ಬಹಿರಂಗ
ಕುರುಡು ಕಾಂಚಾಣ ನೀನೊಮ್ಮೆ ಕಣ್ತೆರದು ನೋಡು..
ಅವತ್ತು ರಜೆ ಮೇಲೆ ಬೆಂಗಳೂರಿಗೆ ಹೋಗಿದ್ದೆ , IPL match ನಡಿತಿತ್ತು.. ಅವತ್ತಿನ್ match ಯಾರ್ ಗೆಲ್ತಾರೆ ಅಂತಾ ನಮ್ ಹುಡುಗರು ಕೇಳುದ್ರು , ನಾನು ನನ್ idea ಮೇಲೆ ಅಡ್ಡೇಟ್ ಮೇಲೆ ಗುಡ್ಡೇಟ್ ಹಾಕ್ದಂಗೆ ಒಂದ್ team ಹೆಸರು ಹೇಳ್ದೆ… ನನ್ ಅದೃಷ್ಟಾನೋ,
ಏನೋ ! ಅವತ್ತಿನ್ match ನಲ್ಲಿ ಅದೇ team ವಿನ್ ಆಯ್ತು… So ಅದೇ ಸಾಕಾಯ್ತು ನನ್ friends ಗೆ ಬೆಟ್ಟಿಂಗ್ ನಲ್ಲಿ ಬಂದಿದ್ದ ದುಡ್ನಲ್ಲಿ ಫುಲ್ ಪಾರ್ಟಿ ಮಾಡಕ್ಕೆ decide ಮಾಡುದ್ರು …. ಅದೇ time ನಲ್ಲಿ ನನ್ friend ಮಾವ ನಾನೇಳಿದ ಮಾತನ್ನೆ ನಂಬ್ಕೊಂಡು ಎಣ್ಣೆ ನಶೆನಲ್ಲಿ ಬೆಟ್ಟಿಂಗ್ ಹಾಕಿದ್ರಂತೆ… ಅವ್ರಗೂ ಲಾಟರಿ ಹೊಡ್ದಿತ್ತು… ಬಾ ಮಗಾ ನಿಂಗೆ ಬೆಂಗಳೂರು ಸ್ವರ್ಗ ತೋರುಸ್ತೀನಿ ಅಂತಾ ಕರ್ಕೊಂಡೋದ್ರು…
ರಾತ್ರಿ 9ಗಂಟೇಲಿ Car ಅತ್ಕೊಂಡೆ , ನೈಸ್ road ಜಂಕ್ಷನ್ ಇಂದ city ಆಚೆ ಹೋಗಿದ್ ಮಾತ್ರ ಗೊತ್ತು, ಮಿಕ್ಕಿದ್ address ನಂಗೆ ಗೊತ್ತಿಲ್ಲ…
Car ಇಂದ ಕೆಳಗೆ ಇಳಿತ್ತಿಂದಂಗೆ ದೊಡ್ಡ building ಕಾಣಿಸ್ತು .… May be ಅದು ಬೆಂಗಳೂರಿನ ದೊಡ್ಡ ಪಬ್ ಅನ್ನೊದ್ ನಂಗ್ ಗೊತ್ತಾಯ್ತು…
Buildings ಸುತ್ತ ಕಾಂಪೌಂಡ್ .. ಗೇಟ್ ಅಲ್ಲಿ ಇಬ್ರು ಅಜಾನುಬಾಹುಗಳ ತರ ಇರೋ watchman ಗಳು… ಒಂದ್ ಕಡೆ ಪಾರ್ಕಿಂಗು ಇನ್ನೊಂದ್ ಕಡೆ striking…
ದೊಡ್ಡದಾದ ಬಾಗಿಲು entry ಅಂತಾ sign board ಬೇರೆ ನೇತಾಡ್ತಾ ಇತ್ತು… ಅಲ್ಲಿಬ್ಬು ದಾಂಡಿಗ್ರು black t shirts .. ಅದ್ರಲ್ಲಿ t shirts ಯಾವುದು ಅವರ ಬಾಡಿ ಯಾವುದು ಒಂದು ಗೊತ್ತಾಗ್ತಿರ್ಲಿಲ್ಲ ಆ ರೇಂಜಲ್ಲಿದ್ರು…
ಒಳಗಡೆ entry ನಲ್ಲಿ ಸಣ್ಣಾ ಪುಟ್ಟ chekingsಊ…. ಅವ್ರು ಏನೋ ತೋರ್ಸಿದ್ರು ಜೊತೆಲಿ ನನ್ನು ಬಿಟ್ಟರೂ… ಒಳಗೋದೆ ಫುಲ್ ಬ್ಲೂ ಕಲರ್ lights.. ಜೊತೆಗೆ ಅರ್ಥ ಆಗ್ದಲೆ ಇರೋ ಯಾವುದೋ ಇಂಗ್ಲೀಷಿನಾ ಸಾಂಗು… ಏನು ಕೇಳ್ಸಕ್ಕಿಲ್ಲ ಆದ್ರಲ್ಲಿರೋ music’s ಮಾತ್ರ ಕಿವಿಗೆ ಬೀಳ್ತಿತ್ತು…
ಅಲ್ಲೊಂದ್ ಸೋಪಾ ಮೇಲೆ ಕೂತ್ಕೊಂಡೆ.. ಏನಾದ್ರು order ಮಾಡು ಅಂತಾ ಹೇಳಿದ್ರು… ನಾನು badam drink ಅಂದೇ… ನಕ್ಕಿದ್ರು..!!
ನಾನ್ ಕುಡ್ಯದು ಅದೇ ಸಾರ್ ಅಂದೆ…
ಪಕ್ಕದ್ table ನಲ್ಲಿ ಒಬ್ಳು ಕುಡಿತಿದ್ಲು… ಅವಳನ್ನ ನೋಡು ಅಂದ್ರು ..ನೀರಿನ್ ಥರ ಇತ್ತು transparent ಗ್ಲಾಸ್ ನಲ್ಲಿ ಕುಡಿತಿದ್ಲು… ನಾನು ಬಿಡಿ ಸಾರ್ sprite ಕುಡಿತಾವ್ಳೆ ಅವಳನ್ಯಾಕೆ ನಾನ್ ನೋಡ್ಲಿ.. ಅಂದೆ.. ! ಅದಕ್ಕೆ ಅವರು ಅಂದ್ರು ಮಗು ನೀನ್ ಕಲಿಯದು ಬೇಜಾನ್ ಇದೆ ಅದು white rum ಅಂದ್ರು…
ನನಗೆ ನಾನೆ ಒಂತರ ಜುಗುಪ್ಸೆ ಅನ್ನಿಸ್ತಿತ್ತು… ಪಬ್ಬು ಅಂದಮೇಲೆ ಇದೆಲ್ಲಾ ಮಾಮುಲಿ , ಇನ್ನು ಇದೆ ನೋಡದು ಅಂದ್ರು… ನಾನು ಅದೇನ್ ಗನಾಂಧಾರಿ ಕಾರ್ಯ ಅಂತಾ ..ರಾಮನಿಗಾಗಿ ಕಾದ ಶಬರಿಯಂತೆ ಕಾಯ್ತ ಇದ್ದೆ!!!!
ಅವಳು ತನ್ನ ಮೈ ಮಾಟದಿಂದ ಅಲ್ಲಿದ್ದವರ ಕತ್ತಲೆಯನ್ನು ಕದ್ದ ಪೋರಿ… ಬರೀ ಕತ್ತಲೆಯನ್ನೇ ಅಲ್ಲಾ..? . ಅವರ ಇಡೀ ಖಜಾನೆಯನ್ನೆ ಕದಿಯಲು ಬಂದಿರುವ ಮಾಯಾವಿ ನಾರಿ ಅಂತಾ ಆಗ್ಲೆ ಗೊತ್ತಾಗಿದ್ದು…!!!
Background ನಲ್ಲಿ English song play ಆಗ್ತಿತ್ತು ಅದಕ್ಕೆ ತಕ್ಕನಾಗಿ ಈಕೆ dance ಮಾಡ್ತಿದ್ಲು..ಇನ್ನು ಜಾಸ್ತಿಅಂದ್ರೆ ಅಲ್ಲಿಸ್ದ table ಅತ್ರನು ಬಂದು dance ಹಾಡೋಳು ಆಗ ಅಲ್ಲಿದ್ದವರು ಒಂದ್ ಕೈನಲ್ಲಿ scotch , ಇನ್ಮೊಂದ್‌ಕೈನಲ್ಲಿ ಅವಳ ಮೇಲೆ ನೋಟಿನ ಕಂತೆಯನ್ನೇ ತೆಗೆದು ಎಸಿತಿದ್ರು… 50,100, 500… ನೋಟುಗಳು ಅವಳ ಮೇಲೆ ಬಿಸಾಕ್ತಿದ್ರು.. ಅವಳತ್ರ ಹೋಗಿ ಅವಳ ಮೇಲೆ ಚೆಲ್ಲಾಡ್ತಿದ್ರು ,ಆಕೆಏನಾದ್ರು ಇವತ ಜೊತೆ dance ಮಾಡಕ್ಕೆ ಅಂತಾ ಬಂದ್ರೆ ಅದಕ್ಕೂಡ extra charges applicable, ಅವಳ ಮೇಲೆ ಆ ಉರಿಯೋ ದಿಡ್ಡಿನ ಮಳೆನ ಅವಳ assistant ಬಂದು ಆ ದುಡ್ಡನ್ನ collect ,ಮಾಡ್ಕೊತ್ತಿದ್ದ…. ಆವಾಗ ಅನ್ಸಿತ್ತು ಈ ಬಡ್ಡಿ ಮಕ್ಕಳಿಗೆ ದುಡ್ಡಿನ ಮೇಲೆ ಎಷ್ಟು ಸೊಕ್ಕಿದೆ ಅಂತಾ… ಅಲ್ಲಿನ ಕ್ಷಣಿಕ ಸುಖಕ್ಕೋಷ್ಕರ ದುಡ್ಡಿನಕಂತೆನೆ ಹಂಗೆ ಎಸೆಯೋರು ಯಾಕ್ ಹಿಂಗೆ ಯೋಚನೇನೆ ಮಾಡಲ್ಲಾ, ಅಂತಾ…. ??
ಇವತ್ತು ಎಷ್ಟೋ ಬಡ ಮಕ್ಕಳು ಶಿಕ್ಷಣ ದಿಂದ ವಂಚಿತರಾಗತ್ತಿದ್ದಾರೆ, ನಮ್ಮ ಭಾರತದಲ್ಲಿ 60 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಇವತ್ತು ಶಿಕ್ಷಣ ಪಡಿಲಾರದೆ ಅನಕ್ಷರಸ್ಥರಾಗೆ ಉಳಿತಿದ್ದಾರೆ.. 59% ಹೆಣ್ಣು ಮಕ್ಕಳು ಅವಿದ್ಯಾವಂತರಾಗೆ ಉಳಿದಿದ್ದಾರೆ.
ಇವತ್ತಿನ ದಿನದಲ್ಲಿ ಒಂದೊಂದು ತುತ್ತು ಅನ್ನಕ್ಕೋಸ್ಕರ ಅಲೆಯುತ್ತಿದ್ದಾರೆ, 38% ಜನ ತುತ್ತು ಅನ್ನವಿಲ್ಲದೆ ಸಾಯ್ತ ಇದಾರೆ, ಅಂತೋರಿಗಾದ್ರು ದಾನ ಅಂತಾ ಮಾಡುದ್ರೆ ! , ಎಷ್ಟೋ ಕುಟುಂಬಗಳು ಜೀವನಮಾಡ್ತವೆ . …
ಅಲ್ಲಿರೋರ್ಗೆ ಯಾವಗಪ್ಪ ಹಿಂಗೆ ಅನ್ನಿಸೋದು ಅನ್ನಿಸ್ತಿತ್ತು…
ನಾನು ಕೂಡ ಒಂದು ಮದ್ಯದ ವರ್ಗದ ಕುಟುಂಬದಲ್ಲಿ ಹುಟ್ಟಿ ಬಂದೋನು . ನನ್ನ ತಂದೆ ತಾಯಿ ಆಗಿನ ಕಾಲದಲ್ಲಿ ನಮ್ಮನ ಕೂಲಿ ನಾಲಿ ಮಾಡಿ ಸಾಕಿದ್ರು.. ಬೆಳೆಸಿದ್ರು… ಒದಿಸಿದ್ದರು..ಆದ್ರೆ ಇವತ್ತು ಎಷ್ಟೋ ಜನಕ್ಕೆ ತಂದೆ ತಾಯಿ ಪ್ರೀತಿ ನೇ ಸಿಕ್ಕಿಲ್ಲಾ…ಅಂತಾ ಮಕ್ಕಳಿಗಾದ್ರು ಅವರು ಯಾರದೋ ಮೇಲೆ ದುಡ್ಡನ್ನು ಚೆಲ್ಲುವ ಬದಲು ಅಂತವರ ಶಿಕ್ಷಣಕ್ಕೆ ವ್ಯಯಿಸಿದರೆ… ಈ ದೇಶದ ಚಿತ್ರಣವೇ ಬದಲಾಗುವಂತೆ ಸಾಗುತ್ತೆ…
ನಾನು ಇಂಜಿನಿಯರಿಂಗ್ ಮಾಡ್ವಾಗ್ಲು ಕೂಡ ಬಸ್ ಪಾಸ್ ತಗೋಳಕ್ಕೆ , ಮತ್ತೆ exam fee ಕಟ್ಟಕ್ಕು ನನ್ ಅತ್ರಾ ದುಡ್ ಇರ್ಲಿಲ್ಲ , ಅವಾಗ ಯಾರೋ ಒಬ್ಬ ಪುಣ್ಯಾತ್ಮನನ್ನು ಕೇಳಿದೆ… ಯಾಕಂದ್ರೆ ಅವಾಗ ನಾನು ಕರ್ನಾಟಕದ ಒಂದು ಪ್ರತಿಷ್ಟಿತ ಕನ್ನಡ ಪರ ಸಂಘಟನೆಯ ವಿದ್ಯಾರ್ಥಿ ಸಂಘದ ಅದ್ಯಕ್ಷ ನಾಗಿದ್ದೆ,..ನಾನು ಯಾವುದೇ ಆಸೆ ಆಕಾಂಕ್ಷೆಗಳನ್ನು ಇಟ್ಕೊಳ್ದೆ ಪ್ರಾಮಾಣಿಕ ವಾಗಿ ವಿದ್ಯಾರ್ಥಿಗಳ ಪರವಾಗಿ , ಕನ್ನಡದ ಪರವಾಗಿ ಹೋರಾಟಮಾಡ್ತದ್ದೆ..ಆದ್ರೆ ಆ ಪುಣ್ಯಾತ್ಮ ನಾನು ಬಸ್ ಪಾಸಿಗೆ ಹಣ ಕೇಳಿದ್ದಾಗ ಇಲ್ಲಾ ಅಂದೋರು…ಪಬ್ ನಲ್ಲಿ ಬಾರ್ ನಲ್ಲಿ ಹುಡುಗಿಯರ ಮೇಲೆ ದುಡ್ಡು ಸುರಿತೀವಿ ಅಂತಾ ಬಡಾಯಿ ಬಿಡ್ತಿದ್ರು....ಸಿಕ್ಕಿದವರ ಜೊತೆ ಎಣ್ಣೆ ಹೊಡ್ಕೊಂಡು ಎಂಜಾಯ್ ಮಾಡ್ತಿದ್ರು ಆದ್ರೆ ಬಸ್ ಪಾಸಿಗೂ ದುಡ್ಡಿಲ್ದೆ ಪ್ರಾಮಾಣಿಕತೆ ಇಂದ ಇದ್ದೊರ್ಗೆ ಬಗಣಿ ಗೂಟ ಇಟ್ರು…
ನಾನ್ ಯಾಕ್ ಈ ಮಾತನ್ನ ನಿಮ್ಮಗಳ ಮುಂದೆ ಹೇಳ್ತಿದ್ದೀನಿ ಅಂದ್ರೆ , ದುಡ್ಡು ಒಬ್ಬ ವೇಶ್ಯೆ ಕೂಡ ಸಂಪಾದನೆ ಮಾಡ್ತಾಳೆ ಆದ್ರೆ ಅಂತವರಿಗೇನೆ ಕಾಳಜಿ ಅನ್ನೋದು ಇರುತ್ತೆ… ಅದೇ ಥರ ನೀವುಗಳು ಕೂಡ ನಿಮ್ಮ ಕ್ಷಣಿಕ ಸುಖಕ್ಕಾಗಿ ಕಾಸನ್ನು ಬಿಸಾಕಿ ಎಸೆಯೋ ಬದಲು, ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳೋ ಬದಲು , ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುವ ಮೂಲಕ, ಇನ್ನೊಬ್ಬರ ಮನದಲ್ಲಿ ಖಾಯಂ ಆಗಿ ನೆಲೆಸೋ ಮೂಲಕ ಸಂತಸ ಕಾಣಿ…
.ನಾನು ನಿಮ್ಮ ವ್ಯಯಕ್ತಿಕ ಜೀವನದ ಬಗ್ಗೆ ಮಾತಾಡ್ತಿಲ್ಲ ಆದ್ರೆ ಅದರಬದಲು ಕೂಡ ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಕೈ ಜೋಡಿಸಿ. ಬಡ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ದಾತರಾಗಿ ಆಶಾಕಿರಣಗಳಾಗಿ..
ಯಾಕಂದ್ರೆ ಹಿಂದೆ ಶ್ರೀ ವಿಶ್ವೇಶ್ವರಯ್ಯ ಬೀದಿ ದೀಪದ ಬೆಳಕಲ್ಲಿ ಓದಿ ಅಸಾಮಾನ್ಯ ಇಂಜಿನಿಯರ್ ಆಗಿ ಇಂದು ನಮ್ಮೆಲ್ಲರ masterpiece ಆದ್ರು. ಆದ್ರೆ ಇವತ್ತು ಅದೇ ಥರ ಬೀದಿ ದೀಪದ ಕೆಳಗೆ ಕೂತು ಓದು ಅನ್ನೊದಿಕ್ಕೆ ಹಾಗಲ್ಲ…
ವಿದ್ಯಾರ್ಥಿ ಮಿತ್ರ ಡಾ. ಅಬ್ದುಲ್ ಕಲಾಂ ಅವರು ಕೂಡ ಅವರ ಬಾಲ್ಯದಲ್ಲಿ ಬೀದಿ ಬೀದಿಯಲ್ಲಿ ಪೇಪರ್ ಹಾಕೊಂಡು, ಓದಿ , ವಿಜ್ಞಾನಿಯಾಗಿ , ರಾಷ್ಟ್ರಪತಿಯಾಗಿ , ಅಲ್ಲದೆ ಒಬ್ಬ ಮಹಾನ್ ಪುರುಷ ಆಗಿ ಇವತ್ತು ನಮ್ಗೆಲ್ಲರಿಗೂ inspiration ಆಗಿದ್ದರೆ.. ಅಗಂತಾ ಇವಾಗ ನೀವು ಪೇಪರ್ ಹಾಕೊಂಡು ಓದಿ ಅಂತಾ ಹೇಳಕ್ಕೆ ಆಗಲ್ಲ…
ಲೆಕ್ಕಕ್ಕೆ ತಗೋಂಡ್ರೆ ಒಬ್ಬರಲ್ಲಾ ಸಾವಿರಾರು ಜನ ಸಿಕ್ತಾರೆ…ಆದ್ರೆ ಅಂದಿನ ಪರಿಸ್ಥಿತಿನೇ ಬೇರೆ ಇಂದಿನ್ ದುಸ್ಥಿತಿನೇ ಬೇರೆ , ಹಾಗಾಗಿ ನಾನು ಹೇಳೋದು ದುಂದು ವೆಚ್ಚಕ್ಕೆ ಅವಕಾಶ ಕೊಡೋ ಬದಲು , ಇನ್ನೊಬ್ಬರ ನಾಳಿನ ಶಿಕ್ಷಣ ಕ್ಕಾಗಿ ಸಹಾಯ ಮಾಡಿ ಅನ್ನೋದೆ ನನ್ನೊಬ್ನನ ಮಾತಲ್ಲ… ಸಕಲರಮಾತು…
ಇದು ಕೇವಲ ಬರೀ ಪಬ್ ಒಂದರಲ್ಲೆ ಮಾಡೋ ಕೆಲಸವಲ್ಲ… ಯಾವುದೋ ಕುದುರೆ ಬಾಲಕ್ಕೆ ಜೂಜುಕಟ್ಟಿ ಸೋಲುವ ಬದಲು, ಕಂಡೋರ್ ಜೊತೆ ಪಾರ್ಟಿ ಮಾಡಿ ಕುಡ್ಕೊಂಡು ಬೀಳೋ ಬದಲು , ಇದರಿಂದಲು ಕೂಡ ಸ್ವಲ್ಪ ಸ್ವಲ್ಪವೇ ದಾನದ ಮೂಲಕ ನಾಲ್ಕು ಮಕ್ಕಳ ಅಕ್ಷರದಾತ ನಾಗಬಹುದು… ಅದಕ್ಕಾಗಿ ಇನ್ನ ಮೇಲಾದ್ರು ದಯಮಾಡಿ ದುಂದು ವ್ಯಯ ಮಾಡುವ ಬದಲು ಸಮಾಜಮುಖಿಯಾಗಿ ಇರಿ…ನಿಮ್ ನಿಮ್ ಲೈಪು ನೀವು ಎಂಜಾಯ ಮಾಡಿ ಆದ್ರೆ ನಿಮ್ ಆ ಒಂದು ಕಾಸಿನ ದಾನದಿಂದ ಇನ್ನೊಬ್ಬನ ಮುಖದಲ್ಲಿ ಅರಳೋ ಮಂದಾಹಾಸವಾಗಿ… ನಾಳಿನ ಬಲಿ಼ಷ್ಠ ಭಾರತವಾಗಿ…
ದಾನಕಿಂತ ಶ್ರೇಷ್ಠ ದಾನ ವಿದ್ಯಾದಾನ…

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.



