Connect with us

ಕ್ರೀಡೆ

ದೇಶದ ಕೀರ್ತಿ ಪತಾಕೆ ಹಾರಿಸಿದ 12 ವರ್ಷದ ಬಾಲಕ !

ವಿಶ್ವದ ಎರಡನೇ ಅತಿ ಕಿರಿಯ ಚೆಸ್ ಗ್ರಾಂಡ್ಮಾಸ್ಟರ್ ಆಗಿ ಹೊರಹೊಮ್ಮಿದ ಚೆನ್ನೈ ಬಾಲಕ

Published

on

ಸುದ್ದಿದಿನ  ಡೆಸ್ಕ್: ಚೆನ್ನೈನ 12 ವರ್ಷದ ಬಾಲಕ ಆರ್. ಪ್ರಗ್ಗ್ನಾನಂದ ದೇಶದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾನೆ.

ಶನಿವಾರ ನಡೆದ ಚೆಸ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಆರ್. ಪ್ರಗ್ಗ್ನಾನಂದ ವಿಶ್ವದ ಎರಡನೇ ಅತಿ ಕಿರಿಯ ಚೆಸ್ ಗ್ರಾಂಡ್ಮಾಸ್ಟರ್ ಆಗಿ ಹೊರಹೊಮ್ಮಿದ್ದಾನೆ. ಈಗ ಪ್ರಗ್ಗ್ನಾನಂದನಿಗೆ ಕೇವಲ 12 ವರ್ಷದ 10 ತಿಂಗಳ 14 ದಿನಗಳ ವಯಸ್ಸು ಮಾತ್ರ.

ಮೊದಲ ಕಿರಿಯ ಗ್ರಾಂಡ್ ಮಾಸ್ಟರ್

1990ರಲ್ಲಿ ಉಕ್ರೇನಿಯನ್ ನಡೆದ ಪಂದ್ಯದಲ್ಲಿ 12 ವರ್ಷ 7 ತಿಂಗಳು ವಯಸ್ಸಿನ ಜಿಎಂ ಸೆರ್ಗೆಯ್ ಕರಾಜಕಿನ್ ಎಂಬ ಬಾಲಕ  ಕಿರಿಯ ಗ್ರಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದರು.

ಇಟಲಿಯ ಒರ್ಟಿಸಿಯಲ್ಲಿ ನಡೆದ ಗ್ರೆಡಿನ್ ಓಪನ್ನಲ್ಲಿ ಆಡುತ್ತಿರುವ ಪ್ರಗ್ಗ್ನಾನಂದ 8 ನೇ ಸುತ್ತಿನಲ್ಲಿ ಇಟಾಲಿಯನ್ ಗ್ರಾಂಡ್ಮಾಸ್ಟರ್ ಲೂಕಾ ಮೊರೊನಿ ಜೂನಿಯರ್ ಅವರನ್ನು ಸೋಲಿಸಿದ್ದಾನೆ. ಮೊದಲ ಸುತ್ತಿನಿಂದಲೂ ಪರಿಣಾಮಕಾರಿ ಆಟ ಆಡಿದ ಪ್ರಗ್ಗ್ನಾನಂದ ಕೊನೆಯ ವರೆಗೂ ರೋಚಕ ಆಟವಾಡಿದ.

ಚೆನ್ನೈ ಹುಡುಗ ಆರ್. ಪ್ರಗ್ಗ್ನಾನಂದ 2017 ರಲ್ಲಿ ವಿಶ್ವ ಜೂನಿಯರ್ಸ್ GM ಪ್ರಶಸ್ತಿ ಪಡೆದಿದ್ದಾನೆ.  ಗ್ರೀಸ್ನಲ್ಲಿ ನಡೆದ ರೌಂಡ್ ರಾಬಿನ್ ಟೂರ್ನಮೆಂಟ್ನಲ್ಲಿ ಎರಡನೇ ಗ್ರಾಂಡ್ಮಾಸ್ಟರ್ ಗೆದ್ದಿದ್ದಾನೆ. ಈ ಮೂಲಕ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ್ದಾನೆ.

English summary: Chennai boy R Praggnanandhaa on Saturday became the second youngest chess grandmaster in the world.

ಕ್ರೀಡೆ

ಸಹಾಯಧನ ನೀಡಲು ಕ್ರೀಡಾಪಟುಗಳಿಂದ ಪ್ರಸ್ತಾವನೆಗಳ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: 2020-21 ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರತಿಭಾವಂತ ಕ್ರೀಡಾಪಟುಗಳಿಗೆ ನೋಂದಾಯಿತ ಕ್ರೀಡಾ ವಿಜ್ಞಾನ ಸಂಸ್ಥೆಗಳಲ್ಲಿ ಸೇವೆಯನ್ನು ಪಡೆಯಲು ಸಹಾಯಧನ ನೀಡಲು ಕ್ರೀಡಾಪಟುಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.

ಪ್ರಸ್ತಾವನೆ ಸಲ್ಲಿಸಬಯಸುವ ಕ್ರೀಡಾಪಟುಗಳು(ವಿಕಲಚೇತನ ಕ್ರೀಡಾಪಟುಗಳೂ ಸೇರಿದಂತೆ) ಭಾರತೀಯ ನಾಗರೀಕರಾಗಿರಬೇಕು ಅಥವಾ ಕರ್ನಾಟಕದಲ್ಲಿ ಕನಿಷ್ಟ ಹತ್ತು ವರ್ಷಗಳ ಕಾಲ ಸಾಮಾನ್ಯ ನಿವಾಸಿಯಾಗಿದ್ದು ಹಿಂದಿನ 3 ಕ್ಯಾಲೆಂಡರ್ ವರ್ಷಗಳಲ್ಲಿ ನಿರಂತರವಾಗಿ ರಾಜ್ಯವನ್ನು ಪ್ರತಿನಿಧಿಸಿರುವ ಯುವ ಕ್ರೀಡಾಪಟುಗಳಾಗಿರಬೇಕು. ಅಂತರರಾಷ್ಟ್ರೀಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಅಥವಾ ರಾಜ್ಯ ಮಟ್ಟದ/ಅಂತರ ರಾಜ್ಯ/ಅಂತರ ವಿಶ್ವವಿದ್ಯಾನಿಲಯ/ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಗಣನೀಯ ಸಾಧನೆ ದಾಖಲಿಸಿರಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಅರ್ಹ ಕ್ರೀಡಾಪಟುಗಳು ಫೆ.3 ರ ಒಳಗಾಗಿ ಪ್ರಸ್ತಾವನೆಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಗೆ ಸಲ್ಲಿಸಬೇಕು. ನಂತರ ಬಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ಈ ಕಚೇರಿಯನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಫೆ. 5 ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ : ಕೋವಿಡ್ ಮಾರ್ಗಸೂಚಿ ಅನುಸರಿಸಿ ಸ್ಪರ್ಧೆಗಳ ಆಯೋಜನೆ : ಮಹಾಂತೇಶ್ ಬೀಳಗಿ

Published

on

ಸುದ್ದಿದಿನ,ದಾವಣಗೆರೆ : ಪ್ರಸಕ್ತ ಸಾಲಿನ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೌಕರರ ಸಂಘದ ಸಹಯೋಗದೊಂದಿಗೆ ದಾವಣಗೆರೆಯಲ್ಲಿ ಫೆ. 5 ರಿಂದ ಮೂರು ದಿನಗಳ ಕಾಲ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಅಚ್ಚುಕಟ್ಟಾಗಿ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.

ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ಆಯೋಜನೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈ ಬಾರಿ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಫೆ. 5, 6 ಮತ್ತು 7 ರಂದು ಮೂರು ದಿನಗಳ ಕಾಲ ಕೋವಿಡ್ ಮಾರ್ಗಸೂಚಿ ಅನುಸರಿಸಿ, ಅಚ್ಚುಕಟ್ಟಾಗಿ ಆಯೋಜಿಸಲು ನಿರ್ಧರಿಸಲಾಗಿದೆ.

ಕ್ರೀಡಾಕೂಟ ಆಯೋಜನೆ ಸ್ಥಳಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಬೇಕು. ಅಧಿಕಾರಿಗಳು ಹಾಗೂ ನೌಕರರ ಸಂಘದವರು ಸರ್ಕಾರದ ಶಿಷ್ಠಾಚಾರದಂತೆ ಚುನಾಯಿತ ಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳನ್ನು ಸಮಾರಂಭಕ್ಕೆ ಆಹ್ವಾನಿಸಬೇಕು.

ನೌಕರರ ಸಂಘದ ತಾಲ್ಲೂಕು ಘಟಕಗಳು ಆಯಾ ತಾಲ್ಲೂಕಿನಲ್ಲಿ ಸಭೆ ನಡೆಸಿ, ಕ್ರೀಡಾಕೂಟ ಆಯೋಜನೆ ಬಗ್ಗೆ ಮಾಹಿತಿ ದೊರೆಯುವಂತೆ ಮಾಡಿ, ಎಲ್ಲ ನೌಕರರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು. ಕ್ರೀಡಾಕೂಟದ ಯಶಸ್ವಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಅಗತ್ಯ ಸಹಕಾರ, ನೆರವು ನೀಡಲಿದೆ. ಒಟ್ಟಾರೆ ಕ್ರೀಡಾಕೂಟದಲ್ಲಿ ನೌಕರರು ಸಂತಸ, ಸಂಭ್ರಮದಿಂದ ಪಾಲ್ಗೊಳ್ಳುವಂತಾಗಬೇಕು.

ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರರಿಗೆ ವ್ಯವಸ್ಥಿತ ರೀತಿಯಲ್ಲಿ ಊಟೋಪಹಾರ, ಟೀಶರ್ಟ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ತಾವೂ ಸಹ ಷಟಲ್ ಬ್ಯಾಡ್ಮಿಂಟನ್ ಆಟಗಾರನಾಗಿದ್ದು, ಖುದ್ದು ಸ್ಪರ್ಧೆಯಲ್ಲಿ ಪಾಲ್ಗೊಂಡು ನೌಕರರಿಗೆ ಪ್ರೋತ್ಸಾಹಿಸುತ್ತೇನೆ ಎಂದು ಹೇಳಿದರು.

ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಪಾಲಾಕ್ಷಿ ಅವರು ಮಾತನಾಡಿ, ಕ್ರೀಡಾಕೂಟ ಆಯೋಜನೆಗೆ ಸರ್ಕಾರದಿಂದ 1.5 ಲಕ್ಷ ರೂ. ಹಾಗೂ ಜಿಲ್ಲಾ ಪಂಚಾಯತ್‍ನಿಂದ 3 ಲಕ್ಷ ಸೇರಿದಂತೆ 4.5 ಲಕ್ಷ ರೂ. ಅನುದಾನದ ಲಭ್ಯತೆಯಾಗಲಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಯಸುವ ನೌಕರರು ತಮ್ಮ ಹೆಸರು ಹಾಗೂ ವಿವರದೊಂದಿಗೆ ನೊಂದಣಿ ಮಾಡಿಸಲು ಜ. 28 ಕೊನೆಯ ದಿನವಾಗಿದೆ. ನಿಗದಿತ ಅವಧಿಯೊಳಗೆ ನೊಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಕೊನೆಯ ಹಂತದಲ್ಲಿ ಸ್ಪರ್ಧೆಗಳಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶವಿಲ್ಲ ಎಂದರು.

ಈ ಬಾರಿಯ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆ ಅಂಗವಾಗಿ, ನೌಕರರ ಸಮುದಾಯ ಭವನದಲ್ಲಿ ಸ್ಪರ್ಧೆಗಳ ಆಯೋಜನೆ ಬಳಿಕ ಸಂಜೆ ವೇಳೆ ಖ್ಯಾತ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಏಪ್ರಿಲ್ 21 ರ ದಿನವನ್ನು ರಾಜ್ಯ ಸರ್ಕಾರಿ ನೌಕರರ ದಿನವನ್ನಾಗಿ ಆಚರಿಸಲು ಸರ್ಕಾರ ಆದೇಶಿಸಿದ್ದು, ಅದರಂತೆ ಅತ್ಯುತ್ತಮ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಗಣರಾಜ್ಯೋತ್ಸವ ಸಮಾರಂಭದ ಬದಲಿಗೆ ಏ. 21 ರಂದು ಜರುಗುವ ನೌಕರರ ದಿನಾಚರಣೆಯಂದು ಪ್ರದಾನ ಮಾಡುವಂತೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಪಾಲಾಕ್ಷಿ ಅವರು ಮನವಿ ಮಾಡಿದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಅವರು ಮಾತನಾಡಿ, ನೌಕರರ ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ವಯೋಮಿತಿ ಆಧಾರದಲ್ಲಿ ಜರುಗಲಿವೆ. ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಫುಟ್ಬಾಲ್, ಹಾಕಿ, ಕ್ರಿಕೆಟ್, ಬ್ಯಾಸ್ಕೇಟ್‍ಬಾಲ್ ಮತ್ತಿತರೆ ಕ್ರೀಡೆಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ, ಕುಸ್ತಿ- ಆಂಜನೇಯ ಬಡಾವಣೆಯ ಕುಸ್ತಿ ಒಳಾಂಗಣ ಕ್ರೀಡಾಂಗಣ, ಚೆಸ್, ಕೇರಂ, ಷಟಲ್ ಬ್ಯಾಡ್ಮಿಂಟನ್- ಎಸ್‍ಎಸ್ ಬಡಾವಣೆಯ ನೇತಾಜಿ ಸುಭಾಷ್‍ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಅಲ್ಲದೆ ಸಾಂಸ್ಕøತಿಕ ಸ್ಪರ್ಧೆಗಳನ್ನು ರಿಂಗ್ ರಸ್ತೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗುವುದು ಎಂದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸಿದ್ದಲಿಂಗಸ್ವಾಮಿ, ಖಜಾಂಚಿ ಕಲ್ಲೇಶ್ವರಪ್ಪ, ಸಂಘಟನಾ ಕಾರ್ಯದರ್ಶಿ ಮಂಜಮ್ಮ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಜಗಳೂರು- ಎನ್.ಸಿ. ಅಜ್ಜಯ್ಯ, ಹೊನ್ನಾಳಿ-ಚಂದ್ರಶೇಖರ್, ಹರಿಹರ-ರೇವಣಸಿದ್ದಪ್ಪ, ನ್ಯಾಮತಿ-ನಾಗರಾಜ್ ಹಾಗೂ ಚನ್ನಗಿರಿ ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ ಮುಂತಾದವರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಪ.ಜಾತಿ/ಪ.ಪಂಗಡಕ್ಕೆ ಸಹಾಯಧನ ಮತ್ತು ಕ್ರೀಡಾಗಂಟಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಜನ ಸಂಘ ಸಂಸ್ಥೆಗಳಿಗೆ ನೋಂದಾವಣೆ ಮಾಡಲು ಸಹಾಯಧನ ಮತ್ತು ಕ್ರೀಡಾಗಂಟನ್ನು ನೀಡುವ ಹೊಸ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿ ತಾಲ್ಲೂಕಿನಲ್ಲಿ 02 ಪರಿಶಿಷ್ಟ ಜಾತಿ ಮತ್ತು 01 ಪರಿಶಿಷ್ಟ ಪಂಗಡದ ಯುವಜನ ಸಂಘವನ್ನು ನೋಂದಾಯಿಸಲು ಸಹಾಯಧನ ಹಾಗೂ ಕ್ರೀಡಾಗಂಟನ್ನು ನೀಡಲಾಗುವುದು. ಜಿಲ್ಲೆಯ 15 ರಿಂದ 35 ವರ್ಷ ವಯೋಮಾನದೊಳಗಿನ ಪ.ಜಾತಿ/ಪ.ಪಂಗಡಕ್ಕೆ ಸೇರಿರುವ ಯುವಕ/ಯುವತಿಯರು ಯುವಜನ ಸಂಘವನ್ನು ರಚಿಸಿಕೊಳ್ಳಲು ಸದವಕಾಶವಿರುವದರಿಂದ ಕರ್ನಾಟಕ ರಾಜ್ಯ ಸಂಘ ಸಂಸ್ಥೆಗಳ ನೋಂದಾವಣೆ ಕಾಯಿದೆ 1960 ರ ಅಡಿಯಲ್ಲಿ ಯುವಜನ ಸಂಘಗಳ ನೋಂದಣಿ ಮಾಡಿಸಿ, ಜ.28 ರೊಳಗಾಗಿ ಮಾನ್ಯತೆಗಾಗಿ ಈ ಕಚೇರಿಗೆ ಸಲ್ಲಿಸಲು ಕೋರಿದೆ. ನಂತರ ಬಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ಕಚೇರಿ ವೇಳೆಯಲ್ಲಿ ಮೊ.ಸಂ: 9620796970 ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ9 hours ago

ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಆತ್ಮಹತ್ಯೆ ; ಕಾರಣ ಏನು ಗೊತ್ತಾ..!?

ಸುದ್ದಿದಿನ,ಬೆಂಗಳೂರು : ಸೀಸನ್ ಮೂರರ ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯಶ್ರೀ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇತ್ತೀಚಿಗೆ ಕೆಲದಿನಗಳಿಂದ ಅತೀವ ಖಿನ್ನತೆಯಿಂದ...

ದಿನದ ಸುದ್ದಿ10 hours ago

ಎಂ.ಜಿ.ಶಶಿಕಲಾ ಮೂರ್ತಿ ನಲ್ಕುದುರೆ ಅವರಿಗೆ ‘ಜನಸೇವಾರತ್ನ’ ರಾಜ್ಯ ಪ್ರಶಸ್ತಿ

ಸುದ್ದಿದಿನ,ದಾವಣಗೆರೆ : ಭಾರತರತ್ನ ಡಾ| ಬಾಬಾಸಾಹೇಬ ಅಂಬೇಡ್ಕರ ಹಾಗೂ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಪ್ರತಿ ವರ್ಷದಂತೆ ಕೊಡಮಾಡುವ ಮಾನವ ಧರ್ಮ 4ನೇ...

ದಿನದ ಸುದ್ದಿ11 hours ago

ದಾವಣಗೆರೆ | ಪ್ರವಾಸಿ ಟ್ಯಾಕ್ಸಿಗೆ ಸಹಾಯಧನ : ಅಂತಿಮ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳ ಆಹ್ವಾನ

ಸುದ್ದಿದಿನ,ದಾವಣಗೆರೆ : ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಪ್ರವಾಸಿ ಟ್ಯಾಕ್ಸಿಗೆ ಸಹಾಯಧನ ಒದಗಿಸಲು ಫಲಾನುಭವಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಆಯ್ಕೆ ಪಟ್ಟಿ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. 2012-13 ನೇ...

ದಿನದ ಸುದ್ದಿ11 hours ago

ಯಾಂತ್ರೀಕೃತ ಭತ್ತ ಬೇಸಾಯ ಆನ್‍ಲೈನ್ ತರಬೇತಿ

ಸುದ್ದಿದಿನ,ದಾವಣಗೆರೆ : ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕಾಡಜ್ಜಿ ದಾವಣಗೆರೆ ವತಿಯಿಂದ ಜ.25 ರಂದು ಅಪರಾಹ್ನ 12.30 ರಿಂದ 1.30 ರವರೆಗೆ ಯಾಂತ್ರೀಕೃತ ಭತ್ತ ಬೇಸಾಯದ ಕುರಿತು...

ಕ್ರೀಡೆ11 hours ago

ಸಹಾಯಧನ ನೀಡಲು ಕ್ರೀಡಾಪಟುಗಳಿಂದ ಪ್ರಸ್ತಾವನೆಗಳ ಆಹ್ವಾನ

ಸುದ್ದಿದಿನ,ದಾವಣಗೆರೆ: 2020-21 ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರತಿಭಾವಂತ ಕ್ರೀಡಾಪಟುಗಳಿಗೆ ನೋಂದಾಯಿತ ಕ್ರೀಡಾ ವಿಜ್ಞಾನ...

ದಿನದ ಸುದ್ದಿ1 day ago

ಮಾಯಕೊಂಡ | ಹಿರೇಮದಕರಿನಾಯಕ ಜೀರ್ಣೋದ್ಧಾರ ಸಮಿತಿಯ ತಿಂಗಳ ಸಭೆ : ಸನ್ಮಾನ

ಸುದ್ದಿದಿನ, ದಾವಣಗೆರೆ : ಮಾಯಕೊಂಡದ ಹಿರೇಮದಕರಿನಾಯಕ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಭಾನುವಾರ ತಿಂಗಳ ಸಭೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಹುಚ್ಚವನಹಳ್ಳಿ ಗ್ರಾಮದ...

ದಿನದ ಸುದ್ದಿ1 day ago

ಡಾ. ಎಚ್ ಕೆ ನಾಗರಾಜ ಅವರಿಗೆ ‘ರಾಷ್ಟ್ರೀಯ ವೈದ್ಯ ರತ್ನ’ ಪ್ರಶಸ್ತಿ ಪ್ರದಾನ

ಸುದ್ದಿದಿನ, ಬೆಂಗಳೂರು : ಎಂ ಎಸ್ ರಾಮಯ್ಯ ಹಾಸ್ಟೆಲ್ ಯೂರೋ ಡಿಪಾರ್ಟಮೆಂಟ ಎಚ್ ಓ ಡಿ ಪ್ರೋಫೇಸರ್ ಡಾ. ಎಚ್ ಕೆ ನಾಗರಾಜ ಅವರನ್ನು ರಾಷ್ಟ್ರೀಯ ವೈದ್ಯ...

ದಿನದ ಸುದ್ದಿ1 day ago

ಜನಗಣರಾಜ್ಯೋತ್ಸವದ ಸಂದೇಶಕ್ಕೆ ಕಿವಿಗೊಡೋಣ

ನಾ ದಿವಾಕರ ಕಳೆದ 60 ದಿನಗಳಿಂದ ದೆಹಲಿಯ ಸುತ್ತಲೂ ಬೀಡುಬಿಟ್ಟಿರುವ ದೇಶದ ರೈತ ಸಮುದಾಯದ ದಿಟ್ಟ ಹೋರಾಟಕ್ಕೆ ಕೊನೆಗೂ ಆಡಳಿತ ವ್ಯವಸ್ಥೆ ಮಣಿದಿದೆ. ಗಣರಾಜ್ಯೋತ್ಸವ ದಿನದಂದು ರೈತರು...

ಬಹಿರಂಗ1 day ago

ನುಡಿದ ಸತ್ಯವನ್ನು ಬಂಧಿಸಲಾಗದು

ಸುರೇಶ ಎನ್ ಶಿಕಾರಿಪುರ ಹಂಪ ನಾಗರಾಜಯ್ಯನವರು ಕನ್ನಡದ ಮೇರು ವಿದ್ವಾಂಸರು. ಜೀವಮಾನವಿಡೀ ಅಧ್ಯಯನ ಸಂಶೋಧನೆಯಲ್ಲಿ ತೊಡಗಿಕೊಂಡು ಕನ್ನಡದ ವಿವೇಕವನ್ನು ವಿಸ್ತರಿಸಿದವರು. ನಾವೆಲ್ಲ ಅವರ ಕೃತಿಗಳನ್ನು ಓದಿಕೊಂಡು ಬೆಳೆದ...

ನೆಲದನಿ2 days ago

ನುಡಿಯ ಒಡಲು -27 | ನುಡಿಯೆಂಬ ಅಪ್ರಮಾಣದ ಪ್ರಮಾಣೀಕರಣ

ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ ನುಡಿ, ಪ್ರಾದೇಶಿಕ ನುಡಿ ಇಲ್ಲವೇ ರಾಷ್ಟ್ರೀಯ ನುಡಿ ಯಾವುದಾದರೂ ಇರಬಹುದು ಅಂತಹ ನುಡಿಯ ಚಹರೆಗಳು...

Trending