Connect with us

ನಿತ್ಯ ಭವಿಷ್ಯ

ವ್ಯಾಪಾರ, ವ್ಯವಹಾರ ಮಾಡುವ ಈ ರಾಶಿಯವರಿಗಿಂದು ಶುಭದಿನ : ಶನಿವಾರ 23-11-2019

Published

on

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ಜ್ಯೋತಿಷ್ಯರು ಗುರು ದೀಕ್ಷಿತ್ : 9036933032

ಮೇಷ ರಾಶಿ

ಆರೋಗ್ಯವಾಗಿ ಸದೃಢದಿಂದ ಇರಲು ಉತ್ತಮ ಆಹಾರವನ್ನು ಸೇವಿಸಿ. ಕ್ರೀಡಾ ಚಟುವಟಿಕೆ ದೈಹಿಕ ಬಲ ಕಾಯ್ದುಕೊಳ್ಳಲು ನೆರವಾಗುತ್ತದೆ. ಹಣಕಾಸಿನಲ್ಲಿ ಹೆಚ್ಚಾಗುವ ಖರ್ಚುಗಳು ನಿಮಗೆ ಅಶಾಂತಿ ನೀಡುತ್ತದೆ. ಕುಟುಂಬದ ಭಿನ್ನಾಭಿಪ್ರಾಯಗಳಿಗೆ ಹೆಚ್ಚು ವಿಚಾರ ಮಾಡ ಬೇಡಿ ತಾನಾಗಿಯೇ ಸರಿ ಹೋಗುವ ಲಕ್ಷಣಗಳು ಕಾಣಿಸುತ್ತಿದೆ. ನೀವು ಪ್ರೇಮ ವೈಫಲ್ಯ ಅನುಭವಿಸುತ್ತಿದ್ದರೆ ಆದಷ್ಟು ಹೊರಬಂದು ಸಕಾರಾತ್ಮಕ ಯೋಚನೆ ಮಾಡಿ. ಪಾಲುದಾರಿಕೆ ಕೆಲಸವು ತೊಂದರೆ ಕೊಡಬಹುದು.

ಜ್ಯೋತಿಷ್ಯರು ಗುರು ದೀಕ್ಷಿತ್
ನಿಮ್ಮ ಸಮಸ್ಯೆಗಳ. ಮಾಹಿತಿಗಾಗಿ ಕರೆ ಮಾಡಿ
9036933032

ವೃಷಭ ರಾಶಿ

ನಿಮ್ಮಲ್ಲಿನ ಆವೇಶ ಕಡಿಮೆ ಮಾಡಿಕೊಳ್ಳಲು ಮನೆ ದೇವರನ್ನು ಪ್ರಾರ್ಥಿಸಿ. ಸಂಗಾತಿಯ ಮಾತುಗಳು ನಿಮಗೆ ಕಸಿವಿಸಿ ಗೊಳಿಸಬಹುದು ಸಮಾಧಾನದಿಂದ ವರ್ತಿಸಿ. ಇಂದು ವಿಶ್ರಾಮ, ಶಾಂತಿ ನಿಮ್ಮಲ್ಲಿ ತುಂಬಿರುತ್ತದೆ. ಕುಟುಂಬದ ಆನಂದದಲ್ಲಿ ಪಾಲ್ಗೊಳ್ಳುವಿರಿ. ಹಣ ಗಳಿಕೆಗಾಗಿ ಉದ್ಯೋಗದಲ್ಲಿ ಹೊಸಮಾರ್ಗವನ್ನು ಕಂಡುಹಿಡಿಯುವ ಸುವರ್ಣ ಅವಕಾಶ ನಿಮ್ಮದಾಗಲಿದೆ. ನಿಮ್ಮಲ್ಲಿರುವ ಹಾಸ್ಯ ಭಾವನೆಯಿಂದ ಎಲ್ಲರನ್ನೂ ನಗಿಸುವಿರಿ.

ಜ್ಯೋತಿಷ್ಯರು ಗುರು ದೀಕ್ಷಿತ್
ನಿಮ್ಮ ಸಮಸ್ಯೆಗಳ. ಮಾಹಿತಿಗಾಗಿ ಕರೆ ಮಾಡಿ
9036933032

ಮಿಥುನ ರಾಶಿ

ಕೆಲಸಕ್ಕಾಗಿ ಗಣ್ಯರ ಜೊತೆ ಒಡನಾಟ ಬೆಳೆಯುತ್ತದೆ ಹಾಗೂ ಹೊಸ ಗ್ರಾಹಕರು ನಿಮಗೆ ಸಿಗಲಿದ್ದಾರೆ. ಕೌಟುಂಬಿಕವಾಗಿ ಕೆಲವು ಭಿನ್ನಾಭಿಪ್ರಾಯಗಳು ಬರಬಹುದು ಅದು ಅಂತಹ ದೊಡ್ಡ ಸಮಸ್ಯೆ ಅಲ್ಲ. ನಿಮ್ಮಲ್ಲಿನ ನಿರ್ಲಕ್ಷದಿಂದ ಅನಾರೋಗ್ಯ ಉಂಟಾಗಬಹುದು, ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಸಮಸ್ಯೆಗಳು ಸಹ ಬರುತ್ತದೆ ಆದಷ್ಟು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ.

ಜ್ಯೋತಿಷ್ಯರು ಗುರು ದೀಕ್ಷಿತ್
ನಿಮ್ಮ ಸಮಸ್ಯೆಗಳ. ಮಾಹಿತಿಗಾಗಿ ಕರೆ ಮಾಡಿ
9036933032

ಕರ್ಕಾಟಕ ರಾಶಿ

ನಿಮ್ಮ ಪ್ರಜ್ಞೆ, ವಿಚಾರವಂತಿಕೆಯು ವೇದಿಕೆಗೆ ಬಳಕೆಯಾಗಬಹುದು. ದೀರ್ಘಾವಧಿ ಹೂಡಿಕೆಗಳು ನಿಮ್ಮನ್ನು ಲಾಭಾಂಶಕಾರಿಯಾಗಿ ಮಾರ್ಪಡಿಸಬಹುದು. ನೀವು ಸುಂದರ ಜೀವನ ಕಟ್ಟಿಕೊಳ್ಳಲು ಪ್ರಯತ್ನ ಮಾಡುವ ಸ್ಥಿತಿಯಲ್ಲಿ ಇದ್ದೀರಿ ನಿಮ್ಮಲ್ಲಿನ ಇಚ್ಛಾಶಕ್ತಿಯಿಂದ ಇವೆಲ್ಲ ಸಾಧ್ಯ. ಕುಟುಂಬದವರ ಸಹಕಾರದಿಂದ ನಿಶ್ಚಿತ ಗೆಲುವು ಪಡೆಯಲು ಸಾಧ್ಯ ಇದೆ.

ಜ್ಯೋತಿಷ್ಯರು ಗುರು ದೀಕ್ಷಿತ್
ನಿಮ್ಮ ಸಮಸ್ಯೆಗಳ. ಮಾಹಿತಿಗಾಗಿ ಕರೆ ಮಾಡಿ
9036933032

ಸಿಂಹ ರಾಶಿ

ಸಂಗಾತಿಯ ಒಡನಾಟ ಪ್ರೇಮ ಪ್ರೀತಿ ಪ್ರಣಯ ಗಳಲ್ಲಿ ಆಸಕ್ತಿಕಾರಿಯಾಗಿ ಬದಲಾಗುತ್ತದೆ. ದೈವ ದರ್ಶನ ಭಾಗ್ಯ ಇದೆ. ಪ್ರಜ್ಞಾವಂತ ವಿಚಾರಗಳಿಂದ ಹಲವು ಆದರ್ಶಗಳನ್ನು ಎರವಲು ಪಡೆಯುತ್ತೀರಿ. ಬಾಂಧವ್ಯದಲ್ಲಿ ಆಂತರಿಕವಾಗಿ ಸಮಸ್ಯೆಗಳು ವ್ಯಕ್ತವಾಗುತ್ತದೆ. ಕೆಲವು ವಿಚಾರಗಳಲ್ಲಿ ಮನಸ್ಸಿಗೆ ಆಘಾತ ನೀಡಬಹುದು.

ಜ್ಯೋತಿಷ್ಯರು ಗುರು ದೀಕ್ಷಿತ್
ನಿಮ್ಮ ಸಮಸ್ಯೆಗಳ. ಮಾಹಿತಿಗಾಗಿ ಕರೆ ಮಾಡಿ
9036933032

ಕನ್ಯಾ ರಾಶಿ

ಅನಿರೀಕ್ಷಿತವಾಗಿ ಆದಾಯದಲ್ಲಿ ಹೆಚ್ಚಳ ಸಾಧ್ಯತೆ. ನಿಮ್ಮ ಬಳಿ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಹಲವು ರೀತಿಯ ಸುಳ್ಳು ಹೇಳಿ ತಮ್ಮ ಕಾರ್ಯ ಸಾಧನೆ ಮಾಡಿಕೊಳ್ಳುತ್ತಾರೆ ನಿಗಾ ವಹಿಸಿ. ಸಂಗಾತಿಯ ಮನವೊಲಿಸಲು ಹಲವು ಪ್ರಯತ್ನ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಉದ್ಯೋಗದಲ್ಲಿ ಎಲ್ಲಾ ಕಡೆಯಿಂದಲೂ ಒಳ್ಳೆಯ ಪಲಿತಾಂಶ ಹಾಗೂ ಬೆಂಬಲ ಸಿಗುವುದು.

ಜ್ಯೋತಿಷ್ಯರು ಗುರು ದೀಕ್ಷಿತ್
ನಿಮ್ಮ ಸಮಸ್ಯೆಗಳ. ಮಾಹಿತಿಗಾಗಿ ಕರೆ ಮಾಡಿ
9036933032

ತುಲಾ ರಾಶಿ

ನಿಮ್ಮ ಆಲೋಚನೆ ನಿಮ್ಮ ಪ್ರಯತ್ನ ನಿಮ್ಮ ಜೀವನ ರೂಪಿಸುತ್ತದೆ. ನಿಮ್ಮ ಸಂಗಾತಿಯು ನಿಮ್ಮ ಜೀವನ ಸುಧಾರಣೆಗೆ ಪ್ರಯತ್ನ ಪಡುತ್ತಾರೆ, ಮಹತ್ಕಾರ್ಯಗಳು ಯೋಜನೆಗೆ ಅವರಿಂದಲೇ ಬೆಂಬಲ ನಿಮಗೆ ಸಿಗಲಿದೆ. ಹಳೆಯ ಹೂಡಿಕೆಗಳು ಲಾಭವಾಗಿ ಇಂದು ಬರಲಿದೆ. ನಿಮ್ಮ ಆನಂದಕ್ಕೆ ಇಂದು ಹಲವಾರು ಅಂಶಗಳು ಕಾರಣವಾಗಿದೆ ನಿಮ್ಮ ಆನಂದವನ್ನು ಇತರರೊಡನೆ ಹಂಚಿಕೊಂಡು ಖುಷಿಪಡಿ.

ಜ್ಯೋತಿಷ್ಯರು ಗುರು ದೀಕ್ಷಿತ್
ನಿಮ್ಮ ಸಮಸ್ಯೆಗಳ. ಮಾಹಿತಿಗಾಗಿ ಕರೆ ಮಾಡಿ
9036933032

ವೃಶ್ಚಿಕ ರಾಶಿ

ಹಲವು ದಿನಗಳಿಂದ ಪ್ರೀತಿ ಪ್ರೇಮದಲ್ಲಿ ಕನಸು ಕಾಣುತ್ತಾ ಕುಳಿತಿರುವವರು ಇಂದು ಅನುಭವದ ಗರಿಷ್ಠ ಪರಿಣಾಮವನ್ನು ಪಡೆದುಕೊಳ್ಳುತ್ತಾರೆ. ಇಂದು ಯೋಜನೆಗಳು ಬೇರೆಯವರಿಂದ ನಿಮ್ಮ ಪಾಲಾಗುತ್ತದೆ ವಿಶೇಷ ಹಣ ಗಳಿಕೆ ಅದರಲ್ಲಿ ಕಾಣಬಹುದು. ಉದ್ಯೋಗ ಸ್ಥಳದಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳಿಗೆ ಗಮನವಹಿಸಿ. ಇಂದು ಪ್ರಕೃತಿಯ ಆರಾಧಕರಾಗಿ, ಭಾವನೆ ಜೀವಿಯಾಗಿ ಕಾಣುವಿರಿ.

ಜ್ಯೋತಿಷ್ಯರು ಗುರು ದೀಕ್ಷಿತ್
ನಿಮ್ಮ ಸಮಸ್ಯೆಗಳ. ಮಾಹಿತಿಗಾಗಿ ಕರೆ ಮಾಡಿ
9036933032

ಧನಸ್ಸು ರಾಶಿ

ನಿಮ್ಮ ನಗು ನಿಮ್ಮ ಆರೋಗ್ಯದ ಗುಟ್ಟು ನಗು ನಗುತ ಇರಿ ಆರೋಗ್ಯ ತಾನಾಗೆ ಸರಿ ಹೋಗುತ್ತದೆ. ಹೊಗಳು ಭಟ್ಟರಿಂದ ಆದಷ್ಟು ಅಂತರ ಕಾಯ್ದುಕೊಳ್ಳಿ. ನಿಮ್ಮನ್ನು ಎಲ್ಲರೂ ಗುರುತಿಸಬೇಕು ಎಂಬ ಭಾವನೆ ಇದೆ ಆದರೆ ಇದಕ್ಕಾಗಿ ಆರ್ಥಿಕವಾಗಿ ವೆಚ್ಚ ಮಾಡುವುದು ಒಳಿತಲ್ಲ. ಬೇರೆಯವರ ವ್ಯವಹಾರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಅವರಿಂದ ತೊಂದರೆ ಪಡುವುದು ಸೂಕ್ತವಲ್ಲ.

ಜ್ಯೋತಿಷ್ಯರು ಗುರು ದೀಕ್ಷಿತ್
ನಿಮ್ಮ ಸಮಸ್ಯೆಗಳ. ಮಾಹಿತಿಗಾಗಿ ಕರೆ ಮಾಡಿ
9036933032

ಮಕರ ರಾಶಿ

ನಿಮ್ಮ ಪತ್ನಿ ನಿಮಗಾಗಿ ಕಾಯುತ್ತಿರುತ್ತಾರೆ ಕೆಲಸ ಮುಗಿದ ತಕ್ಷಣವೇ ಮನೆಗೆ ಹೋಗಿ ಕಾಲ ಕಳೆಯಿರಿ. ಪತ್ನಿಯ ತವರು ಮನೆ ಕಡೆಯಿಂದ ಶುಭ ಸುದ್ದಿ ಹಾಗೂ ವಿಶೇಷ ಕಾಣಿಕೆಗಳು ನಿಮ್ಮ ಪಾಲಾಗುತ್ತದೆ. ನಿಮ್ಮ ಕೆಲಸದಲ್ಲಿನ ಶ್ರದ್ಧೆ ಹಾಗೂ ಆಸಕ್ತಿಯೂ ಇಂದು ಮೇಲಾಧಿಕಾರಿಗಳು ಗುರುತಿಸುವರು ಅವರಿಂದ ಮೆಚ್ಚುಗೆ ಸಹ ಪಡೆಯಲಿದ್ದೀರಿ. ನಿಮ್ಮ ವ್ಯಕ್ತಿತ್ವ ಸುಧಾರಣೆಗೆ ಪ್ರಯತ್ನ ಮಾಡುವ ಕೆಲಸ ನಿಮ್ಮಿಂದ ಆಗಲಿದೆ. ಯೋಜನೆಗಳಲ್ಲಿನ ಭಿನ್ನಾಭಿಪ್ರಾಯವು ನಿಮಗೆ ಸ್ವಲ್ಪ ಮಟ್ಟಿಗೆ ಬೇಸರ ತಂದರೂ ಸಂಜೆಯೊಳಗೆ ಎಲ್ಲವೂ ಸರಿಯಾಗುತ್ತದೆ.

ಜ್ಯೋತಿಷ್ಯರು ಗುರು ದೀಕ್ಷಿತ್
ನಿಮ್ಮ ಸಮಸ್ಯೆಗಳ. ಮಾಹಿತಿಗಾಗಿ ಕರೆ ಮಾಡಿ
9036933032

ಕುಂಭ ರಾಶಿ

ಕನಸಿನಿಂದ ವಾಸ್ತವದ ಪ್ರಪಂಚಕ್ಕೆ ಕಾಲಿಡುವುದು ಸೂಕ್ತ. ನಿಮ್ಮ ಕೈಯಿಂದ ಏನು ಮಾಡಲು ಸಾಧ್ಯವೋ ಆ ಕೆಲಸವನ್ನು ಮಾಡಲು ಪ್ರಯತ್ನಿಸಿ. ಸ್ನೇಹಿತರ ಬೆಂಬಲದಿಂದ ಜವಾಬ್ದಾರಿಯುತ ಸ್ಥಾನ ಹಾಗೂ ಹಣಕಾಸಿನ ಪ್ರಗತಿ ಕಾಣಲಿದೆ. ನಿಮ್ಮ ಆತ್ಮೀಯ ವರ್ಗದಲ್ಲಿ ಅಸೂಯೆ ಹುಟ್ಟಿಸಬಹುದು. ನಿಮ್ಮ ಕಾರ್ಯ ಶೈಲಿ ಚಟುವಟಿಕೆಯಲ್ಲಿ ಮಗ್ನರಾಗಿ ಚಿಂತಿಸಬೇಡಿ.

ಜ್ಯೋತಿಷ್ಯರು ಗುರು ದೀಕ್ಷಿತ್
ನಿಮ್ಮ ಸಮಸ್ಯೆಗಳ. ಮಾಹಿತಿಗಾಗಿ ಕರೆ ಮಾಡಿ
9036933032

ಮೀನ ರಾಶಿ

ಗೃಹ ನಿರ್ಮಾಣ ಕಾಮಗಾರಿಗೆ ವೇಗ ಪಡೆಯಲಿದೆ. ತಾಂತ್ರಿಕ ವರ್ಗದವರಿಗೆ ಅವಕಾಶಗಳು ಲಭ್ಯವಾಗಲಿದೆ. ಇಂದು ಬಲುದೊಡ್ಡ ಯೋಜನೆ ನಿಮ್ಮನ್ನು ಹುಡುಕಿಕೊಂಡು ಬರಲಿದೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸ್ನೇಹಿತರ ಅವಶ್ಯ ಬೆಂಬಲ ಪಡೆಯಿರಿ. ಹಿರಿಯರ ಮಾರ್ಗದರ್ಶನ ನಿಮ್ಮನ್ನು ಸದಾ ಕಾಪಾಡುತ್ತದೆ.

ಜ್ಯೋತಿಷ್ಯರು ಗುರು ದೀಕ್ಷಿತ್
ನಿಮ್ಮ ಸಮಸ್ಯೆಗಳ. ಮಾಹಿತಿಗಾಗಿ ಕರೆ ಮಾಡಿ
9036933035

ಜ್ಯೋತಿಷ್ಯರು ಗುರು ದೀಕ್ಷಿತ್
ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9036933032

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

Published

on

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.

4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.

6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ

Published

on

ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.

ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.

ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.

ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.

ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.

ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.

ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending