Connect with us

ಲೈಫ್ ಸ್ಟೈಲ್

ನವರಂಗಿ ನವರಾತ್ರಿಗೆ  ಟಾಪ್ 9 ಫ್ಯಾಷನ್ ಟಿಪ್ಸ್..!

Published

on

  • ಚಿತ್ರಶ್ರೀ ಹರ್ಷ

ಕರೋನ ಕಾಟದ ನಡುವೆಯೇ , ಹಬ್ಬಗಳ ಸಾಲು ಹೊಸ್ತಿಲಲ್ಲಿ ನಿಂತಿರುವ ಬೆನ್ನಲ್ಲೇ, ಗಣೇಶನಿಗೆ ಟಾಟಾ ಹೇಳಿ, ಮಹಾ ಕಾಳಿಯ ಆರಾಧನೆಗೆ ಸಜ್ಜಾಗುತ್ತಿದೆ ಮಹಿಳಾ ಪಡೆ.

ಮಾಸ್ಕ್ , ಸ್ಯಾನಿಟೈಸರ್,  ಸಾಮಾಜಿಕ ಅಂತರದ ಜೊತೆ ಜೊತೆಯಲ್ಲೇ   ಸಾಂಪ್ರದಾಯಿಕ ಸಮ್ಮಿಶ್ರನ ವಾಗಿರುವ ಒಂಭತ್ತು ದಿನಗಳ ನವರಾತ್ರಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ  ಸಾಂಪ್ರದಾಯಿಕ ಗಾಗ್ರ ಚೋಲಿ ಹಾಗೂ ಚನಿಯಾ ಚೋಲಿ ಯಿಂದ , ಇಂಡೋ-ವೆಸ್ಟರ್ನ್ ಮಿಕ್ಸ್ -ಮ್ಯಾಚ್ ಫ್ಯಾಷನ್ವರೆಗೂ ನೂತನ ಟ್ರೆಂಡ್ ಸೃಷ್ಟಿ ಆಡುತ್ತಲೇ ಇದೆ.

ಕರೋನ ಭೀತಿಯ ನಡುವೆಯೂ ನವರಾತ್ರಿಯ ದಾಂಡಿಯಾ ರಾಸ್ ರಸಸಂಜೆಗೆಂದೇ ಪಾರ್ಟಿ ಪ್ರಿಯರು ಸಜ್ಜಾಗುತ್ತಿದ್ದು,  ಡಾಂಡಿಯಾ ಪಾರ್ಟಿ ಗೆ ಇದೋ ಇಲ್ಲಿದೆ ನೋಡಿ ಕೆಲವು ಫ್ಯಾಷನ್ ಟಿಪ್ಸ್.

ನವರಂಗಿ ನವರಾತ್ರಿ ಗೆ  ಟಾಪ್ 9 ಫ್ಯಾಷನ್ ಟಿಪ್ಸ್

1. ಪೋಟ್ಲೀ ಬ್ಯಾಗ್-ಮ್ಯಾಚಿಂಗ್ ಮಾಸ್ಕ್

ಭಾರತದೆಲ್ಲೆಡೆ ಒಂಭತ್ತು ದಿನಗಳ ಸುದೀರ್ಘ  ನವರಾತ್ರಿ ಉತ್ಸವಕ್ಕೆ ಸಜ್ಜಾಗುತ್ತಿದೆ ಮಹಿಳಾ ಪಡೆ. ಆಕರ್ಷಕ ಕಸೂತಿ ಹೊಂದಿರುವ ಪುಟ್ಟ ಪೋಟಲೀ ಬ್ಯಾಗ್ ಗಳು ಹಬ್ಬಕ್ಕೆ ಮತ್ತಷ್ಟು ಕಳೆ ಕಟ್ಟುತ್ತದೆ. ಗೋಲ್ಡನ್ ಗ್ಲಿಟರ್ ಫ್ಯಾಬ್ರಿಕ್ ಹಾಗೂ ದೇಸೀ ಬಣ್ಣಗಳ ಕಾಂಬಿನೇಷನ್ ನಲ್ಲಿ ಕುಂದನ್,ಹರಳು ಗಳನ್ನು ಬಳಸಿ ಮಾಡಲಾಗಿರುವ ಈ ಪೋಟ್ಲೀ ಬ್ಯಾಗ್ ಗಳು ಗುಜರಾತಿ ಗರ್ಭಾ ಗಳಲ್ಲಿ ಮಹಿಳೆಯರ ಸಾಂಪ್ರದಾಯಿಕ ಉಡುಪಿಗೆ ಒಪ್ಪುವಂತಿದೆ.

  • ನವರಾತ್ರಿಯ  ಮ್ಯಾಚಿಂಗ್  ಮಾಸ್ಕ್

ವೈರಸ್-ಬ್ಯಾಕ್ಟೀರಿಯಾ ಗಳಿಗೆ ಹೆದರಿ ಪಾರ್ಟಿ ಮಾಡುವುದನ್ನು ನಿಲ್ಲಿಸಿದ್ದ ಪಾರ್ಟಿ ಪ್ರಿಯರು , ಈಗ ಮಾರುಕಟ್ಟೆ ಗೆ ಲಗ್ಗೆ ಇಟ್ಟಿರುವ ಬಾಂದಿನಿ , ರಾಜಸ್ಥಾನಿ ಕಸೂತಿಯ  ಫೇಸ್ ಮಾಸ್ಕ್ ಧರಿಸಿ ಪಾರ್ಟಿ ಫೀವರ್ ನ ಟೆಂಪರೇಚರ್ ಹೆಚ್ಚಿಸುತ್ತಿವೆ ಈ ಮ್ಯಾಚಿಂಗ್  ಸೀಕ್ವೀನ್ ಫೇಸ್ ಮಾಸ್ಕ್ ಫ್ಯಾಷನ್! ನವರಾತ್ರಿಯ ಒಂಭತ್ತು ದಿನಗಳ, ನವ ವರ್ಣದ ಉತ್ಸವಕ್ಕೆ ಒಂಭತ್ತು ವಿವಿಧ ವಿನ್ಯಾಸದ ಮಾಸ್ಕ್ ಮಾರುಕಟ್ಟೆ ಗೆ ಲಗ್ಗೆ ಇಟ್ಟಿದೆ.

2. ಮಾತಾ ಪಟ್ಟಿ/ ಮಾಂಗ್ ಟೀಕಾ

ಆಧುನಿಕ ಫ್ಯಾಷನ್ ಯುಗದಲ್ಲಿ, ಹಳೆಯ ಕಾಲದ ಸಾಂಪ್ರದಾಯಿಕ ಗುಂಡು ಯಾಂಗ್ ಟೀಕಾ ಬದಲಿಗೆ ಆಕರ್ಷಕ ಆಕ್ಸಿಡೈಸ್ಡ್ ಕಪ್ಪು ಲೋಹದ ಆಭರಣಗಳು ಟ್ರೆಂಡ್ ಆಗುತ್ತಿದೆ. ನವರಾತ್ರಿ ಆಚರಣೆ ಯು ದಾಂಡಿಯಾ ಶೃಂಗಾರಕ್ಕೆ ಮತ್ತಷ್ಟು ರಂಗು ತುಂಬಲು ರಂಗಿನ ಮಾತಾ ಪಟ್ಟಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಮಾವಿನ ಕಾಯಿ, ಪಕ್ಷಿ, ಎಲೆ, ಬುಗುರಿ, ಮತ್ತು ಟ್ರೈಬಲ್ ಡಿಸೈನರ್ ಮಾತಾ ಪಟ್ಟಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಗಿಟ್ಟಿಸಿಕೊಂಡಿದೆ.

3.ಪಗಡಿ

ಇತ್ತೀಚಿನ ದಿನಗಳಲ್ಲಿ ಆಧುನಿಕ ಡಿಸ್ಕೋ ಡಾಂಡಿಯಾ ಪಾರ್ಟಿ ರಂಗೇರುತ್ತಿದ್ದು,. ಯುವಪೀಳಿಗೆಯನ್ನು ಕೈ ಬೀಸಿ ಕರೆಯುತ್ತಿದೆ.  ಪಗಡಿ , ಫ್ಯೂಜನ್  ಫ್ಯಾಷನ್ ನಾ ಬಹು ಮುಖ್ಯ ಅಂಗವಾಗಿದ್ದು, ಆಧುನಿಕ ಮಹಿಳೆಯರ ಅಭಿರುಚಿಗೆ ತಕ್ಕಂತೆ ಕಲರ್ಫುಲ್ ಪಗಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಲ್ಟಿಕಲರ್ ಕುರ್ತಾ-ಧೋತಿ ಸ್ಟೈಲ್ ಪೈಜಾಮ ನೊಂದಿಗೆ ಇವು ಹೆಚ್ಚು ಸ್ಟೈಲಿಶ್ ಲುಕ್ ನೀಡುತ್ತದೆ.

4.ಪಾಂಪಾಂ ಟ್ರೆಂಡ್

ಪಾಂಪಾಂ ಟ್ರೆಂಡ್ ಮಾಡಿಸಿತು ಎನ್ನುವಷ್ಟರಲ್ಲೇ.. ಗುಜರಾತಿ ಗರ್ಭಾ ಗಳಲ್ಲಿ ಮಹಿಳೆಯರ ಸಾಂಪ್ರದಾಯಿಕ ಲೆಹೆಂಗಾ, ಘಾಗ್ರಚೋಲಿ, ಪಾದರಕ್ಷೆ, ಆಭರಣಗಳಲ್ಲಿ ಈ ಕಲರ್ಫುಲ್ ವುಲ್ಲನ್ ಗೋಲಿಗಳು ತಮ್ಮ ಕಮಾಲ್ ತೋರುತ್ತದೆ.ಆಕ್ಸಿಡೈಸ್ಡ್ ಕಪ್ಪು ಲೋಹದ ಆಭರಣಗಳು. ಪಾಂಪಾಂ ಫ್ಯುಜನ್ ಫ್ಯಾಷನ್ ನಾ ಅಗ್ರಸ್ಥಾನದಲ್ಲಿದೆ.

5.ಗುಜರಾತಿ ಪ್ರಿಂಟ್ ಜಾಕೆಟ್

ಕರಕುಶಲ ವಸ್ತುಗಳ ಪ್ರಮುಖ ತಾಣ ವಾಗಿರುವ ಗುಜರಾತಿನ ಕೋಚ್ ಎಂಬ್ರಾಯ್ಡರಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.ಈ ಧರ್ಮೀಯ ಕೋಚ್ ವರ್ಕ್ ನ ಗುಜರಾತಿ ಕರಕುಶಲ ಜಾಕೆಟ್ ಗಳು ಮಾರುಕಟ್ಟೆಗೆ ಧಾವಿಸಿದ್ದು, ಹಬ್ಬಕ್ಕೆ ಮತ್ತಷ್ಟು ಕಲರ್ಫುಲ್ ಎಫೆಕ್ಟ್ ನೀಡುತ್ತಿದೆ.

6.ಖೇದಿಯಾ-ಧೋತಿ

ಟಿಪಿಕಲ್‌ ಆಗಿದ್ದ ಧೋತಿಗೆ ಹೊಸ ರೂಪ ಸಿಕ್ಕಿದೆ. ಕ್ರಾಪ್‌ ಟಾಪ್‌ ಹಾಗೂ ಇಂಡೋ ವೆಸ್ಟರ್ನ್‌ ಶೈಲಿಯಲ್ಲಿ ಮಿಕ್ಸ್‌ ಮ್ಯಾಚ್‌ ಟಾಪ್‌ಗೆ ಧರಿಸುವ ಹೊಸ ಫ್ಯಾಷನ್‌ ರಾರ‍ಯಂಪ್‌ನಲ್ಲಿ ಹಂಗಾಮ ಎಬ್ಬಿಸಿದೆ.ಧೋತಿಗೆ ಕಮೀಝ್‌ ಹಾಗೂ ಕುರ್ತಾ ಧರಿಸುವ ಹಳೆ ಫ್ಯಾಷನ್‌ ಸೈಡಿಗೆ ಸರಿದಿದೆ. ಅದರ ಬದಲು ಕ್ರಾಪ್‌ ಟಾಪ್‌, ಕೋಲ್ಡ್‌ ಶೋಲ್ಡರ್‌ ಟಾಪ್‌, ಕೇಪ್‌ ಸ್ಟೈಲ್‌, ಶಾರ್ಟ್‌ ಬ್ಲೌಸ್‌, ಸೆಮಿ ಎಥ್ನಿಕ್‌ ಟೀ ಶರ್ಟ್‌ ಹೀಗೆ ಒಂದಿಷ್ಟು ವಿನೂತನ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡುವ ಫ್ಯಾಷನ್‌ ಇಂದು ಟ್ರೆಂಡಿಯಾಗಿದೆ. ಈ ಸ್ಟೈಲ್‌ಗೆ ಪೂರಕ ಎಂಬಂತೆ ಧೋತಿಯ ಪಕ್ಕಾ ಟ್ರಡಿಷನಲ್‌ ಸ್ಟಿಚ್ಚಿಂಗ್‌ ಸ್ಟೈಲ್‌ ಕೂಡ ಬದಲಾಗಿದೆ. ನೋಡಲು ಧೋತಿಯಂತೆ ಕಂಡರೂ ಇದರ ಫ್ಲೀಟ್ಸ್‌ ಅಂದರೆ ನೆರಿಗೆಗಳು ಬದಲಾಗಿವೆ. ಬಿಗ್‌ ಫ್ಲೀಟ್ಸ್‌ ಬದಲು ಮೈಕ್ರೋ ಫ್ಲೀಟ್ಸ್‌ ಸ್ಥಾನ ಪಡೆದಿವೆ.

7. ಇ- ಡಾಂಡಿಯಾ ಕೋಲುಗಳು

ಸಾಮಾನ್ಯ ವಾಗಿ ಮಾರುಕಟ್ಟೆಯಲ್ಲಿ ಸಿಗುವ ಕೋಲಾಟದ ಕಡ್ಡಿಗಳೂ ಈಗ ಮಿರ ಮಿರ ಮಿರುಗುಯತ್ತಿವೆ. ಡಿಸ್ಕೋ ಡಾಂಡಿಯಾ ಗೆಂದೇ, ಎಲ್.ಇ.ಡಿ ದಾಂಡಿಯಾ ಕೋಲುಗಳು ಮೋರುಕಟ್ಟೆಗೆ ಬಂದಿದ್ದು, ಡಿಸ್ಕೋ ಡಾಂಡಿಯಾ ಪಾರ್ಟಿ ಪ್ರಿಯರು ನಿಯಾನ್ ಕಲರ್ಸ್ ಇ-ಡಾಂಡಿಯಾ ಕೋಲುಗಳಿಗೆ  ಮುಗಿ ಬೀಳುತ್ತಿದ್ದಾರೆ.

8. ಆಕ್ಸಿಡೈಸ್ಡ್ ಆಭರಣಗಳು

ದೊಡ್ಡ ಗಾತ್ರದ ಝುಮುಕಿ, ಬಳೆ,ಮೇಲು ಕುತ್ತಿಗೆ  ಸರ-ಹಾರ ಗಳ ಅಬ್ಬರ ಆಭರಣ ಲೋಕದಲ್ಲಿ ಸದ್ಯ ಸಕ್ಕತ್ ವೈರಲ್. ನವರಾತ್ರಿ ಯ ಸಾಂಪ್ರದಾಯಿಕ ಉಡುಪುಗಳೊಂದಿಗೆ ಈ ಕಪ್ಪು ಲೋಹದ ಒಡವೆಗಳು ಸಕ್ಕತ್ ಆಗಿ ಮ್ಯಾಚ್ ಆಗುತ್ತದೆ. ಹೊಚ್ಚ ಹೊಸಾ ವಿನ್ಯಾಸದ ಕಪ್ಪು ಲೋಹದ ಆಭರಣಗಳ ಭರಾಟೆ ಮಾರುಕಟ್ಟೆಯಲ್ಲಿ ಜೋರಾಗಿದೆ. ಹಾಗಾದ್ರೆ ಈ ಬಾರಿಯ ದಸರಾ ಡಾಂಡಿಯಾ ಡ್ರೆಸ್ ನೊಂದಿಗೆ ಕಪ್ಪು ಲೋಹದ ಆಭರಣಗಳ ಧರಿಸುವುದು ಮರೆಯದಿರಿ

9.ಬಾಡಿ ಟ್ಯಾಟೂ

ನವರಾತ್ರಿಯ ಹೆಂಗಳೆಯರ ಶೃಂಗಾರಕ್ಕೆ ಮತ್ತಷ್ಟು ಗ್ಲಾಮರಸ್ ಲುಕ್ ನೀಡುತ್ತದೆ ನವರಾತ್ರಿ ಬಾಡಿ ಟ್ಯಾಟೂ..ಡೀಪ್ ಬ್ಯಾಕ್ ಬ್ಲೌಸ್ ಧರಿಸಿ, ಬೆನ್ನು ಮೇಲೆ ನವರಾತ್ರಿ ಸಿರಿಯಾ ಟ್ಯಾಟೂ ಯುವಪೀಳಿಗೆ ಯಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದೆ. ಕಿತ್ತು, ಕೈ ತೋಳು, ಬೆನ್ನಿನ ಮೇಲೆ ನವರಾತ್ರಿ ಬಾಡಿ ಟ್ಯಾಟೂ ಕ್ರೇಜ್ ವೈರಲ್ ಆಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಹೆಸರಲ್ಲೇ ಕಲೆ ಬೆರತಿರುವವಳು ನಾನು ಚಿತ್ರಶ್ರೀ ಹರ್ಷ. ವೃತ್ತಿಯಲ್ಲಿ ಉಪನ್ಯಾಸಕಿ. ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದ ದ M.A Economics ಪದವೀಧರೆ. M.phil ಕೂಡ ಮುಗಿದಿದ್ದು ಬಿ.ಬಿ.ಎಂ.ಪಿ ಕಾಲೇಜಿನಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಫ್ಯಾಷನ್ ಸೆಳೆತ ಚಿಕ್ಕಂದಿನಿಂದಲೂ ಇದ್ದೇ ಇತ್ತು. ಅದಕ್ಕೆ ತಕ್ಕಂತೆ ಫ್ಯಾಷನ್ ಲೋಕವೂ ಕೈ ಬೀಸಿ ಕರೆಯುತ್ತಿತ್ತು. ಬಾಲ್ಯದ ಆಸೆ ಈಗ ಈಡೇರಿದೆ. ಫ್ಯಾಷನ್ ಲೋಕದಲ್ಲಿ "ನೈಲ್ ಆರ್ಟ್ ಸ್ಪೆಷಲಿಸ್ಟ" ಎಂಬ ಬಿರದು ನನ್ನದಾಗಿದೆ. ಹಲವಾರು ಖಾಸಗಿ ವಾಹಿನಿಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರ ಪತ್ರಿಕೆ ಗಳಿಗೆ ಫ್ಯಾಷನ್ ಲೇಖನ ಬರೆಯುತ್ತಿದ್ದೇನೆ. ಬ್ಯೂಟಿ ಟ್ರೆಂಡ್ ಹಾಗೂ ನೈಲ್ ಆರ್ಟ್ ನಲ್ಲಿ ವಿನೂತನ ಹಾಗೂ ಟ್ರೆಂಡೀ ಲುಕ್ ಸೃಷ್ಟಿಸುವುದು ನನ್ನ ಹವ್ಯಾಸ. ಹಲವಾರು ಕವನಗಳನ್ನು ಬರೆದಿದ್ದು, ಪ್ರತಿಷ್ಠಿತ ದಿನಪತ್ರಿಕೆ ಗಳಲ್ಲಿ ಪ್ರಕಟವಾಗಿದೆ.

ದಿನದ ಸುದ್ದಿ

ಸಾಮಾಜಿಕ ಬದಲಾವಣೆಗೆ ಮಾದರಿಯಾಗಬೇಕಿದ್ದ ಯೋಜನೆಗೆ ದಾಖಲೆ, ಅನುದಾನ ಕೊರತೆ ಅಡ್ಡಿ; ಸಾವಿರಾರು ಅರ್ಜಿಗಳು ಬಾಕಿ

Published

on

ಜಾತಿಯ ಗೋಡೆ ಒಡೆದು ಮದುವೆಯಾದ ಜೋಡಿಗೆ ಹೊಸ ಸಂಕಷ್ಟ: ಪ್ರೋತ್ಸಾಹಧನಕ್ಕೆ ಅರ್ಜಿ ಹಾಕಿದರೂ ಹಣ ಮಾತ್ರ ಮರೀಚಿಕೆ!

ಸುದ್ದಿದಿನ,ಶಿವಮೊಗ್ಗ: ಜಾತಿ-ಧರ್ಮದ ಕಟ್ಟುಪಾಡುಗಳನ್ನು ಮೀರಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವ ದಂಪತಿಗಳಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯೇ ಇದೀಗ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ. ಸಮಾಜದ ವಿರೋಧವನ್ನು ಎದುರಿಸಿ ಹೊಸ ಬದುಕು ಕಟ್ಟಿಕೊಳ್ಳುವ ದಂಪತಿಗಳಿಗೆ ನೆರವಾಗಬೇಕಿದ್ದ ಯೋಜನೆಯಲ್ಲಿ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಅರ್ಹ ಫಲಾನುಭವಿಗಳು ಸರ್ಕಾರದ ನೆರವಿಗಾಗಿ ಕಾಯುವಂತಾಗಿದೆ.

ಹೈಲೈಟ್ಸ್: 
  • SC/ST ಪುರುಷ–ಬೇರೆ ಜಾತಿಯ ಮಹಿಳೆ ವಿವಾಹಕ್ಕೆ ₹2.50 ಲಕ್ಷ ನೆರವು
  • SC/ST ಮಹಿಳೆ–ಬೇರೆ ಜಾತಿಯ ಪುರುಷ ವಿವಾಹಕ್ಕೆ ₹3 ಲಕ್ಷ ಪ್ರೋತ್ಸಾಹಧನ
  • 2025-26ರಲ್ಲಿ 5,612 ಅರ್ಜಿಗಳ ಪೈಕಿ 3,997 ಅರ್ಜಿಗಳು ಬಾಕಿ
  • 2026-27ರಲ್ಲಿ 2,194 ಅರ್ಜಿಗಳು; 61ಕ್ಕೆ ಅನುಮೋದನೆ, ಆದರೆ ಹಣ ಪಾವತಿ ಶೂನ್ಯ
  • ಅನುದಾನ ಕೊರತೆ ಮತ್ತು ಅಪೂರ್ಣ ದಾಖಲೆಗಳಿಂದ ಯೋಜನೆ ಅನುಷ್ಠಾನಕ್ಕೆ ವಿಳಂಬ

http://Visit : www.suddidina.com

ಅಂತರ್ಜಾತಿ ವಿವಾಹಕ್ಕೆ ಎಷ್ಟು ಪ್ರೋತ್ಸಾಹಧನ?

ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಪುರುಷ ಬೇರೆ ಜಾತಿಯ ಮಹಿಳೆಯನ್ನು ವಿವಾಹವಾದರೆ ₹2.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳೆ ಬೇರೆ ಜಾತಿಯ ಪುರುಷನನ್ನು ವಿವಾಹವಾದರೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.

ಆದರೆ, ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಹಣ ಪಾವತಿ ಮಾತ್ರ ಅದೇ ವೇಗದಲ್ಲಿ ನಡೆಯುತ್ತಿಲ್ಲ. 2025-26ನೇ ಸಾಲಿನಲ್ಲಿ 5,612 ಅರ್ಜಿಗಳು ಸಲ್ಲಿಕೆಯಾಗಿದ್ದು, 1,615 ಅರ್ಜಿಗಳಿಗೆ ಮೊದಲ ಹಂತದ ಪ್ರೋತ್ಸಾಹಧನಕ್ಕೆ ಅನುಮೋದನೆ ದೊರೆತಿದೆ. ಆದರೆ ಕೇವಲ 39 ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದ್ದು, 3,997 ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. 909 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿಯಾಗಿವೆ.

ಹೊಸ ಸಾಲಿನಲ್ಲೂ ಅದೇ ಕಥೆ

2026-27ನೇ ಸಾಲಿನಲ್ಲಿ ಇದುವರೆಗೆ 2,194 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 61 ಅರ್ಜಿಗಳಿಗೆ ಅನುಮೋದನೆ ದೊರೆತಿದ್ದರೂ, ಮೊದಲ ಕಂತಿನ ಹಣ ಯಾರಿಗೂ ಪಾವತಿಯಾಗಿಲ್ಲ. 392 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿ ಉಳಿದಿವೆ.

ಅನುದಾನ ಹೆಚ್ಚಳವಾಗದಿರುವುದು ದೊಡ್ಡ ಸಮಸ್ಯೆ

ಅಂತರ್ಜಾತಿ ವಿವಾಹಗಳ ಸಾಮಾಜಿಕ ಸ್ವೀಕಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ, ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಯೋಜನೆಯ ಅನುದಾನ ಹೆಚ್ಚಳವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹಿಂದಿನ ವರ್ಷದ ಅರ್ಜಿಗಳೇ ಬಾಕಿ ಉಳಿಯುತ್ತಿರುವಾಗ ಹೊಸ ಅರ್ಜಿಗಳ ವಿಲೇವಾರಿಯೂ ವಿಳಂಬವಾಗುತ್ತಿದೆ.

2018-19ರಲ್ಲಿ ₹64.27 ಕೋಟಿ, 2019-20ರಲ್ಲಿ ₹90.42 ಕೋಟಿ, 2020-21ರಲ್ಲಿ ₹99.9 ಕೋಟಿ, 2021-22ರಲ್ಲಿ ₹171.84 ಕೋಟಿ ಹಾಗೂ 2022-23ರಲ್ಲಿ ₹94.62 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ವಾರ್ಷಿಕವಾಗಿ ಬರುತ್ತಿರುವ ಅರ್ಜಿಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ.

2026-27ನೇ ಸಾಲಿನ ಈವರೆಗಿನ ಅಂತರ್ಜಾತಿ ಪ್ರೋತ್ಸಾಹಧನ ಯೋಜನೆಯ ವಿವರ

  • 2026-27ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳು: 2,194
  • ಮೊದಲ ಕಂತಿಗೆ ಅನುಮೋದನೆ: 61
  • ಪ್ರೋತ್ಸಾಹ ಧನ ಪಾವತಿ: 00
  • ಅಪೂರ್ಣ ಅರ್ಜಿಗಳು: 392
  • ತಿರಸ್ಕಾರಗೊಂಡ ಅರ್ಜಿಗಳು: 02

ಸಾಮಾಜಿಕ ಧೈರ್ಯಕ್ಕೆ ಆರ್ಥಿಕ ಬೆಂಬಲ ಬೇಕಿದೆ

ಅಂತರ್ಜಾತಿ ವಿವಾಹದ ನಿರ್ಧಾರ ಕೈಗೊಳ್ಳುವ ಜೋಡಿಗಳು ಕೆಲವೊಮ್ಮೆ ಕುಟುಂಬದ ವಿರೋಧ, ಸಾಮಾಜಿಕ ಒತ್ತಡ, ಬಹಿಷ್ಕಾರ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರೋತ್ಸಾಹಧನ ಕೇವಲ ಹಣಕಾಸಿನ ನೆರವಲ್ಲ; ಅದು ಹೊಸ ದಂಪತಿಗಳ ನಿರ್ಧಾರಕ್ಕೆ ಸಾಮಾಜಿಕ ಬೆಂಬಲದ ಸಂಕೇತವೂ ಹೌದು.

ಆದರೆ ಅರ್ಜಿ ಸಲ್ಲಿಸಿ ಅನುಮೋದನೆಗಾಗಿ, ನಂತರ ಹಣಕ್ಕಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾದರೆ ಯೋಜನೆಯ ಮೂಲ ಉದ್ದೇಶವೇ ದುರ್ಬಲವಾಗುತ್ತದೆ. ಹೀಗಾಗಿ ಬಾಕಿ ಅರ್ಜಿಗಳ ತ್ವರಿತ ವಿಲೇವಾರಿ, ದಾಖಲೆ ಪ್ರಕ್ರಿಯೆ ಸರಳೀಕರಣ ಹಾಗೂ ಅಗತ್ಯ ಅನುದಾನ ಹೆಚ್ಚಳಕ್ಕೆ ಸರ್ಕಾರ ಗಮನಹರಿಸಬೇಕಿದೆ.

Continue Reading

ದಿನದ ಸುದ್ದಿ

ಅಪೌಷ್ಟಿಕತೆ ನಿವಾರಣೆಗೆ ಹೊಸ ಹೆಜ್ಜೆ; ಶಾಲೆ ಮುಗಿಯುವ ಮುನ್ನ ಮಕ್ಕಳಿಗೆ ಪೌಷ್ಟಿಕ ತಿನಿಸು

Published

on

ಗಣಿ ಬಾಧಿತ ಜಿಲ್ಲೆಗಳ ಮಕ್ಕಳಿಗೆ ‘ಸಂಜೆ ಸ್ನ್ಯಾಕ್ಸ್’ ಭಾಗ್ಯ: 24 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ

ಸುದ್ದಿದಿನ,ಹೂವಿನಹಡಗಲಿ: ಗಣಿ ಚಟುವಟಿಕೆಗಳಿಂದ ಬಾಧಿತ ಪ್ರದೇಶಗಳ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ ಸುಧಾರಣೆಗೆ ಕರ್ನಾಟಕ ಗಣಿ ಮತ್ತು ಪರಿಸರ ಪುನಸ್ಥಾಪನೆ ನಿಗಮ (ಕೆಎಂಆರ್‌ಸಿಇ) ಹೊಸ ಹೆಜ್ಜೆ ಇಟ್ಟಿದೆ. ವಿಜಯನಗರ, ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಶೀಘ್ರದಲ್ಲೇ ಸಂಜೆ ಸ್ನ್ಯಾಕ್ಸ್ ವಿತರಿಸುವ ಯೋಜನೆ ರೂಪಿಸಲಾಗಿದೆ.

ಈ ಸಂಬಂಧ ನಾಲ್ಕು ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳ ಮೂಲಕ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ರವಾನೆಯಾಗಿದ್ದು, ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ಆರಂಭಿಸಲಾಗಿದೆ. ಹೂವಿನಹಡಗಲಿ ತಾಲೂಕಿನಲ್ಲಿ ಈಗಾಗಲೇ ಮುಖ್ಯಗುರುಗಳ ಸಭೆ ನಡೆಸಿ ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಗಿದೆ.

http://Visit : www.suddidina.com

ಅಪೌಷ್ಟಿಕತೆ ತಡೆಗೆ ಪೌಷ್ಟಿಕ ಆಹಾರ

ಗಣಿ ಬಾಧಿತ ಪ್ರದೇಶಗಳಲ್ಲಿ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕ ಆಹಾರ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸಂಜೆ ಸಮಯದಲ್ಲಿ ಮಕ್ಕಳಿಗೆ ನೆನೆಸಿದ ಶೇಂಗಾ, ಮೊಳಕೆಯೊಡೆದ ಹೆಸರುಕಾಳು, ಚಕ್ಕಿ ಸೇರಿದಂತೆ ವಿವಿಧ ಪೌಷ್ಟಿಕ ಆಹಾರಗಳನ್ನು ನೀಡಲು ಉದ್ದೇಶಿಸಲಾಗಿದೆ. ಕೆಲವು ದಿನಗಳಲ್ಲಿ ಮೂಸಂಬಿ, ಕಿತ್ತಳೆ, ಸಪೋಟ ಮತ್ತಿತರ ಹಣ್ಣುಗಳನ್ನೂ ವಿತರಿಸುವ ವ್ಯವಸ್ಥೆ ಇರಲಿದೆ.

ಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಟಿಕತೆ ಹಾಗೂ ಪೌಷ್ಟಿಕಾಂಶದ ಕೊರತೆ ನಿವಾರಣೆಗೆ ಪೂರಕವಾಗುವಂತೆ ಈ ಯೋಜನೆ ರೂಪಿಸಲಾಗಿದೆ. ಶಾಲೆಯಲ್ಲಿ ಶಿಕ್ಷಣದ ಜತೆಗೆ ಮಕ್ಕಳ ಆರೋಗ್ಯಕ್ಕೂ ಆದ್ಯತೆ ನೀಡುವ ಪ್ರಯತ್ನ ಇದಾಗಿದೆ.

24,352 ಮಕ್ಕಳಿಗೆ ಪ್ರಯೋಜನ

ಹೂವಿನಹಡಗಲಿ ತಾಲೂಕಿನಲ್ಲಿ 138 ಸರ್ಕಾರಿ ಪ್ರಾಥಮಿಕ ಹಾಗೂ 27 ಪ್ರೌಢಶಾಲೆಗಳ ಒಟ್ಟು 24,352 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಯೋಜನೆಗಾಗಿ ಕೆಎಂಆರ್‌ಸಿಇ ವತಿಯಿಂದ ₹10.64 ಕೋಟಿಗೂ ಹೆಚ್ಚು ಮೊತ್ತದ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಮೂರು ವರ್ಷಗಳ ಅವಧಿಗೆ ಒಟ್ಟು ಸುಮಾರು ₹33 ಕೋಟಿ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ಅಡುಗೆದಾರರು ಮತ್ತು ಸಹಾಯಕಿಯರ ವೆಚ್ಚಕ್ಕೂ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ. ಇದರಿಂದ ಯೋಜನೆ ಕೇವಲ ತಾತ್ಕಾಲಿಕ ಕ್ರಮವಾಗದೆ ನಿರಂತರವಾಗಿ ನಡೆಯುವ ನಿರೀಕ್ಷೆ ಮೂಡಿದೆ.

SATS ಮಾಹಿತಿ ಅಪ್‌ಡೇಟ್‌ ಸವಾಲು

ಆದರೆ ಯೋಜನೆ ಅನುಷ್ಠಾನಕ್ಕೆ ವಿದ್ಯಾರ್ಥಿಗಳ ನಿಖರ ಸಂಖ್ಯೆಯೇ ಪ್ರಮುಖ ಆಧಾರವಾಗಿದ್ದು, SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿ ಅಪ್‌ಡೇಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಪ್ರವೇಶ, ಶಾಲೆ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಬದಲಾವಣೆಯಾಗಿರುವುದರಿಂದ ಅಂತಿಮ ಪಟ್ಟಿ ಸಿದ್ಧಪಡಿಸುವುದು ಸವಾಲಾಗಿದೆ.

ಸೆಪ್ಟೆಂಬರ್ 5ರೊಳಗೆ ಮಾಹಿತಿ ನವೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ನಂತರ ಸಂಜೆ ಸ್ನ್ಯಾಕ್ಸ್ ವಿತರಣೆಗೆ ವೇಗ ಸಿಗುವ ಸಾಧ್ಯತೆಯಿದೆ.

ಶಿಕ್ಷಕರಿಗೆ ಹೆಚ್ಚುವರಿ ಹೊರೆ?

ಯೋಜನೆಯ ಉದ್ದೇಶ ಉತ್ತಮವಾಗಿದ್ದರೂ, ಅನುಷ್ಠಾನದ ಹೊಣೆಗಾರಿಕೆ ಶಿಕ್ಷಕರ ಮೇಲೆಯೇ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ. ಈಗಾಗಲೇ ಎಐ ಹಾಜರಾತಿ, ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು ಹಾಗೂ ವಿವಿಧ ಡಿಜಿಟಲ್ ದಾಖಲೆಗಳ ನಿರ್ವಹಣೆಯಲ್ಲಿ ಶಿಕ್ಷಕರು ನಿರತರಾಗಿದ್ದಾರೆ. ನೆಟ್‌ವರ್ಕ್ ಸಮಸ್ಯೆಯೂ ಕೆಲವೊಮ್ಮೆ ತೊಂದರೆ ನೀಡುತ್ತಿದೆ.

ಶಾಲೆ ಮುಗಿಯುವ ವೇಳೆಯಲ್ಲಿ ಸ್ನ್ಯಾಕ್ಸ್ ವಿತರಣೆ, ದಾಖಲಾತಿ ಮತ್ತು ಮೇಲ್ವಿಚಾರಣೆ ಮತ್ತೊಂದು ಜವಾಬ್ದಾರಿಯಾಗಬಹುದು ಎಂಬುದು ಶಿಕ್ಷಕರ ಅಭಿಪ್ರಾಯ. ಹೀಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ತಲುಪಿಸುವ ಯೋಜನೆಯ ಜತೆಗೆ ಶಿಕ್ಷಕರ ಮೇಲಿನ ಆಡಳಿತಾತ್ಮಕ ಒತ್ತಡ ಕಡಿಮೆ ಮಾಡುವ ವ್ಯವಸ್ಥೆಯೂ ಅಗತ್ಯವಾಗಿದೆ.

ವಾರದ ಆರು ದಿನಗಳಲ್ಲಿ ವಿವಿಧ ಪೌಷ್ಟಿಕ ತಿನಿಸುಗಳು ಹಾಗೂ ಶನಿವಾರ ಹಣ್ಣು ವಿತರಿಸುವ ಉದ್ದೇಶವಿದ್ದು, ಸರಕಾರದ ಅಂತಿಮ ಸೂಚನೆ ಬಂದ ಬಳಿಕ ಯೋಜನೆಗೆ ಚಾಲನೆ ಸಿಗಲಿದೆ.

Continue Reading

ಕ್ರೀಡೆ

ಕಲ್ಲು-ಮುಳ್ಳಿನ ದಾರಿಯಲ್ಲೂ ನಿಲ್ಲದ ಹೆಜ್ಜೆ; ತಾಯಿಯ ಛಲಕ್ಕೆ ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ

Published

on

ಬರಿಗಾಲಿನ ಓಟದಲ್ಲಿ ಗೆದ್ದ ತಾಯಿ: ಮಕ್ಕಳ ಭವಿಷ್ಯಕ್ಕಾಗಿ ನೋವನ್ನೇ ಮರೆತ ರಮಾಬಾಯಿಯ ಸ್ಫೂರ್ತಿಗಾಥೆ

ಸುದ್ದಿದಿನ,ಮುಂಬಯಿ: ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು ಕೆಲವೊಮ್ಮೆ ಮನುಷ್ಯನನ್ನು ಕುಗ್ಗಿಸುತ್ತವೆ. ಆದರೆ ತಾಯಿಯೊಬ್ಬಳಿಗೆ ಮಕ್ಕಳ ಭವಿಷ್ಯದ ಕನಸು ದೊಡ್ಡದಾಗಿದ್ದರೆ, ಆಕೆಯ ಮುಂದೆ ನೋವು, ಬಡತನ, ಅಡೆತಡೆ ಯಾವುದೂ ನಿಲ್ಲುವುದಿಲ್ಲ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನ 47 ವರ್ಷದ ರಮಾಬಾಯಿ ರಣವೀರ್ ಅವರ ಕಥೆ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಪತಿಯ ಅಕಾಲಿಕ ಅಗಲಿಕೆಯ ಬಳಿಕ ಇಬ್ಬರು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತಿರುವ ರಮಾಬಾಯಿ, ಬರಿಗಾಲಿನಲ್ಲಿ ಮ್ಯಾರಥಾನ್ ಓಡಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

http://Visit : www.suddidina.com

ಕೂಲಿ ಕೆಲಸದಿಂದ ಅಡುಗೆ ಕೆಲಸದವರೆಗೆ

ಮುಂಬಯಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಬಳಿಕ ರಮಾಬಾಯಿ ಕುಟುಂಬದ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಮ್ಮ ಹೆಗಲ ಮೇಲೆ ಹೊತ್ತರು. ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಮಕ್ಕಳನ್ನು ಬೆಳೆಸಿದ ಅವರು, ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಅಂಬಾಜೋಗೈನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವೊಂದರಲ್ಲಿ ಅಡುಗೆ ಕೆಲಸಕ್ಕೂ ಸೇರಿದರು.

ದಿನವಿಡೀ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಸೇರಿದಂತೆ ದುಡಿಮೆಯ ನಡುವೆಯೂ ಅವರ ಮನಸ್ಸಿನಲ್ಲಿದ್ದದ್ದು ಒಂದೇ ಕನಸು—ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸ್ವಾವಲಂಬಿಗಳನ್ನಾಗಿ ಮಾಡುವುದು.

₹3 ಸಾವಿರಕ್ಕಾಗಿ ಆರಂಭವಾದ ಓಟ

ಮಕ್ಕಳ ವಿದ್ಯಾಭ್ಯಾಸದ ಅಗತ್ಯಕ್ಕೆ ಪುಸ್ತಕಗಳನ್ನು ಖರೀದಿಸಲು ಹಣ ಬೇಕಾಗಿತ್ತು. ಇದೇ ಸಂದರ್ಭದಲ್ಲಿ ‘ಅಮೃತ್ ದೌಡ್’ ಮ್ಯಾರಥಾನ್ ಕುರಿತು ಅವರಿಗೆ ಮಾಹಿತಿ ದೊರೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹3 ಸಾವಿರ ನೀಡಲಾಗುತ್ತದೆ ಎಂಬುದು ತಿಳಿದ ತಕ್ಷಣ ರಮಾಬಾಯಿ ಓಟದಲ್ಲಿ ಭಾಗವಹಿಸಲು ನಿರ್ಧರಿಸಿದರು.

ಯುವಕರು ಟ್ರ್ಯಾಕ್‌ಸೂಟ್ ಮತ್ತು ಶೂ ಧರಿಸಿ ಓಟಕ್ಕೆ ಸಜ್ಜಾಗಿದ್ದರೆ, ರಮಾಬಾಯಿ ಮಾತ್ರ ಸಾಮಾನ್ಯ ಸೀರೆಯಲ್ಲೇ ಸ್ಪರ್ಧೆಯ ಕಣಕ್ಕಿಳಿದರು. ಆರಂಭದಲ್ಲಿ ಕಾಲಿಗೆ ಚಪ್ಪಲಿ ಇದ್ದರೂ ಓಟದ ವೇಗ ಹೆಚ್ಚಾದಂತೆ ಅದು ಜಾರಲಾರಂಭಿಸಿತು.

ಚಪ್ಪಲಿ ಬಿಟ್ಟು ಬರಿಗಾಲಿನಲ್ಲಿ ಓಟ

ಗುರಿ ಮುಟ್ಟಬೇಕೆಂಬ ಛಲದ ಮುಂದೆ ಚಪ್ಪಲಿ ಅಡ್ಡಿಯಾಗಬಾರದು ಎಂದು ನಿರ್ಧರಿಸಿದ ರಮಾಬಾಯಿ, ಚಪ್ಪಲಿಯನ್ನು ಕೈಗೆತ್ತಿಕೊಂಡು ಬರಿಗಾಲಿನಲ್ಲೇ ಓಡತೊಡಗಿದರು. ರಸ್ತೆಯ ಕಲ್ಲು-ಮುಳ್ಳುಗಳು ಕಾಲಿಗೆ ಚುಚ್ಚಿದರೂ ಅವರು ಓಟ ನಿಲ್ಲಿಸಲಿಲ್ಲ.

ಸೀರೆಯ ಅಂಚನ್ನು ಸರಿಪಡಿಸಿಕೊಳ್ಳುತ್ತಾ, ನೋವನ್ನು ಮರೆತು ಗುರಿಯತ್ತ ಮುನ್ನುಗ್ಗಿದ ಅವರು ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲಿಗರಾಗಿ ಫಿನಿಶ್ ಲೈನ್ ತಲುಪಿದರು. ಈ ಗೆಲುವಿನ ಹಿಂದೆ ಬಹುಮಾನದ ಹಣಕ್ಕಿಂತಲೂ ದೊಡ್ಡದಾದ ಒಂದು ಕನಸು—ಮಕ್ಕಳ ಭವಿಷ್ಯ—ಇತ್ತು.

ತಾಯಿಯ ಹಾದಿಯಲ್ಲೇ ಮಗಳ ಗೆಲುವು

ಈ ಮ್ಯಾರಥಾನ್‌ನಲ್ಲಿ ರಮಾಬಾಯಿಯ ಮಗಳು ಪೂಜಾ ಕೂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುವುದು ವಿಶೇಷ. ತಾಯಿಯ ಪರಿಶ್ರಮದಿಂದ ಪ್ರೇರಣೆ ಪಡೆದ ಪೂಜಾ, ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಯಾಗುವ ಸಂಕಲ್ಪ ಮಾಡಿದ್ದಾರೆ. ಮತ್ತೊಬ್ಬ ಮಗಳು ಬ್ಯಾಂಕಿಂಗ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಪೂಜಾಳ ಪರಿಶ್ರಮ ಮತ್ತು ರಮಾಬಾಯಿಯ ತ್ಯಾಗವನ್ನು ಗಮನಿಸಿದ ತರಬೇತಿ ಅಕಾಡೆಮಿಯ ನಿರ್ದೇಶಕರು ಪೂಜಾಳ ಶಿಕ್ಷಣ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಿದ್ದಾರೆ. ಹೀಗಾಗಿ ಒಂದು ಮ್ಯಾರಥಾನ್ ಗೆಲುವು ಕೇವಲ ₹3 ಸಾವಿರದ ಬಹುಮಾನಕ್ಕೆ ಸೀಮಿತವಾಗದೆ, ಕುಟುಂಬದ ಭವಿಷ್ಯಕ್ಕೆ ಹೊಸ ಆಶಾಕಿರಣವನ್ನೇ ಮೂಡಿಸಿದೆ.

Continue Reading

Trending