ನಿತ್ಯ ಭವಿಷ್ಯ
ಈ ದಿನದ ಭವಿಷ್ಯವಾಣಿ ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಶಕ್ತಿಯಿಂದ ಸಮಸ್ಯೆಗಳಿಗೆ ಪರಿಹಾರ : 16/08/2019 ಶುಕ್ರವಾರ
ಶ್ರೀ ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಶಕ್ತಿಯನ್ನು ವಶದಲ್ಲಿ ಇಟ್ಟುಕೊಂಡಿರುವ ಏಕೈಕ ಪ್ರಸಿದ್ಧ ಜ್ಯೋತಿಷ್ಯರು ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್. 9900494333. ನಿಮ್ಮ ಜೀವನದ ಅನೇಕ ಗುಪ್ತ ಹಾಗೂ ಕಠಿಣ ಸಮಸ್ಯೆಗಳಿಗೆ ಶಾಶ್ವತವಾಗಿ ಸೂಕ್ತವಾದ ಪರಿಹಾರ ಮಾಡಿಕೊಡಲಾಗುತ್ತದೆ. ಇಂದೇ ಕರೆಮಾಡಿ.
ನಿತ್ಯ ಭವಿಷ್ಯ
ಮೇಷ ರಾಶಿ
ಉದ್ಯೋಗದಲ್ಲಿ ಸ್ವಲ್ಪ ಮನೋರಂಜನೆಯ ವಿಚಾರಗಳು ಕಂಡು ಬಂದು ಬೇಗನೆ ಹೊರಬರಲು ಪ್ರಯತ್ನಿಸುತ್ತೀರಿ. ನಿಮಗೆ ಈ ದಿನ ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತವಾಗಿ ಇರುತ್ತದೆ. ದಿನೇದಿನೇ ಯಶಸ್ವಿ ಯಾಗುವುದನ್ನು ಕಂಡು ಜನರು ಬೆರಗಾಗಿ ನೋಡುತ್ತಾರೆ. ಈ ದಿನ ಪ್ರೀತಿ ಬರೆದ ಹಾಡುಗಳು ಉತ್ತಮ ಆಹಾರಗಳು ಇಷ್ಟಪಡುತ್ತೀರಿ. ಕೆಲವು ಕಾಲ ಸಂಗಾತಿಯೊಡನೆ ಮನೆಯವರ ವಿಚಾರಗಳನ್ನು ಮಾತನಾಡಬಹುದು. ನೀವು ಮದುವೆಯಾಗಲು ಶುಭಯೋಗ ಬೇಗನೆ ತಂದುಕೊಡುವುದಿಲ್ಲ. ಆರೋಗ್ಯವು ಸಮರ್ಪಕವಾಗಿ ಕಾಣಿಸುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ವೃಷಭ ರಾಶಿ
ಉದ್ಯೋಗಗಳಲ್ಲಿ ನಿಮ್ಮ ಪ್ರತಿಭೆಗಳನ್ನು ಸರಿಯಾಗಿ ಯಾರೂ ಕೂಡ ಗುರುತಿಸುವುದಿಲ್ಲ. ಇದರಿಂದ ಹೆಚ್ಚಾಗಿ ನಿಮ್ಮ ಮನಸ್ಸಿಗೆ ನೋವುಂಟು ಆಗುತ್ತದೆ. ಹಣಕಾಸಿನಲ್ಲಿ ಲೆಕ್ಕಾಚಾರ ವಿಚಾರ ಚೆನ್ನಾಗಿದ್ದು ನಿಮಗೆ ಗೊತ್ತಿಲ್ಲದ ಹಾಗೆ ಖರ್ಚುಗಳು ಜಾಸ್ತಿ ಬರುತ್ತದೆ. ಕುಟುಂಬದಲ್ಲಿ ಒರಟು ವರ್ತನೆ ಮತ್ತು ದಾಂಪತ್ಯದಲ್ಲಿ ಅಸಾಮರಸ್ಯವನ್ನು ತರುತ್ತದೆ. ದೂರದಿಂದ ಬರುವ ಮದುವೆಯ ಸಂಬಂಧವನ್ನು ಒಪ್ಪಿಕೊಳ್ಳುವುದು ಶುಭವಾಗುತ್ತದೆ. ನೀವು ಒಳ ರೋಗಗಳನ್ನು ಹೆಚ್ಚಾಗಿ ಅನುಭವಿಸುತ್ತೀರಿ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಮಿಥುನ ರಾಶಿ
ಆಕರ್ಷ ವಾದ ಮನೋಭಾವ ಚಟುವಟಿಕೆಯ ಕೆಲಸ ಕಾರ್ಯಗಳು ಉದ್ಯೋಗದಲ್ಲಿ ನಿಮಗೆ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಕುಟುಂಬದಿಂದ ನಿಮಗೆ ಹಿಂದೆ ಆಗಿರುವಂತಹ ಅನ್ಯಾಯವನ್ನು ಮರೆಯಬೇಕು. ನೀವು ಈ ದಿನ ನಿಮ್ಮ ಸಂಗಾತಿಯು ಮಾಡಿದ ಮೋಸವನ್ನು ನೆನಪು ಮಾಡಿಕೊಂಡು ಕೋಪದಿಂದ ವರ್ತಿಸುತ್ತೀರಿ. ಹಣಕಾಸು ಸುಧಾರಿಸಲು ಮಾಡಿದ ಪ್ರಯತ್ನಗಳು ನಿಮಗೆ ತೃಪ್ತಿ ನೀಡುತ್ತವೆ. ಮದುವೆ ವಿಷಯ ಅಂತ ಬಂದಾಗ ಮನೆಯಲ್ಲಿ ನೀವು ಸ್ತಬ್ಧವಾಗಿ ಕುಳಿತುಕೊಳ್ಳುವಿರಿ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಕರ್ಕಾಟಕ ರಾಶಿ
ನಿಮ್ಮ ಜೀವನದಲ್ಲಿ ಎಷ್ಟೇ ದೈವಭಕ್ತಿಯಿಂದ ಪೂಜಿಸಿದರು ನಿಮಗೆ ಬೇಗನೆ ಒಳ್ಳೆಯ ಫಲಗಳು ದೊರಕುವುದಿಲ್ಲ. ಉದ್ಯೋಗದಲ್ಲಿ ಸ್ಥಾನಗಳು ಬದಲಾವಣೆಯಾಗಿ ಪ್ರಯಾಣದ ತೊಂದರೆಯನ್ನು ಅನುಭವಿಸುತ್ತೀರಿ. ಮನೆಯಲ್ಲಿ ಹೆಂಗಸರ ಕಿರಿಕಿರಿಗಳು ಬಾಯಿ ಮಾತುಗಳು ನಿಮಗೆ ಹೆಚ್ಚು ತೊಂದರೆಯನ್ನು ಉಂಟುಮಾಡುತ್ತದೆ. ಇದರಿಂದ ನೀವು ಮನೆ ತೊರೆದು ಬೇರೆಕಡೆ ಇರಲು ಪ್ರಯತ್ನಿಸುವಿರಿ. ಸಂಬಂಧಿಗಳು ಯಾವಾಗಲೂ ನಿಮ್ಮನ್ನು ದೂಷಿಸುತ್ತಾರೆ. ದುರ್ಗಾದೇವಿ ಜಪ ಮಾಡುವುದು ಬಹಳ ಒಳ್ಳೆಯದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಸಿಂಹ ರಾಶಿ
ನಿಮ್ಮಲ್ಲಿ ಇರುವಂತಹ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿಕೊಂಡು ನಂತರ ವ್ಯಾಪಾರದಲ್ಲಿ ತೊಡಗಿಕೊಳ್ಳುವುದು ಉತ್ತಮವಾಗಿ ಇರುತ್ತದೆ. ಈ ದಿನ ಬಹಳ ಪ್ರಯೋಜನಕಾರಿ ದಿನವಾಗಿ ಇರುವುದಿಲ್ಲ. ನಿಮ್ಮ ಸಂಗಾತಿಯನ್ನು ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗುವ ಮೂಲಕ ನಿಮ್ಮ ಪ್ರೇಮ ಜೀವನ ವನ್ನು ಉಜ್ವಲ ಗೊಳಿಸಬಹುದು. ಉದ್ಯೋಗದಲ್ಲಿ ನಿಮ್ಮ ಕೋಪ ಹೆಚ್ಚಾಗಿ ಕಂಡು ಸಹೋದ್ಯೋಗಿಗಳೊಂದಿಗೆ ಮನಸ್ತಾಪ ವನ್ನು ಮಾಡಿಕೊಳ್ಳಬಹುದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಕನ್ಯಾ ರಾಶಿ
ನಿಮ್ಮ ಉದ್ವೇಗದ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಮತ್ತು ಭಯವನ್ನು ಸಾಧ್ಯವಾದಷ್ಟು ಬೇಗ ತೊಡೆದುಹಾಕಬೇಕು. ಇಲ್ಲವಾದರೆ ಇವು ನಿಮ್ಮ ಆರೋಗ್ಯವನ್ನು ನಶಿಸಬಹುದು. ಉದ್ಯೋಗದಲ್ಲಿ ಇಂದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಬಂಧವನ್ನು ಹೊಂದುವಂತೆ ಮಾಡಬಹುದು. ಹಣಕಾಸು ಹೂಡಿಕೆ ಮಾಡುವುದನ್ನು ಸ್ವಲ್ಪಮಟ್ಟಿಗೆ ಯೋಚನೆ ಮಾಡಬೇಕು. ನಿಮ್ಮ ಗೆಳತಿಯ ಜೊತೆಗೆ ಅಸಭ್ಯವಾಗಿ ನಡೆದುಕೊಳ್ಳುವುದರಿಂದ ನಿಮ್ಮ ಗೌರವವನ್ನು ಕಡಿಮೆ ಮಾಡಿಕೊಳ್ಳಬಹುದು. ವಿವಾಹಕ್ಕೆ ಒಂದೇ ಹೆಜ್ಜೆ ಅನ್ನೋಹಾಗೆ ನೀವು ಕಾದು ಕುಳಿತು ನೋಡಬಹುದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ತುಲಾ ರಾಶಿ
ನಿಮ್ಮ ಗುಪ್ತ ಮಾಹಿತಿಯನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವ ಮೊದಲು ಸರಿಯಾಗಿ ಯೋಚನೆ ಮಾಡಬೇಕು. ನೀವು ಒಬ್ಬರನ್ನು ಇಷ್ಟಪಡುತ್ತಿದ್ದರೆ ನಿಮ್ಮನ್ನು ಇನ್ನೊಬ್ಬರು ಕುತೂಹಲದಿಂದ ಪ್ರೀತಿಯಿಂದ ನೋಡುತ್ತಿರುತ್ತಾರೆ. ಪದೇ ಪದೇ ನಿಮಗೆ ಶೀತ ಭಾವನೆ ಆರೋಗ್ಯದಲ್ಲಿ ಏರುಪೇರು ಉಂಟುಮಾಡುತ್ತದೆ. ಮನೆಯಲ್ಲಿ ಸೋಮಾರಿತನ ಆವರಿಸಿಕೊಂಡು ನಿಮ್ಮ ಮೈಭಾರ ಹೆಚ್ಚುತ್ತದೆ. ಹಣಕಾಸನ್ನು ತರಾತುರಿಯಲ್ಲಿ ಎಣಿಸಿಕೊಂಡು ಜೇಬಿನಲ್ಲಿ ಇಟ್ಟುಕೊಳ್ಳಬಾರದು ಯಾಕೆಂದರೆ ಹಣ ಕಳೆದುಕೊಳ್ಳುವ ದಿನವಾಗಿರುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ವೃಶ್ಚಿಕ ರಾಶಿ
ನಿಮ್ಮ ಹಳೆಯ ಸ್ನೇಹಿತರೊಂದಿಗೆ ಇಂದು ಆರಾಮಾಗಿ ಕೆಲವು ಹೊತ್ತು ಕಾಲ ಕಳೆಯಬಹುದು. ನೀವು ಹೆಚ್ಚು ನಗುಮುಖದಿಂದ ಇದ್ದರೆ ಅದೇ ನಿಮಗೆ ಹೆಚ್ಚು ಆಕರ್ಷಣೆಯಾಗಿ ನಿಮ್ಮ ಗೆಲುವಿಗೆ ದಾರಿಯಾಗಿ ಇರುತ್ತದೆ. ಮನಸ್ಸಿನಲ್ಲಿರುವ ಎಷ್ಟೋ ಬಯಕೆಗಳು ಯಾರಿಗೂ ಹೇಳಿಕೊಳ್ಳದೆ ದುಃಖದಿಂದ ಇರುವಿರಿ. ನಿಮ್ಮ ಮಾನಸಿಕತೆ ನಿಮಗೆ ಅನಾರೋಗ್ಯ ತರುತ್ತದೆ. ಉದ್ಯೋಗದಲ್ಲಿ ಸುಖದುಃಖಗಳನ್ನು ಹಂಚಿಕೊಳ್ಳಲು ಹೊಸ ಸ್ನೇಹಿತರೊಬ್ಬರು ಪರಿಚಯ ಆಗುವರು. ಕಂಕಣಬಲ ಇದ್ದರು ನಿಮ್ಮ ಮನೆಯಲ್ಲಿ ಮದುವೆ ವಿಷಯಗಳು ಮಾತನಾಡುವುದಿಲ್ಲ ಯಾಕೆಂದರೆ ನಿಮ್ಮಲ್ಲಿ ಜವಾಬ್ದಾರಿ ಕಡಿಮೆ ಇರುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಧನಸ್ಸು ರಾಶಿ
ಮನೆಯಲ್ಲಿ ನಿಮ್ಮ ಸಂತೋಷವನ್ನು ಇತರರಿಗೆ ವ್ಯಕ್ತಪಡಿಸಿ ಖುಷಿಯ ವಾತಾವರಣವನ್ನು ನಿರ್ಮಿಸಬಹುದು. ಹೆಚ್ಚುವರಿ ಹಣವನ್ನು ಭೂಮಿಯ ವಿಷಯದಲ್ಲಿ ತೊಡಗಿಸಿಕೊಂಡು ಲಾಭದಾಯಕ ಅಂಶಗಳು ಕಾಣಬಹುದು. ಈ ದಿನ ವೈದ್ಯಕೀಯ ಖರ್ಚು ಹೆಚ್ಚಾಗಿ ಕಂಡುಬರುತ್ತದೆ. ಉದ್ಯೋಗಸ್ಥರು ಒಂದು ಸಣ್ಣ ತಪ್ಪಿನಿಂದ ಸಮಸ್ಯೆಗಳು ಸಂಭವಿಸಬಹುದು. ವಿವಾಹ ಸಾಕಷ್ಟು ಸಮಯದಿಂದ ಮುಂದೆ ಸಾಗುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಮಕರ ರಾಶಿ
ಕುಟುಂಬದಲ್ಲಿನ ಕಷ್ಟಗಳು ನಿಮ್ಮ ಈ ದಿನ ಕಠಿಣವಾಗಬಹುದು. ದಾಂಪತ್ಯದಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಮಯ ಪಡೆಯಬೇಕು. ಇಂದಿನ ಆರೋಗ್ಯ ಉತ್ತಮವಾಗಿದ್ದರೂ ಪ್ರಯಾಣ ಒತ್ತಡಮಯ ಮತ್ತು ಕಷ್ಟಕರ ಆಗಿರುತ್ತದೆ. ಉದ್ಯೋಗದಲ್ಲಿ ಸಂಭವಿಸಿದ ಕೆಟ್ಟ ಪರಿಸ್ಥಿತಿಗಳು ಹೊರತಾಗಿಯೂ ನಿಮಗೆ ಸುಖಮಯ ಸಾಗುವ ದಾರಿ ತಿಳಿದಿರುತ್ತದೆ. ಮದುವೆ ವಿಷಯದಲ್ಲಿ ಯಾವುದೇ ಅನಗತ್ಯ ಒತ್ತಡವನ್ನು ಹಾಕಿಕೊಳ್ಳಬಾರದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಕುಂಭ ರಾಶಿ
ನೀವು ಈ ದಿನ ನಿಮಗಿಂತ ಉತ್ತಮ ಸ್ಥಾನದಲ್ಲಿರುವ ನಿಮ್ಮ ಸ್ನೇಹಿತರನ್ನು ಕೂಡ ಕಾಣಬಹುದು. ಹಣಕಾಸಿನ ಪರಿಸ್ಥಿತಿ ತುಂಬಾ ಕಠಿಣವಾಗಿ ಕಂಡು ಬೇರೆಯವರ ಹತ್ತಿರ ಕೈಚಾಚುವ ಸಂಭವ ಉಂಟಾಗುತ್ತದೆ. ನೀವು ಕುಟುಂಬದವರನ್ನು ಸುಧಾರಿಸಲು ಮತ್ತು ಅವರನ್ನು ತೃಪ್ತಿಯಾಗಿ ಇರಿಸಲು ಸಾಕಷ್ಟು ಪ್ರಯತ್ನವನ್ನು ಶ್ರಮದಿಂದ ಮಾಡುವಿರಿ. ಆದರೆ ಈ ದಿನ ನಿಮಗೆ ಅದೃಷ್ಟ ಕೈ ಕೊಡುತ್ತದೆ. ಆರೋಗ್ಯ ನೀವು ಎಣಿಸಿದ ಹಾಗೆ ತೃಪ್ತಿಕರ ವಾಗಿ ಇರುವುದಿಲ್ಲ. ಕೆಲವು ಸುಂದರ ಪ್ರಣಯ ದಿನಗಳನ್ನು ನೆನಪಿಸಿಕೊಳ್ಳಬಹುದು. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ) 9900494333.
ಮೀನಾ ರಾಶಿ
ಉದ್ಯೋಗದಲ್ಲಿ ಕೆಲಸದ ಮೇಲೆ ಗಮನ ಕೊಡುವುದು ಕಷ್ಟವಾಗಬಹುದು. ನೀವು ಕೆಲವು ತಂತ್ರಗಳನ್ನು ಅಳವಡಿಸಿದಲ್ಲಿ ಸ್ವಲ್ಪ ಹೆಚ್ಚುವರಿ ಹಣವನ್ನು ಸಂಪಾದನೆ ಮಾಡಬಹುದು. ಇಂದು ಪ್ರೀತಿಯ ಅಮಲು ನಿಮ್ಮನ್ನು ಆವರಿಸಿಕೊಂಡು ರೋಮಾಂಚನವಾಗಿ ಇರಬಹುದು. ಆರೋಗ್ಯ ಕೆಡುವುದಕ್ಕೆ ಕೆಟ್ಟ ಆಲೋಚನೆಗಳೇ ಕಾರಣವಾಗುತ್ತವೆ. ವಿವಾಹ ನಿಮಗೆ ನಿಜಕ್ಕೂ ಅದ್ಭುತವಾಗಿ ಕಂಡುಬರುತ್ತದೆ. ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು ಕೇವಲ 5 ದಿನದಲ್ಲಿ ( ಪರಿಹಾರ ಮಾಡಲು ಕರೆಮಾಡಿ)9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ
ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.
ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.
ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.
ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.
ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.
ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.
ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ಅಂತರಂಗ2 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ3 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ದಿನದ ಸುದ್ದಿ4 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ


