ದಿನದ ಸುದ್ದಿ
ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾತ್ರ ಇನ್ನು ಪಿಂಚಣಿ ಸೌಲಭ್ಯ
ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿನ ಕರ್ನಾಟಕ ಸರ್ಕಾರದ ಪಿಂಚಣಿದಾರರು/ಕುಟುಂಬ ಪಿಂಚಣಿದಾರರರು ಆಗಸ್ಟ್ ಮಾಹೆಯಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾತ್ರ ಪಿಂಚಣಿಯನ್ನು ಪಡೆಯಬಹುದಾಗಿದೆ.
ಸರ್ಕಾರದ ಆದೇಶದನ್ವಯ 5 ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಪಿಂಚಣಿ ಸೌಲಭ್ಯ ಲಭ್ಯವಿದ್ದು, ಎಸ್‍ಬಿಐ ಬ್ಯಾಂಕ್‍ನಲ್ಲಿ ಪಡೆಯಬಹುದು. ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿದವರು ಕೆನರಾ ಬ್ಯಾಂಕ್‍ನಿಂದ ಪಡೆಯಬಹುದು.
ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ಹೊಂದಿದವರು ಬ್ಯಾಂಕ್ ಆಫ್ ಬರೋಡದಲ್ಲಿ ಪಡೆಯಬಹುದಾಗಿದೆ. ಜೊತೆಗೆ ಕಾರ್ಪೊರೇಷನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆಂಧ್ರ ಬ್ಯಾಂಕ್‍ಗಳಲ್ಲಿ ಪಿಂಚಣಿ ಪಡೆಯುತ್ತಿರುವವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಾತ್ರ ಪಿಂಚಣಿ ಸೌಲಭ್ಯ ಪಡೆಯಬಹುದು.
ಮೇಲ್ಕಂಡ ಬ್ಯಾಂಕ್‍ಗಳಲ್ಲಿ ಹೊರತುಪಡಿಸಿ ಉಳಿದ ಬ್ಯಾಂಕ್‍ಗಳಲ್ಲಿ ಪಿಂಚಣಿಯನ್ನು ಪಡೆಯುತ್ತಿರುವ ಪಿಂಚಣಿದಾರರು ಕೂಡಲೇ ತಮ್ಮ ಪಿಂಚಣಿಯನ್ನು ಮೇಲ್ಕಂಡ ಬ್ಯಾಂಕ್‍ಗಳಲ್ಲಿ ವರ್ಗಾಯಿಸತಕ್ಕದ್ದು. ಆಗಸ್ಟ್-20 ರಿಂದ ಮೇಲ್ಕಂಡ ಬ್ಯಾಂಕ್‍ಗಳಲ್ಲಿ ಮಾತ್ರ ಪಿಂಚಣಿಯನ್ನು ಪಾವತಿಸಲಾಗುವುದು ಎಂದು ಜಿಲ್ಲಾ ಖಜಾನೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಶ್ರೀಮಂತಿಕೆಯ ನಡುವೆ ಸರಳ ಬದುಕು: 50 ರೂ. ಹೇರ್‌ಕಟ್ ಹೇಳಿದ ಡಿಕೆಶಿ
ಸುದ್ದಿದಿನ,ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಆಸ್ತಿ ಮತ್ತು ಸರಳ ಜೀವನಶೈಲಿಯ ಕುರಿತು ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ಸಾರ್ವಜನಿಕರಲ್ಲೂ ಚರ್ಚೆಗೆ ಕಾರಣವಾಗಿದೆ. ಶ್ರೀಮಂತ ರಾಜಕಾರಣಿ ಎಂಬ ಗುರುತಿನ ನಡುವೆಯೂ, ತಾವು ಇಂದಿಗೂ ಹೇರ್‌ಕಟ್‌ಗೆ ಕೇವಲ 50 ರೂ. ಖರ್ಚು ಮಾಡುತ್ತೇನೆ ಎಂದು ಅವರು ಹೇಳಿರುವುದು ಗಮನ ಸೆಳೆದಿದೆ.
ಹೈಲೈಟ್ಸ್ |
|
‘ಎರಡು-ಮೂರು ಪೀಳಿಗೆಗೆ ಸಾಕಾಗುವಷ್ಟು ಆಸ್ತಿ’
ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ತಮ್ಮ ಪೂರ್ವಜರು ಮತ್ತು ತಾವು ಸಂಪಾದಿಸಿರುವ ಆಸ್ತಿ ಎರಡು-ಮೂರು ಪೀಳಿಗೆ ಕುಳಿತು ತಿನ್ನುವಷ್ಟು ಇದೆ ಎಂದು ಹೇಳಿದ್ದರು. ಮುಖ್ಯಮಂತ್ರಿ ಸ್ಥಾನವನ್ನು ಹಣ ಸಂಪಾದಿಸುವ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಿಲ್ಲ. ಬದಲಾಗಿ ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಮತ್ತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುವುದು ತಮ್ಮ ಗುರಿ ಎಂದು ಅವರು ಹೇಳಿದ್ದರು.
ಡಿಕೆ ಶಿವಕುಮಾರ್ ಅವರು ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪೈಕಿ ಒಬ್ಬರು ಎಂಬ ವಿಚಾರವೂ ಈ ಹಿಂದೆ ವರದಿಯಾಗಿತ್ತು. ಆದರೆ ತಮ್ಮ ವೈಯಕ್ತಿಕ ಜೀವನಶೈಲಿಯಲ್ಲಿ ದುಂದು ವೆಚ್ಚಕ್ಕೆ ಆದ್ಯತೆ ನೀಡುವುದಿಲ್ಲ ಎಂಬ ಸಂದೇಶವನ್ನು ಅವರು ಇದೀಗ ನೀಡಿದ್ದಾರೆ.
http://Visit : www.suddidina.com
50 ರೂ. ಹೇರ್‌ಕಟ್: ಸರಳ ಬದುಕಿನ ಉದಾಹರಣೆ
ಆ.26ರಂದು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡಿಕೆ ಶಿವಕುಮಾರ್ ತಮ್ಮ ಹೇರ್‌ಕಟ್ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. “ನಾನು ನನ್ನ ಹೇರ್‌ಕಟ್‌ಗಾಗಿ 50 ರೂ. ಖರ್ಚು ಮಾಡುತ್ತೇನೆ. ಸರಳ ಜೀವನ ನನಗೆ ಇಷ್ಟ. ದುಂದು ವೆಚ್ಚ ನನಗೆ ಇಷ್ಟವಿಲ್ಲ” ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ.
ದಿಲ್ಲಿಯಲ್ಲಿಯೂ ತಾವು 50 ರೂ. ನೀಡಿ ಹೇರ್‌ಕಟ್ ಮಾಡಿಸಿಕೊಳ್ಳುವುದಾಗಿ ಹೇಳಿರುವ ಅವರು, ಜೀವನ ನಡೆಸಲು ಎಷ್ಟು ಅಗತ್ಯವೋ ಅಷ್ಟನ್ನೇ ಖರ್ಚು ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರ ಆಸ್ತಿ ಪ್ರಮಾಣಕ್ಕಿಂತ ಅವರ ವೈಯಕ್ತಿಕ ಖರ್ಚಿನ ಈ ಉದಾಹರಣೆಯೇ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ.
‘ಕಾಂಗ್ರೆಸ್‌ನ ಅಮಿತ್ ಶಾ’ ಹೋಲಿಕೆಗೆ ಡಿಕೆಶಿ ವಿರೋಧ
ಇದೇ ಸಂದರ್ಶನದಲ್ಲಿ ತಮ್ಮನ್ನು ‘ಕಾಂಗ್ರೆಸ್‌ನ ಅಮಿತ್ ಶಾ’ ಎಂದು ಕರೆಯುವುದಕ್ಕೂ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ತಾವು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತನಾಗಿದ್ದು, ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ತಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಯುವಜನರ ಶಕ್ತಿ, ಆಲೋಚನೆ ಮತ್ತು ಮಹತ್ವಾಕಾಂಕ್ಷೆಗಳ ಮೇಲೆ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಯುವಕರಿಗೆ ಕಲಿಯಲು, ಹೊಸದನ್ನು ಸೃಷ್ಟಿಸಲು ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವುದು ತಮ್ಮ ದೃಷ್ಟಿಕೋನ ಎಂದು ಅವರು ಹೇಳಿದ್ದಾರೆ.
2028ರ ಚುನಾವಣೆಯಲ್ಲೂ ವಿಶ್ವಾಸ
2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯನ್ನೂ ಅವರು ತಿಳಿಸಿದ್ದಾರೆ.
ಅಲ್ಲದೆ, 2029ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಡಿಕೆಶಿ ಅವರ ಇತ್ತೀಚಿನ ಸಂದರ್ಶನವು ಸರಳ ಜೀವನಶೈಲಿಯಿಂದ ಹಿಡಿದು ಕಾಂಗ್ರೆಸ್‌ನ ಭವಿಷ್ಯದ ರಾಜಕೀಯ ಗುರಿಗಳವರೆಗೆ ಹಲವು ವಿಚಾರಗಳನ್ನು ಮುನ್ನೆಲೆಗೆ ತಂದಿದೆ.

ದಿನದ ಸುದ್ದಿ
ಹೆಬ್ಬಾಳ–ಮೇಖ್ರಿ ಸುರಂಗ ಮಾರ್ಗ: ಸಂಚಾರ ಪರಿಹಾರವೇ, ಹೊಸ ಸಮಸ್ಯೆಯೇ?
ಸುದ್ದಿದಿನ,ಬೆಂಗಳೂರು: ಬೆಂಗಳೂರು ನಗರದ ಪ್ರಮುಖ ಸಂಚಾರ ಕಿರಿಕಿರಿ ಕೇಂದ್ರವಾಗಿರುವ ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಉದ್ದೇಶಿಸಿರುವ ಸುರಂಗ ಮಾರ್ಗ ಯೋಜನೆ ಇದೀಗ ತಜ್ಞರ ವರದಿಯಿಂದ ಚರ್ಚೆಗೆ ಬಂದಿದೆ. ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದ ಈ ಯೋಜನೆಯೇ ಹೊಸ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಬಹುದು ಎಂದು IISc ಅಧ್ಯಯನ ಎಚ್ಚರಿಸಿದೆ.
ಹೆಬ್ಬಾಳ ಸುರಂಗ ಯೋಜನೆಗೆ IISc ಆಕ್ಷೇಪ
ಕರ್ನಾಟಕ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮಹತ್ವಾಕಾಂಕ್ಷೆಯ ಯೋಜನೆಯಾಗಿ ಪರಿಗಣಿಸಿರುವ ಹೆಬ್ಬಾಳ ಸುರಂಗ ಮಾರ್ಗಕ್ಕೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಅಧ್ಯಯನ ವರದಿ ಹಲವು ಪ್ರಶ್ನೆಗಳನ್ನು ಎತ್ತಿದೆ. IIScಯ Sustainable Transportation (IST) Lab ನಡೆಸಿರುವ ಅಧ್ಯಯನದ ಪ್ರಕಾರ, ಕಿರು ಸುರಂಗ ಮಾರ್ಗ ನಿರ್ಮಾಣದಿಂದ ಹೆಬ್ಬಾಳದ ಒಟ್ಟಾರೆ ಸಂಚಾರ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಕಡಿಮೆ.
ಸುರಂಗದಿಂದ ಹೊರಬರುವ ವಾಹನಗಳ ದಟ್ಟಣೆ ಪಶುವೈದ್ಯಕೀಯ ಆಸ್ಪತ್ರೆ ಮತ್ತು ಎಸ್ಟೀಮ್ ಮಾಲ್ ಭಾಗದ ರಸ್ತೆಗಳತ್ತ ವರ್ಗಾವಣೆಯಾಗುವ ಸಾಧ್ಯತೆ ಇದೆ. ಇದರಿಂದ ಮೇಖ್ರಿ ವೃತ್ತದವರೆಗೆ ವಾಹನಗಳ ಸಾಲು ಹೆಚ್ಚಾಗಿ, ಒಂದು ಪ್ರದೇಶದ ಟ್ರಾಫಿಕ್ ಸಮಸ್ಯೆಯನ್ನು ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಿದಂತಾಗಬಹುದು ಎಂದು ವರದಿ ಎಚ್ಚರಿಸಿದೆ.
http://Visit : www.suddidina.com
ಸುರಂಗಕ್ಕಿಂತ ಮೆಟ್ರೋವೇ ಆರ್ಥಿಕ?
IISc ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಆಶಿಶ್ ವರ್ಮಾ ಸಿದ್ಧಪಡಿಸಿರುವ ಅಧ್ಯಯನದಲ್ಲಿ ಸುರಂಗ ಯೋಜನೆಯ ವೆಚ್ಚ ಮತ್ತು ಅದರ ಪ್ರಯೋಜನವನ್ನು ಹೋಲಿಸಲಾಗಿದೆ. ವರದಿ ಪ್ರಕಾರ, ಸುರಂಗ ಮಾರ್ಗದಲ್ಲಿ ಪ್ರತಿ ಪ್ರಯಾಣಿಕನಿಗೆ ಅಂದಾಜು ₹5.23 ವೆಚ್ಚವಾಗಲಿದ್ದು, ಮೆಟ್ರೋದಲ್ಲಿ ಇದೇ ಪ್ರಮಾಣದ ಪ್ರಯಾಣಿಕರಿಗೆ ಸುಮಾರು ₹0.86 ವೆಚ್ಚವಾಗಲಿದೆ.
ಪ್ರತಿ ಗಂಟೆಗೆ ಪ್ರತಿ ದಿಕ್ಕಿನ ಪ್ರಯಾಣಿಕರ ಸಾಮರ್ಥ್ಯದ ಆಧಾರದಲ್ಲಿಯೂ ವ್ಯತ್ಯಾಸ ದೊಡ್ಡದಾಗಿದೆ. ಸುರಂಗದ ಪ್ರತಿ ಯೂನಿಟ್ ಸಾಮರ್ಥ್ಯಕ್ಕೆ ಸುಮಾರು ₹13.74 ಲಕ್ಷ ವೆಚ್ಚವಾಗಬಹುದಾದರೆ, ಮೆಟ್ರೋಗೆ ₹2.26 ಲಕ್ಷ ಮಾತ್ರ ಬೇಕಾಗಬಹುದು. ಅಂದರೆ, ಸಾಮರ್ಥ್ಯದ ದೃಷ್ಟಿಯಿಂದ ಸುರಂಗ ಮಾರ್ಗವು ಮೆಟ್ರೋಗಿಂತ ಹಲವು ಪಟ್ಟು ದುಬಾರಿಯಾಗಲಿದೆ ಎಂಬುದು ಅಧ್ಯಯನದ ಪ್ರಮುಖ ಅಂಶ.
DPRನಲ್ಲೂ ಹಲವು ಲೋಪಗಳ ಆರೋಪ
ಯೋಜನೆಯ ವಿಸ್ತೃತ ಯೋಜನಾ ವರದಿ (DPR)ಯಲ್ಲೂ ಗಂಭೀರ ಲೋಪಗಳಿವೆ ಎಂದು IST Lab ಉಲ್ಲೇಖಿಸಿದೆ. ಹೆಬ್ಬಾಳ ಮೇಲ್ಸೇತುವೆಯ ಪಥಗಳ ಸಾಮರ್ಥ್ಯ ಅಂದಾಜಿನಲ್ಲಿ ಶಿಫಾರಸು ಮಾಡಬಹುದಾದ ಸಾಮರ್ಥ್ಯಕ್ಕಿಂತ ಕಡಿಮೆ ಅಂಕಿಅಂಶಗಳನ್ನು ಬಳಸಲಾಗಿದೆ ಎಂಬ ಆಕ್ಷೇಪವಿದೆ.
ಇದಲ್ಲದೆ, ಸುರಂಗದ ಅಗತ್ಯತೆಯನ್ನು ಸಮರ್ಥಿಸಲು ಮೂಲ ಸಂಚಾರ ದಟ್ಟಣಿಯ ಅಂಕಿಅಂಶಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪವೂ ವರದಿಯಲ್ಲಿದೆ.
ತಿರುವು, ಪ್ರವಾಹದ ಅಪಾಯವೂ ಪ್ರಶ್ನೆ
ಎಸ್ಟೀಮ್ ಮಾಲ್ ನಿರ್ಗಮನದ ಬಳಿ ಸುಮಾರು 60 ಮೀಟರ್ ತಿರುವು ಇರಲಿದ್ದು, ವಾಹನಗಳ ವೇಗವನ್ನು 60 ಕಿ.ಮೀ.ನಿಂದ 40 ಕಿ.ಮೀ.ಗೆ ಇಳಿಸುವ ಸಾಧ್ಯತೆಯಿದೆ. ಇದರಿಂದ ವಾಹನಗಳ ಸಾಲು ಹೆಚ್ಚಾಗುವ ಅಪಾಯವಿದ್ದರೂ DPRನಲ್ಲಿ ಈ ಅಂಶವನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ವರದಿ ಹೇಳಿದೆ.
ಹೆಬ್ಬಾಳ ಕೆರೆಯ ಸಮೀಪ ಸುರಂಗದ ಪ್ರವೇಶ ದ್ವಾರ ತಗ್ಗು ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ಪ್ರವಾಹದ ಅಪಾಯವೂ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಮೆಟ್ರೋ ಸಂಪರ್ಕಕ್ಕೆ ಒತ್ತು
ಒಟ್ಟಾರೆ, ಹೆಬ್ಬಾಳ ಸುರಂಗ ಯೋಜನೆಯ ಬದಲಿಗೆ ಸಮರ್ಥ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ವಿಶೇಷವಾಗಿ ಮೆಟ್ರೋ ಸಂಪರ್ಕವನ್ನು ಬಲಪಡಿಸುವುದು ದೀರ್ಘಕಾಲೀನ ಪರಿಹಾರವಾಗಬಹುದು ಎಂಬ ಅಭಿಪ್ರಾಯವನ್ನು IISc ಅಧ್ಯಯನ ಮುಂದಿಟ್ಟಿದೆ. ಹೀಗಾಗಿ, ಯೋಜನೆಗೆ ಮುಂದುವರಿಯುವ ಮುನ್ನ ಅದರ ವೆಚ್ಚ, ಸಂಚಾರ ಪರಿಣಾಮ, ಸುರಕ್ಷತೆ ಮತ್ತು DPR ಅಂಕಿಅಂಶಗಳನ್ನು ಮರುಪರಿಶೀಲಿಸುವ ಅಗತ್ಯ ಎದುರಾಗಿದೆ.

ದಿನದ ಸುದ್ದಿ
ಶಿವರಾಮ ಕಾರಂತ ಬಡಾವಣೆಗೆ ಮುಹೂರ್ತ: ಆ.31ಕ್ಕೆ 18 ಸಾವಿರ ನಿವೇಶನ ಹಂಚಿಕೆ?
ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ದೀರ್ಘಕಾಲದ ಕಾನೂನು ವಿವಾದಗಳ ಬಳಿಕ ಹೈಕೋರ್ಟ್ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ, ಆ.31ರಂದು ಭೂಮಿ ನೀಡಿದ ರೈತರು ಹಾಗೂ ಭೂಮಾಲೀಕರಿಗೆ 18 ಸಾವಿರ ನಿವೇಶನ ಹಂಚಿಕೆ ಮಾಡುವ ಮೂಲಕ ಪ್ರಕ್ರಿಯೆಗೆ ಸಾಂಕೇತಿಕ ಚಾಲನೆ ನೀಡುವ ಸಾಧ್ಯತೆ ಇದೆ.
ಹೈಲೈಟ್ಸ್: |
|
ಕಾನೂನು ತೊಡಕು ನಿವಾರಣೆ
ಉತ್ತರ ಬೆಂಗಳೂರಿನಲ್ಲಿ ರೂಪುಗೊಂಡಿರುವ ಡಾ. ಕೆ. ಶಿವರಾಮ ಕಾರಂತ ಬಡಾವಣೆ ಹಲವು ವರ್ಷಗಳಿಂದ ಕಾನೂನು ವಿವಾದಗಳಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಹೈಕೋರ್ಟ್ ನಿವೇಶನ ಹಂಚಿಕೆ ಹಾಗೂ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿಸಿರುವ ಹಿನ್ನೆಲೆಯಲ್ಲಿ ಬಡಾವಣೆಗೆ ಹೊಸ ಚೈತನ್ಯ ಬಂದಿದೆ.
ಸುಮಾರು 3,069 ಎಕರೆ ಪ್ರದೇಶದಲ್ಲಿ, ಆವಲಹಳ್ಳಿ, ರಾಮಗೊಂಡನಹಳ್ಳಿ, ಜಾರಕಬಂಡೆ ಕಾವಲ್ ಸೇರಿದಂತೆ 17 ಹಳ್ಳಿಗಳನ್ನು ಒಳಗೊಂಡಿರುವ ಈ ಬಡಾವಣೆ ದಶಕಕ್ಕೂ ಹೆಚ್ಚು ಕಾಲ ವಿವಿಧ ಕಾನೂನು ತೊಡಕುಗಳನ್ನು ಎದುರಿಸಿತ್ತು. ಸಮಸ್ಯೆ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ವಿಶೇಷ ಮೂವರು ಸದಸ್ಯರ ಸಮಿತಿಯನ್ನೂ ರಚಿಸಿತ್ತು.
http://Visit : www.suddidina.com
3,200 ಭೂಮಾಲೀಕರಿಗೆ 18 ಸಾವಿರ ಸೈಟ್
ಬಡಾವಣೆ ನಿರ್ಮಾಣಕ್ಕಾಗಿ ಸುಮಾರು 3,200 ರೈತರು ಮತ್ತು ಭೂಮಾಲೀಕರು ತಮ್ಮ ಜಮೀನು ನೀಡಿದ್ದಾರೆ. ಅವರ ತ್ಯಾಗಕ್ಕೆ ಪ್ರತಿಫಲವಾಗಿ ಸುಮಾರು 18 ಸಾವಿರ ನಿವೇಶನಗಳನ್ನು ಮೀಸಲಿಡಲಾಗಿದೆ. ಒಟ್ಟಾರೆ ಬಡಾವಣೆಯಲ್ಲಿ ವಿವಿಧ ಅಳತೆಯ 34,992 ನಿವೇಶನಗಳನ್ನು ರಚಿಸಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
ಆ.31ರಂದು ನಡೆಯುವ ಸಾಧ್ಯತೆಯಿರುವ ಕಾರ್ಯಕ್ರಮದಲ್ಲಿ 600ರಿಂದ 1,000 ಮಂದಿ ಭೂಮಾಲೀಕರಿಗೆ ಮುಖ್ಯಮಂತ್ರಿಗಳಿಂದ ಸಾಂಕೇತಿಕವಾಗಿ ನಿವೇಶನ ಹಂಚಿಕೆ ಮಾಡುವ ನಿರೀಕ್ಷೆಯಿದೆ. ಉಳಿದ ಫಲಾನುಭವಿಗಳಿಗೆ ಪ್ರತ್ಯೇಕ ಕೌಂಟರ್‌ಗಳ ಮೂಲಕ ಹಂಚಿಕೆ ಮಾಡುವ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ.
ಸಾರ್ವಜನಿಕರಿಗೂ ಅರ್ಜಿ ಸಲ್ಲಿಕೆಗೆ ಅವಕಾಶ
ಭೂಮಾಲೀಕರಿಗೆ ನಿವೇಶನ ಹಂಚಿಕೆಯ ಜೊತೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಗೂ ಚಾಲನೆ ನೀಡಲು ಬಿಡಿಎ ಮುಂದಾಗಿದೆ. ಇದರಿಂದ ಹಲವು ವರ್ಷಗಳಿಂದ ಕಾರಂತ ಬಡಾವಣೆಯಲ್ಲಿ ನಿವೇಶನ ಪಡೆಯುವ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೂ ಅವಕಾಶ ದೊರೆಯಲಿದೆ.
ಚದರ ಅಡಿಗೆ ₹6,000 ದರ
ಕಾರಂತ ಬಡಾವಣೆಯ ವಸತಿ ನಿವೇಶನಗಳ ಬೆಲೆಯನ್ನು ಚದರ ಅಡಿಗೆ ₹6,000 ಎಂದು ನಿಗದಿಪಡಿಸಲಾಗಿದೆ. ಮೂರು ವರ್ಷಗಳ ಹಿಂದೆ ಚದರ ಅಡಿಗೆ ₹5,000 ದರ ಪ್ರಸ್ತಾಪಿಸಲಾಗಿತ್ತು. ಇದೀಗ ₹1,000 ಹೆಚ್ಚಳ ಮಾಡಲಾಗಿದೆ.
ಪರಿಷ್ಕೃತ ದರದಂತೆ 30×40 ಅಡಿ, ಅಂದರೆ 1,200 ಚದರ ಅಡಿ ನಿವೇಶನಕ್ಕೆ ಸುಮಾರು ₹72 ಲಕ್ಷ ವೆಚ್ಚವಾಗಲಿದೆ.
ಹಲವು ವರ್ಷಗಳ ನಿರೀಕ್ಷೆಗೆ ತೆರೆ?
ನ್ಯಾಯಾಲಯದ ತೀರ್ಪು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳು ವೇಗ ಪಡೆದಿರುವ ಹಿನ್ನೆಲೆಯಲ್ಲಿ ಕಾರಂತ ಬಡಾವಣೆಯ ನಿವೇಶನ ಹಂಚಿಕೆ ಇದೀಗ ನಿರ್ಣಾಯಕ ಹಂತ ತಲುಪಿದೆ. ಆ.31ರ ಕಾರ್ಯಕ್ರಮ ಯಶಸ್ವಿಯಾಗಿ ನಡೆದರೆ, ಭೂಮಿ ನೀಡಿದ ಸಾವಿರಾರು ಕುಟುಂಬಗಳ ಹಲವು ವರ್ಷಗಳ ನಿರೀಕ್ಷೆಗೆ ತೆರೆ ಬೀಳುವುದರ ಜೊತೆಗೆ ಸಾರ್ವಜನಿಕರಿಗೂ ನಿವೇಶನ ಪಡೆಯುವ ದಾರಿ ಮತ್ತಷ್ಟು ಸ್ಪಷ್ಟವಾಗಲಿದೆ.

-
ಅಂತರಂಗ4 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ6 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ದಿನದ ಸುದ್ದಿ2 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ2 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ1 day agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ2 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ
-
ದಿನದ ಸುದ್ದಿ2 days agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ


