ಬಹಿರಂಗ
ನವ ಉದಾರ ವಿತ್ತೀಯ ಆಳ್ವಿಕೆಯ ವಿಕೃತಿ-2 : ಖಾಸಗೀಕರಣ ಎಂಬ ಬೌದ್ಧಿಕ ಅಪ್ರಾಮಾಣಿಕತೆ ಮತ್ತು ದೇಶದ್ರೋಹಿ ಕೃತ್ಯ
- ದೇಶದ ಅದೃಷ್ಟಹೀನ ಅಲ್ಪ ಸಂಖ್ಯಾತರ ಮೇಲೆ ಆರ್ಭಟಿಸುವ, ಜಬರ್ದಸ್ತು ಮಾಡುವ, ಆಡಂಬರದ ಗಂಡಸುತನ ತೋರಿಸುವ, ಆದರೆ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ವಿರುದ್ಧ ನಿಲ್ಲುವ ಎದೆಗಾರಿಕೆ ಹೊಂದಿಲ್ಲದ, ಅದೇ ಹಣಕಾಸು ಬಂಡವಾಳವು ಅರ್ಥವ್ಯವಸ್ಥೆಗೆ ಆಘಾತ ತಲುಪಿಸುವಂತಹ ಆಜ್ಞೆಗಳನ್ನು ಕೊಂಡೊಯ್ಯುವ ಕೊಳವೆಯ ಪಾತ್ರ ವಹಿಸುತ್ತಿರುವ ಮೋದಿ ಸರಕಾರ ರಾಜ್ಯಗಳನ್ನು ಆರ್ಥಿಕವಾಗಿ ಹಿಂಡಲು ಮುಂದಾಗಿರುವುದುನವ ಉದಾರ ಆಳ್ವಿಕೆಯ ಒಂದುವಿಕೃತಿಯಾದರೆಇನ್ನೊಂದು ವಿಕೃತಿಅಂದರೆ ದೇಶದ ಆಸ್ತಿಗಳ ಖಾಸಗೀಕರಣ.ತನ್ನ ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುವುದರ ಬದಲಾಗಿ ಮೋದಿ ಸರ್ಕಾರವು ರಾಜ್ಯಗಳನ್ನು ಹಿಂಡುತ್ತಿರುವ ಕ್ರಮವು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಒಡ್ಡಿದರೆ, ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸುವ ಕ್ರಮವು ದೇಶವನ್ನು ವಿದೇಶಿ ಮತ್ತು ದೇಶೀಯ ಏಕಸ್ವಾಮ್ಯ ಬಂಡವಾಳಶಾಹಿಗಳು ಕೊಳ್ಳೆ ಹೊಡೆಯಲು ಅವಕಾಶ ಕಲ್ಪಿಸುವ ದೇಶದ್ರೋಹಿ ಕೃತ್ಯವಾಗಿದೆ.
-ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ. ನಾಗರಾಜ್
ನವ ಉದಾರ ಆಳ್ವಿಕೆಯಲ್ಲಿ ಹಣ ಕಾಸಿನ ಬಿಕ್ಕಟ್ಟಿಗೆ ಒಳಗಾಗಿರುವ ಕೇಂದ್ರ ಸರ್ಕಾರವು ಅದರಿಂದ ನುಣಿಚಿಕೊಳ್ಳಲು ಕುಯುಕ್ತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಅಂತಹ ಪ್ರಯತ್ನಗಳಲ್ಲಿ ಮೊದಲನೆಯದು, ತಾನು ಹೊರಬೇಕಾಗಿರುವ ವಿತ್ತೀಯ ಭಾರವನ್ನು, ಬಲವಂತವಾಗಿ ಮತ್ತು ಸಾಂವಿಧಾನಿಕ ಹೊಣೆಗಾರಿಕೆಯನ್ನು ಉಲ್ಲಂಘಿಸಿ, ರಾಜ್ಯ ಸರ್ಕಾರಗಳ ಹೆಗಲಿಗೆ ಹೊರಿಸುವುದು. ಇನ್ನೊಂದು ಪ್ರಯತ್ನವೆಂದರೆ, ಸಾರ್ವಜನಿಕ ವಲಯವದ ಅನೇಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟಮಾಡುವುದು.
ಸಾರ್ವಜನಿಕ ವಲಯದ ಖಾಸಗೀಕರಣದ ಬಗ್ಗೆ ಸರ್ಕಾರವು ಒಂದಲ್ಲಾ ಒಂದು ಘೋಷಣೆ ಮಾಡದ ದಿನವೇ ಇಲ್ಲ. ಹರ್‌ದೀಪ್ ಪುರಿ ಎಂಬ ವಿಮಾನಯಾನ ಖಾತೆಯ ಸಚಿವರು ಏರ್ ಇಂಡಿಯಾ ಸಂಸ್ಥೆಯನ್ನು ಖಾಸಗೀಕರಿಸದಿದ್ದರೆ ಅದನ್ನು ಮುಚ್ಚಬೇಕಾಗುತ್ತದೆ ಎಂದು ಹೇಳಿದ್ದಾರೆ.
ಎರಡು ಕಾರಣಗಳಿಂದ ಈ ಹೇಳಿಕೆ ಗಮನ ಸೆಳೆಯುತ್ತದೆ: ಮೊದಲನೆಯದು, ಖಾಸಗಿ ಕೊಳ್ಳುಗನೊಬ್ಬ ಏರ್ ಇಂಡಿಯಾ ಮತ್ತೆ ಕಾರ್ಯಾಚರಿಸುವಂತೆ ಮಾಡುವುದು ಸಾಧ್ಯವಾದರೆ (ಇಲ್ಲವಾದರೆ ಅದನ್ನು ಯಾರಾದರೂ ಏಕೆ ಕೊಳ್ಳುತ್ತಾರೆ), ಸರ್ಕಾರವೇ ಅದನ್ನು ಮಾಡಬಾರದೇಕೆ? ಎರಡನೆಯದು, ಹರ್‌ದೀಪ್ ಪುರಿಯವರ ಹೇಳಿಕೆ ಸರಿ ಇದೆ ಎಂಬುದನ್ನು ವಾದಕ್ಕಾಗಿ ಒಪ್ಪಿಕೊಂಡರೂ ಸಹ, ಅದೊಂದು ವಿಲಕ್ಷಣವಾದ ಹೇಳಿಕೆ.
ಏಕೆಂದರೆ, ಒಬ್ಬ ಸಂಭಾವ್ಯ ಕೊಳ್ಳುಗನಿಗೆ ಹರಾಜಿನಲ್ಲಿ ಕೂಗುವ ಬೆಲೆಯನ್ನು ಇಳಿಸುವಂತೆ ಅದು ಸೂಚಿಸುತ್ತದೆ. ಟ್ರೇಡ್ ಯೂನಿಯನ್‌ಗಳ ಮಾತಿಗೆ ಕಿವಿಗೊಡದ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಅಸನ್ಸಾಲ್-ದುರ್ಗಾಪುರ ಪ್ರದೇಶದ ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣಗೊಳಿಸುವ ಹವಣಿಕೆಯಲ್ಲಿದೆ.
ಮಾರುವ ಉದ್ದೇಶದಿಂದಲೇ ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ನಿರ್ವೀರ್ಯಗೊಳಿಸಿ ಅದೊಂದು ಕೆಲಸಕ್ಕೆ ಬಾರದ ಸಂಸ್ಥೆ ಎನ್ನುವಂತೆ ಮಾಡಿ, ತಮಗೆ ಬೇಕಾದವರಿಗೆ ಅಗ್ಗದ ಬೆಲೆಯಲ್ಲಿ ಮಾರುವ ಸಲುವಾಗಿ ಬಿಎಸ್‌ಎನ್‌ಎಲ್ ನೌಕರರನ್ನು ಐಚ್ಛಿಕ ನಿವೃತ್ತಿ ಪಡೆಯುವಂತೆ ಒತ್ತಾಯಿಸಲಾಗಿದೆ. ಇಂತಹ ಅನೇಕ ಉದಾಹರಣೆಗಳಿವೆ.
ಸಾರ್ವಜನಿಕ ವಲಯದ ಮಹತ್ವದ ಅರಿವಿಲ್ಲದ ಮತ್ತು ಕಾರ್ಪೊರೇಟ್ ಕುಳಗಳೊಂದಿಗೆ ಒಡನಾಟ ಇಟ್ಟುಕೊಂಡಿರುವ ಬಿಜೆಪಿಯು ಸಾರ್ವಜನಿಕ ವಲಯವನ್ನು ಮಾರಲು ಉತ್ಸುಕವಾಗಿರುವುದು ಅದರ ಸಹಜ ಪ್ರವೃತ್ತಿ.
ಆರ್ಥಿಕ ಮಂದಗತಿ ಉಂಟುಮಾಡಿರುವ ಬಿಕ್ಕಟ್ಟಿನ ಹಣಕಾಸಿನ ಪರಿಸ್ಥಿತಿಯಿಂದ ಹೊರ ಬರಲು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಾರಲು ಬಿಜೆಪಿ ಸರ್ಕಾರವು ತಡೆದುಕೊಳ್ಳಲಾರದಷ್ಟು ಅವಸರದಲ್ಲಿದೆ.
ಖಾಸಗೀಕರಣವನ್ನು ಚುರುಕುಗೊಳಿಸುವ ಸಲುವಾಗಿ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಅದರ ನಾಯಕ ಸಂಸ್ಥೆಗಳಾದ ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಒಂದು ಮೋಸದ ಲೆಕ್ಕಾಚಾರಕ್ಕೆ ಇಳಿದಿದೆ.
ಅವುಗಳ ಪ್ರಕಾರ, ಸಾರ್ವಜನಿಕ ವಲಯದ ಸಂಸ್ಥೆಗಳ ಮಾರಾಟದಿಂದ ಬಂದ (ಹುಟ್ಟುವಳಿ) ಹಣವನ್ನು ವಿತ್ತೀಯ ಕೊರತೆಯ ಮೊತ್ತದಿಂದ ಕಳೆಯಲಾಗುತ್ತದೆ. ಅಂದರೆ, ವಿತ್ತೀಯ ಕೊರತೆಯ ಗಾತ್ರವು ಸಣ್ಣದಾಗಿ ಕಾಣಿಸುವ ಮೂಲಕ ವಿತ್ತೀಯ ಹೊಣೆಗಾರಿಕೆ ಶಿಸ್ತು ಪಾಲನೆಯಾಗುತ್ತದೆ.
ಆದರೆ, ಇದೊಂದು ಸಂಪೂರ್ಣ ಅನೈತಿಕ ನಡವಳಿಕೆ. ಆದರೂ ಸಹ, ಸೈದ್ಧಾಂತಿಕ ಕಾರಣಗಳಿಗಾಗಿ ಖಾಸಗೀಕರಣವನ್ನು ಜಾರಿಗೊಳಿಸಲಾಗುತ್ತಿದೆ.
ಸಾರ್ವಜನಿಕ ಸಂಸ್ಥೆಗಳ ಮಾರಾಟ ಹುಟ್ಟುವಳಿ ಹಣದ ಮೂಲಕ ವಿತ್ತೀಯ ಕೊರತೆಯ ಮಟ್ಟವನ್ನು ಇಳಿಸುವ ಕ್ರಮವು ಒಂದು ಸಂಪೂರ್ಣ ಅನೈತಿಕ ನಡವಳಿಕೆ ಹೇಗೆ ಎಂಬುದು ಸರಳವಾಗಿದೆ.
ಒಂದು ಬೇಡಿಕೆಯನ್ನು ಮಿತಗೊಳಿಸುವ ಸನ್ನಿವೇಶದಲ್ಲಿ, ಅಂದರೆ ನಿರುದ್ಯೋಗ ಮತ್ತು ಸ್ಥಾಪಿತ ಸಾಮರ್ಥ್ಯಗಳು ಬಳಕೆಯಾಗದೆ ಉಳಿದ ಸನ್ನಿವೇಶದಲ್ಲಿ, ವಿತ್ತೀಯ ಕೊರತೆಯಿಂದಾಗಿ ಅರ್ಥವ್ಯವಸ್ಥೆಯ ಮೇಲೆ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ವಕ್ತಾರರು ಹೇಳುವ ಹಾಗೆ, ಯಾವುದೇ ಅಡ್ಡ-ಪರಿಣಾಮಗಳು ಬೀಳುವುದಿಲ್ಲ: ವಿತ್ತೀಯ ಕೊರತೆಯ ಹೆಚ್ಚಳದಿಂದಾಗಿ ಖಾಸಗಿ ಹೂಡಿಕೆಗೆ ಜಾಗವಿಲ್ಲದಂತಾಗಿ ಅದು ಹೊರಹೋಗುವ ಪರಿಸ್ಥಿತಿಯೂ ಉಂಟಾಗುವುದಿಲ್ಲ, ಮತ್ತು, ಅದರಿಂದ ಹಣದುಬ್ಬರವೂ ಉಂಟಾಗುವುದಿಲ್ಲ.
ಏಕೆಂದರೆ, ವಾಸ್ತವವಾಗಿ ಉಳಿತಾಯಗಳ ಒಂದು ನಿಗದಿತ ಭಂಡಾರ ಎಂಬುದೇನೂ ಇರುವುದಿಲ್ಲ, ಆದ್ದರಿಂದ ಖಾಸಗಿ ಹೂಡಿಕೆಗೆ ಜಾಗವಿಲ್ಲದಾಗುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ವಿತ್ತೀಯ ಕೊರತೆಯ ಹೆಚ್ಚಳದಿಂದಾಗಿಯೇ (ಅಧಿಕ ಖರ್ಚುಗಳ ಮೂಲಕ) ಅಧಿಕವಾಗಿ ಬೇಡಿಕೆ ಸೃಷ್ಟಿಯಾಗುತ್ತದೆ. ಪರಿಣಾಮವಾಗಿ ವರಮಾನಗಳು ಹೆಚ್ಚುವುದರಿಂದ ಉಳಿತಾಯಗಳೂ ಹೆಚ್ಚುತ್ತವೆ.
ವಿತ್ತೀಯ ಕೊರತೆಯಿಂದಾಗಿ ಹಣದುಬ್ಬರ ಉಂಟಾಗುವುದಿಲ್ಲ, ಏಕೆಂದರೆ, ನಿರುದ್ಯೋಗ ಮತ್ತು ಸ್ಥಾಪಿತ ಸಾಮರ್ಥ್ಯಗಳು ಬಳಕೆಯಾಗದೆ ಉಳಿದಿರುತ್ತವೆ. ಬೇಡಿಕೆ ಅಧಿಕವಾಗಿ ಸೃಷ್ಟಿಯಾದಾಗ ವಸ್ತುಗಳ ಬೆಲೆ ಏರಿಕೆಯಾಗುವುದರ ಬದಲು ವಸ್ತುಗಳ ಉತ್ಪಾದನೆ ಹೆಚ್ಚುತ್ತದೆ.
ಒಂದು ವೇಳೆ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ವಕ್ತಾರರು ಹೇಳುವ ಹಾಗೆ, ವಿತ್ತೀಯ ಕೊರತೆಯಿಂದಾಗಿ ಅರ್ಥವ್ಯವಸ್ಥೆಯ ಮೇಲೆ ಅಡ್ಡ-ಪರಿಣಾಮಗಳು ಬೀಳುತ್ತವೆ ಎಂದುಕೊಂಡರೂ ಸಹ, ಸಾರ್ವಜನಿಕ ಸಂಸ್ಥೆಗಳ ಮಾರಾಟ ಹುಟ್ಟುವಳಿಯು (ಹಣ) ಅಂತಹ ಅಡ್ಡ-ಪರಿಣಾಮಗಳನ್ನೇನೂ ನಿವಾರಿಸುವುದಿಲ್ಲ.
ಒಂದು ವೇಳೆ, ಉಳಿತಾಯಗಳ ಒಂದು ನಿಗದಿತ ಭಂಡಾರ ಇದೆ ಎಂದುಕೊಂಡರೂ ಸಹ, ಉದಾಹರಣೆಯಾಗಿ ಹೇಳುವುದಾದರೆ, ಆ ಉಳಿತಾಯಗಳ ನಿಧಿಯಿಂದ ಸರ್ಕಾರವೇ ಹೆಚ್ಚು ಸಾಲ ಪಡೆದುಕೊಂಡರೆ, ಆಗ, ಖಾಸಗಿ ವಲಯಕ್ಕೆ ಹೂಡಿಕೆ ಮಾಡುವ ಹಣದ ಲಭ್ಯತೆ ಕಡಿಮೆಯಾಗಿ, ಅವನ್ನು ಹೊರತಳ್ಳುವಂತಾಗುತ್ತದೆ ಎಂದಿಟ್ಟುಕೊಂಡರೂ ಕೂಡ, ಸಾರ್ವಜನಿಕ ಸಂಸ್ಥೆಗಳ ಮಾರಾಟ ಹುಟ್ಟುವಳಿಯಿಂದ (ಹಣದಿಂದ) ಉಳಿತಾಯಗಳ ನಿಗದಿತ ನಿಧಿ ಎಳ್ಳಷ್ಟೂ ಹೆಚ್ಚುವುದಿಲ್ಲ.
ಅದೇ ರೀತಿಯಲ್ಲಿ, ವಿತ್ತೀಯ ಕೊರತೆಯ ಹೆಚ್ಚಳದಿಂದಾಗಿ ಅಧಿಕ ಬೇಡಿಕೆ ಸೃಷ್ಟಿಯಾಗುವ ಕಾರಣದಿಂದ ಹಣದುಬ್ಬರ ಉಂಟಾಗುತ್ತದೆ ಎಂದುಕೊಂಡರೂ ಸಹ, ಆಗ, ಸಾರ್ವಜನಿಕ ಸಂಸ್ಥೆಗಳ ಮಾರಾಟವು ಈ ಬೇಡಿಕೆ ಅಧಿಕವಾಗಿ ಸೃಷ್ಟಿಯಾಗುವುದನ್ನು ಎಳ್ಳಷ್ಟೂ ತಗ್ಗಿಸುವುದಿಲ್ಲ. ಏಕೆಂದರೆ, ಈ ಸಾರ್ವಜನಿಕ ಸಂಸ್ಥೆಗಳ ಕೊಳ್ಳುಗರು ತಮಗೆ ಬೇಕಾಗುವ ವಸ್ತುಗಳು ಮತ್ತು ಸೇವೆಗಳ ಮೇಲೆ ತಮ್ಮ ಬೇಡಿಕೆಯನ್ನು ತಗ್ಗಿಸುವುದಿಲ್ಲ.
ಈ ರೀತಿಯಲ್ಲಿ, ಸಾರ್ವಜನಿಕ ಸಂಸ್ಥೆಗಳ ಮಾರಾಟವು, ವಾಸ್ತವವಾಗಿ, ವಿತ್ತೀಯ ಕೊರತೆಯನ್ನು ಮುಕ್ತಾಯಗೊಳಿಸುವುದಿಲ್ಲ. ಆದಾಗ್ಯೂ, ವಿತ್ತೀಯ ಕೊರತೆಯನ್ನು ಖಂಡ ತುಂಡವಾಗಿ ವಿರೋಧಿಸುವ ಹಣಕಾಸು ಬಂಡವಾಳವು ಸಾರ್ವಜನಿಕ ಸಂಸ್ಥೆಗಳ ಮಾರಾಟವು ವಿತ್ತೀಯ ಕೊರತೆಯನ್ನು ತಗ್ಗಿಸುವ ಒಂದು ಸಾಧನ ಎಂದು ಸಂಪೂರ್ಣವಾಗಿ ಸಮರ್ಥಿಸುತ್ತದೆ. ಅಂದರೆ, ಹಣಕಾಸು ಬಂಡವಾಳವು ಸಾರ್ವಜನಿಕ ಸಂಸ್ಥೆಗಳ ಮಾರಾಟವನ್ನು ಸರ್ಕಾರ ತೆರಿಗೆ ವಿಧಿಸುವ ಕ್ರಮಕ್ಕೆ ಸರಿಸಮನಾದ ಕ್ರಮವೆಂದು ಬಗೆಯುತ್ತದೆ.
ಅರ್ಥಶಾಸ್ತ್ರದಲ್ಲಿ ಪರಿಚಲನೆ(flow) ಮತ್ತು ಸಂಗ್ರಹ (stok)ಗಳ ನಡುವಿನ ಭಿನ್ನತೆಯನ್ನು ಗುರುತಿಸಲಾಗುತ್ತದೆ. ಸರ್ಕಾರದ ವರಮಾನ(ಒಂದು ಪರಿಚಲನೆ) ಮತ್ತು ಖರ್ಚುಗಳ(ಇನ್ನೊಂದು ಪರಿಚಲನೆ) ನಡುವಿನ ವ್ಯತ್ಯಾಸವೇ ವಿತ್ತೀಯ ಕೊರತೆ.
ತೆರಿಗೆ ಆದಾಯ(ಪರಿಚಲನೆ) ಹೆಚ್ಚಿಸುವ ಮೂಲಕ ಅಥವಾ ಖರ್ಚುಗಳನ್ನು(ಪರಿಚಲನೆ) ತಗ್ಗಿಸುವ ಮೂಲಕ, ಅಂದರೆ, ಈ ಎರಡು ಪರಿಚಲನೆಯ ಅಂಶಗಳನ್ನು ಸಮನ್ವಯಗೊಳಿಸುವ ಮೂಲಕ ವಿತ್ತೀಯ ಕೊರತೆಯನ್ನು ಮುಕ್ತಾಯಗೊಳಿಸಬಹುದು.
ಇನ್ನೊಂದೆಡೆಯಲ್ಲಿ, ಸಾರ್ವಜನಿಕ ಸಂಸ್ಥೆಗಳ ಆಸ್ತಿ ಮಾರಾಟದ ಹುಟ್ಟುವಳಿಯು (ಹಣ), ಆಯ-ವ್ಯಯ ಪಟ್ಟಿಯಲ್ಲಿ(balance sheet) ಒಂದು ಸಂಗ್ರಹ ಎಂದು ಸೂಚಿತವಾಗುತ್ತದೆ. ಸಂಗ್ರಹ ಸಂಬಂಧಿತ ಈ ಆಸ್ತಿಯ ವ್ಯವಹಾರವು, ತೆರಿಗೆ ಅಥವಾ ಖರ್ಚುಗಳ ಪರಿಚಲನೆಯ ಏರು ಪೇರುಗಳಿಂದ ಉಂಟಾಗುವ ಯಾವ ಅಡ್ಡ-ಪರಿಣಾಮಗಳನ್ನು ನಿವಾರಿಸುವುದಿಲ್ಲ.
ಆದರೂ, ವಿತ್ತೀಯ ಕೊರತೆಯನ್ನು ಮುಕ್ತಾಯಗೊಳಿಸಲು ಸಾರ್ವಜನಿಕ ಸಂಸ್ಥೆಗಳ ಮಾರಾಟದ ಮೂಲಕ ಬರುವ ಹಣವು ಒಂದು ನ್ಯಾಯ ಸಮ್ಮತ ಸಾಧನವೆಂದು ಐಎಂಎಫ್ ಮತ್ತು ಇತರ ಸಂಸ್ಥೆಗಳು ಬಗೆಯುತ್ತವೆ. ಇದು ಅವರ ಅಪ್ರಮಾಣಿಕತನವನ್ನು ತೋರಿಸುತ್ತದೆ. ಅವರ ಬೌದ್ಧಿಕ ನಿಲುವು ವೈಜ್ಞಾನಿಕ ಆಲೋಚನಾ ಕ್ರಮಕ್ಕೆ ಅಧೀನವಾಗಿರುವುದರ ಬದಲು ಸಮಯ ಸಾಧಕ ಬಯಕೆಗಳಿಂದ ಕೂಡಿದ ಖಾಸಗೀಕರಣ ಸಿದ್ಧಾಂತಕ್ಕೆ ಅಧೀನವಾಗಿದೆ.
ಈ ಬೌದ್ಧಿಕ ಅಪ್ರಾಮಾಣಿಕತೆ ಅಲ್ಲಿಗೇ ನಿಲ್ಲುವುದಿಲ್ಲ. ಒಂದು ಖಾಸಗಿ ಕಂಪೆನಿಯು ಸಾರ್ವಜನಿಕ ಸಂಸ್ಥೆಯೊಂದನ್ನು ಕೊಳ್ಳುವಾಗ ಯಾರೊ ಒಬ್ಬ ಕಿರಾಣಿ ಅಂಗಡಿಯವನು ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿಕೊಂಡ ಹಣದಿಂದ ಒಂದು ಆಸ್ತಿ ಕೊಳ್ಳುವ ರೀತಿಯಲ್ಲಿ ಹಣ ಹೊಂದಿಸಿಕೊಳ್ಳುವುದಿಲ್ಲ. ಖಾಸಗಿ ಕಂಪೆನಿಯು ಆಸ್ತಿ ಕೊಳ್ಳುವಾಗ ಸಾಲ ಮಾಡುತ್ತದೆ ಅಥವಾ ಬೇರೆ ಕೆಲವು ಸ್ವತ್ತುಗಳನ್ನು ಕೊಳ್ಳುವುದನ್ನು ಮುಂದೂಡುತ್ತದೆ.
ಆ ಕಂಪೆನಿಯ ಆಯ-ವ್ಯಯ ಪಟ್ಟಿಯಲ್ಲಿ ಈ ಎಲ್ಲ ವ್ಯವಹಾರಗಳೂ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ, ಸರ್ಕಾರದ ವಿತ್ತೀಯ ಕೊರತೆ 100ರೂ ಗಳಷ್ಟಿದೆ ಮತ್ತು ಅದನ್ನು ಸರಿದೂಗಿಕೊಳ್ಳಲು ಸರ್ಕಾರವು 100ರೂ ಗಳನ್ನು ಬ್ಯಾಂಕಿನಿಂದ ಸಾಲ ಪಡೆಯುತ್ತದೆ. ಆದರೆ, ಬ್ಯಾಂಕಿನಿಂದ ಸಾಲ ಪಡೆಯುವ ಬದಲು ಸರ್ಕಾರವು 100ರೂ ಬೆಲೆ ಬಾಳುವ ತನ್ನ ಆಸ್ತಿಯೊಂದನ್ನು ಮಾರುತ್ತದೆ.
ಆದರೆ, ಆ ಆಸ್ತಿಯನ್ನು ಕೊಳ್ಳುವ ಖಾಸಗಿ ಕಂಪೆನಿಯು ೧೦೦ರೂ ಗಳನ್ನು ಬ್ಯಾಂಕಿನಿಂದಲೇ ಸಾಲ ಪಡೆಯುತ್ತದೆ. ಇಂತಹ ಒಂದು ಸನ್ನಿವೇಶದಲ್ಲಿ, ಸರ್ಕಾರವು ವಿತ್ತೀಯ ಕೊರತೆಗೆ ಒಳಗಾದರೆ ಅರ್ಥವ್ಯವಸ್ಥೆಗೆ ಕೇಡಾಗುತ್ತದೆ; ಆದರೆ, ಸಾರ್ವಜನಿಕ ಸಂಸ್ಥೆಗಳನ್ನು ಮಾರುವುದು ಸರಿಯಾಗುತ್ತದೆ ಎಂದು ಹೇಳುವುದು ಆಷಾಢಭೂತಿತನವಾಗುತ್ತದೆ.
ತನ್ನ ಖರ್ಚುಗಳನ್ನು ಸರಿದೂಗಿಸಿಕೊಳ್ಳಲು ಸರ್ಕಾರ 100ರೂ ಗಳನ್ನು ಸಾಲ ಮಾಡಿದರೆ ಅರ್ಥವ್ಯವಸ್ಥೆಗೆ ಕೇಡಾಗುತ್ತದೆ. ಸರ್ಕಾರದ ಆಸ್ತಿ ಕೊಳ್ಳುವವನು ಅದೇ 100ರೂ ಗಳನ್ನು ಬ್ಯಾಂಕಿನಿಂದ ಸಾಲ ಪಡೆದರೆ ಅರ್ಥವ್ಯವಸ್ಥೆಯು ಚೆನ್ನಾಗಿರುತ್ತದೆ ಎಂದು ಹೇಳಿದಂತಾಗುತ್ತದೆ! ಈ ವಾದದಲ್ಲಿ ಯಾವ ಆರ್ಥಿಕ ತರ್ಕಾಧಾರವೂ ಇಲ್ಲ.
ಈ ವಿಷಯವನ್ನು ಇನ್ನೊಂದು ರೀತಿಯಲ್ಲೂ ನೋಡಬಹುದು. ವಿತ್ತೀಯ ಕೊರತೆಯಿಂದ ಸರ್ಕಾರದ ಸಾಲ ಹೆಚ್ಚುತ್ತದೆ. ಆ ಸಾಲವನ್ನು ಸರ್ಕಾರವು ಸಾಲ ಪತ್ರಗಳ ಮಾರಾಟದ ಮೂಲಕ ಪಡೆಯುತ್ತದೆ. ಸಾರ್ವಜನಿಕ ಸಂಸ್ಥೆಗಳ ಷೇರುಗಳನ್ನು ಖಾಸಗಿಯವರಿಗೆ ಮಾರುವ ಮೂಲಕ ಸರ್ಕಾರದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತದೆ.
ಖಾಸಗೀಕರಣವು ಅಪಾಯಕಾರಿಯಲ್ಲ. ಆದರೆ, ವಿತ್ತೀಯ ಕೊರತೆ ಅಪಾಯಕಾರಿ ಎಂಬ ವಾದವು ಸರ್ಕಾರ ತನ್ನ ಷೇರುಗಳನ್ನು ಖಾಸಗಿಯವರಿಗೆ ಮಾರಿದರೆ ಅದು ಅಪಾಯಕಾರಿಯಲ್ಲ; ಸರ್ಕಾರವು ಸಾಲ ಪತ್ರಗಳನ್ನು (ಬಾಂಡುಗಳು) ಮಾರುವ ಕ್ರಮ ಮಾತ್ರ ಅಪಾಯಕಾರಿ ಎಂದು ಹೇಳಿದಂತಾಗುತ್ತದೆ. ಇದೊಂದು ಸಮರ್ಥನೀಯವೇ ಅಲ್ಲದ ವಾದ. ಇದೊಂದು ಖಾಸಗೀಕರಣವನ್ನು ಜಾರಿಗೊಳಿಸುವ ತಂತ್ರವಷ್ಟೇ.
ಬ್ಯಾಂಕ್ ಸಾಲ ಮತ್ತು ಇತರ ಸೌಲಭ್ಯಗಳು ದೊಡ್ಡ ಬಂಡವಾಳಶಾಹಿಗಳಿಗೆ ಮಾತ್ರ ಲಭಿಸುತ್ತಿದ್ದ ಪರಿಸ್ಥಿತಿಗೆ ತಡೆ ಒಡ್ಡುವ ಉದ್ದೇಶದಿಂದ ಸಾರ್ವಜನಿಕ ವಲಯವನ್ನು ಹುಟ್ಟಿಹಾಕಲಾಗಿತ್ತು. ಸಾಮ್ರಾಜ್ಯಶಾಹಿಗಳ ಹಿಡಿತದಿಂದ ಅರ್ಥವ್ಯವಸ್ಥೆಯನ್ನು ವಿಮುಕ್ತಿಗೊಳಿಸುವ ಅಜೆಂಡಾದ ಭಾಗವಾಗಿ ಸಾರ್ವಜನಿಕ ವಲಯವನ್ನು ಹುಟ್ಟಿಹಾಕಲಾಗಿತ್ತು.
ಆದರೆ, ನವ ಉದಾರ ಆಳ್ವಿಕೆಯಲ್ಲಿ ಸರ್ಕಾರಗಳು ದೊಡ್ಡ ಬಂಡವಾಳಶಾಹಿಗಳ ಓಲೈಕೆಯಲ್ಲಿ ತೊಡಗಿವೆ. ಆದಾಗ್ಯೂ, ತಮ್ಮ ಏಕಸ್ವಾಮ್ಯದ ಶಕ್ತಿಯನ್ನು ಬಳಸಿಕೊಂಡು ದೇಶದ ಸಂಪನ್ಮೂಲಗಳನ್ನು ಕಬಳಿಸುವ ದೊಡ್ಡ ಬಂಡವಾಳಶಾಹಿಗಳ ಪ್ರಭಾವವನ್ನು ಸೀಮಿತಗೊಳಿಸುವಲ್ಲಿ ಸಾರ್ವಜನಿಕ ವಲಯವು ಒಂದು ಪ್ರಮುಖ ಪಾತ್ರ ವಹಿಸಬಲ್ಲದು.
ದೇಶದ ಹಿತಾಸಕ್ತಿಗಳ ಬಗ್ಗೆ ಕಾತರ ಉಳ್ಳ ಯಾವುದೇ ಒಂದು ಸರ್ಕಾರವು, ಅದು ನವ ಉದಾರವಾದದ ಬಲೆಯಲ್ಲಿ ಸಿಕ್ಕಿದ್ದರೂ ಸಹ, ದೇಶದ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ, ವಿದೇಶಿ ಮತ್ತು ದೇಶೀಯ ಏಕಸ್ವಾಮ್ಯ ಬಂಡವಾಳವು ಕೊಳ್ಳೆ ಹೊಡೆಯುತ್ತಿರುವುದರ ವಿರುದ್ಧವಾಗಿ, ಸಾರ್ವಜನಿಕ ವಲಯವನ್ನು ಪೋಷಿಸುತ್ತದೆ.
ಆದರೆ, ತಮ್ಮ ಟೀಕಾಕಾರರನ್ನು ರಾಷ್ಟ್ರ-ವಿರೋಧಿ ಎಂದು ಆಪಾದನೆ ಹೊರಿಸುವ ನಮ್ಮ ಹಿಂದುತ್ವವಾದಿಗಳಿಗೆ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವಿದೇಶಿ ಮತ್ತು ದೇಶೀಯ ಏಕಸ್ವಾಮ್ಯ ಬಂಡವಾಳದ ಹಿತ ರಕ್ಷಣೆ ಮಾಡುವುದೇ ಒಂದು ಪ್ರಿಯವಾದ ಕೆಲಸ. ಸಾಮ್ರಾಜ್ಯಶಾಹಿಗಳ ಭೀಕರ ವಿರೋಧವನ್ನು ಲೆಕ್ಕಿಸದೆ ಸ್ಥಾಪಿಸಿದ ಸಾರ್ವಜನಿಕ ವಲಯದ ನಾಶದ ಬಗ್ಗೆ ಅವರಿಗೆ ಸ್ವಲ್ಪವೂ ವ್ಯಥೆ ಇಲ್ಲ.
ಈ ಎಲ್ಲ ಅಂಶಗಳಿಂದ ನವ ಉದಾರ ವಿತ್ತೀಯ ನೀತಿಯ ಕಾರ್ಯವೈಖರಿ ಹೇಗಿದೆ ಎಂಬುದು ಸ್ಪಷ್ಟವಾಗುತ್ತದೆ. ನವ ಉದಾರವಾದವು ವಿತ್ತೀಯ ನೀತಿಯನ್ನು ಆವರ್ತ-ವಿರೋಧಿಯಾಗಿಸುವ ಬದಲು ಆವರ್ತ-ಪರವಾಗಿಸುತ್ತದೆ. ಅರ್ಥವ್ಯವಸ್ಥೆಯು ಇಳಿಮುಖವಾದಾಗ ಆದಾಯಗಳೂ ಇಳಿಯುತ್ತವೆ.
ಅಂತಹ ಪರಿಸ್ಥಿತಿಯಲ್ಲಿ ತನ್ನ ಖರ್ಚು ವೆಚ್ಚಗಳನ್ನು ಭರಿಸಲು ಕೇಂದ್ರ ಸರ್ಕಾರಕ್ಕೆ ದೊಡ್ಡ ದೊಡ್ಡ ಬಂಡವಾಳಶಾಹಿಗಳ ಮೇಲೆ ತೆರಿಗೆ ಹೇರಲೂ ಆಗುತ್ತಿಲ್ಲ; ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳಲೂ ಆಗುತ್ತಿಲ್ಲ. ಸರ್ಕಾರವು ತನ್ನ ಖರ್ಚು ವೆಚ್ಚಗಳನ್ನು ಕಡಿತಗೊಳಿಸಿದ್ದರೆ ಉಂಟಾಗುತ್ತಿದ್ದ ತೊಂದರೆಗಳಿಗೆ ಹೋಲಿಸಿದರೆ, ಬಂಡವಾಳಶಾಹಿಗಳ ಮೇಲೆ ತೆರಿಗೆ ಹೇರಿದ್ದರೆ, ಅವರ ಲಾಭಕ್ಕೆ ಯಾವ ಧಕ್ಕೆಯೂ ಆಗುತ್ತಿರಲಿಲ್ಲ.
ತನ್ನ ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುವುದರ ಬದಲಾಗಿ ಕೇಂದ್ರ ಸರ್ಕಾರವು ರಾಜ್ಯಗಳನ್ನು ಹಿಂಡುತ್ತಿರುವ ಕ್ರಮವು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಒಡ್ಡುತ್ತದೆ. ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸುವ ಕ್ರಮವು ದೇಶವನ್ನು ವಿದೇಶಿ ಮತ್ತು ದೇಶೀಯ ಏಕಸ್ವಾಮ್ಯ ಬಂಡವಾಳಶಾಹಿಗಳು ಕೊಳ್ಳೆ ಹೊಡೆಯಲು ಅವಕಾಶ ಕಲ್ಪಿಸುತ್ತದೆ.
(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

-
ದಿನದ ಸುದ್ದಿ4 days agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ3 days agoರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
-
ದಿನದ ಸುದ್ದಿ3 days agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ3 days agoಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
-
ದಿನದ ಸುದ್ದಿ4 days agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ4 days ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ4 days agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್
-
ದಿನದ ಸುದ್ದಿ4 days agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ


