Connect with us

ಬಹಿರಂಗ

ಭೂಮಿ ತಾಯಿಯ ಚೊಚ್ಚಲ ಮಗ

Published

on

ದಿದ್ದು ಕಂಗ್ಲೀಷ್ ಮೀಡಿಯಂ,ಸೇರಿದ್ದು ಇಂಜಿನಿಯರಿಂಗ್, ಇವಾಗ ಮಾಡ್ತಿರೋ ಕೆಲಸ ಮಾತ್ರ ಜರ್ನಲಿಸಂ…

ಲೈಫು ಆದ್ರೆ still ವೈಟ್ & ಬ್ಲಾಕ್ screen…

ಅವತ್ ರಾತ್ರಿ…
ಏನ್ ಗುಡುಗು, ಸಿಡಿಲು ಅಂತೀರಾ..!!!
ಯಪ್ಪ ಮಿಂಚು ಪಣಾರ್!!! ಅಂತಾ ಕಿಟಕಿ ಪಕ್ದಲ್ಲೆ ಬರದು.. ನಾನ್ ಅಂತೂ ಕಿಟಕಿ ಅತ್ರಕ್ಕೂ ಹೋಗ್ಲಿಲ್ಲ…ಜೊತೆಗೆ ಸುಯ್ ಸುಯ್ ಅನ್ನೋ ಜೊರು ಗಾಳಿ .ತೆಂಗಿನ ಮರ , ಅಡಿಕೆ ಮರಗಳು 45° ಆಂಗಲ್ ಗೆ ಬಾಗಿದ್ವು ಅನ್ನಿ ಅಷ್ಟೊಂದು ರಭಸವಾದ ಗಾಳಿ..ಉಧೋ ಉಧೋ ಅಂತಾ ಮಳೆ ಬರಕ್ಕೆ ಶುರು ಆಯ್ತು..ಗಾಳಿ ಜೊತೆ ಮಳೆ ಬಂದ್ರೆ ಕೇಳ್ಬೇಕ??
ಅದೇ time ಗೆ ಕರೇಂಟ್ ಹೋಯ್ತು , ಅಕ್ಕಿ ಬೇರೆ ಕಾಲಿ ಆಗಿತ್ತು, , time ಬೇರೆ 10 ಆಗಿತ್ತು , ಸುತ್ತಲೂ ಕತ್ತಲೆ ಆವರಿಸಿತ್ತು, ಜೊತೆಗೆ ಮಳೆ ಬೇರೆ ಬರ್ತಿತ್ತು… ಏನ್ ಮಾಡ್ಲಿ ಸ್ಬಾಮಿ.. ಮಳೆಲಿ ಹೋಗಿ ತರಕ್ಕೆ ಆಗಲ್ಲ ಯಾಕಂದ್ರೆ ನಂಗೆ ಸಿಡಿಲು ಮಿಂಚು ಅಂದ್ರೆ ಭಯ..
ನಾನ್ ಬಾಗ್ಲಲ್ಲೇ ನಿಂತ್ಕೊಂಡು ಹೊದ್ದಾಡ್ತಿದ್ದೆ… ಅವಾಗ ಪಕ್ಕದ ಮನೆ ಅವರ್ಗೆ ನನ್ ಕಷ್ಟ ಗೊತ್ತಾಯ್ತು ಅನ್ಸುತ್ತೆ ಊಟ ಮಾಡು ಬಾರಪ್ಪ ಅಂತ ಬಲವಂತ್ ಮಾಡುದ್ರು , ನಾನು ಇಲ್ಲವ್ವೋ ..ಅಂತ ಹೇಳಿ.‌‌ ಒಂದ್ ಕಪ್ ಅಕ್ಕಿ ಸಾಲ ಕೊಡಿ ಅಂತಾ ಕೇಳ್ದೆ. ಅದಿಕ್ಕೆ ಅವರು ನೋಡಪ್ಪ ನಾವು ಬೆಳೆದಿರೋ ಅಕ್ಕಿ ತಿನ್ನದು , ನೀವೆಲ್ಲಾ ಪ್ಯಾಟೆ ಮಂದಿ ನಿಮ್ ಥರ ಬಾಸುಮತಿ ,ಸೋನಾಮಸುರಿ ಎಲ್ಲಾ ತಿನ್ನಲ್ಲ ಅಂದ್ರೂ .. ಅಯ್ಯೋ ತಾಯಿ ನಾನು ಮಣ್ಣಿನ್ ಮಗ , ನಾನ್ ಇಲ್ಲಿ ತನ್ಕ ತಿಂದಿದ್ದು ಸಿದ್ದರಾಮಯ್ಯ ಕೊಟ್ಟಿದ್ ಒಂದು ರುಪಾಯಿ ಸೋಸೈಟಿ ಅಕ್ಕೀನೆ ಅಂತಾ ಹೇಳಿ ಒಂದು ಕಪ್ಪ ಅಕ್ಕಿ ತಂದೆ..

ಎರಡು ಈರುಳ್ಳಿ, ಎರಡು ಮೆಣಸಿನ ಕಾಯಿ , ಒಂದ್ ಟೊಮೋಟೊ ಹಾಕಿ ಚಿತ್ರನ್ನ ಮಾಡಿದೆ, ಘಮ್ ಅನ್ಲಿ ಅಂತಾ ಚಿಕನ್ ಬಿರಿಯಾನೆ ಪೌಡರ್ ಬೇರೆ ಹಾಕಿದ್ದೆ..
ಜೊತೆಗೆ ಇರ್ಲಿ ಅಂತಾ ಎರಡು ಕೋಳಿ ಮೊಟ್ಟೆ ಬೇಯಿಸ್ಕೊಂಡು ಫುಲ್ ಮೀಲ್ಸ್ ರೇಡಿ ಮಾಡ್ಕೊಂಡು ಕೂತ್ಕೊಂಡೆ.. ಏನ್ ಘಮಲು ಅಂತಿರಾ…. ಆಹಾ.. !!
ಪಕ್ಕದ್ ಮನೆ ಆಂಟಿ ಕೂಡ ಏನಪ್ಪ ಸೋಮವಾರ ಅಂತನೂ ನೊಡ್ದಲೆ, ಬಿರಿಯಾನಿ ಮಾಡಿದ್ದೀಯ ಅಂದ್ರೂ… ಆ ರೇಂಜ್ಗೆ ನಾನು ಕೂಡ ನಳ ಮಹಾರಾಜ ಆದ್ನಲ್ಲ ಅಂನ್ಕೊಂಡು ಕನ್ನಡಿಲ್ಲಿ ನನ್ನ ನಾನೆ ನೋಡ್ಕೊಂಡೆ…ಬೆಳಗ್ಗೆ 8ಆಗಿತ್ತು ಇನ್ನು ಹಾಸಿಗೆ ಮೇಲೆ ಹೊದ್ದಾಡ್ತಿದ್ದೆ… ಅವಾಗ ಇದ್ದಕ್ಕಿದಂತೆ ಪಕ್ಕದ್ ಮನೆಲೆ ಅಳ್ತಿರೋ ದನಿ ಕೇಳಿಸ್ತು… ಏನು ಆಯ್ತಪ್ಪ ಅಂತಾ ಎದ್ದಂಗೆನೆ ಹೋದೆ…

ಒಂದ್‌‌ ಕಡೆ ಯಜಮಾನ ತಲೆಮೇಲೆ ಬಟ್ಟೆ ಹಾಕೊಂಡು ಸರ ಸರ ಅಂತಾ ಆಚೆಗಡೆ ಹೊರಟ, ಇನ್ನೊಂದ್ ಕಡೆ ಆ ತಾಯಿ ದೇವರಿಗೆ ಇಡಿ ಶಾಪ ಹಾಕೊಂಡು , ಬರ್ತೀರೋ ಕಣ್ಣೀರನ್ನ ತಡಿಲಾರ್ದೆ ತನ್ನ ಸೆರಗಲ್ಲಿ ಹೊರೆಸ್ಕೊಂಡು ಅಡುಗೆ ಮನೆ ಕಡೆ ಹೋದ್ರು.. ನಾನು ಇಂತ timeನಲ್ಲಿ ಯಾರನ್ನ ಏನಂತ ಕೇಳನ‌‌ ಅನ್ಕೊಂಟು , ಆ ತಾಯಿನ‌ ಕೇಳ್ದೆ, ಯಾಕಮ್ಮ ಏನಾಯ್ತು ಹೇಳಿ ನಾವ್ ಇದೀವಿ ಅಂತಾ… ಅದಕ್ಕೆ ಅವರು ಹೇಳುದ್ರು ರಾತ್ರಿ ಇಡೀ ಸುರಿದಿದ್ದ ಬಾರಿ ಗಾಳಿ ಮಳೆಗೆ 500 ಅಡಿಕೆ ಮರ, 15 ಎಕ್ಕರೆ ಭತ್ತದ ಬೆಳೆ, 5 ತೆಂಗಿನ ಮರ ಎಲ್ಲಾ ನೆಲಕ್ಕೆ ಉರುಳಿ ನಾಶ ಆಯ್ತಂತೆ ಅಂದ್ರೂ..
Just ಒಂದ್ ಕ್ಷಣ ನೀವು imagine ಮಾಡ್ಕೊಳಿ .. ನೀವು ಇಷ್ಟ ಪಟ್ಟಿರೋ Dairy Milk ಚಾಕೊಲೇಟ್ ನ cover ತೆಗೆದು ಇನ್ನೇನು ತಿನ್ಬೇಕು ಅನ್ನೋ time ನಲ್ಲಿ ಕೆಳಗಡೆ ಬಿದ್ದಾಗ ನಮ್ reactions ಹೆಂಗ್ ಇರ್ಬೇಡ…
ಕೈಗೆ ಬಂದಿರೋ ತುತ್ತು ಬಾಯಿಗೆ ಬರ್ಲಿಲ್ಲ ಅಂದಾಗ ಆ‌ ಅನ್ನದಾತರ ಸ್ಥಿತಿ ಎಂತಾ ಶೋಚನೀಯ ಅಂತಾ…

ಅವರ ತೋಟದ ಬಳಿ ಸುದ್ದಿ ಮಾಡನ‌ ಅಂತಾ ನಾನು ನಮ್ ಕ್ಯಾಮೆರಾ ಮ್ಯಾನ್ ಜೊತೆಲೆ ಹೊರಟ್ವಿ… ದಾರಿ ಉದ್ದಕ್ಕೂ ಭತ್ತದ ಘಮಲು ಆಹಾ.. ಏನ್ ಸುವಾಸನೆ ಅಂತಿರಾ ಒಂದ್‌ಕ್ಷಣ ನಮ್‌ ಮಂಡ್ಯ ಸೀಮೆ ನೆನೆಪಾಗೋಯ್ತು… ಅಂತಾ ಅದ್ಭುತ ಹಸಿರು ಸಾಲು ಎಲ್ಲಿ ನೋಡಿದ್ರು ಅಲ್ಲಿ ತನಕವೂ ಭತ್ತದ ಗದ್ದೆಗಳು.. ಒಂಥರಾ ಮಲೆನಾಡ ಅನುಭವ .


ಇನ್ನೇನು ಸಮೀಪ ಅವರ ತೋಟಕ್ಕೆ ಹೋಗ್ಬೇಕು , ಅನ್ನೋವಾಗ್ಲೆ ಕಂಡಿದ್ದು …. ನೆಲಕ್ಕೆ ಬಿದ್ದಿರೋ ವಿದ್ಯುತ್ ಕಂಬಗಳು.. ದನ ಕರುಗಳಿಗೆ ಅಂತಾ ಕಟ್ಸಿದ್ದ ಮನೆಗೆ ರೋಡ್ ಸೈಡಲ್ಲಿ ಬಿದ್ದಿದ್ದ ಚಾವಣಿ ಗಳು ‌,
ರಸ್ತೆ ಬದಿಲಿ ಸೀಳಾಗಿ ಬಿದ್ದಿರೋ ಮರಗಿಡಗಳು… ಒಂದು ಕಡೆ ಬೇರು ಸಮೇತ ಬಿದ್ದಿರುವ ತೆಂಗಿನಮರಗಳು… ಅರ್ಧಕ್ಕೆ ಮುರ್ಕೊಂಡು ಬಿದ್ದಿರುವ ತ್ಯಾಗದ ಮರಗಳು ,
ಇನ್ನೊಂದ್ ಕಡೆ ಒಂದ್ ಅಷ್ಟು ಅರ್ಧಕ್ಕೆ ಮುರಿದಿದ್ದ ಅಡಿಕೆ ಮರಗಳು, ಇನ್ನ‌ ಸ್ವಲ್ಪ ಬೇರು ಸಮೇತ ನೆಲ ಕಚ್ಚಿದ ಗಿಡಗಳು. ಹಸಿರಾಗಿ, ಕೇಸರಿ ಬಣ್ಣಕ್ಕೆ ತಿರುಗಿ ಇನ್ನೇನು ಫಲಕ್ಕೆ ಬಂದಿರುವ ಅಡಿಕೆ ಕಾಯಿಗಳು..
ಎಲ್ಲಂದ್ರೆ ಅಲ್ಲಿ ಚೆಲ್ಲಾಪಿಲ್ಲಿಯಾಗಿ ಇಟ್ಟಾಟ್ಟ…. ಎಲ್ಲೆ ನೋಟುದ್ರು ಮುರಿದು ಬಿದ್ದಿರೋ ಅಡಿಕೆ ಮರಗಳೆ‌‌‌ ಕಾಣಿಸ್ತಿದ್ವು…

ಮತ್ತೊಂದು ಕಡೆ ನೋಡ್ಬೇಕು ನೀವು‌‌‌ ..!!!

ನಿಮಗೆ ಈ ಗದ್ದೆ ತೋಟ ಅಂದ್ಮೇಲೆ ಒಂದು imagination ಇರುತ್ತೆ ಎಲ್ಲೆಲ್ಲೂ ಹಸಿರು ಹಸಿರಾಗಿರೋ ಭತ್ತದ ಗಿಡ , ಜುಳು ಜುಳು ಹರಿಯೊ ನೀರು …. ತಂಪನೆ ವಾತವರಣ, ನೋಡಿದಷ್ಟು ಹಸಿರಿನ ತೋರಣ‌‌.. ಆದ್ರೆ ಅವತ್ ಏನಾದ್ರು ನೋಡಿದಿದ್ರೆ ನಿಮ್ ಕಣ್ಣಲ್ಲಿ ಅಕ್ಷರಶಃ ನೀರು ಬರದು.‌ ಹತ್ತಾರು ಎಕ್ಕರೆ ಭತ್ತ , ಇನ್ನೇನು ಕುಯ್ಯಲಿಗೆ ಬರುತ್ತೆ .. ಈ ಬಾರಿ ದಾಖಲೆ ಪ್ರಮಾಣದಲ್ಲಿ ಭತ್ತ ಬೆಳೆಯಬೇಕು ಅಂತಾ ಕನಸನ್ನ ಅವರ ಕಣ್ಣಲ್ಲಿ ನಾವು ಕಾಣಬಹುದಿತ್ತು.. ನಿಮ್ಗೆ ಗೊತ್ತಾ ಆ ಕನಸಿನ ಹಿಂದೆ ಎಷ್ಟೊಂದು ಆಸೆಗಳು ಇರ್ತಾವೆ ಅಂತಾ ..????
ಮಕ್ಕಳ higher education ಗೆ ದುಡ್ಡು ಹೊಂದಿಸದು ಇರುತ್ತೋ…?
ಇಲ್ಲಾ ಮಗಳ ಮದ್ವೆ ಇರುತ್ತೋ..?
ಇಲ್ಲಾ ಆಸ್ಪತ್ರೆನಲ್ಲಿ ಯಾರದ್ರು ಚಿಕಿತ್ಸಾ ಪಡಿತಿದ್ರೋ… ??
ಇಷ್ಟು ಬೆಳೆ ಬೆಳೆಯೊಕ್ಕೇ ಯಾರತ್ರ ಎಷ್ಟು ಸಾಲ ಮಾಡಿದ್ರೋ ??
ಎಲ್ಲಾ ಅವರಿಗೆ ಮಾತ್ರ ಗೊತ್ತಿರುತ್ತೆ.‌‌‌…
ನಿಮಗೆ ಇನ್ನೊಂದು ಗೊತ್ತಿರಲಿ ಒಂದು KG ಅಕ್ಕಿ ಬೆಳೆದು ನಾವು ಅನ್ನ ತಿನ್ನಬೇಕು ಅಂದರೆ ಸತತ ಐದಾರು ತಿಂಗಳಾದ್ರು ಬೇಕು… ಒಂದು ಎಕ್ಕರೆ ಗದ್ದೆ ಅಚ್ಚುಕಟ್ಟು ಮಾಡಬೇಕು ಅಂದ್ರೆ ಏನೆಲ್ಲಾ ಪರಿಶ್ರಮ ಅಂದ್ರು 25ಸಾವಿರ ದುಡ್ಡು ಖರ್ಚು ಮಾಡಬೇಕು…
ಮೊದಲು ಗದ್ದೆ ಉಳುಮೆ ಮಾಡ್ಸಿ… ನೀರ್ ಕಟ್ಟಿ ಹದ ಮಾಡಿ… ಭತ್ತದ ಸಸಿಗಳನ್ನ ನಾಟಿ ಮಾಡಿ… ವಾರ ವಾರಕ್ಕೂ ನೀರು ಕಟ್ಬೇಕು‌‌…. ಅವನು ಟೈಮಿಗೆ ಸರಿಯಾಗಿ ಊಟ ನೀರು ಕುಡಿತಾನೋ ಗೊತ್ತಿಲ್ಲ ಆದ್ರೆ ಬೆಳೆಗೆ ಮಾತ್ರ ಇನ್‌ಟೈಮ್ನಲ್ಲಿ ಮಾಡ್ಬೇಕು.. ನೀರಿಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೋರ್ ವೆಲ್ ಹಾಕ್ಸಿರ್ಬೇಕು ..

ಅದೃಷ್ಟ ಚೆನ್ನಾಗಿದ್ರೆ ನೀರು ಬರುತ್ತೆ , ಇಲ್ಲಾ ಅಂದ್ರೆ ಅದೂ ಕೂಡ ಮಣ್ಣಪಾಲು‌.. 15ದಿನಕೊಮ್ಮೆಯಂತೆ ಗೊಬ್ಬರ ಹಾಕಿ… ಕಳೆ ಗಿಡಗಳು ಬರಬಾರದು ಅಂತಾ ದಿನ ಎಲ್ಲಾ ಔಷಧಿ ಹೊಡೆದು… ತಾಯಿ 9ತಿಂಗಳು ನಮ್ಮನ‌ ಹೇಗೆ ಕಾಪಾಡಿದ್ಲೋ ಹಂಗೆ ಬೆಳೆನು ಕೂಡ ಕಾಯಬೇಕು.‌.
ಫಸಲು ಬಿಟ್ಟಗಾ ಕುಯ್ಸಿ ಭತ್ತ ತೆಗೆದು ಅಕ್ಕಿ ಮಾಡ್ಸೋ ಅಷ್ಟ್ರಲ್ಲಿ ಒಂದ್ ರೌಂಡ್ ನರಕ ದರ್ಶನ ಆಗಿರುತ್ತೆ…ಆದ್ರೆ ಅವತ್ ಬಂದಿದ್ದ ಒಂದು‌ಮಳೆ ಯಿಂದಾಗಿ ಇರೋ ಬರೋ ಗದ್ದೆ ಎಲ್ಲಾ ನೆಲ ಕಚ್ಚಿ ಭತ್ತದ ಕಾಳುಗಳು ಕೆಸರಲ್ಲಿ ಹೊರಳಾಡ್ತಿದ್ದೋ… ಕಷ್ಟ ಪಟ್ಟು 5 ತಿಂಗಳು ಮಗು ಥರ ಕಾಪಾಡ್ಕೊಂಡು ಬಂದಿದ್ದ ಫಸಲು ಅವತ್ತು ಮಣ್ಣು ಪಾಲಾಗಿದ್ದು ಮಾತ್ರ ಘೋರ ಕೃತ್ಯ…‌ಸೊಂಟದ ಎತ್ತರಕ್ಕೆ ‌ಬೆಳೆದಿದ್ದ ಭತ್ತದ ಗಿಡಗಳು ನೆಲಸಮ ಆಗಿದ್ವು… ಇಷ್ಟು , ಕೇವಲ‌ 15 ಎಕ್ರೆ ಮಾತಲ್ಲ !! ಅಲ್ಲಿ ಸುತ್ತಾ ಮುತ್ತಾ ಇರೋ 150ಕ್ಕೂ ಹೆಚ್ಚಿನ ರೈತರ ಪಾಡು ಕೂಡ ಇದೆ ಆಗಿತ್ತು..‌ ಸುದ್ದಿ ಮಾಡ್ತೀನಿ ಅಂತಾ ಹೋಗಿ ಸೈಲೆಂಟ್ ಹಾಗಿ ಬಂದೆ… ಎಲ್ಲಾ ಭತ್ತದ ಗದ್ದೆಗಳು ಕೂಡ ಇನ್ನೇನು ಎರಡೇ ದಿನದಲ್ಲಿ ಫಸಲು ಕಟಾವಿಗೆ ಬರಬೇಕು, ಅನ್ನೋ ಅಷ್ಟ್ರಲ್ಲಿ ಪ್ರಕೃತಿ ವಿಕೋಪಕ್ಕೆ ಮುಗ್ದ ರೈತ ಬಲಿಯಾಗಿದ್ದ….ಯಜಮಾನ‌ ತಲೆ ಮೇಲೆ ಟವಲ್ ಸುತ್ಕೊಂಡು.. ಗಣೇಶ ಬೀಡಿ ಸೇದ್ಕೊಂಡು ಯೋಚನೆ ಮಾಡ್ಕೊಂಡು ಕುಂತಿದ್ರು…ಇದೇನಪ್ಪ ಮಳೆ ಇಂಗು ಬರುತ್ತಾ ಅಂತಾ ಅವತ್ತೆ ಗೊತ್ತಾಗಿದ್ದು…‌ಇದು ಕೇವಲ ಭತ್ತದ ಮಾತದ್ರೆ… ಇನ್ನು 500 ಅಡಿಕೆ ಮರಗಳ ಶ್ರಮ ಎಷ್ಟು ಅಂತಾ ಗೊತ್ತ.. ಫಸ್ಟ್ 4‌ವರ್ಷ school ಮಕ್ಕಳು ಥರ ಕಾಪಾಡ್ಬೇಕು‌..ನಾವೇ ಊಟ ಮಾಡ್ಸಿ time to time ನೀರು ಕುಡಿಸ್ಬೇಕು…ಅದಾದ್ಮೇಲೆನೆ ಪರಿಶ್ರಮಕ್ಕೆ ತಕ್ಕ ಫಲ‌ಸಿಗದು.. ಏನಿಲ್ಲಾ ಅಂದ್ರು 500ಅಡಿಕೆ ಮರದ ಬೆಳೆಗೆ 5-6 ಲಕ್ಷ ಸಂಪಾದನೆ ಆಗ್ತಿತ್ತು ಪ್ರತಿ ವರ್ಷಕ್ಕೇ ಹಾಗೆನೆ ಲಕ್ಷಾಂತರ ರುಪಾಯಿ ಖರ್ಚು ಕೂಡ ಮಾಡ್ಬೇಕಿತ್ತು… ಆದ್ರೆ ಅವತ್ತಿನ ವಿಧಿ ಆಟನೇ ಬೇರೆ ಆಗಿತ್ತು…

ಇವಿಷ್ಟು ನಮ್ ರೈತ ಪಡೋ ಪಾಡು ಇನ್ನೂ ಇಷ್ಟೆಲ್ಲಾ ಬೆಳೆಗಾಗಿ ಕೆಲವರು ಬೇರೆ ಕಡೆಯಿಂದ ಬ್ಯಾಂಕುಗಳಲ್ಲಿ ಸಾವಿರಾರು ರುಪಾಯಿ ಸಾಲ ಮಾಡಿರ್ತಾರೆ… ಆದ್ರೆ ಅವರು ಬೆಳೆಯೋ ಬೆಳೆಗೆ ಸರಿಯಾದ ಬೆಂಬಲ ಬೆಲೆನೇ ಸಿಕ್ಕಿರಲ್ಲ…ಇಷ್ಟೆಲ್ಲಾ‌ ತಾಪತ್ರಾಯ ಇದ್ರು ಮನೆ , ಮಕ್ಕಳು, ಸಂಸಾರದ ದೊಡ್ಡ ಜವಾಬ್ದಾರಿ ಹೆಗಲ ಮೇಲಿರುತ್ತೆ‌‌‌.. ಕೊನೆಗೊಮ್ಮೆ ಬ್ಯಾಂಕ್ ಅಧಿಕಾರಿಗಳು, ಸಾಲ ಕೊಟ್ಟವರ ಹಣ ತೀರಿಸಕ್ಕೇ ಆಗ್ದೆ ಅವರ ಕಿರುಕೊಳದಿಂದ ಸಾವೇ ಗತಿ ಅಂತಾ ಹೊಲದಲ್ಲೇ ವಿಷ ತಗೊಂಡೋ , ಮರಕ್ಕೆ‌ ನೇಣು ಬಿಗಿದುಕೊಂಡೋ ತನ್ನ ಪ್ರಾಣಾನ ಬಿಟ್ಟೀರ್ತಾನೆ…ನಾನ್ ಇಷ್ಟಲ್ಲಾ ನಿಮ್ಗೆ ಯಾಕೆ‌ ಹೇಳ್ತಿದ್ದೀನಿ ಗೊತ್ತಾ… ???ಈ ದೊಡ್ಡ ದೊಡ್ಡ ಸಿಟಿ ಗಳ ಕಡೆ ಕೆಲವರು ಒಪ್ಪತ್ತಿನಾ ಊಟಕ್ಕೂ ಪಡಬಾರದ ಕಷ್ಟನೇ ಪಡ್ತಾರೆ…ಆದ್ರೆ ಇವಾಗಿನ forward people’s ಇದಾರಲ್ಲ ಹಾಳಾದ ಹೋಟೇಲ್ಗೆ ಊಟಕ್ಕೆ ಅಂತಾ ಹೋಗ್ತಾರೆ..ಅಲ್ಲು ಕೂಡ ತಿರ್ಕೆ ಶೋಕಿ ಮಾಡ್ತಾರೆ‌.. ಚಾಲುಕ್ಯ ಹೋಟೆಲ್ಗೆ ಕಾಫಿ ಕುಡಿಯಕ್ ಹೋದ್ವಿ , ಪಕ್ಕದ್ table ನಲ್ಲಿ ಎರಡು ಜೋಡಿ ಬಂದ್ರು ಕೂತ್ರು.. ಸೌತ್ ಇಂಡಿಯನ್ ಮಿಲ್ಸ್ ನ order ಮಾಡಿ ಹರಟೆ ಹೊಡಿತಿದ್ರು.. ಊಟ ಬಂದ್ಮೇಲೆ ಅರ್ಧಂಬರ್ದ ತಿಂದು ಊಟದ್ ಮೇಲೆನೆ ಕೈ ತೊಳೆದು ಕೊಂಡು ಹೋದ್ರು.. ಅವರಿಗೆ ಅನ್ನದ ಬೆಲೆ ಗೊತ್ತಾಗಿಲ್ಲ , ಯಾರೋ ದುಡ್ಡು ಕೊಡ್ತಾರೆ , ಇನ್ಯಾರೋ ತಿಂದು ಶೋಕಿ ಮಾಡ್ತಾರೆ…

ಕಷ್ಟ ಪಟ್ಟು ದುಡಿದು ತಿನ್ನೋವರ್ಗು ಅವರಿಗೆ ತುತ್ತಿನ ಬೆಲೆ ತಿಳಿಯಲ್ಲ ..
ಅದು ರಾತ್ರಿ 11ಹಾಗಿತ್ತು ಬುಲ್ ಟೆಂಪಲ್ ರೋಡ್ ಹೋಟೆಲ್ ಎಲ್ಲಾ close ಹಾಗಿತ್ತು ಇನ್ನೇನ್ ಮಾಡದು ಅಂತಾ ಅಲ್ಲೆ ಇದ್ದ Domino’s pizza ಸೆಂಟರ್ ಗೆ ಹೋದೆ ಅಲ್ಲೂ ಅಷ್ಟೇ ರೀ ಬೇಕಾ ಬಿಟ್ಟಿ ತಿಂದು ಮಿಕ್ಕಿದ್ನೆಲ್ಲಾ plate ನಲ್ಲೇ ಬಿಡ್ತಿದ್ರು … ಪಾಪ ಅಲ್ಲೆ ಆಚೆಕಡೆ ಒಬ್ಬ ಅನಾಥ ಹುಡ್ಗ ಅದನ್ನೆ ನೋಡ್ಕೊಂಡು ನಿಂತಿದ್ದ .. ಆ ಸರ್ವರ್ ಬಂದು ಮಿಕ್ಕಿರದ್ನೆ ಪಾಕೇಟ್ ಕಟ್ಟಿ ಆ ಹುಡುಗನಿಗೆ ಕೊಟ್ಟ‌‌‌… ನಾನ್ ಕೇಳ್ದಾಗ daily ಇದೇ ಸಾರ್ ಇವರ್ಗಳು ಬರ್ತಾರೆ, ಮಿಕ್ಕಿದ್ನೆ ತಿನ್ಕೊಂಡು ಖುಷಿ ಪಡ್ತಾರೆ ಅಂದ…
ಎಷ್ಟೋ ಜನ ಇವತ್ತಿಗೂ ಕೂಡ, ವಾಸ ಮಾಡಕ್ಕೆ ಮನೆ ಇಲ್ದಲೆ, ತಿನ್ನಕ್ಕೆ ಅನ್ನಾ ಇಲ್ದಲನೆ ಸಾಯ್ತಿದ್ದಾರೆ…
ಇಷ್ಟೇ ನೋಡಿ ಬದುಕು ಹಲ್ಲು ಇದ್ದೋನ್ಗೆ ಕಡ್ಲೆ ಇಲ್ಲಾ‌, ಕಡ್ಲೆ ಇದ್ದೋನ್ಗೆ ಹಲ್ಲೆ ಇಲ್ಲಾ‌‌..
ದುಡ್ಡು ಇದ್ದೋನು ಪೂರ್ತಿ ತಿನ್ನಲ್ಲ..
ದುಡ್ ಇಲ್ದೋನು ಸಿಕ್ಕಿದ್ನೆ ಬಿಡಲ್ಲ‌..
ಇನ್ನು ಕೆಲ ಜನ ಮಕ್ಕಳ ಮದುವೇನ ಧಾಮ್ ಧೂಮ್ ಅಂತಾ ಜೋರಾಗ ಮಾಡ್ತಾರೆ ಹತ್ತಾರು variety ಊಟ ಮಾಡ್ಸಿರ್ತಾರೆ… ಮಿಕ್ಕಿದ್ ಊಟನ corporation ಗಾಡೀಲಿ ಕಸದ ರಾಶಿಲಿ ಹಾಕಿ ಕೈ ಸೀಟ್ಕೋತಾರೆ..
ಅದೇ ಕಸದಲ್ಲಿ ಹಾಕೋ ಬದ್ಲು ಯಾವುದಾದ್ರು ಅನಾಥ ಆಶ್ರಮಕ್ಕೋ ಇಲ್ಲಾ ಹಸಿದು ಬೀದಿನಲ್ಲಿ ಬಂದೋರ್ಗೆ ಕೊಟ್ರೆ ಅನ್ನದಾನಕ್ಕಿಂತ ಶ್ರೇಷ್ಠದಾನ ಮತ್ತೊಂದು ಇಲ್ಲಾ ಅನ್ನೋ ಭಾವನೆ ನಂದು…

ಇನ್ನೂ ಕೆಲವರು ರಾತ್ರಿ ಮಾಡಿದ್ದ ಅನ್ನ ಮಿಕ್ಕಿದ್ರೆ ಬೆಳಗ್ಗೆ ತಿನ್ನದೆ ಬಿಸಾಕ್ತಾರೆ , ನಾನ್ ತಂಗಳು ತಿನ್ನಲ್ಲ ಅಂತ ಧಿಮಾಕ್ ತೋರುಸ್ತಾರೆ…. ಕೆಲವರು ಮನೆ ಮುಂದೆ ಭಿಕ್ಷುಕ ಬಂದ್ರೆ ಅವನ ಪಾತ್ರೆಗೆ ಹಾಕ್ತರೆ , ಕೆಲವರು ಬೀದಿ ಹಸುಗಳು ತಿನ್ತವೆ ಅಂತಾ ಮುಸರೆಗೆ ಹಾಕ್ತಾರೆ..
ಇಲ್ಲಾ ಅಂದ್ರೆ ನಮ್ ಥರ ಮೋಸ್ಟ್ ವಾಂಟೆಡ್ ಬ್ಯಾಚುಲರ್ಸ್ ಆದ್ರೆ ಬೆಳಗ್ಗೆಗೆ ಅದೇ ಒಗ್ಗರಣೆ ರೈಸ್ …ಇವತ್ತು ರೈತ ಒಂದು ತುತ್ತು ಅನ್ನ ಬೆಳೆದು ನಮಗೆ ನೀಡಬೇಕು ಅಂದ್ರೆ ಅವನು ಪಡುವ ಕಷ್ಟ ಅಷ್ಟಿಷ್ಟಲ್ಲ..so ಎಲ್ಲರೂ ದಯಮಾಡಿ ತಿನ್ನುವ ಅಗಳನ್ನು waste ಮಾಡ್ಬೇಡಿ… ಒಂದೊಂದು ಕಾಳಿನಲ್ಲೂ ನೂರಾರು ಮಣ್ಣಿನ ಮಕ್ಕಳ‌ ಬೆವರು ಹನಿ ಇರುತ್ತೆ…

ಹಾಗಾಗಿ ರೈತನ ಪರಿಶ್ರಮ ಕ್ಕೆ ಬೆಲೆ ನೀಡಿ .. ಇವತ್ತು ಕಾವೇರಿ ಇರ್ಬೋದು , ಮಹದಾಯಿ ಇರ್ಬೋದು … ಆ ತಾಯಿನ‌ ನೆಚ್ಕೊಂಡು ಎಷ್ಟೋ ಕುಟುಂಬ ಗಳು ಜೀವನ ಸಾಗಿಸ್ತಿವೆ , ಕೃಷಿನೇ ಜೀವನ ಅನ್ಕೊಂಡು ಹೊದ್ದಾಡ್ತಿವೆ.‌ ನೀವೇನು ಇವತ್ IT BT ನಲ್ಲಿ ಟೈಮ್ – ಟೈಮ್ ಗೆ ತಿನ್ಕೊಂಡು , ಕುಡ್ಕೊನಮಡು ಲೈಪ್ ಲೀಡ್ ಮಾಡ್ತಿದ್ದೀರ ಇದ್ಕೆಲ್ಲಾ ನಮ್ ರೈತರೆ ಕಾರಣ..
ಹಾಗಾಗಿ ತಾವೆಲ್ಲ
ಅನ್ನದಾತನ ಬೆಂಬಲಕ್ಕೆ ಸದಾ ಮುನ್ನುಗ್ಗಿ ಬನ್ನಿ‌‌‌…
ಅವನ ಸಂಕಷ್ಟಕ್ಕೆ ಸದಾ ಕೈ ಜೋಡಿಸಿ .

ಜೈ ಜವಾನ್ ಜೈ ಕಿಸಾನ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

ವಿದ್ಯಾರ್ಥಿ ಮಿತ್ರ ಕಿರಣ್ ಮೂಲತಃ ನಾಡಪ್ರಭು ಕೆಂಪೇಗೌಡರ ಮಾಗಡಿಯವರು.ಇವರು ವಿದ್ಯಾರ್ಥಿಗಳ ಒಳಿತಿಗಾಗಿ ಏಕರೂಪ ಸಮಾನ ಶಿಕ್ಷಣದ ಹೋರಾಟದಿಂದ, ಕಾವೇರಿ, ಮಹದಾಯಿ ಹೋರಾಟದವರೆಗೂ ಭಾಗವಹಿಸಿ ತಮ್ಮ ಹೋರಾಟದ ಪ್ರಕ್ರಿಯೆಯಲ್ಲಿ ತಮ್ಮದೇ ಆದ ವಿಶಿಷ್ಟಛಾಪನ್ನು ಮೂಡಿಸಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣ ಪಡೆದಿರುವ ಇವರು, ಖಾಸಗಿ ಕಂಪನಿಯ ‌ನೌಕರನಾಗಿ, ಹಾಗೆಯೇ ಮಾಗಡಿಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಅತಿಥಿ ಬೋಧಕರಾಗಿ ಕೆಲವು ವರ್ಷಗಳ ಕಾಲಕಾರ್ಯನಿರ್ವಹಿಸಿದ್ದಾರೆ. ನಂತರ ಸಾಮಾಜಿಕ ಬದಲಾವಣೆಗಾಗಿ ಹರಸಿ,ಮಾಧ್ಯಮ‌ಲೋಕಕ್ಕೆ ಬಂದು ಟಿವಿ1 ಸಂಸ್ಥೆಯಲ್ಲಿ ವರದಿಗಾರನಾಗಿ ಕೆಲಸ ಮಾಡಿ, ನಂತರ ಮಾದ್ಯಮ ಲೋಕದ ದಿಗ್ಗಜರನ್ನೊಳಗೊಂಡ 'ಫಸ್ಟ್ ನ್ಯೂಸ್ ಕನ್ನಡ' ಸುದ್ದಿವಾಹಿನಿಯಲ್ಲಿ ವರದಿಗಾರನಾಗಿ‌ ಕಾರ್ಯನಿರ್ವಹಣೆ ಮಾಡುತ್ತಾ, ಇಂದು ನಿಮ್ಮ ಮುಂದೆ ಬರಹಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. E-Mail:rockeyravi.mn@gmail.com Twitter : vidyarthimitrakiran, Mobile:8867199937

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

Published

on

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.

ಹೈಲೈಟ್ಸ್

  • ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಶಂಕಿತ ಡ್ರೋನ್ ಹಾರಾಟ
  • 🇵🇰 ಡ್ರೋನ್ ಪಾಕಿಸ್ತಾನದ ದಿಕ್ಕಿಗೆ ವಾಪಸ್ ತೆರಳಿದ ಶಂಕೆ
  • ಡ್ರೋನ್‌ನಿಂದ ವಸ್ತುಗಳನ್ನು ಕೆಳಗೆ ಹಾಕಲಾಗಿದೆಯೇ ಎಂದು ಶೋಧ
  • ಉಧಂಪುರ, ಕಥುವಾ, ರಾಜೌರಿಯಲ್ಲಿ ಜಂಟಿ ಸರ್ಚ್ ಆಪರೇಷನ್
  • ಶಸ್ತ್ರಸಜ್ಜಿತ ವ್ಯಕ್ತಿಗಳ ಮಾಹಿತಿ ಹಿನ್ನೆಲೆ ರಾಜೌರಿಯಲ್ಲೂ ಹೈ ಅಲರ್ಟ್

http://Visit : www.suddidina.com

ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್

ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ

ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ

ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಕಣ್ಗಾವಲು

ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.

ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

Continue Reading
Advertisement

Title

ದಿನದ ಸುದ್ದಿ4 days ago

ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್,...

ದಿನದ ಸುದ್ದಿ6 days ago

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ...

ದಿನದ ಸುದ್ದಿ2 weeks ago

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ...

ದಿನದ ಸುದ್ದಿ2 weeks ago

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು...

ದಿನದ ಸುದ್ದಿ2 weeks ago

ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು

ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ....

ದಿನದ ಸುದ್ದಿ2 weeks ago

ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ? ಯಾವ ರಾಶಿಗೆ ಎಚ್ಚರಿಕೆ? ಇಲ್ಲಿದೆ 12 ರಾಶಿಗಳ ಸಂಪೂರ್ಣ ಭವಿಷ್ಯ!

ಸುದ್ದಿದಿನ,ನಿತ್ಯಭವಿಷ್ಯ: ಸೆಪ್ಟೆಂಬರ್ 10, 2026 ರ ನಿಮ್ಮ ಜಾತಕವನ್ನು ಅನ್ವೇಷಿಸಿ. ವೃತ್ತಿ, ಹಣ, ಪ್ರೀತಿ ಮತ್ತು ಆರೋಗ್ಯದ ಸಂಪೂರ್ಣ ಭವಿಷ್ಯವಾಣಿಗಳನ್ನು ಓದಿ. http://Visit : www.suddidina.com ಮೇಷ:...

ದಿನದ ಸುದ್ದಿ2 weeks ago

ದೇಶದಲ್ಲಿ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು: ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಕೆಪಿಸಿಎಲ್ ಹಾಗೂ ಕೆಪಿಸಿಎಲ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಣೆ ಎಸ್ಎಸ್ಎಲ್ ಸಿ, ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ...

ದಿನದ ಸುದ್ದಿ2 weeks ago

5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!

ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ...

ದಿನದ ಸುದ್ದಿ2 weeks ago

ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!

ಸುದ್ದಿದಿನ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ...

ದಿನದ ಸುದ್ದಿ2 weeks ago

ಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಮತ್ತು ಪರಿಹಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಕುರಿತು ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಉಪಸಮಿತಿ...

Trending