ಕೇಳಿದ್ದೇನೆ : ಆ ಪ್ರಧಾನಿ ಕುಡಿಯುವುದಿಲ್ಲವಂತೆ ಮೀನು ಮಾಂಸ ತಿನ್ನುವುದಿಲ್ಲವಂತೆ, ಸಿಗರೇಟು ಚುಟ್ಟ ಸೇದುವುದಿಲ್ಲವಂತೆ ಅವನಿರುವುದು ಒಂದು ಸಾಧಾರಣ ಮನೆಯಲ್ಲಂತೆ. ಮತ್ತೆ ಇದನ್ನೂ ಕೇಳಿದ್ದೇನೆ : ಆ ದೇಶ ಬಡಜನ ಹೊಟ್ಟೆಗಿಲ್ಲದೆ ಪಾಡು ಪಡುತ್ತಿದ್ದಾರಂತೆ....
ರಕ್ತ ನಮ್ಮದಾದರೇನು? ಅವರದಾದರೇನು? ಒಟ್ಟಿನಲ್ಲದು ಮನುಷ್ಯರದ್ದೇ. ಯುದ್ಧ ಪೂರ್ವದಲ್ಲಾದರೇನು? ಪಶ್ಚಿಮದಲ್ಲಾದರೇನು? ಒಟ್ಟಿನಲ್ಲಿ ಕುಸಿಯುವುದು ಶಾಂತಿನಿಕೇತನವೇ. ಬಾಂಬುಗಳು ಮನೆಯ ಮೇಲೆ ಬಿದ್ದರೇನು? ದೂರದ ಗಡಿಯಲ್ಲಾದರೇನು? ಭೂಮಿಯ ಹೊಲಿಗೆಗಳು ಘಾಸಿಗೊಳ್ಳುತ್ತವೆ ಬೆಂಕಿಬಿದ್ದ ಹೊಲ ನಮ್ಮದಾದರೇನು? ಅವರದಾದರೇನು? ಸುಡುಬೆಂಕಿಗೆ...
ಜಗದ ಗೋಡೆಗಳು ಸಾವಿರ ವರುಷಗಳಿಂದಲೂ ನೋಡುತ್ತಿವೆ ಹಾಳು ಹಸಿವು ಅನ್ನ ಬಸಿಯುವವರೆಗೂ ತಾಳುತ್ತಿಲ್ಲ ಹಗಲು ರಾತ್ರಿಯಾಗುವತನಕ ರಾತ್ರಿ ಹಗಲಾಗುವತನಕ ಹಸಿವಿಗಾಗಿ ನಡೆಯುತ್ತಲೇ ಇವೆ ಕೃತ್ಯಗಳು ಇತ್ತ ಕವಿ ಮಾತ್ರ ಲೇಖನಿ ಹಿಡಿದವ ಇನ್ನೂ ಕೈ...
“ಶಾಲೆಯಲ್ಲಿಯೇ ನಾನು ದಾದಾನಾಗಿ ಪ್ರಾರಂಭಿಸಿ ಬದ್ರತೆಗಾಗಿ ಹಣ ಸಂಗ್ರಹಿಸುತ್ತಿದೆ, ಮನೆಯಲ್ಲಿರುವ ಪ್ರತಿಯೊಂದನ್ನು ನನ್ನ ತಾಯಿಯ ಮಂಗಳಸೂತ್ರವನ್ನೂ ಒಳಗೊಂಡು ಕಳ್ಳತನ ಮಾಡುತ್ತಿದ್ದೆ. ” ಆದರೆ ಸಿನಿಮಾ ನೋಡೊದಕ್ಕೂ ಮದ್ಯಪಾನ ಮಾಡೋದಕ್ಕೂ ಹಣವನ್ನು ಹೇಗೆ ಕದಿಯಬೇಕೆಂದು ಕಲಿಸಿದ ನನ್ನ...
ನಾ ನಾನಾಗಿದ್ದೆ. ಬಡತನ ನನ್ನ ಮನೆಯನ್ನು ಕಿತ್ತುತಿನ್ನುವ ಮೊದಲು, ಆಡಿ ನಲಿಯುವ ವಯಸ್ಸಲ್ಲಿ ಜವಾಬ್ದಾರಿಗಳು ಹೆಗಲೇರುವ ಮೊದಲು. ನಾ ನಾನಾಗಿದ್ದೆ. ಜೀವನದಲ್ಲಿ ಕನಸುಗಳನ್ನೊತ್ತು ಬದುಕುವ ಛಲ ಹೊಂದಿ ಕೆಲಸವನ್ನರಸಿ ಎಂದೂ ಕಾಣದ ಪಟ್ಟಣವೆಂಬ ಮಾಯಾಜಾಲವನ್ನು...
ಪ್ರೀತಿ ಅಂದ್ರೆ ಏನು? ಯಾಕಂದ್ರೆ ನಾವು ಬೇರೆ ಬೇರೆ ಅನುಭವಗಳನ್ನ ಪ್ರೀತಿ ಅಂತ ಹೇಳ್ತಿವಿ. ನಾವು ಯಾರನ್ನ ಬಿಟ್ಟಿರೊಕಾಗಲ್ವೋ ಅದು ಪ್ರೀತಿನಾ ? ಸರಿ ಇದ್ನ ಪ್ರೀತಿ ಅಂತ ಒಪ್ಕೊಂಡ್ರೆ ಇಲ್ಲಿ ಒಬ್ಬ ಕುಡುಕನಿಗೆ ಎಣ್ಣೆ...
ದಿನವೂ ಸಂಜೆ ನಮ್ಮ ಮನೆ ಎದುರಿನ ಮನೆ ಮುಂದೆ ಅಕ್ಕ ಪಕ್ಕದ ಸುಮಾರು ಐದಾರು ಹೆಂಗಸರು ಕೂತು ಹರಟೆ ಹೊಡಿತಿರ್ತಾರೆ. ಅವರು ಸ್ವಲ್ಪ ಜೋರಾಗಿ ಮಾತಾಡಿದ್ರು ನಮಗೆ ನೀಟಾಗಿ ಕೇಳಿಸುತ್ತೆ. ಹೀಗೆ ನಿನ್ನೆ ಸಂಜೆ ಗಿಡಗಳಿಗೆ...
ನಾವು ನೀವು ತುಂಬಾ ಸಲ ಹಾಗೆ ಮಾಡಿರುತ್ತೇವೆ. ದಾರಿಯಲ್ಲೆಲ್ಲೋ ಸಿಕ್ಕಿದ್ದು ತಿಂದುಕೊಂಡು ಅಡ್ಡಾಡಿಕೊಂಡಿದ್ದ ಬೆಕ್ಕಿನಮರಿಯನ್ನು ತುಂಬಾ ಆಸ್ಥೆಯಿಂದ ಹಿಡಿದುತಂದಿರುತ್ತೇವೆ, ಅದು ಬರಲೊಲ್ಲದು ನಾವು ಬಿಡಲೊಲ್ಲೆವು, ಎಷ್ಟೇ ತಪ್ಪಿಸಿಕೊಂಡರೂ ಬಿಡದೆ ಹಿಡಿದಿರುತ್ತೇವೆ. ‘ಒಮ್ಮೆ ನನ್ನ ಮನೆಗೆ ಬಾ...
ನನ್ನ ಬೇವಾರ್ಸಿ ಮಾತು ಬಿಡಿ, ಸೂಫಿ ಸಂತರನ್ನು ಕೇಳಿ ನಾಗಾ ಸಾಧುಗಳನೂ ಡಿವಿಜಿಯಂಥ ಡಿವಿಜಿಯೆ ಮಿಕ್ಸ್ ಮಾಡಿದ ಉಮರನ ಒಸಗೆಯ ಕೇಳಿ ತರದೂದಿದ್ದರೆ ಆಮೇಲೆ ತಕರಾರ ಥಕಥೈ ಹೇಳಿ. ಆ ಹಕ್ಕಿಯ ಆ ಕಾನಿನ...
ದೇವರಿಲ್ಲದ ಗುಡಿಯಲ್ಲಿ ಕೊಟ್ಟಿದ್ದು ಪ್ರಸಾದವಲ್ಲವಯ್ಯ ನಮಗೆಂದೇ ಮನೆಯಲ್ಲಿ ಮಾಡಿದ್ದು ಪ್ರಸಾದವಯ್ಯ ತುಂಬಿದ ಹೊಟ್ಟೆಗೆ ತುಂಬಿ ಕೊಳ್ಳೋದು ಪ್ರಸಾದವಲ್ಲವಯ್ಯ ಹಸಿದ ಹೊಟ್ಟೆಗೆ ಅನ್ನ ನೀಡಿದ್ದು ಪ್ರಸಾದವಯ್ಯ ಬೆವರಿಲ್ಲದ ಬಿಟ್ಟಿಊಟ ಪ್ರಸಾದವಲ್ಲವಯ್ಯ ಉತ್ತು ಬಿತ್ತಿ ಬೆಳೆದು ಉಂಡದ್ದು...