ನಿತ್ಯ ಭವಿಷ್ಯ
ರಾಶಿ ಭವಿಷ್ಯ : 16-01-2020 ಗುರುವಾರ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು
ಇಂದೇ ಕರೆ ಮಾಡಿ 9964584883
ಶ್ರೀ ಕೇರಳ ಮಾಂತ್ರಿಕ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯರು. ಲಕ್ಷ್ಮಿಕಾಂತ್ ಭಟ್
9964584883
ಮೇಷ ರಾಶಿ
ನಿಮಗೆ ಸೂಕ್ತ ಸ್ಥಾನಮಾನ ನೀಡುವ ಜನರನ್ನು ಆದಷ್ಟು ಗೌರವದಿಂದ ನಡೆದುಕೊಳ್ಳಿ. ದುಂದುವೆಚ್ಚಗಳು ನಿಮಗೆ ಆಘಾತಕಾರಿಯಾದುದು ಹಾಗೂ ನಿಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡಬಹುದು. ನಿಮ್ಮ ಅನುಭವದ ಮೇರೆಗೆ ಸಹಾಯ ಅಪೇಕ್ಷಿಸಿ ಬರುವಂತಹ ಜನರನ್ನು ಸೂಕ್ತ ಸಲಹೆ ನೀಡಲು ಸಿದ್ಧರಾಗಿ. ದೈವಿಕ ಕಾರ್ಯಕ್ರಮ ಗಳಿಗೆ ಮೂರ್ತಸ್ವರೂಪ ದೊರೆಯಲಿದೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಮಹತ್ವದ ಕಾರ್ಯಗಳನ್ನು ಆದಷ್ಟು ಗೌಪ್ಯತೆಯಿಂದ ಕಾಪಾಡಿಕೊಳ್ಳಿ. ನಿಮ್ಮ ಯೋಜನೆಯನ್ನು ನಕಲು ಮಾಡುವ ಸಾಧ್ಯತೆ ಇದೆ. ಶತ್ರುಗಳ ಉಪಟಳ ಹೆಚ್ಚಾಗಬಹುದು, ನಿಮ್ಮ ವ್ಯವಹಾರಗಳಲ್ಲಿ ಮಧ್ಯೆ ಪ್ರವೇಶಿಸಬಹುದು ಎಚ್ಚರವಿರಲಿ. ನಿಮ್ಮನ್ನು ಪುಸಲಾಯಿಸಿ ತಮ್ಮ ಹಿತಾಸಕ್ತಿಗೆ ಕಾರ್ಯ ಮಾಡಿಕೊಳ್ಳುವ ಜನಗಳನ್ನು ಆದಷ್ಟು ದೂರವಿಡಿ. ಹಣಕಾಸಿನ ಬೆಳವಣಿಗೆಗೆ ಹಲವರಿಂದ ಉತ್ತಮ ಮಾರ್ಗಗಳು ಗೋಚರವಾಗಲಿದೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಬಾಕಿ ಇರುವ ಕಾರ್ಯವನ್ನು ಪೂರ್ಣಗೊಳಿಸುವ ಸಾಧ್ಯತೆ ಕಾಣಬಹುದು. ಪ್ರಯಾಣದಿಂದ ಒತ್ತಡ ಹಾಗೂ ಆರೋಗ್ಯದಲ್ಲಿ ನಷ್ಟವಾಗಬಹುದು ಆದಷ್ಟು ಪ್ರಯಾಣ ಮುಂದೂಡುವುದು ಒಳ್ಳೆಯದು. ಸಂಗಾತಿಯ ಸಂತೋಷಕ್ಕೆ ನಿಮ್ಮಿಂದ ಉತ್ತಮ ಕಾರ್ಯಗಳು ನಡೆಯುವುದು ನಿಶ್ಚಿತವಾಗಿದೆ.
ಜ್ಯೋತಿಷ್ಯರುಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಧ್ಯಾನ, ಯೋಗ ಮತ್ತು ಭಗವಂತನ ಆರಾಧನೆಯಿಂದ ನಿಮ್ಮ ಮಾನಸಿಕ ಅಸಮತೋಲನ ದೂರವಾಗುತ್ತದೆ. ಅನುಮಾನಸ್ಪದ ಹಣಕಾಸಿನ ಯೋಜನೆಗಳನ್ನು ಆದಷ್ಟು ತಡೆಗಟ್ಟಿ. ಕೆಲವರು ನಿಮಗೆ ಸಹಾಯ ಮಾಡಲು ಮುಂದೆ ಬರಬಹುದು ಆದರೆ ಅದು ಶಾಶ್ವತ ಅಲ್ಲ ನಿಮ್ಮ ಸ್ವಸಾಮರ್ಥ್ಯವನ್ನು ಅವಲಂಬಿಸುವುದು ಸೂಕ್ತ. ಕೆಲಸದ ಮೇಲೆ ಆದಷ್ಟು ಗಮನವಹಿಸುವುದು ಒಳ್ಳೆಯದು.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ವ್ಯವಹಾರದಲ್ಲಿ ಜಾಗ್ರತೆಯ ವರ್ತನೆ ತೋರಿಸಿ. ಸಂಗಾತಿಯೊಡನೆ ಮನಬಿಚ್ಚಿ ಮಾತನಾಡಿ ಆನಂದವನ್ನು ಅನುಭವಿಸುವ ಯೋಜನೆ ರೂಪಿಸಿ. ಮನರಂಜನೆಗೆ ಅಧಿಕ ಸಮಯ ಮೀಸಲಿಡುವಿರಿ. ಬ್ಯಾಂಕಿಂಗ್ ವ್ಯವಹಾರ ಹಾಗೂ ಆರ್ಥಿಕ ವ್ಯವಹಾರಗಳ ಬಗ್ಗೆ ಕಾಳಜಿ ವಹಿಸಲೇಬೇಕು. ಮನೆಗೆ ಉಪಯುಕ್ತವಾಗುವ ವಸ್ತುಗಳ ಖರೀದಿಗೆ ಆಸಕ್ತಿ ತೋರುವಿರಿ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಹತ್ತಿರದ ಬಂಧು ಅಥವಾ ಸ್ನೇಹಿತರ ಬೇಟಿಯಾಗುವ ಅವಕಾಶಗಳು ಇಂದು ಸಿಗಲಿದೆ. ದೊಡ್ಡಮಟ್ಟದ ಯೋಜನೆಗಳು ಅಂತಿಮ ಸ್ವರೂಪ ಪಡೆದುಕೊಳ್ಳಲಿದೆ. ನಿಮ್ಮ ಆರ್ಥಿಕ ಚತುರತೆ ಹಾಗೂ ಸ್ಪರ್ಧಾಮನೋಭಾವ ಎಲ್ಲ ರಂಗದಲ್ಲೂ ಉತ್ತಮ ಗೆಲುವು ಸಂಪಾದನೆಗೆ ಸಹಕಾರಿಯಾಗಿದೆ. ಸಂಗಾತಿಯಿಂದ ವಿಶೇಷವಾದ ಉಡುಗೊರೆಯನ್ನು ಪಡೆಯುವ ವ್ಯವಸ್ಥೆ ಕಾಣಬಹುದು.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ದೈಹಿಕ ವಿಶ್ರಾಂತಿಗೆ ಅಗತ್ಯವಾದ ಕಾರ್ಯಾ ರೂಪಿಸಿ. ಕೆಲವು ವದಂತಿಗಳು ನಿಮ್ಮ ದಾರಿ ತಪ್ಪಿಸಬಹುದು ಆದಷ್ಟು ವಿಷಯವನ್ನು ಪೂರ್ಣಪ್ರಮಾಣದಲ್ಲಿ ಅರಿತುಕೊಳ್ಳಿ. ವೈವಾಹಿಕ ಜೀವನದಲ್ಲಿ ಸಂತೃಪ್ತಿಯ ಮೂಡಲಿದೆ. ಸ್ನೇಹಿತರೊಡನೆ ಮನಸ್ತಾಪ ಬರುವ ಸಾಧ್ಯತೆ ಉಂಟು. ಮಕ್ಕಳ ಸಾಧನೆಗಾಗಿ ನಿಮ್ಮ ಅಗತ್ಯ ಬೆಂಬಲ ಅವಶ್ಯವಿದೆ. ಹಣಕಾಸಿನ ಹೆಚ್ಚು ಖರ್ಚುಗಳು ನಿಮ್ಮ ಯೋಜನೆಗಳಿಗೆ ಅಡ್ಡಿ ತರಬಹುದು.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ನಿರಾಸಕ್ತಿ ಹಾಗೂ ಆಲಸಿತನವನ್ನು ಹೋಗಲಾಡಿಸ ಬೇಕಾಗಿದೆ. ಹೂಡಿಕೆಗಳು ಫಲಪ್ರದವಾಗಿ ಕಾರ್ಯರೂಪಕ್ಕೆ ಬರಲಿದೆ ಇದು ಹೆಚ್ಚಿನ ಲಾಭಾಂಶವು ಸಹ ತಂದುಕೊಡುವುದು ನಿಶ್ಚಿತ. ಉದ್ಯೋಗದಲ್ಲಿ ನೂತನ ಪ್ರಯೋಗಕ್ಕೆ ಸಿದ್ಧತೆ ಮಾಡುವಿರಿ. ಹೊಸದಾದ ಆವಿಷ್ಕಾರಗಳು ಕಂಡುಬರುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಆರ್ಥಿಕ ವ್ಯವಹಾರಗಳು ಸರಾಗವಾಗಿ ನಡೆಯಲಿದೆ. ಮಹತ್ತರವಾದ ನಿರ್ಣಯಗಳನ್ನು ಈ ದಿನ ತೆಗೆದುಕೊಳ್ಳುವಿರಿ. ಸಂಯಮ ತಾಳ್ಮೆಯಿಂದ ಈ ದಿನ ವರ್ತಿಸುವುದು ಸೂಕ್ತ. ನಿಮ್ಮನ್ನು ಕೆಲವರು ಕೆಣಕಬಹುದು ಅಥವಾ ಕದನ, ಕಲಹದ ವಿಷಯಗಳಿಗೆ ಪ್ರೋತ್ಸಾಹಿಸಬಹುದು ಎಚ್ಚರಿಕೆಯ ನಡೆ ಅಗತ್ಯವಿದೆ. ಸಂಗಾತಿಯನ್ನು ಕಡೆಗಣಿಸುವುದು ಅಷ್ಟು ಸಮಂಜಸ ಕಾಣುವುದಿಲ್ಲ. ಮಕ್ಕಳ ಬಗ್ಗೆ ನಿಮ್ಮ ಗಮನ ಇರಲಿ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಅವಕಾಶಗಳು ಹೆಚ್ಚಳವಾಗಲಿದೆ ನಿಮ್ಮ ಸ್ಥಿತಿಗತಿಗಳನ್ನು ನೋಡಿಕೊಂಡು ಕಾರ್ಯಗಳನ್ನು ತೆಗೆದುಕೊಳ್ಳಿ. ನೀವು ಈ ದಿನದ ಸಂಜೆ ಅದ್ಭುತ ಹಾಸ್ಯದೊಂದಿಗೆ ಕಾಲ ಕಳೆಯುವಿರಿ. ಹೊಸತನವನ್ನು ವೃದ್ಧಿಸಿಕೊಂಡು ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಈ ದಿನ ಶಕ್ತಿ ದೈವದ ಮೊರೆ ಹೋಗುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಆರ್ಥಿಕ ವ್ಯವಹಾರಗಳು ನಿಮ್ಮ ಚಾಣಕ್ಷತನದಿಂದ ಸುಧಾರಣೆಗಳಾಗಲಿದೆ. ತೆಗೆದುಕೊಂಡಿರುವ ಸಾಲಗಳನ್ನು ಮರುಪಾವತಿ ಮಾಡಲು ಬಯಸುವಿರಿ. ಆಕಸ್ಮಿಕವಾಗಿ ಬಾಲ್ಯದ ಸ್ನೇಹಿತರು ಭೇಟಿಯಾಗುವ ಸಾಧ್ಯತೆ ಇದೆ. ಸಂಜೆಯ ವಾತಾವರಣ ಮೋಜು-ಮಸ್ತಿ ಗಳಿಂದ ಕೂಡಿರಬಹುದು. ತಡರಾತ್ರಿ ಮನೆಗೆ ಹೋಗುವುದು ಸರಿಯಲ್ಲ. ಸಂಗಾತಿಯ ಮನಸ್ಥಿತಿ ಸರಿ ಇಲ್ಲದಿರುವುದು ಕಂಡುಬರುತ್ತದೆ, ಆದಷ್ಟು ಸಮಾಧಾನಪಡಿಸಲು ಮುಂದಾಗಿ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ದೈಹಿಕ ಕಸರತ್ತು ತೋರ್ಪಡಿಕೆಗಲ್ಲ, ಶ್ರಮದ ಕೆಲಸಕ್ಕೆ ಮಾತ್ರ ವಿನಿಯೋಗಿಸಿ. ಕಷ್ಟದ ಕಾರ್ಯಗಳನ್ನು ಈ ದಿನ ಅನಾಯಾಸವಾಗಿ ಮಾಡಿ ಮುಗಿಸುತ್ತೀರಿ. ಕೋಪಿಷ್ಟ ಸ್ವಭಾವವನ್ನು ಪ್ರದರ್ಶನ ಮಾಡುವುದು ಬೇಡ. ಬೇಡದ ವಿಚಾರಗಳಿಗೆ ಮಾನಸಿಕ ಚಿಂತೆ ತೆಗೆದುಕೊಳ್ಳುವುದು ಸಮಂಜಸ ಕಾಣುವದಿಲ್ಲ. ಸಂಗಾತಿಯಿಂದ ನಿಮ್ಮ ಯೋಜನೆಗಳಿಗೆ ಅಗತ್ಯ ನೆರವು ದೊರೆಯುತ್ತದೆ. ಮಕ್ಕಳು ನಿಮ್ಮ ಕೆಲಸದಲ್ಲಿ ಭಾಗಿಯಾಗಿ ಸಹಕಾರ ನೀಡಲಿದ್ದಾರೆ. ಶೈಕ್ಷಣಿಕ ಸಾಧನೆ ಉತ್ತಮವಾಗಿ ರೂಪುಗೊಳ್ಳಲಿದೆ.
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
9964584883
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 9964584883

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ
ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.
ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.
ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.
ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.
ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.
ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.
ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ3 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ4 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ದಿನದ ಸುದ್ದಿ5 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ


