Connect with us

ನಿತ್ಯ ಭವಿಷ್ಯ

ಸಂಕ್ರಾಂತಿ ಹಬ್ಬದ ಶುಭಾಶಯಗಳೊಂದಿಗೆ ಮಕರ ಸಂಕ್ರಾಂತಿಯ ವಿಶೇಷತೆಗಳು

Published

on

ಶ್ರೀ. ಕೇರಳ ಮಾಂತ್ರಿಕ ಜ್ಯೋತಿಷ್ಯ ಶಾಸ್ತ್ರಂ ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್:9964584883

ಜಗನ್ಮಾತೆ ಶ್ರೀ ಭಗವತಿ ಭದ್ರಕಾಳಿ ಅಮ್ಮನವರ ಸರ್ವಾಭಿಷ್ಟ ಸಿದ್ಧಿ ಪೂಜೆ ಶಕ್ತಿಯಿಂದ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ನಂಬಿ ನಂಬದಿರಿ ಇದು ಸತ್ಯ ಕರೆ ಮಾಡಿ 9964584883

ಮಕರ ಸಂಕ್ರಾಂತಿಯ ವಿಶೇಷತೆಗಳು

ಶ್ರೀ ಶಕೆ 1941 ಶ್ರೀವಿಕಾರಿನಾಮ ಸಂವತ್ಸರ ಮಕರಸಂಕ್ರಾಂತಿ ಫಲ

ಶ್ರೀ ಶಾಲಿವಾಹನ ಶಕೆ 1941 ಶ್ರೀವಿಕಾರಿನಾಮ ಸಂವತ್ಸರ ಪುಷ್ಯ ಕೃಷ್ಣ ಚತುರ್ಥಿ ಬುಧವಾರ ದಿ.15-01-2020 ರಂದು 47 ಘಟಿ 50 ಫಳಕ್ಕೆ ಅಂದರೆ ಬುಧವಾರ ಬೆಳಿಗ್ಗೆ 06 ಘಂ 08 ನಿಮಿಷಕ್ಕೆ ಪೂರ್ವಾಫಾಲ್ಗುಣಿ ನಕ್ಷತ್ರ, ತೈತಿಲ ಕರಣದಲ್ಲಿ ಸೂರ್ಯನಾರಾಯಣನು ಧನು ರಾಶಿಯನ್ನು ಬಿಟ್ಟು ಮಕರ ರಾಶಿ ಪ್ರವೇಶ ಮಾಡುತ್ತಾನೆ.

ಪೂರ್ವಾಫಾಲ್ಗುಣಿ
ನಕ್ಷತ್ರನಾಮ-
ಘೋರಾ

ಬುಧವಾರ
ವಾರನಾಮ-
ಮಹೋದರಿ

ವಾಹನ: ಕತ್ತೆ,
ಉಪವಾಹನ: ಟಗರು

ಸಂಕ್ರಾಂತಿ ಪುಣ್ಯ ಕಾಲ : ಮಂಗಳವಾರ ಭೋಗಿ ಹಾಗೂ ಬುಧವಾರ ಹಬ್ಬದ ಆಚರಣೆ ಇದೆ. ಸಂಕ್ರಾಂತಿ ನಂತರದ 40ಘಟಿವರೆಗೆ ಅಂದರೆ 16ತಾಸು ಪುಣ್ಯಕಾಲವಿರುತ್ತದೆ. ಅಂದರೆ ಮರುದಿನ ಬುಧವಾರ ದಿನಾಂಕ 15ರಂದು ಸಾಯಂಕಾಲ 06 ಘ 08 ನಿಮಿಷದವರೆಗೂ ಪರ್ವಪುಣ್ಯಕಾಲದ ಆಚರಣೆಯನ್ನು ಮಾಡಬೇಕು. ಈ ಸಮಯದಲ್ಲಿ ಸ್ನಾನ,ದಾನ,ಪಿತೃತರ್ಪಣ ಮುಂತಾದ ಕಾರ್ಯವನ್ನು ಮಾಡಬೇಕು.

ಸಂಕ್ರಾಂತಿ ಸ್ವರೂಪ : ಯೌವನಾವಸ್ಥೆಯ ಪಕ್ಷಿಜಾತಿಯ ಸಂಕ್ರಾಂತಿ ದೇವಿಯು ಪೂರ್ವದಿಂದ ಬಂದು, ದಕ್ಷಿಣಕ್ಕೆ ಮುಖಮಾಡಿ, ವಾಯವ್ಯಕ್ಕೆ ದೃಷ್ಟಿನೆಟ್ಟು, ಪಶ್ಚಿಮದೆಡೆಗೆ ಹೊರಟಿದ್ದಾಳೆ. ಶ್ವೇತ ಬಣ್ಣದ ಹತ್ತಿ ಬಟ್ಟೆ ತೊಟ್ಟು, ದಂಡ ಆಯುಧ ಧರಿಸಿ, ಬೆಳ್ಳಿ ಪಾತ್ರೆಯಲ್ಲಿ ಅಪೂಪ (ಕರಿದ ಸಿಹಿ) ಉಂಡು, ವಜ್ರ, ಹವಳ, ಕೇದಿಗೆ ಪುಷ್ಪ, ಗೋಪಿಚಂದನದಿಂದ ಅಲಂಕೃತಳಾಗಿ ಕುಳಿತಿದ್ದಾಳೆ.

ಜನ್ಮ ನಕ್ಷತ್ರ ಮೇಲಿಂದ ಸಂಕ್ರಾಂತಿ ಫಲ

ಪಂಥಾಫಲ
ಮಘಾ
ಪೂರ್ವಾ
ಉತ್ತರಾ

ಭೋಗಫಲ
ಹಸ್ತಾ
ಚಿತ್ತಾ
ಸ್ವಾತಿ
ವಿಶಾಖಾ
ಅನುರಾಧಾ
ಜ್ಯೇಷ್ಠಾ

ಚಿಂತಾಫಲ
ಮೂಲಾ
ಪೂ,ಷಾ
ಉ,ಷಾ

ವಸ್ತ್ರಫಲ
ಶ್ರವಣಾ
ಧನಿಷ್ಠಾ
ಶತತಾರಾ
ಪೂ,ಭಾ
ಉ,ಭಾ
ರೇವತಿ

ಹಾನಿಫಲ
ಅಶ್ವಿನಿ
ಭರಣಿ
ಕೃತ್ತಿಕಾ

ವಿಪುಲಧನ ಫಲ
ರೋಹಿಣಿ
ಮೃಗಶಿರಾ
ಆದ್ರ್ರಾ
ಪುನರ್ವಸು
ಪುಷ್ಯ
ಆಶ್ಲೇಷಾ

ಶ್ಲೋಕ : ತೀಲಸ್ನಾಯಿ ತಿಲೋದ್ವರ್ತಿ ತಿಲಹೋಮಿ ತೀಲತರ್ಪಣ: |
ತಿಲಭುಕ್ ತಿಲದಾತಾಚ ಷಟ್‍ತಿಲಾಃ ಪಾಪನಾಶನಾ: ||

ಈ ಪರ್ವ ಕಾಲದಲ್ಲಿ ಯಾರು ಆರು ವಿಧದಲ್ಲಿ ಎಳ್ಳಿನ ಉಪಯೋಗವನ್ನು ಮಾಡುತ್ತಾರೋ ಅಂಥವರ ಪಾಪ ನಾಶವಾಗಿ ಪುಣ್ಯವನ್ನು ಸಂಪಾದಿಸುತ್ತಾರೆ. 1) ಎಳ್ಳು ಮಿಶ್ರಿತ ನೀರಿನಿಂದ ಸ್ನಾನ ಮಾಡುವುದು 2) ಎಳ್ಳಿನ ಕಲ್ಕದಿಂದ ಮೈ-ಕೈ ತಿಕ್ಕಿಕೊಳ್ಳುವದು 3) ಎಳ್ಳಿನ ಹೋಮ 4) ಎಳ್ಳು ಮಿಶ್ರಿತ ನೀರಿನ ಸೇವನೆ 5) ಎಳ್ಳನ್ನು ಗುರುಗಳಿಗೆ ಇಲ್ಲವೇ ಬ್ರಾಹ್ಮಣರಿಗೆ ದಾನ ಕೊಡುವದು. 6) ಎಳ್ಳನ್ನು ಸೇವಿಸುವದು, ಹೀಗೆ ಆರು ರೀತಿಯಲ್ಲಿ ಎಳ್ಳನ್ನು ಉಪಯೋಗಿಸಿದರೆ ಅವರಿಗೆ ಪುಣ್ಯ ಪ್ರಾಪ್ತಿ ಆಗುತ್ತದೆ.

ಮಕರ ಸಂಕ್ರಮಣ – ಸೂರ್ಯಆರಾಧನೆ

ಆದಿತ್ಯೋ ಹ ವೈ ಪ್ರಾಣೋ ರಯಿರೇವ ಚಂದ್ರಮಾಃ
ರಯಿರ್ವಾ ಏತತ್ಸರ್ವಂ ಯಃ ಮೂರ್ತಂ ಚ ಅಮೂರ್ತಂ ಚ
ತಸ್ಮಾತ್ ಮೂರ್ತಿರೇವ ರಯಿಃ ||
ವಿಶ್ವರೂಪಂ ಹರಿಣಂ ಜಾತವೇದಸಂ ಪರಾಯಣಂ
ಜ್ಯೋತಿರೇಕಂ ತಪನ್ತಂ ಸಹಸ್ರರಷ್ಮಿಃ ಶತಧಾ ವರ್ತಮಾನಃ
ಪ್ರಾಣಃ ಪ್ರಜಾನಾಂ ಉದಯತಿ ಏಷಃ ಸೂರ್ಯಃ || ( ಪ್ರಶ್ನೋಪನಿಷತ್ )

ವೇದೋಪನಿಷತ್ತುಗಳಲ್ಲಿ ವರ್ಣಿಸಿದಂತೆ ಸೂರ್ಯನೇ ಪ್ರಾಣ , ರಯಿ ಎಂದರೆ ಮೂರ್ತ-ಅಮೂರ್ತರೂಪವಾದ ಜೀವ ಜಗತ್ತು. ಜಗತ್ತಿನ ಚಲನೆಗೆ ಸೂರ್ಯನೇ ಕಾರಣ. ಅದ್ವಿತೀಯ ಶಕ್ತಿಸ್ವರೂಪಿ, ವಿಶ್ವರೂಪಿಯಾದ ಸೂರ್ಯನಾರಾಯಣನು ಸಹಸ್ರ ಕಿರಣ ಪ್ರಕಾಶದಿಂದ ಉದಯಿಸಿ ಸಕಲ ಜೀವರಾಶಿಗೆ ಚೇತನಾಶಕ್ತಿಯನ್ನು ತುಂಬುತ್ತಾನೆ.

ಖಗೋಳಶಾಸ್ರಜ್ಞ ಶ್ರೀಭಾಸ್ಕರಾಚಾರ್ಯರು,
ಯಸ್ಯೋದಯಾಸ್ತ ಸಮಯೇ ಸುರಮುಕುಟ ನಿಘೃಷ್ಠ ಚರಣ ಕಮಲೋಪಿ |
ಕುರುತೇಂಜಲಿಂ ತ್ರಿನೇತ್ರಃ ಸಜಯತಿ ಧಾಮ್ನಾಂ ನಿಧಿ ಸೂರ್ಯಃ ||

ಯಾವ ಸೂರ್ಯನ ಉದಯಾಸ್ತ ಕಾಲಕ್ಕೆ ದೇವತೆಗಳೂ ತೆಲೆಬಾಗಿ ನಮಿಸುತ್ತಾರೋ ಅಂತಹ ಸರ್ವಶಕ್ತನಾದ, ಮಹಾನಿಧಿಯಾದ ಸೂರ್ಯನು ವಿಶ್ವಕ್ಕೆ ಜಯವನ್ನು ತಂದು ಕೊಡಲಿ ಎಂದು ಕೊಂಡಾಡಿದ್ದಾರೆ.

ಗೋಚಾರದಿಂದ ಸೂರ್ಯನು ಪ್ರತಿ ತಿಂಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಾನೆ ಈ ಸೂರ್ಯ ಪರಿಬ್ರಮಣೆಗೆ ಸಂಕ್ರಮಣ ಎಂದು ಕೆರೆಯುತ್ತಾರೆ. ಕರ್ಕರಾಶಿ ಪ್ರವೇಶದಿಂದ ದಕ್ಷಿಣಾಯನ ಮತ್ತು ಮಕರ ರಾಶಿ ಪ್ರವೇಶದಿಂದ ಉತ್ತರಾಯಣ ಆರಂಭವಾಗುತ್ತದೆ.

ದೃಕ್ ಸಿದ್ಧಾಂತದ ಪ್ರಕಾರ ಡಿಸೆಂಬರ್ 22ರಿಂದಲೇ ಉತ್ತರಾಯಣ. ಅಂದರೆ ಚಲನಶೀಲವಾದ ಭೂಮಿಯು ಉತ್ತರದೆಡೆಗೆ ವಾಲುತ್ತದೆ. ಚಾಂದ್ರಮಾನ ಪಂಚಾಂಗದ ನಿರಯನ ಗಣನೆಯಂತೆ ಜನವರಿ 15ರಂದು ರವಿಯ ಮಕರ ರಾಶಿ ಪ್ರವೇಶದಿಂದ ಉತ್ತರಾಯಣ ಪ್ರಾರಂಭವಾಗುತ್ತದೆ.

ಇದು ದೇವತೆಗಳಿಗೆ ಹಗಲು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಶ್ರೀಭೀಷ್ಮಾಚಾರ್ಯರು ಶರಶಯ್ಯೆಯ ಮೇಲೆ ಮಲಗಿ ಧರ್ಮೋಪದೇಶ ಮಾಡಲು ಹಾಗೂ ದೇಹತ್ಯಾಗ ಮಾಡಲು ಉತ್ತರಾಯಣಕ್ಕಾಗಿ ಕಾದಿದ್ದರು ಎಂಬ ಉಲ್ಲೇಖಗಳಿವೆ.

ಆದ್ದರಿಂದ ಸಂಕ್ರಮಣದ ಕಾಲದಲ್ಲಿ ಸ್ನಾನ-ದಾನ ಮತ್ತು ದೇವಋಷಿ-ಪಿತೃ ತರ್ಪಣಕ್ಕೆ ವಿಶೇಷ ಮಹತ್ವವಿದೆ. ದೃಷ್ಟ ಕರ್ಮಗಳನ್ನು ದೃಕ್ ಸಿದ್ಧಾಂತದಂತೆ ಹಾಗೂ ಅದೃಷ್ಟ ಕರ್ಮಗಳಾದ ಹಬ್ಬ,ಹರಿದಿನ,ಪರ್ವಕಾಲ,ವ್ರತಗಳ ಆಚರಣೆ,ಮೊದಲಾದ ಧಾರ್ಮಿಕ ಕಾರ್ಯಗಳನ್ನು ನಿರಯನ ಗಣನೆಯಂತೆ ಆಚರಿಸಬೇಕು.

ಆದ್ದರಿಂದ ಮಕರ ಸಂಕ್ರಮಣವು ಹಬ್ಬ-ಜಾತ್ರೆ-ಉತ್ಸವಗಳ ಕಾಲವಾಗಿದೆ. ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಗೆ ಆಸ್ಸಾಂನಲ್ಲಿ ಮಾಘಬಿಹು ಎನ್ನುತ್ತಾರೆ. ದಕ್ಷಿಣ ಭಾರತದ ಕೇರಳ ಮುಂತಾದ ರಾಜ್ಯದಲ್ಲಿ ಪೊಂಗಲ್, ಮಾಟ್ಟು ಪೊಂಗಲ್, ತೈ ಪೊಂಗಲ್, ಮಕರ ವಾವು ಹಾಗೂ ಪಂಜಾಬನಲ್ಲಿ ಲೊಹರಿ ಎಂದು ಆಚರಿಸುತ್ತಾರೆ.

ಸಂಕ್ರಾಂತಿ ಕೃಷಿಕರ ಹಬ್ಬ ಆದ್ದರಿಂದ ದನಕರುಗಳಿಗೆ, ಹಸಿಧಾನ್ಯಗಳಗೆ, ಕೃಷಿ ಉಪಯುಕ್ತ ಉಪಕರಣಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಜಾತ್ರೆ-ಉತ್ಸವಗಳು, ಸಾಸ್ಕøತಿಕ ಕಾರ್ಯಕ್ರಮಗಳ, ಶಕ್ತಿಪ್ರದರ್ಶನ, ಚಕ್ಕಡಿ ಓಟ, ಜಲ್ಲಿಕಟ್ಟು ಮುಂತಾದ ಆಟಗಳ ಆಯೋಜನೆ ಮಾಡಲಾಗುತ್ತದೆ.

ಹಬ್ಬವನ್ನು ಮೂರುದಿನ ಆಚರಿಸುವದು ರೂಢಿಯಲ್ಲಿದೆ. ಮೊದಲದಿನ ‘ಭೋಗಿ’ ಅಂದು ಬೆಳಗ್ಗೆ ಕಬ್ಬು,ಬಾರಿಹಣ್ಣು,ಬೆಳಸಿ,ಸುಲಗಾಯಿ, ಬದನೆ,ತಪ್ಪಲುಉಳ್ಳಾಗಡ್ಡಿ,ಬೆಣ್ಣೆ,ಬೆಲ್ಲ ಸಹಿತವಾಗಿ ಕಾಯಿ,ಸೀರೆ,ಕಾಡಿಗೆ,ಕನ್ನಡಿ,ಹಣಿಗೆ ಮುಂತಾದ ವಸ್ತುಗಳನ್ನಿಟ್ಟು ಸುಮಂಗಲಿಯರಿಗೆ ಮರದಬಾಗಿನ ಕೊಡುವರು. ಸಾಯಂಕಾಲ ಕಬ್ಬು, ಸಕ್ಕರೆ ಅಚ್ಚು, ಹಣ್ಣುಗಳಿಂದ ಹಣ್ಣೆರೆದು ಆರತಿ ಮಾಡುವರು ಅಲ್ಲದೇ ದಿನಬಳಕೆಯ ವಸ್ತುಗಳಾದ ಲೋಟ, ತಟ್ಟೆ, ಬಟ್ಟಲು, ಮುಂತಾದ ಪಾತ್ರೆಗಳನ್ನು ಹಾಗೂ ಮಕ್ಕಳಿಗೆ ಪೆನ್ನು, ಪುಸ್ತಕ, ಆಟದ ಸಾಮಾನುಗಳನ್ನು ಹಂಚುತ್ತಾರೆ ಇದನ್ನು ‘ಲುಟಾಯಿಸುವದು’ ಅಥವಾ ‘ಬೀರುವದು’ ಎನ್ನುವರು.

ಎರಡನೇ ದಿನ ಸಂಕ್ರಮಣ ಅಂದು ಪರ್ವಪುಣ್ಯಕಾಲ ಇರುತ್ತದೆ. ಸಂಕ್ರಾಂತಿಯ ನಂತರದ 16ತಾಸಿನವರೆಗೆ ಪುಣ್ಯಕಾಲ ಇರುತ್ತದೆ. ಈ ಸಮಯದಲ್ಲಿ ಸುಮುದ್ರ, ನದಿ, ಸಂಗಮ ಸ್ಥಳಗಳಲ್ಲಿ ಸ್ನಾನ ಮಾಡುವದು ವಿಶೇಷ.

‘ತಿಲಸ್ನಾಯೀ ತಿಲೋದ್ವರ್ತಿ ತಿಲಹೋಮಿ ತಿಲೋದಕಿ | ತಿಲಭುಕ್ ತಿಲದಾತಾ ಚ ಷಟ್ ತಿಲಾ ಪಾಪನಾಶನಾಃ ||’

ಪುಣ್ಯಕಾಲದಲ್ಲಿ ಎಳ್ಳಿನ ಚಟ್ಟನ್ನು ಹಚ್ಚಿಕೊಂಡು ಎಳ್ಳು ಮಿಶ್ರಿತ ನೀರಿನಿಂದ ಸ್ನಾನ ಮಾಡುವದು, ಎಳ್ಳಿನಿಂದ ಹೋಮ ಮಾಡುವದು, ಎಳ್ಳಿನಿಂದ ತರ್ಪಣ ಕೊಡುವದು, ಎಳ್ಳನ್ನು ಸೇವಿಸುವದು ಹಾಗೂ ಬಂಧುಮಿತ್ರರಿಗೂ ಕೊಡುವದು ಹೀಗೆ ಎಳ್ಳನ್ನು ಆರುವಿಧದಲ್ಲಿ ಉಪಯೋಗ ಮಾಡುವದರಿಂದ ಪಾಪನಾಶವಾಗುತ್ತದೆ. ಮನೆಮನೆಗೂ ಹೋಗಿ ಎಳ್ಳುಬೆಲ್ಲ ಕೊಟ್ಟು ಮಧುರವಾಗಿ ಮಾತನಾಡಿ ಹಬ್ಬದ ಶುಭಾಶಯ ಕೋರುವದು ಸಂಪ್ರದಾಯ.

ಕೊನೆಯದಿನಕ್ಕೆ ಸಂಕ್ರಮಣ ಕರಿ ಎನ್ನುತ್ತಾರೆ. ಇದನ್ನು ತೊಡಕು ಎನ್ನುವರು. ವಿಘ್ನ ಪರಿಹಾರಕ್ಕೆ ಈ ದಿನ ಶ್ರೇಷ್ಟವಾಗಿದೆ. ಹೊಸದಾಗಿ ಮದವೆಯಾದ ಮೊದಲಗಿತ್ತಿಗೆ ಕಪ್ಪು ಸೀರೆ, ಕಪ್ಪು ಬಳೆ, ಕಪ್ಪು ಬಣ್ಣದ ಆಭರಣದಿಂದ ಅಲಂಕರಿಸಿ ಆರತಿ ಮಾಡಿ ದೃಷ್ಟಿ ತೆಗೆಯುವ ವಿಶಿಷ್ಟ ಸಂಪ್ರದಾಯವಿದೆ. ಅದರಂತೆ ಹೊಸದಾಗಿ ಖರೀದಿಸಿದ ದನಕರುಗಳು, ಯಂತ್ರೋಪಕರಣಗಳು, ಆಸ್ತಿ, ವಸ್ತು, ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ದಿನ ಶುಭಕಾರ್ಯ ಅಥವಾ ಮಹತ್ವದ ಕಾರ್ಯಗಳಿಗೆ ವಜ್ರ್ಯವಾಗಿದೆ.

ಶ್ರೀಕೃಷ್ಣಾರ್ಪಣಮಸ್ತು

ಶ್ರೀ. ಕೇರಳ ಮಾಂತ್ರಿಕ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯರು ಲಕ್ಷ್ಮಿಕಾಂತ್ ಭಟ್
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.  9964584883

ನಿತ್ಯ ಭವಿಷ್ಯ

ಮೇಷದಿಂದ ಮೀನದವರೆಗೆ: ಉದ್ಯೋಗ, ಹಣಕಾಸು, ಕುಟುಂಬ, ಆರೋಗ್ಯದಲ್ಲಿ ಏನಿದೆ?

Published

on

ಇಂದು ಯಾರಿಗೆ ಹಣಲಾಭ? ಯಾರಿಗೆ ಹೊಸ ಅವಕಾಶ? 12 ರಾಶಿಗಳ ದಿನಭವಿಷ್ಯ ಇಲ್ಲಿದೆ

ಸುದ್ದಿದಿನ,ರಾಶಿಭವಿಷ್ಯ: ಇಂದಿನ ದಿನವು ಪ್ರತಿಯೊಂದು ರಾಶಿಗೂ ವಿಭಿನ್ನ ಅನುಭವಗಳನ್ನು ತರುವ ಸಾಧ್ಯತೆ ಇದೆ. ಕೆಲವರಿಗೆ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ಮತ್ತೊಂದೆಡೆ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಿರ್ಧಾರ ಅಗತ್ಯವಾಗಬಹುದು. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ಕೆಲವು ರಾಶಿಗಳಿಗೆ ದೊರೆಯಲಿದ್ದು, ವಿದ್ಯಾರ್ಥಿಗಳಿಗೆ ಏಕಾಗ್ರತೆಯಿಂದ ಅಧ್ಯಯನ ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ದಿನದ ಪ್ರಮುಖ ನಿರ್ಧಾರಗಳಲ್ಲಿ ಆತುರಕ್ಕಿಂತ ವಿವೇಕಕ್ಕೆ ಆದ್ಯತೆ ನೀಡುವುದು ಉತ್ತಮ.

http://Visit : www.suddidina.com

ಮೇಷ ರಾಶಿ

ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ದೊರೆಯಬಹುದು. ಹಣಕಾಸಿನ ವಿಚಾರದಲ್ಲಿ ಅನಗತ್ಯ ಖರ್ಚು ತಪ್ಪಿಸಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ವಿದ್ಯಾರ್ಥಿಗಳು ಪ್ರಯತ್ನ ಮುಂದುವರಿಸಬೇಕು.

ವೃಷಭ ರಾಶಿ

ಬಹುದಿನಗಳಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಹೊಸ ಅವಕಾಶಗಳು ಸಿಗಬಹುದು. ಕುಟುಂಬದವರ ಸಲಹೆ ಉಪಯುಕ್ತವಾಗಲಿದೆ. ಆರೋಗ್ಯದ ಕಡೆ ಗಮನ ನೀಡಿ.

ಮಿಥುನ ರಾಶಿ

ಕೆಲಸದಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಗಲಿದೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಸಹಕಾರಿಯಾಗಬಹುದು. ಹಣದ ವ್ಯವಹಾರದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಮುಂದುವರಿಯಿರಿ.

ಕಟಕ ರಾಶಿ

ಕುಟುಂಬದ ವಿಚಾರಗಳು ಹೆಚ್ಚಿನ ಗಮನ ಸೆಳೆಯಬಹುದು. ಉದ್ಯೋಗದಲ್ಲಿ ಒತ್ತಡ ಕಂಡುಬಂದರೂ ಸಮಾಧಾನದಿಂದ ನಿರ್ವಹಿಸಿ. ಆತುರದ ನಿರ್ಧಾರಗಳಿಂದ ದೂರವಿರುವುದು ಒಳಿತು.

ಸಿಂಹ ರಾಶಿ

ವೃತ್ತಿಜೀವನದಲ್ಲಿ ಪ್ರಗತಿಯ ಸೂಚನೆಗಳಿವೆ. ಹಿರಿಯರಿಂದ ಮೆಚ್ಚುಗೆ ದೊರೆಯಬಹುದು. ಹಣಕಾಸಿನ ಸ್ಥಿತಿ ಸುಧಾರಿಸುವ ಅವಕಾಶವಿದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಬಹುದು.

ಕನ್ಯಾ ರಾಶಿ

ಹೊಸ ಯೋಜನೆ ಆರಂಭಿಸಲು ದಿನ ಅನುಕೂಲಕರವಾಗಿರಬಹುದು. ಕೆಲಸದಲ್ಲಿ ಏಕಾಗ್ರತೆ ಹೆಚ್ಚಲಿದೆ. ಖರೀದಿ ಮಾಡುವಾಗ ಅಗತ್ಯ-ಅನಗತ್ಯವನ್ನು ಅಳೆಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ.

ತುಲಾ ರಾಶಿ

ಸಂಬಂಧಗಳಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಉಂಟಾದರೂ ಮಾತುಕತೆಯಿಂದ ಪರಿಹರಿಸಬಹುದು. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಬರಬಹುದು. ಹಣಕಾಸಿನಲ್ಲಿ ಸ್ಥಿರತೆ ಕಂಡುಬರಲಿದೆ.

ವೃಶ್ಚಿಕ ರಾಶಿ

ಹಳೆಯ ಕೆಲಸವೊಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಎಚ್ಚರಿಕೆಯ ಹೆಜ್ಜೆ ಅಗತ್ಯ. ಕುಟುಂಬದವರಿಂದ ಬೆಂಬಲ ಸಿಗಲಿದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ.

ಧನು ರಾಶಿ

ಹೊಸ ಅವಕಾಶಗಳು ನಿಮ್ಮ ಗಮನ ಸೆಳೆಯಬಹುದು. ದೂರದ ಪ್ರಯಾಣದ ಯೋಜನೆ ರೂಪುಗೊಳ್ಳಬಹುದು. ಹಣದ ವಿಚಾರದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆತ್ಮವಿಶ್ವಾಸ ಹೆಚ್ಚಲಿದೆ.

ಮಕರ ರಾಶಿ

ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಯೋಜನೆಯಂತೆ ಕಾರ್ಯನಿರ್ವಹಿಸಿದರೆ ಯಶಸ್ಸು ಸಿಗಲಿದೆ. ಹಿರಿಯರ ಮಾರ್ಗದರ್ಶನ ಪ್ರಯೋಜನಕಾರಿ. ಕುಟುಂಬದಲ್ಲಿ ನೆಮ್ಮದಿ ಇರಲಿದೆ.

ಕುಂಭ ರಾಶಿ

ಹೊಸ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಉತ್ತಮ ಸಮಯ. ಉದ್ಯೋಗದಲ್ಲಿ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ ಮಾಹಿತಿ ಸಂಗ್ರಹಿಸಿ ನಿರ್ಧರಿಸಿ. ಸ್ನೇಹಿತರಿಂದ ನೆರವು ದೊರೆಯಬಹುದು.

ಮೀನ ರಾಶಿ

ಮನಸ್ಸಿನ ಗೊಂದಲಗಳು ನಿಧಾನವಾಗಿ ಕಡಿಮೆಯಾಗಬಹುದು. ಕುಟುಂಬದೊಂದಿಗೆ ಸಂತಸದ ಕ್ಷಣಗಳು ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ಉಳಿತಾಯಕ್ಕೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಪರಿಶ್ರಮದ ಫಲ ದೊರೆಯಬಹುದು.

Continue Reading

ನಿತ್ಯ ಭವಿಷ್ಯ

Today Rashi Bhavishya September 1 2026: ಇಂದಿನ ರಾಶಿಭವಿಷ್ಯ; ಈ 5 ರಾಶಿಗೆ ಶುಭಫಲ

Published

on

ರಾಶಿಭವಿಷ್ಯ ಸೆಪ್ಟೆಂಬರ್ 1: ಈ 5 ರಾಶಿಗೆ ಅದೃಷ್ಟದ ಬಾಗಿಲು ಓಪನ್‌! ಹಣ, ಉದ್ಯೋಗ, ವ್ಯವಹಾರದಲ್ಲಿ ಶುಭಫಲ; ನಿಮ್ಮ ರಾಶಿ ಹೇಗಿದೆ?

ಸುದ್ದಿದಿನ,ರಾಶಿಭವಿಷ್ಯ: ಸೆಪ್ಟೆಂಬರ್‌ 1, 2026ರ ದಿನವು ಹಲವು ರಾಶಿಗಳಿಗೆ ಹೊಸ ಅವಕಾಶಗಳು, ಆರ್ಥಿಕ ಪ್ರಗತಿ ಮತ್ತು ವೃತ್ತಿಯಲ್ಲಿ ಮುನ್ನಡೆಯ ಸೂಚನೆ ನೀಡುತ್ತಿದೆ. ಜ್ಯೋತಿಷ್ಯಾಧಾರಿತ ದಿನಭವಿಷ್ಯದ ಪ್ರಕಾರ ಮೇಷ, ವೃಷಭ, ಮಿಥುನ, ತುಲಾ ಮತ್ತು ಮಕರ ರಾಶಿಯವರಿಗೆ ವಿಶೇಷವಾಗಿ ಅನುಕೂಲಕರ ಬೆಳವಣಿಗೆಗಳ ಸಾಧ್ಯತೆ ಇದೆ.

ಆದರೆ ಪ್ರತಿಯೊಂದು ರಾಶಿಗೂ ದಿನ ಒಂದೇ ರೀತಿಯಾಗಿರುವುದಿಲ್ಲ. ಕೆಲವರಿಗೆ ಹಣಕಾಸಿನಲ್ಲಿ ಲಾಭದ ಸೂಚನೆ ಇದ್ದರೆ, ಇನ್ನು ಕೆಲವರು ಆರೋಗ್ಯ, ಖರ್ಚು, ಕುಟುಂಬ ಸಂಬಂಧ ಅಥವಾ ಕೆಲಸದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಬೇಕಾಗುತ್ತದೆ.

http://Visit : www.suddidina.com

ಮೇಷ ರಾಶಿ

ಆರ್ಥಿಕ ಸಮಸ್ಯೆಗಳಿಂದ ಸ್ವಲ್ಪ ಪರಿಹಾರ ದೊರೆಯುವ ಸಾಧ್ಯತೆ ಇದೆ. ಉದ್ಯೋಗ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಪ್ರಗತಿ ಕಾಣಬಹುದು. ಆದರೆ ಆರೋಗ್ಯ ಮತ್ತು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ವೃಷಭ ರಾಶಿ

ಹಣಕಾಸಿನ ವಿಚಾರದಲ್ಲಿ ಉತ್ತಮ ದಿನ. ಕುಟುಂಬದ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಲಿದೆ. ಶಿಕ್ಷಣ ಹಾಗೂ ವ್ಯವಹಾರದಲ್ಲಿ ಯಶಸ್ಸಿನ ಸಾಧ್ಯತೆ ಇದೆ. ಖರ್ಚು ಹೆಚ್ಚಾಗದಂತೆ ನಿಯಂತ್ರಿಸುವುದು ಮುಖ್ಯ.

ಮಿಥುನ ರಾಶಿ

ನಿರೀಕ್ಷಿತ ಯಶಸ್ಸು ದೊರೆಯುವ ಸಾಧ್ಯತೆ ಇದೆ. ಹಳೆಯ ಕೆಲಸದ ಸಮಸ್ಯೆಗಳು ಬಗೆಹರಿಯಬಹುದು. ಕೋರ್ಟ್‌ ಅಥವಾ ಕಾನೂನು ಸಂಬಂಧಿತ ವಿಚಾರಗಳಲ್ಲಿ ಅನುಕೂಲಕರ ಬೆಳವಣಿಗೆ ಸಾಧ್ಯ. ಆದರೆ ಯಾರಿಗೂ ದೊಡ್ಡ ಮೊತ್ತದ ಹಣ ಸಾಲ ನೀಡಬೇಡಿ.

ಕಟಕ ರಾಶಿ

ಕುಟುಂಬದ ವಿಚಾರಗಳಲ್ಲಿ ಹೆಚ್ಚಿನ ಗಮನ ನೀಡಬೇಕಾದ ದಿನ. ಯಾವುದೇ ಕೆಲಸವನ್ನು ಯೋಜನೆಯೊಂದಿಗೆ ಆರಂಭಿಸಿದರೆ ಉತ್ತಮ ಫಲಿತಾಂಶ ಸಿಗಬಹುದು. ಮಾನಸಿಕ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ.

ಸಿಂಹ ರಾಶಿ

ಕೆಲಸದಲ್ಲಿ ಶ್ರಮ ಹೆಚ್ಚಿಸಬೇಕಾದ ದಿನ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಬಹುದು. ಕುಟುಂಬದಲ್ಲಿದ್ದ ಕೆಲವು ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಅಧಿಕಾರಿಗಳು ಅಥವಾ ಹಿರಿಯರೊಂದಿಗೆ ಮಾತನಾಡುವಾಗ ತಾಳ್ಮೆ ಅಗತ್ಯ.

ಕನ್ಯಾ ರಾಶಿ

ಉದ್ಯೋಗ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಪ್ರಯತ್ನಗಳು ಫಲ ನೀಡುವ ಸಾಧ್ಯತೆ ಇದೆ. ಕೆಲಸದಲ್ಲಿನ ಅಡೆತಡೆಗಳು ದೂರವಾಗಬಹುದು. ವೃತ್ತಿಗೆ ಸಂಬಂಧಿಸಿದ ಶುಭ ಸುದ್ದಿ ಸಿಗುವ ನಿರೀಕ್ಷೆಯಿದೆ. ದೊಡ್ಡ ಹೂಡಿಕೆ ಮತ್ತು ದೂರ ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ.

ತುಲಾ ರಾಶಿ

ಹಠಾತ್ ಆರ್ಥಿಕ ಲಾಭದ ಅವಕಾಶಗಳು ಬರಬಹುದು. ಆದಾಯ ಹೆಚ್ಚಿಸುವ ಪ್ರಯತ್ನಗಳಿಗೆ ಉತ್ತಮ ಸಮಯ. ಕುಟುಂಬದವರೊಂದಿಗೆ ಮನಸ್ಸಿನ ಮಾತುಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳಿ. ಕೋಪ ಹಾಗೂ ಮಾತಿನ ಮೇಲೆ ನಿಯಂತ್ರಣ ಇರಲಿ.

ವೃಶ್ಚಿಕ ರಾಶಿ

ಶುಭ ಸುದ್ದಿಯ ನಿರೀಕ್ಷೆಯಿದೆ. ಅದೃಷ್ಟದ ಬೆಂಬಲ ದೊರೆಯುವ ಸಾಧ್ಯತೆ ಇದ್ದು, ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಬಹುದು. ವ್ಯವಹಾರದಲ್ಲಿ ಹಣಕಾಸಿನ ಲಾಭದ ಅವಕಾಶವಿದೆ. ಆದರೆ ಅನಗತ್ಯ ಪ್ರಯಾಣ ಮತ್ತು ವಾದಗಳಿಂದ ದೂರವಿರಿ.

ಧನು ರಾಶಿ

ಹೊಸ ಸಂಪರ್ಕಗಳು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಬಹುದು. ದೂರದ ಸ್ಥಳದಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಬಹುದು. ಆದರೆ ಖರ್ಚು ಹೆಚ್ಚಾಗದಂತೆ ನೋಡಿಕೊಳ್ಳಿ ಹಾಗೂ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಮಕರ ರಾಶಿ

ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸೂಚನೆ ಇದೆ. ಕೆಲಸದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಮೆಚ್ಚುಗೆ ದೊರೆಯಬಹುದು. ಪಾಲುದಾರಿಕೆ ವ್ಯವಹಾರದಿಂದ ಲಾಭವಾಗುವ ಸಾಧ್ಯತೆ ಇದೆ. ವೃತ್ತಿ ಮತ್ತು ಉದ್ಯಮದಲ್ಲಿ ಪ್ರಮುಖ ನಿರ್ಧಾರಗಳನ್ನು ವಿಳಂಬ ಮಾಡದೆ ಸೂಕ್ತವಾಗಿ ತೆಗೆದುಕೊಳ್ಳಿ.

ಕುಂಭ ರಾಶಿ

ಉನ್ನತ ಅಧಿಕಾರಿಗಳ ಸಹಕಾರದಿಂದ ವೃತ್ತಿಯಲ್ಲಿ ಮುನ್ನಡೆ ಸಾಧಿಸಬಹುದು. ನಾಯಕತ್ವದ ಸಾಮರ್ಥ್ಯ ಹೆಚ್ಚಲಿದೆ. ಸಂಬಂಧಿಕರ ಭೇಟಿ ಸಾಧ್ಯ. ಕುಟುಂಬದಲ್ಲಿ ಅನಗತ್ಯ ಸಂಘರ್ಷಕ್ಕೆ ಅವಕಾಶ ಕೊಡಬೇಡಿ. ವ್ಯವಹಾರದಲ್ಲಿ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ.

ಮೀನ ರಾಶಿ

ಗುರುಗತಿಯ ಅನುಕೂಲದಿಂದ ಕೆಲವು ವಿಚಾರಗಳಲ್ಲಿ ಪ್ರಗತಿ ಸಾಧ್ಯ. ವಿದೇಶಕ್ಕೆ ಸಂಬಂಧಿಸಿದ ಅವಕಾಶ ಅಥವಾ ಶುಭ ಸುದ್ದಿ ಸಿಗಬಹುದು. ಆದರೆ ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚು ಮತ್ತು ದೊಡ್ಡ ಹೂಡಿಕೆಗಳನ್ನು ತಪ್ಪಿಸುವುದು ಉತ್ತಮ.

ಸೂಚನೆ: ಮೇಲಿನ ರಾಶಿಭವಿಷ್ಯ ಜ್ಯೋತಿಷ್ಯಾಧಾರಿತ ಸಾಮಾನ್ಯ ಮಾಹಿತಿಯಾಗಿದ್ದು, ವೈಯಕ್ತಿಕ ಜಾತಕದ ಆಧಾರದ ಫಲಿತಾಂಶ ಭಿನ್ನವಾಗಬಹುದು.

Continue Reading

ನಿತ್ಯ ಭವಿಷ್ಯ

ಆಗಸ್ಟ್‌ 31ರ ರಾಶಿಫಲ: ಹಣ, ಉದ್ಯೋಗ, ಕುಟುಂಬ, ಆರೋಗ್ಯದಲ್ಲಿ ನಿಮ್ಮ ದಿನ ಹೇಗಿದೆ?

Published

on

Today Rashi Bhavishya August 31 2026: 12 ರಾಶಿಗಳ ಇಂದಿನ ರಾಶಿಫಲ, ಹಣ-ಉದ್ಯೋಗ-ಕುಟುಂಬ ಭವಿಷ್ಯ

ಸುದ್ದಿದಿನ,ಬೆಂಗಳೂರು: ಆಗಸ್ಟ್‌ 31, 2026ರ ಸೋಮವಾರ ಇಂದಿನ ಪಂಚಾಂಗದ ಪ್ರಕಾರ ಕೃಷ್ಣ ಪಕ್ಷದ ತೃತೀಯೆ ಬೆಳಗ್ಗೆ ಸುಮಾರು 8:50ರವರೆಗೆ ಇದ್ದು, ಬಳಿಕ ಚತುರ್ಥಿ ಆರಂಭವಾಗುತ್ತದೆ. ರೇವತಿ ನಕ್ಷತ್ರದ ಪ್ರಭಾವ ಮುಂದುವರಿಯಲಿದ್ದು, ಚಂದ್ರನು ಮೀನ ರಾಶಿಯಲ್ಲಿದ್ದಾನೆ. ಬೆಂಗಳೂರಿನ ಲೆಕ್ಕಾಚಾರದಂತೆ ಸೂರ್ಯೋದಯ ಬೆಳಿಗ್ಗೆ 6:08ಕ್ಕೆ ಮತ್ತು ಸೂರ್ಯಾಸ್ತ ಸಂಜೆ 6:31ಕ್ಕೆ. ರಾಹುಕಾಲ ಬೆಳಿಗ್ಗೆ 7:41ರಿಂದ 9:14ರವರೆಗೆ ಇರಲಿದೆ.

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಇಂದಿನ ದಿನ ಮನಸ್ಸಿನ ಸ್ಥಿರತೆ, ಕುಟುಂಬ ಸಂಬಂಧಗಳು ಮತ್ತು ಹಣಕಾಸಿನ ನಿರ್ಧಾರಗಳಲ್ಲಿ ವಿವೇಕದಿಂದ ನಡೆದುಕೊಳ್ಳುವ ಅಗತ್ಯವಿದೆ. ಕೆಲವು ರಾಶಿಗಳಿಗೆ ವೃತ್ತಿ ಮತ್ತು ಆರ್ಥಿಕ ವಿಚಾರದಲ್ಲಿ ಉತ್ತಮ ಬೆಳವಣಿಗೆಯ ಸೂಚನೆಗಳಿದ್ದರೆ, ಇನ್ನು ಕೆಲವು ರಾಶಿಯವರು ಆತುರದ ನಿರ್ಧಾರಗಳಿಂದ ದೂರವಿರುವುದು ಒಳಿತು.

http://Visit : www.suddidina.com

ಮೇಷ: ಹೊಸ ಉತ್ಸಾಹ, ಕೆಲಸದಲ್ಲಿ ಯಶಸ್ಸು

ಹೊಸ ಕೆಲಸ ಆರಂಭಿಸಲು ಉತ್ಸಾಹ ಹೆಚ್ಚಾಗಬಹುದು. ಉದ್ಯೋಗದಲ್ಲಿ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ದೊರೆಯುವ ಸಾಧ್ಯತೆ ಇದೆ. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯಿರಿ. ಹಣಕಾಸಿನಲ್ಲಿ ಅನಗತ್ಯ ಖರ್ಚು ತಪ್ಪಿಸಿ.

ವೃಷಭ: ಕುಟುಂಬದಲ್ಲಿ ಸಂತಸದ ವಾತಾವರಣ

ಕುಟುಂಬದವರ ಬೆಂಬಲ ಸಿಗಲಿದೆ. ಬಹುಕಾಲದಿಂದ ಬಾಕಿ ಇರುವ ಕೆಲಸ ಪೂರ್ಣಗೊಳ್ಳಬಹುದು. ಉದ್ಯೋಗ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ.

ಮಿಥುನ: ಕೆಲಸದಲ್ಲಿ ಪ್ರಗತಿ

ಕೆಲಸದ ವಿಚಾರದಲ್ಲಿ ಯಶಸ್ಸು ದೊರೆಯುವ ಸಾಧ್ಯತೆ ಇದೆ. ಸಂಬಂಧಗಳಲ್ಲಿ ಉತ್ತಮ ಬದಲಾವಣೆ ಕಂಡುಬರಬಹುದು. ಮಾತುಕತೆಯಲ್ಲಿ ಸ್ಪಷ್ಟತೆ ಇರಲಿ.

ಕಟಕ: ಹಣಕಾಸಿಗೆ ಅನುಕೂಲ

ಕುಟುಂಬ ಮತ್ತು ಆರ್ಥಿಕ ವಿಚಾರದಲ್ಲಿ ದಿನ ಉತ್ತಮವಾಗಿರಬಹುದು. ಹಿರಿಯರ ಸಲಹೆ ಉಪಯುಕ್ತವಾಗಲಿದೆ. ಹೊಸ ಅವಕಾಶಗಳನ್ನು ಸರಿಯಾಗಿ ಪರಿಶೀಲಿಸಿ ಮುಂದುವರಿಯಿರಿ.

ಸಿಂಹ: ಆದಾಯದ ಮೇಲೆ ಗಮನ

ಹೊಸ ಯೋಜನೆ ರೂಪಿಸಲು ಉತ್ತಮ ಸಮಯ. ಆದರೆ ಹಣಕಾಸಿನ ವಿಚಾರದಲ್ಲಿ ಆತುರ ಬೇಡ. ಹೂಡಿಕೆ ಮಾಡುವ ಮುನ್ನ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.

ಕನ್ಯಾ: ಸಂಬಂಧ ಮತ್ತು ಹಣಕಾಸಿನಲ್ಲಿ ಸಮತೋಲನ

ವೈಯಕ್ತಿಕ ಸಂಬಂಧಗಳಿಗೆ ಹೆಚ್ಚಿನ ಸಮಯ ನೀಡಬೇಕಾಗಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ. ಆರೋಗ್ಯ ಮತ್ತು ದಿನಚರಿಯಲ್ಲಿ ಶಿಸ್ತು ಇರಲಿ.

ತುಲಾ: ಹೊಸ ಅವಕಾಶಗಳ ದಿನ

ಸಾಮಾಜಿಕ ಮತ್ತು ವೃತ್ತಿಪರ ಸಂಪರ್ಕಗಳಿಂದ ಲಾಭವಾಗಬಹುದು. ಆದರೆ ಇತರರು ನೀಡುವ ಭರವಸೆಗಳನ್ನು ತಕ್ಷಣ ನಂಬದೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಿ.

ವೃಶ್ಚಿಕ: ನಿರ್ಧಾರದಲ್ಲಿ ಆತುರ ಬೇಡ

ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಯಾವುದೇ ವಿಷಯದಲ್ಲೂ ತಕ್ಷಣದ ತೀರ್ಮಾನಕ್ಕಿಂತ ಮಾಹಿತಿ ಸಂಗ್ರಹಿಸುವುದು ಉತ್ತಮ.

ಧನು: ಸಾಮಾಜಿಕವಾಗಿ ಪ್ರಭಾವ ಹೆಚ್ಚಳ

ನಿಮ್ಮ ಮಾತಿಗೆ ಇಂದು ಹೆಚ್ಚಿನ ಮನ್ನಣೆ ಸಿಗಬಹುದು. ಉದ್ಯೋಗದಲ್ಲಿ ಉತ್ತಮ ಅವಕಾಶ ಎದುರಾಗಬಹುದು. ಆದರೆ ದೊಡ್ಡ ನಿರ್ಧಾರಗಳನ್ನು ಸ್ವಲ್ಪ ಯೋಚಿಸಿ ಕೈಗೊಳ್ಳಿ.

ಮಕರ: ಜವಾಬ್ದಾರಿ ಹೆಚ್ಚಳ, ಲಾಭವೂ ಸಾಧ್ಯ

ಹೆಚ್ಚುವರಿ ಜವಾಬ್ದಾರಿ ಬರಬಹುದು. ಅದನ್ನು ಸಮರ್ಥವಾಗಿ ನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಲಾಭ ಸಿಗುವ ಸಾಧ್ಯತೆ ಇದೆ. ಕುಟುಂಬದವರೊಂದಿಗೆ ಹೊಂದಾಣಿಕೆ ಮುಖ್ಯ.

ಕುಂಭ: ವ್ಯವಹಾರದಲ್ಲಿ ಲಾಭದ ಸೂಚನೆ

ವ್ಯಾಪಾರಸ್ಥರಿಗೆ ದಿನ ಅನುಕೂಲಕರವಾಗಿರಬಹುದು. ಹಣಕಾಸಿನಲ್ಲಿ ತೃಪ್ತಿಕರ ಬೆಳವಣಿಗೆಯ ಸಾಧ್ಯತೆ ಇದೆ. ಹೊಸ ಅವಕಾಶಗಳನ್ನು ನಿರ್ಲಕ್ಷಿಸಬೇಡಿ.

ಮೀನ: ಹೊಸ ಜವಾಬ್ದಾರಿ, ಹಣಕಾಸಿನಲ್ಲಿ ನೆಮ್ಮದಿ

ಹೊಸ ಜವಾಬ್ದಾರಿಗಳು ಎದುರಾಗಬಹುದು. ಹಣಕಾಸಿನ ಒತ್ತಡದಲ್ಲಿ ಸ್ವಲ್ಪ ಪರಿಹಾರ ಸಿಗುವ ಸಾಧ್ಯತೆ ಇದೆ. ಭಾವನಾತ್ಮಕವಾಗಿ ಹೆಚ್ಚು ಯೋಚಿಸುವುದಕ್ಕಿಂತ ವಾಸ್ತವಿಕವಾಗಿ ನಿರ್ಧರಿಸಿ.

Continue Reading

Trending