Connect with us

ಲೈಫ್ ಸ್ಟೈಲ್

ಸಂಕ್ರಾಂತಿ ವಿಶೇಷ | ಎಳ್ಳು ಮಿಶ್ರಿತ ಶೇಂಗಾ ಹೋಳಿಗೆ ಮಾಡೋದು ಹೇಗೆ ಗೊತ್ತಾ..!

Published

on

ಸಿಹಿಯಾದ ಎಳ್ಳು ಮಿಶ್ರಿತ ಶೇಂಗಾ ಹೋಳಿಗೆ ಸಂಕ್ರಾಂತಿ ಹಬ್ಬದಲ್ಲಿ ಎಳ್ಳಿನ ಮಹತ್ವ ತುಂಬಾನೆ ಇದೆ.ಮಾಮುಲಿಯಾಗಿ ಶೇಂಗಾದ ಹೋಳಿಗೆ ಎಲ್ಲರೂ ಮಾಡುತ್ತಾರೆ. ಆದರೆ ಶೇಂಗಾದ ಹೋಳಿಗೆಗೆ ಎಳ್ಳು ಹಾಕಿ ಮಾಡಿದರೆ ಚಳಿಗಾಲಕ್ಕೆ ಒಳ್ಳೆಯದು.

ಎಳ್ಳು ಮಿಶ್ರಿತ ಶೇಂಗಾದ ಹೋಳಿಗೆಗೆ ಬೇಕಾದ ಸಾಮಗ್ರಿಗಳು

  • ಅರ್ಧ ಕೆ.ಜಿ ಶೇಂಗಾ
  • ಅರ್ಧ ಕೆ.ಜಿ ಬೆಲ್ಲ
  • 200ಗ್ರಾಂ ಎಳ್ಳು
  • ರುಚಿಗೆ ಉಪ್ಪು
  • ಒಂದು ಚಮಚ ಎಣ್ಣೆ
  • 1/4ಕೆ.ಜಿ ಮೈದಾಹಿಟ್ಟು

ಮಾಡುವ ವಿಧಾನ

ಮೊದಲಿಗೆ ಶೇಂಗಾವನ್ನು ಚೆನ್ನಗಿ ಹುರಿದುಕೊಳ್ಳಿ, ಹಾಗೂ ಎಳ್ಳುನ್ನು ಬಂಗಾರದ ವರ್ಣಕ್ಕೆ ಬರುವೆವರೆಗೆ ಹುರಿದುಕೊಳ್ಳಿ. ಹುರಿದುಕೊಂಡ ಶೇಂಗಾ ಹಾಗೂ ಎಳ್ಳನ ಜೊತೆಗೆ ಬೆಲ್ಲವನ್ನು ಸೇರಿಸಿಕೊಂಡು ಪುಡಿಮಾಡಿಕೊಳ್ಳಿ. ಈ ಪುಡಿಗೆ ಸ್ವಲ್ಪ ಬಿಸಿನೀರು ಹಾಕಿ ಕಲಿಸಿ ಉಂಡಿಗಳಾಗಿ ಮಾಡಿಕೊಳ್ಳಿ. ಮೈದಾಹಿಟ್ಟಿಗೆ ಒಂದು ಚಮಚ ಎಣ್ಣೆ, ರುಚಿಗೆ ಉಪ್ಪು ಹಾಕಿ ಚಪಾತಿಯ ಹದಕ್ಕೆ ನಾದಿಕೊಳ್ಳಿ.

ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದರಲ್ಲಿ ಶೇಂಗಾ, ಎಳ್ಳು ಹಾಗೂ ಬೆಲ್ಲದ ಮಿಶ್ರಣದ ಉಂಡೆಯನ್ನು ಇಟ್ಟು ಚಿಕ್ಕದಾಗಿ ಲಟ್ಟಿಸಿ, ಕಾದ ತವಾದ ಮೇಲೆ ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕೆಂಪಗಾಗುವರೆಗೆ ಬೇಯಿಸಿ. ಅದನ್ನು ಸ್ವಲ್ಪ ಸಮಯಗಳ ವರೆಗೆ ಆರಲುಬಿಡಿ. ಸಂಕ್ರಾಂತಿಹಬ್ಬಕ್ಕೆ ಎಳ್ಳು ಮಿಶ್ರೀತ ಶೇಂಗಾ ಹೋಳಿಗೆ ತುಪ್ಪದ ಜೊತೆಗೆ ಸವಿಯಲು ಸಿದ್ದ.

-ಕಾಂಚನಾ. ಬಸವರಾಜ. ಪೂಜಾರಿ
ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗ
ಪ್ರಥಮ ವರ್ಷದ ವಿದ್ಯಾರ್ಥಿನಿ
ಅಕ್ಕ ಮಹಾದೇವಿ ವಿಶ್ವವಿದ್ಯಾನಿಲಯ ತೊರವಿ
ವಿಜಯಪುರ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಶ್ರೀಮಂತಿಕೆಯ ನಡುವೆ ಸರಳ ಬದುಕು: 50 ರೂ. ಹೇರ್‌ಕಟ್‌ ಹೇಳಿದ ಡಿಕೆಶಿ

Published

on

ಆಸ್ತಿ ಬಗ್ಗೆ ಹೆಮ್ಮೆ, ಬದುಕಿನಲ್ಲಿ ಸರಳತೆ: ಡಿಕೆಶಿ ಹೇಳಿಕೆಯ ಸುತ್ತ ಚರ್ಚೆ

ಸುದ್ದಿದಿನ,ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ತಮ್ಮ ಆಸ್ತಿ ಮತ್ತು ಸರಳ ಜೀವನಶೈಲಿಯ ಕುರಿತು ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ಸಾರ್ವಜನಿಕರಲ್ಲೂ ಚರ್ಚೆಗೆ ಕಾರಣವಾಗಿದೆ. ಶ್ರೀಮಂತ ರಾಜಕಾರಣಿ ಎಂಬ ಗುರುತಿನ ನಡುವೆಯೂ, ತಾವು ಇಂದಿಗೂ ಹೇರ್‌ಕಟ್‌ಗೆ ಕೇವಲ 50 ರೂ. ಖರ್ಚು ಮಾಡುತ್ತೇನೆ ಎಂದು ಅವರು ಹೇಳಿರುವುದು ಗಮನ ಸೆಳೆದಿದೆ.

ಹೈಲೈಟ್ಸ್

  • ಈಗಲೂ 50 ರೂ. ನೀಡಿ ಹೇರ್‌ಕಟ್‌ ಮಾಡಿಸಿಕೊಳ್ಳುವುದಾಗಿ ಡಿಕೆಶಿ ಹೇಳಿದ್ದಾರೆ.
  • ದುಂದು ವೆಚ್ಚ ಇಷ್ಟವಿಲ್ಲ, ಅಗತ್ಯವಿರುವಷ್ಟೇ ಖರ್ಚು ಮಾಡುತ್ತೇನೆ ಮತ್ತು ಸರಳ ಜೀವನಕ್ಕೆ ಆದ್ಯತೆ ನೀಡುತ್ತೇನೆ
  • ತಮ್ಮ ಪೂರ್ವಜರು ಮತ್ತು ತಾವು ಸಂಪಾದಿಸಿರುವ ಆಸ್ತಿ ಎರಡು-ಮೂರು ಪೀಳಿಗೆಗೆ ಸಾಕಾಗುತ್ತದೆ
  • ‘ಅಮಿತ್‌ ಶಾ’ ಹೋಲಿಕೆ ಬೇಡ: ತಮ್ಮನ್ನು ಕಾಂಗ್ರೆಸ್‌ನ ಅಮಿತ್‌ ಶಾ ಎಂದು ಕರೆಯುವುದಕ್ಕೆ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದಾರೆ.
  • 2028ರ ವಿಶ್ವಾಸ: ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಎರಡು-ಮೂರು ಪೀಳಿಗೆಗೆ ಸಾಕಾಗುವಷ್ಟು ಆಸ್ತಿ’

ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್‌, ತಮ್ಮ ಪೂರ್ವಜರು ಮತ್ತು ತಾವು ಸಂಪಾದಿಸಿರುವ ಆಸ್ತಿ ಎರಡು-ಮೂರು ಪೀಳಿಗೆ ಕುಳಿತು ತಿನ್ನುವಷ್ಟು ಇದೆ ಎಂದು ಹೇಳಿದ್ದರು. ಮುಖ್ಯಮಂತ್ರಿ ಸ್ಥಾನವನ್ನು ಹಣ ಸಂಪಾದಿಸುವ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಿಲ್ಲ. ಬದಲಾಗಿ ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಮತ್ತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುವುದು ತಮ್ಮ ಗುರಿ ಎಂದು ಅವರು ಹೇಳಿದ್ದರು.

ಡಿಕೆ ಶಿವಕುಮಾರ್‌ ಅವರು ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪೈಕಿ ಒಬ್ಬರು ಎಂಬ ವಿಚಾರವೂ ಈ ಹಿಂದೆ ವರದಿಯಾಗಿತ್ತು. ಆದರೆ ತಮ್ಮ ವೈಯಕ್ತಿಕ ಜೀವನಶೈಲಿಯಲ್ಲಿ ದುಂದು ವೆಚ್ಚಕ್ಕೆ ಆದ್ಯತೆ ನೀಡುವುದಿಲ್ಲ ಎಂಬ ಸಂದೇಶವನ್ನು ಅವರು ಇದೀಗ ನೀಡಿದ್ದಾರೆ.

http://Visit : www.suddidina.com

50 ರೂ. ಹೇರ್‌ಕಟ್‌: ಸರಳ ಬದುಕಿನ ಉದಾಹರಣೆ

ಆ.26ರಂದು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡಿಕೆ ಶಿವಕುಮಾರ್‌ ತಮ್ಮ ಹೇರ್‌ಕಟ್‌ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. “ನಾನು ನನ್ನ ಹೇರ್‌ಕಟ್‌ಗಾಗಿ 50 ರೂ. ಖರ್ಚು ಮಾಡುತ್ತೇನೆ. ಸರಳ ಜೀವನ ನನಗೆ ಇಷ್ಟ. ದುಂದು ವೆಚ್ಚ ನನಗೆ ಇಷ್ಟವಿಲ್ಲ” ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ.

ದಿಲ್ಲಿಯಲ್ಲಿಯೂ ತಾವು 50 ರೂ. ನೀಡಿ ಹೇರ್‌ಕಟ್‌ ಮಾಡಿಸಿಕೊಳ್ಳುವುದಾಗಿ ಹೇಳಿರುವ ಅವರು, ಜೀವನ ನಡೆಸಲು ಎಷ್ಟು ಅಗತ್ಯವೋ ಅಷ್ಟನ್ನೇ ಖರ್ಚು ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರ ಆಸ್ತಿ ಪ್ರಮಾಣಕ್ಕಿಂತ ಅವರ ವೈಯಕ್ತಿಕ ಖರ್ಚಿನ ಈ ಉದಾಹರಣೆಯೇ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ.

‘ಕಾಂಗ್ರೆಸ್‌ನ ಅಮಿತ್‌ ಶಾ’ ಹೋಲಿಕೆಗೆ ಡಿಕೆಶಿ ವಿರೋಧ

ಇದೇ ಸಂದರ್ಶನದಲ್ಲಿ ತಮ್ಮನ್ನು ‘ಕಾಂಗ್ರೆಸ್‌ನ ಅಮಿತ್‌ ಶಾ’ ಎಂದು ಕರೆಯುವುದಕ್ಕೂ ಡಿಕೆ ಶಿವಕುಮಾರ್‌ ವಿರೋಧ ವ್ಯಕ್ತಪಡಿಸಿದ್ದಾರೆ. ತಾವು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತನಾಗಿದ್ದು, ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ತಮ್ಮ ಕರ್ತವ್ಯ ಎಂದು ಹೇಳಿದ್ದಾರೆ.

ಯುವಜನರ ಶಕ್ತಿ, ಆಲೋಚನೆ ಮತ್ತು ಮಹತ್ವಾಕಾಂಕ್ಷೆಗಳ ಮೇಲೆ ಕಾಂಗ್ರೆಸ್‌ ನಂಬಿಕೆ ಇಟ್ಟಿದೆ. ಯುವಕರಿಗೆ ಕಲಿಯಲು, ಹೊಸದನ್ನು ಸೃಷ್ಟಿಸಲು ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವುದು ತಮ್ಮ ದೃಷ್ಟಿಕೋನ ಎಂದು ಅವರು ಹೇಳಿದ್ದಾರೆ.

2028ರ ಚುನಾವಣೆಯಲ್ಲೂ ವಿಶ್ವಾಸ

2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಡಿಕೆ ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯನ್ನೂ ಅವರು ತಿಳಿಸಿದ್ದಾರೆ.

ಅಲ್ಲದೆ, 2029ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಡಿಕೆಶಿ ಅವರ ಇತ್ತೀಚಿನ ಸಂದರ್ಶನವು ಸರಳ ಜೀವನಶೈಲಿಯಿಂದ ಹಿಡಿದು ಕಾಂಗ್ರೆಸ್‌ನ ಭವಿಷ್ಯದ ರಾಜಕೀಯ ಗುರಿಗಳವರೆಗೆ ಹಲವು ವಿಚಾರಗಳನ್ನು ಮುನ್ನೆಲೆಗೆ ತಂದಿದೆ.

Continue Reading

ಲೈಫ್ ಸ್ಟೈಲ್

ಅನ್ನ ಜಿಗುಟಾಯಿತಾ? ಬ್ರೆಡ್‌ನ ಈ ಸರಳ ಟ್ರಿಕ್‌ನಿಂದ ಮೆತ್ತಗಾದ ಅನ್ನಕ್ಕೆ ಪರಿಹಾರ!

Published

on

bread_trick_fix_sticky_overcooked
ಅನ್ನ ಜಿಗುಟಾಯಿತಾ? ಬ್ರೆಡ್‌ನ ಈ ಸರಳ ಟ್ರಿಕ್‌ನಿಂದ ಮೆತ್ತಗಾದ ಅನ್ನಕ್ಕೆ ಪರಿಹಾರ!

ಸುದ್ದಿದಿನ: ಅನ್ನ ಬೇಯಿಸುವಾಗ ನೀರು ಹೆಚ್ಚಾಗಿ ಬಿದ್ದು ಮೆತ್ತಗಾಗುವುದು ಅಥವಾ ಹೆಚ್ಚು ಹೊತ್ತು ಬೇಯಿಸಿ ಜಿಗುಟಾಗುವುದು ಸಾಮಾನ್ಯ. ಆದರೆ ಇಂತಹ ಸಂದರ್ಭಗಳಲ್ಲಿ ಅನ್ನವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ. ಅಡುಗೆಮನೆಯಲ್ಲಿರುವ ಒಣ ಬ್ರೆಡ್ ತುಂಡೇ ಹೆಚ್ಚುವರಿ ತೇವಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಈ ಸರಳ ತಂತ್ರವನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯೋಣ.

ಅಕ್ಕಿಯನ್ನು ಅಗತ್ಯಕ್ಕಿಂತ ಹೆಚ್ಚು ಬೇಯಿಸಿದಾಗ ಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೀರಿಕೊಳ್ಳುತ್ತವೆ. ಪರಿಣಾಮವಾಗಿ ಅವುಗಳ ಸಹಜ ರಚನೆ ಕಳೆದು, ಮೆತ್ತಗೆ ಹಾಗೂ ಒಂದಕ್ಕೊಂದು ಅಂಟಿಕೊಳ್ಳುವಂತಾಗುತ್ತವೆ. ಹೆಚ್ಚು ನೀರು ಸೇರಿಸುವುದು, ಅಗತ್ಯಕ್ಕಿಂತ ಹೆಚ್ಚು ಸಮಯ ಬೇಯಿಸುವುದು ಮತ್ತು ಅಕ್ಕಿಯ ಪ್ರಕಾರಕ್ಕೆ ಸರಿಯಾದ ನೀರಿನ ಪ್ರಮಾಣ ಬಳಸದಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಅಕ್ಕಿ ಸಂಪೂರ್ಣವಾಗಿ ಗಂಜಿಯಂತಹ ಹದಕ್ಕೆ ಬರುವ ಮೊದಲು ಸಮಸ್ಯೆಯನ್ನು ಗುರುತಿಸಿದರೆ, ಹೆಚ್ಚುವರಿ ತೇವಾಂಶವನ್ನು ಕಡಿಮೆ ಮಾಡುವ ಮೂಲಕ ಅನ್ನದ ಹದವನ್ನು ಸ್ವಲ್ಪಮಟ್ಟಿಗೆ ಸುಧಾರಿಸಬಹುದು.

http://Visit : www.suddidina.com

ಬ್ರೆಡ್ ತುಂಡು ಹೇಗೆ ಸಹಾಯ ಮಾಡುತ್ತದೆ?

Suddidina

ಅನ್ನದಲ್ಲಿ ನೀರು ಹೆಚ್ಚಾಗಿ ಉಳಿದಿದ್ದರೆ ಮೊದಲು ಸಾಧ್ಯವಾದಷ್ಟು ಹೆಚ್ಚುವರಿ ನೀರನ್ನು ಎಚ್ಚರಿಕೆಯಿಂದ ಬಸಿದು ತೆಗೆಯಬೇಕು. ಬಳಿಕ ಅನ್ನದ ಮೇಲೆ ದಪ್ಪವಾದ, ಸ್ವಲ್ಪ ಒಣಗಿದ ಬ್ರೆಡ್ ತುಂಡನ್ನು ಇರಿಸಿ ಪಾತ್ರೆಯನ್ನು ಮುಚ್ಚಬೇಕು.

ಉರಿಯನ್ನು ತೀರಾ ಕಡಿಮೆ ಮಟ್ಟದಲ್ಲಿಟ್ಟು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ಬ್ರೆಡ್‌ನ ಒಣ ರಚನೆಯು ಸ್ಪಂಜಿನಂತೆ ವರ್ತಿಸಿ ಅನ್ನದಲ್ಲಿರುವ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಹೆಚ್ಚು ನೀರಾದ ಅನ್ನಕ್ಕೆ ಎರಡು–ಮೂರು ಬ್ರೆಡ್ ತುಂಡು

ಅನ್ನದಲ್ಲಿ ನೀರಿನ ಪ್ರಮಾಣ ಹೆಚ್ಚು ಇದ್ದರೆ ಒಂದು ಬ್ರೆಡ್ ತುಂಡು ಸಾಕಾಗದಿರಬಹುದು. ಅಂತಹ ಸಂದರ್ಭದಲ್ಲಿ ಎರಡು ಅಥವಾ ಮೂರು ಒಣ ಬ್ರೆಡ್ ತುಂಡುಗಳನ್ನು ಅನ್ನದ ಮೇಲೆ ಬೇರೆ ಬೇರೆ ಕಡೆಗಳಲ್ಲಿ ಇರಿಸಬಹುದು. ಕೆಲವು ನಿಮಿಷಗಳ ನಂತರ ಬ್ರೆಡ್ ತುಂಡುಗಳನ್ನು ತೆಗೆದುಹಾಕಬೇಕು.

ಆದರೆ ಬ್ರೆಡ್ ಅನ್ನು ಹೆಚ್ಚು ಹೊತ್ತು ಪಾತ್ರೆಯಲ್ಲೇ ಬಿಡಬಾರದು. ಅದು ಹೆಚ್ಚಿನ ತೇವಾಂಶ ಹೀರಿಕೊಂಡು ಮೆತ್ತಗಾಗಬಹುದು.

ಈ ವಿಧಾನ ಯಾವಾಗ ಪರಿಣಾಮಕಾರಿ?

ಅನ್ನ ಸ್ವಲ್ಪ ಹೆಚ್ಚು ತೇವವಾಗಿದ್ದಾಗ ಅಥವಾ ಕಾಳುಗಳು ತಮ್ಮ ಆಕಾರವನ್ನು ಇನ್ನೂ ಉಳಿಸಿಕೊಂಡಿರುವಾಗ ಈ ತಂತ್ರ ಹೆಚ್ಚು ಉಪಯುಕ್ತ. ಆದರೆ ಅಕ್ಕಿ ಸಂಪೂರ್ಣವಾಗಿ ಬೆಂದು ಒಡೆದು ಗಂಜಿಯಂತಹ ಹದಕ್ಕೆ ಬಂದಿದ್ದರೆ, ಬ್ರೆಡ್ ಅದನ್ನು ಮತ್ತೆ ಉದುರುದುರಾದ ಅನ್ನವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಬ್ರೆಡ್ ಹೆಚ್ಚುವರಿ ತೇವಾಂಶವನ್ನು ಮಾತ್ರ ಹೀರಿಕೊಳ್ಳುತ್ತದೆ.

ರೈಸ್ ಕುಕ್ಕರ್‌ನಲ್ಲೂ ಬಳಸಬಹುದು

ರೈಸ್ ಕುಕ್ಕರ್‌ನಲ್ಲಿ ಅನ್ನ ಬೇಯಿಸುವಾಗ ಆಕಸ್ಮಿಕವಾಗಿ ನೀರು ಹೆಚ್ಚಾದರೂ ಇದೇ ವಿಧಾನ ಪ್ರಯತ್ನಿಸಬಹುದು. ಮೊದಲು ಅನ್ನ ಸಂಪೂರ್ಣವಾಗಿ ಬೆಂದಿದೆಯೇ ಎಂದು ಪರಿಶೀಲಿಸಿ.

ಕಾಳುಗಳು ಚೆನ್ನಾಗಿದ್ದು ಹೆಚ್ಚುವರಿ ತೇವಾಂಶ ಮಾತ್ರ ಉಳಿದಿದ್ದರೆ, ಒಣ ಬ್ರೆಡ್ ತುಂಡನ್ನು ಮೇಲೆ ಇರಿಸಿ 5 ನಿಮಿಷ ಮುಚ್ಚಿಡಬಹುದು.

ಮುಂದೆ ಅನ್ನ ಜಿಗುಟಾಗದಂತೆ ಏನು ಮಾಡಬೇಕು?

ಪ್ರತಿಯೊಂದು ಬಗೆಯ ಅಕ್ಕಿಗೂ ಬೇಕಾಗುವ ನೀರಿನ ಪ್ರಮಾಣ ಒಂದೇ ಆಗಿರುವುದಿಲ್ಲ. ಆದ್ದರಿಂದ ಅಕ್ಕಿಯ ಪ್ಯಾಕೆಟ್‌ನ ಸೂಚನೆ ಅಥವಾ ನೀವು ಅನುಸರಿಸುವ ಪಾಕವಿಧಾನದ ಪ್ರಕಾರ ನೀರನ್ನು ಅಳೆಯುವುದು ಉತ್ತಮ.

ಅನ್ನ ಬೇಯುವಾಗ ಪದೇಪದೇ ಮುಚ್ಚಳ ತೆರೆಯುವುದನ್ನು ತಪ್ಪಿಸಿ. ಸರಿಯಾದ ಸಮಯದಲ್ಲಿ ಉರಿಯನ್ನು ಆರಿಸಿ, ಅನ್ನವನ್ನು ಅಗತ್ಯಕ್ಕಿಂತ ಹೆಚ್ಚು ಹೊತ್ತು ಒಲೆಯ ಮೇಲಿಡದಿರುವುದು ಕೂಡ ಮುಖ್ಯ.

Continue Reading

ಲೈಫ್ ಸ್ಟೈಲ್

ರಕ್ಷಾಬಂಧನದ ಸಿಹಿಗೆ ಮಾರುಕಟ್ಟೆ ಖೋವಾ ಬೇಡ; ಮನೆಯಲ್ಲೇ ಶುದ್ಧ ಮಾವಾ ತಯಾರಿಸಿ!

Published

on

Khova_Making_Raksha_Bandana_Suddidina
ರಕ್ಷಾಬಂಧನದ ಸಿಹಿಗೆ ಮಾರುಕಟ್ಟೆ ಖೋವಾ ಖರೀದಿಸುವ ಬದಲು, 2 ಲೀಟರ್ ಹಾಲಿನಿಂದ ಮನೆಯಲ್ಲೇ ತಯಾರಿಸಿ ಶುದ್ಧ ಖೋವಾ

ಸುದ್ದಿದಿನ: ರಕ್ಷಾಬಂಧನ ಸೇರಿದಂತೆ ಹಬ್ಬಗಳ ಸಮಯದಲ್ಲಿ ಸಿಹಿತಿಂಡಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಗುಲಾಬ್ ಜಾಮೂನ್, ಪೇಡಾ, ಬರ್ಫಿ, ಗುಜಿಯಾ ಸೇರಿದಂತೆ ಹಲವು ಸಿಹಿತಿಂಡಿಗಳ ತಯಾರಿಕೆಯಲ್ಲಿ ಖೋವಾ ಪ್ರಮುಖ ಪದಾರ್ಥವಾಗಿದೆ. ಇದೇ ಕಾರಣಕ್ಕೆ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಖೋವಾಕ್ಕೆ ಬೇಡಿಕೆಯೂ ಹೆಚ್ಚುತ್ತದೆ.

ಆದರೆ ಮಾರುಕಟ್ಟೆಯಲ್ಲಿ ಸಿಗುವ ಖೋವಾದ ಗುಣಮಟ್ಟದ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸುವುದು ಅಗತ್ಯ. ಕಲಬೆರಕೆಯ ಖೋವಾದಲ್ಲಿ ಪಿಷ್ಟ, ಕೃತಕ ಕೊಬ್ಬು ಅಥವಾ ಇತರ ಅನಗತ್ಯ ಪದಾರ್ಥಗಳನ್ನು ಬಳಸುವ ಸಾಧ್ಯತೆ ಇರುವುದರಿಂದ, ಸಾಧ್ಯವಾದರೆ ಮನೆಯಲ್ಲೇ ಖೋವಾ ತಯಾರಿಸುವುದು ಉತ್ತಮ ಆಯ್ಕೆಯಾಗಬಹುದು.

http://Visit : www.suddidina.com

ನಿರಂತರವಾಗಿ ಕೈಯಾಡಿಸುವುದೇ ಮುಖ್ಯ

ಹಾಲು ಕುದಿಯುತ್ತಿರುವಾಗ ದಪ್ಪ ಸೌಟಿನಿಂದ ನಿರಂತರವಾಗಿ ಕಲಕುತ್ತಿರಬೇಕು. ವಿಶೇಷವಾಗಿ ಹಾಲು ಗಟ್ಟಿಯಾಗಲು ಆರಂಭಿಸಿದಾಗ ಪಾತ್ರೆಯ ತಳಕ್ಕೆ ಅಂಟದಂತೆ ಎಚ್ಚರಿಕೆ ವಹಿಸಬೇಕು. ಪಾತ್ರೆಯ ಅಂಚಿನಲ್ಲಿ ಶೇಖರವಾಗುವ ಕೆನೆಯನ್ನು ಕೆರೆದು ಮತ್ತೆ ಹಾಲಿನಲ್ಲೇ ಸೇರಿಸುತ್ತಿರಿ.

ಸುಮಾರು 20–25 ನಿಮಿಷಗಳ ಬಳಿಕ ಹಾಲು ಅರ್ಧದಷ್ಟು ಕಡಿಮೆಯಾಗಿ ರಾಬ್ರಿಯಂತೆ ದಪ್ಪವಾಗುತ್ತದೆ. ನಂತರ ಉರಿಯನ್ನು ಮಧ್ಯಮ ಅಥವಾ ಕಡಿಮೆ ಮಟ್ಟಕ್ಕೆ ಇಟ್ಟು ಮತ್ತಷ್ಟು ಕೈಯಾಡಿಸುತ್ತಿರಬೇಕು. ಇನ್ನೂ 10–15 ನಿಮಿಷಗಳಲ್ಲಿ ತೇವಾಂಶ ಕಡಿಮೆಯಾಗಿ ಮಿಶ್ರಣ ಗಟ್ಟಿಯಾಗಲು ಆರಂಭಿಸುತ್ತದೆ.

ಖೋವಾ ಸಿದ್ಧವಾಗುವುದು ಹೇಗೆ ಗೊತ್ತಾಗುತ್ತದೆ?

ಮಿಶ್ರಣವು ಹಿಟ್ಟಿನಂತೆ ಗಟ್ಟಿಯಾಗಿ, ಬಾಣಲೆಯ ತಳವನ್ನು ಬಿಡಲು ಆರಂಭಿಸಿದಾಗ ಖೋವಾ ಸಿದ್ಧವಾಗಿದೆ ಎಂದು ತಿಳಿಯಬಹುದು. ಉರಿ ಆರಿಸಿದ ನಂತರವೂ ಬಾಣಲೆ ಬಿಸಿಯಾಗಿರುವುದರಿಂದ ಒಂದು–ಎರಡು ನಿಮಿಷ ಸೌಟಿನಿಂದ ನಿಧಾನವಾಗಿ ಕೈಯಾಡಿಸಿ ಬಳಿಕ ತಟ್ಟೆ ಅಥವಾ ಬಟ್ಟಲಿಗೆ ವರ್ಗಾಯಿಸಿ.

ತಣ್ಣಗಾದಂತೆ ಖೋವಾ ಇನ್ನಷ್ಟು ಗಟ್ಟಿಯಾಗಿ ಉತ್ತಮ ಹರಳಿನ ಹದ ಪಡೆಯುತ್ತದೆ. ಇದನ್ನು ಪೇಡಾ, ಬರ್ಫಿ, ಗುಲಾಬ್ ಜಾಮೂನ್, ಗುಜಿಯಾ ಸೇರಿದಂತೆ ವಿವಿಧ ಸಿಹಿತಿಂಡಿಗಳಿಗೆ ಬಳಸಬಹುದು.

ಶೇಖರಣೆ ಮತ್ತು ಮುನ್ನೆಚ್ಚರಿಕೆ

ಖೋವಾ ತಯಾರಿಸುವಾಗ ದಪ್ಪ ತಳದ ಪಾತ್ರೆ ಬಳಸುವುದು ಅತ್ಯಗತ್ಯ. ಹಾಲು ಗಟ್ಟಿಯಾಗುವ ಹಂತದಲ್ಲಿ ನಿರಂತರವಾಗಿ ಕಲಕಬೇಕು. ಹೆಚ್ಚಿನ ಉರಿಯಲ್ಲಿ ಹೆಚ್ಚು ಹೊತ್ತು ಇಟ್ಟರೆ ಖೋವಾ ಸುಟ್ಟು ಬಣ್ಣ ಮತ್ತು ರುಚಿ ಬದಲಾಗಬಹುದು.

ಖೋವಾದಲ್ಲಿ ತೇವಾಂಶ ಮತ್ತು ಪೋಷಕಾಂಶ ಹೆಚ್ಚಿರುವುದರಿಂದ ಸಾಮಾನ್ಯ ತಾಪಮಾನದಲ್ಲಿ ಹೆಚ್ಚು ಕಾಲ ಇಡುವುದು ಸೂಕ್ತವಲ್ಲ. ತಯಾರಿಸಿದ ಖೋವಾವನ್ನು ಸ್ವಚ್ಛ, ಗಾಳಿಯೇರದ ಪಾತ್ರೆಯಲ್ಲಿ ಶೀತಲೀಕರಿಸಿ ಇಡುವುದು ಉತ್ತಮ. ದೀರ್ಘಕಾಲ ಸಂಗ್ರಹಿಸಬೇಕಾದರೆ ಫ್ರೀಜರ್ ಬಳಸಬಹುದು. ಬಳಸುವ ಮೊದಲು ಅದರ ವಾಸನೆ, ಬಣ್ಣ ಮತ್ತು ಹದದಲ್ಲಿ ಯಾವುದೇ ಬದಲಾವಣೆ ಆಗಿದೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯ.

Continue Reading
Advertisement

Title

ದಿನದ ಸುದ್ದಿ21 minutes ago

ಶ್ರೀಮಂತಿಕೆಯ ನಡುವೆ ಸರಳ ಬದುಕು: 50 ರೂ. ಹೇರ್‌ಕಟ್‌ ಹೇಳಿದ ಡಿಕೆಶಿ

ಸುದ್ದಿದಿನ,ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ತಮ್ಮ ಆಸ್ತಿ ಮತ್ತು ಸರಳ ಜೀವನಶೈಲಿಯ ಕುರಿತು ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ಸಾರ್ವಜನಿಕರಲ್ಲೂ ಚರ್ಚೆಗೆ...

ದಿನದ ಸುದ್ದಿ46 minutes ago

ಹೆಬ್ಬಾಳ–ಮೇಖ್ರಿ ಸುರಂಗ ಮಾರ್ಗ: ಸಂಚಾರ ಪರಿಹಾರವೇ, ಹೊಸ ಸಮಸ್ಯೆಯೇ?

ಸುದ್ದಿದಿನ,ಬೆಂಗಳೂರು: ಬೆಂಗಳೂರು ನಗರದ ಪ್ರಮುಖ ಸಂಚಾರ ಕಿರಿಕಿರಿ ಕೇಂದ್ರವಾಗಿರುವ ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಉದ್ದೇಶಿಸಿರುವ ಸುರಂಗ ಮಾರ್ಗ ಯೋಜನೆ ಇದೀಗ ತಜ್ಞರ ವರದಿಯಿಂದ ಚರ್ಚೆಗೆ ಬಂದಿದೆ....

ದಿನದ ಸುದ್ದಿ4 hours ago

ಶಿವರಾಮ ಕಾರಂತ ಬಡಾವಣೆಗೆ ಮುಹೂರ್ತ: ಆ.31ಕ್ಕೆ 18 ಸಾವಿರ ನಿವೇಶನ ಹಂಚಿಕೆ?

ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ದೀರ್ಘಕಾಲದ ಕಾನೂನು ವಿವಾದಗಳ ಬಳಿಕ...

ದಿನದ ಸುದ್ದಿ4 hours ago

ಗೃಹಜ್ಯೋತಿ ಮರುಸಮೀಕ್ಷೆಗೆ ಕೌಂಟ್‌ಡೌನ್: 1.17 ಲಕ್ಷ ಫಲಾನುಭವಿಗಳಿಗೆ ಇನ್ನೂ 5 ದಿನ ಮಾತ್ರ!

ಸುದ್ದಿದಿನ, ಮೈಸೂರು: ನೈಜ ಫಲಾನುಭವಿಗಳಿಗೆ ಮಾತ್ರ ಗೃಹಜ್ಯೋತಿ ಯೋಜನೆಯ ಸಬ್ಸಿಡಿ ತಲುಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಮರುಸಮೀಕ್ಷೆ ಅಂತಿಮ ಹಂತಕ್ಕೆ ಬಂದಿದೆ. ಮೈಸೂರು ಜಿಲ್ಲೆಯಲ್ಲಿ ಶೇ.84ರಷ್ಟು ಪರಿಶೀಲನೆ...

august-27-2026-daily-horoscope-kannada-rashi-bhavishya august-27-2026-daily-horoscope-kannada-rashi-bhavishya
ನಿತ್ಯ ಭವಿಷ್ಯ4 hours ago

ಆಗಸ್ಟ್ 27ರ ರಾಶಿಭವಿಷ್ಯ: ವೃತ್ತಿಯಿಂದ ಪ್ರೇಮದವರೆಗೆ ಇಂದು ನಿಮ್ಮ ದಿನ ಹೇಗಿರಲಿದೆ?

ಮೇಷದಿಂದ ಮೀನದವರೆಗೆ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿದೆ. ಉದ್ಯೋಗ, ವ್ಯವಹಾರ, ಶಿಕ್ಷಣ, ಕುಟುಂಬ, ಆರೋಗ್ಯ ಮತ್ತು ಪ್ರೇಮ ಜೀವನದಲ್ಲಿ ಇಂದು ಯಾವ ರಾಶಿಗೆ ಶುಭ? ಯಾರು ಎಚ್ಚರಿಕೆ...

bread_trick_fix_sticky_overcooked bread_trick_fix_sticky_overcooked
ಲೈಫ್ ಸ್ಟೈಲ್5 hours ago

ಅನ್ನ ಜಿಗುಟಾಯಿತಾ? ಬ್ರೆಡ್‌ನ ಈ ಸರಳ ಟ್ರಿಕ್‌ನಿಂದ ಮೆತ್ತಗಾದ ಅನ್ನಕ್ಕೆ ಪರಿಹಾರ!

ಸುದ್ದಿದಿನ: ಅನ್ನ ಬೇಯಿಸುವಾಗ ನೀರು ಹೆಚ್ಚಾಗಿ ಬಿದ್ದು ಮೆತ್ತಗಾಗುವುದು ಅಥವಾ ಹೆಚ್ಚು ಹೊತ್ತು ಬೇಯಿಸಿ ಜಿಗುಟಾಗುವುದು ಸಾಮಾನ್ಯ. ಆದರೆ ಇಂತಹ ಸಂದರ್ಭಗಳಲ್ಲಿ ಅನ್ನವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ....

Khova_Making_Raksha_Bandana_Suddidina Khova_Making_Raksha_Bandana_Suddidina
ಲೈಫ್ ಸ್ಟೈಲ್5 hours ago

ರಕ್ಷಾಬಂಧನದ ಸಿಹಿಗೆ ಮಾರುಕಟ್ಟೆ ಖೋವಾ ಬೇಡ; ಮನೆಯಲ್ಲೇ ಶುದ್ಧ ಮಾವಾ ತಯಾರಿಸಿ!

ಸುದ್ದಿದಿನ: ರಕ್ಷಾಬಂಧನ ಸೇರಿದಂತೆ ಹಬ್ಬಗಳ ಸಮಯದಲ್ಲಿ ಸಿಹಿತಿಂಡಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಗುಲಾಬ್ ಜಾಮೂನ್, ಪೇಡಾ, ಬರ್ಫಿ, ಗುಜಿಯಾ ಸೇರಿದಂತೆ ಹಲವು ಸಿಹಿತಿಂಡಿಗಳ ತಯಾರಿಕೆಯಲ್ಲಿ ಖೋವಾ ಪ್ರಮುಖ ಪದಾರ್ಥವಾಗಿದೆ....

ದಿನದ ಸುದ್ದಿ1 day ago

ವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ 4215 ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ಮತ್ತು...

ದಿನದ ಸುದ್ದಿ1 day ago

ಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ

ಸುದ್ದಿದಿನಡೆಸ್ಕ್:ಜಪಾನ್‌ನ ಹಿರೋತೋಷಿ ತನಕಾ ಇಂಗ್ಲಿಷ್ ಕಲಿಯಲು ಬೆಂಗಳೂರಿಗೆ ಬಂದಿದ್ದರು. ಆದರೆ ಇಂಗ್ಲಿಷ್ ಅಕಾಡೆಮಿಯಲ್ಲಿ ಸರಿಯಾಗಿ ಇಂಗ್ಲೀಷ್ ಕಲಿಸುತ್ತಿಲ್ಲವೆಂದು ಅಕಾಡೆಮಿ ಮುಖ್ಯಸ್ಥರೊಂದಿಗೆ ಜಗಳ ನಡೆದ ಬಳಿಕ ತನಕಾ ವಿರುದ್ಧ...

ದಿನದ ಸುದ್ದಿ1 day ago

ಡಾಲಿಯ ಕನಸು ಒಂದೇ ಹೀರೋ ಆಗೋದು

ಮೈಸೂರಿನ ರಂಗಾಯಣದಲ್ಲಿ ನಾಟಕ ತಂಡಗಳಲ್ಲಿ ಗುರುತಿಸಿಕೊಂಡ ದಿನಗಳಿಂದಲೇ ಡಾಲಿ ಧನಂಜಯ್ ಅವರದ್ದು ಒಂದೇ ಕನಸು—ಸಿನಿಮಾ ಹೀರೋ ಆಗಬೇಕು! ಕಾಲೇಜು ಯುವಕರಾಗಿದ್ದಾಗಲೂ ಮೌನ ಸ್ವಭಾವದ, ವಿಧೇಯ, ಪರಿಶ್ರಮಿ ಮತ್ತು...

Trending