ಬಹಿರಂಗ
ಬುಲೆಟ್ straight hit….!

*ಹೆಂಗಸರು* ಕುಕ್ಕರ್ ಗೆ , ಗಂಡಸರು ಲಿಕ್ಕರ್ ಗೆ ಆಸೆ ಪಟ್ಟು ತಮ್ಮ ಅಮೂಲ್ಯವಾದ ಮತವನ್ನು ಮಾರಿಕೊಂಡರೆ ಮುಂದಿನ ದಿನಗಳಲ್ಲಿ ನಿಕ್ಕರೂ ಇಲ್ಲದಂತಾಗುತ್ತದೆ ಯೋಚಿಸಿ ಮತ ಚಲಾಯಿಸಿ…
ನಾನ್ ಈ ಮಾತನ್ನು ಯಾಕೆ ಹೇಳ್ತಿದ್ದೀನಿ ಅಂದ್ರೆ, ಇಂದಿನ ನಮ್ಮಗಳ ಸ್ಥಿತಿ ಧಾರುಣವಾಗಿದೆ…
ಈ ಪ್ರಜಾಪ್ರಭುತ್ವ ದಲ್ಲಿ ಯಾರನ್ನೋ ಪ್ರಜಾಪಾಲಕ ಅಂತ ಆಯ್ಕೆ ಮಾಡಿರ್ತೀವಿ, ಅವ್ರು ನಮ್ಮನ್ ಪಾಲನೆ, ಪೋಷಣೆ ಮಾಡ್ತನೆ ಅಂತ ಆಸೆ ಇಟ್ಕೊಂಡಿರ್ತೀವಿ, ಆದ್ರೆ ಮುಂದಿನ ದಿನಗಳಲ್ಲಿ ಅವರ ಹೇಳ್ದಂಗೆ ಕೇಳೋ ಪರಿಸ್ಥಿತಿ ನಲ್ಲಿ ನಾವ್ ಇರ್ತೀವಿ.. ಇಂಥ ಧಾರುಣ ಸ್ಥಿತಿ ಯಾರಿಗೂ ಬೇಡ…
ಈ ಹಾಳಾದ್ ರಾಜಕೀಯನೇ ಹಂಗೆ ರೀ… ಮೊದ್ಲು ಬಂದು ಕಾಲಿಗ್ ಬೀಳದೇನ್ ಕೇಳ್ತಿರಿ, ಅಮೇಲ್ ಕಾಲಿಗೆಲ್ಲಿ , ಹುಡಿಕೊಂಡ್ ಹೋದ್ರು ಕೈಗೆ ಸಿಗಕಿಲ್ಲ ಅವ್ರು….
ನಂಗು ಒಂದು ಕನಸಿತ್ತು ರೀ..
ಆ ಕನಸಲ್ಲಿ ಬರೀ ಪ್ರಶ್ನೆ ಗಳೇ…
ಆ ಪ್ರಶ್ನೆಗಳನ್ನು ಹುಡಿಕೊಂಡು ಹೋದ್ರೆ ಉತ್ತರಗಳೆ ಪ್ರಶ್ನಾರ್ಥಕ??
ಈ ರಾಜಕೀಯ ಅಂದ್ರೆ ಏನು, ರಾಜಕೀಯ ಅಂತ ಹೆಸರಿಟ್ಟೋರ್ ಯಾರು … ರಾಜಕೀಯ ಅನ್ನದ್ ನಮ್ ಗೆ ಬೇಕಾ…!???!!
ನಾನ್ ಸ್ಲೂಲ್ ನಲ್ಲಿ ಓದೋ ಟೈಮ್ ನಲ್ಲಿ ಪ್ರಜೆಗಳಿಂದ , ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ , ನಮ್ ಪ್ರಜಾಪ್ರಭುತ್ವ ಅಂತ ಏನೋ ಓದಿದ್ ನೆನಪು ಆದ್ರೆ ಈಗಿನ್ ಕಾಲದಲ್ಲಿ ಇದೆಲ್ಲ ಎಲ್ಲಿದೆ ಅನ್ನದೆ ನಂಗೆ ಗೊತ್ತಿಲ್ಲ… ಯಾಕಂದ್ರೆ ಅಲ್ಲಿ ಪ್ರಜೆಗಳಿಗೋಸ್ಕರ ಏನು ನಡಿತ್ತಿಲ್ಲ ಎಲ್ಲ ಅವರವರ ಪರಿವಾರದವರಿಗೆನೆ ನಡಿತ್ತಿರದು. ಅದೆ ಪ್ರಜೆಗಳಿಂದನೆ ಅಧಿಕಾರ ಇಡಿದೋರೆಲ್ಲ ಇವತ್ ಏನ್ ಮಾಡ್ತಿದ್ದಾರೆ…
ಒಂದ್ ಕ್ಷಣ ಯೋಚನೆ ಮಾಡಿ???
ಇದೇನಪ್ಪ ಇವ್ನು ಹುಚ್ಚನ್ ಥರ ಹೇಳ್ತಾವ್ನೆ ಅಂತ ಅನ್ಕೋ ಬೇಡಿ, ನನ್ನ ಹುಚ್ಚಾ ಅನ್ಕೊಂಡ್ರು ಪರ್ವಾಗಿಲ್ಲ.. ಜಸ್ಟ್ ಥಿಂಕ್ ಮಾಡಿ..!!!
ಪ್ರಜಾಪ್ರಭುತ್ವ ದಲ್ಲಿ ನಮ್ಮ ನಿಮ್ಮಂತ ಪ್ರಜೆಗಳ ಸ್ಥಿತಿ ಹೆಂಗಿದೆ,ನಮ್ ಹೆಂಡತಿ ಮಕ್ಕಳ ಸ್ಥಿತಿ ಹೆಂಗಿದೆ !! ಅದೇ !!! so called ರಾಜಕಾರಣಿಗಳು , ನಮ್ ನಾಯಕರುಗಳು ಅಂತ ನಾವೇನ್ ಅಟ್ಟಕ್ ಹೇರಿಸಿ, ಉಪ್ಪರಿಗೆ ಮೇಲೆ ಕೂರ್ಸಿದವಲ್ಲಾ ??? ಅವರೆಲ್ಲ ಹೆಂಗ್ ಇದಾರೆ,ಅವರ ಹೆಂಡತಿ ,ಮಕ್ಕಳೆಲ್ಲ ಹೆಂಗ್ ಇದಾರೆ ಯೋಚನೆ ಮಾಡಿ ??? ನಾವು ನೀವು
ಅದೇ ಕಿತ್ತೋಗಿರೋ ಮನೆಗಳು , ೧ರುಪಾಯಿ ಕೆಜೆ ಅಕ್ಕಿ ಅನ್ನ, ಬೇಳೆ ಸಾರು, ಅದೇ ಹಳೆ ಮೋಟರ್ ಸೈಕಲ್ ಗಳು , ನೇತಾಕ್ಕೊಂಡ್ ಹೋಗ್ತಿರೋ ಬಸ್ ಗಳು, ಕಿತ್ತೋಗಿರೋ ರೋಡುಗಳು, ಗುಂಡಿ ಬಿದ್ದಿರೋ ೋಡುಗಳು, ತುಕ್ಕಿಡಿದಿರುವ ಬೋರ್ಡುಗಳು, ಕಸ ಕಟ್ಕೊಂಡಿರುವ ಮೋರಿಗಳು, ದುರ್ನಾಥ ಹೊಡಿತಿರೋ ಸುಲಭ ಶೌಚಾಲಯಗಳು , ಅದೇ ಸರ್ಕಾರದ ಹಳೆ ಹರಕು ಮುರುಕ ಕಾಲೇಜುಗಳು , ಬಿದ್ದೋಗ್ತಿರೋ ಶಾಲೆಗಳು ,ತೂಕಡ್ಸೋ ಮೇಷ್ಟ್ರು ಗಳು , ಚೀಟಿ ವ್ಯಾಪಾರ ಮಾಡೋ ಮೇಡಂಗಳು… ಇವು ನಮ್ ಗಳ ಗಾಂಧಿ ಲೋಕ ,ಇವತ್ತು ಎಷ್ಟೋಜನಕ್ಕೆ ಮಲಗಕ್ಕೆ ಸೂರಿಲ್ಲ , ತಿನ್ನಕ್ಕೆ ಅನ್ನ ಇಲ್ಲಾ …ಅದೆ ಎಂ.ಎಲ್‌ಎ, ಎಂಪಿ ,ಮಂತ್ರಿಗಳ ಹೆಂಡತಿ ಮಕ್ಕಳಿಗೆ ಗಾದ್ರೆ ಏಸಿ ಕಾರಲ್ಲಿ ಓಡಾಟ, ಏಸಿ ಮನೆ , ಬಾಸುಮತಿ ಅಕ್ಕಿ , ಹೈಟೆಕ್ ಸ್ಕೂಲ್ಗಳು, ಫಾರಿನ್ ಹೈಯರ್ ಎಜುಕೇಶನ್, ಫಾರಿನ್ ಟ್ರಿಪ್ಗಳು …ಇನ್ನೂ ಬೇಜಾನು .
ನಮ್ ಅಣ್ತಂದಿರೆಲ್ಕ ಅದೆ ಕೂಲಿನಾಲಿ ಜೀವನ, ಆದ್ರೆ ಅವರ್ ಅಣ್ಣ ತಮ್ಮಂದಿರೆಲ್ಕಾ ತಾಲ್ಲೂಕು ಬೋರ್ಡ್ ಮೆಂಬರ್ಗಳು ,ಜಿಲ್ಲಾ ಪಂಚಾಯತ, ಎಲೆಕ್ಟೆಡ್ ಗಳು ಇನ್ನು ಹೇಳ್ತಾ ಹೋದ್ರೆ ಹೇಳಕ್ಕೆ ಸಾಲಲ್ಲ ನೀವೆ ಯೋಚನೆ ಮಾಡಿ ನಮ್ಗು ಅವರಿಗೂ ಇರೂ ಡಿಫರೆನ್ಸ್ … ಏನು ಅಂತ…??
ಇನ್ನು ಎಲೆಕ್ಷನ್ ಟೈಮ್ ಅತ್ರ ಬಂತು ಅಂದ್ರೆ ಮನೆ ಮನೆಗೆ ಬರದು, ಕಂಡ್‌ಕಂಡೋರ್ ಕಾಲಿಗೆಲ್ಲ ಬಿಳೋದು , ಸುಳ್ಳು ಸುಳ್ಳು ಆಶ್ವಾಸನೆ ಕೊಡದು, ಏನೆ ಸಮಸ್ಯೆ ಗಳಿದ್ರು ಚುನಾವಣಾ ಟೈಮ್ ನಲ್ಲೇ ಕೈ ಆಕದು, ಗರಿ ಗರಿ ನೋಟಗಳನ್ನು ಅಂಚದು, ಹೆಂಡ ಸಾರಾಯಿ ಕುಡ್ಸದು, ಸೀರೆ ಕುಕ್ಕರ್ ತರ್ಸದು, ಕೋಳಿ ಕೋಡದು , ಬಿರ್ಯಾನಿ ಊಟ ಆಕ್ಸದು , ಕಂಪನಿಗಳಲ್ಲಿ ಕೆಲಸ ಕೊಡ್ತೀನಿ ಅನ್ನದು, ಇನ್ನು ಮುಂತಾದವು ನೀವೆ ಯೋಚನೆ ಮಾಡಿ ಇರ್ಲಿ ಇವೆಲ್ಲ ಕತ್ತಲೆ ರಾತ್ರಿಯ ಕನಸುಗಳು.…
ಅಲ್ಲ ರೀ ನೀವೆ ಯೋಚನೆ ಮಾಡಿ , ನಮ್ಮನ್ ಸೇವೆ ಮಾಡ್ತೀನಿ ಅಂತ ಬಂದೋರ್ಗೆ ಇವೆಲ್ಲಾ ಬೇಕ… ಅವರ್ ಅವರು ಮಾಡೋ ಕೆಲಸ,ಅಭಿವೃದ್ದಿ ಕಾರ್ಯಗಳೆ ಅವರನ್ನ ಮತ್ತೆ ಆಯ್ಕೆ ಮಾಡ್ಬೇಕು , ಅಂತ ಕೆಲಸ ಮಾಡಿಲ್ಲ ಅಂದೋರೆ ತಾನೆ , ಪದೆ ಪದೆ ಪ್ರಚಾರ ಮಾಡದು, ಇಂತ ಪ್ರಚಾರಕ್ಕೆ ನಾವೆಲ್ಲರೂ ಬಲಿ ಆಗ್ಬೇಕ , ಬೇಡ ರೀ ಬೇಡ …
ನಿಮ್ಮ ಮತವನ್ನ ನೀವು ಮಾರ್ಕೊತಿರ ಅಂದ್ರೆ ನಿಮ್ ನಿಮ್ ನಿಯತ್ತನ್ನೆ ಮಾರ್ಕೋತಿರ ಅಂತ, ಇಂತ ನಿಯತ್ತಿಲ್ಲದೋರು ಬೆಜಾನ್ ಇದಾರೆ ಬಿಡಿ …
ನಮ್ ಜನ ಎಷ್ಟೇಳುದ್ರು ಉದ್ದಾರ ಆಗಲ್ಲ, ಯಾಕಂದ್ರೆ ಅವರಿಗೂ ಗೊತ್ತಿಲ್ಲ ನಾವ್ ಎಂತೋರ್ಗೆ ನಮ್ ಓಟ್ನಾ ಕೊಡ್ತಿದ್ದೀವಿ , ಅವರ್ ಏನೆನ್ ದಬ್ಬಾಕಿದ್ದಾರೆ ಅಂತಾ ನೀವೆ ಕೇಳ್ಕೊಳ್ಳಿ…. ಒಂದು ಕಟು ಸತ್ಯ ನಿಮ್ಗೆ ಹೇಳ್ತಿನಿ ಕೇಳಿ… ನಾವೆಲ್ಲ ಒಂದು ಸ್ಕೂಲಿಗೆ ನಮ್ ಮಕ್ಕಳನ್ನ ಜಸ್ಟ್ ಅಡ್ಮಿಷನ್ ಮಾಡ್ಸಬೇಕು ಅಂದ್ರೆ ತಂದೆ ತಾಯಿಯರು ಡಿಗ್ರಿ ಹೋಲ್ಡರ್ಸ್ ಆಗಿರ್ಬೇಕು ಅಂತರೆ, ಇನ್ನೂ ಈ ಸರ್ಕಾರ ದ A, B ,C ಗ್ರೇಡ್ ಕೆಲಸ ಮಾಡಕ್ಕೆ ಅಂದ್ರೆ SDA, FDA ,PDO , IAS ,IPS ಇಂತ ಜನಸಂಪರ್ಕ ಸೇವ ಕೆಲಸಕ್ಕೆ ಸೆಲೆಕ್ಟ್ ಆಗ್ಬೇಕು ಅಂದ್ರೆ ಅದಕ್ಕೂ ಒಂದು ರಿಟನ್ ಎಗ್ಸಾಂ ಅಮೇಲೆ ಮುಖಾಮುಖಿ ಇಂಟರ್ವ್ಯೂ ಆಗ್ಬೇಕು,
ಏನೆ ಆದರೂ ಯಾವುದೇ ಒಂದು ಉದ್ಯೋಗ ಮಾಡ್ಬೇಕು ಅಂದ್ರು ಅದಕ್ಕೆ ಇಂತದೆ ವಿದ್ಯಾರ್ಹತೆ ಬೇಕು, ಇಷ್ಟೇ ಮಾರ್ಕ್ಸ್ ತೆಗೆದು ಪಾಸ್ ಆಗ್ಬೇಕು , ದೈಹಿಕವಾಗಿ ಫಿಟ್ ಆಗಿರ್ಬೇಕು ಅಂತೆಲ್ಲಾ ಹತ್ತಾರು ಪರೀಕ್ಷೆ ಗಳು ನಮಗೆ ಇದೆ, ಆದ್ರೆ ನಮ್ಮನ್ನು ಉದ್ದಾರ ಮಾಡೋ so called ನಮ್ ನಾಯಕರು ಅಂತ ಹೇಳ್ತಿರಲ್ಲ ಅಂತ ಜನಪ್ರತಿನಿಧಿಗಳಿಗೆ ಯಾಕೆ, ಒಂದು ಮಾನಧಂಡ ಮಾಡಿ ಅವರಿಗೂ ಒಂದು ಪರೀಕ್ಷೆ ಮಾಡ್ಬಾರ್ದು.. !! ಅದ್ರಲ್ಲಿ ಅವರಿಗೂ ಕೂಡ ಸಾಮಾನ್ಯ ಜ್ಞಾನ, ಜನ ಸಾಮಾನ್ಯರ , ರೈತರ ಬಗ್ಗೆ ಮಾಹಿತಿ , ರಾಜನೀತಿ, ಇತಿಹಾಸ, ಪ್ರಾದೇಶಿಕ ಜ್ಞಾನ, ವಸ್ತುಸ್ಥಿತಿಯ ಅರಿವಿನ ಬಗ್ಗೆ ಅವರಿಗೂ ಒಂದು ಪರೀಕ್ಷೆ ಇಡ್ಲಿ , ಅವಾಗ ಗೊತ್ತಾಗುತ್ತೆ ಇವತ್ ಸಾಮನ್ಯ ಶ್ರೀ ಸಾಮನ್ಯನ ಕಷ್ಟ ಏನು , ಮಾರ್ಕೆಟ್ ನಲ್ಲಿ ತರಕಾರಿ ಬೆಲೆ ,ಡೈರಿಯಲ್ಲಿ ಲೀಟರ್ ಹಾಲಿನ ಬೆಲೆ, ಆಟೋ ಚಾರ್ಜ ಏನಾಗಿದೆ, ಇದೆಲ್ಲಾ ಗೊತ್ತಿದ್ರೆ ತಾನೆ ತಿಳಿಯದು , ಇವತ್ತು ಡಿಗ್ರಿ ವರೆಗು ಓದ್ಬೇಕು ಅನ್ನೋ ಎಷ್ಟೋ ಮಕ್ಕಳ ಕನಸು ಹಾಳಾಗೋಗಿದೆ, ಯಾಕಂದ್ರೆ ಅವರಲ್ಲಿ ಕಿತ್ತು ತಿನ್ನೋ ಬಡತನ ಇದ್ನೆಲ್ಲಾ ಹೊಗಲಾಡ್ಸದ ಯಾವಾಗ. ಇಂತ ಕಷ್ಟ ಸುಖ ಗೊತ್ತಿರ್ಬೇಕು ತಾನೆ , ಅದ್ರಲ್ಲಿ ಪಾಸ್ ಆಗಿ ಅರ್ಹರಾದವರಿಗೆ ಅಂತ ಸ್ಥಾನ ಕಲ್ಪಿಸಬೇಕು… ಹಿಂಗಾದಾಗಲ್ಲೆ ಗೊತ್ತಾಗದು ಇವತ್ ನಮ್ ಜನ ಏನೇನ್ ಪಡು ಪಡ್ತಿದ್ದಾರೆ ಅಂತ. ದುಡ್ಡಿನ ಮದದಿಂದ ಮೆರಿತ್ತಿದವ್ರು, ಅಪ್ಪನ್ ಕಾಲದಿಂದಲೂ ಆಲದ ಮರ ಆಕಿದು ನಾವೇ ಅನ್ಕೊಂಡು ಮೆರಿತ್ತಿದ್ದವರ ಯೋಗ್ಯತೆ ಕೂಡ ಗೊತ್ತಾಗದು…
ನಾವು ಜಸ್ಟ್ ಒಂದು ಜವಾನನ ಕೆಲಸಕ್ಕೆ ಅಪ್ಲೈ ಮಾಡುದ್ರು ಅದಕ್ಕೂ ಇಷ್ಟು ಅಂತ ಅಪ್ಲಿಕೇಷನ್ ಫೀಸ್ ಕಟ್ಬೇಕು, ಪೋಲಿಸ್ ಧೃಡಿಕರಣ ಆಗ್ಬೇಕು , ನಮ್ ಮೇಲೆ ಒಂದು ಕಂಪ್ಲೆಂಟ್ ಇರ್ಬಾರ್ದು ಅಂತೆಲ್ಲಾ ಹೇಳ್ತಾರೆ ಆದ್ರೆ ಕ್ರಿಮಿನಲ್ ಕೇಸ್ ಇದ್ದು, ರೌಡಿ ಶೀಟರ್ ಗಳಾಗಿ, ಆದೋರ್ನೆಲ್ಲ ಚುನಾವಣಾ ಅಭ್ಯರ್ಥಿ ಅಂತ ಹೇಳ್ತಾರೆ ಇದ್ನೆಲ್ಲ ನಿಲ್ಸದು ಯಾವಾಗ ??? .ಅವರಿಗೆ ಒಂದು ನ್ಯಾಯ ನಮಗೆ ಒಂದು ನ್ಯಾಯನ .
ಒಬ್ಬ ಕಿರಾತಕನಕೈಗೆ ಆಡಳಿತ ಕೊಟ್ರೆ ಏನ್ ತಾನೆ ಮಾಡ್ತಾನೆ!! ಇರದ್ ಬರೋದ್ನೆಲ್ಲಾ ಕೊಳ್ಳೆ ಹೊಡ್ಕೊಂಡ್ ಹೋಗ್ತಾನೆ…
ಇವತ್ತು ಒಬ್ಬ ರೈತ 50ಸಾವಿರ ಬ್ಯಾಂಕಲ್ಲಿ ಸಾಲ ತಗೋತಾನೆ , ಬ್ಯಾಂಕನವರು ಕೋಡೋ ಹಿಂಸೆಯಿಂದ ನೇಣಾಕೊಂಡು ಕೊನೆಗೊಮ್ಮೆ ಸಾಯ್ತಾನೆ.. ಆದ್ರೆ ಇವತ್ತು ಸಾವಿರಾರು ಕೋಟಿ ಸಾಲ ಮಾಡಿದ್ರು ಫಾರಿನ್ ನಲ್ಲಿ ಜುಮ್ ಅಂತಾ ಹೋಡಾಡ್ಕೊಂಡಿ ಇದ್ದಾರೆ. ಇಂತೋರ್ನೆಲ್ಕ ಒದ್ದು ಬುದ್ದಿ ಕಲಿಸೋ ಒಬ್ಬ ಸಾಮನ್ಯರಿಗೆ ನಿಮ್ ಅಧಿಕಾರ ನೀಡಿ.
ಯಾರೆ ಆಗ್ಲಿ ಯಾರಿಗೆ ಅರ್ಹತೆ ಇರುತ್ತೋ ಅಂತವರಿಗೆ ವಿಧಾನಸೌದದ ಎಂಟ್ರಿ ನೀಡ್ಬೇಕು…
ಅದೇ ಥರ ಗ್ರಾಮ ಪಂಚಾಯತ ಸದಸ್ಯನಿಗೂ ಕೂಡ ಒಂದ್ ಅರ್ಹತೆ ಬೇಕು , ಡಿಗ್ರಿ ಮಾಡಿರ್ಬೇಕು… ಆ ಊರಿನ ಹಾಗು ಹೋಗು ಗೊತ್ತಿರ್ಬೇಕು.. ಅಟ್ ಲಿಸ್ಟ್ ವಾರಕ್ಕೆ ಒಂದ್ ಟೈಮ್ ಜನಸಭೆ ಮಾಡ್ಬೇಕು ಆ ಊರಲ್ಲಿ ಏನೇನ ಅವಸ್ಯಕತೆ ಇದೆ ಅನ್ನದ್ನ ಅವನು ತಿಳಿಬೇಕು… ಒಳ್ಳೆ ಕುಡಿಯೋ ನೀರು, ವಿದ್ಯುತ್ ದೀಪದ ಕಂಬ ಸರಿಯಾಗಿದ್ಯ, ಮೋರಿನಲ್ಲಿ ನೀರು ಸರಿಯಾಗ ಹೋಗ್ತಿದ್ಯ ಅನ್ನೋ ಕಾಮನ್ ಸೆನ್ಸ್ ಅವನಿಗೆ ಇರ್ಬೇಕು.. ಅದೆ ಥರ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯತ, ಶಾಸಕ, ಸಂಸದ ಕೂಡ ಪ್ರತಿ ಹಳ್ಳಿ ಹಳ್ಳಿಗೂ ಬಂದು ಆ ಗ್ರಾಮದ ಕನಿಷ್ಟ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡ್ಬೇಕು… ಇನ್ನು ಡಿಗ್ರಿ ಮಾಡಿ ನಿರುದ್ಯೋಗಿ ಗಳಿಗೆ ಒಂದೊಳ್ಳೆ ಕೆಲಸ ಕಲ್ಪಿಸಿಕೊಡಬೇಕು. ಆಯ ತಾಲ್ಲೂಕಿನಲ್ಲಿ ಆದಷ್ಟು ಉದ್ಯೋಗ ಸೃಷ್ಟಿ ಮಾಡ್ಬೇಕು… ಇಂತ ಕೆಪಾಸಿಟರ್ ಯಾರಿದರೋ ಅವರಿಗೆ ಪಟ್ಟ ಕಟ್ಬೇಕು…
ಇನ್ನು ಮಂತ್ರಿ ಮಂಡಲದ ಬಗ್ಗೆ ಹೇಳದೆ ಆದ್ರೆ ಒಂದೊಂದು ಮಂತ್ರಿ ಪದವಿಗೂ ಇಂತಿಷ್ಟೇ ಅರ್ಹತೆ ಇರ್ಬೇಕು, ಉದಾಹರಣೆಗೆ ಆರೋಗ್ಯ ಮಂತ್ರಿ ಆಗ್ಬೇಕು ಅಂದ್ರೆ ಮೆಡಿಕಲ್ ಓದಿರ್ಬೇಕು, ಕ್ರೀಡಾ ಸಚಿವ ಸ್ಪೋರ್ಟ್ಸ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪದಕವನ್ನು ಗೆದ್ದಿರ್ಬೇಕು. ಕಾನೂನು ಸಚಿವ ಆಗೋನು ಕಾನೂನು ಪದವಿ ಪಡೆದಿರ್ಬೇಕು. ಲೋಕೋಪಯೋಗಿ ಸಚಿವ ಸಿವಿಲ್ ಇಂಜಿನಿಯರಿಂಗ್ ಮಾಡಿರ್ಬೇಕು. ಶಿಕ್ಷಣ ಸಚಿವ ಡಬಲ್ ಡಿಗ್ರಿ ಪಡೆದಿರಬೇಕು, ಮುಖ್ಯ ಮಂತ್ರಿ ಆಗೋನು ಎಲ್ಲಾ ವಿಷ್ಯದಲ್ಲೂ ಆಲ್ ರೌಂಡರ್ ಆಗಿರ್ಬೇಕು. ಇಂಗಿದಾಗ್ಲೆ ತಾನೆ ನಮ್‌ಗಳ ಕಷ್ಟ ನು ತಿಳಿಯದು .
ಇಂಗೆ ನೀವೆ ಯೋಚನೆ ಮಾಡಿ ಯಾವ್ ಯಾವ್ ಮಂತ್ರಿ ಗಳಿಗೆ ಏನೇನ್ ಅರ್ಹತೆ ಇರ್ಬೇಕು ಅಂತ…
ಆದ್ರೆ ಇವಗಿನ ಪರಿಸ್ಥಿತಿ ಏನಾಗಿದೆ ಗೊತ್ತಾ ??
ಒಬ್ಬ ಕೊಲೆಗಡುಕ ನಮ್ಮನ್ ಆಳೋ ಮಂತ್ರಿ, ಒಬ್ಬ ಕಳ್ಳ ಸರ್ಕಾರದ ಖಜಾನೆಯ ಕಾಯೋ ಸೇವಕ, ಒಬ್ಬ ರೇಪಿಷ್ಟ್ , ದರೋಡೆಕೋರರ ಕೈಗೆ ನಮ್ಮ ಆಡಳಿತ ಕೊಡ್ತಿದ್ತೀವಿ ಅಂದ್ರೆ ಏನಾಗ್ಬೋದು… ನೀವೆ ಯೋಚನೆ ಮಾಡಿ . ಇವೆಲ್ಲಕ್ಕೂ ಅರ್ಹರು ಅನ್ಸುದ್ರೆ ಅಂತವರಿಗೆ ನಿಮ್ ಮತಗಳನ್ನು ನೀಡಿ.. ಗೆಲ್ಲವರಿಗೂ ಕಾಲಿಗೆ ಬಿದ್ದು ಅಮೇಲ್ ಕೈಗೂ ಸಿಗದೆ ಹೋಡಾಡೋರ್ನಾ ನಂಬಕ್ ಹೋಗ್ಬೇಡಿ , ಕೆಲಸ ಮಾಡಿ ಜನತೆನ ರಕ್ಷಣೆ ಮಾಡಿ ಸಾಮನ್ಯರ ಕಷ್ಟ ನಷ್ಟ ಗಳಿಗೆ ಸ್ಪಂದನೆ ಮಾಡುವವರು
ಸಾಮನ್ಯರ ಸಾಮಾಜಿಕ ಬದುಕಿಗೆ, ಹೋರಾಟ ಮಾಡೋರು, ಅವರ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡೋರ್ನ, ಆಯ್ಕೆ ಮಾಡಿ.
ಅದೇ ಜಾತಿ ಹೆಸರಲ್ಲಿ ರಾಜಕೀಯ ಮಾಡಿ, ಜಾತಿ ಮೇಲೆ ಜಾತಿ ಎತ್ಕಟ್ಟಿ ಧರ್ಮದ ಮೇಲೆ ಧರ್ಮನ ಹೊಡ್ಯೋ ಚೀಪ್ ಪೊಲಿಟಿಕಲ್ ನಾ ನೀವೆ ತುಳಿದು ಸಾಯಿಸಿ… ರೀ ಇದ್ದಿದ್ ಒಂದೆ ಜಾಗ ಅನ್ಸುತ್ತೆ ಜಾತಿ ಧರ್ಮ ಗೊತ್ತಿಲ್ದೆ ಅಣ್ಣ ತಂಗಿ, ಅಕ್ಕ ತಮ್ಮನಂತೆ ಒಟ್ಟಾಗಿ ಇರ್ತಿದ್ದ ಜಾಗ ಶಾಲೆ, ಕಾಲೇಜು ಆದ್ರೆ ಇದೆ ಪಾಪಿಗಳ ಕಣ್ಣಿಗ್ ಬಿದ್ದು ಕಲಿತು ಒಂದಾಗಿ ಆಡೋ ಜಾಗದಲ್ಲೂ ಜಾತಿ ಅನ್ನೋ ವಿಷ ಬೀಜವನ್ನು ಬಿತ್ತಿದ್ದಾರೆ.. ಅಂತೋರ್ನೆಲ್ಲಾ ಹತ್ರಕ್ಕೆ ಸೇರ್ಸಕ್ಕೆ ಹೋಗ್ಬೇಡಿ…
ಇವಾಗಂತು ಸರ್ಕಾರದ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ..ಪಂಚಾಯತ ಆಫೀಸ್ ನಿಂದ, ಡಿಸಿ ಆಫೀಸ್ ನವರೆಗೂ ಲಂಚಾವತಾರ ಹೆಗ್ಗಿಲ್ದೆ ನಡಿತಿದೆ. ಲಂಚಾ ಇಲ್ದಲೆ ಇವಗ ಮಂಚಕ್ಕೂ ಸೇರ್ಸಲ್ಲ ಅಂತಾರೆ… ಇನ್ಕ್ಲೂಡಿಂಗ್ ಪೊಲೀಸ್ ಠಾಣೆ ಕೂಡ, ಎಲ್ಲೋ ಕೂತ್ಕೊಂಡು ಇಲ್ಲಿನ ಆರಕ್ಷಕರನ್ನ ಕಂಟ್ರೋಲ್ ಮಾಡ್ತವ್ರೆ… ಅದ್ನೆಲ್ಲಾ ಮೆಟ್ಟೋ ಒಬ್ಬ ಧಕ್ಷ ಪ್ರತಿನಿಧಿಯನ್ನ ನಾವು ಆಯ್ಕೆ ಮಾಡ್ಬೇಕು , ಪಾರದರ್ಶಕವಾಗಿ ಆಡಳಿತ ಮಾಡ್ಬೇಕು. ಅದ್ಬಿಟ್ಟು ತಿಂಗಳು ತಿಂಗಳು ರೋಲ್ ಕಾಲ್ ತಗೋಳೊ ಕಂತ್ರಿಗಳನಲ್ಲಾ…
ಒಬ್ಬ ಲೋಕೋಪಯೋಗಿ ಸಚಿವನಿಗೆ ಗೊತ್ತಿರ್ಬೇಕು ಒಂದು ರಸ್ತೆ ನಿರ್ಮಾಣ ಮಾಡ್ಬೇಕು ಅಂದ್ರೆ ಎಷ್ಟು ಮೂಟೆ ಸಿಮೆಂಟು ಆಕ್ಬೇಕು, ಎಷ್ಟು ಮರಳು ಆಕ್ಬೇಕು , ಎಂತ ಮರಳು ಬೇಕು, ಅದ್ಬಿಟ್ಟು ರಾತ್ರೋ ರಾತ್ರಿ ಕದ್ದು ಮರಳು ಸಾಗಿಸೋದಲ್ಲ … ಒಂದು ರೋಡ್ ಕ್ಯೂರಿಂಗ್ ಆಗಕ್ಕೆ ಎಷ್ಟು ದಿನ ನೀರಾಕ್ಬೇಕು., ಗುಣಮಟ್ಟದ ಡಾಂಬರಿಕರಣನ ಚೆಕ್ ಮಾಡಕ್ ಗೊತ್ತಿರ್ಬೇಕು ಇಲ್ಲಾ ಅಂದ್ರೆ ಕೋಟಿ ಕೋಟಿ ಲೂಟಿನೆ. ಕೆಲಸ ಆಗ್ದಲ್ಲೆ ಇರೋ ರೋಡ್ನಲ್ಲಿ ಬಿಲ್ ಮಾಡ್ಕೊಂಡು ಮೂರು ನಾಮ ಹಾಕ್ತರೆ… ಇದು ಯಾರಪ್ಪನ ದುಡ್ಡಲ್ಲಾ ನಾವು ನೀವು ಕಷ್ಟ ಪಟ್ಟು ನೀಡಿರೋ ಕಂದಾಯದ ದುಡ್ಡು…
ಯಾರಿಂದನೂ ನೀವು ಬದುಕು ಬೇಕಿಲ್ಲ ಯಾರೀಂದಲೋ ಅನ್ನ ತಿನ್ನಬೇಕಿಲ್ಲ ಆಗಾಗಿ ಯೋಚನೆ ಮಾಡಿ ಮತ ನೀಡಿ… ನಿನ್ನ ಮನೆ, ನಿನ್ನ ಊರು, ನಿನ್ನ ರಾಜ್ಯದ ಅಭಿವೃದ್ದಿ ನಿನ್ನ ಕೈಯಲ್ಲಿ. ನೀನು ಹಾಕುವ ಒಂದು ಮತದಲ್ಲಿದೆ..
.. ಸಾಮಾನ್ಯರಲ್ಲೇ ಸಾಮಾನ್ಯ ನಾಗಿ ಇರೋ ಒಬ್ಬ ಸಾಮಾನ್ಯನನ್ನು ಆಯ್ಕೆ ಮಾಡಿ
,ಒಬ್ಬ ಆಟೋ ಓಡ್ಸಿ ಬದುಕೋನ್ ಜೀವನದ ಕಷ್ಟಸುಖದ ಬಗ್ಗೆ ಗೊತ್ತಿರ್ಬೇಕು
ಅಂತೋನ್ ಆಯ್ಕೆಮಾಡಿ.
ಕನ್ನಡ ನೆಲ , ಜಲ, ಭಾಷೆ ಗಾಗಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿ, ಹೋರಾಡೋ ಒಬ್ಬ ಕನ್ನಾಡಾಭಿನಾನಿನ ಗದ್ದುಗೆಗೆ ಹೇರಿಸಿ ಕನ್ನಡದ ಪರ ನಿಲ್ಲಿಸಿ…ಇಲ್ಲಾಂದ್ರೆ ಕನ್ನಡ ನಮ್ದಲ್ಲ. ಈಗ್ಲೆ ನಮ್ ಕೈನಲ್ಲಿಲ್ಲ ,ನಮ್ ಮನೆ ಮಠ ಹೆಂಡತಿ ಮಕ್ಕಳೊಂದಿಗೆ ಅವರಿಗೆ ಮಾರ್ಕೋಬಿಡ್ತಾರೆ. ಫಾರೀನ್ ನಲ್ಲಿ ಹೋಡಾಡೋರ್ಗೆಲ್ಲಾ ಅಧಿಕಾರ ಕೊಟ್ಟು ಇರೋ ಬರೋ ಸರ್ಕಾರಿ ಜಮೀನನ್ನು ತಮ್ ಹೆಂಡತಿ, ಮಕ್ಕಳ ಹೆಸರಿಗೆ ಬರ್ಸಕೊಳ್ಳೋ ಕಳ್ ನನ್ ಮಕ್ಳಿಗೆ ನಿಮ್ ಅಧಿಕಾರ ನೀಡ್ಬೇಡಿ…
ಮತದಾನ ನಿಮ್ಮ ಹಕ್ಕು ,ನಿಮ್ಮ ಹಕ್ಕನ್ನು ನೀವು ಯಾರಿಗೂ ಮೂರು ಕಾಸಿಗೆ ಮಾರ್ಕೊಬೇಡಿ… ಬೇರೆ ಬೇರೆ ನೆರೆ ರಾಜ್ಯದಲ್ಲಿ, ದೇಶಗಳನ್ನು ನೋಡಿ ನಾವು ಅವರ ಸರಿ ಸಮಾನ ನಿಲ್ಬೇಕು ಅನ್ನುವ ಪರಿಕಲ್ಪನೆ ಇಟ್ಕೊಂಡು ಮತ ನೀಡಿ….
ನೋಡ್ರಪ್ಪ ಜಾಸ್ತಿ ಕೊರಿತ್ತಿದ್ದಾನೆ ಅಂತ ಮಾತ್ರ ಅನ್ಕೊಬೇಡಿ. ಇನ್ನು ಇದೆ ಆದ್ರೆ ಇಷ್ಟೆ ಸಾಕು ಇದು ನನ್ ಒಬ್ಬನ ಮಾತಲ್ಲ ನಿಮ್ಮೆಲ್ಲರ ಮಾತು .. ನೀವೇನ್ ಹೇಳಕ್ ಆಗಲ್ಲ ಅಂತ ಇದ್ರೋ ಅದನ್ನೇ ನಾನು ಇವತ್ ನಿಮ್ ಮುಂದೆ ಹೇಳ್ತಿರೋದು.…. ನಾನೇನಾದ್ರು ಹೇಳಿದ ಸರಿ ಅನ್ಸುದ್ರೆ ಇನ್ನು ನಾಲ್ಕು ಜನಕ್ಕೆ ಕಳ್ಸಿ, ಏನಾದ್ರು ತಪ್ಪಿದ್ರೆ ನಿಮ್ ಮನೆ ಮಗ ಅನ್ಕೊಂಡು ನನ್ ತಪ್ಪೇನು ಅಂತ ಹೇಳಿ ತಿದ್ದಿ…
ಇಂತಿ ನಿಮ್ ಪ್ರೀತಿಯ
-ವಿದ್ಯಾರ್ಥಿ ಮಿತ್ರ ಕಿರಣ್
ಬಹಿರಂಗ
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು..!

- ಆದಿತ್ಯ ಭಾರದ್ವಾಜ್
ಹುಟ್ಟಿನಿಂದ ನಾನು ಬ್ರಾಹ್ಮಣ. ನಾನು ಜಾತಿಯನ್ನು ನಿರಾಕರಿಸುವುದು ಸುಲಭ. ಆದರೆ ದಲಿತನಿಗೆ ಅದು ಸಾಧ್ಯವಿಲ್ಲ. ಹಾಗಾಗಿ ನಾನು ನನ್ನ ಜಾತಿಯನ್ನು ನಿರಾಕರಿಸದೆ ಅದರೊಂದಿಗೆ ಬರುವ previlege ಬಗ್ಗೆ ಸದಾಕಾಲ ಅರಿವು ಇಟ್ಟುಕೋಬೇಕು ಎಂಬುದು ನನ್ನ ನಿಲುವು.
ಪೊಗರು ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಮಾನಿಸಲಾಗಿದೆ ಅಂತ ಬ್ರಾಹ್ಮಣ ಅಭಿವೃದ್ಧಿ ನಿಗಮ, ಹಿಂದುತ್ವದ ಮುಖವಾಡ ತೊರೆದ ಸಂವಾದ ಅಂತಹ ಸಂಘ ಪರಿವಾರದ ಮಾಧ್ಯಮಗಳೂ ಸೇರಿದಂತೆ ಎಲ್ಲರೂ ಮುಗಿಬಿದ್ದು ನಿರ್ದೇಶಕರ ಕೈಲಿ ಕ್ಷಮೆ ಕೇಳಿಸಿದ್ದಾರೆ. ದೃಶ್ಯಗಳಿಗೆ ಕತ್ತರಿ ಹಾಕಲು ಧಮಕಿ ಹಾಕಿ ಒಪ್ಪಿಸಿದ್ದಾರೆ.
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ಬುಡಮೇಲು ಮಾಡುವ ನಡೆ ಇದು. ಈ ನಿಗಮ ಸ್ಥಾಪನೆಯ ಬಗ್ಗೆ ಅಂದೇ ಬಹಿರಂಗವಾಗಿ ಖಂಡಿಸದಿರುವುದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಮರಾಠರು, ಲಿಂಗಾಯತರಿಗೆ ನಿಗಮ ಸ್ಥಾಪಿಸಿದಾಗ ವಿರೋಧ ವ್ಯಕ್ತವಾಗಿದೆ. ಆದರೆ ಬ್ರಾಹ್ಮಣರಿಗೇ ನಿಗಮ ಸ್ಥಾಪಿಸಿದ ಮೇಲೆ ಯಾವ ಜಾತಿಗೆ ಬೇಕಾದರೂ ಸ್ಥಾಪಿಸಬಹುದಾಗಿದೆ. ಇದು ಸಾಮಾಜಿಕ ನ್ಯಾಯದ ಅಣಕ. ಎಲ್ಲ ಮೇಲ್ಜಾತಿಗಳ ನಿಗಮಗಳನ್ನು ರದ್ದು ಮಾಡಬೇಕಿದೆ.
ಇವತ್ತು ಇದೇ ಬ್ರಾಹ್ಮಣ ಅಭಿವೃದ್ಧಿ ನಿಗಮ ಒಂದು ಶಕ್ತಿಕೇಂದ್ರವಾಗಿ ತಲೆ ಎತ್ತಿದೆ. ಬ್ರಾಹ್ಮಣ್ಯವನ್ನು ಯಾಕ್ರೀ ಲೇವಡಿ ಮಾಡ್ತೀರಿ ಅಂತ ಅದರ ಅಧ್ಯಕ್ಷರು ಕೇಳ್ತಾರೆ ಇವತ್ತು! ಬ್ರಾಹ್ಮಣರು ಮತ್ತು ಫ್ಯೂಡಲ್ ಮೇಲ್ಜಾತಿಗಳು ಜಾತಿ ನಿಂದನೆ ಅಂತ ಅರಚಾಡುವುದೇ ಅಪಹಾಸ್ಯ. ಈ ಜಾತಿಗಳು ನಡೆಸಿರುವ ಅಟ್ರಾಸಿಟಿಗಳ ಹಿನ್ನೆಲೆಯಲ್ಲಿ ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದವರು ಟೀಕಿಸಿದರೆ, ಬೈದರೆ ಅದನ್ನು ಕೇಳಿಸಿಕೊಳ್ಳುವ ಸಹನೆಯನ್ನು ಈ ಸಮುದಾಯಗಳು ಬೆಳೆಸಿಕೊಳ್ಳಬೇಕಿದೆ.
ಇದನ್ನೂ ಓದಿ | ಗ್ಯಾಸ್ ಸಿಲಿಂಡರ್ ಮತ್ತೆ 25 ರೂ ಹೆಚ್ಚಳ ; ಇತಿಹಾಸದಲ್ಲೇ ಮೊದಲ ಸಲ ಒಂದೇ ತಿಂಗಳಲ್ಲಿ ಮೂರನೇ ಬಾರ ಗ್ಯಾಸ್ ಬೆಲೆ ಏರಿಕೆಯಾಗಿದ್ದು..!
ದನಿ ಇದ್ದವನದೇ ನ್ಯಾಯ ಎಂಬಂತಾಗಿದೆ. ಬಲಹೀನ ವರ್ಗಗಳನ್ನು ಕಾಪಾಡಲು ಇರುವ ಕಾನೂನು, ಮೀಸಲಾತಿಯಂತಹ ಸವಲತ್ತುಗಳನ್ನು, ಈ ಕೋಮುಗಳು ಹೊಡೆದುಕೊಳ್ಳುತ್ತಿವೆ, ತಮ್ಮ ಹಕ್ಕು ಎಂಬಂತೆ ಆಗ್ರಹಿಸುತ್ತಿವೆ. ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮೀಸಲಾತಿಯ ತಾತ್ವಿಕ ತಳಹದಿಯನ್ನೇ ಬುಡಮೇಲು ಮಾಡಿ ಬ್ರಾಹ್ಮಣರು, ವೈಶ್ಯರು ಒಂದು ಬೆರಳು ಕೂಡಾ ಎತ್ತದೇ ಹೊಡೆದುಕೊಂಡರು. ಬ್ರಾಹ್ಮಣರು ಇವತ್ತು ತಾವೇ ವಿಕ್ಟಿಂಗಳು ಎಂಬಂತೆ ಇತರ ಬಲಹೀನ ವರ್ಗಗಳೊಂದಿಗೆ ತಮ್ಮನ್ನೂ ಕಾಣಬೇಕು ಎಂಬಂತೆ ಆಡುತ್ತಿದ್ದು ಅದಕ್ಕೆ ಮನ್ನಣೆ ಸಿಗುತ್ತಿರುವುದು ದುರಂತ. ಇವತ್ತು ಹಿಂದುತ್ವದ ಮುಖವಾಡ ಹೊತ್ತು ಅಧಿಕಾರ ಹಿಡಿದಿರುವುದು ಬ್ರಾಹ್ಮಣಿಕೆಯೇ ಆಗಿರುವುದರಿಂದ ಇದು ಆಶ್ಚರ್ಯವೇನೂ ಅಲ್ಲ.
ಇನ್ನು ಪೊಗರು ಸಿನಿಮಾದಲ್ಲಿ ಹೆಣ್ಣನ್ನು ಬಿಂಬಿಸಿರುವ ಕುರಿತು ಪ್ರತಿಭಟನೆಗಳಾಗಬೇಕಿತ್ತು. “ಖರಾಬು” ಹಾಡಿಗೆ ಯೂಟ್ಯೂಬ್ ಅಲ್ಲಿ ಸುಮಾರು 21 ಕೋಟಿ views ಇವೆ! ಬದಲಿಗೆ ಬ್ರಾಹ್ಮಣರು ಪ್ರತಿಭಟನೆ ಮಾಡುತ್ತಿರುವುದು, ಅದನ್ನು ದಕ್ಕಿಸಿಕೊಂಡಿರುವುದು ಇವತ್ತಿನ ಕಾಲಮಾಪದ ರೂಪಕ.
(ಕೃಪೆ : ಫೇಸ್‌ಬುಕ್ ಬರಹ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಬಹಿರಂಗ
ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್’

ಪಂಜಾಬ್ನ ರೈತರು ಹೊಸ ವಸಾಹತುಶಾಹಿ ಕಾನೂನುಗಳಾದ ಹೊಸ ವಸಾಹತು ಕಾಯ್ದೆ ಮತ್ತು ‘ದೋಆಬ್ ಬಾರಿ’ ಕಾಯ್ದೆಯ ವಿರುದ್ಧ ಕುದಿಯುತ್ತಿದ್ದರು. ಈ ಕಾಯ್ದೆಗಳ ಹಿನ್ನೆಲೆ ಏನೆಂದರೆ, ಬ್ರಿಟಿಷ್ ಸರ್ಕಾರವು ಚಿನಾಬ್ ನದಿಯಿಂದ ನೀರನ್ನು ಸೆಳೆಯಲು ಕಾಲುವೆಗಳನ್ನು ನಿರ್ಮಿಸಿ, ಅದನ್ನು ಜನವಸತಿ ಇಲ್ಲದ ಪ್ರದೇಶಗಳಲ್ಲಿ ವಸಾಹತುಗಳನ್ನು ಸ್ಥಾಪಿಸಲು ಲಿಯಾಲ್ಪುರಕ್ಕೆ (ಈಗ ಪಾಕಿಸ್ತಾನದಲ್ಲಿದೆ) ಹರಿಸತೊಡಗಿತು.
ಹಲವಾರು ಸೌಕರ್ಯಗಳೊಂದಿಗೆ ಉಚಿತ ಭೂಮಿಯನ್ನು ನೀಡುವುದಾಗಿ ಭರವಸೆ ನೀಡಿದ ಬ್ರಿಟಿಷ್ ಸರ್ಕಾರ, ಜಲಂಧರ್, ಅಮೃತಸರ, ಮತ್ತು ಹೋಶಿಯಾರ್ಪುರದ ರೈತರು ಮತ್ತು ಮಾಜಿ ಸೈನಿಕರನ್ನು ಅಲ್ಲಿ ನೆಲೆಸಲು ಮನವೊಲಿಸಿತ್ತು.
ಈ ಜಿಲ್ಲೆಗಳ ರೈತರು ತಮ್ಮ ಮೂಲ ಭೂಮಿ ಮತ್ತು ಆಸ್ತಿಯನ್ನು ಬಿಟ್ಟು, ಹೊಸ ಪ್ರದೇಶಗಳಲ್ಲಿ ನೆಲೆಸಿದರು ಮತ್ತು ಬಂಜರು ಭೂಮಿಯನ್ನು ಕೃಷಿಗೆ ಯೋಗ್ಯವಾಗಿಸಲು ಶ್ರಮಿಸಿದರು. ಆದರೆ ಅವರು ಹಾಗೆ ಮಾಡಿದ ಕೂಡಲೇ, ಸರ್ಕಾರವು ಈ ಫಲವತ್ತಾದ ಭೂಮಿಯ ಒಡೆಯ ತಾನೇ ಎಂದು ಘೋಷಿಸಲು, ರೈತರಿಗೆ ಮಾಲೀಕತ್ವದ ಹಕ್ಕನ್ನು ನಿರಾಕರಿಸಲು ಹೊಸ ಕಾನೂನುಗಳನ್ನು ಜಾರಿಗೆ ತಂದಿತು.
ರೈತರು ಈ ಜಮೀನುಗಳಲ್ಲಿ ಮರಗಳನ್ನು ಕಡಿಯಲು ಸಾಧ್ಯವಿರಲಿಲ್ಲ, ಮನೆಗಳು ಅಥವಾ ಗುಡಿಸಲುಗಳನ್ನು ನಿರ್ಮಿಸಲು ಅಥವಾ ಅಂತಹ ಭೂಮಿಯನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಅವಕಾಶವಿರಲಿಲ್ಲ್ಲ ಮತ್ತು ಹಿರಿಯ ಮಗನಿಗೆ ಮಾತ್ರ ತನ್ನ ತಂದೆಯಿಂದ ಬೇಸಾಯ ಮಾಡಿದ ಭೂಮಿಗೆ ಪ್ರವೇಶಿಸಲು ಅವಕಾಶವಿತ್ತು.
ಇದರಲ್ಲಿ ಏನನ್ನಾದರೂ ಉಲ್ಲಂಘಿಸಿದರೆ, ಜಮೀನು ಸರ್ಕಾರದ ಆಸ್ತಿಯಾಗಿ ಬಿಡುತ್ತಿತ್ತು. 20 ಲಕ್ಷ ಎಕರೆ ಭೂಮಿಗೆ ನೀರಾವರಿ ಮಾಡಲು ಕಾಲುವೆಗಳ ಮೇಲೆ ವಿಧಿಸಲಾಗಿದ್ದ ತೆರಿಗೆಗಳಲ್ಲಿ, ಸರ್ಕಾರವು ತನ್ನ ಆರಂಭಿಕ ಹೂಡಿಕೆಯನ್ನು ಮರಳಿ ಪಡೆಯಿತಲ್ಲದೇ, ಅಬ್ಬಾಶಿ ತೆರಿಗೆಯ ಆಧಾರದಲ್ಲಿ ವಾರ್ಷಿಕ 7 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ಗಳಿಸತೊಡಗಿತು.
ಅಜಿತ್ ಸಿಂಗ್ ಮತ್ತು ಅವರ ಒಡನಾಡಿಗಳು ಈ ವಿಷಯಗಳ ಬಗ್ಗೆ ಜನಪ್ರಿಯ ಸಾಮೂಹಿಕ ಪ್ರತಿರೋಧವನ್ನು ಬೆಳೆಸಿದರು. ಈ ಆಂದೋಲನವನ್ನು ಮುನ್ನಡೆಸಲು ಕಾಂಗ್ರೆಸ್ ವಿಫಲವಾಗಿದೆ, ಮಸೂದೆಯನ್ನು ಈಗಾಗಲೇ ಕಾನೂನಾಗಿ ಅಂಗೀಕರಿಸಲಾಗಿದೆ ಎಂದು ವಾದಿಸಿದರು. ರೈತ ವಿರೋಧಿ ಕಾನೂನುಗಳಿಗೆ ನಿರ್ಭೀತ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದ ಅಜಿತ್ ಸಿಂಗ್ ಮತ್ತು ಅವರ ಭಾರತ್ ಮಾತಾ ಸಮಾಜದ ನಾಯಕತ್ವವನ್ನು ರೈತರು ಒಪ್ಪಿಕೊಂಡರು.
ಆಗ, ಲಾಹೋರ್ ಮತ್ತು ಅದರ ನೆರೆಹೊರೆಯ ಪ್ರದೇಶಗಳಲ್ಲಿ ಸಾವಿರಾರು ಜನರು ಭಾಗವಹಿಸಿದ ರ್ಯಾಲಿಗಳು, ಪ್ರದರ್ಶನಗಳು ಮತ್ತು ಸಾಮೂಹಿಕ ಸಮಾವೇಶಗಳ ನಿಜವಾದ ಅಲೆ ಕಾಣಿಸಿಕೊಂಡಿತು. ಈ ಸಭೆಗಳು ಈ ದಮನಕಾರಿ ಕಾನೂನುಗಳ ಬಗ್ಗೆ ಮತ್ತು ಬ್ರಿಟಿಷ್ ವಸಾಹತುಶಾಹಿಯಿಂದ ಧ್ವಂಸಗೊಂಡ ರಾಷ್ಟ್ರದ ನಿಜವಾದ ಚಿತ್ರಣದ ಬಗ್ಗೆ ಚರ್ಚಿಸಿದವು.
ಅಂತಿಮವಾಗಿ ವಿದೇಶಿ ಆಡಳಿತದ ವಿರುದ್ಧ ಸಂಪೂರ್ಣ ದಂಗೆಗಾಗಿ ಪ್ರಚೋದಿಸುವ ಕರೆಯೊಂದಿಗೆ ಕೊನೆಗೊಂಡವು. ಅಜಿತ್ ಸಿಂಗ್ ಅವರ ಭಾಷಣಗಳನ್ನು ಕೇಳದಂತೆ ನಿಷೇಧ ಹೊರಡಿಸಲಾಗಿತ್ತು!
(1907 ರ ಮಾರ್ಚ್ 3 ರಂದು ಲಿಯಾಲ್ಪುರದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ, ‘ಜಂಗ್ ಸ್ಯಾಲ್’ ಪತ್ರಿಕೆಯ ಸಂಪಾದಕ ಬಂಕೆ ದಯಾಲ್ ಅವರು, “ಪಗ್ಡಿ ಸಂಭಲ್ ಜಟ್ಟಾ, ಪಗ್ಡಿ ಸಂಭಾಲ್ ಓಯೆ” ಹಾಡನ್ನು ಪರಿಚಯಿಸಿದರು. ಅದು ಚಳವಳಿಯ ಸಂಕೇತ ಮತ್ತು ಆತ್ಮವಾಯಿತು.)
(ಕೃಪೆ : Mass Media Foundation, Delhi)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಬಹಿರಂಗ
ಪಾಂಡವರಿಗೂ ಭಾವ, ಕೌರವರಿಗೂ ಭಾವ..!

- ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರರು,ಮುಂಬೈ
ಮೇಲಿನದು ಕುಂದಾಪ್ರಕನ್ನಡದ ಒಂದು ನುಡಿಗಟ್ಟು.
ಯಾರಿಂದಲಾದರೂ ‘ಫ್ರೆಂಡ್ಸ್ ರಿಕ್ವೆಸ್ಟ್’ ಬಂದಾಗ ಅದನ್ನು ಒಪ್ಪಿಕೊಳ್ಳಲು ‘ಮ್ಯುಚುಅಲ್ ಫ್ರೆಂಡ್ಸ್’ ಪಟ್ಟಿ ನೋಡುವುದು ಮೊದಲ ಕ್ರಮ. ಈಗೀಗ ಅದೂ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಮೊನ್ನೆ ಒಬ್ಬರಿಂದ ‘ಫ್ರೆಂಡ್ಸ್ ರಿಕ್ವೆಸ್ಟ್’ ಬಂತು.
ನಾನು ಯಾವುಯಾವುದನ್ನು ಜೀವವಿರೋಧಿ, ಮನುಷ್ಯ ವಿರೋಧಿ, ಕ್ರೌರ್ಯ, ಹಿಂಸೆ ಎಂದು ಪರಿಗಣಿಸಿ ಪಾಲಿಸುವುದಿಲ್ಲವೋ ಅದೆಲ್ಲವನ್ನು ಅವರು ಶಿರಸಾವಹಿಸಿ ಪಾಲಿಸುವವರು. ಆ ‘ಫ್ರೆಂಡ್ಸ್ ರಿಕ್ವೆಸ್ಟ’ನ್ನು ‘ಅಸೆಪ್ಟ್’ ಮಾಡುವ ಪ್ರಶ್ನೆಯೇ ಇರಲಿಲ್ಲ.
ಆದರೂ ಕುತೂಹಲಕ್ಕೆ ‘ಮ್ಯುಚುಅಲ್ ಫ್ರೆಂಡ್ಸ್’ ಪಟ್ಟಿ ನೋಡಿದರೆ ಅಲ್ಲಿ ನೂರಾರು ಹೆಸರುಗಳಿದ್ದವು! ಹಾಗಾಗಿ, ಇತ್ತೀಚೆಗೆ ಇಂತಹ ‘ಫ್ರೆಂಡ್ಸ್ ರಿಕ್ವೆಸ್ಟ್’ ಗಳನ್ನು ಡಿಲೀಟ್ ಮಾಡುವ ಜೊತೆ ಇಂತಹ ‘ಫ್ರೆಂಡ್ಸ್’ ಗಳನ್ನು ‘ಅನ್ಫ್ರೆಂಡ್’ ಮಾಡುವುದೂ ಅನೀವಾರ್ಯವಾಗುತ್ತಿದೆ. ಈ ಕಾರಣಕ್ಕಾಗಿಯೇ ನನ್ನ ‘ಫ್ರೆಂಡ್ಸ್ ಲಿಸ್ಟ್’ ದಿನೇ ದಿನೇ ಚಿಕ್ಕದಾಗುತ್ತ ಹೋಗುತ್ತಿದೆ!
ಇದರಿಂದ ಅವರಿಗೇನೂ ನಷ್ಟವಿಲ್ಲ, ನಿಜ. ಆದರೆ, ನನಗೆ ಲಾಭವಿದೆ. ಹೇಗೆಂದರೆ, ಉದಾಹಣೆಗೆ, ಜಾತಿ ವಿಚಾರ ತೆಗೆದುಕೊಳ್ಳಿ. ನನಗಿದು ಜೀವವಿರೋಧಿ ಕ್ರಮ ಮಾತ್ರವಲ್ಲ, ಇದೊಂದು ಹೇಯ ಕ್ರೌರ್ಯವೂ ಹೌದು. ಇದನ್ನು ಯಾವುದೇ ಕಾರಣ ಕೊಟ್ಟು ಸಮರ್ಥಿಸುವವರ ಜೊತೆ ಸ್ನೇಹ ಸಾಧ್ಯವೇ ಇಲ್ಲ.
ಅವರೊಂದಿಗೆ ಕೇವಲ ಮನುಷ್ಯ ಸಂಬಂಧ ಇಟ್ಟುಕೂಳ್ಳಬಹುದೇ ವಿನಃ ಸ್ನೇಹ ಸಂಬಂಧ ಸಾಧ್ಯವೇ ಇಲ್ಲ. ನನ್ನ ಪ್ರಕಾರ ಈ ಫೇಸ್ ಬುಕ್ ಎಂಬುವುದು ಸ್ನೇಹ ಸಂಬಂಧಕ್ಕಿರುವ ಒಂದು ಸೋಶಿಯಲ್ ಪ್ಲಾಟ್ ಫಾರ್ಮ್.
ಇಲ್ಲಿ ‘ಫ್ರೆಂಡ್ಸ್’ ಅಲ್ಲದವರು ‘ಸ್ಟೇಟಸ್’ಗಳನ್ನು ನೋಡಲು, ಅವುಗಳಿಗೆ ‘ಕಮೆಂಟ್ಸ್’ ಮಾಡಲು ಅವಕಾಶವಿದೆ ನಿಜ. ಆದರೆ, ಹಾಗೆ ಮಾಡುವ ‘ಕಮೆಂಟ್ಸ್’ ಗಳು ಕನಿಷ್ಟ ನಾಗರಿಕ ಸೌಜನ್ಯದ ಮಿತಿಯೊಳಗಿದ್ದರೆ ಅದು ಅವರಿಗೇ ಶೋಭೆ. ಇಲ್ಲವಾದರೆ, ಅವರಿನ್ನೂ ಮನುಷ್ಯರಾಗಿಲ್ಲ ಎಂದು ಕನಿಕರ ಪಡುತ್ತೇನೆ, ಅಷ್ಟೇ.
ಅಂದಹಾಗೇ, ನನಗೆ ಅತೀ ಹೆಚ್ಚಿನ ಸಂಖ್ಯೆಯ ‘ಮ್ಯುಚುಅಲ್ ಫ್ರೆಂಡ್ಸ್’ ಗಳಿರುವುದು ಕ್ರಮವಾಗಿ, ಮತ್ತು ರಾಜಾರಾಮ್ ತಲ್ಲೂರು ಜೊತೆ ಎಂಬುವುದು ತುಂಬಾ ಖುಷಿ ಕೊಡುವ ಸಂಗತಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ಅಂತರಂಗ5 days ago
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!
-
ಭಾವ ಭೈರಾಗಿ6 days ago
ಕರುಣಾಳು ಅವನು, ಅವನು ನನ್ನವನು..!
-
ದಿನದ ಸುದ್ದಿ5 days ago
ದಿಶಾ ಕೇಸ್ | ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ..! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು..!
-
ದಿನದ ಸುದ್ದಿ5 days ago
ಬಡವರನ್ನು ಸಬಲೀಕರಣಗೊಳಿಸಲು ಉಚಿತ ಅನಿಲ ಸಂಪರ್ಕ ನೀಡಿದ್ದೇವೆ : ಪ್ರಧಾನಿ ಮೋದಿ
-
ಲೈಫ್ ಸ್ಟೈಲ್5 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ಕ್ರೀಡೆ5 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್5 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ
-
ಭಾವ ಭೈರಾಗಿ5 days ago
ಕವಿತೆ | ಅವಳು