Connect with us

ದಿನದ ಸುದ್ದಿ

ಲೋಕಾಯುಕ್ತದಲ್ಲಿರುವ ಮೂಡಾ ಪ್ರಕರಣದ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ಮುಡಾ ಪ್ರಕರಣದ ತನಿಖೆ ಪ್ರಸ್ತುತ ಲೋಕಾಯುಕ್ತದಲ್ಲಿದ್ದು, ತಾನು ಅದರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ತಮ್ಮ ನಿವಾಸದಲ್ಲಿಂದು ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮುಡಾ ಪ್ರಕರಣ ಸಂಬಂಧ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಅಪರಾಧ ಅಥವಾ ಇನ್ನಿತರ ಪ್ರಕರಣಗಳಿಗೆ ಕಾನೂನು ಪ್ರಕ್ರಿಯೆ ಎಂಬುವುದು ಇರುತ್ತದೆ. ತನ್ನ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.

ನಾಡಹಬ್ಬ ದಸರಾ ಮಹೋತ್ಸವಕ್ಕೆ ಕೇವಲ 3 ದಿನಗಳು ಬಾಕಿ ಇದ್ದು, ಸಿದ್ಧತೆಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಕ್ಟೋಬರ್ 2 ರಂದು ಮೈಸೂರಿಗೆ ಆಗಮಿಸಿ ದಸರಾ ಮಹೋತ್ಸವದ ಸಕಲ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಜನಸಿರಿ ಫೌಂಡೇಶನ್ ವತಿಯಿಂದ ಕವಿಗಳ ಕಲರವ

Published

on

ಸುದ್ದಿದಿನ,ಬೆಂಗಳೂರು:ಫೆ 10 ರಂದು ಜನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ 21 ನಿಮಿಷಗಳಲ್ಲಿ ರೈತರ ಕುರಿತು ಕವನ ರಚಿಸುವ ಬೃಹತ್ ಕಾರ್ಯ ಕ್ರಮವನ್ನು ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಉದ್ಘಾಟಿಸಿದರು.

ರಾಜ್ಯದ ನಾನಾ ಭಾಗಗಳಿಂದ ಸುಮಾರು 650 ಕ್ಕಿಂತ ಹೆಚ್ಚು ಕವಿಗಳು ಆಗಮಿಸಿ 21 ನಿಮಿಷಗಳಲ್ಲಿ ರೈತರ ಕುರಿತು ಕವನ ರಚಿಸಿದರು,ಇದೇ ಸಂಧರ್ಭದಲ್ಲಿ ಅನೇಕ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಟ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಮಾವಳ್ಳಿ ಶಂಕರ್,ಮಿಮಿಕ್ರಿ ಗೋಪಿ, ಜನಸಿರಿ ಫೌಂಡೇಶನ್ ಮುಖ್ಯಸ್ಥರಾದ ನಾಗಲೇಖ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತುಂಬಿದ ಕೊಡ ತುಳುಕಿತಲೇ ಪರಾಕ್..!

Published

on

  • ಗಿರೀಶ್ ಕುಮಾರ್ ಗೌಡ, ಬಳ್ಳಾರಿ

ತುಂಬಿದ ಕೊಡ ತುಳುಕಿತಲೇ ಪರಾಕ್” ಎಂದು ಕಾರ್ಣಿಕ ನುಡಿದ ಗೊರವಯ್ಯ, ಅದು ಮೈಲಾರ ಕೋಟ್ಯಾಂತರ ಭಕ್ತರ ಆರಾಧ್ಯದೈವ ಮೈಲಾರ ಲಿಂಗನ ಪುಣ್ಯ ಕ್ಷೇತ್ರ. ಈ ಪುಣ್ಯ ಕ್ಷೇತ್ರ ಪ್ರತಿ ವರ್ಷ ಕಾರ್ಣಿಕ ನುಡಿಗೆ ರಾಜ್ಯಾದ್ಯಂತ ಫೇಮಸ್. ನುಡಿ ಆಲಿಸಲು ಲಕ್ಷಾಂತರ ಜನ್ರು ಅಲ್ಲಿಗೆ ಆಗಮಿಸ್ತಾರೆ. ಇನ್ನು 18 ಅಡಿ ಬಿಲ್ಲನ್ನ ಏರಿ ಕಾರ್ಣಿಕ ನುಡಿ ನುಡಿಯುವ ಗೊರವಯ್ಯನ ನುಡಿಯನ್ನ ಮಳೆ, ಬೆಳೆ, ರಾಜಕೀಯ ಹೀಗೆ ಆಗು ಹೋಗಗಳ ಬಗ್ಗೆ ವಿಮರ್ಶೆ ಮಾಡ್ತಾರೆ ಹಾಗಾದ್ರೆ ಈ ವರ್ಷ ನುಡಿದ ಕಾರ್ಣಿಕ ನುಡಿ ಏನು…? ಅಂತಿರಾ ಈ ಸ್ಟೋರಿ ಓದಿ

ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ಭವಿಷ್ಯ ನುಡಿದ ಗೊರವಯ್ಯ ಸದ್ದಲೇ ಎಂದು ಭವಿಷ್ಯವಾಣಿ ನುಡಿದ ಕಾರ್ಣಿಕದ ಗೊರವಯ್ಯ ರಾಮಣ್ಣ , 18 ಅಡಿ ಬಿಲ್ಲನ್ನು ಏರಿ ಕಾರ್ಣಿಕ ನುಡಿದು ಕೆಳಗೆ ಬಿದ್ದ ಗೊರವಯ್ಯ.

ತುಂಬಿದ ಕೊಡ ತುಳುಕಿತಲೇ ಪರಾಕ್… ಹೌದು ಇದು ಈ ವರ್ಷದ ಶ್ರೀ ಕ್ಷೇತ್ರ ಮೈಲಾರದ ಕಾರ್ಣಿಕ ( 2025 ರ ವರ್ಷ ಭವಿಷ್ಯ) ಅದು ಜಿಲ್ಲೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ. ಮೈಲಾರದ ಮೈಲಾರ ಲೀಂಗೆಶ್ವರನ ಜಾತ್ರೆ ಪ್ರತಿ ವರ್ಷ ನಡೆಯುತ್ತದೆ. ಭರತ ಹುಣ್ಣಿಮೆಯ ಬಳಿಕ ಶ್ರೀ ಕ್ಷೇತ್ರ ಮೈಲಾರದ ಡಂಕನಮರಡಿಯಲ್ಲಿ ಕಾರ್ಣಿಕ ನುಡಿಯನ್ನ 11 ದಿನಗಳ ಕಾಲ ಉಪವಾಸ ವಿದ್ದು ಭಕ್ತಿ ಭಾವ ಮಡಿ, 18 ಅಡಿಯ ಬಿಲ್ಲನ್ನ ಏರಿ ಕಾರ್ಣಿಕ ನುಡಿ ಭವಿಷ್ಯ ನುಡಿದ ಗೊರವಯ್ಯ ರಾಮಣ್ಣ, ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ಭವಿಷ್ಯವಾಣಿ ನುಡಿದಿದ್ದಾರೆ‌ ಸಂಪಾದೀತಲೇ ಪರಾಕ್.

|ವೆಂಕಪ್ಪಯ್ಯ ಒಡೆಯರ್, ಮೈಲಾರ ಕ್ಷೇತ್ರದ ಧರ್ಮದರ್ಶಿ

ಈ ಸಮಯದಲ್ಲಿ ಹೂವಿನಹಡಗಲಿ ಶಾಸಕ ಕೃಷ್ಣ ನಾಯಕ್
ಮಾತನಾಡಿದ ಅವರು ತುಂಬಿದ ಕೊಡಾ ತುಳುಕಿತಲೇ ಪರಾಕ್ ‌ಎಂಬ ಎರಡೇ ಶಬ್ದದಲ್ಲಿ ಈ ವರ್ಷದ ದೈವವಾಣಿ ಹೇಳಿದ ಗೊರವಯ್ಯ ರಾಮಣ್ಣ, ಗೊರವಯ್ಯನ ಹೇಳಿಕೆಯಿಂದ ನೆರೆದಿದ್ದ ಲಕ್ಷಾಂತರ ಜನರಿಂದ ವ್ಯಕ್ತವಾದ ಹರ್ಷಾದ್ಘೋರ ಮುಗಿಲು ಮುಟ್ಟಿತು.ಈ ಬಾರಿ ಉತ್ತಮ ಮಳೆ,ಬೆಳೆಯಾಗಲಿದೆ.‌ ದೇಶ ಸುಭಿಕ್ಷೆಯಾಗಿರಲಿದೆ ಎಂದು ಅರ್ಥೈಸಲಾಗುತ್ತಿದೆ.

ಇದಕ್ಕೂ ಮೊದಲು ಮೈಲಾರಲಿಂಗೇಶ್ವರನ ದೇವಸ್ಥಾನದಿಂದ ಶ್ರೀ ವೆಂಕಪ್ಪಯ್ಯ ಒಡೆಯರ್ ಕುದುರೆಯನ್ನೇರಿ ಡೆಂಕನಮರಡಿ ಪ್ರದೇಶದವರೆಗೆ ಮೆರವಣಿ ಮೂಲಕ ಸಾಗಿ ಬಂದು ಕಾರ್ಣಿಕ ನುಡಿಯುವ ಸ್ಥಳದ ಸುತ್ತ ಪ್ರದಕ್ಷಿಣೆ ಹಾಕಿ, ಭಕ್ತರಿಗೆ ಆಶೀರ್ವಾದ ನೀಡಿದರು. ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ ಲಕ್ಷಾಂತ ಭಕ್ತರು ನೆರೆದಿದ್ದರು.

ಒಟ್ಟಾರೆ ಹೇಳುವುದಾದರೆ, ಈ ಬಾರಿಯ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವು ದೇಶ ಸುಭಿಕ್ಷವಾಗಿರಲಿದೆ, ಮಳೆ ಬೆಳೆ ಚೆನ್ನಾಗಿ ಆಗಲಿದೆ.. ರೈತರು ಉತ್ತಮ ರೀತಿಯಲ್ಲಿ ಇರ್ತಾರೆ ಅನ್ನೋ ಸಂದೇಶ ನೀಡಿದಂತಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ

Published

on

ಸುದ್ದಿದಿನ,ದಾವಣಗೆರೆ:ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ಇತ್ತೀಚಿಗೆ ನಡೆದ ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂ ಡಿಪ್ಲೋಮೋ ಕಾಲೇಜಿನ ವಿವಿಧ ವಿಭಾಗಗಳಿಂದ 44 ಅಂತಿಮ ವರ್ಷದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಒಟ್ಟು 44 ಅಂತಿಮ ವರ್ಷದ ವಿದ್ಯಾರ್ಥಿಗಳು ನ್ಯೂಜೈಸಾ ಟೆಕ್ನಾಲಜಿಸ್ ನಲ್ಲಿ ಉದ್ಯೋಗವಕಾಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ತೇಜಸ್ವಿ ಕಟ್ಟಿಮನಿ ಟಿ.ಆರ್. ತಿಳಿಸಿದ್ದಾರೆ.

ಆಯ್ಕೆಯಾದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಜಿಎಂ ಕಾಲೇಜಿನ ಚೇರ್ಮನ್ ಆದ ಜಿ.ಎಂ. ಲಿಂಗರಾಜು, ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂಬಿ, ಕಾಲೇಜಿನ ಆಡಳಿತ ಅಧಿಕಾರಿಗಳಾದ ವೈ.ಯು. ಸುಭಾಷ್ ಚಂದ್ರ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಬಿ.ಎನ್. ಶ್ರೀಧರ್ ಅಭಿನಂದನೆ ಸಲ್ಲಿಸಿದ್ದು, 44 ವಿದ್ಯಾರ್ಥಿಗಳು ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಹರುಷ ವ್ಯಕ್ತಪಡಿಸಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದು, ಈ ಸಂಭ್ರಮದಲ್ಲಿ ಜಿಎಂ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಸಿ. ನಿಂಗರಾಜು, ಡಿಪ್ಲೋಮೋದ ತರಬೇತಿ ಮತ್ತು ಉದ್ಯೋಗ ವಿಭಾಗದ ಸಂಯೋಜಕರಾದ ಯಾಸ್ಮಿನ್ ಬೇಗಮ್, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಕೆ.ಬಿ. ಜನಾರ್ಧನ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸಿ.ಎನ್. ಸಂದೀಪ್, ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾದ ಎಂ. ಪ್ರವೀಣ್ ಕುಮಾರ್, ಕೆ. ಗಿರಿಜಾ ಸೇರಿದಂತೆ ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending