ಬಹಿರಂಗ
ಕಿಂಗ್ v/s ಕಿಂಗ್ ಮೇಕರ್

ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು………..ಅಂತಾ ಹಿಂದೆ ಈ ಸಾಂಗ್ ನ ನೀವೆಲ್ಲಾ ಕೇಳಿದ್ರ ಅಲ್ವಾ??? ಇವಗಾ ಇದೆ ತರ ಇನ್ನೊಂದು ಸಾಂಗ್ ನಾನೆ ಹೇಳ್ತೀನಿ ಕೇಳಿ.., *ತೆನೆ ಹೊತ್ತ ಹೆಂಗಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು* ಹೌದು ಈ ಮಾತ್ನಾ ಇವ್ನು ಯಾಕೇಳ್ತಾವ್ನೆ ಅಂತಾ ಅನ್ಕೊಂಡ್ರ ಅದ್ಕೂ ಒಂದು reason ಅಯ್ತೆ … ತಿಂಗಳಾರ ಗಟ್ಲೆ ಹೋಡಾಡ್ಕೊಂಡು ಪ್ರಚಾರ ಮಾಡ್ಕೊಂಡು, ಸಿಕ್ ಸಿಕ್ಕೋರ್ ಕಾಲಿಗೆಲ್ಲಾ ಬಿದ್ಕೊಂಡು ಎಲೆಕ್ಷನ್ ನ ಮಾಡಿದ್ರು . ಇವತ್ತು ಆ world ವಾರ್ ಗೆ seal ಒತ್ತಿದಾಯ್ತು… Certificate ಕೊಟ್ಟಿದಾಯ್ತು. ಅಂದ್ರೆ final ರಿಸಲ್ಟ್ ಬಂದಿದಾಯ್ತು… ನೀವೇನು ತುಂಬಾ ದಿನಗಳಿಂದ ಕಾತುರದಿಂದ ಕಾಯ್ತಿದ್ರ ಕರ್ನಾಟಕದ ಕುರುಕ್ಷೇತ್ರ ಕ್ಕೆ ತೆರೆ ಬಿದ್ದಾಯ್ತು.. ಕೆಲವರು ಗೆದ್ದಾಯ್ತು , ಮೆರಿತ್ತಿದವ್ರು ಸೋತಾಯ್ತು… ಎಲ್ಲಾರ ಲೆಕ್ಕಾಚಾರನು ಉಲ್ಟಾ ಹೊಡೆದಾಯ್ತು…
ದೊಡ್ಡ ದೊಡ್ದ minister ಗಳನ್ನಮನೆಗ್ ಕಳ್ಸಿದ್ದು ಆಯ್ತು.. ಹೊಸ ಹುಡುಗ್ರುನ್ನ 3 ನೇ ಮಹಡಿಗೆ ತಳ್ಳಿದ್ದು ಆಯ್ತು… ಅವ್ರೇನ ಕಿತ್ ದಬ್ಬಾಕ್ತರೋ ನೋಡ್ಬೇಕು??
ಬಿಡಿ ಎಲ್ಲರ್ಗೂ ಗೊತ್ತಾಯ್ತು… ಇನ್ನೇನಿದ್ರು ಚದುರಂಗದಾಟ ಶುರು ಮಾಡೋ ಸಮಯ…
ನಂಗೆ ಒನ್ ಚಿಕ್ಕ flashback ಕಥೆ ನೆನ್ಪಾಯ್ತು , ನನ್ನ ಕನ್ನಡ madium ಇಂದ 8ನೇಕ್ಲಾಸ್ ಗೆ ಇಂಗ್ಲಿಷ್ medium ಗೆ ಸೇರ್ಸುದ್ರು ಅವಾಗ 8ನೇಕ್ಲಾಸಿನ‌್ result ಬಂತು ಆ ಟೈಮ್ ನಲ್ಲಿ ನಮ್ ಊರಿನ್ ಹುಡ್ಗಿ ಬೆಂಗಳೂರಲ್ಲಿ ಓದ್ತಿದ್ಲು 95% ಏನೋ ತಗೊಂಡಿದ್ಲಂತೆ ಆದ್ರೆ results ಬಂದಿದ್ ದಿನ ಮಾರ್ಕ್ ಕಡಿಮೆ ಆಯ್ತು ಅಂತಾ ಸಿಕ್ಕಾ ಪಟ್ಡೆ ಅಳ್ತಿದ್ಲು … ಇನ್ನೊಂದ್ ಕಡೆ ನಾನು ನಮ್ ದೋಸ್ತಿ ಸ್ಕೂಲ್ ಕಾಂಪೌಂಡ್ ಮೇಲೆ ಕೂತ್ಕೊಂಡು ಜಯಮ್ಮನ್ ಅಂಗಡಿ ಕಾರಸೇವೆ ಇನ್ಕೊಂಡು ಅರಾಮಾಗ್ ಇದ್ದೋ … ಆಗ ನಂದು 48 % ಮಾರ್ಕ್ಸ್ ..ಅಮೇಕ್ ಮುಂದುಕ್ ಏನೆ ಬೇಕು ಅಂದ್ರು ನನ್ನತ್ರನೆ ಕೇಳಕ್ ಬರ್ತಿದ್ಲೂ… ಎಲ್ಲೆ ಹೊಗ್ಬೇಕು ಅಂದ್ರು ನನ್ನೆ ಕರ್ಕೊಂಡು ಹೋಗ್ತಿದ್ಲು… ಅವಳು 95 ತಗ್ದಿದ್ರು ನನ್ ಬಿಟ್ ಏನು ಮಾಡಂಗ್ ಇರ್ಲಿಲ್ಲ…
ಇವನ್ಯಾರ ಇದನ್ಯಾಕ್ ಹೇಳ್ತಾವ್ನೇ ಅನ್ಕೋಬೋದು ಅಲ್ಲೆ ನೋಡಿ ಇರದು…
ಇವತ್ತಿನ ಫಲಿತಾಂಶ ಎಲ್ಲಾರು ನೋಡಿದ್ದೀರ , ಏನಾಯ್ತು… ನೆನ್ನೆನೆ ದಾವಣಗೆರೆಯಲ್ಲಿ ರಾತ್ರೋ ರಾತ್ರಿನೆ ಮಳೆ ಬಂದಾಗ್ಲೆ ಹೇಳ್ದೆ ನಾಳೆ ಬೆಳಗ್ಗೆ ಬೆರಕೆ ಕಟ್ಟಿದ್ ಸಾಂಬಾರೆ ಗತಿ ಅಂತ!!! ಹಂಗೆ ಆಯ್ತಾಲ…!!!
ಇಷ್ಟ್ ದಿನ ಅಲ್ಲಾಡ್ಸಿದ್ ಕೈ ಬಿದ್ದೋಯ್ತು… ಕೆರೆ ಹೂವ ದೊಡ್ಡದಾಯ್ತು… ಗದ್ದೆ ಭತ್ತ ಎಳ್ಸಾಗೇ ಹೋಯ್ತು , ಈಗ ಕೈಗೆ ಉಸಿರಾಯ್ತು…
ಜೈಲ್ಗೋಗ್ ಬಂದವ , ಜೈಲ್ಗೋಗ್ ಬಂದವ ಅಂತಾ ಹೋಗಿದ್ ಕಡೆ ಎಲ್ಲಾ ಜರಿತಿದ್ ಸಿದ್ರಾಮಣ್ಣ , ಜೈಲ್ಗೋಗ್ ಬಂದೋರ್ಗೆ ಜಾಸ್ತಿ ಕೊಟ್ ಬಂದಾವ್ರೆ….
ನಮ್ ಸೂಟು ಬೂಟು ತಾತ ರಾಜ್ಯ ಸುತ್ತಿ ಸುತ್ತಿ ಕೊನೆಗು ತಮ್ ಬುಟ್ಟಿಗೆ 104 ಹಾಕೋಬಿಟ್ರು. ಇನ್ನು ಒನ್ ಮ್ಯಾನ್ ಆರ್ಮಿ ಸಿದ್ರಾಮಣ್ಣನ ಮೈಸೂರ ಬಿಡ್ಸಿ ಬಾದಾಮಿನಲ್ಲಿ ಎಬ್ಸಿ 78 ಹಿಡ್ಸುದ್ರು… ಇನ್ನಾ ಹೋಂ ಟೀಂ ಕುಮಾರಣ್ಣ ಒಂದ್ ಸರಿ ಮಾಡಿದ್ mistakes ಇಂದಾ ಇನ್ನು ಸುದಾರ್ಸ್ಕೋತಾವ್ರೆ.. ಒಂದ್ ಚಾನ್ಸ್ ಕೊಟ್ ನೋಡಿ ಅಂತಾ ಕೇಳ್ಕೊಂಡ್ರು .. ಆದ್ರೇನ ಪ್ರಯೋಜನ ಮನೆ ಒಂದು ಮೂರು ಬಾಗಿಲು ಅಂದಾಂಗೆ ಮನೆ ಜಗಳ ಊರ್ನೊರ್ಗೆ ಗೊತ್ತಾದ್ರೆ ಹೆಂಗೆ…? ಹಿಂಗೆನೆ..!! ಹಂಗೋ ಹಿಂಗೋ , ಅಲ್ಲಲ್ಲಿ ಕೈ ಕಟ್ ಮಾಡಿ , ಕೆರೆಲಿ ತಾವರೆ ಹೂವ ಕಿತ್ತಾಕಿ 38 ಮಾಡ್ಕೋಬಿಟ್ರು… ಈಗಾ ಅಲ್ಲೆ ಇರದು ನೋಡಿ ಆಟ…ಬಗುಣಿ ಗೂಟ…!!!
ಮ್ಯಾಜಿಕ್ ನಂಬರ್ ಆಡ್ಬೇಕು ಅಂದ್ರೆ , ಯಡ್ಯೂರ್ ಗೆ ಇನ್ನೂ ಲಕ್ಕಿ ನಂಬರ್ 9 ಬೇಕೆ ಬೇಕು… Distinction ತಗೊಂಡ್ರು grace ಮಾರ್ಕ್ಸ್ ಇಲ್ದಲೆ ಪಾಸ್ ಆಗಲ್ಲ…
ಮ್ಯಾಜಿಕ್ ಮಾಡ್ದಲೆ ಆಟ ಆಡಕ್ ಆಗಲ್ಲ.. ಇನ್ನಾ
ಆಪರೇಷನ್ ಮಾಡಕ್ ಟೈಮ್ ಇಲ್ಲಾ ..!! ಕಾಳ್ ಹಾಕಕ್ ನೋಡ್ತಾವ್ರೆ ಇನ್ನೂ ಯಾವ್ ಕುರಿನು ಸಿಕ್ಕಿಲ್ಲ.. ಅಲ್ದೆ ಹೋಂ ಟೀಂ ಅಂತು ಸೇರಲ್ಲ ಅನ್ಕೊಂಡು , ಕೋರ್ಟು ಕಛೇರಿ ಅಂತಾವ್ರೆ….
ಆದ್ರೆ ನಮ್ ಸಿದ್ರಾಮಣ್ಣ ಸುಮ್ನೀರ್ತಾರ?? ಇರಲ್ಲಾ..???
ಅವರ್ ಅಪ್ಪನಾಣೆ ಅವನು ಸಿಎಂ ಆಗಲ್ಲ ಅಂತಿದ್ ಸಿದ್ದಣ್ಣ ಅವರ್ ಅಪ್ಪನೆ ಬೇಕು ಅಂತಾವ್ರೆ..
ಹಳೆ ಹೆಂಡ್ರು ಪಾದವೇ ಗತಿ ಅಂದಂಗೆ ಇರೋ ಬರೋರ್ ನೆಲ್ಲಾ ಎತ್ತಾಕೊಂಡು, ಪವರ್ ಸಪ್ಲೈ ಇಟ್ಕೊಂಡು ದೊಡ್ ಗೌಡ್ರು ಕಡೆ ಮುಖ ಮಾಡ್ಕೊಂಟು, ಹೆಗ್ಲು ಮೇಲೆ ಟವಲ್ ಹಾಕೊಂಡು ಓಡ್ ಬಂದವ್ರೆ…
ಹಿಂದೆ ಫುಲ್ ಇನ್ನಿಂಗ್ಸ್ ಆಟ ಆಡಿದ್ ಕ್ಯಾಪ್ಟನ್ ಕೂಲ್ ಸಿದ್ರಾಮಣ್ಣನು 78 ತಗೊಂಡ್ರು . ಇರೋ 38ನ ಬಿಡಕ್ ಹಾಗ್ತಿಲ್ಲ… ಅವರ್ನ ಬಿಟ್ರೆ ಕೆಟ್ವಿ ಅನ್ಕೊಂಡು ಕೈ ಕಟ್ ಕುಂತವ್ರೆ…
ಇಬ್ರು ಸೇರುದ್ರೆ 116 ಆಯ್ತಿವಿ, ಅಂಗೋ ಇಂಗೋ 3 ನಾಮ ಆಕುದ್ರು 113 , ಸಾಕಲ್ಲ ಆಡಕ್ಕೆ ಗೇಮ್ ಅಂತಾ ರಾಜ್ಯಪಾಲರ ಕಡೇ ಹೊಂಟವ್ರೆ…
ಇನ್ನಾ ಇರೋ ಕುದುರೆ ಗಳನ್ನ ಹಾರಿಸ್ಕೊಂಡ್ ಹೋದ್ರೆ ಕಷ್ಟ ಅನ್ಕೊಂಡು ರೆಸಾರ್ಟ್ ಗೆ ಅಟ್ಟಕ್ಕೆ ಪ್ಲಾನ್ ಹಾಕವ್ರೆ… ಮಲ್ಲು ಆಂಟಿ ಊರಿಗೋ , ಭಲ್ಲೇ ಭಲ್ಲೇ ಬಾರ್ಗೋ ಗಾಡಿ ಬಿಡ್ತಾವೆ…
ನೋಡ್ಬೇಕು ಎಷ್ಟೆಷ್ಟ್ ಕುದುರೆಗಳು ಸೇಲ್ ಆಯ್ತವೋ ,ಇಲ್ಲಾ ಹೈಜಾಕ್ ಆಯ್ತವೋ !! ಇಲ್ಲಾ ಸೂಟ್ ಆಸೆಗೆ ಅವೇ ಬಿಟ್ ಓಡೋಯ್ತವೋ !!! ನಿಯತ್ತಾಗಿ ಟಿಕೆಟ್ ಕೊಟ್ಟು ಗೆಲ್ಸಿದ್ಕೆ ಬಾಲ ಹಿಡಿತವೋ ??? ಏನೆ ಆದ್ರೂ ಕುದುರೆ ಬಾಲಕ್ ಈ ಟೈಮ್ ನಲ್ಲಿ ಕಟ್ಟೋ ಬೆಲೆ ಎಲ್ಲೂ ಕಟ್ಟಲ್ಲ… ಹಂಗಾಗಿ ಇರೋ 38ರ ಮೇಲೆ ಕಣ್ಣಾಂಕ್ತಂಗೆ ಸೇಪ್ ಮಾಡ್ತವ್ರೆ… ಯಾಕಂದ್ರೆ ಈ ರೆಸಾರ್ಟ್ ರಾಜಕೀಯ ಹೊಸದಲ್ಲ ಇವ್ರಗೆ .. ಹೋದ್ ರಾಜ್ಯ ಸಭೆ ಎಲೆಕ್ಷನ್ ನಲ್ಲಿ 8 ಕುದುರೆ ಹೋಡೋದೋ ಅದ್ರಲ್ಲಿ ಕೆಲವೂ ಬದಿಕೊಂಡೋ, ಇನ್ ಕೆಲವೋ ಮನಿಕೊಂಡೋ…
ಇನ್ನೂ ಕೆಲವರ
ಸ್ಥಿತಿ ಹೇಗಾಯ್ತು ಅಂದ್ರೆ ಮ್ಯಾನೇಜರ್ ಹತ್ತಿರ ಜಗಳ ಆಡ್ಕೊಂಡು ಬೇರೆ ಕಂಪನಿ ಸೇರಿದ್ರೆ, ಸೇರ್ಕೊಂಡ ಕಂಪನಿನಲ್ಲೂ ಹಳೆ ಮ್ಯಾನೇಜರ್ ಬಂದು ಬಾಸ್ ಆಗಿದ್ದಾನೆ ಅನ್ನಂಗೆ …
ಏನೆ ಆದ್ರೂ ಹಿಂದೆ ರಾಜ್ಯಭಾರ ಮಾಡಿದ್ ಯಾವ ರಾಜನೂ ಕೂಡ , ಪಟ್ಟ ಹಿಡಿಲಿಲ್ಲ , ಇವಾಗ ಅವರ್ ಅವರ್ ಮುಖ ಅವರ್ ಅವ್ರೆ ನೋಡ್ಕೊಂಡು ಹಿತ್ತಲೂ ಮನೆ ದಾರಿ ಹಿಡಿತಾವ್ರೆ…
ಲಾಸ್ಟ್ ಗೋವಾ , ಮಣಿಪುರಿ ಎಲೆಕ್ಷನ್ ನಲ್ಲೂ ಕೂಡ ನಮ್ ಮೋದಿ ತಾತ ಸಕ್ಕತ್ ಕಿಕ್ ಕೊಟ್ಟಿದ್ರು, ಬಹುಮತ ಇಲ್ಲಾ ಅಂದ್ರು ಗೋವಾ ಬೀಚಲ್ಲಿ ಬಾವುಟ ಹಾರ್ಸಿದ್ರು… ಅಮೇಲೆ ಗೆದ್ದಿದ್ ಎರಡೇ ಸೀಟ್ ಇಡ್ಕೊಂಡು ಮಣಿಪುರಿ ನಲ್ಲಿ ಮಾವಿನ ಹಣ್ಣು ತಿನ್ಸಿದ್ರು… ಈಗ್ಲೂ ಏನಾದ್ರು ಗೇಮ್ ಪ್ಲಾನ್ ಮಾಡ್ದಲೇ ಇರಲ್ಲಾ … ಯಾಕಂದ್ರೆ ನಮ್ ರಂಗಣ್ಣನ್ ಚಾಣಾಕ್ಷ ಬೇರೆ ಸುಮ್ನಿರಲ್ಲಾ..
ಈ ಹಿಂದೆ ಆಗಿದ್ ತಪ್ಪ್ಗೆ ನಮ್ ಪಪ್ಪು ಈಗ್ಲಾದ್ರು ಅವರ ಬಾಣನೇ ಅವ್ರಗೆ ತಿರ್ಗಿಸ್ ಬಿಡ್ತರಾ ನೀವೆ ನೋಡ್ಬೇಕು…
ಇಷ್ಟೆಲ್ಲಾ ಆದ್ಮೇಲು ನಮ್ಮನ್ನು ಕಾಡುವ ಕಟ್ಟ ಕಡೆಯ ಪ್ರಶ್ನೆ… ಈ ಸಾರಿ ಸಿಎಂ ಯಾರು… ???
ಏನಾದ್ರು ಆಗ್ಲಿ ರೀ , ಯಾರದ್ರೂ ಬರ್ಲಿ ರೀ ಕನ್ನಡನ , ಕರ್ನಾಟಕನ ಉದ್ದಾರ ಮಾಡ್ಲಿ, down to earth ಅನ್ನಂಗೆ ಬಗ್ಗಿ ನಡಿಲಿ… ನಮ್ಮಂಥ ಓದ್ ದಬ್ಬಾಕಿದ್ ಎಷ್ಟೋ ಹುಡುಗರ್ಗೆ ಒಳ್ಳೆ ಕೆಲಸ ಕೊಡ್ಲಿ..
ನಂಗೂ freedom of speech ಇದೆ…
–ನಿಮ್ಮನೆ ಹುಡ್ಗ
ವಿದ್ಯಾರ್ಥಿ ಮಿತ್ರ ಕಿರಣ್
ಬಹಿರಂಗ
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು..!

- ಆದಿತ್ಯ ಭಾರದ್ವಾಜ್
ಹುಟ್ಟಿನಿಂದ ನಾನು ಬ್ರಾಹ್ಮಣ. ನಾನು ಜಾತಿಯನ್ನು ನಿರಾಕರಿಸುವುದು ಸುಲಭ. ಆದರೆ ದಲಿತನಿಗೆ ಅದು ಸಾಧ್ಯವಿಲ್ಲ. ಹಾಗಾಗಿ ನಾನು ನನ್ನ ಜಾತಿಯನ್ನು ನಿರಾಕರಿಸದೆ ಅದರೊಂದಿಗೆ ಬರುವ previlege ಬಗ್ಗೆ ಸದಾಕಾಲ ಅರಿವು ಇಟ್ಟುಕೋಬೇಕು ಎಂಬುದು ನನ್ನ ನಿಲುವು.
ಪೊಗರು ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಮಾನಿಸಲಾಗಿದೆ ಅಂತ ಬ್ರಾಹ್ಮಣ ಅಭಿವೃದ್ಧಿ ನಿಗಮ, ಹಿಂದುತ್ವದ ಮುಖವಾಡ ತೊರೆದ ಸಂವಾದ ಅಂತಹ ಸಂಘ ಪರಿವಾರದ ಮಾಧ್ಯಮಗಳೂ ಸೇರಿದಂತೆ ಎಲ್ಲರೂ ಮುಗಿಬಿದ್ದು ನಿರ್ದೇಶಕರ ಕೈಲಿ ಕ್ಷಮೆ ಕೇಳಿಸಿದ್ದಾರೆ. ದೃಶ್ಯಗಳಿಗೆ ಕತ್ತರಿ ಹಾಕಲು ಧಮಕಿ ಹಾಕಿ ಒಪ್ಪಿಸಿದ್ದಾರೆ.
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ಬುಡಮೇಲು ಮಾಡುವ ನಡೆ ಇದು. ಈ ನಿಗಮ ಸ್ಥಾಪನೆಯ ಬಗ್ಗೆ ಅಂದೇ ಬಹಿರಂಗವಾಗಿ ಖಂಡಿಸದಿರುವುದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಮರಾಠರು, ಲಿಂಗಾಯತರಿಗೆ ನಿಗಮ ಸ್ಥಾಪಿಸಿದಾಗ ವಿರೋಧ ವ್ಯಕ್ತವಾಗಿದೆ. ಆದರೆ ಬ್ರಾಹ್ಮಣರಿಗೇ ನಿಗಮ ಸ್ಥಾಪಿಸಿದ ಮೇಲೆ ಯಾವ ಜಾತಿಗೆ ಬೇಕಾದರೂ ಸ್ಥಾಪಿಸಬಹುದಾಗಿದೆ. ಇದು ಸಾಮಾಜಿಕ ನ್ಯಾಯದ ಅಣಕ. ಎಲ್ಲ ಮೇಲ್ಜಾತಿಗಳ ನಿಗಮಗಳನ್ನು ರದ್ದು ಮಾಡಬೇಕಿದೆ.
ಇವತ್ತು ಇದೇ ಬ್ರಾಹ್ಮಣ ಅಭಿವೃದ್ಧಿ ನಿಗಮ ಒಂದು ಶಕ್ತಿಕೇಂದ್ರವಾಗಿ ತಲೆ ಎತ್ತಿದೆ. ಬ್ರಾಹ್ಮಣ್ಯವನ್ನು ಯಾಕ್ರೀ ಲೇವಡಿ ಮಾಡ್ತೀರಿ ಅಂತ ಅದರ ಅಧ್ಯಕ್ಷರು ಕೇಳ್ತಾರೆ ಇವತ್ತು! ಬ್ರಾಹ್ಮಣರು ಮತ್ತು ಫ್ಯೂಡಲ್ ಮೇಲ್ಜಾತಿಗಳು ಜಾತಿ ನಿಂದನೆ ಅಂತ ಅರಚಾಡುವುದೇ ಅಪಹಾಸ್ಯ. ಈ ಜಾತಿಗಳು ನಡೆಸಿರುವ ಅಟ್ರಾಸಿಟಿಗಳ ಹಿನ್ನೆಲೆಯಲ್ಲಿ ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದವರು ಟೀಕಿಸಿದರೆ, ಬೈದರೆ ಅದನ್ನು ಕೇಳಿಸಿಕೊಳ್ಳುವ ಸಹನೆಯನ್ನು ಈ ಸಮುದಾಯಗಳು ಬೆಳೆಸಿಕೊಳ್ಳಬೇಕಿದೆ.
ಇದನ್ನೂ ಓದಿ | ಗ್ಯಾಸ್ ಸಿಲಿಂಡರ್ ಮತ್ತೆ 25 ರೂ ಹೆಚ್ಚಳ ; ಇತಿಹಾಸದಲ್ಲೇ ಮೊದಲ ಸಲ ಒಂದೇ ತಿಂಗಳಲ್ಲಿ ಮೂರನೇ ಬಾರ ಗ್ಯಾಸ್ ಬೆಲೆ ಏರಿಕೆಯಾಗಿದ್ದು..!
ದನಿ ಇದ್ದವನದೇ ನ್ಯಾಯ ಎಂಬಂತಾಗಿದೆ. ಬಲಹೀನ ವರ್ಗಗಳನ್ನು ಕಾಪಾಡಲು ಇರುವ ಕಾನೂನು, ಮೀಸಲಾತಿಯಂತಹ ಸವಲತ್ತುಗಳನ್ನು, ಈ ಕೋಮುಗಳು ಹೊಡೆದುಕೊಳ್ಳುತ್ತಿವೆ, ತಮ್ಮ ಹಕ್ಕು ಎಂಬಂತೆ ಆಗ್ರಹಿಸುತ್ತಿವೆ. ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮೀಸಲಾತಿಯ ತಾತ್ವಿಕ ತಳಹದಿಯನ್ನೇ ಬುಡಮೇಲು ಮಾಡಿ ಬ್ರಾಹ್ಮಣರು, ವೈಶ್ಯರು ಒಂದು ಬೆರಳು ಕೂಡಾ ಎತ್ತದೇ ಹೊಡೆದುಕೊಂಡರು. ಬ್ರಾಹ್ಮಣರು ಇವತ್ತು ತಾವೇ ವಿಕ್ಟಿಂಗಳು ಎಂಬಂತೆ ಇತರ ಬಲಹೀನ ವರ್ಗಗಳೊಂದಿಗೆ ತಮ್ಮನ್ನೂ ಕಾಣಬೇಕು ಎಂಬಂತೆ ಆಡುತ್ತಿದ್ದು ಅದಕ್ಕೆ ಮನ್ನಣೆ ಸಿಗುತ್ತಿರುವುದು ದುರಂತ. ಇವತ್ತು ಹಿಂದುತ್ವದ ಮುಖವಾಡ ಹೊತ್ತು ಅಧಿಕಾರ ಹಿಡಿದಿರುವುದು ಬ್ರಾಹ್ಮಣಿಕೆಯೇ ಆಗಿರುವುದರಿಂದ ಇದು ಆಶ್ಚರ್ಯವೇನೂ ಅಲ್ಲ.
ಇನ್ನು ಪೊಗರು ಸಿನಿಮಾದಲ್ಲಿ ಹೆಣ್ಣನ್ನು ಬಿಂಬಿಸಿರುವ ಕುರಿತು ಪ್ರತಿಭಟನೆಗಳಾಗಬೇಕಿತ್ತು. “ಖರಾಬು” ಹಾಡಿಗೆ ಯೂಟ್ಯೂಬ್ ಅಲ್ಲಿ ಸುಮಾರು 21 ಕೋಟಿ views ಇವೆ! ಬದಲಿಗೆ ಬ್ರಾಹ್ಮಣರು ಪ್ರತಿಭಟನೆ ಮಾಡುತ್ತಿರುವುದು, ಅದನ್ನು ದಕ್ಕಿಸಿಕೊಂಡಿರುವುದು ಇವತ್ತಿನ ಕಾಲಮಾಪದ ರೂಪಕ.
(ಕೃಪೆ : ಫೇಸ್‌ಬುಕ್ ಬರಹ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಬಹಿರಂಗ
ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್’

ಪಂಜಾಬ್ನ ರೈತರು ಹೊಸ ವಸಾಹತುಶಾಹಿ ಕಾನೂನುಗಳಾದ ಹೊಸ ವಸಾಹತು ಕಾಯ್ದೆ ಮತ್ತು ‘ದೋಆಬ್ ಬಾರಿ’ ಕಾಯ್ದೆಯ ವಿರುದ್ಧ ಕುದಿಯುತ್ತಿದ್ದರು. ಈ ಕಾಯ್ದೆಗಳ ಹಿನ್ನೆಲೆ ಏನೆಂದರೆ, ಬ್ರಿಟಿಷ್ ಸರ್ಕಾರವು ಚಿನಾಬ್ ನದಿಯಿಂದ ನೀರನ್ನು ಸೆಳೆಯಲು ಕಾಲುವೆಗಳನ್ನು ನಿರ್ಮಿಸಿ, ಅದನ್ನು ಜನವಸತಿ ಇಲ್ಲದ ಪ್ರದೇಶಗಳಲ್ಲಿ ವಸಾಹತುಗಳನ್ನು ಸ್ಥಾಪಿಸಲು ಲಿಯಾಲ್ಪುರಕ್ಕೆ (ಈಗ ಪಾಕಿಸ್ತಾನದಲ್ಲಿದೆ) ಹರಿಸತೊಡಗಿತು.
ಹಲವಾರು ಸೌಕರ್ಯಗಳೊಂದಿಗೆ ಉಚಿತ ಭೂಮಿಯನ್ನು ನೀಡುವುದಾಗಿ ಭರವಸೆ ನೀಡಿದ ಬ್ರಿಟಿಷ್ ಸರ್ಕಾರ, ಜಲಂಧರ್, ಅಮೃತಸರ, ಮತ್ತು ಹೋಶಿಯಾರ್ಪುರದ ರೈತರು ಮತ್ತು ಮಾಜಿ ಸೈನಿಕರನ್ನು ಅಲ್ಲಿ ನೆಲೆಸಲು ಮನವೊಲಿಸಿತ್ತು.
ಈ ಜಿಲ್ಲೆಗಳ ರೈತರು ತಮ್ಮ ಮೂಲ ಭೂಮಿ ಮತ್ತು ಆಸ್ತಿಯನ್ನು ಬಿಟ್ಟು, ಹೊಸ ಪ್ರದೇಶಗಳಲ್ಲಿ ನೆಲೆಸಿದರು ಮತ್ತು ಬಂಜರು ಭೂಮಿಯನ್ನು ಕೃಷಿಗೆ ಯೋಗ್ಯವಾಗಿಸಲು ಶ್ರಮಿಸಿದರು. ಆದರೆ ಅವರು ಹಾಗೆ ಮಾಡಿದ ಕೂಡಲೇ, ಸರ್ಕಾರವು ಈ ಫಲವತ್ತಾದ ಭೂಮಿಯ ಒಡೆಯ ತಾನೇ ಎಂದು ಘೋಷಿಸಲು, ರೈತರಿಗೆ ಮಾಲೀಕತ್ವದ ಹಕ್ಕನ್ನು ನಿರಾಕರಿಸಲು ಹೊಸ ಕಾನೂನುಗಳನ್ನು ಜಾರಿಗೆ ತಂದಿತು.
ರೈತರು ಈ ಜಮೀನುಗಳಲ್ಲಿ ಮರಗಳನ್ನು ಕಡಿಯಲು ಸಾಧ್ಯವಿರಲಿಲ್ಲ, ಮನೆಗಳು ಅಥವಾ ಗುಡಿಸಲುಗಳನ್ನು ನಿರ್ಮಿಸಲು ಅಥವಾ ಅಂತಹ ಭೂಮಿಯನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಅವಕಾಶವಿರಲಿಲ್ಲ್ಲ ಮತ್ತು ಹಿರಿಯ ಮಗನಿಗೆ ಮಾತ್ರ ತನ್ನ ತಂದೆಯಿಂದ ಬೇಸಾಯ ಮಾಡಿದ ಭೂಮಿಗೆ ಪ್ರವೇಶಿಸಲು ಅವಕಾಶವಿತ್ತು.
ಇದರಲ್ಲಿ ಏನನ್ನಾದರೂ ಉಲ್ಲಂಘಿಸಿದರೆ, ಜಮೀನು ಸರ್ಕಾರದ ಆಸ್ತಿಯಾಗಿ ಬಿಡುತ್ತಿತ್ತು. 20 ಲಕ್ಷ ಎಕರೆ ಭೂಮಿಗೆ ನೀರಾವರಿ ಮಾಡಲು ಕಾಲುವೆಗಳ ಮೇಲೆ ವಿಧಿಸಲಾಗಿದ್ದ ತೆರಿಗೆಗಳಲ್ಲಿ, ಸರ್ಕಾರವು ತನ್ನ ಆರಂಭಿಕ ಹೂಡಿಕೆಯನ್ನು ಮರಳಿ ಪಡೆಯಿತಲ್ಲದೇ, ಅಬ್ಬಾಶಿ ತೆರಿಗೆಯ ಆಧಾರದಲ್ಲಿ ವಾರ್ಷಿಕ 7 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ಗಳಿಸತೊಡಗಿತು.
ಅಜಿತ್ ಸಿಂಗ್ ಮತ್ತು ಅವರ ಒಡನಾಡಿಗಳು ಈ ವಿಷಯಗಳ ಬಗ್ಗೆ ಜನಪ್ರಿಯ ಸಾಮೂಹಿಕ ಪ್ರತಿರೋಧವನ್ನು ಬೆಳೆಸಿದರು. ಈ ಆಂದೋಲನವನ್ನು ಮುನ್ನಡೆಸಲು ಕಾಂಗ್ರೆಸ್ ವಿಫಲವಾಗಿದೆ, ಮಸೂದೆಯನ್ನು ಈಗಾಗಲೇ ಕಾನೂನಾಗಿ ಅಂಗೀಕರಿಸಲಾಗಿದೆ ಎಂದು ವಾದಿಸಿದರು. ರೈತ ವಿರೋಧಿ ಕಾನೂನುಗಳಿಗೆ ನಿರ್ಭೀತ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದ ಅಜಿತ್ ಸಿಂಗ್ ಮತ್ತು ಅವರ ಭಾರತ್ ಮಾತಾ ಸಮಾಜದ ನಾಯಕತ್ವವನ್ನು ರೈತರು ಒಪ್ಪಿಕೊಂಡರು.
ಆಗ, ಲಾಹೋರ್ ಮತ್ತು ಅದರ ನೆರೆಹೊರೆಯ ಪ್ರದೇಶಗಳಲ್ಲಿ ಸಾವಿರಾರು ಜನರು ಭಾಗವಹಿಸಿದ ರ್ಯಾಲಿಗಳು, ಪ್ರದರ್ಶನಗಳು ಮತ್ತು ಸಾಮೂಹಿಕ ಸಮಾವೇಶಗಳ ನಿಜವಾದ ಅಲೆ ಕಾಣಿಸಿಕೊಂಡಿತು. ಈ ಸಭೆಗಳು ಈ ದಮನಕಾರಿ ಕಾನೂನುಗಳ ಬಗ್ಗೆ ಮತ್ತು ಬ್ರಿಟಿಷ್ ವಸಾಹತುಶಾಹಿಯಿಂದ ಧ್ವಂಸಗೊಂಡ ರಾಷ್ಟ್ರದ ನಿಜವಾದ ಚಿತ್ರಣದ ಬಗ್ಗೆ ಚರ್ಚಿಸಿದವು.
ಅಂತಿಮವಾಗಿ ವಿದೇಶಿ ಆಡಳಿತದ ವಿರುದ್ಧ ಸಂಪೂರ್ಣ ದಂಗೆಗಾಗಿ ಪ್ರಚೋದಿಸುವ ಕರೆಯೊಂದಿಗೆ ಕೊನೆಗೊಂಡವು. ಅಜಿತ್ ಸಿಂಗ್ ಅವರ ಭಾಷಣಗಳನ್ನು ಕೇಳದಂತೆ ನಿಷೇಧ ಹೊರಡಿಸಲಾಗಿತ್ತು!
(1907 ರ ಮಾರ್ಚ್ 3 ರಂದು ಲಿಯಾಲ್ಪುರದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ, ‘ಜಂಗ್ ಸ್ಯಾಲ್’ ಪತ್ರಿಕೆಯ ಸಂಪಾದಕ ಬಂಕೆ ದಯಾಲ್ ಅವರು, “ಪಗ್ಡಿ ಸಂಭಲ್ ಜಟ್ಟಾ, ಪಗ್ಡಿ ಸಂಭಾಲ್ ಓಯೆ” ಹಾಡನ್ನು ಪರಿಚಯಿಸಿದರು. ಅದು ಚಳವಳಿಯ ಸಂಕೇತ ಮತ್ತು ಆತ್ಮವಾಯಿತು.)
(ಕೃಪೆ : Mass Media Foundation, Delhi)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಬಹಿರಂಗ
ಪಾಂಡವರಿಗೂ ಭಾವ, ಕೌರವರಿಗೂ ಭಾವ..!

- ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರರು,ಮುಂಬೈ
ಮೇಲಿನದು ಕುಂದಾಪ್ರಕನ್ನಡದ ಒಂದು ನುಡಿಗಟ್ಟು.
ಯಾರಿಂದಲಾದರೂ ‘ಫ್ರೆಂಡ್ಸ್ ರಿಕ್ವೆಸ್ಟ್’ ಬಂದಾಗ ಅದನ್ನು ಒಪ್ಪಿಕೊಳ್ಳಲು ‘ಮ್ಯುಚುಅಲ್ ಫ್ರೆಂಡ್ಸ್’ ಪಟ್ಟಿ ನೋಡುವುದು ಮೊದಲ ಕ್ರಮ. ಈಗೀಗ ಅದೂ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಮೊನ್ನೆ ಒಬ್ಬರಿಂದ ‘ಫ್ರೆಂಡ್ಸ್ ರಿಕ್ವೆಸ್ಟ್’ ಬಂತು.
ನಾನು ಯಾವುಯಾವುದನ್ನು ಜೀವವಿರೋಧಿ, ಮನುಷ್ಯ ವಿರೋಧಿ, ಕ್ರೌರ್ಯ, ಹಿಂಸೆ ಎಂದು ಪರಿಗಣಿಸಿ ಪಾಲಿಸುವುದಿಲ್ಲವೋ ಅದೆಲ್ಲವನ್ನು ಅವರು ಶಿರಸಾವಹಿಸಿ ಪಾಲಿಸುವವರು. ಆ ‘ಫ್ರೆಂಡ್ಸ್ ರಿಕ್ವೆಸ್ಟ’ನ್ನು ‘ಅಸೆಪ್ಟ್’ ಮಾಡುವ ಪ್ರಶ್ನೆಯೇ ಇರಲಿಲ್ಲ.
ಆದರೂ ಕುತೂಹಲಕ್ಕೆ ‘ಮ್ಯುಚುಅಲ್ ಫ್ರೆಂಡ್ಸ್’ ಪಟ್ಟಿ ನೋಡಿದರೆ ಅಲ್ಲಿ ನೂರಾರು ಹೆಸರುಗಳಿದ್ದವು! ಹಾಗಾಗಿ, ಇತ್ತೀಚೆಗೆ ಇಂತಹ ‘ಫ್ರೆಂಡ್ಸ್ ರಿಕ್ವೆಸ್ಟ್’ ಗಳನ್ನು ಡಿಲೀಟ್ ಮಾಡುವ ಜೊತೆ ಇಂತಹ ‘ಫ್ರೆಂಡ್ಸ್’ ಗಳನ್ನು ‘ಅನ್ಫ್ರೆಂಡ್’ ಮಾಡುವುದೂ ಅನೀವಾರ್ಯವಾಗುತ್ತಿದೆ. ಈ ಕಾರಣಕ್ಕಾಗಿಯೇ ನನ್ನ ‘ಫ್ರೆಂಡ್ಸ್ ಲಿಸ್ಟ್’ ದಿನೇ ದಿನೇ ಚಿಕ್ಕದಾಗುತ್ತ ಹೋಗುತ್ತಿದೆ!
ಇದರಿಂದ ಅವರಿಗೇನೂ ನಷ್ಟವಿಲ್ಲ, ನಿಜ. ಆದರೆ, ನನಗೆ ಲಾಭವಿದೆ. ಹೇಗೆಂದರೆ, ಉದಾಹಣೆಗೆ, ಜಾತಿ ವಿಚಾರ ತೆಗೆದುಕೊಳ್ಳಿ. ನನಗಿದು ಜೀವವಿರೋಧಿ ಕ್ರಮ ಮಾತ್ರವಲ್ಲ, ಇದೊಂದು ಹೇಯ ಕ್ರೌರ್ಯವೂ ಹೌದು. ಇದನ್ನು ಯಾವುದೇ ಕಾರಣ ಕೊಟ್ಟು ಸಮರ್ಥಿಸುವವರ ಜೊತೆ ಸ್ನೇಹ ಸಾಧ್ಯವೇ ಇಲ್ಲ.
ಅವರೊಂದಿಗೆ ಕೇವಲ ಮನುಷ್ಯ ಸಂಬಂಧ ಇಟ್ಟುಕೂಳ್ಳಬಹುದೇ ವಿನಃ ಸ್ನೇಹ ಸಂಬಂಧ ಸಾಧ್ಯವೇ ಇಲ್ಲ. ನನ್ನ ಪ್ರಕಾರ ಈ ಫೇಸ್ ಬುಕ್ ಎಂಬುವುದು ಸ್ನೇಹ ಸಂಬಂಧಕ್ಕಿರುವ ಒಂದು ಸೋಶಿಯಲ್ ಪ್ಲಾಟ್ ಫಾರ್ಮ್.
ಇಲ್ಲಿ ‘ಫ್ರೆಂಡ್ಸ್’ ಅಲ್ಲದವರು ‘ಸ್ಟೇಟಸ್’ಗಳನ್ನು ನೋಡಲು, ಅವುಗಳಿಗೆ ‘ಕಮೆಂಟ್ಸ್’ ಮಾಡಲು ಅವಕಾಶವಿದೆ ನಿಜ. ಆದರೆ, ಹಾಗೆ ಮಾಡುವ ‘ಕಮೆಂಟ್ಸ್’ ಗಳು ಕನಿಷ್ಟ ನಾಗರಿಕ ಸೌಜನ್ಯದ ಮಿತಿಯೊಳಗಿದ್ದರೆ ಅದು ಅವರಿಗೇ ಶೋಭೆ. ಇಲ್ಲವಾದರೆ, ಅವರಿನ್ನೂ ಮನುಷ್ಯರಾಗಿಲ್ಲ ಎಂದು ಕನಿಕರ ಪಡುತ್ತೇನೆ, ಅಷ್ಟೇ.
ಅಂದಹಾಗೇ, ನನಗೆ ಅತೀ ಹೆಚ್ಚಿನ ಸಂಖ್ಯೆಯ ‘ಮ್ಯುಚುಅಲ್ ಫ್ರೆಂಡ್ಸ್’ ಗಳಿರುವುದು ಕ್ರಮವಾಗಿ, ಮತ್ತು ರಾಜಾರಾಮ್ ತಲ್ಲೂರು ಜೊತೆ ಎಂಬುವುದು ತುಂಬಾ ಖುಷಿ ಕೊಡುವ ಸಂಗತಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ಅಂತರಂಗ5 days ago
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!
-
ದಿನದ ಸುದ್ದಿ5 days ago
ಬಡವರನ್ನು ಸಬಲೀಕರಣಗೊಳಿಸಲು ಉಚಿತ ಅನಿಲ ಸಂಪರ್ಕ ನೀಡಿದ್ದೇವೆ : ಪ್ರಧಾನಿ ಮೋದಿ
-
ಭಾವ ಭೈರಾಗಿ5 days ago
ಕರುಣಾಳು ಅವನು, ಅವನು ನನ್ನವನು..!
-
ದಿನದ ಸುದ್ದಿ5 days ago
ದಿಶಾ ಕೇಸ್ | ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ..! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು..!
-
ಲೈಫ್ ಸ್ಟೈಲ್4 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ಕ್ರೀಡೆ4 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್4 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ
-
ಭಾವ ಭೈರಾಗಿ4 days ago
ಕವಿತೆ | ಅವಳು