ಸಿನಿ ಸುದ್ದಿ
‘ಅನಕೊಂಡ’ ದತ್ತು ಪಡೆದ ಡಿ ಬಾಸ್

ಸುದ್ದಿದಿನ ಡೆಸ್ಕ್ | ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಾಣಿಪ್ರಿಯರೆಂಬುದು ಗೊತ್ತಿರುವ ವಿಷಯ. ಮೃಗಾಲಯದಲ್ಲಿ ಆನೆ ಹಾಗೂ ಹುಲಿಯನ್ನು ದತ್ತು ಪಡೆದಿದ್ದ ಡಿ ಬಾಸ್ ಇದೀಗ ಹಸಿರು ಅನಕೊಂಡ ಹಾವುಗಳನ್ನು ದತ್ತು ಪಡೆದಿದ್ದಾರೆ.
ಮೈಸೂರು ಮೃಗಾಲಯ ಪ್ರಾಧಿಕಾರವು ಈ ಕುರಿತು ಅಧಿಕೃತ ಪ್ರಕಟಣೆ ಹೊಟಲರಡಿಸಿದ್ದು, 20 ಸಾವಿರ ರೂಪಾಯಿಗಳನ್ನು ಪಾವತಿಸಿ ದತ್ತು ಪ್ರಕ್ರಿಯೆ ಪೂರ್ಣಗೊಳಿಸಿರುವುದಾಗಿ ತಿಳಿಸಿದೆ.
ಚಾಲೆಂಜಿಂಗ್ ಸ್ಟಾರ್ ಅವರು ಈವರೆಗೆ 2 ಲಕ್ಷ ರೂ. ಪಾವಯಿಸಿ ಒಂದು ಆನೆ ಹಾಗೂ ಸುಮಾರು ಒಂದು ಲಕ್ಷಕ್ಕೆ ಹುಲಿ ದತ್ತು ಪಡೆದಿದ್ದಾರೆ. ದತ್ತು ಪಡೆದಿರುವ ಹುಲಿಗೆ ತಮ್ಮ ಪುತ್ರ ವಿನೀಶ್ ಹೆಸರಿಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ಸಿನಿ ಸುದ್ದಿ
ಬಾಂಬೆ ಹೀರೋಹಿನ್ ಗಳು ಕಡಿಮೆ ಸಂಭಾವನೆಗೆ ಕೆಲಸ ಮಾಡ್ತಾರೆ ಅಂದವರಿಗೆ ಹೀಗಂದ್ರು ನಟಿ ಕೃತ್ತಿಕಾ ರವೀಂದ್ರ..!

ನಟಿ ಕೃತಿಕ ರವೀಂದ್ರ ಬಿಗ್ ಬಾಸ್ ರಿಯಾಲಿಟಿ ಶೋನ ಕಂಟೆಸ್ಟ್ಟೆಂಟ್ ಕೂಡ. ಇವರು ಇತ್ತೀಚಿಗೆ ಸಿನೆಮಾವೊಂದರಲ್ಲಿ ನಟಿಸಲು ಸಂಭಾವನೆ ವಿಷಯವಾಗಿ ನಡೆದ ಘಟನೆಯೊಂದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹೀಗಿದೆ ಆ ಬರಹ.
ಇದೇನ ಸಭ್ಯತೆ, ಇದೇನ ಸಂಸ್ಕೃತಿ !
ಇತ್ತೀಚೆಗೆ ಒಂದು ಕರೆ ಬಂದಿತ್ತು. ಒಂದು ಸಿನೆಮಾ ಮಾತುಕತೆ. ಅದ್ಭುತ ಕಥೆ ಅಲ್ಲದಿದ್ದರೂ ಮಾಡಲಸಾಧ್ಯ ಅನ್ನಿಸುವಂಥದ್ದಲ್ಲ. ನಾನು ಗಮನಿಸಿರುವ ಹಾಗೆ,ಸಂಭಾವನೆ ಕಥೆಗಿಂತ ಮುಖ್ಯ ಎಂಬುವುದು ವಿಷಾದಕರ ಸಂಗತಿ. ಇಲ್ಲಿಯೂ ಸಂಭಾವನೆಯ ವಿಷಯ ಬಂದಾಗ ನಾನು ಸುತ್ತಿ ಬಳಸಿ ಮಾತನಾಡದೇ ನೇರವಾಗಿ “ಇಷ್ಟು” ಕೊಟ್ಟರೆ ಸಂತೋಷ. ಆಗಲಿಲ್ಲ ಅಂದ್ರೆ ನಿಮ್ಮ “budjet” ಹೇಳಿ. ಇಬ್ಬರಿಗೂ ಹೊಂದಿಕೆಯಾದಲ್ಲಿ ಮುಂದುವರಿಯೋಣ ಅಂದೆ. 2 ದಿನ ಬಿಟ್ಟು ಕರೆ ಬಂತು. ಅವರು ಹೇಳಿದ ಸಂಭಾವನೆ ನನಗೆ ಹೊಂದಿಕೆಯಾಗದಿದ್ದರಿಂದ “ಕ್ಷಮಿಸಿ, ಇಷ್ಟು ಸಂಭಾವನೆಗೆ ಕೆಲಸ ಮಾಡೋದಕ್ಕೆ ನಂಗೆ ಕಷ್ಟ ಆಗತ್ತೆ” ಅಂದೆ.
ವಿಷಯ ಇದಲ್ಲ. ನನ್ನ ನೇರನುಡಿಯಿಂದ ಮುಖಭಂಗಗೊಂಡ ಆಸಾಮಿ ಮಾತನ್ನ ಅಷ್ಟಕ್ಕೇ ನಿಲ್ಲಿಸದೇ “ ನಾನು ನನ್ನ ಸಿನೆಮಾಗಳಿಗೆ ಬಾಂಬೆಯಿಂದಲೇ ಹೀರೋಯಿನ್ ಗಳನ್ನ ಕರೆಸೋದು. ತುಂಬಾ ಕಡಿಮೆ ಸಂಭಾವನೆಗೆ ಕೆಲಸ ಮಾಡ್ತಾರೆ. ಕನ್ನಡದವರನ್ನ ನನ್ನ ಸಿನೆಮಾಗಳಿಗೆ ತಗೊಳಲ್ಲ” ಅಂದ.
ನಾನು “ ಒಹ್ ತಾವು ಕನ್ನಡದವರನ್ನೇ ತಗೋಳಲ್ವ? ಹೆಂಗೆ ಸರ್. ಕನ್ನಡದವರಾಗಿ ಕನ್ನಡದವರಿಗೆ ಅವಕಾಶಗಳನ್ನ ಕೊಡಲ್ವಾ?” ಅಂದೆ.
ಆಸಾಮಿ ” ಅಯ್ಯೋ ಹಾಗಲ್ಲ ಮೇಡಂ. ಅಷ್ಟು ಕಡಿಮೆಗೆ ಅಲ್ಲಿಂದ ಬಂದು ಕೆಲಸ ಮಾಡಿ ಹೋಗ್ತಾರೆ ” ಅಂದ.
So basically, ಬಾಂಬೆ ಇಂದ ಹೀರೋಯಿನ್ಗಳನ್ನ ಕರೆಸೋದು, ಇಲ್ಲಿಯವರನ್ನ ಗಣನೆಗೆ ತಗೊಳ್ದೆ ಇರೋದು ಇದೇಲ್ಲಕ್ಕೂ ಸಂಭಾವನೆ ಕಾರಣ. ನಾನು ತುಂಬಾ ಕಡಿಮೆ ಸಂಭಾವನೆಗೆ ಕೆಲಸ ಮಾಡಿದೀನಿ ಗೆಳೆಯರೇ. ಸಂಭಾವನೆನೇ ತಗೊಳ್ದೆ ಕೂಡ ಮಾಡಿದೀನಿ. ಇನ್ನು ವಿಪರ್ಯಾಸ ಅಂದ್ರೆ ಸಂಭಾವನೆ ಸಿಗದೇ ಮೋಸ ಕೂಡ ಹೋಗಿದೀನಿ. ಇವೆಲ್ಲಾ ನಂಗೆ ಒಳ್ಳೆ ಅನುಭವಗಳನ್ನ ಕೊಟ್ಟಿದೆ. (ಕೊಡ್ತಾ ಇದೆ)
ಆದ್ರೆ ಒಂದು ಬೇಡಿಕೆ. ಕಡಿಮೆ ಸಂಭಾವನೆಗೆ ಬರೋ ಕನ್ನಡದವರನ್ನೇ ಬೆಳೆಸಿ. ಅವಕಾಶಗಳನ್ನ ಕೊಡಿ. ಬಾಂಬೆ,ಅಲ್ಲಿ- ಇಲ್ಲಿ ಇರೋ ಹುಡುಗಿಯರನ್ನೇ ನೀವಾಳಿಸಿ ಬಿಸಾಕೋ ಅಂಥ ಅದ್ಭುತ ಪ್ರತಿಭೆಗಳು ನಮ್ಮ ಕನ್ನಡದಲ್ಲಿದ್ದಾರೆ. ಒಂದು ಚಿಕ್ಕ ಅವಕಾಶ ಬಹುಷಃ ಅವರ ಜೀವನವನ್ನೇ ಬದಲಾಯಿಸಬಹುದು. ಅನ್ಯಾಯ ಮಾಡಬೇಡಿ ಅಷ್ಟೇ. ನನಗೂ ಕೂಡ.
– ಕೃತ್ತಿಕಾ ರವೀಂದ್ರ
https://m.facebook.com/story.php?story_fbid=4255085074519185&id=100000532021557
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಹೊಸವರ್ಷಕ್ಕೆ ರಾಘಣ್ಣನ ‘ರಾಜತಂತ್ರ’ ಬಿಡುಗಡೆ

ಸುದ್ದಿದಿನ ಡೆಸ್ಕ್ : ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ ಲಿ ಲಾಂಛನದಲ್ಲಿ ಜೆ.ಎಂ.ಪ್ರಹ್ಲಾದ್, ವಿಜಯ್ ಭಾಸ್ಕರ್ ಹರಪನಹಳ್ಳಿ ಹಾಗೂ ಪಿ.ಆರ್.ಶ್ರೀಧರ್ ಅವರು ನಿರ್ಮಿಸಿರುವ, ರಾಜ್ಯ ಪ್ರಶಸ್ತಿ ವಿಜೇತ ನಟ ರಾಘವೇಂದ್ರ ರಾಜಕುಮಾರ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ರಾಜತಂತ್ರ ಚಿತ್ರ ಈ ವಾರ ಅಂದರೆ ಹೊಸವರ್ಷದ ಮೊದಲದಿನ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿರುವ ಈ ಚಿತ್ರದ ನಿರ್ದೇಶಕರು ಪಿ.ವಿ.ಆರ್ ಸ್ವಾಮಿ ಗೂಗರದೊಡ್ಡಿ.
ಶ್ರೀಸುರೇಶ್ ಸಂಗೀತ ನಿರ್ದೇಶನ, ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ನಾಗೇಶ್ ಸಂಕಲನ, ಚಂದನ್ ಕಲಾ ನಿರ್ದೇಶನ ಹಾಗೂ ವೈಲೆಂಟ್ ವೇಲು, ರಾಮ್ ದೇವ್, ಅಲ್ಟಿಮೆಟ್ ಶಿವು
ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ರಾಘವೇಂದ್ರ ರಾಜಕುಮಾರ್, ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ರಂಜನ್ ಹಾಸನ್, ಶಂಕರ್ ಅಶ್ವಥ್, ನೀನಾಸಂ ಅಶ್ವಥ್, ಮುನಿರಾಜು, ವಿಜಯಭಾಸ್ಕರ್, ಪ್ರತಾಪ್ ಸಿಂಹ ಅಗರ, ಶಿವಾನಂದ, ಪ್ರಕಾಶ್ ಕಾರಿಯಪ್ಪ, ವೆಂಕಟೇಶ್ ಪ್ರಸಾದ್, ಹೋಳಿ ವೆಂಕಟೇಶ್, ಸ್ವಾತಿ ಅಂಬರೀಶ್, ವಲ್ಲಭ್, ಪ್ರವೀಣ್, ಉಮೇಶ್, ಕುಮಾರ್, ಕನ್ನಡ ಪ್ರೇಮ್, ಲಕ್ಷ್ಮಣ್, ಭೀಮ, ಆನಂದ್ ಪನ್ನೇದೊಡ್ಡಿ, ಹೇರಂಭ, ಸತೀಶ್ ಗೌಡ, ಮೀರಾ ಶ್ರೀ ಗೌಡ ಮುಂತಾದವರು ರಾಜತಂತ್ರ ದ ತಾರಾಬಳಗದಲ್ಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿಡಿಯೋ | ಮಿಲಿಯನ್ ವೀವ್ಸ್ ದಾಟಿ ಮುನ್ನುಗ್ಗುತ್ತಿದೆ ಚಂದನ್ ಶೆಟ್ಟಿ ‘ಪಾರ್ಟಿ ಫ್ರೀಕ್’ ಹಾಡು

ಸುದ್ದಿದಿನ ಡೆಸ್ಕ್ : ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿಬಂದ ಪಾರ್ಟಿ ಫ್ರೀಕ್ ಹಾಡು ಶನಿವಾರ ಯೂನೈಟೆಡ್ ಆಡಿಯೋಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿದೆ. ಹಾಡಿನ ಬಗ್ಗೆ ಮಾಹಿತಿ ನೀಡುವ ಉದ್ದೇಶಕ್ಕೆ ಸುದ್ದಿಗೋಷ್ಟಿ ಕರೆದಿದ್ದ ತಂಡ, ಹಾಡಿನ ಹುಟ್ಟು ಮತ್ತು ಅದರ ಹಿನ್ನೆಲೆಯನ್ನು ಬಿಚ್ಚಿಟ್ಟಿತು. ಚೈತನ್ಯ ಲಕಂಸಾನಿ ಈ ಹಾಡಿಗೆ ಬಂಡವಾಳ ಹೂಡಿದ್ದಾರೆ.
ಮೂಲತಃ ಆಂಧ್ರದವರಾದ ಚೈತನ್ಯ, ಸಿನಿಮಾ ಕ್ಷೇತ್ರದಲ್ಲಿ ನೆಲೆಯೂರಬೇಕೆಂದು ಯೂನೈಟೆಡ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಮೊದಲಾರ್ಥವಾಗಿ ಕನ್ನಡ ಮತ್ತು ತೆಲುಗಿನಲ್ಲಿ ಹೊಸ ವರ್ಷಾಚರಣೆಗೆ ಉಡುಗೊರೆ ರೂಪದಲ್ಲಿ ಮತ್ತು ಬ್ಯಾನರ್ ಲಾಂಚ್ ಮಾಡುವ ಉದ್ದೇಶಕ್ಕೆ ಪಾರ್ಟಿ ಫ್ರೀಕ್ ಎಂಬ ಹಾಡನ್ನು ನಿರ್ಮಾಣ ಮಾಡಿದ್ದಾರೆ.
ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ನೀಡಿ ಧ್ವನಿಯನ್ನೂ ನೀಡಿರುವ ಚಂದನ್ ಶೆಟ್ಟಿ ಮಾತನಾಡಿ, ಒಂದು ವಾರದ ಹಿಂದಷ್ಟೇ ಈ ಆಡಿಯೋ ಸಂಸ್ಥೆ ಲಾಂಚ್ ಆಗಿದೆ. ಒಂದೇ ವಾರದಲ್ಲಿ ಯೂಟ್ಯೂಬ್ನಲ್ಲಿ ಒಳ್ಳೇ ರೀಚ್ ಸಿಕ್ಕಿದೆ. ಹೊಸಹೊಸ ಪ್ರತಿಭೆಗಳಿಗೋಸ್ಕರ ಈ ಚಾನೆಲ್ ತೆರೆಯಲಾಗಿದೆ.
ಇನ್ನು ಹಾಡಿನ ಬಗ್ಗೆ ಹೇಳುವುದಾದರೆ, 3 ದಿನಗಳ ಕಾಲ ಶೆರ್ಟನ್ ಹೊಟೇಲ್ನಲ್ಲಿ ಶೂಟಿಂಗ್ ಮಾಡಲಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಹಾಡು ಮೂಡಿಬಂದಿದ್ದು, ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂಸ್ಥೆ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಇದರಿಂದ ನಮ್ಮ ಬೆಳವಣಿಗೆ ಜತೆಗೆ ಇಂಡಸ್ಟ್ರಿಯ ಬೆಳವಣಿಗೆಗೂ ಸಹಕಾರಿ. ಈ ಥರದ ನಿರ್ಮಾಪಕರು ಇಂಡಸ್ಟ್ರಿಗೆ ಬೇಕು ಎಂದರು.
ಇನ್ನು ಈ ಹಾಡಿಗೆ ಬಂಡವಾಳ ಹೂಡಿರುವ ಚೈತನ್ಯ ಲಕಂಸಾನಿ ಮಾತನಾಡಿ, ತುಂಬ ಕಿರು ಅವಧಿಯಲ್ಲಿ ಈ ಹಾಡನ್ನು ಸೃಷ್ಟಿ ಮಾಡಿದ್ದೇವೆ. ನಮ್ಮ ತಾಂತ್ರಿಕ ತಂಡಕ್ಕೆ ಧನ್ಯವಾದ. ಈ ಆಡಿಯೋ ಸಂಸ್ಥೆ ತೆರೆಯಲು ಮೂಲ ಉದ್ದೇಶ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರ ಸಲುವಾಗಿ. ಯಾರಿಗೆ ಸಂಗೀತ ಮತ್ತು ಸಿನಿಮಾ ಆಸಕ್ತಿ ಇದೆಯೋ ಅವರಿಗೆ ನಮ್ಮ ಸಂಸ್ಥೆಯಿಂದ ಸ್ವಾಗತ ಎಂದರು.
ಇನ್ನು ಈ ಹಾಡಿನ ನಿರ್ಮಾಣದಲ್ಲಿ ಭಾಗವಾಗಿರುವ ನಟ ಧರ್ಮ ಸಹ ಹಾಡು ಮತ್ತು ಈ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು.
‘ಸಿನಿಮಾ ಬಗ್ಗೆ ಮಾತನಾಡುತ್ತ ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ ರಿಜಿಸ್ಟರ್ ಆಯ್ತು. ಅದನ್ನು ರೀಚ್ ಮಾಡಿಸುವ ಸಲುವಾಗಿ ಚಂದನ್ ಶೆಟ್ಟಿ ಅವರಿಂದ ಆಲ್ಬಂ ಮಾಡುವ ಬಗ್ಗೆ ನಿರ್ಧಾರವಾಯ್ತು. ಆಗ ಯುನೈಟೆಡ್ ಆಡಿಯೋ ಕಂಪನಿ ತೆರೆದೆವು. ಈ ಸಂಸ್ಥೆಯಲ್ಲಿ ನಾನೂ ಸಹ ಪಾಲುದಾರನಾಗಿದ್ದೇನೆ. ಅಂದುಕೊಂಡಿದ್ದಕ್ಕಿಂತ ಚೆಂದವಾಗಿ ಹಾಡು ಮೂಡಿಬಂದಿದೆ. ಮುಂದಿನ ದಿನಗಳಲ್ಲಿ ಇದೇ ಸಂಸ್ಥೆಯಿಂದ ಸಿನಿಮಾ ಸಹ ನಿರ್ಮಾಣವಾಗಲಿದೆ ಎಂದರು.
ಪಾರ್ಟಿ ಫ್ರೀಕ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 36 ಲಕ್ಷ ಮೊತ್ತವನ್ನು ಖರ್ಚು ಮಾಡಲಾಗಿದೆ. ಮೂರು ದಿನದಲ್ಲಿ ಚಿತ್ರೀಕರಣ ಮುಗಿಸಿಕೊಂಡ ಈ ಹಾಡಿನಲ್ಲಿ 80ಕ್ಕೂ ಅಧಿಕ ರಷ್ಯನ್ ಡಾನ್ಸರ್ಗಳಿದ್ದಾರೆ. 100ಕ್ಕೂ ಅಧಿಕ ಇಲ್ಲಿನ ನೃತ್ಯಗಾರರಿದ್ದಾರೆ. ಟಾಲಿವುಡ್ ನೃತ್ಯ ನಿರ್ದೇಶಕಿ ಅನ್ನಿ ಮಾಸ್ಟರ್ ಜತೆಗೆ ನಿಶ್ವಿಕಾ ನಾಯ್ಡು, ನಿವೇದಿತಾ ಗೌಡ ಸಹ ಈ ಹಾಡಿನಲ್ಲಿದ್ದಾರೆ. ಛಾಯಾಗ್ರಹಣ ಶ್ರೀಶ ಕುದುವಳ್ಳಿ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ರಂಜಿತ್ ಸಂಕಲನ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ5 days ago
ಕಿಸಾನ್ ಸಮ್ಮಾನ್ನಡಿ 9 ಕೋಟಿ ರೈತರಿಗೆ 1.34 ಲಕ್ಷ ಕೋಟಿ ರೂ. ಸಹಾಯಧನ : ಅಮಿತ್ ಶಾ
-
ದಿನದ ಸುದ್ದಿ6 days ago
ದಾವಣಗೆರೆ | ಜ.18 ರಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಶಂಕುಸ್ಥಾಪನೆ ಹಾಗೂ ನೂತನ ತಾತ್ಕಾಲಿಕ ಬಸ್ ನಿಲ್ದಾಣದ ಉದ್ಘಾಟನೆ
-
ಭಾವ ಭೈರಾಗಿ5 days ago
ಕವಿತೆ | ಎದೆಯಾಚೆಗಿನ ತಲ್ಲಣ
-
ದಿನದ ಸುದ್ದಿ4 days ago
ಹುಬ್ಬಳ್ಳಿ- ಧಾರವಾಡ ಬೈಪಾಸ್ ರಸ್ತೆಯಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ನಿತೇಶ ಪಾಟೀಲ
-
ದಿನದ ಸುದ್ದಿ5 days ago
ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಂದ ಸಂಗೀತ ನೃತ್ಯ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಜಗಳೂರು | ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಸಮಿತಿಯಿಂದ ದೇವರ ಎತ್ತುಗಳಿಗೆ ಮೇವು ಸಂಗ್ರಹಣೆ
-
ದಿನದ ಸುದ್ದಿ4 days ago
ಸಂತೇಬೆನ್ನೂರು | ರಾಷ್ಟ್ರಪತಿ ಪದಕ ಪ್ರಶಸ್ತಿ ವಿಜೇತ ನಿವೃತ್ತ ಎ.ಸಿ.ಪಿ ರುದ್ರಪ್ಪ ಎಮ್ ಎನ್. ಅವರಿಗೆ ಗ್ಯಾಲಕ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಭಿನಂದನಾ ಕಾರ್ಯಕ್ರಮ
-
ದಿನದ ಸುದ್ದಿ3 days ago
ದಾವಣಗೆರೆ | 120 ಕೋಟಿ ವೆಚ್ಚದಲ್ಲಿ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣ : ಸಂಸದ ಜಿ.ಎಂ.ಸಿದ್ದೇಶ್ವರ