ದಿನದ ಸುದ್ದಿ
ಆನೆಗಳು ಓಡೋದನ್ನು, ನಡೆಯೋದನ್ನ ನೋಡಿದ್ದೇವೆ..! ಮಲಗೋದು ಹೇಗೆ? ಇಲ್ಲಿದೆ ಅಪರೂಪದ ಚಿತ್ರ..!

- ಜಿರೊಟುಜೆನ್ ಶಾರದಾ
15 ಆನೆಗಳಿರುವ ಏಶಿಯನ್ ಆನೆ (ಏಶಿಯಾಟಿಕ್ ಎಲಿಫಂಟ್, ಬದುಕುಳಿದಿರುವ ಜೀನಸ್ ಎಲಿಫಸ್ ತಳಿ ) ತಂಡ ಸುಮಾರು 500 ಕಿಮೀ ಕ್ರಮಿಸಿದ ಮೇಲೆ ಆರಾಮಾಗಿ ವಿಶ್ರಮಿಸುತ್ತಿರುವ ಚಿತ್ರವನ್ನು ,ವಿಡಿಯೋಗಳನ್ನು ಚೀನಾ ಇತ್ತೀಚೆಗೆ ಬಿಡುಗಡೆ ಮಾಡಿದೆ. ಕಳೆದೊಂದು ವಾರದಿಂದ ಚೀನಾ ಸೊಶಿಯಲ್ ಮಿಡಿಯಾ ತುಂಬೆಲ್ಲಾ ವಿಶ್ವದ ಗಮನ ಸೆಳೆದಿರುವ ಈ ಆನೆಗಳದ್ದೇ ಸುದ್ದಿ.
ಬಿಬಿಸಿ ನ್ಯೂಸ್ , ದಿ ವಾಲ್ ಸ್ಟ್ರೀಟ್ ಜರ್ನಲ್ ಸೇರಿದಂತೆ ವಿಶ್ವ ಮಾಧ್ಯಮ ಈ ಆನೆಗಳ ವರದಿ ಮಾಡಿವೆ. “ಅಲೆದಾಡುವ ಆನೆಗಳು” ಎಂದು ಚೀನಾ ಜನತೆ ಇದನ್ನು ಹೆಸರಿಸಿದ್ದು ಇಲ್ಲಿನ ಸರಕಾರ ಈ ಆನೆಗಳ ರಕ್ಷಣೆಗೆ 500 ಜನರನ್ನು 14 ದ್ರೋಣ್ ಕ್ಯಾಮೆರಾಗಳನ್ನು ನೇಮಿಸಿದೆ.
ಈ ರೀತಿಯ ಆನೆ ಹಿಂಡೊಂದು ಮೊದಲ ಬಾರಿ ಸತತ 15 ತಿಂಗಳು ಐದನೂರು ಕಿಮಿ ಕ್ರಮಿಸಿದ್ದನ್ನು ಚೀನಾ ದಾಖಲು ಮಾಡಿದೆ. ಸಾಮಾನ್ಯವಾಗಿ ಆನೆಗಳು ತಾವಿರುವ ಪ್ರದೇಶದಿಂದ ಹೊರ ಹೋಗುವುದು ಕಡಿಮೆ. ಎಲ್ಲಿಂದ ಪ್ರಯಾಣವನ್ನು ಈ ಆನೆಗಳು ಆರಂಭಿಸಿದ್ದವೋ ಗೊತ್ತಿಲ್ಲ (ಒಂದು ಮಾಹಿತಿ ಪ್ರಕಾರ ಲಾವೊಸ್/ಮ್ಯಾನ್ಮಾರ್ -ಚೀನಾ ಗಡಿಯಿಂದ ಹೊರಟಿರಬಹುದು ಎಂಬುದು) ಆದರೆ ಜಿಯಾಂಗ್ ಪಟ್ಟಣ ಬಳಿಯ ಹಳ್ಳಿಯೊಂದರ ಅರಣ್ಯ ಪ್ರದೇಶದಲ್ಲಿ ಈ ಹಿಂಡು ಮಲಗಿ ವಿಶ್ರಾಂತಿ ಪಡೆದಿದೆ.
ಈ ಪ್ರದೇಶದಲ್ಲಿ ವಿಪರೀತ ಮಳೆ ಇದ್ದು, ಮಳೆ ನಿಂತ ಬಳಿಕ ನಿದ್ದೆಗೆ ಮೊರೆ ಹೋಗಿವೆ. ಸಾಮಾನ್ಯವಾಗಿ ಆನೆಗಳನ್ನು ಕಾಲೇಜಿಗೆ ಹೋಗುವ ಹುಡುಗರಿಗೆ ಹೊಲಿಸಲಾಗುತ್ತದೆ. ಸೂರ್ಯೋದಯದ ವೇಳೆ ನಿದ್ದೆ ಮಾಡುವ ಇವುಗಳು ಸಾಯಂಕಾಲದ ಹೊತ್ತಿಗೆ ಬ್ರೆಕ್ ಪಾಸ್ಟ್, ಮಧ್ಯಾಹ್ನದ ಊಟ’ ಎಲ್ಲವನ್ನು “ಬ್ರಂಚ್” ರೂಪದಲ್ಲಿ ಒಟ್ಟಿಗೆ ಮುಗಿಸಿ ರಾತ್ರಿ ಅಂಡಲೆಯುತ್ತವೆ.
ಅಲೆದಾಡುವ ಆನೆಗಳ ಈ ಹಿಂಡಿನಲ್ಲಿ ಒಟ್ಟು 15 ಆನೆಗಳಿದ್ದು ಮೂರು ಮರಿ ಆನೆಗಳು. ಒಂದು ಗಂಡು ಆನೆ ಮಾತ್ರ ಗುಂಪಿನಿಂದ 4 ಕಿಮಿ ಮುಂದೆ ಇದ್ದು ಗುಂಪಿನ ಉಸ್ತುವಾರಿ ಹೊತ್ತಿದೆ ಎಂದು ಯುನಾನ್ ಅರಣ್ಯ ಅಗ್ನಿಶಾಮಕದಳ ತಿಳಿಸಿದೆ. ದಟ್ಟ ಅರಣ್ಯ ಪ್ರದೇಶ, ಹಳ್ಳಿ, ಗುಡ್ಡಗಾಡು ಪಟ್ಟಣಗಳನ್ನು ಕ್ರಮಿಸಿ ಹೋಗುವ ಇವುಗಳು ರಸ್ತೆ ದಾಟುವಾಗ ಚೀನಾ ಸರಕಾರ ಸಂಪೂರ್ಣ ರಕ್ಷಣೆ ನೀಡಿದೆ. ತಾವು ನಡೆಸಿದ ಪರೇಡ್ ವೇಳೆ ಈ ಆನೆಗಳು ಮಿಲಿಯನ್ ಡಾಲರ್ ಮೌಲ್ಯದ ಆಹಾರ ಧಾನ್ಯಗಳನ್ನು ತಿಂದು ಮುಗಿಸಿವೆ.
ಕಬ್ಬು ಮತ್ತು ಆಲ್ಕೊಹಾಲ್ ನ ಮತ್ತು-ಗಮ್ಮತ್ತಿನ ಈ ಆನೆಗಳ ಆಟಾಟೋಪಕ್ಕೆ ಈಗ ಎಲ್ಲಿಲ್ಲದ ಪ್ರಚಾರ. ಶೆಹನ್ ಶಾ ಸ್ಟೈಲ್ ನಲ್ಲಿ ಪಟ್ಟಣಕ್ಕೆ ಬರುವ ಈ ಆನೆಗಳು ಕಟ್ಟಡಗಳನ್ನು ಗುಮ್ಮಿ ದಾಂಧಲೆ ಮಾಡಿವೆ. ಸೊಂಡಿಲುಗಳನ್ನು ಬಾಗಿಲು ಮತ್ತು ಕಿಟಕಿಯೊಳಗೆ ತೂರಿಸಿವೆ. ಜನವಸತಿ ತುಂಬಾ ಇರುವ ತುನ್ಮಿಂಗ್ ನಗರಕ್ಕೂ ಈ ಆನೆಗಳು ಭೇಟಿ ನೀಡಿವೆ.
ಮನುಷ್ಯ ನಿರ್ಮಿತ ನಗರ ಪ್ರದೇಶದ ಗಟರ್ ನಲ್ಲಿ ಬಿದ್ದ ಮರಿ ಆನೆಯನ್ನು ತಾಯಿ ಆನೆ ಎತ್ತಿದ್ದು ಈಗ ಚೀನಾ ಸೊಶಿಯಲ್ ಮಿಡಿಯಾ ತುಂಬ ವೈರಲ್. ಜನರಿಗೆ ಪುಳಕ, ತಳಮಳ.
ಆನೆಗಳು ಬರುವ ದಾರಿಯಲ್ಲಿ ಜನ ಮೆಕ್ಕೆಜೋಳ, ಬಾಳೆಹಣ್ಣು ಮತ್ತು ಅನಾನಸು ಇಟ್ಟಿದ್ದಾರೆ. ಮೊದಲ ಎರಡನ್ನು ಮುಗಿಸಿರುವ ಆನೆಗಳು ಕೊನೆಯದನ್ನು ಮೂಸಿಯೂ ನೋಡಿಲ್ಲ.
ಆಲ್ಕೊಹಾಲ್ ಬಗ್ಗೆ ಸಾಕಷ್ಟು ಆಸಕ್ತಿ ತೋರಿಸಿರುವ ಇವು ಹಳ್ಳಿಗಳು ಮತ್ತು ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಆಲ್ಕೊಹಾಲ್ ತುಂಬಿಸಿರುವ ದೊಡ್ಡ ದೊಡ್ಡ ಬ್ಯಾರಲ್ ಗಳಿಟ್ಟ ಪ್ರದೇಶಕ್ಕೆ ಬಂದು ಗಡದ್ದಾಗಿ ಕುಡಿದು, ತೇಕಿವೆ. ಮರಿ ಆನೆಯೊಂದು ಗಂಟಲು ಪೂರ್ತಿ ಕುಡಿದು ಥೇಟ್ ಮನುಷ್ಯರಂತೆ ತೂರಾಡಿ ದಾರಿ ತಪ್ಪಿಸಿಕೊಂಡು ಮತ್ತು ಪೂರ್ತಿ ಇಳಿದ ಮೇಲೆ ಮಾರನೆ ದಿನ ತನ್ನ ತಂಡವನ್ನು ಸೇರಿದೆ.
ಚೀನಾ ಸುದ್ದಿ ವಾಹಿನಿಗಳು ಈ ಆನೆಗಳಿಗಾಗಿ ಸ್ಪೆಶಲ್ ಬುಲೆಟಿನ್ ಮಾಡಿವೆ. ಆರಂಭದಲ್ಲಿ ಆನೆಗಳನ್ನು ನೈರುತ್ಯದೆಡೆಗೆ ತಿರುಗಿಸುವ ವಿಫಲ ಯತ್ನ ನಡೆಯಿತು. ಆದರೆ ಕೊನೆಯಲ್ಲಿ 500 ಕಿಮೀ ಕ್ರಮಿಸಿದ ಬಳಿಕ ಬಹುಶ: ತಾವು ಬಂದಂಥ ಮೂಲ ನೈರುತ್ಯ ಯುನಾನ್ ಪ್ರಾಂತ್ಯದ ಕ್ಷುವಾನ್ಬನ್ನಾದ ಮೆಂಗ್ಯಾಂಜಿ ಸಂರಕ್ಷಿತ ಉದ್ಯಾನವನಕ್ಕೆ ಮರಳಬಹುದು ಎಂಬುದು ಇಲ್ಲಿನ ಅಧಿಕಾರಿಗಳ ಅಭಿಪ್ರಾಯ. ಈ ತಳಿ (ಏಶಿಯನ್ ಆನೆ) ಭಾರತೀಯ ಉಪಖಂಡ ಮತ್ತು ಆಗ್ನೇಯ ಏಶಿಯಾದಲ್ಲಿ ಕಂಡು ಬರುವ ಸಂರಕ್ಷಿತ ಪ್ರಾಣಿ. ಪಶ್ಚಿಮದಲ್ಲಿ ಭಾರತ ಉತ್ತರದಲ್ಲಿ ನೇಪಾಳ, ದಕ್ಷಿಣದಲ್ಲಿ ಸುಮಾತ್ರಾ, ಪೂರ್ವದಲ್ಲಿ ಬೊರ್ನಿಯೊದಲ್ಲಿ ಇವು ಹರಡಿಕೊಂಡಿವೆ. ಜೀವಿತಾವಧಿ 48 ವರ್ಷ. ಗಂಡು ಆನೆ 4000 ಕೆಜಿ ಹೆಣ್ಣು ಆನೆ 2700 ಕೆಜಿ ಇರುತ್ತದೆ.
Shhhh, the elephants are sleeping. This herd of wild Asian elephants was spotted taking a group nap as they migrated across southwest China. Scientists have been tracking them for hundreds of miles as a recent population boom resulted in the animals expanding their territory 🐘 pic.twitter.com/kkQtKUbXmI
— NowThis (@nowthisnews) June 9, 2021
ವಿಶ್ವದ ಗಮನ ಸೆಳೆದಿರುವ ಈ ಆನೆಗಳು ಯಾವಾಗ ಮತ್ತು ಏಕೆ ಈ ರೀತಿಯ ಟ್ರೆಕ್ಕಿಂಗ್ ಗೆ ಇಳಿದಿರಬಹುದು ಎಂಬುದು ಈಗಲೂ ನಿಗೂಢ. ಅನನುಭವಿ ಆನೆಯೇನಾದರೂ ಹಿಂಡಿನ ನೇತೃತ್ವ ವಹಿಸಿದ್ದರಿಂದ ಈ ರೀತಿ ಆಗಿರಬಹುದೇ ಅಥವಾ ವಾಸಿಸಲು ಬೇರೆಯದೇ ಮನೆ ಹುಡುಕುವ ಯೋಚನೆ ಈ ಆನೆಗಳಿಗೆ ಬಂದಿರಬಹುದೇ ಎಂಬುದು ತಜ್ಞರನ್ನು ಕಾಡಿದೆ. ವಿಜ್ಞಾನಿಗಳ ಪ್ರಕಾರ ಆನೆಗಳು ಇಷ್ಟೊಂದು ದೂರ ಪ್ರಯಾಣ ಮಾಡಿದ್ದು ಇದೇ ಮೊದಲು.
“ಎಲ್ಲಿಯೂ ನಿಲ್ಲದಿರು ಮನೆಯನೆಂದೂ ಕಟ್ಟದಿರು” ಎಂದು ಈ ಆನೆಗಳಿಗೂ ಅನ್ನಿಸಿರಬಹುದೇ?
ಚೀನಾದಲ್ಲೆಲ್ಲ ಈಗ “ಅಲೆದಾಡುವ ಆನೆಗಳು ಬರುತ್ತಿವೆ. ದಾರಿ ಬಿಡಿ..”
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ

ಸುದ್ದಿದಿನಡೆಸ್ಕ್:ಕರ್ನಾಟಕದ ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಧಿಕಾರಿ ವಿಧಿಸಿರುವ ನಿಷೇಧ ಆದೇಶ ರದ್ದು ತೆರವುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.
ಇದು ಮುಂದಿನ ದಿನಗಳಲ್ಲಿ ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತಾರಾಜ್ಯ ಸಾಗಾಣೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧವು ಸಾವಿರಾರು ರೈತರ ಜೀವನ ಉಪಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರ ಇಂದು ಕೆಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್‌ಪೋರ್ಸ್ ಎಡಿಜಿಪಿ ಯಾಗಿ ವರ್ಗಾವಣೆ ಮಾಡಿದೆ.
ಕೆಎಸ್‌ಆರ್‌ಟಿಸಿ ಮಹಾನಿರ್ದೆಶಕರನ್ನಾಗಿ ಅಕ್ರಂ ಪಾಶಾ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ

ಸುದ್ದಿದಿನಡೆಸ್ಕ್:ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸಂತ್ರಸ್ಥರು ಮತ್ತು ಅವರ ಕುಟುಂಬಗಳಿಗೆ ಪಾರದರ್ಶಕತೆ ನ್ಯಾಯ ದೊರಕುವಂತಾಗಲು ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಸಂತ್ರಸ್ಥರಿಗೆ ನ್ಯಾಯ ಒದಗಿಸುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಮಸ್ಯೆಗೆ ಒಳಗಾದ ಮಕ್ಕಳ ವಿವರವನ್ನು ಕೋರಿ ಸಿಐಡಿಗೆ ಮಕ್ಕಳ ಹಕ್ಕು ಆಯೋಗ ನೋಟಿಸ್ ಜಾರಿ ಮಾಡಿದೆ.
ಸಾರ್ವಜನಿಕ ದೂರು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಆಯೋಗ ಈ ಬಗ್ಗೆ ಹೆಚ್ಚಿನ ನಿಖರ ಮಾಹಿತಿ ನೀಡುವಂತೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ವಿಜ್ಞಾನಿಗಳ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ : ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್
-
ದಿನದ ಸುದ್ದಿ1 day ago
ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ1 day ago
ರಾಜ್ಯದ ಹಲವೆಡೆ ಧಾರಾಕಾರ ಮಳೆ ; ಜನಜೀವನ ಅಸ್ತವ್ಯಸ್ತ
-
ದಿನದ ಸುದ್ದಿ1 day ago
ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ
-
ದಿನದ ಸುದ್ದಿ4 days ago
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ ; ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day ago
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ಇಂಡಿಯಾ ಪ್ರಯಾಣಿಕ ವಿಮಾನ ಪತನ : 242 ಪ್ರಯಾಣಿಕರು ಸಾವು
-
ದಿನದ ಸುದ್ದಿ4 days ago
ಜೂನ್ 9, 2025 ರ ಅಡಿಕೆ ರೇಟು ಹೀಗಿದೆ
-
ದಿನದ ಸುದ್ದಿ1 day ago
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ