Connect with us

ದಿನದ ಸುದ್ದಿ

ಖುಷಿಯಾಗಿದೆ ಏಕೋ ನಿನ್ನಿಂದಲೇ..!

Published

on

ಸಂತೋಷವಾಗಿರಲು ನಾವು ಬಯಸುವುದು ಸಹಜ, ಆದರೆ ಸಂತೋಷದ ವ್ಯಾಖ್ಯಾನ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವಿಭಿನ್ನವಾಗಿರುತ್ತದೆ.

ಸಂತೋಷವು ಮನಸ್ಸಿನ ಒಂದು ಭಾವನಾತ್ಮಕ ಸ್ಥಿತಿ. ಇದು ತೃಪ್ತಿಯ ಭಾವನೆಗಳಿಂದ ನಿರೂಪಿಸಲ್ಪಟ್ಟಿದೆ. ಸಂತೋಷವು ವಿಭಿನ್ನ ವ್ಯಾಖ್ಯಾನಗಳನ್ನು ಹೊಂದಿದ್ದರೂ, ಅದು ಮುಖ್ಯವಾಗಿ ಸಕಾರಾತ್ಮಕ ಭಾವನೆಗಳು ಮತ್ತು ಜೀವನದಲ್ಲಿ ಆಗುವ ತೃಪ್ತಿಗಳ ಮೇಲೆ ಆಧಾರಿತವಾಗಿದೆ. ನಮ್ಮ ದೈನಂದಿನ ಅಭ್ಯಾಸಗಳು ನಮ್ಮ ಸಂತೋಷವನ್ನು ಉತ್ತೇಜಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ನಿಮ್ಮ ಸಂತೋಷ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ನಿಮ್ಮ ದಿನಚರಿಯಲ್ಲಿ ಈ ಕೆಳಗೆ ಹೇಳಿರುವ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ.

ಕೃತಜ್ಞತೆ ಇರಲಿ: ಕೃತಜ್ಞತೆಯು ಸಂತೋಷದ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಜೀವನದ ಸಕಾರಾತ್ಮಕ ಅಂಶಗಳನ್ನು ಗಮನಿಸಿ, ಮೆಲುಕುಹಾಕಿ ಇದು ನೀವು ಸಂತೋಷವಾಗಿರಲು ಸಹಾಯಮಾಡುತ್ತದೆ.

ಧ್ಯಾನ: ನಿಮ್ಮ ದೈನಂದಿನ ದಿನಚರಿಯಲ್ಲಿ ಧ್ಯಾನವನ್ನು ಸೇರಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡಬಹುದು, ಸ್ವಯಂ-ಅರಿವು ಹೆಚ್ಚಿಸಬಹುದು. ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಶಾಂತ ಸ್ಥಳದಲ್ಲಿ ಕುಳಿತುಕೊಳ್ಳಿ, ಉಸಿರಾಟದ ಮೇಲೆ ಕೇಂದ್ರೀಕರಿಸಿ. ಆಲೋಚನೆಗಳನ್ನು ತಡೆಯಬೇಡಿ.

ದೈಹಿಕ ವ್ಯಾಯಾಮ: ನಿಯಮಿತ ದೈಹಿಕ ಚಟುವಟಿಕೆಯು ಮನಸ್ಥಿತಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ವ್ಯಾಯಾಮ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ನೀವು ಆನಂದಿಸುವ ಜಾಗಿಂಗ್, ಯೋಗ, ಅಥವಾ ನೃತ್ಯದಂತಹ ವ್ಯಾಯಾಮವನ್ನು ದಿನಚರಿಯಲ್ಲಿ ಸೇರಿಸಿ.

ಸಾಮಾಜಿಕ ಸಂಪರ್ಕ ಮತ್ತು ಚಟುವಟಿಕೆಗಳು: ಸಂತೋಷವಾಗಿರಲು ಸಾಮಾಜಿಕ ಸಂಪರ್ಕಗಳು ಬೇಕು. ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರ ಜೊತೆಗೆ ಉತ್ತಮ ಒಡನಾಟ ಮುಖ್ಯ. ನಿಮಗೆ ಸಂತೋಷ ತರುವವರೊಂದಿಗೆ ಸಮಯ ಕಳೆಯಲು ಆದ್ಯತೆ ನೀಡಿ.

ಹವ್ಯಾಸಗಳು: ನಿಮಗೆ ಆಸಕ್ತಿಇರುವ ಹವ್ಯಾಸಗಳಿಗೆ ಸಮಯವನ್ನು ನೀಡಿ. ಅದು ಪೇಂಟಿಂಗ್ ಆಗಿರಲಿ ಅಥವಾ ತೋಟಗಾರಿಕೆಯಾಗಿರಲಿ, ನಿಮ್ಮ ಸಂತೋಷವನ್ನು ಹೆಚ್ಚಿಸಲು ಸೂಕ್ತ ಸಮಯವನ್ನು ಮೀಸಲಿಡಿ.

ನಿದ್ರೆ: ನಮ್ಮ ಮನಸ್ಥಿತಿ ಮತ್ತು ಸಂತೋಷಕ್ಕೆ ನಿದ್ರೆ ಅತ್ಯಗತ್ಯ. ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿ. ಶಾಂತಿಯುತ ವಾತಾವರಣದಲ್ಲಿ ಮಲಗಿಕೊಳ್ಳಿ.

ಆರೋಗ್ಯಕರ ಆಹಾರ: ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್ಗಳನ್ನು ಒಳಗೊಂಡಿರುವ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ. ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆ ಪಾನೀಯಗಳ ಸೇವನೆಯನ್ನು ಮಿತಿಗೊಳಿಸಿ.

ನಿಮ್ಮ ಕಾಳಜಿ ವಹಿಸಿ: ನಿಮ್ಮ ಮನಸ್ಸು, ದೇಹ, ಆತ್ಮವನ್ನು ಪೋಷಿಸುವ ಮತ್ತು ಪುನರ್ ಯೌವನಗೊಳಿಸುವ ಚಟುವಟಿಕೆಗಳಿಗೆ ಸಮಯವನ್ನು ಮೀಸಲಿಡಿ. ಬೆಚ್ಚಗಿನ ನೀರಿನಲ್ಲಿ ಸ್ನಾನವನ್ನು ಮಾಡಿ, ಪುಸ್ತಕವನ್ನು ಓದಿ ಅಥವಾ ನೀವು ಆನಂದಿಸಬಹುದಾದ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ.

ತಂತ್ರಜ್ಞಾನದ ಅತಿಯಾದ ಬಳಕೆಯು ನಮ್ಮ ಸಂತೋಷ ಮತ್ತು ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ತಂತ್ರಜ್ಞಾನದ ಬಳಕೆಯನ್ನು ಮಿತಿಗೊಳಿಸಿ, ಪ್ರಕೃತಿಯೊಂದಿಗೆ ಸಮಯ ಕಳೆಯಿರಿ, ಯೋಗಾಭ್ಯಾಸ ಮಾಡಿ, ಸಂತೋಷದಿಂದಿರಿ.ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ

Published

on

ಸುದ್ದಿದಿನಡೆಸ್ಕ್:ಗ್ರಾಮೀಣ ಪ್ರದೇಶದಲ್ಲಿ 500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ಹಾಗೂ ನಗರ ಪ್ರದೇಶಗಳಲ್ಲಿ 800 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮುಂದಿನ ಮೂರು ತಿಂಗಳಲ್ಲಿ 10 ಸಾವಿರ ನಿವೇಶನ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ 2 ಸಾವಿರದ 500 ಮನೆಗಳು ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕೂಡ ಅರ್ಹ ಫಲಾನುಭವಿಗಳಿಗೆ ಹಂಚಲಾಗುತ್ತದೆ ಎಂದು ಮಾಹಿತಿ ನೀಡಿದರು.

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಗಳನ್ನು ಸರಿಪಡಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಗಿತ್ತೆ ಮಾಧವ್ ವಿಠ್ಠಲ್ ರಾವ್ ರವರಿಗೆ ಕರವೇ(ಪ್ರವೀಣ ಶಟ್ಟಿ ಬಣ) ಮನವಿ ಸಲ್ಲಿಸಿತು.

ಜಲ್ಲಾಧ್ಯಕ್ಷ ಜಮ್ನಳ್ಳಿ ನಾಗರಾಜ್ ಮಾತನಾಡಿ, ದಾವಣಗೆರೆ ಜಿಲ್ಲೆಯ ಮೊರಾರ್ಜಿ ವಸತಿ ಶಾಲೆಗಳಲ್ಲಿ ಬಡ ಕುಟುಂಬಗಳ ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸದರಿ ಮಕ್ಕಳಿಗೆ ವಸತಿ ಶಾಲೆಯಲ್ಲಿ ಸರಿಯಾದ ಮೂಲಭೂತ ಸೌಲಭ್ಯ ಕಲ್ಪಿಸದೇ ಇರುವುದರಿಂದ ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.

ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರು ಇರುವುದಿಲ್ಲ. ಅಲ್ಲದೇ ಮಕ್ಕಳಿಗೆ ಸರಿಯಾಗಿ ಊಟದ ವ್ಯವಸ್ಥೆ ಸಮರ್ಪಕವಾಗಿರುವುದಿಲ್ಲ, ಶೌಚಾಲಯ ಸೌಕರ್ಯಗಳಿರುವುದಿಲ್ಲ, ಮಕ್ಕಳ ಮೇಲ್ವಿಚಾರಣೆಗೆ ವಾರ್ಡನ್‌ಗಳು ರಾತ್ರಿ ಸಮಯದಲ್ಲಿ ಸ್ಥಳದಲ್ಲಿರುವುದಿಲ್ಲ, ಅಲ್ಲದೇ ವಿದ್ಯುತ್ ತೊಂದರೆಯಾದರೆ ಮಕ್ಕಳಿಗೆ ಯು.ಪಿ.ಎಸ್. ಸೌಲಭ್ಯವಿಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಮನವಿ ಸ್ವೀಕರಿಸಿದ ಸಿ.ಇ.ಒ ಮಾತನಾಡಿ, ಸಧ್ಯದಲ್ಲೇ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಈ ವಿಷಯದ ಬಗ್ಗೆ ಚರ್ಚೆ ನಡಿಸಿ ಸೂಕ್ತ ತೀರ್ಮಾನ ಕೈಗೂಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಜಮ್ನಳ್ಳಿ ನಾಗರಾಜ್, ಜಿಲ್ಲಾ ಕಾರ್ಯಧ್ಯಕ್ಷ ಸೈಯದ್ ನಜೀರ್, ನಾಗರಾಜ್ ಆದಾಪುರ್, ಸಂಘಟನಾ ಕಾರ್ಯದರ್ಶಿ ಸಂತೋಷ್ ಕುಮಾರ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ಎಂ, ನಗರ ಘಟಕ ಅಧ್ಯಕ್ಷ ಅನೂಪ್ ಇಜಾರಿ, ಮಹಿಳಾ ಗೌರವಾಧ್ಯಕ್ಷೆ ವನಜ ಕರಿಯಪ್ಪ, ಉತ್ತರ ವಲಯದ ಯುವ ಘಟಕದ ಅಧ್ಯಕ್ಷ ಶಿವಕುಮಾರ ಬಿ ಬಿ, ನಾಗರಾಜ ಆಥಪುರ್, ಶಬ್ರಿನ್ ತಾಜ್, ಬಸವರಾಜ ಎಸ್, ಬಸವರಾಜ್ ಪಿ, ಮಂಜುಳಾ ಆರ್, ನಾಗರಾಜ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ದತ್ತಾಂಶ ನಿರ್ವಾಹಕ ಗ್ರೇಡ್ ‘ಎ’ ಪರೀಕ್ಷೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವೆಬೆಸೈಟ್ https://ssc.nic.in ಅಥವಾ https://ssckkr.kar.nic.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 18 ಕೊನೆಯದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ – 080-2527342, 25502520 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಲು ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending