ದಿನದ ಸುದ್ದಿ
ಈ ದಿನದ ರಾಶಿಗಳ ಶುಭಾಶುಭಫಲ : ಇಂದೇ ಕರೆಮಾಡಿ
ಶ್ರೀ ಗಣಪತಿ ದೇವರ ಸ್ಮರಣೆಯನ್ನು ಮಾಡುತ್ತಾ ಈ ದಿನದ ರಾಶಿಗಳ ಶುಭಾಶುಭಫಲಗಳನ್ನು ತಿಳಿಯೋಣ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಷಯ, ದಾಂಪತ್ಯ, ಕೌಟುಂಬಿಕ ಕಲಹ, ಇನ್ನು ಇತ್ಯಾದಿ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಸ್ತ್ರೋಕ್ತ ತಾಂತ್ರಿಕ್ ವಿಧಾನಗಳಿಂದ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150
ಮೇಷ ರಾಶಿ
ನಿಮ್ಮ ಮುಖದಲ್ಲಿ ಈದಿನ ನಿರಂತರವಾದ ನಗುವನ್ನು ಕಾಣಬಹುದು ಏಕಪಕ್ಷೀಯ ವ್ಯಾಮೋಹ ಇಂದು ಹಾನಿಕರ ಎಂದು ಸಾಬೀತಾಗುತ್ತದೆ ನಿಮ್ಮ ವೈವಾಹಿಕ ಜೀವನದ ದೈನಂದಿನ ಅಗತ್ಯಗಳ ನೆರವೇರಿಸಿ ಕೊರತೆಯಿಂದಾಗಿ ಒತ್ತಡಕ್ಕೆ ಒಳಗಾಗಬಹುದು ಉದ್ಯೋಗಸ್ಥರು ನಿಮ್ಮ ವಿಪರೀತ ಶಕ್ತಿ ಮತ್ತು ಪ್ರಚಂಡ ಉತ್ಸಾಹ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ ಹಣಕಾಸಿನಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕು ವಿವಾಹದ ವ್ಯಾಮೋಹ ಕಾಣಿಸಬಹುದು.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ವೃಷಭ ರಾಶಿ
ಈ ದಿನದಲ್ಲಿ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷ ತಂದುಕೊಡುತ್ತದೆ ನಿಮ್ಮ ಧೈರ್ಯ ಪ್ರೀತಿಯನ್ನು ಗೆಲ್ಲಬಹುದು ಸಾಮಾನ್ಯ ಜನರಲ್ಲಿ ವಿಚಾರಗೋಷ್ಠಿಗಳು ಮಾಡುವುದರಿಂದ ಹೊಸ ಜ್ಞಾನ ಹೊಸ ಸಂಪರ್ಕಗಳು ಉಂಟಾಗುತ್ತವೆ ಧನಲಾಭ ಕಾಣಿಸತೊಡಗುತ್ತದೆ ವ್ಯಾಪಾರ ವ್ಯವಹಾರ ಅನಿರೀಕ್ಷಿತವಾಗಿ ಕುಸಿಯಬಹುದು ಅನಾರೋಗ್ಯಕ್ಕೆ ಒಳ್ಳೆಯ ಚಿಕಿತ್ಸೆಯನ್ನು ನೀಡುವುದು ಫಲಕಾರಿಯಾಗುತ್ತದೆ ದೈವಬಲ ನಿಮ್ಮಲ್ಲಿ ಅದೃಷ್ಟವನ್ನು ಉಂಟುಮಾಡುತ್ತದೆ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಮಿಥುನ ರಾಶಿ
ನಿಮ್ಮ ಕುಟುಂಬಕ್ಕೆ ಸೂಕ್ತ ಸಮಯವನ್ನು ನೀಡಬೇಕು ನೀವು ಅವರ ಸಲುವಾಗಿ ಕಾಳಜಿ ವಹಿಸುತ್ತಾರೆ ಎಂದು ಅವರಿಗೆ ಅರ್ಥವಾಗಲಿ ನೀವು ದಿನನಿತ್ಯ ಮಾಡುವ ವ್ಯಾಯಾಮವನ್ನು ಕೈಬಿಡಬೇಡಿ ಮತ್ತೆ ಕೀಲುನೋವು ಹೆಚ್ಚಾಗುತ್ತದೆ ಮದುವೆ ಕಾರ್ಯಗಳಿಗೆ ಸಿದ್ಧತೆ ನಡೆಯುತ್ತದೆ ನೀವು ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವುದು ಸೂಕ್ತ ದಾಂಪತ್ಯದಲ್ಲಿ ಹೆಚ್ಚು ಕಾಳಜಿಯನ್ನು ವಹಿಸಬೇಕು ಹಣಕಾಸಿನ ಅವಶ್ಯಕತೆ ಹೆಚ್ಚಾಗಿ ಕಂಡುಬರುತ್ತದೆ ಅಸಾಮಾನ್ಯವಾದ ಕೆಲಸಗಳನ್ನು ಈ ದಿನ ಮಾಡುವಿರಿ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಕರ್ಕಾಟಕ ರಾಶಿ
ಸ್ವಲ್ಪ ಹೆಚ್ಚು ಹಣವನ್ನು ಸಂಪಾದನೆ ಮಾಡಲು ನಿಮ್ಮ ಹೊಸ ಕಲ್ಪನೆಗಳು ಸಹಾಯಕ್ಕೆ ಬರಬಹುದು ದಂಪತಿಗಳಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬೇಕು ಇಲ್ಲವಾದರೆ ವಾದ-ವಿವಾದ ನಡೆಯುತ್ತದೆ ಅನಿರೀಕ್ಷಿತ ಪ್ರಯಾಣ ಒತ್ತಡ ತರಿಸುತ್ತದೆ ನಿಮಗೆ ಅಪಖ್ಯಾತಿ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಕೆಲಸದ ಕಚೇರಿಗಳಿಗೆ ಭೇಟಿ ಮಾಡುವುದರಿಂದ ನಿಮ್ಮ ಕಾರ್ಯಗಳು ನಡೆಯುತ್ತವೆ ಗುರು ಬಲದಿಂದ ವಿಶೇಷ ಮದುವೆ ಆಹ್ವಾನಗಳು ಬರಬಹುದು.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಸಿಂಹ ರಾಶಿ
ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸು ಪೂರ್ತಿಯಾಗಿ ಆವರಿಸಿಕೊಳ್ಳುತ್ತದೆ ಒತ್ತಡಗಳನ್ನು ಮುಕ್ತವಾಗಿ ನಿಭಾಯಿಸಲು ಪ್ರಯತ್ನಿಸಬೇಕು ಮನೆಯ ಮೂಲಗಳಿಂದ ಹಣವನ್ನು ಕಂಡು ದಿನವನ್ನು ಬೆಳಗಿಸುತ್ತದೆ ಕುಟುಂಬದಲ್ಲಿ ರಹಸ್ಯ ಸುದ್ದಿಗಳು ನೀವು ಕಂಡು ಅಚ್ಚರಿ ಕೊಳ್ಳಬಹುದು ಒಳ್ಳೆಯ ಆರೋಗ್ಯಕ್ಕೆ ಮಾನಸಿಕತೆಯನ್ನು ದೂರಮಾಡಬೇಕು ಪ್ರೀತಿಪಾತ್ರರೊಂದಿಗೆ ವಿವಾಹ ನಡೆಯುವುದು ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿ ಕಾಣಿಸುತ್ತದೆ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಕನ್ಯಾ ರಾಶಿ
ಕೆಲಸ ಕಾರ್ಯದ ಕೌಶಲ್ಯಗಳು ಪರಿಣಾಮಕಾರಿಯಾಗಿ ಕಂಡುಬರುತ್ತವೆ ವ್ಯಾಪಾರದಲ್ಲಿ ಹೇಳಿಕೊಳ್ಳುವಷ್ಟು ಲಾಭದ ಪ್ರಮಾಣ ಬರುವುದಿಲ್ಲ ನಿಮ್ಮ ಪ್ರೇಮ ಸಂಗಾತಿಯು ಸಕ್ಕರೆಗಿಂತ ಸಿಹಿ ಎಂದು ತಿಳಿದುಬರುತ್ತದೆ ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ ನೆಚ್ಚಿನ ನೆರೆಹೊರೆ ಯಿಂದ ಸ್ವಲ್ಪ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮದುವೆ ವಿಚಾರ ಬೇಗನೆ ಕೈಗೂಡುವುದಿಲ್ಲ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ತುಲಾ ರಾಶಿ
ಆರೋಗ್ಯದಲ್ಲಿ ಅಗತ್ಯ ಮುತುವರ್ಜಿವಹಿಸಿ. ಕೆಲಸಗಳಲ್ಲಿ ಶ್ರದ್ದೆ ಮತ್ತು ಪ್ರಾಮಾಣಿಕತೆ ಮುಖ್ಯವಾಗಿರುತ್ತದೆ. ನಿಮ್ಮ ಕಾರ್ಯಶೈಲಿ ಮೆಚ್ಚುಗೆ ಪಡೆದು ಮೇಲಾಧಿಕಾರಿಗಳು ನಿಮ್ಮನ್ನು ಆಯ್ಕೆ ಮಾಡಲಿದ್ದಾರೆ. ಪ್ರಯಾಣದ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಮರೆಯದೆ ಇಟ್ಟುಕೊಳ್ಳುವುದು ಕ್ಷೇಮ. ಪಶುಸಂಗೋಪನೆ ಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ಆರ್ಥಿಕ ಬೆಳವಣಿಗೆ ಕಾಣಬಹುದಾದ ದಿನವಿದು.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ವೃಶ್ಚಿಕ ರಾಶಿ
ನಿರೀಕ್ಷಿತ ಆದಾಯಗಳು ವಿಳಂಬವಾಗುವ ಸಾಧ್ಯತೆ ಕಂಡು ಬರಲಿದೆ. ಉದ್ಯೋಗದಲ್ಲಿ ಸಹವರ್ತಿಗಳಿಂದ ಆಪಾದನೆಗಳು ಎದುರಾಗಬಹುದು. ಯೋಜನೆಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಮುಂದೆ ಸಾಗುವುದು ಒಳಿತು. ಬರುವ ಸಮಸ್ಯೆಯನ್ನು ದೃಢಮನಸ್ಸಿನಿಂದ ಎದುರಿಸಲು ಸಜ್ಜಾಗಿ. ಲಾಭಗಳಿಕೆಗೆ ಹಲವು ಅವಕಾಶಗಳು ಕಾಣಬರುತ್ತದೆ, ಅದನ್ನು ವ್ಯವಸ್ಥಿತ ಕಾರ್ಯಗಳಿಂದ ಪಡೆದುಕೊಳ್ಳುವುದು ಮುಖ್ಯ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಧನಸ್ಸು ರಾಶಿ
ಆಕಸ್ಮಿಕವಾಗಿ ನೀವು ಮಾತನಾಡುವ ಮಾತುಗಳು ಪ್ರಮಾದಕ್ಕೆ ಎಡೆಮಾಡಿಕೊಡಬಹುದು ಎಚ್ಚರವಿರಲಿ. ಆರ್ಥಿಕ ಸಹಾಯಕ್ಕಾಗಿ ಬಂಧುಮಿತ್ರರ ಬಳಿ ಕೇಳುವ ಸಾಧ್ಯತೆ ಕಾಣಬಹುದು. ಸಂಜೆಯ ವೇಳೆಗೆ ನಿಮ್ಮ ವೈಯಕ್ತಿಕ ಸಮಸ್ಯೆ ದೂರವಾಗಲಿದೆ. ಶಕ್ತಿ ದೇವತಾ ದರ್ಶನಕ್ಕೆ ಇಂದು ಹೋಗುವ ಸಾಧ್ಯತೆ ಕಾಣಬಹುದು. ಸಂಗಾತಿಯೊಡನೆ ಸಮಾರಂಭಗಳಿಗೆ ಭೇಟಿನೀಡುವ ಮನಸ್ಥಿತಿಯಲ್ಲಿರುವಿರಿ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಮಕರ ರಾಶಿ
ಕೆಲಸದಲ್ಲಿ ಕುಶಲತೆ ಉತ್ತಮವಾಗಿರುತ್ತದೆ. ನಿಮ್ಮ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಗುವುದು ನಿಶ್ಚಿತ. ವಿದೇಶ ಪ್ರಯಾಣದ ಚಿಂತನೆಗೆ ಮೂರ್ತಸ್ವರೂಪ ದೊರೆಯಲಿದೆ. ಅಪರಿಚಿತ ವ್ಯಕ್ತಿಗಳೊಡನೆ ವ್ಯವಹಾರ ಮಾಡುವಾಗ ಎಚ್ಚರಿಕೆ ಇರಲಿ. ಆಕಸ್ಮಿಕ ಧನಲಾಭ ವಾಗುವ ಸಾಧ್ಯತೆ ಕಂಡು ಬರಲಿದೆ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಕುಂಭ ರಾಶಿ
ಸ್ವಯಂ ಪ್ರೇರಣೆಯಿಂದ ಸಾಮಾಜಿಕ ಕಾರ್ಯಗಳಿಗೆ ನೀವು ದುಡಿಯುವಿರಿ. ನಿಮ್ಮ ಕೆಲವು ಆಲೋಚನೆಗಳು ಸೂಕ್ತ ಮನ್ನಣೆ ಸಿಗಲಿದೆ. ಭೋಜನದ ವ್ಯವಸ್ಥೆ ಅತ್ಯುತ್ತಮವಾಗಿ ಇರಲಿದೆ. ಮನೆಗೆ ಬರುವ ನೆಂಟರಿಂದ ಸಂತಸದ ವಾತಾವರಣ ಪ್ರಾಪ್ತಿಯಾಗುತ್ತದೆ. ನಿರೀಕ್ಷಿತ ಆದಾಯಗಳು ಸಮಯದ ಗತಿಯಲ್ಲಿ ಕೈಸೇರುವುದು ನಿಶ್ಚಿತ. ಮನರಂಜನೆಗೆ ಅವಕಾಶಗಳು ಸಿಗುವ ಸಾಧ್ಯತೆಯಿದೆ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಮೀನ ರಾಶಿ
ಸಂಕೋಚದ ಸ್ವಭಾವದಿಂದ ವರ್ತಿಸುವುದು ನಿಮ್ಮ ಕೆಲಸಗಳಿಗೆ ಹಿನ್ನಡೆ ಯಾಗಲು ಕಾರಣವಾಗಬಹುದು. ನೇರವಾದ ಮಾತು ಮತ್ತು ನಿಮ್ಮಲ್ಲಿ ಹೊಳೆಯುವ ಆಲೋಚನೆಗಳನ್ನು ಪ್ರಸ್ತುತಪಡಿಸಿ. ಆರ್ಥಿಕ ಸ್ಥಿತಿ ಸಾಧಾರಣವಾಗಿ ಇರಲಿದೆ. ಮುಂದಿನ ದಿನಗಳ ಅವಶ್ಯಕತೆಗಾಗಿ ಹಣಕಾಸನ್ನು ಕೊಡಿಡಬೇಕಾಗಿದೆ, ದುಂದುವೆಚ್ಚ ಮಾಡುವುದು ಒಳಿತಲ್ಲ. ಹಿರಿಯರ ಮಾತುಗಳನ್ನು ಆದಷ್ಟು ಪಾಲನೆ ಮಾಡುವುದು ಸೂಕ್ತ.
ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ನಿಮ್ಮ ಸಮಸ್ಯೆಗಳ ಸಮಾಲೋಚನೆಗಾಗಿ ಲಭ್ಯರಿದ್ದಾರೆ. ಪರಿಹಾರ ಮಾರ್ಗದರ್ಶನಕ್ಕಾಗಿ
ಇಂದೇ ಕರೆ ಮಾಡಿ: 9945410150

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಸತಿ ಯೋಜನೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.
ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ ಎಣ್ಣೆಯಂಶವಿರುವ ಆಹಾರವನ್ನು ಕಡಿಮೆ ಮಾಡಿ.
2. ಸಿಹಿ ಪದಾರ್ಥಗಳ ನಿಯಂತ್ರಣ (Avoid Sweets): ಸಕ್ಕರೆ, ಬೆಲ್ಲ, ಬೇಕರಿ ತಿಂಡಿಗಳು, ಐಸ್‌ಕ್ರೀಮ್ ಮತ್ತು ಕೃತಕ ಸಕ್ಕರೆ ಇರುವ ತಂಪು ಪಾನೀಯಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ಅಥವಾ ದೂರವಿಡಿ.
3. ದಿನನಿತ್ಯದ ವ್ಯಾಯಾಮ (Regular Exercise): ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ವೇಗದ ನಡಿಗೆ (brisk walking), ಸೈಕ್ಲಿಂಗ್, ಈಜು ಅಥವಾ ಯೋಗ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
4. ದೇಹದ ತೂಕದ ನಿರ್ವಹಣೆ (Weight Management): ಅತಿಯಾದ ದೇಹದ ತೂಕವು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ತೂಕವನ್ನು ಆರೋಗ್ಯಕರ ಮಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.
5. ನಿಯಮಿತ ರಕ್ತದ ಪರೀಕ್ಷೆ (Regular Blood Sugar Check): ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Fasting ಮತ್ತು Post Prandial) ಹಾಗೂ ಮೂರು ತಿಂಗಳ ಸರಾಸರಿ ತಿಳಿಸುವ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಿ.
6. ಸಮಯಕ್ಕೆ ಸರಿಯಾಗಿ ಔಷಧಿ ಸೇವನೆ (Timely Medication): ವೈದ್ಯರು ಸೂಚಿಸಿದ ಮಾತ್ರೆಗಳನ್ನು ಅಥವಾ ಇನ್ಸುಲಿನ್ ಅನ್ನು ನಿಗದಿತ ಸಮಯಕ್ಕೆ ತೆಗೆದುಕೊಳ್ಳಿ. ಸ್ವಂತ ನಿರ್ಧಾರದಿಂದ ಔಷಧಿಯನ್ನು ನಿಲ್ಲಿಸಬೇಡಿ.
7. ಮಾನಸಿಕ ಒತ್ತಡದ ನಿರ್ವಹಣೆ (Stress Management): ಅತಿಯಾದ ಮಾನಸಿಕ ಒತ್ತಡವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ (Meditation) ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ.
8. ಪೂರಕ ನೀರು ಕುಡಿಯುವುದು (Stay Hydrated): ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ದೇಹದಲ್ಲಿರುವ ಹೆಚ್ಚುವರಿ ಗ್ಲೂಕೋಸ್ ಮೂತ್ರದ ಮೂಲಕ ಹೊರಹೋಗಲು ಸಹಾಯ ಮಾಡುತ್ತದೆ.
9. ಉತ್ತಮ ನಿದ್ರೆ (Good Sleep): ಪ್ರತಿದಿನ ರಾತ್ರಿ 7 ರಿಂದ 8 ಗಂಟೆಗಳ ಕಾಲ ಶಾಂತಿಯುತವಾದ ನಿದ್ರೆ ಮಾಡುವುದು ದೇಹದ ಚಯಾಪಚಯ ಕ್ರಿಯೆ (Metabolism) ಮತ್ತು ಹಾರ್ಮೋನ್‌ಗಳ ಸಮತೋಲನಕ್ಕೆ ಬಹಳ ಮುಖ್ಯ.
10. ದುರಭ್ಯಾಸಗಳಿಂದ ದೂರವಿರಿ (Avoid Smoking and Alcohol): ಧೂಮಪಾನ ಮತ್ತು ಮದ್ಯಪಾನವು ಸಕ್ಕರೆ ಕಾಯಿಲೆಯ ತೊಂದರೆಗಳನ್ನು (ಹೃದಯ ಮತ್ತು ನರಗಳ ಸಮಸ್ಯೆ) ಮತ್ತಷ್ಟು ಹೆಚ್ಚು ಮಾಡುವುದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು.
ಗಮನಿಸಿ: ಈ ಮೇಲಿನ ಮಾಹಿತಿ ರೋಗದ ನಿರ್ವಹಣೆಗೆ ಸಾಮಾನ್ಯ ಮಾರ್ಗದರ್ಶನವಾಗಿದೆ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿರುವುದರಿಂದ, ನಿಮ್ಮ ವೈದ್ಯರ ವೈಯಕ್ತಿಕ ಸಲಹೆ ಮತ್ತು ಚಿಕಿತ್ಸೆಯ ಕ್ರಮವೇ ಅಂತಿಮ ಹಾಗೂ ಸುರಕ್ಷಿತ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಆಶ್ರಯ ಯೋಜನೆ – ಆವಧಿ ವಿಸ್ತರಣೆ
-
ದಿನದ ಸುದ್ದಿ6 days agoಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
-
ಅಂಕಣ6 days agoಕವಿತೆ | ದೇವರ ಹೂವು
-
ದಿನದ ಸುದ್ದಿ4 days ago10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
-
ದಿನದ ಸುದ್ದಿ4 days agoರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoವಸತಿ ಯೋಜನೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days agoಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ4 days agoಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ

