ದಿನದ ಸುದ್ದಿ
ಠಾಕೂರರ ಕೇರಿಯಲ್ಲಿ ದಲಿತ ವರನ ಮೆರವಣಿಗೆ

ದಿನದ ಸುದ್ದಿ
ಇಂದು “ಮುದ್ರಕರ ದಿನಾಚರಣೆ” ; ಮುದ್ರಣವಿಲ್ಲದೆ ಹೋಗಿದ್ದರೆ..?

- ಸ್ವ್ಯಾನ್ ಕೃಷ್ಣಮೂರ್ತಿ,ಮುದ್ರಕರು,ಬೆಂಗಳೂರು
ಜ್ಞಾನದ ಬ್ಯಾಂಕಿನಲ್ಲಿ ಠೇವಣಿ ಇರುತ್ತಿರಲಿಲ್ಲ. ಪ್ರಪಂಚದೊಡನೆ ಸಂಪರ್ಕ ಸಲೀಸಾಗುತ್ತಿರಲಿಲ್ಲ. ಆರ್ಥಿಕ ರಾಜಕೀಯ ಸಾಂಸ್ಕೃತಿಕ ಸಂಚಲನ ಇರುತ್ತಿರಲಿಲ್ಲ. ಪತ್ರಿಕೆಗಳಲ್ಲಿ ರೋಚಕ ಸುದ್ದಿಗಳ ಅವತಾರಗಳು ಅನಾವರಣವಾಗುತ್ತಿರಲಿಲ್ಲ. ದೈನಂದಿನ ಘಟನೆಗಳು ದಾಖಲಾಗಲು ಕ್ಯೂ ನಿಲ್ಲಬೇಕಾಗುತ್ತಿತ್ತು. ಜಾಹಿರಾತು ಜಗತ್ತು ನಿಷ್ಕ್ರೀಯವಾಗಿರುತ್ತಿತ್ತು.
ಮನುಷ್ಯನಿಗೆ ನೀರು, ಗಾಳಿ, ಅಗ್ನಿ, ಆಕಾಶ, ಭೂಮಿಗಳೆಂಬ ಪಂಚಭೂತಗಳ ನಂತರದ ಸ್ಥಾನದಲ್ಲಿ 6ನೇ ಅವಶ್ಯಕತೆಯಾಗಿ ಮುದ್ರಣ ಎಂಬುದು ಇಂದಿನ ದೈನಂದಿನ ಬದುಕಿಗೆ ಅತ್ಯಂತ ಅನಿವಾರ್ಯ ಎಂದೆನಿಸುತ್ತದೆ. ಮುದ್ರಣರಹಿತ ಪ್ರಪಂಚ ಹೇಗಿರಬಹುದಿತ್ತೆಂಬುದನ್ನು ಊಹಿಸಿಕೊಂಡು ನೋಡಿದಾಗ ಮುದ್ರಣದ ಮಹತ್ವ ಅರಿವಾಗುತ್ತದೆ. ಮನುಷ್ಯ ಉಪಯೋಗಿಸುವ ಪ್ರತಿ ವಸ್ತುಗಳು ಒಂದಲ್ಲವೊಂದು ರೀತಿಯ ಮುದ್ರಣವನ್ನು ಅವಲಂಬಿಸಿರುತ್ತವೆ.
ಮುದ್ರಣದ ಮಹತ್ವ
ಶ್ರೀ ಎಂ. ಎ. ರಾಮಾನುಜಯ್ಯಂಗಾರ್ ವಿರಚಿತ ಒಂದು ಪ್ರಬಂಧದಲ್ಲಿ ಮುದ್ರಣದ ಮಹತ್ವವನ್ನು ಒಂದು ರೂಪಕದಿಂದ ಮನಂಬುಗುವಂತೆ ಬಣ್ಣಿಸಲಾಗಿದೆ.
ಲೇಖನಿಯು ಸದಾಕಾಲ ಗೋಳಾಡುತ್ತಿತ್ತಂತೆ.! “ಅಯ್ಯೋ ನನ್ನ ಜೀವಾಶ್ರಯ(ಎಂದರೆ ಹಸ್ತ ಪ್ರತಿ)ವನ್ನೇ ಮುಟ್ಟಿದರೆ ಸಾಯುವ ಗೆದ್ದಲು ಹುಳುವೂ ತಿಂದುಬಿಡುವುದು. ಬಡಿದರೆ ಚದುರುವ ನೀರು ತಾರಿಸಿಬಿಡುವುದು. ಉರುಬಿದರೆ ನಂದುವ ದೀಪವು ಸುಟ್ಟು ಬಿಡುವುದು. ನಾನು ಇಷ್ಟು ಉಪಕಾರಿ ಆದರೂ ನನ್ನ ಬಾಳು ಇಷ್ಟೇ. ನನ್ನನ್ನು ಕಾಪಾಡುವವರಿಲ್ಲ”.
ಇದನ್ನೂ ಓದಿ | ಮೌಲಾನಾ ಆಜಾದ್ ಆಂಗ್ಲ ಮಾದರಿ
ಶಾಲೆ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅದನ್ನು ಕೇಳಿ ಅನುತಾಪಬಟ್ಟು ಅಚ್ಚು (ಮುದ್ರಣ) ಹೀಗೆ ಹೇಳಿತಂತೆ “ಏಕೆ ಈ ಗೋಳು ? ರಾಜನನ್ನು ಭಟರು ಕಾಪಾಡುವಂತೆ ನಿನಗೆ ಸದೃಶರಾದ ಹೊಸ ಹೊಸ ಭಟರನ್ನು ಸೃಷ್ಟಿಸಿ ಕಾಪಾಡುತ್ತಿರುವೆನು. ಒಬ್ಬ ಭಟನು ಸತ್ತರೆ ಅನೇಕ ಭಟರು ನಿನಗೆ ಬೆಂಬಲವಾಗಿ ನಿಂತೇ ಇರುವರು. ಈ ಭಟರಿಂದ ಪ್ರಪಂಚವೆಲ್ಲಾ ನಿನ್ನ ರಾಜ್ಯವಾಗಿ ಆಗುವುದು. ಅವರು ಜ್ಞಾನದ ಬೆಳಕು ಬೀಳುವ ಕಡೆಯಲ್ಲೆಲ್ಲ ನಿನ್ನ ಪ್ರಾಬಲ್ಯವನ್ನು ಹೊಗಳುತ್ತಾ ಬರುವರು. ನಿನ್ನ ಆಜ್ಞೆಗೆ ಎಲ್ಲೂ ತಡೆಯಿಲ್ಲದಂತೆ ಆಗುವುದು”.
ಮುದ್ರಣ ಕ್ಷೇತ್ರಕ್ಕೆ ಮಹತ್ವದ ತಿರುವನ್ನು ಕೊಟ್ಟು, ಮುದ್ರಣ ಲೋಕದ ಪಿತಾಮಹ ವೆನಿಸಿಕೊಂಡ *ಗುಟೆನ್ ಬರ್ಗ್* ಅವರ ಸ್ಮರಣಾರ್ಥ ವಿಶ್ವದ ಅತಿದೊಡ್ಡ ಮುದ್ರಣಕಾರರ ಸಂಘವಾದ ‘ ಆಲ್ ಇಂಡಿಯಾ ಫೆಡರೇಷನ್ ಆಫ್ ಮಾಸ್ಟರ್ ಪ್ರಿಂಟರ್ಸ್ ‘(All India Federation of Master Printers – AIFMP) ಸಂಸ್ಥೆಯು ಫೆಬ್ರವರಿ 24 ರಂದು ‘ಮುದ್ರಕರ ದಿನ’ ವೆಂದು ಘೋಷಿಸಿ ಪ್ರತಿವರ್ಷ ಅಂದು ಮುದ್ರಕರ ದಿನಾಚರಣೆಯನ್ನು ಆಚರಿಸುತ್ತಾ ಬರುತ್ತಿದೆ.
ಮುದ್ರಣಲೋಕದ ಪಿತಾಮಹಾ ‘ಗುಟೆನ್ ಬರ್ಗ್’
1454ರಲ್ಲಿ ಜರ್ಮನಿಯ ಅಕ್ಕಸಾಲಿಗ (ಗೋಲ್ಡ್ ಸ್ಮಿತ್) ಗುಟೆನ್ಬರ್ಗ್ ಎಂಬಾತ ನಿರಂತರ ಅಧ್ಯಯನ, ಪ್ರಾತ್ಯಕ್ಷಿಕೆ ಮಾಡಿ ಕಡಿಮೆ ಸಮಯದಲ್ಲಿ ಹೆಚ್ಚಿನ ಉತ್ಪತ್ತಿಯನ್ನು ಮಾಡಲು ಅನುಕೂಲವಾಗುವಂತೆ ಬಿಡಿ ಅಕ್ಷರಗಳ ಮೊಳೆಗಳನ್ನು (Moveable Types) ಹಾಗೂ ಆ ಮೊಳೆಗಳಿಗೆ ಹೊಂದುವಂತಹ ಮುದ್ರಣ ಯಂತ್ರವನ್ನು ಕಂಡುಹಿಡಿದು ಮುದ್ರಣ ಲೋಕದ ಪಿತಾಮಹಾ ಎನ್ನಿಸಿಕೊಂಡರು.
1456ರಲ್ಲಿ ಗುಟೆನ್ಬರ್ಗ್ ಮೊಟ್ಟಮೊದಲ ಬೈಬಲನ್ನು ಮುದ್ರಿಸಿದರು. ಮುಂದೆ ಮುದ್ರಣ ಕಲೆಯು ಫ್ರಾನ್ಸ್, ಇಟಲಿ, ಪೋರ್ಚುಗಲ್, ಹಾಲೆಂಡ್, ಇಂಗ್ಲೆಂಡ್ ಮುಂತಾದ ರಾಷ್ಟ್ರಗಳಲ್ಲಿ ಅತ್ಯಂತ ಭರದಿಂದ ಹಬ್ಬಿತು.
ಅಲ್ಲಿಯವರೆಗೆ ಕೇವಲ ರಾಜ ಮಹಾರಾಜರ ಮತ್ತು ಸಿರಿವಂತರ ಸ್ವತ್ತಾಗಿದ್ದ ಜ್ಞಾನಾರ್ಜನೆಯೂ, ಗ್ರಂಥರಚನೆಯೂ ಮುಂದೆ ಸಾರ್ವತ್ರಿಕವಾಗಿ ಜನಸಾಮಾನ್ಯರಿಗೂ ದೊರೆಯುವಂತಾಯಿತು. ಅಲ್ಲಿಂದ ಪ್ರಾರಂಭವಾದ ಮುದ್ರಣ ಕಲೆಯ ನವನವೀನ ಆವಿಷ್ಕಾರಗಳು ಒಂದರ ಮೇಲೊಂದು ಎಂಬಂತೆ ಸೃಷ್ಟಿಯಾದವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸುದ್ದಿದಿನ,ಧಾರವಾಡ: ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಿಂದ ಕಾರ್ಯನಿರ್ವಹಿಸುತ್ತಿರುವ ನವಲಗುಂದ ಅಲ್ಪಸಂಖ್ಯಾತರ ಮೌಲಾನಾ ಆಜಾದ ಆಂಗ್ಲ ಮಾದರಿ ಶಾಲೆಯಲ್ಲಿ ಉರ್ದು ಹಾಗೂ ಹಿಂದಿ ವಿಷಯ ಬೋಧನೆಗೆ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆಯುಳ್ಳ ಅನುಭವಿ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರು ಮಾ.2 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಇದನ್ನೂ ಓದಿ | ಪೊಗರು ವಿವಾದ ಅಂತ್ಯ | ಸೀನ್ ಕಟ್ ; ಶುಭಹಾರೈಸಿದ ಬ್ರಾಹ್ಮಣ ಸಮುದಾಯ
ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಂದಿ ಪ್ಲಾಜಾ, 1 ನೇ ಮಹಡಿ, ಕೆ.ಸಿ. ಪಾರ್ಕ್ ಪೋಸ್ಟ್ ಆಫೀಸ್ ಎದುರಿಗೆ ಹಳಿಯಾಳ ರಸ್ತೆ ಧಾರವಾಡ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ: 0836-2971590, 9980091492 ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಬ್ದುಲ್ ರಷೀದ್ ಮಿರ್ಜಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಚಿವ ಡಾ.ಸುಧಾಕರ್ ಕ್ವಾರಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ : ಶಾಸಕ ದಿನೇಶ್ ಗುಂಡೂರಾವ್ ಆರೋಪ

ಸುದ್ದಿದಿನ,ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಸುಧಾಕರ್ ಅವರು ಕಲ್ಲು ಕ್ವಾರಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಸ್ಥಳೀಯವಾಗಿ ಕ್ವಾರಿಗಳ ವಿಚಾರದಲ್ಲಿ ಏನೇನು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದ್ದು ಸ್ಪೋಟ ಘಟನೆ ನಡೆದಿರುವ ಕ್ವಾರಿ ಸಹ ಅವರ ಸಂಬಂಧಿಕರದೇ ಆಗಿದೆ ಎಂದು ಶಾಸಕ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಹುಣಸೋಡು ಮಾದರಿಯಲ್ಲೇ ಚಿಕ್ಕಬಳ್ಳಾಪುರದಲ್ಲಿ ಇಂದು ಜಿಲಟಿನ್ ಸ್ಫೋಟ ನಡೆದಿದ್ದು ಈ ಕ್ವಾರಿಯನ್ನು ನಡೆಸುತ್ತಿರುವುದು ಮಂತ್ರಿಗಳ ಸಂಬಂಧಿಕರು ಎಂಬ ಮಾಹಿತಿ ತಿಳಿದಿದೆ. ಇದರ ಹಿಂದಿರುವ ರಾಜಕಾರಣಿಗಳ ಪಾತ್ರದ ಬಗ್ಗೆ ತನಿಖೆ ಆಗಬೇಕು. ಈ ಸರ್ಕಾರ ಬರೀ ಲೂಟಿ ಮಾಡುವುದರಲ್ಲಿ ಮಗ್ನವಾಗಿದೆ ಐದಾರು ಜನ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಅವರು ಕಿಡಿಕಾರಿದರು.
ಇದನ್ನೂ ಓದಿ | ಗುಜರಾತ್ | ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
ಘಟನೆಗೆ ಸರ್ಕಾರದ ಬೇಜವಾಬ್ದಾರಿತನವೇ ಕಾರಣವಾಗಿದ್ದು, ಬೆಳಿಗಿನ ಜಾವವೇ ಹೋಗಿ ಕೆಲಸ ಮಾಡಿ ಎಂದು ನಾವು ಹೇಳಿಲ್ಲ ಎಂದು ಸಿಎಂಬಯಡಿಯೂರಪ್ಪ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದೊಂದು ಅತ್ಯಂತ ಖಂಡನೀಯವಾದ ಹೇಳಿಕೆ. ಕೆಲಸ ಮಾಡಲು ಆಗುವುದಿಲ್ಲ ಎಂದರೆ ಬಿಟ್ಟು ಹೋಗಿ, ಸಮರ್ಥರು ಬಂದು ಕೆಲಸ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲೆಟಿನ್ ಅನ್ನು ಇಷ್ಟೊಂದು ಹೇಗೆ ಸಂಗ್ರಹ ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಬ್ರಷ್ಠಾಚಾರ ಇರುವುದೇ ಕಾರಣ. ಸರ್ಕಾರ ಸತ್ತುಬಿದ್ದಿದ್ದು, ಲೂಟಿ ಮತ್ತು ದಂಧೆ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಹರಿಹಾಯ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ಅಂತರಂಗ4 days ago
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!
-
ದಿನದ ಸುದ್ದಿ5 days ago
ಬಡವರನ್ನು ಸಬಲೀಕರಣಗೊಳಿಸಲು ಉಚಿತ ಅನಿಲ ಸಂಪರ್ಕ ನೀಡಿದ್ದೇವೆ : ಪ್ರಧಾನಿ ಮೋದಿ
-
ಭಾವ ಭೈರಾಗಿ5 days ago
ಕರುಣಾಳು ಅವನು, ಅವನು ನನ್ನವನು..!
-
ದಿನದ ಸುದ್ದಿ4 days ago
ದಿಶಾ ಕೇಸ್ | ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ..! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು..!
-
ಅಂತರಂಗ7 days ago
ಸ್ಫೂರ್ತಿ ಚೇತನ ; ಈ ಗುರುಚೇತನ ಡಾ. ಜಿ ಎಂ ಗಣೇಶ್
-
ಲೈಫ್ ಸ್ಟೈಲ್4 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ಕ್ರೀಡೆ4 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್4 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ