುವ ಈ ಕೆರೆ ಈಗ ಅಂದಾಜು 44 ಎಕರೆ ಪ್ರದೇಶವಿದೆ. ಪಶ್ಚಿಮದಲ್ಲಿ ನೈಸ್ ರಸ್ತೆ, ಪೂರ್ವದಲ್ಲಿ ವಸತಿ ಪ್ರದೇಶ ಹಾಗೂ ಉತ್ತರದಲ್ಲಿ ಕೆರೆಕೋಡಿ ಮುಖ್ಯರಸ್ತೆ ಮತ್ತು ದಕ್ಷಿಣ ದಿಕ್ಕಿನಲ್ಲಿ ಅರಣ್ಯ ಪ್ರದೇಶ ಜತೆಗೆ ಹನುಮಗಿರಿ ಗುಡ್ಡವಿದೆ. ಆದರೀಗ, ಈ ಸುಂದರ ಪ್ರವಾಸಿ ತಾಣದಂತಿರುವ ಕೆರೆಯ ಮೂಲಸ್ವರೂಪಕ್ಕೆ ಧಕ್ಕೆ ಉಂಟಾಗುತ್ತಿದೆ.
ಕೆರೆ ಅತಿಕ್ರಮಣ
ಹೊಸಕೆರೆಹಳ್ಳಿ ಕೆರೆ ಮೊದಲಿಗೆ 59.26 ಎಕರೆ ಪ್ರದೇಶ ಹೊಂದಿದ್ದ ಕೆರೆಯಾಗಿತ್ತೆಂದು ಇಂಡಿಯನ್ ಎಕ್ಸ್‌ಪ್ರೆಸ್ ಮೇ 1, 2017ರಂದು ವರದಿ ಪ್ರಕಟಿಸಿತ್ತು. ಆದರೀಗ ಇದು ಹಲವಾರು ಕಾರಣಗಳಿಗಾಗಿ ಅತಿಜ್ರಮಣಗೊಂಡು 44 ಎಕರೆ ಪ್ರದೇಶ ಮಾತ್ರ ಉಳಿದಿದೆ.
ಈ ಕೆರೆಗೆ ಹೊಂದಿಕೊಂಡು ಕಿರುಅರಣ್ಯ ಪ್ರದೇಶ, ಇದರ ಅಂಗಳದಲ್ಲಿ ಹನುಮಗಿರಿ ಮತ್ತು ಯೇಸುಬೆಟ್ಟ ಎಂಬ ಎರಡು ಗುಡ್ಡಗಳಿದ್ದವು. ಪಕ್ಕದಲ್ಲಿದ್ದ ವಸತಿ ಪ್ರದೇಶದ ಕೊಳಚೆ ನೀರು ಹಾಗೂ ಹೊಸಕೆರೆಹಳ್ಳಿ ಮತ್ತಿತರ ಗ್ರಾಮಗಳ ಜನರು ಕಸದ ತಂದು ಸುರಿಯುತ್ತಿದ್ದಾರೆ. ಪಶ್ಚಿಮ ದಿಕ್ಕಿನಲ್ಲಿ ನೈಸ್ ರಸ್ತೆ ಕೆರೆಯನ್ನು ಇಬ್ಭಾಗಿಸಿದರೆ, ಇದರ ಹತ್ತಿರ ವಸತಿ ಪ್ರದೇಶ ಅಭಿವೃದ್ಧಿಗೊಳ್ಳುತ್ತಿದೆ. ಕೆರೆಯ ಸೌಂದರ್ಯ ಹೆಚ್ಚಿರುವ, ಕಣ್ಣುಗಳಿಗೆ ತಂಪು ನೀಡುವ ಹನುಮಗಿರಿ ಪ್ರದೇಶಕ್ಕೆ ಟಾಟಾ ಕಂಪನಿ ಟಾಟಾ ಹೇಳಿಸಿಬಿಟ್ಟಿದೆ. “ಹಿಲ್ ರೆಸಿಡೆಂಟ್ಸ್” ಎಂದು ಹೆಮ್ಮೆಯಿಂದ ಹೊಗಳಿಕೊಂಡಿದೆ.
ಕೆರೆ ಪರಿಸರ
ಸಾಮಾನ್ಯವಾಗಿ ಬೆಂಗಳೂರಿನ ಕೆರೆಗಳು ಪಾದಚಾರಿ ಪಥ (ವಾಕ್ ವೇ), ಸುತ್ತಲು ತಂತಿಬೇಲಿ ಹಾಗೂ ರಸ್ತೆ ಇರುತ್ತದೆ. ಆದರೆ, ಹೊಸಕೆರೆಹಳ್ಳಿ ಕಿರು ಪರಿಸರ ವ್ಯವಸ್ಥೆಯೇ ಇದೆ. ಇಲ್ಲಿ ಮ್ಯಾಂಗ್ರೋವ್ ಮರಗಳು, ಕಾಡು ನಾಯಿ, ಹಾವು, ಗ್ರೇಟ್ ಕಾರ್ಮೊರೆಂಟ್, ಹೆರನ್, ಶಿಕ್ರಾ, ವಿವಿಧ ಜಾತಿಯ ಚಿಟ್ಟೆಗಳು ಸೇರಿದಂತೆ ವೈವಿಧ್ಯಮಯ ಪ್ರಾಣಿ, ಪಕ್ಷಿ, ಸಸ್ಯ ಪ್ರಭೇದಗಳನ್ನು ಹೊಂದಿದೆ. ಕೆರೆಯ ಪಾತ್ರದಲ್ಲಿ ಔಷಧಿಯ ಸಸ್ಯಗಳು ಬೆಳೆದಿವೆ.
ಇಪ್ಪತ್ತು ವರ್ಷಗಳ ಹಿಂದೆ ಅನೇಕ ಗ್ರಾಮಗಳ ಜನರಿಗೆ ಈ ಕೆರೆಯ ನೀರೇ ಜೀವಜಲವಾಗಿತ್ತು. ಆದರೆ, ಇದೀಗ ಈ ನೀರನ್ನು ನೋಡುತ್ತಿದ್ದಂತೆ ದೂರ ಓಡುವ ದುಃಸ್ಥಿತಿ ಎದುರಾಗಿದೆ. ಶೀಘ್ರ ಕೆರೆ ಮಾಲಿನ್ಯ ಮುಕ್ತವಾದರೆ ಜನರಿಗೆ ಅನುಕೂಲವಾಗುತ್ತದೆ ಎಂಬುದು ಪರಿಸರ ಪ್ರೇಮಿಗಳ ಆಶಯ.
ಕೆರೆ ಉಳಿಸಲು ಬಂದರು ಹಸಿರು ಪಡ್ಡೆಗಳು
ಬೆಂಗಳೂರಿನ ಕೆರೆಗಳನ್ನು ಹೇಳ ಹೆಸರಿಲ್ಲದಂತೆ ಮಾಡಿದ ಸರಕಾರಗಳು ಈಗ ತಪ್ಪನ್ನು ಒಬ್ಬರ ಮೇಲೊಬ್ಬರು ಹಾಕುತ್ತಿವೆ. ಕೆರೆ ಏಕೆ ಹಾಳಾಗುತ್ತಿದೆ ಎಂದು ಜನರಿಗೆ ಜಾಗೃತಿ ಬರುವಷ್ಟರಲ್ಲಿ ಆ ಕೆರೆ ಒತ್ತುವರೆ ಮಾಡಿ ಅಪಾರ್ಟ್‌ಮೆಂಟ್ ಕಟ್ಟಿರುವ ಉದಾಹರಣೆಗಳೂ ಇವೆ.
ಪರಿಸ್ಥಿತಿ ಕೈ ಮೀರುವ ಮುನ್ನವೇ ಕೆರೆ ಉಳಿಸಿಕೊಳ್ಳುವ ಸಲುವಾಗಿ ಬೆಂಗಳೂರು ಗ್ರೀನ್ ರೋಡೀಸ್ ಎಂಬ ಸಂಘಟನೆ ಹುಟ್ಟಿಕೊಂಡಿದೆ. ವಿಷಯದಲ್ಲಿ ತಪ್ಪು ನಿರ್ಧಾರಗಳ್ಳುವ ಅಧಿಕಾರಿಗಳಿಗೆ, ಕೆರೆಯೊಳಗೆ ಕಸ ಎಸೆಯುವ ಜನರನ್ನು ಧೈರ್ಯವಾಗಿ ಪ್ರಶ್ನಿಸುವವರು ಇವರು.
ಹಸಿರು ಕೈಗಾರಿಕಾ ಒಕ್ಕೂಟಗಳ (ಗ್ರೀನ್ ಇಂಡಸ್ಟ್ರೀಸ್) ನಿರ್ದೇಶಕ ಸುನೀಲ್ ಸೂದ್ ಅವರು ಕಳೆದ ಏಪ್ರಿಲ್ 28ಕ್ಕೆ ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಗ್ರೀನ್ ರೌಡೀಸ್ ಎಂಬ ಸಂಘಟನೆಯನ್ನು ಹುಟ್ಟುಹಾಕಿದರು.
ಕೆರೆ ಸಂರಕ್ಷಣೆ, ಪರಿಸರ ಮಾಲಿನ್ಯ ನಿಯಂತ್ರ ಕುರಿತು ಜಾಗೃತಿ, ಸಸಿ ನೆಡುವುದು, ಕೆರೆಗಳಲ್ಲಿರುವ ಹೂಳು ತೆಗೆಯುವುದು, ಪ್ಲಾಸ್ಟಿಕ್ ಬಳಕೆಯಿಂದಾಗುವ ಪ್ರತಿಕೂಲ ಪರಿಣಾಮಗಳ ಕುರಿತು ಅಭಿಯಾನ ಹಮ್ಮಿಕೊಳ್ಳುವುದು ಮೊದಲಾದವು ಗ್ರೀನ್ ರೋಡೀಸ್ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಪ್ರಾರಂಭವಾದ ಒಂದೇ ತಿಂಗಳಲ್ಲಿ 200ಕ್ಕೂ ಹೆಚ್ಚು ಸ್ವಯಂ ಸೇವಕರು ಸಂಘಟನೆಯನ್ನು ಸೇರಿದ್ದಾರೆ. ವಿಶೇಷವೆಂದರೆ ಏಳರಿಂದ 70ರ ವಯಸ್ಸಿನ ಸ್ವಯಂ ಸೇವಕರು ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಎಲ್ಲ ವರ್ಗಗಳ ಸ್ವಯಂ ಸೇವಕರು
ಗ್ರೀನ್ ರೋಡೀಸ್ ಸಂಘಟನೆಯಲ್ಲಿ ಎಲ್ಲ ವರ್ಗದವರಿಗೂ ಅವಕಾಶ ನೀಡುವ ಉದ್ದೇಶದಿಂದ ಐಟಿ, ಬಿಟಿ, ಸರಕಾರಿ ಅಧಿಕಾರಿಗಳು, ಪುಟ್ಟ ಮಕ್ಕಳು, ಹಿರಿಯರು, ಗಣ್ಯರು, ರಾಜಕಾರಣಿಗಳು ಮೊದಲಾದವರನ್ನು ಸಂಘಟನೆಯ ಸದಸ್ಯರನ್ನಾಗಿ ಮಾಡಲಾಗಿದೆ.
ಕಾರ‌್ಯಾಗಾರಗಳು
ಗ್ರೀನ್ ರೋಡೀಸ್ ಸಂಘಟನೆಯು ಪರಿಸರಕ್ಕೆ ಸಂಬಂಧಪಟ್ಟ ವಿಷಯಗಳ ಕುರಿತಂತೆ ಕಾರ‌್ಯಗಾರಗಳನ್ನು ಹಮ್ಮಿಕೊಳ್ಳುತ್ತದೆ. ಈ ಮೂಲಕ ಕಾರ‌್ಯಾಗಾರದಲ್ಲಿ ಪಾಲ್ಗೊಳ್ಳುವ ಜನರಿಗೆ ಜಾಗೃತಿ ಮೂಡಿಸಲು ಉದ್ದೇಶಿಸಿದೆ.
ಪ್ರತಿ ಭಾನುವಾರ ಸಭೆ
ಬೆಂಗಳೂರು ಗ್ರೀನ್ ರೋಡೀಸ್ ಅಥವಾ ಬಿಜಿಆರ್ ಸಂಘಟನೆಯು ಪ್ರತಿ ಭಾನುವಾರ ಒಂದು ಸಭೆಯನ್ನು ಹಮ್ಮಿಕೊಳ್ಳುತ್ತದೆ. ಭವಿಷ್ಯದಲ್ಲಿ ಹಮ್ಮಿಕೊಳ್ಳಬೇಕಿರುವ ಕಾರ‌್ಯಕ್ರಮಗಳು, ನಿರ್ಧಾರಗಳ ಕುರಿತು ಚರ್ಚಿಸಲಾಗುತ್ತದೆ. ಮೇ. 2ರಂದು ಲಾಲ್‌ಬಾಗ್‌ನಲ್ಲಿ ಬಿಜಿಆರ್‌ನ ಮೊದಲ ಸಭೆ ನಡೆಯಿತು. ಸಂಘದ ಸದಸ್ಯರು ಲಾಲ್‌ಬಾಗ್‌ಅನ್ನು ಸಂಪೂರ್ಣ ಸ್ವಚ್ಛಗೊಳಿಸಿದರು.
ಹೊಸಕೆರೆ ಹಳ್ಳಿ ಕೆರೆಗೆ ಭೇಟಿ
ಬೆಂಗಳೂರು ಗ್ರೀನ್ ರೋಡೀಸ್ ಸಂಘಟನೆಯು 2018 ಮೇ 2ರಂದು ಮೊದಲಬಾರಿಗೆ ಹೊಸಕೆರೆ ಹಳ್ಳಿ ಕೆರೆಗೆ ಭೇಟಿ ನೀಡಿತು. ಸಂಘದ ಸದಸ್ಯ ಪ್ರಶಾಂತ್ ಸೇಠ್ ಅವರು ಕೆರೆ ಮೇಲ್ಭಾಗದಿಂದ ಆರ್‌ಆರ್ ನಗರ ಸಂಪರ್ಕಿಸುವ ರಸ್ತೆಯ ಮೇಲೆ ಹಾದು ಬಂದಾಗ ಹೊಸಕೆರೆ ಹಳ್ಳಿ ಕೆರೆಯು ಯಾವ ಪರಿಸ್ಥಿತಿಯಲ್ಲಿದೆ ಎಂದು ಒಂದು ಅಂದಾಜು ಸಿಕ್ಕಿತು.
‘‘ಕೆರೆಯನ್ನು ಮೇಲ್ನೋಟದಿಂದಲೇ ಅಧ್ಯಯನ ಮಾಡಿದಾಗ ಕೆರೆ ಸ್ವಚ್ಛತಾ ಕಾರ‌್ಯವು ಅರ್ಧಕ್ಕೆ ನಿಂತಿರುವುದು ಗೊತ್ತಾಯಿತು. ಇಡೀ ಕೆರೆಯಲ್ಲಿ ನೀರಿರುವ ಪ್ರದೇಶ ಹೆಚ್ಚಾಗಿರುವುದೂ ಕೂಡ ಕಂಡುಬಂತು. ಹೊಸಕೆರೆ ಹಳ್ಳಿ ಕೆರೆಯನ್ನು ಉಳಿಸುವುದು ಬೆಂಗಳೂರನ್ನು ಉಳಿಸಲು ಇರುವ ಏಕೈಕ ಮಾರ್ಗ ಎಂದೂ ಅನ್ನಿಸಿತು. ಬೆಂಗಳೂರಿಗರು ಕುಡಿಯುವ ನೀರಿನ ತೊಂದರೆ ಎದುರಿಸಬೇಕಾಗುತ್ತದೆ ಎಂಬ ಭವಿಷ್ಯವಾಣಿ ನಿಜವಾಗುತ್ತದೆಯೇನೋ ಎಂಬ ಭಯವಿದೆ. ಈಗಾಗಲೇ ಕೆರೆಯ ಏರಿ ಜಾಗವನ್ನು ಹಲವು ಲೇಔಟ್‌ಗಳು ಒತ್ತರಿಸಿಕೊಂಡು ಬಂದಿವೆ. ಟಾಟಾ ಪ್ರೊಮೋಂಟ್ ಕಂಪನಿಯೂ ಸಹ ಕೆರೆ ಒತ್ತುವರಿ ಪ್ರದೇಶದಲ್ಲೇ ನೆಲೆ ನಿಂತಿದೆ. ಆದರೆ, ಈಗಾಗಲೇ ಒತ್ತುವರಿಯಾಗಿರುವ ಜಾಗವನ್ನು ಈಗ ಏನೂ ಮಾಡಲು ಸಾಧ್ಯವಿಲ್ಲ. ಆದರೆ, ಸದ್ಯ ಕೆರೆ ಎಂದು ಕಾಣುವ ಜಾಗವನ್ನಾದರೂ ಉಳಿಸಿಕೊಳ್ಳಬೇಕಿದೆ. ಇತ್ತೀಚೆಗೆ ಮತ್ತೊಮ್ಮೆ ಕೆರೆಗೆ ಭೇಟಿ ನೀಡಿದ್ದೆ. ಎಲ್ಲರೂ ಒಟ್ಟಾದರೆ ಕೆರೆಯನ್ನು ಸ್ವಚ್ಛಮಾಡಿ ಅದನ್ನು ಉಳಿಸಿಕೊಳ್ಳಬಹುದು,’’ ಎಂಬುದು ಪ್ರಶಾಂತ್ ಸೇಠ್ ಅವರ ಅಭಿಮತ.
ಕೆರೆ ಭೇಟಿಯ ಉದ್ದೇಶಗಳು ಏನೆಂದರೆ
1. ಕೆರೆ ಪರಿಸರದ ಮೇಲ್ನೋಟ ಅಧ್ಯಯನ
2. ಕೆರೆ ಶುಚಿಗೊಳಿಸುವುದು
3. ನಮಗೆ ತಿಳಿದಿರುವ ವಿಷಯವನ್ನು ಹಂಚಿಕೊಳ್ಳುವುದು
ಈ ಎಲ್ಲ ಉದ್ದೇಶಗಳನ್ನಿಟ್ಟುಕೊಂಡು ಹೊಸಕೆರೆ ಹಳ್ಳಿ ಕೆರೆ ಅಧ್ಯಯನ ಮಾಡಿದಾಗ ನಮಗೆ ಅಚ್ಚರಿ ಎನಿಸುವ ಹಲವಾರು ವಿಷಯಗಳು ತಿಳಿದುಬಂದವು. ಅಷ್ಟಕ್ಕೂ ಕೆರೆಯು ಅದಾಗಲೇ ಅದೋಗತಿ ತಲುಪಿತ್ತು. ಫೇಸ್‌ಬುಕ್‌ನಲ್ಲಿ #benglalurugreenrodies ಎಂಬ ಪುಟ ನೋಡಿದ ಪ್ರಶಾಂತ್ ಸೇಠ್ ಅವರು ಬೆಂಗಳೂರು ಗ್ರೀನ್ ರೋಡೀಸ್ ಸಂಸ್ಥೆಗೆ ಹಲವಾರು ವಿಷಯಗಳನ್ನು ತಿಳಿಸಿದರು. ಕೆಲವು ಸ್ಥಳೀಯರಿಂದ ಬಿಜಿಆರ್ ಸಂಘಟನೆಯು ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸಿತು.
ಬಿಜಿಆರ್ ಸಂಗ್ರಹಿಸಿದ ಮಾಹಿತಿಗಳು
1. ಹೊಸಕೆರೆ ಹಳ್ಳಿ ಕೆರೆಯು ಸಂಪೂರ್ಣ ಬತ್ತಿಹೋಗಿರುವುದು ಮೇಲ್ನೋಟದ ಅಧ್ಯಯನದಲ್ಲಿ ಕಂಡುಬಂತು. ಈ ಕೆರೆಯುನ್ನು ಸೀಳಿಕೊಂಡು ಹೋಗುವ ರಸ್ತೆಯ ಬಲ ಭಾಗವು ಸಂಪೂರ್ಣ ಬತ್ತಿಹೋಗಿದ್ದು, ಅಲ್ಲಿ ಪೊದೆಗಳು, ಮುಳ್ಳುಗಂಟಿಗಳು ಬೆಳೆದುಕೊಂಡಿದೆ. ಮತ್ತೊಂದು ಭಾಗದಲ್ಲಿ ಸ್ವಲ್ಪವೇ ನೀರಿದ್ದು, ಅದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು, ಬಾಟೆಲ್‌ಗಳು ಮೊದಲಾದ ತ್ಯಾಜ್ಯಗಳನ್ನು ಎಸೆಯಲಾಗಿದೆ.
2. ಕೆರೆಯಲ್ಲಿ ಅಪಾರ ಪ್ರಮಾಣದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಅದು ಸುತ್ತಮುತ್ತಲಿನವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಟಾಟಾ ಪ್ರೊಮೊಂಟ್ ಸಂಸ್ಥೆಯು ಕೆರೆ ಸ್ವಚ್ಛಗೊಳಿಸುವ ಕಾರ‌್ಯ ಕೈಗೆತ್ತಿಕೊಂಡು, ಕೆರೆ ಕೋಡಿ ಹಳ್ಳಿಗೆ ಸಂಪರ್ಕಿಸುವ ರಸ್ತೆಯನ್ನು ನಿರ್ಮಿಸಿದೆ. ಹೂಳೆತ್ತುವ ಕಾರ‌್ಯಕ್ಕೆ ಸರಕಾರದಿಂದ ಸಂಸ್ಥೆಯು ಅನುಮತಿ ಪಡೆದಿತ್ತಾದರೂ, ಮಳೆ ಪರಿಣಾಮವಾಗಿ ಅದು ನಿಂತುಹೋಗಿದೆ.
3. ಕೆರೆ ದಡದಿಂದ ಸ್ವಲ್ಪವೇ ದೂರದಲ್ಲಿ ಅರಣ್ಯ ಪ್ರದೇಶವೊಂದಿದೆ. ಅಲ್ಲಿ ಸಾಕಷ್ಟು ಪಕ್ಷಿಗಳು ವಾಸವಿವೆ. ಬಿಜಿಆರ್ ಸಂಘಟನೆಯ ಸದಸ್ಯ ರಾಮ್ ಕುಮಾರ್ ಅವರು ಇತ್ತೀಚೆಗೆ ಯಶುಬೆಟ್ಟಕ್ಕೆ ಭೇಟಿ ನೀಡಿದ್ದರು. ಇದು ವಾಯುವಿಹಾರಕ್ಕೆ ಹೇಳಿಮಾಡಿಸಿದ ಸ್ಥಳವಾಗಿದ್ದು, ಇದನ್ನು ಉಳಿಸಿಕೊಳ್ಳುವುದು ಅತಿ ಮುಖ್ಯ.
4. ಹೊಸಕೆರೆ ಹಳ್ಳಿ ಕೆರೆಯನ್ನು ಯೇಸು ಬೆಟ್ಟ ಹಾಗೂ ಹನುಮಗಿರಿ ಎಂಬ ಎರಡು ಬೆಟ್ಟಗಳು ಹೊಂದಿಕೊಂಡಿವೆ. ಟಾಟಾ ಪ್ರೊಮೊಂಟ್ ಸಂಸ್ಥೆಯು ಹನುಮಗಿರಿ ಬೆಟ್ಟದ ಮೇಲೆ ಹೆಲಿಪ್ಯಾಡ್ ಇರುವ ನಾಲ್ಕು ಗಗನ ಚುಂಬಿ ಕಟ್ಟಡಗಳನ್ನು ಕಟ್ಟಿದ್ದು, ಇದಕ್ಕೆ ಹಿಲ್ ರೆಸಿಡೆನ್ಸ್ ಎಂದು ಹೆಸರಿಟ್ಟಿದೆ.
ಬೆಳವಣಿಗೆಗಳು
1. ಹೊಸಕೆರೆಹಳ್ಳಿ ಕುರಿತು ಬಿಜಿಆರ್ ಹಮ್ಮಿಕೊಂಡ ಆಂದೋಲನವು ರಾಜ್ಯವ್ಯಾಪಿ ಹಬ್ಬಿತು. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಸಂಘಟನೆಯ ಶ್ರಮವನ್ನು ಹಾಡಿ ಹೊಗಳಿತು.
2. ಡಿಜಿಪಿ ಭಾಸ್ಕರ್ ರಾವ್ ಅವರು ಸುನೀಲ್ ಸೂದ್ ಅವರನ್ನು ಭೇಟಿಯಾಗಿ, ಭಾನುವಾರ ನಡೆಯಲಿರುವ ಕೆರೆ ಸ್ವಚ್ಛತಾ ಕಾರ‌್ಯಕ್ಕೆ 60 ಪೊಲೀಸ್ ಸಿಬ್ಬಂದಿ ನಿಯೋಜಿಸುವುದಾಗಿ ಭರವಸೆ ನೀಡಿದರು.
3. ಬಿಜಿಆರ್ ಸಂಘಟನೆಯ ಹಲವು ಸದಸ್ಯರು ಹೊಸಕೆರೆ ಹಳ್ಳಿ ಕೆರೆಯನ್ನು ಪ್ರತಿದಿನ ಭೇಟಿ ಮಾಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
4. ಹೊಸಕೆರೆ ಹಳ್ಳಿಯ ಈ ದುರ್ಗತಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದ ರುದ್ರಯ್ಯ ಎಂಬುವರೇ ಕಾರಣ ಎಂಬುದು ಗೊತ್ತಾಗಿದೆ. ಸಂಘದ ಸದಸ್ಯ ರಾಮ್ ಕುಮಾರ್ ಅವರು ಕೆರೆ ಅಭಿವೃದ್ಧಿ ಮಂಡಳಿಗೆ ಭೇಟಿ ನೀಡಿದ ನಂತರ ತಿಳಿದ ವಿಷಯವಿದು.
ಕಾರ‌್ಯಕ್ರಮಗಳೇನು?
ಭಾನುವಾರ ನಡೆಯಲಿರುವ ಹೊಸಕೆರೆ ಹಳ್ಳಿ ಕೆರೆ ಸ್ವಚ್ಛತಾ ಕಾರ‌್ಯಕ್ರಮದಲ್ಲಿ ಮೂರು ಕಾರ‌್ಯಗಳನ್ನು ಹಮ್ಮಿಕೊಳ್ಳಲಾಗಿದೆ.
1. ಕೆರೆ ಸ್ವಚ್ಛತೆ
2. ಸಸಿ ನೆಡುವುದು
3. ಜ್ಞಾನ ಹಂಚಿಕೊಳ್ಳುವುದು
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್‍ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಇವರ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಬಹುದು. ಅರ್ಜಿ ನಮೂನೆಯನ್ನು ಸಂಬಂಧಿಸಿದ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ನಿರೀಕ್ಷಕರಿಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 11 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಚೇರಿ ದೂ ಸಂ:08192-237332 ಸಂಪರ್ಕಿಸಲು ಕಾರ್ಮಿಕ ಅಧಿಕಾರಿ ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ

ಸುದ್ದಿದಿನ ಡೆಸ್ಕ್ : ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ಸಮಿತಿ ತೀರ್ಪಿನ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಿನ್ನೆ ಹೇಳಿದ್ದಾರೆ.
ತಮಿಳುನಾಡಿಗೆ ನಾಳೆಯಿಂದ (ಸೆಪ್ಟಂಬರ್28) ಅಕ್ಟೋಬರ್ 15ರ ತನಕ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ನಂತೆ ನೀರು ಹರಿಸುವಂತೆ, ಕಾವೇರಿ ನದಿ ನೀರು ಸಮಿತಿ ನಿನ್ನೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಕಾವೇರಿ ನದಿ ನೀರು ಸಮಿತಿ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಈ ನಿರ್ದೇಶನ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ

ಸುದ್ದಿದಿನ, ಬಳ್ಳಾರಿ : ಸಿರಿಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಸವನಪೇಟೆ) ಮುಖ್ಯ ಗುರುಗಳಾದ ಶ್ರೀಮತಿ ಸುಮಂಗಳಾ ಮೇಟಿಯವರು 2023-24 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ವೃತ್ತಿ ಧರ್ಮ ನೇ ತನ್ನ ಸರ್ವಸ್ವ ಎಂದು ತಿಳಿದುಕೊಂಡಂತಹ ಶ್ರೀಮತಿ ಸುಮಂಗಳಾ ಮೇಟಿಯವರು, ಶಿಕ್ಷಕ ವೃತ್ತಿಯಲ್ಲಿ ಉತ್ತಮ ಕರ್ತವ್ಯ ಹಾಗೂ ಸೇವೆಯನ್ನು ಸಲ್ಲಿಸಿದನ್ನು ಪರಿಗಣಿಸಿ ಈ ಹಿಂದೆಯೇ 2022-23 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಇವರ ಶಿಕ್ಷಣ ಕ್ಷೇತ್ರದಲ್ಲಿನ ಅಗಾಧವಾದ ಕರ್ತವ್ಯ ಮತ್ತು ಸೇವೆ ನಿಷ್ಠೆಯನ್ನು ಗುರುತಿಸಿದ ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ ವತಿಯಿಂದ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಇದೇ ಸಂದರ್ಭದಲ್ಲಿ ಗ್ರಾಮಸ್ಥರು, ಸಮಸ್ತ ಶಿಕ್ಷಕರ ವರ್ಗದವರು, ಅತಿಥಿ ಶಿಕ್ಷಕರು, ಹಿತೈಷಿಗಳು, ಹಳೆಯ ವಿದ್ಯಾರ್ಥಿ ಬಳಗ, ಶಿಕ್ಷಣ ಪ್ರೇಮಿಗಳು, ಅಭಿಮಾನಿ ಬಳಗ,
ಮುಂತಾದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ5 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ4 days ago
ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ