Connect with us

ದಿನದ ಸುದ್ದಿ

ಕೊರೋನಾ ಭಯಬಿಡಿ, ಶಿಕ್ಷಣದ ಕಡೆಗೆ ನಡಿ

Published

on

  • ಹೆಚ್.ಎಂ.ಸಂತೋಷ್,ಎಐವೈಎಫ್, ರಾಜ್ಯ ಕಾರ್ಯದರ್ಶಿ, ಹರಪನಹಳ್ಳಿ

ಕೊರೋನ ಸೋಂಕಿನ ಭಯದಿಂದಲೇ ಬದುಕುವ ಬದಲು, ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ ಬದುಕಲು ಮುಂದಾಗಬೇಕೆಂಬ ಆಲೋಚನೆಗಳು ಈಗ ಸಮುದಾಯದಲ್ಲಿ ಮೂಡುತ್ತಿವೆ. ಸರಕಾರವೂ ಕೂಡ ಕರೋನದೊಂದಿಗೆ ಬದುಕುವುದನ್ನು ಕಲಿಯಬೇಕು ಎಂಬುದನ್ನು ಹೇಳುತ್ತಿದೆ.ಈ ಹಿನ್ನಲೆಯಲ್ಲಿ ದೇಶದ ಆರ್ಥಿಕ ಚಟುವಟಿಕೆ ಪುನ್ಸಶ್ಚೇನ ನೀಡುವ ಕಾರ್ಯವೂ ಆರಂಭವಾಗಿದೆ.

ಹಂತ, ಹಂತವಾಗಿ ಎಲ್ಲಾ ರಂಗಗಳಲ್ಲೂ ಸಡಿಲಿಕೆ ಕಂಡುಬರುತ್ತಿದೆ. ಇದೆ ಸಂದರ್ಭದಲ್ಲಿ ಶಿಕ್ಷಣ ಚಟುವಟಿಕೆ ನಡೆಸಬೇಕೆ?, ಬೇಡವೇ? ಎಂಬ ಪ್ರಶ್ನೆಗಳು ಸರಕಾರಕ್ಕೂ, ಪೋಷಕರಲ್ಲಿ ಮೂಡಿಬರುತ್ತಿದೆ.

ಕರೋನ ಸೋಂಕಿನ ಕಾರಣದಿಂದ ಈಗಾಲೇ ಪ್ರರೀಕ್ಷೆಗಳನ್ನು ಎದುರಿಸದೆ ಮಕ್ಕಳು ಮುಂದಿನ ಹಂತಕ್ಕೆ ತಲುಪಿದ್ದಾರೆ. ಶೈಕ್ಷಣಿಕ ಚಟುವಟಿಕೆಗಳ ಪುನರ್ ಆರಂಭವು ಉಳಿದ ಕ್ಷೇತ್ರದಂತೆ ಸರಳವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದೇನೋ ನಿಜ ಆದರೆ ಆರಂಭಿಸದಿರಲು ಆಗುವುದಿಲ್ಲ.

ಕೆಲವರು ಸಧ್ಯ ಶೈಕ್ಷಣಿಕ ಚಟುವಟಿಕೆ ಆರಂಭಿಸದಿರುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ಪೋಷಕರು ಬಹಳ ಗೊಂದಲಕ್ಕೆ ಒಳಗಾಗಿದ್ದಾರೆ. ಶಾಲೆ-ಕಾಲೇಜುಗಳು ಪ್ರಾರಂಭವಾದರೆ ಎಲ್ಲಿ ಮಕ್ಕಳಿಗೆ ಸೋಂಕು ಹರಡಿಬಿಡುತ್ತೋ ಅನ್ನೋ ಭಯವಿದ್ದರು, ಆರಂಭವಾಗದಿದ್ದರೆ ಮಕ್ಕಳ ಭವಿಷ್ಯದ ಏನಾಗುತ್ತೋ ಅನ್ನೋ ಚಿಂತೆಯೂ ಅವರಲ್ಲಿ ಕಾಡುತ್ತಿದೆ.

ಇಂದು ಶಿಕ್ಷಣದ ವಿಚಾರಕ್ಕೆ ಹಲವಾರು ಅಭಿಪ್ರಾಯಗಳು ಬರತೊಡಗಿವೆ. ಅದರಲ್ಲಿ ಶೈಕ್ಷಣಿಕ ವರ್ಷದ ಕಡಿತಗೊಳಿಸುವೆ, ವಾರ್ಷಿಕ ಪಠ್ಯಗಳ ಕಡಿತಗೊಳಿಸುವಿಕೆ ಮಾಡಬೇಕು ಎಂಬುದು ಒಂದಾದರೆ, ಕೆಲವರು ಆನ್‍ಲೈನ್ ತರಗತಿಯ ಮೂಲಕ ತರಗತಿಗಳನ್ನು ಪ್ರಾರಂಭಿಸಬೇಕು ಎಂಬುದನ್ನು ಹೇಳುತ್ತಿದ್ದಾರೆ.

ಇವುಗಳಲ್ಲಿ ಯಾವುದು ಮಕ್ಕಳ ಭವಿಷ್ಯವನ್ನು ರೂಪಿಸಲು ಉತ್ತಮ ಎಂಬುದರ ಕುರಿತುಯಾರಲ್ಲೂ ಸ್ಪಷ್ಟತೆ ಇಲ್ಲ. ಶೈಕ್ಷಣಿಕ ಅವಧಿಯ ಕಡಿತಗೊಳಿಸುವುದು ಮತ್ತು ಪಠ್ಯಕ್ರಮ ಕಡಿತಗೊಳಿಸುವುದು ಹೆಚ್ಚು ಸೂಕ್ತವಲ್ಲ, ಜೂನ್ ತಿಂಗಳ ಆರಂಭದಲ್ಲೆ ಶೈಕ್ಷಣಿಕ ಆರಂಭವಾಗಬೇಕಿತ್ತು ಆದರೆ ಇನ್ನೂ ಆರಂಭಿಸಿಲ್ಲ, ಆರಂಭಿಸುವ ಚರ್ಚೆಗಳು ಇನ್ನೂ ನಡೆಯುತ್ತಿವೆ.

ಶಾಲೆ- ಕಾಲೇಜು ಆರಂಭ ತಡವಾದಷ್ಟು ಮಕ್ಕಳ ಕಲಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಅನುಕೂಲಸ್ಥ ವಿದ್ಯಾವಂತ ಪೋಷಕರು ತಮ್ಮ ಮಕ್ಕಳ ಕಲಿಕೆಯನ್ನು ಸ್ವತಹ ತಾವೇ ಹೇಳಿಕೊಡುವ ಅಥವಾ ಇನ್ಯಾವುದೋ ಮಾರ್ಗದಲ್ಲಿ ಕಲಿಸುತ್ತಿರುತ್ತಾರೆ.

ಆದರೆ ದುಡಿಯುವ ವರ್ಗದವರ ಮಕ್ಕಳ ಸ್ಥಿತಿ ಹೀಗಿರಿರಲು ಸಾಧ್ಯವೇ ಇಲ್ಲ. ಈ ಮಕ್ಕಳು ಶಾಲೆಗಳ ಪ್ರಾರಂಭ ತಡವಾದಷ್ಟು ಕಲಿಕೆಯ ಮೇಲೆ ನಿರಾಸಕ್ತರಾಗುವುದೆ ಹೆಚ್ಚು. ಇನ್ನು ಶೈಕ್ಷಣಿಕ ಚಟುವಟಿಕೆ ತಡವಾಗಿ ಆರಂಭಿಸಿದಾಗ ಶಿಕ್ಷಕರು ನೇರವಾಗಿ ಮಕ್ಕಳಿಗೆ ನೂತನ ತರಗತಿಯ ಪಠ್ಯ ಚಟುವಟಿಕೆಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ.

ಈಗಾಲೇ ಮಕ್ಕಳು ಬಹುದಿನಗಳಿಂದ ಕಲಿಕಾ ಚಟುವಟಿಕೆಗಳಿಂದ ದೂರ ಉಳಿದಿರುವುದರಿಂದ ಹಿಂದಿನ ತರಗತಿಯ ಕಲಿಕೆಯ ಫಲಗಳನ್ನು ಅರಿಯದೆ, ನೇರವಾಗಿ ಹೊಸ ವಿಷಯಗಳ ಕಲಿಕೆಗೆ ತೊಡಗಿಸುವುದು ಸೂಕ್ತವಲ್ಲ.

ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಶೈಕ್ಷಣಿಕ ಚಟುವಟಿಕೆಗೆ ಪ್ರಾರಂಭದ ಕುರಿತು ಚರ್ಚಿಸುವು ಸೂಕ್ತವಾಗುತ್ತದೆ. ಆನ್‍ಲೈನ್ ತರಗತಿಗಳ ಬಗ್ಗೆ ದೊಡ್ಡ ಮಟ್ಟದ ಅಭಿಪ್ರಾಯ ಬರುತ್ತಿದೆ.

ಇಂದಿನ ಮಾಧ್ಯಮಗಳಲ್ಲಿ ಆನ್‍ಲೈನ್ ಕಲಿಕೆಯನ್ನು ಬಿಂಬಿಸುತ್ತಿರುವುದನ್ನು ನೋಡಿದರೆ, ಈ ಪರಿಸ್ಥಿತಿಯಲ್ಲಿ ಇದೆ ಪರ್ಯಾಯ ಎಂಬ ಅಭಿಪ್ರಾಯ ಮೂಡದಿರಲು ಸಾಧ್ಯವಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಬೋಧನೆ ಮತ್ತು ಕಲಿಕೆ ಎಂದರೆ ಯಾಂತ್ರಿಕ ಪ್ರಕ್ರಿಯೆ ಅಲ್ಲ. ಮಕ್ಕಳು ನೇರ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಕಲಿಯೂವುದಕ್ಕೂ, ಶಿಕ್ಷಕರ ಮೇಲ್ವಿಚಾರಣೆ ಇಲ್ಲದೆ ಕಲಿಯುವುದಕ್ಕೂ ವ್ಯಾತ್ಯಾಸವಿದೆ.

ಈ ರೀತಿ ಕಲಿಕೆಗಳು ದೊಡ್ಡ ಹಂತದ ತರಗತಿಗಳಿಗೆ ಅಂದರೆ ಕಲಿಕೆಯಲ್ಲಿ ಸ್ವ ಆಸಕ್ತಿ ವಹಿಸುವ ಹಂತದವರಿಗೆ ಉತ್ತಮವೇ ಹೊರತು, ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ತರಗತಿಗಳಿಗೆ ಉತ್ತಮ ಕಲಿಕಾ ವಿಧಾನವಲ್ಲ. ಅಲ್ಲದೆ ತಂತ್ರಜ್ಞಾನವನ್ನು ಅನುಸರಿಸುವಷ್ಟು ಮಟ್ಟಿಗೆ ನಮ್ಮ ದೇಶದ ಸಮಾಜಿಕ ಮತ್ತು ಆರ್ಥಿಕ ಪರಿಸ್ಥಿಗಳು ಇವೆಯೇ? ಎಂಬುದನ್ನು ಗಮನಿಸಬೇಕು.

ಇಂದಿಗೂ ಶಾಲೆಗಳು ಉನ್ನತಿಕರಣ ಗೊಳ್ಳದಿರುವಾಗ, ಆನ್‍ಲೈನ್ ತರಗತಿ ಪ್ರಸ್ತಾಪ ಹಾಸ್ಯಾಸ್ಪದವಾಗುತ್ತದೆ.
ಇನ್ನೂ ಶಾಲೆಗಳು ಪ್ರಾರಂಭವಾದರೆ, ಮಕ್ಕಳು ಶಾಲೆಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವಷ್ಟು ಪರಿಸರ ಇದೆಯೇ? ವರ್ಗಕೋಣೆಗಳು ಅಂತರ ಕಾಯ್ದುಕೊಂಡು ಕಲಿಕೆಗೆ ಪ್ರೋತ್ಸಾಹ ನೀಡಬಲ್ಲವೇ? ಅಂತರ ಕಾಯ್ದುಕೊಳ್ಳುವಷ್ಟು ಮಕ್ಕಳ – ಶಿಕ್ಷಕರ ಅನುಪಾತ ನಿರ್ಮಿಸಲು ಸಾಧ್ಯವೇ? ಮಕ್ಕಳು ದೈಹಿಕ ಅಂತರ ಕಾಯ್ದುಕೊಳ್ಳುವಷ್ಟು ಜಾಗೃತರಾಗಿರುತ್ತಾರೆಯೇ?

ಊಟ, ಆಟ, ಪಾಠಗಳಲ್ಲಿ ಸದಾ ಅಂತರ ಕಾಯ್ದುಕೊಳ್ಳುವಂತೆ ಮಕ್ಕಳನ್ನು ಗಮನಿಸುತ್ತಿರಲು ಸಾಧ್ಯವೇ? ಶಾಲೆಯಅವಧಿ ಮುಗಿದ ಬಳಿಕ ಮಕ್ಕಳು ಮನೆಗೆ ತೆರಳುವಾಗಲೂ ಈ ಇದೆ ಕ್ರಮಗಳನ್ನು ಅನುಸರಿಸುತ್ತಾರೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಶೈಕ್ಷಣಿಕ ಚಟುವಟಿಕೆ ಆರಂಭ ಮಾಡಲು ಸಾಧ್ಯವಿದೆ.
ಹಾಗಾದರೆ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಏನೂ ಮಾಡಬಹುದು.

ಮೊದಲು ಸರಕಾರ ಈ ಸಮಸ್ಯೆಯ ಪರಿಹಾರಕ್ಕೆ ಬಹುದೊಡ್ಡ ಮಾನವ ಶಕ್ತಿಯನ್ನು ನಿರ್ಮಾಣ ಮಾಡಿಕೊಳ್ಳಬೇಕು.ಈಗಿರುವ ಶಿಕ್ಷಕರು ಮತ್ತು ಶಾಲೆಗಳ ಸಂಖ್ಯೆಗಳಿಂದ ದೈಹಿಕ ಅಂತರ ಕಾಯ್ದುಕೊಳ್ಳುವಷ್ಟರ ಮಟ್ಟಿಗೆ ವಾತವಾರಣ ಇಲ್ಲ ಎಂಬುದಂತು ಸತ್ಯ. ಸರಕಾರವು ಪ್ರಾಥಮಿಕ ಹಂತದ ಮಕ್ಕಳಿಗೆ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ 15:1 ಮಾತ್ರ ಇರುವಂತೆ, ಮಾಧ್ಯಮಿಕ ಹಂತಗಳಲ್ಲಿ ಗರಿಷ್ಟ ವೆಂದರೂ 25:1 ಅನುಪಾತದಂತೆ ನೋಡಿಕೊಳ್ಳಬೇಕು.

ಇದರಲ್ಲಿ ಎರಡು ಸಮಸ್ಯೆಗಳು ಉದ್ಬವಿಸುತ್ತವೆ ಮೊದಲನೆಯದು ಶಿಕ್ಷಕರು, ಎರಡನೆಯದು ವರ್ಗಕೋಣೆಗಳು. ಇವುಗಳನ್ನು ಹೇಗೆ ಸೃಷ್ಟಿಸುಬೇಕು?, ಎಂಬುದು ಸರಕಾರಕ್ಕೆ ಸವಾಲು ಎದುರಾಗುತ್ತದೆ.
ಮೊದಲನೆಯದು ಶಿಕ್ಷಕರ ಸಮಸ್ಯೆಗೆ ಸಂಬಂಧಿಸಿದಂತೆ ಸರಕಾರವು ಈಗಾಗಲೇ ಶಿಕ್ಷಕ ತರಬೇತಿ ಪೂರ್ಣಗೊಳಿಸಿದ ಡಿ.ಇಡಿ ಮತ್ತು ಬಿ.ಇಡಿ ನಿರುದ್ಯೋಗಿ ಯುವಕರನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳವುದು ಉತ್ತಮ.

ಈಗಾಗಲೇ ಕೆಲವರು ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಸಾವಿರಾರು ಸಂಖ್ಯೆಯಲ್ಲಿ ಹೊರಗಿದ್ದಾರೆ. ಸರಕಾರ ಇವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜೀವನ ನಿರ್ವಹಣೆಗೆ ಸಹಾಯವಾಗುಂತಹ ಯೋಜನೆ ರೂಪಿಸಿದರೆ ಸಧ್ಯದ ಸಂದರ್ಭಕ್ಕೆ ಎದುರಾಗುವ ಮಾನವ ಸಂಪನೂಲ್ಮದ ಸಮಸ್ಯೆ ನಿವಾರಣೆಯಾಗುತ್ತದೆ.

ಎರಡನೇ ಸಮಸ್ಯೆ ಕಟ್ಟಡದ ಸಮಸ್ಯೆ, ಕಿರಿಯ ಪ್ರಾಥಮಿಕ ತರಗತಿಯ ಮಕ್ಕಳು ಅಂದರೆ 1 ರಿಂದ 4ನೇ ತರಗತಿಯ ಮಕ್ಕಳಿಗೆ ಅವರ ಮನೆಯ ಸುತ್ತು ಮುತ್ತಲಿರುವ ನೆರಳಿರುವ ಪ್ರದೇಶದಲ್ಲಿ ಸ್ವಚ್ಚತೆಗೆ ಮಹತ್ವ ನೀಡಿರುವ ಸ್ಥಳದಲ್ಲಿ ಕಲಿಸುವ ಕಾರ್ಯ ಆರಂಭಿಸಬಹುದು. ಇದು ಸೂಕ್ತವಲ್ಲದಿದ್ದರು ಇಂದು ಶಾಲೆಗಳನ್ನು ಪ್ರಾರಂಭವೇ ಮಾಡದಿರವುದರ ಬದಲು ಶೈಕ್ಷಣಿಕ ಚಟುವಟಿಕೆಯ ಪ್ರಾರಂಭಕ್ಕೆ ಬದಾರಿಯಾಗುತ್ತದೆ.

ಇನ್ನೂ ಉನ್ನತ ಹಂತದ ಮಕ್ಕಳಿಗೆ ಖಾಲಿ ಉಳಿದ ತರಗತಿಗಳನ್ನು ಸೇರಿಸಿ ಮಕ್ಕಳ ಸಂಖ್ಯೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ತರಗತಿಗಳನ್ನು ಪ್ರಾರಂಭಿಸಬಹುದು. ಹೈಸ್ಕೂಲ್ ಮತ್ತು ಕಾಲೇಜ್ ಮಕ್ಕಳಲ್ಲಿ ಜಾಗೃತಿ ಇರುವುದರಿಂದ ಬೋಧಕರೆ ಎಚ್ಚರಿಸುತ್ತ ತರಗತಿಗಳನ್ನು ಆರಂಭಿಸಬಹುದು.

ಶಿಕ್ಷಣ ಕೇಂದ್ರಗಳು ಸ್ವಚ್ಚವಾಗಿರುವಂತೆ ಇತರೆ ಮುನ್ನಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು, ಜೊತೆಗೆ ಎಚ್ಚರ ತಪ್ಪಂದತೆ ಜಾಗೃತಿ ವಹಿಸಿದರೆ ಸಾಕಾಗುತ್ತದೆ. ಕರೋನದ ಭಯದಿಂದಲೇ ನಾವು ಮಕ್ಕಳ ಭವಿಷ್ಯವನ್ನು ಕುಟಿಂತಗೊಳಿಸುವ ಬದಲು ಪರ್ಯಾಯ ಮಾರ್ಗದೆಡೆಗೆ ಸಾಗುವುದು ಉತ್ತಮ. ಎಚ್ಚರಿಕೆಯ ಕ್ರಮಗಳಿಂದ ಮಕ್ಕಳ ಹಕ್ಕುಗಳನ್ನು ಒದಗಿಸಲು ಅವಕಾಶವಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending