ಸಿನಿ ಸುದ್ದಿ
ಸ್ನೇಹ, ಪ್ರೀತಿಗಿಲ್ಲ ಅಂತರದ ಭೇದಭಾವ
ಸುದ್ದಿದಿನ ಡೆಸ್ಕ್ “ಅಂಕಲ್” ಕಾಲಿವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಮಮ್ಮುಟ್ಟಿ ನಟನೆಯ ಚಿತ್ರ. ಪ್ರಸ್ತುತ ಸಾಮಾಜಿಕ ವ್ಯವಸ್ಥೆ ಪ್ರತಿಬಿಂಬಿಸುವ ಉತ್ತಮ ನಿದರ್ಶನದ ಚಿತ್ರ. ಈ ಚಿತ್ರದಲ್ಲಿ ಒಬ್ಬ ಯುವತಿ ತನ್ನ ತಂದೆಯ ಸ್ನೇಹಿತನ ಜತೆಗಿನ ಸಂಬಂಧದ ಬಗ್ಗೆ ಹರಡುವ ಗಾಸಿಪ್ ಕುರಿತಾಗಿದೆ.
ಮನುಷ್ಯ ಜೀವನದಲ್ಲಿ ಸ್ನೇಹ, ಪ್ರೀತಿ ಎಂಬುದು ಎಲ್ಲ ಎಲ್ಲೆಗಳ ಮೀರಿ ನಿಂತಿರುವಂಥ. ಇದಕ್ಕೆ ಧರ್ಮ, ಜಾತಿ, ವಯಸ್ಸು ಎಲ್ಲವೂ ಅಗಣಿತ. ಇಂತಹ ಸಂಬಂಧವನ್ನು ತೆರೆದಿಡುವ ಪ್ರಯತ್ನ ಮಾಡುತ್ತಿರುವ ಚಿತ್ರ (ಬಿಡುಗಡೆ ಆಗಿಲ್ಲ) ಇದಾಗಿರಬಹುದೆಂಬ ಪರಿಕಲ್ಪನೆ ನಮ್ಮದು. ಇದರಲ್ಲಿ ಈ ಲೇಖನದ ಉದ್ದೇಶ ಬೇರೆಯದು.
ಈಚೆಗಷ್ಟೇ ಖಾತ್ಯ ನಟ ಮಿಲಿಂದ್ ಸೋಮನ್ ಮದುವೆಯಾಗಿದ್ದಾರೆ. ಅದು ತಮಗಿಂತ ೨೫ ಸಣ್ಣ ವಯಸ್ಸಿನ ಯುವತಿಯನ್ನ. ಇವರಿಬ್ಬರ ಸ್ನೇಹವಾಗಿದ್ದು ಕೆಲ ವರ್ಷಗಳ ಹಿಂದೆಯಷ್ಟೆ. ಪರಸ್ಪರ ಪ್ರೀತಿಸುವ ಇಬ್ಬರ ನಡುವೆ ದೈಹಿಕ, ಮಾನಸಿಕವಾಗಿ ಅಜಗಜ ಅಂತರವಿದೆ. ಆದರೆ, ಈ ಅಂತರ ಅವರಿಬ್ಬರ ಸ್ನೇಹ, ಪ್ರೀತಿಯಲ್ಲಿ ಶೂನ್ಯವಾಗಿದೆ.
27ವರ್ಷದ ಯುವತಿಯೊಂದಿಗೆ ಮದುವೆಯಾದ 54 ವರ್ಷದ ಮಿಲಿಂದ್: 54 ವರ್ಷಗಳ ಮಾಡೆಲ್ ಮಿಲಿಂದ್ ಸೋಮನ್ ತಮಗಿಂತ 27 ವರ್ಷದ ಅಸ್ಸಾಂನ ಯುವತಿ, ಗಗನಸಖಿ ಅಂಕಿತಾ ಕೊನ್ವಾರ್ ಭಾನುವಾರ ಮದುವೆಯಾಗಿದ್ದಾರೆ.
ಮಿಲಿಂದ್- ಅಂಕಿತಾದ್ದು ಫಸ್ಟ್ ಸೈಟ್ ಅಟ್ ಲವ್:
ಮಿಲಿಂದ್ ಅಂಕಿತಾ ಅವರನ್ನು ನೋಡಿದ್ದು ಚೆನ್ನೈನ ನೈಟ್ ಕ್ಲಬ್ ಒಂದರಲ್ಲಿ. ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿತ್ತು. ಕೂಡಲೇ ಮಿಲಿಂದ್ ತಮ್ಮ ಮೊಬೈಲ್ ನಂಬರ್ ನ್ನು ಅಂಕಿತಾ ಅವರೊಂದಿಗೆ ಶೇರ್ ಮೊಡಿಕೊಂಡಿದ್ದರು. ಚಾಟಿಂಗ್, ಡೇಟಿಂಗ್ ಅಂಥ ಅನೇಕ ವರ್ಷಗಳ ಮುಂದುವರಿತ್ತು. ಇದು ಏಪ್ರಿಲ್ 22ರಂದು ವೈವಾಹಿಕ ಸಂಬಂಧದೊಂದಿಗೆ ಗಟ್ಟಿಕೊಂಡಿತು.
ಯಾರೀ ಅಂಕಿತಾ ಕೋನ್ವಾರ್: ಅಸ್ಸಾಂ ನ ಗುವಾಹತಿ ನಗರದವರಾದ ಅಂಕಿತಾ ಕೋನ್ವಾರ್ ಅವರ ಮೊದಲ ಹೆಸರು ಸುನ್ಕುಸ್ಮಿತಾ. ಇವರ ತಂದೆ ನಿರಂಜನ ಕೋನ್ವಾರ್. ತಾಯಿ ನಾಗೇನ್ ಕೋನ್ವಾರ್. ಜಾರ್ಣ ಕೋನ್ವಾರ್ ಬರುಹ.
2013ರಲ್ಲಿ ಏರ್ ಏಷ್ಯಾ ನಾಗರಿಕ ವಿಮಾನಯಾನ ಕಂಪನಿಯಲ್ಲಿ ಕ್ಯಾಬಿನ್ ಕ್ರೂ ಎಕ್ಸಿಕ್ಯುಟಿವ್ ಆಗಿ ವೃತ್ತಿ ಆರಂಭಿಸಿದ ಅಂಕಿತಾ, ಅಸ್ಸಾಮಿ, ಹಿಂದಿ, ಇಂಗ್ಲಿಷ್, ಫ್ರೆಂಚ್ ಭಾಷೆಗಳನ್ನು ಬಲ್ಲವರು.
2015ರ ನವೆಂಬರ್ನಲ್ಲಿ 10k ಮ್ಯಾರಥಾನ್ ನ್ನು ಮಿಲಿಂದ್ ಜತೆ ಓಡಿದ್ದಾರೆ. ಪ್ರಯಾಣವನ್ನು ಇಷ್ಟಪಡುವ ಕೋನ್ವಾರ್, 2018 ಫೆಬ್ರವರಿಯಲ್ಲಿ ಸೀನಿಯರ್ ಫ್ಲೈಟ್ ಅಟೆಂಡೆಂಟ್ ಹುದ್ದೆಗೆ ರಾಜೀನಾಮೆ ಕೊಟ್ಟರು.
ಮಿಲಿಂದ್ ಹುಟ್ಟಿದ್ದು ಎಲ್ಲಿ ಗೊತ್ತಾ? ಸೋಮನ್ ಹುಟ್ಟಿದ್ದು ಸ್ಕಾಟ್ಲೆಂಡಿನ ಗ್ಲ್ಯಾಸ್ಗೋದಲ್ಲಿ. ನಂತರ ಅವರ ಪಾಲಕರು ಇಂಗ್ಲೆಂಡ್, ನಂತರ ಭಾರತಕ್ಕೆ ಮರಳಿದರು. 1973ರಲ್ಲಿ ಮುಂಬೈನ ದಾದರ್ ನಲ್ಲಿ ನೆಲೆಯೂರಿದರು. ಎಂಎಚ್ ಸಾಬೂ ಸಿದ್ದಿಕ್ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೋಮಾ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಪಡೆದಿದ್ದಾರೆ.
ಮಿಲಿಂದ್ ವೃತ್ತಿ ಯಾವುದು ಗೊತ್ತಾ? ಡಿಪ್ಲೋಮಾ ಇಂಜಿನಿಯರಿಂಗ್ ಪಡೆದಿದ್ದರೂ ಆ ವೃತ್ತಿ ಆಯ್ಕೆ ಮಾಡಿಕೊಳ್ಳದೇ ಮಾಡೆಲ್ ಆಗಿ, ಮ್ಯಾರಥಾನ್ ಓಟಗಾರ ಆಗಿ ಪ್ರಸಿದ್ಧಿ ಪಡೆದಿದ್ದಾರೆ. 62000 ಮಹಿಳೆಯರು ಸಂಘದ ಸದಸ್ಯರಿರುವ ಮ್ಯಾರಥಾನ್ ಸಂಘದಲ್ಲಿ ಮಿಲಿಂದ್ ಸಕ್ರಿಯರಾಗಿದ್ದಾರೆ.
ಮಿಲಿಂದ್ ಅವರು ಐರನ್ ಮ್ಯಾನ್ ಮತ್ತು ಅಲ್ಟ್ರಾಮ್ಯಾನ್ ನಂತಹ ಜಗತ್ತಿನ ಪ್ರತಿಷ್ಠಿತ ಮ್ಯಾರಥಾನ್ ಮತ್ತು ಟ್ರಯಥ್ಲಾನ್ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಮಧು ಸಪ್ರೆ ಅವರ ಜತೆಗಿತ್ತು ಲಿವಿಂಗ್ ಟುಗೆದರ್ ಸಂಬಂಧ: ಮಿಲಿಂದ್ ಅವರು ಮೊದಲು ಮಧು ಸಪ್ರೆ ಅವರ ಜತೆಗೆ 1995ರವರೆಗೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದರು. 1992ರ ಮಿಸ್ ಯೂನಿವರ್ಸ್ ಸ್ಪರ್ಧೆಯ ಎರಡನೇ ರನ್ನರ್-ಅಪ್ ಆಗಿ ಕಿರೀಟ ಮುಡಿಗೇರಿಸಿಕೊಂಡವರು.
ಜಾಹಿರಾತಿಗಾಗಿ ಬೆತ್ತಲಾಗಿದ್ದರು: ಮಿಲಿಂದ್ ಸೋಮನ್ ಕೆಲ ವರ್ಷಗಳ ಹಿಂದೆ ರೂಪದರ್ಶಿ, ನಟಿ ಮಧು ಸಪ್ರಯೊಂದಿಗೆ ಬೆತ್ತಲೆಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಇವರ ವಿರುದ್ಧ ಮುಂಬೈ ಪೊಲೀಸರು ದೂರು ದಾಖಲಿಸಿದ್ದರು.
ಮಿಲಿಂದ್ ಅವರ ಮೊದಲ ಪತ್ನಿ ಯಾರು?: ಮಿಲಿಂದ್ ಸೋಮನ್ ಮತ್ತು ಅಂಕಿತಾ ಕೋನ್ವಾರ್ ಎರಡನೇ ಪತ್ನಿ. ಮಿಲಿಂದ್ ಫ್ರೆಂಚ್ ನಟಿ ಮೈಲೆನೆ ಜಂಪನಾಯ್ ಅವರೊಂದಿಗೆ ಮದುವೆ ಆಗಿದ್ದರು. ವ್ಯಾಲಿ ಆಫ್ ಫ್ಲವರ್ ಚಿತ್ರದಲ್ಲಿ ನಟಿಸಿದ್ದರು. 2008ರಲ್ಲಿ ಮಿಲಿಂದ್ ಮತ್ತು ಮೈಲೆನೆ ಬೇರೆಯಾದರು. 2009ರಲ್ಲಿ ದಂಪತಿ ವಿಚ್ಛೇದನ ಪಡೆದರು. ಇದಾದ 9 ವರ್ಷಗಳ ನಂತರ ಮದುವೆಯಾಗಿದ್ದಾರೆ.

ಸಿನಿ ಸುದ್ದಿ
ಬಾಂಬೆ ಹೀರೋಹಿನ್ ಗಳು ಕಡಿಮೆ ಸಂಭಾವನೆಗೆ ಕೆಲಸ ಮಾಡ್ತಾರೆ ಅಂದವರಿಗೆ ಹೀಗಂದ್ರು ನಟಿ ಕೃತ್ತಿಕಾ ರವೀಂದ್ರ..!

ನಟಿ ಕೃತಿಕ ರವೀಂದ್ರ ಬಿಗ್ ಬಾಸ್ ರಿಯಾಲಿಟಿ ಶೋನ ಕಂಟೆಸ್ಟ್ಟೆಂಟ್ ಕೂಡ. ಇವರು ಇತ್ತೀಚಿಗೆ ಸಿನೆಮಾವೊಂದರಲ್ಲಿ ನಟಿಸಲು ಸಂಭಾವನೆ ವಿಷಯವಾಗಿ ನಡೆದ ಘಟನೆಯೊಂದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹೀಗಿದೆ ಆ ಬರಹ.
ಇದೇನ ಸಭ್ಯತೆ, ಇದೇನ ಸಂಸ್ಕೃತಿ !
ಇತ್ತೀಚೆಗೆ ಒಂದು ಕರೆ ಬಂದಿತ್ತು. ಒಂದು ಸಿನೆಮಾ ಮಾತುಕತೆ. ಅದ್ಭುತ ಕಥೆ ಅಲ್ಲದಿದ್ದರೂ ಮಾಡಲಸಾಧ್ಯ ಅನ್ನಿಸುವಂಥದ್ದಲ್ಲ. ನಾನು ಗಮನಿಸಿರುವ ಹಾಗೆ,ಸಂಭಾವನೆ ಕಥೆಗಿಂತ ಮುಖ್ಯ ಎಂಬುವುದು ವಿಷಾದಕರ ಸಂಗತಿ. ಇಲ್ಲಿಯೂ ಸಂಭಾವನೆಯ ವಿಷಯ ಬಂದಾಗ ನಾನು ಸುತ್ತಿ ಬಳಸಿ ಮಾತನಾಡದೇ ನೇರವಾಗಿ “ಇಷ್ಟು” ಕೊಟ್ಟರೆ ಸಂತೋಷ. ಆಗಲಿಲ್ಲ ಅಂದ್ರೆ ನಿಮ್ಮ “budjet” ಹೇಳಿ. ಇಬ್ಬರಿಗೂ ಹೊಂದಿಕೆಯಾದಲ್ಲಿ ಮುಂದುವರಿಯೋಣ ಅಂದೆ. 2 ದಿನ ಬಿಟ್ಟು ಕರೆ ಬಂತು. ಅವರು ಹೇಳಿದ ಸಂಭಾವನೆ ನನಗೆ ಹೊಂದಿಕೆಯಾಗದಿದ್ದರಿಂದ “ಕ್ಷಮಿಸಿ, ಇಷ್ಟು ಸಂಭಾವನೆಗೆ ಕೆಲಸ ಮಾಡೋದಕ್ಕೆ ನಂಗೆ ಕಷ್ಟ ಆಗತ್ತೆ” ಅಂದೆ.
ವಿಷಯ ಇದಲ್ಲ. ನನ್ನ ನೇರನುಡಿಯಿಂದ ಮುಖಭಂಗಗೊಂಡ ಆಸಾಮಿ ಮಾತನ್ನ ಅಷ್ಟಕ್ಕೇ ನಿಲ್ಲಿಸದೇ “ ನಾನು ನನ್ನ ಸಿನೆಮಾಗಳಿಗೆ ಬಾಂಬೆಯಿಂದಲೇ ಹೀರೋಯಿನ್ ಗಳನ್ನ ಕರೆಸೋದು. ತುಂಬಾ ಕಡಿಮೆ ಸಂಭಾವನೆಗೆ ಕೆಲಸ ಮಾಡ್ತಾರೆ. ಕನ್ನಡದವರನ್ನ ನನ್ನ ಸಿನೆಮಾಗಳಿಗೆ ತಗೊಳಲ್ಲ” ಅಂದ.
ನಾನು “ ಒಹ್ ತಾವು ಕನ್ನಡದವರನ್ನೇ ತಗೋಳಲ್ವ? ಹೆಂಗೆ ಸರ್. ಕನ್ನಡದವರಾಗಿ ಕನ್ನಡದವರಿಗೆ ಅವಕಾಶಗಳನ್ನ ಕೊಡಲ್ವಾ?” ಅಂದೆ.
ಆಸಾಮಿ ” ಅಯ್ಯೋ ಹಾಗಲ್ಲ ಮೇಡಂ. ಅಷ್ಟು ಕಡಿಮೆಗೆ ಅಲ್ಲಿಂದ ಬಂದು ಕೆಲಸ ಮಾಡಿ ಹೋಗ್ತಾರೆ ” ಅಂದ.
So basically, ಬಾಂಬೆ ಇಂದ ಹೀರೋಯಿನ್ಗಳನ್ನ ಕರೆಸೋದು, ಇಲ್ಲಿಯವರನ್ನ ಗಣನೆಗೆ ತಗೊಳ್ದೆ ಇರೋದು ಇದೇಲ್ಲಕ್ಕೂ ಸಂಭಾವನೆ ಕಾರಣ. ನಾನು ತುಂಬಾ ಕಡಿಮೆ ಸಂಭಾವನೆಗೆ ಕೆಲಸ ಮಾಡಿದೀನಿ ಗೆಳೆಯರೇ. ಸಂಭಾವನೆನೇ ತಗೊಳ್ದೆ ಕೂಡ ಮಾಡಿದೀನಿ. ಇನ್ನು ವಿಪರ್ಯಾಸ ಅಂದ್ರೆ ಸಂಭಾವನೆ ಸಿಗದೇ ಮೋಸ ಕೂಡ ಹೋಗಿದೀನಿ. ಇವೆಲ್ಲಾ ನಂಗೆ ಒಳ್ಳೆ ಅನುಭವಗಳನ್ನ ಕೊಟ್ಟಿದೆ. (ಕೊಡ್ತಾ ಇದೆ)
ಆದ್ರೆ ಒಂದು ಬೇಡಿಕೆ. ಕಡಿಮೆ ಸಂಭಾವನೆಗೆ ಬರೋ ಕನ್ನಡದವರನ್ನೇ ಬೆಳೆಸಿ. ಅವಕಾಶಗಳನ್ನ ಕೊಡಿ. ಬಾಂಬೆ,ಅಲ್ಲಿ- ಇಲ್ಲಿ ಇರೋ ಹುಡುಗಿಯರನ್ನೇ ನೀವಾಳಿಸಿ ಬಿಸಾಕೋ ಅಂಥ ಅದ್ಭುತ ಪ್ರತಿಭೆಗಳು ನಮ್ಮ ಕನ್ನಡದಲ್ಲಿದ್ದಾರೆ. ಒಂದು ಚಿಕ್ಕ ಅವಕಾಶ ಬಹುಷಃ ಅವರ ಜೀವನವನ್ನೇ ಬದಲಾಯಿಸಬಹುದು. ಅನ್ಯಾಯ ಮಾಡಬೇಡಿ ಅಷ್ಟೇ. ನನಗೂ ಕೂಡ.
– ಕೃತ್ತಿಕಾ ರವೀಂದ್ರ
https://m.facebook.com/story.php?story_fbid=4255085074519185&id=100000532021557
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಹೊಸವರ್ಷಕ್ಕೆ ರಾಘಣ್ಣನ ‘ರಾಜತಂತ್ರ’ ಬಿಡುಗಡೆ

ಸುದ್ದಿದಿನ ಡೆಸ್ಕ್ : ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ ಲಿ ಲಾಂಛನದಲ್ಲಿ ಜೆ.ಎಂ.ಪ್ರಹ್ಲಾದ್, ವಿಜಯ್ ಭಾಸ್ಕರ್ ಹರಪನಹಳ್ಳಿ ಹಾಗೂ ಪಿ.ಆರ್.ಶ್ರೀಧರ್ ಅವರು ನಿರ್ಮಿಸಿರುವ, ರಾಜ್ಯ ಪ್ರಶಸ್ತಿ ವಿಜೇತ ನಟ ರಾಘವೇಂದ್ರ ರಾಜಕುಮಾರ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ರಾಜತಂತ್ರ ಚಿತ್ರ ಈ ವಾರ ಅಂದರೆ ಹೊಸವರ್ಷದ ಮೊದಲದಿನ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿರುವ ಈ ಚಿತ್ರದ ನಿರ್ದೇಶಕರು ಪಿ.ವಿ.ಆರ್ ಸ್ವಾಮಿ ಗೂಗರದೊಡ್ಡಿ.
ಶ್ರೀಸುರೇಶ್ ಸಂಗೀತ ನಿರ್ದೇಶನ, ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ನಾಗೇಶ್ ಸಂಕಲನ, ಚಂದನ್ ಕಲಾ ನಿರ್ದೇಶನ ಹಾಗೂ ವೈಲೆಂಟ್ ವೇಲು, ರಾಮ್ ದೇವ್, ಅಲ್ಟಿಮೆಟ್ ಶಿವು
ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ರಾಘವೇಂದ್ರ ರಾಜಕುಮಾರ್, ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ರಂಜನ್ ಹಾಸನ್, ಶಂಕರ್ ಅಶ್ವಥ್, ನೀನಾಸಂ ಅಶ್ವಥ್, ಮುನಿರಾಜು, ವಿಜಯಭಾಸ್ಕರ್, ಪ್ರತಾಪ್ ಸಿಂಹ ಅಗರ, ಶಿವಾನಂದ, ಪ್ರಕಾಶ್ ಕಾರಿಯಪ್ಪ, ವೆಂಕಟೇಶ್ ಪ್ರಸಾದ್, ಹೋಳಿ ವೆಂಕಟೇಶ್, ಸ್ವಾತಿ ಅಂಬರೀಶ್, ವಲ್ಲಭ್, ಪ್ರವೀಣ್, ಉಮೇಶ್, ಕುಮಾರ್, ಕನ್ನಡ ಪ್ರೇಮ್, ಲಕ್ಷ್ಮಣ್, ಭೀಮ, ಆನಂದ್ ಪನ್ನೇದೊಡ್ಡಿ, ಹೇರಂಭ, ಸತೀಶ್ ಗೌಡ, ಮೀರಾ ಶ್ರೀ ಗೌಡ ಮುಂತಾದವರು ರಾಜತಂತ್ರ ದ ತಾರಾಬಳಗದಲ್ಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿಡಿಯೋ | ಮಿಲಿಯನ್ ವೀವ್ಸ್ ದಾಟಿ ಮುನ್ನುಗ್ಗುತ್ತಿದೆ ಚಂದನ್ ಶೆಟ್ಟಿ ‘ಪಾರ್ಟಿ ಫ್ರೀಕ್’ ಹಾಡು

ಸುದ್ದಿದಿನ ಡೆಸ್ಕ್ : ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿಬಂದ ಪಾರ್ಟಿ ಫ್ರೀಕ್ ಹಾಡು ಶನಿವಾರ ಯೂನೈಟೆಡ್ ಆಡಿಯೋಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿದೆ. ಹಾಡಿನ ಬಗ್ಗೆ ಮಾಹಿತಿ ನೀಡುವ ಉದ್ದೇಶಕ್ಕೆ ಸುದ್ದಿಗೋಷ್ಟಿ ಕರೆದಿದ್ದ ತಂಡ, ಹಾಡಿನ ಹುಟ್ಟು ಮತ್ತು ಅದರ ಹಿನ್ನೆಲೆಯನ್ನು ಬಿಚ್ಚಿಟ್ಟಿತು. ಚೈತನ್ಯ ಲಕಂಸಾನಿ ಈ ಹಾಡಿಗೆ ಬಂಡವಾಳ ಹೂಡಿದ್ದಾರೆ.
ಮೂಲತಃ ಆಂಧ್ರದವರಾದ ಚೈತನ್ಯ, ಸಿನಿಮಾ ಕ್ಷೇತ್ರದಲ್ಲಿ ನೆಲೆಯೂರಬೇಕೆಂದು ಯೂನೈಟೆಡ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಮೊದಲಾರ್ಥವಾಗಿ ಕನ್ನಡ ಮತ್ತು ತೆಲುಗಿನಲ್ಲಿ ಹೊಸ ವರ್ಷಾಚರಣೆಗೆ ಉಡುಗೊರೆ ರೂಪದಲ್ಲಿ ಮತ್ತು ಬ್ಯಾನರ್ ಲಾಂಚ್ ಮಾಡುವ ಉದ್ದೇಶಕ್ಕೆ ಪಾರ್ಟಿ ಫ್ರೀಕ್ ಎಂಬ ಹಾಡನ್ನು ನಿರ್ಮಾಣ ಮಾಡಿದ್ದಾರೆ.
ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ನೀಡಿ ಧ್ವನಿಯನ್ನೂ ನೀಡಿರುವ ಚಂದನ್ ಶೆಟ್ಟಿ ಮಾತನಾಡಿ, ಒಂದು ವಾರದ ಹಿಂದಷ್ಟೇ ಈ ಆಡಿಯೋ ಸಂಸ್ಥೆ ಲಾಂಚ್ ಆಗಿದೆ. ಒಂದೇ ವಾರದಲ್ಲಿ ಯೂಟ್ಯೂಬ್ನಲ್ಲಿ ಒಳ್ಳೇ ರೀಚ್ ಸಿಕ್ಕಿದೆ. ಹೊಸಹೊಸ ಪ್ರತಿಭೆಗಳಿಗೋಸ್ಕರ ಈ ಚಾನೆಲ್ ತೆರೆಯಲಾಗಿದೆ.
ಇನ್ನು ಹಾಡಿನ ಬಗ್ಗೆ ಹೇಳುವುದಾದರೆ, 3 ದಿನಗಳ ಕಾಲ ಶೆರ್ಟನ್ ಹೊಟೇಲ್ನಲ್ಲಿ ಶೂಟಿಂಗ್ ಮಾಡಲಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಹಾಡು ಮೂಡಿಬಂದಿದ್ದು, ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂಸ್ಥೆ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಇದರಿಂದ ನಮ್ಮ ಬೆಳವಣಿಗೆ ಜತೆಗೆ ಇಂಡಸ್ಟ್ರಿಯ ಬೆಳವಣಿಗೆಗೂ ಸಹಕಾರಿ. ಈ ಥರದ ನಿರ್ಮಾಪಕರು ಇಂಡಸ್ಟ್ರಿಗೆ ಬೇಕು ಎಂದರು.
ಇನ್ನು ಈ ಹಾಡಿಗೆ ಬಂಡವಾಳ ಹೂಡಿರುವ ಚೈತನ್ಯ ಲಕಂಸಾನಿ ಮಾತನಾಡಿ, ತುಂಬ ಕಿರು ಅವಧಿಯಲ್ಲಿ ಈ ಹಾಡನ್ನು ಸೃಷ್ಟಿ ಮಾಡಿದ್ದೇವೆ. ನಮ್ಮ ತಾಂತ್ರಿಕ ತಂಡಕ್ಕೆ ಧನ್ಯವಾದ. ಈ ಆಡಿಯೋ ಸಂಸ್ಥೆ ತೆರೆಯಲು ಮೂಲ ಉದ್ದೇಶ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರ ಸಲುವಾಗಿ. ಯಾರಿಗೆ ಸಂಗೀತ ಮತ್ತು ಸಿನಿಮಾ ಆಸಕ್ತಿ ಇದೆಯೋ ಅವರಿಗೆ ನಮ್ಮ ಸಂಸ್ಥೆಯಿಂದ ಸ್ವಾಗತ ಎಂದರು.
ಇನ್ನು ಈ ಹಾಡಿನ ನಿರ್ಮಾಣದಲ್ಲಿ ಭಾಗವಾಗಿರುವ ನಟ ಧರ್ಮ ಸಹ ಹಾಡು ಮತ್ತು ಈ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು.
‘ಸಿನಿಮಾ ಬಗ್ಗೆ ಮಾತನಾಡುತ್ತ ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ ರಿಜಿಸ್ಟರ್ ಆಯ್ತು. ಅದನ್ನು ರೀಚ್ ಮಾಡಿಸುವ ಸಲುವಾಗಿ ಚಂದನ್ ಶೆಟ್ಟಿ ಅವರಿಂದ ಆಲ್ಬಂ ಮಾಡುವ ಬಗ್ಗೆ ನಿರ್ಧಾರವಾಯ್ತು. ಆಗ ಯುನೈಟೆಡ್ ಆಡಿಯೋ ಕಂಪನಿ ತೆರೆದೆವು. ಈ ಸಂಸ್ಥೆಯಲ್ಲಿ ನಾನೂ ಸಹ ಪಾಲುದಾರನಾಗಿದ್ದೇನೆ. ಅಂದುಕೊಂಡಿದ್ದಕ್ಕಿಂತ ಚೆಂದವಾಗಿ ಹಾಡು ಮೂಡಿಬಂದಿದೆ. ಮುಂದಿನ ದಿನಗಳಲ್ಲಿ ಇದೇ ಸಂಸ್ಥೆಯಿಂದ ಸಿನಿಮಾ ಸಹ ನಿರ್ಮಾಣವಾಗಲಿದೆ ಎಂದರು.
ಪಾರ್ಟಿ ಫ್ರೀಕ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 36 ಲಕ್ಷ ಮೊತ್ತವನ್ನು ಖರ್ಚು ಮಾಡಲಾಗಿದೆ. ಮೂರು ದಿನದಲ್ಲಿ ಚಿತ್ರೀಕರಣ ಮುಗಿಸಿಕೊಂಡ ಈ ಹಾಡಿನಲ್ಲಿ 80ಕ್ಕೂ ಅಧಿಕ ರಷ್ಯನ್ ಡಾನ್ಸರ್ಗಳಿದ್ದಾರೆ. 100ಕ್ಕೂ ಅಧಿಕ ಇಲ್ಲಿನ ನೃತ್ಯಗಾರರಿದ್ದಾರೆ. ಟಾಲಿವುಡ್ ನೃತ್ಯ ನಿರ್ದೇಶಕಿ ಅನ್ನಿ ಮಾಸ್ಟರ್ ಜತೆಗೆ ನಿಶ್ವಿಕಾ ನಾಯ್ಡು, ನಿವೇದಿತಾ ಗೌಡ ಸಹ ಈ ಹಾಡಿನಲ್ಲಿದ್ದಾರೆ. ಛಾಯಾಗ್ರಹಣ ಶ್ರೀಶ ಕುದುವಳ್ಳಿ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ರಂಜಿತ್ ಸಂಕಲನ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ4 days ago
ಆಂದೋಲನ-ಈ ಜೀವ ಈ ಜೀವನ | ಅಂಗನವಾಡಿ ಕಾರ್ಯಕರ್ತೆಯ ಅಸಾಮಾನ್ಯ ಕರ್ತವ್ಯಪ್ರಜ್ಞೆ..!
-
ಲೈಫ್ ಸ್ಟೈಲ್4 days ago
ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ : ವಿವೇಕಾನಂದ
-
ದಿನದ ಸುದ್ದಿ3 days ago
“ನೀನು ಅಪ್ಪನಿಗೆ ಹುಟ್ಟಿದಿಯಾ ಅನ್ನೋದಕ್ಕೆ ಸಾಕ್ಷಿ ಏನು..?” : ಸಚಿವ ಈಶ್ವರಪ್ಪ
-
ದಿನದ ಸುದ್ದಿ3 days ago
ಸಚಿವ ಸಂಪುಟ ವಿಸ್ತರಣೆ : ಏಳು ಹೊಸ ಸಚಿವರ ಹೆಸರು ಫೈನಲ್ ಗೊಳಿಸಿದ ಯಡಿಯೂರಪ್ಪ
-
ದಿನದ ಸುದ್ದಿ4 days ago
ಮೂರೂ ಕೃಷಿ ಕಾಯ್ದೆಗಳ ಜಾರಿಯನ್ನು ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್..!
-
ದಿನದ ಸುದ್ದಿ4 days ago
ಹೊಸ ಚರಿತ್ರೆ ಬರೆಯಲಿರುವ ಜನವರಿ-26
-
ಸಿನಿ ಸುದ್ದಿ4 days ago
ಬಾಂಬೆ ಹೀರೋಹಿನ್ ಗಳು ಕಡಿಮೆ ಸಂಭಾವನೆಗೆ ಕೆಲಸ ಮಾಡ್ತಾರೆ ಅಂದವರಿಗೆ ಹೀಗಂದ್ರು ನಟಿ ಕೃತ್ತಿಕಾ ರವೀಂದ್ರ..!
-
ದಿನದ ಸುದ್ದಿ3 days ago
ರೈತರ ಹೋರಾಟದಲ್ಲಿ ರೈತರೊಂದಿಗೆ ನಿಂತ ವಾಷಿಂಗ್ ಮಷಿನ್ಗಳು..!