Connect with us

ರಾಜಕೀಯ

ಮೋದಿ ಭ್ರಷ್ಟನಲ್ಲ ಎಂಬ‌ ಮಿಥ್ಯೆ : ಅದಾನಿ, ಮೋದಿ ಎಂಬ ಅವಳಿ-ಜವಳಿ ದರೋಡೆಗಾರರು

Published

on

ಗುಜರಾತ್ ಸರ್ಕಾರಕ್ಕೆ ಅದಾನಿ ಬಿಟ್ಟರೆ ಬೇರೆ ಯಾರೂ ಕಾಣುವುದಿಲ್ಲವೇ ? ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಬಹಿರಂಗ ಕೋರ್ಟ್‌ನಲ್ಲಿ ಕೇಳಿದ ಪ್ರಶ್ನೆ, ಮೋದಿ ಮುಖ್ಯ ಮಂತ್ರಿಯಾಗಿ, ಹಲವು ಸಾವಿರ ಎಕರೆ ಕಡಲ ತೀರವನ್ನು ಎಕರೆಗೆ ಒಂದು ರೂನಂತೆ ಅದಾನಿಗೆ ಕೊಟ್ಟಾಗ, ಗುಜರಾತ್‌ನ ಬಂದರುಗಳನ್ನೂ ಅದಾನಿಗೆ ಕೊಡಲಾಯಿತು.ವಿದ್ಯುತ್ ತಯಾರಿಕೆಯನ್ನೂ.. ಇನ್ನೂ ಎಷ್ಟೆಷ್ಟೋ.

ಅಷ್ಟು ಸಾಲದೆಂದು ಕರ್ನಾಟಕದಲ್ಲಿ ಯಡ್ಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಮೂಲಕ ಅದಾನಿಗೆ ಗಣಿ ದರೋಡೆ ಮಾಡಲು ಅವಕಾಶ.‌ಕಾರವಾರದ ಬಳಿಯ ಬೆಳ್ಳಿಕೇರಿ ಬಂದರಿನಲ್ಲಿ ಲೋಕಾಯುಕ್ತ ಸಂತೋಷ ಹೆಗ್ಡೆಯವರು ವಶಪಡಿಸಿಕೊಂಡಿದ್ದ ಹಲವು ಲಕ್ಷಾಂತರ ಟನ್ ಕಬ್ಬಿಣದ ಅದಿರು ರಾತ್ರೋರಾತ್ರೆ ಮಾಯವಾದ ಅತ್ಯಂತ ಗೂಂಡಾಗಿರಿಯ ಪ್ರಸಂಗದಲ್ಲಿ ಅದಾನಿಯದೇ ಅತ್ಯಂತ ದೊಡ್ಡ ಪಾಲು. ಜನಾರ್ದನ ರೆಡ್ಡಿ ಜೈಲಿಗೆ ಹೋದ.

ಅದಾನಿಗೆ ಮೋದಿ ರಕ್ಷಣೆ. ಪ್ರಧಾನಿಯಾದ ಕೂಡಲೆ ಅದಾನಿಯ ಭ್ರಷ್ಟತನಕ್ಕೆ ರೆಕ್ಕೆ ಬಂದು ವಿಶ್ವವ್ಯಾಪಿಯಾಯಿತು. ವರ್ಷಗಟ್ಟಲೆ ತೊಗರಿ ಬೇಳೆಯ ಬೆಲೆ 180 ಕ್ಕೆ ಏರಿದ್ದು ಅದಾನಿಗೆ ಮೋದಿ ತೊಗರಿ ಆಮದಿನ , ಬಂದರುಗಳಲ್ಲಿ ದಾಸ್ತಾನು ಮಾಡುವ ಗುತ್ತಿಗೆ ನೀಡಿದುದರಿಂದ. ಇಡೀ ಭಾರತದ ಜನರಿಂದ ಕಸಿದ ಹಣ ಹಲವು ಹತ್ತು ಸಾವಿರ ಕೋಟಿ ಮೀರುತ್ತದೆ.
ಮೋದಿಯ ಪಾಕಿಸ್ತಾನ,ಬಂಗ್ಲಾದೇಶ, ಆಸ್ಟ್ರೇಲಿಯಾ ಮೊದಲಾದ ಹಲವು ದೇಶಗಳ ಭೇಟಿಯಲ್ಲಿ ಸಹಿ ಮಾಡಿದ 15ಕ್ಕೂ ಹೆಚ್ವು ಬೃಹತ್ ಗಾತ್ರದ ಒಪ್ಪಂದಗಳು ಅದಾನಿಗಾಗಿ..

ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿ ಒಪ್ಪಂದಕ್ಕೆ‌ ಮೋದಿ ಸಹಿ ಹಾಕಿ ಒಂದೇ ಬಾರಿಗೆ 15, ೦೦೦ ಕೋಟಿ ಸಾಲ SBI ನಿಂದ ಕೊಡಿಸಿದ್ದು ಒಂದು ಉದಾಹರಣೆ. ‌ಭಾರತದಲ್ಲಿ ನೂರಾರು ಸರ್ಕಾರಿ ಆಜ್ಞೆಗಳು, ತೆರಿಗೆ ರಿಯಾಯಿತಿಗಳು , ಪರಿಸರ ಸಂರಕ್ಷಣೆ ಕಾಯಿದೆ , ಗಣಿ ಕಾಯಿದೆ , ಅರಣ್ಯ ಕಾಯಿದೆ ಆಜ್ಞೆಗಳ ಉಲ್ಲಂಘನೆಗಳು ಈ ಐದು ವರ್ಷಗಳಲ್ಲಿ.‌ ಕೇವಲ ಮೋದಿ ಅಧಿಕಾರದ ಕೊನೆಯ ತಿಂಗಳಿನಲ್ಲಿ ಎಲ್ಲಾ ನೀತಿ ನಿಯಮಗಳನ್ನು ಉಲ್ಲಂಘಿಸಿ, ಸಾರ್ವಜನಿಕ ರಂಗದ ಉದ್ಯಮಗಳನ್ನು ತುಳಿದು ವಿಮಾನ ನಿಲ್ದಾಣ ನಿರ್ಮಾಣ, ನಿರ್ವಹಣೆಯ ಯಾವುದೇ ಅನುಭವವಿಲ್ಲದಿದ್ದರೂ ಆರು ವಿಮಾನ ನಿಲ್ದಾಣಗಳ ಗುತ್ತಿಗೆ. 4.3 ಲಕ್ಷ ಎಕರೆ ಚತ್ತಿಸಘಡದ ದಟ್ಟ ಅರಣ್ಯದ ಗುತ್ತಿಗೆ.

ಎನರ್ಜಿ ಎಸ್.ಇ.ಝಡ್ ಹೆಸರಿನಲ್ಲಿ ಮೂರು ಸಾವಿರ ಕೋಟಿಗೂ ಮಿಗಿಲು ತೆರಿಗೆ ವಿನಾಯಿತಿ. ಹೀಗೆ ಒಂದೇ ಒಂದು ಕುಟುಂಬಕ್ಕೆ ಒಂದಲ್ಲ ಎರಡಲ್ಲ ಲಕ್ಷಾಂತರ ಕೋಟಿ ರೂ ಬೆಲೆಯ ದೇಶದ ಭೂಮಿ, ಅರಣ್ಯ, ಬಂದರು, ವಿಮಾನ ನಿಲ್ದಾಣ , ವಿದ್ಯುತ್, ಕಲ್ಲಿದ್ದಲು ಸಂಪನ್ಮೂಲದ ಚಿನ್ನದ ಮಳೆ ಸುರಿಸಲಾಗಿದೆ‌.
ಏಕೆ ? ಏಕೆ ?? ಏಕೆ ???

– ಜಿ.ಎನ್. ನಾಗರಾಜ್

ದಿನದ ಸುದ್ದಿ

ವಿಧಾನಪರಿಷತ್ ಚುನಾವಣೆ ; ಬಿರುಸಿನ ಪ್ರಚಾರ

Published

on

ಸುದ್ದಿದಿನ ಡೆಸ್ಕ್ : ವಿಧಾನಪರಿಷತ್ ಚುನಾವಣೆ ಪ್ರಯುಕ್ತ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದ ಸಮನ್ವಯ ಸಮಿತಿ ಸಭೆಯನ್ನು ಬೆಂಗಳೂರಿನ ಜೆಪಿ ಭವನದಲ್ಲಿಂದು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿರೋಧಪಕ್ಷದ ನಾಯಕ ಮತ್ತು ಬಿಜೆಪಿ ಮುಖಂಡ ಆರ್. ಅಶೋಕ, ಮಾಜಿ ಸಚಿವರಾದ ಕೆ.ಗೋಪಾಲಯ್ಯ, ಸಿ.ಎನ್. ಅಶ್ವಥ್ ನಾರಾಯಣ, ಮುನಿರತ್ನ, ಸಿ.ಪಿ.ಯೋಗೇಶ್ವರ್ ಮಾತನಾಡಿದರು.

ಇನ್ನೊಂದೆಡೆ, ಚಿತ್ರದುರ್ಗದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ವಿಧಾನಪರಿಷತ್ ಸದಸ್ಯ ಪುಟಣ್ಣಯ್ಯ ಮತಯಾಚಿಸಿದರು. ಇದೇ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ಪಿಂಚಣಿ ವ್ಯವಸ್ಥೆ ಬದಲಾವಣೆಗೆ ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆರನೇ ಹಂತದ ಲೋಕಸಭಾ ಚುನಾವಣೆ ಮತದಾನ ಶಾಂತಿಯುತ

Published

on

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ.

ಈ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಒಟ್ಟು 58 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು. 5 ಗಂಟೆಯ ವೇಳೆಗೆ ಬಂದ ವರದಿಯ ಪ್ರಕಾರ, 6ನೇ ಹಂತದ 58 ಕ್ಷೇತ್ರಗಳಲ್ಲಿ ಒಟ್ಟಾರೆ ಶೇಕಡ 57.70 ರಷ್ಟು ಮತದಾನವಾಗಿದೆ.

ಬಿಹಾರದಲ್ಲಿ ಶೇಕಡ 52.24, ಜಾರ್ಖಂಡ್‌ನಲ್ಲಿ ಶೇಕಡ 61.41, ಹರ್ಯಾಣzಲ್ಲಿ ಶೇಕಡ 55.93, ಒಡಿಶಾದಲ್ಲಿ ಶೇಕಡ 59.60, ಉತ್ತರಪ್ರದೇಶದಲ್ಲಿ 52.02 ಮತ್ತು ಪಶ್ಚಿಮಬಂಗಾಳದಲ್ಲಿ 77.99, ದೆಹಲಿಯಲ್ಲಿ 53.73 ಹಾಗೂ ಜಮ್ಮು-ಕಾಶ್ಮೀರದಲ್ಲಿ ಶೇಕಡ 51.35ರಷ್ಟು ಮತದಾನವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚನ್ನಗಿರಿ | ಆರೋಪಿ ಮೃತಪಟ್ಟ ಪ್ರಕರಣ ; ಅದು ಲಾಕಪ್ ಡೆತ್ ಅಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Published

on

ಸುದ್ದಿದಿನ,ದಾವಣಗೆರೆ : ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿ ಆರೋಪಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆರೋಪಿಗೆ ಮೂರ್ಛೆ ರೋಗವಿದ್ದು ಲಾಕಪ್ ಡೆತ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟನೆ

ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿದ್ದ ಆರೋಪಿ ಆದಿಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ದೂರಿನ ಬೆನ್ನಲ್ಲೇ ಆದಿಲ್‌ನನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾರೆ.

ಕರೆತಂದ ಕೆಲವೇ ನಿಮಿಷದಲ್ಲೇ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣ ತಿಳಿದುಬರಲಿದೆ ಎಂದು ಹೇಳಿದ್ದಾರೆ.

ಆದಿಲ್ ಸಾವು ಬೆನ್ನಲ್ಲೇ ರೊಚ್ಚಿಗೆದ್ದ ಜನರು, ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಚನ್ನಗಿರಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚನ್ನಗಿರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ8 mins ago

ಕ್ಯಾನ್ಸ್ ಚಲನಚಿತ್ರೋತ್ಸವ | ಭಾರತದ ನಿರ್ಮಾಪಕಿ ಪಾಯಾಲ್ ಕಪಾಡಿಯಾಗೆ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ

ಸುದ್ದಿದಿನ ಡೆಸ್ಕ್ : ಫ್ರಾನ್ಸ್‌ನಲ್ಲಿ ನಡೆದಿರುವ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಭಾರತದ ಚಿತ್ರ ನಿರ್ಮಾಪಕಿ ಪಾಯಲ್ ಕಪಾಡಿಯಾ, ಗ್ರಾಂಡ್ ಪ್ರಿಕ್ಸ್, ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇಬ್ಬರು ನರ್ಸ್‌ಗಳ ಜೀವನ ಸುತ್ತಲಿನ...

ದಿನದ ಸುದ್ದಿ2 hours ago

ಕವಿತೆ | ಒಂದು ಕಪ್ ಕಾಫಿ

ಲಕ್ಕೂರು ಆನಂದ್ ಕೊನೆಯ ಸಾರಿ ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ? ನಾನು ತಪ್ಪು ಮಾಡಿದೆನೊ, ನೀನು ತಪ್ಪು ಮಾಡಿದೆಯೊ, ಬಿಟ್ಟು ಬಿಡೋಣ: ಕೊನೆಯ ಸಾರಿ...

ದಿನದ ಸುದ್ದಿ3 hours ago

ವಿಧಾನಪರಿಷತ್ ಚುನಾವಣೆ ; ಬಿರುಸಿನ ಪ್ರಚಾರ

ಸುದ್ದಿದಿನ ಡೆಸ್ಕ್ : ವಿಧಾನಪರಿಷತ್ ಚುನಾವಣೆ ಪ್ರಯುಕ್ತ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದ ಸಮನ್ವಯ ಸಮಿತಿ ಸಭೆಯನ್ನು ಬೆಂಗಳೂರಿನ ಜೆಪಿ...

ದಿನದ ಸುದ್ದಿ12 hours ago

ಆತ್ಮಕತೆ | ವಿಶ್ವವಿದ್ಯಾಲಯದ ವಿರುದ್ಧ ನಡೆಸಿದ ಎರಡು ಧರಣಿಗಳು

ರುದ್ರಪ್ಪ ಹನಗವಾಡಿ ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ, ಕುವೆಂಪು ಅವರ ಮಾನಸಪುತ್ರರೆಂದೇ ಖ್ಯಾತರಾಗಿದ್ದ ಕನ್ನಡದ ಗದ್ಯ ಬರಹಗಾರ ಪ್ರೊ. ದೇ.ಜ.ಗೌ. ಅವರು ಎರಡು ಅವಧಿಗೆ ಉಪಕುಲಪತಿಗಳಾಗಿದ್ದರು. ಅವರ...

ದಿನದ ಸುದ್ದಿ1 day ago

ಆರನೇ ಹಂತದ ಲೋಕಸಭಾ ಚುನಾವಣೆ ಮತದಾನ ಶಾಂತಿಯುತ

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. ಈ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ...

ದಿನದ ಸುದ್ದಿ1 day ago

ಚನ್ನಗಿರಿ | ಆರೋಪಿ ಮೃತಪಟ್ಟ ಪ್ರಕರಣ ; ಅದು ಲಾಕಪ್ ಡೆತ್ ಅಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಸುದ್ದಿದಿನ,ದಾವಣಗೆರೆ : ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿ ಆರೋಪಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆರೋಪಿಗೆ ಮೂರ್ಛೆ ರೋಗವಿದ್ದು...

ಕ್ರೀಡೆ1 day ago

ಮಧ್ಯಾಹ್ನದ ಪ್ರಮುಖ ಸುದ್ದಿಗಳು 

ಸುದ್ದಿದಿನ ಕನ್ನಡ ನ್ಯೂಸ್ ಮಧ್ಯಾಹ್ನದ ಪ್ರಮುಖ ಸುದ್ದಿಗಳು  ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ಮತದಾನ ಪ್ರಗತಿಯಲ್ಲಿದೆ. 11 ಗಂಟೆಯ ವೇಳೆಗೆ ಬಂದ ವರದಿಯ ಪ್ರಕಾರ...

ದಿನದ ಸುದ್ದಿ2 days ago

ಈ ಹತ್ತು ಜಿಲ್ಲೆಗಳಲ್ಲಿ ಭಾರೀ ಮಳೆ

ಸುದ್ದಿದಿನ ಡೆಸ್ಕ್ ; ರಾಜ್ಯದ ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ತುಮಕೂರು, ಕೊಡುಗು ಜಿಲ್ಲೆಗಳ ಧಾರಾಕಾರ...

ದಿನದ ಸುದ್ದಿ2 days ago

ಬಂಡವಾಳ ಹೂಡಿಕೆಗೆ ರಾಜ್ಯ ಉತ್ತಮ ತಾಣ : ಡಿಸಿಎಂ ಡಿ.ಕೆ.ಶಿವಕುಮಾರ್

ಸುದ್ದಿದಿನ ಡೆಸ್ಕ್ : ಬಂಡವಾಳ ಹೂಡಿಕೆಗೆ ರಾಜ್ಯ ಉತ್ತಮ ತಾಣವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ...

ದಿನದ ಸುದ್ದಿ2 days ago

ಉಪೇಂದ್ರ UI ಸಿನೆಮಾ | ಇತಿಹಾಸ ನಿರ್ಮಿಸಲು ಸಜ್ಜು ; ಹಂಗೇರಿಯಲ್ಲಿ ಮ್ಯೂಸಿಕ್..!

“UI” ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಮೊದಲ ಬಾರಿಗೆ, ಹಂಗೇರಿಯ ಬುಡಾಪೆಸ್ಟ್‌ನಲ್ಲಿ 90-ಪೀಸ್ ಆರ್ಕೆಸ್ಟ್ರಾ ಭಾರತೀಯ ಚಲನಚಿತ್ರಕ್ಕಾಗಿ ಸಂಗೀತವನ್ನು ರೆಕಾರ್ಡ್ ಮಾಡುತ್ತಿದೆ. ಈ ಅದ್ಭುತ ಸಾಧನೆಯು...

Trending