ಸುದ್ದಿದಿನ,ಬಾಗಲಕೋಟೆ: ಕೇಂದ್ರ ಸರಕಾರವು ಫಿಟ್ ಇಂಡಿಯಾ ಮೂಮೆಂಟರ್ ಯೋಜನೆಯಡಿ ಫಿಟ್ ಇಂಡಿಯಾ ಪ್ರೀಡಮ್ ರನ್ ಕಾರ್ಯಕ್ರಮವನ್ನು ಅಕ್ಟೋಬರ 2 ವರೆಗೆ ನಡೆಯಲಿದ್ದು, ಆಸಕ್ತ ಕ್ರೀಡಾಪಟುಗಳು ಆನ್ಲೈನ್ನಲ್ಲಿ www.fitindia.gov.inನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿ ಭಾಗವಹಿಸುವಂತೆ ಯುವ ಸಬಲೀಕರಣ...
ಸೋಮನಗೌಡ.ಎಸ್.ಎಂ.ಕಟ್ಟಿಗೆಹಳ್ಳಿ ಪ್ರಧಾನಿಮೋದಿ ಅವರು ಫಿಟ್ ಇಂಡಿಯಾ ಚಳವಳಿಗೆಚಾಲನೆ ನೀಡಲಿದ್ದಾರೆ ಎಂದು ನಿರೂಪಕಿ ಹೇಳುತ್ತಿದ್ದಂತೆಒಮ್ಮೆಲೆ ನನಗೆ ಕೇಳಿಸಿದ್ದು ‘ಕ್ವಿಟ್ ಇಂಡಿಯಾ’ ಚಳವಳಿನಾ’ಎಂದು! ಅನಂತರ ದಿಟ್ಟಿಸಿ ಸೂಕ್ಷ್ಮವಾಗಿಟಿವಿ ನೋಡಿದಾಗ ಮೋದಿ ಅವರು ‘ಸದೃಢ ಭಾರತ ಸಶಕ್ತಭಾರತ’ಕ್ಕೆ ದೈಹಿಕ ಚಟುವಟಿಕೆ ಮತ್ತು ಕ್ರೀಡೆಗಳಲ್ಲಿಎಲ್ಲರೂ ತೊಡಗಿಕೊಳ್ಳಿ ಎಂದು ಹೇಳುವ ಸಾರವೇ ಫಿಟ್ಇಂಡಿಯಾ ಚಳವಳಿ ಎಂದಾಗ ಅರ್ಥವಾಯಿತು. ‘ಹಮ್ ಫಿಟ್, ತೋ ಇಂಡಿಯಾ ಫಿಟ್’ ಹ್ಯಾಶ್ಟ್ಯಾಗ್ನಲ್ಲಿ ಕಳೆದ ವರ್ಷ ಕೇಂದ್ರದ ಕ್ರೀಡಾ ಸಚಿವರಾಜವರ್ಧನ ಸಿಂಗ್ ರಾಥೋಡ್ (ಈಗ ಮಾಜಿ) ಟ್ಟೀಟರ್ನಲ್ಲಿ ಫಿಟ್ನೆಸ್ ಸವಾಲೆಸೆದಿದ್ದರು. ಇದಕ್ಕೆಕ್ರೀಡಾಪಟುಗಳು, ಸಿನಿಮಾ ತಾರೆಯರು ಸವಾಲುಸ್ವೀಕರಿಸಿ ಯೋಗ, ಜಿಮ್, ಕಚೇರಿಯಲ್ಲೇ ವ್ಯಾಯಾಮಮಾಡಿ ಸಶಕ್ತ ಭಾರತಕ್ಕೆ ನಾವು ಬದ್ಧ ಎಂದು ಸಾಮಾಜಿಕಜಾಲತಾಣಗಳಲ್ಲಿ ಪ್ರಚಾರಗಿಟ್ಟಸಿಕೊಂಡಿದ್ದರು. 1942 ಆಗಸ್ಟ್ 8 ರಂದು ಕ್ರಿಪ್ಸ್ ಶಿಫಾರಸ್ಸುಗಳನ್ನುತಿರಸ್ಕರಿಸಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬಾಂಬೆಯಗೋವಳಿ ಮೈದಾನದಲ್ಲಿ ಸಭೆ ಸೇರಿ ‘ಭಾರತ ಬಿಟ್ಟುತೊಲಗಿ’ ಠರಾವನ್ನು ಅಂಗೀಕರಿಸಿತ್ತು. ಮಹಾತ್ಮಗಾಂಧಿಯವರು ‘ಬ್ರಿಟೀಷರು ತಕ್ಷಣ ಭಾರತ ಬಿಟ್ಟುತೊಲಗಿ. ಇಲ್ಲವಾದರೆ ಕಾನೂನು ಭಂಗ ಚಳವಳಿಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.ಭಾರತೀಯರಿಗೆ ‘ಮಾಡು ಇಲ್ಲವೇ ಮಡಿ’ ಎಂಬ ಕರೆನೀಡಿದ್ದರು.ಗಾಂಧೀಜಿಯವರು ಗುಜರಾತ್ ರಾಜ್ಯದವರು. ಈಗಪ್ರಧಾನಿ ಮೋದಿಯವರು ಕೂಡಾ ಗುಜರಾತ್ರಾಜ್ಯದವರೇ.‘ಕ್ವಿಟ್ ಇಂಡಿಯಾ’ ಚಳವಳಿಆರಂಭವಾಗಿದ್ದು 1942 ಆಗಸ್ಟ್ 8 ರಂದು.‘ಫಿಟ್ಇಂಡಿಯಾ’ ಚಳವಳಿ ಆರಂಭವಾಗಿದ್ದು 2019 ಆಗಸ್ಟ್29ರಂದು. ಆಗ ಭಾರತಕ್ಕೆ ಅಂಟಿದ್ದ ಬ್ರಿಟೀಷ್ ರೋಗತೊಳೆಯಲು ಕರೆ ನೀಡಿದ್ದು ಕ್ವಿಟ್ ಇಂಡಿಯಾ ಚಳವಳಿ.ಈಗ ಮೋದಿ ಅವರು ಸದೃಢ ಭಾರತ ಕಟ್ಟಲು ಫಿಟ್ಇಂಡಿಯಾ ಚಳವಳಿಗೆ ಕರೆ ನೀಡಿದ್ದಾರೆ. ಕುಸಿಯುತ್ತಿರುವ ಆರ್ಥಿಕತೆಯಿಂದ ದೇಶತಲ್ಲಣಗೊಂಡಿದೆ. ಉದ್ಯೋಗಗಳು ಮರೀಚಿಕೆಯಾಗಿ. ಯುವಜನತೆ ಉದ್ಯೋಗವಿಲ್ಲದೇ ಬೀದಿಗೆ ಬಿದ್ದಿದ್ದಾರೆ. ಈದೇಶದ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಆರೋಗ್ಯ, ಬಡತನ, ಹಸಿವು, ದಾರಿದ್ರ್ಯ ಎಲ್ಲೆಲ್ಲೂ ಜೀವಂತವಾಗಿರುವಕಾಲದಲ್ಲಿ ಇಂಡಿಯಾ ‘ಫಿಟ್ ಇಂಡಿಯಾ’ ಆಗಿದೆಯೇ? ಎಂದು ಮೊದಲು ಪ್ರಧಾನಿಯವರು ಮನಗಾಣಬೇಕು. ಸ್ವಾತಂತ್ರ್ಯ ಬಂದು 73 ವರ್ಷಗಳೇ ಕಳೆದಿವೆ. ಐತಿಹಾಸಿಕಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರಮೋದಿಯವರು ಈದೇಶದ ಬಡತನ ನಿವಾರಣೆ ಬಗ್ಗೆ, ಪರಿಸರ ರಕ್ಷಣೆಯ ಬಗ್ಗೆ ಮಾತನಾಡಿದ್ದರು. 2017ರಜುಲೈ 18ರಂದು ಕರ್ನಾಟಕದ ಗೋಕರ್ಣದ ದಲಿತಕುಟುಂಬದ ಮೂವರು ಹಸಿವಿನಿಂದ ಸತ್ತರು. ಕಳೆದಎರಡು ತಿಂಗಳ ಹಿಂದೆ ಆಂಧ್ರಪ್ರದೇಶದಲ್ಲಿ ಹಸಿವನ್ನುತಾಳಲಾರದೇ ಮಣ್ಣು ತಿಂದು ಇಬ್ಬರು ಮಕ್ಕಳುಮೃತಪಟ್ಟರು. ಈ ಸುದ್ದಿ ಇಡೀ ದೇಶದ ಹಸಿವು ಎಂಬಅಂಟು ಜಾಢ್ಯಕ್ಕೆ ಹಿಡಿದ ಕನ್ನಡಿ. ಆಹಾರದ ಹಕ್ಕುಅಭಿಯಾದನ ಭಾಗವಾಗಿ ಹಲವು ಸ್ವಯಂ ಸೇವಾಸಂಸ್ಥೆಗಳು ಸಿದ್ಧಪಡಿಸಿದ ಅಧ್ಯಯನ ವರದಿಯ ಪ್ರಕಾರ2015-2019ರವರೆಗೆ ಹಸಿವಿನಿಂದ ಸತ್ತವರ ಸಂಖ್ಯೆ 58. (ಜಾರ್ಖಂಡ್-16, ಉತ್ತರಪ್ರದೇಶ-16, ಒಡಿಶಾ-10, ಕರ್ನಾಟಕ-3, ದೆಹಲಿ-3, ಬಿಹಾರ-3, ಛತ್ತಿಸ್ಗಡ-3, ಆಂಧ್ರ-2 ರಾಜಸ್ಥಾನ-1, ಪ.ಬಂಗಾಳ-1) ಇದನ್ನುಮೊದಲು ಸರಿಪಡಿಸಿ ದಿಟ್ಟಕ್ರಮ ಕೈಗೊಂಡರೆ ಅದೇಅಲ್ಲವೇ ಫಿಟ್ ಇಂಡಿಯಾ? 2019 ಲೋಕಸಭೆಯ ಚುನಾವಣಾ ಆದ್ಯತಾವಿಷಯವಾಗಿ ಪ್ರಚಾರ ಮಾಡಿ,2ನೇ ಬಾರಿಗೆ ಆಡಳಿತಕ್ಕೆಬಂದ ಪ್ರಧಾನಿ ಮೋದಿ ಅವರ ಎನ್ಡಿಎ-2.0 ಸರ್ಕಾರಯುವಜನರಿಗೆ ಕೊಟ್ಟ ಉದ್ಯೋಗ ಭರವಸೆಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಉದ್ಯೋಗಕಳೆದುಕೊಂಡು ಬೀದಿಗೆ ಬಂದಿರುವ ನಿರುದ್ಯೋಗಿಗಳಸಂಖ್ಯೆ ದಿನೇ ದಿನೇ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಆಟೊಮೊಬೈಲ್ ಕ್ಷೇತ್ರ, ಜವಳಿ ಕ್ಷೇತ್ರ ಹೀಗೆ ಎಲ್ಲೆಲ್ಲೂಉದ್ಯೋಗ ಕಳೆದುಕೊಂಡು ಅಭದ್ರರಾಗಿದ್ದಾರೆ. ಪ್ರಧಾನಿಮೋದಿ ಅವರ ಎನ್ಡಿಎ-1 ಸರ್ಕಾರ ಕಳೆದ 5 ವರ್ಷಗಳಲ್ಲಿ ಪ್ರಮುಖ ಯೋಜನೆಗಳ ಮೂಲಕಸೃಷ್ಟಿಯಾಗಿರುವ ಉದ್ಯೋಗ 27.5ರಷ್ಟು. 2022ರೊಳಗೆ‘ಮೇಕ್ ಇನ್ ಇಂಡಿಯಾ’ ಯೋಜನೆಯೊಂದರಲ್ಲೇ 10 ಕೋಟಿ ಉದ್ಯೋಗ ನೀಡುವ ಭರವಸೆಯನ್ನು ಕೇಂದ್ರನೀಡಿತ್ತು. ಆದರೆ ಸೃಷ್ಟಿಯಾದ ಉದ್ಯೋಗಸಾಸಿವೆಯಷ್ಟು. ಅತಿವೃಷ್ಠಿ-ಅನಾವೃಷ್ಠಿಗಳಿಂದಕೃಷಿರಂಗದಲ್ಲೂ ಉದ್ಯೋಗ ಪ್ರಮಾಣ ಕುಂಠಿತವಾಗಿದೆ.ದ್ವಿದಳ ದಾನ್ಯಗಳ ಉತ್ಪಾದನೆ ಕಡಿಮೆಯಾಗಿ ಬೆಲೆಗಳುಗಗನಕ್ಕೇರುತ್ತಿವೆ.ದುಡಿಯುವ ಯುವಜನರಿಗೆಉದ್ಯೋಗ ಭದ್ರತೆಕೊಟ್ಟರೆ ಅಲ್ಲವೇ ಫಿಟ್ಇಂಡಿಯಾವಾಗೋದು. ಮೊಣಕೈಗೆ ಬೆಣ್ಣೆ ಹಚ್ಚಿ ತಿನ್ನಿಎನ್ನುವಂತಾಗಿದೆ ಯುವಜನರ ಪಾಡು. ಸದಾಅಭದ್ರತೆಯಲ್ಲೇ ಬದುಕುವ ಜನತೆ ಆರ್ಥಿಕವಾಗಿಸದೃಢವಾಗದಿದ್ದರೆ ‘ಫಿಟ್ ಇಂಡಿಯಾ’ ಚಳವಳಿಹಾಸ್ಯಾಸ್ಪದವೆನ್ನಿಸುತ್ತದೆ.ಲಿಂಗಾನುಪಾತ ಪ್ರಮಾಣ ಕಳವಳಕಾರಿಯಾಗಿದೆ. ಭಾರತದಲ್ಲಿ ಹೆಣ್ಣುಮಕ್ಕಳ ಪ್ರಮಾಣ ಗಮನಾರ್ಹವಾಗಿಇಳಿಮುಖವಾಗಿದೆ ಎಂದು ಭಾರತೀಯ ರಿಜಿಸ್ಟ್ರಾರ್ಜನರಲ್ ಸಿದ್ಧಪಡಿಸಿದ ಅಂಕಿಅಂಶಗಳುಬೆಚ್ಚಿಬೀಳಿಸುವಂತಹದ್ದು. ಕರ್ನಾಟಕದಲ್ಲಿ 2007 ರಲ್ಲಿ1004ರಷ್ಟಿದ್ದ ಲಿಂಗಾನುಪಾತ 2016ರ ವೇಳೆಗೆ 896ಕ್ಕೆಕುಸಿದಿದೆ. ಆಂಧ್ರ, ತಮಿಳುನಾಡು, ತೆಲಂಗಾಣರಾಜ್ಯಗಳಲ್ಲಿ ಶಿಶುಮರಣ ಪ್ರಮಾಣ ಇಳಿಕೆಯಾಗಿದ್ದರುಲಿಂಗಾನುಪಾತದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ವಿಶ್ವಆರ್ಥಿಕ ವೇದಿಕೆ ಪ್ರಕಟಿಸಿರುವ ಜಾಗತಿಕ ಲಿಂಗತ್ವಅಸಮಾನತೆ ಸೂಚ್ಯಾಂಕದಲ್ಲಿ ಭಾರತವು 21ನೇಸ್ಥಾನದಲ್ಲಿದೆ. ಆರ್ಥಿಕ ಚಟುವಟಿಕೆ, ಉದ್ಯೋಗ, ಆರೋಗ್ಯ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆವಿಚಾರದಲ್ಲಿ ಭಾರತದ ಮುಂದೆ ಬಹುದೊಡ್ಡ ಸವಾಲುಇದೆ. ರಾಜಕೀಯ ಅಧಿಕಾರ, ಆರೋಗ್ಯ ಜೀವನ ನಿರೀಕ್ಷೆಮತ್ತು ಸಾಕ್ಷರತೆಯ ವಿಚಾರದಲ್ಲಿ ಲಿಂಗ ಸಮಾನತೆಹೆಚ್ಚಿರುವುದೇ ಜಾಗತಿಕ ಸೂಚ್ಯಾಂಕದಲ್ಲಿ ಭಾರತದ ಸ್ಥಾನಕುಸಿಯಲು ಕಾರಣ. ಮೊದಲು ಇಂತಹ ವಿಚಾರದಲ್ಲಿದೇಶ ಫಿಟ್ ಆಗಿದ್ದರೆ ಮಾತ್ರ ಸದೃಢ ಭಾರತವಾಗಲುಸಾಧ್ಯವಲ್ಲವೇ? ತಾಯಂದಿರ ಮರಣ ಪ್ರಮಾಣ ಹೆಚ್ಚುತ್ತಲೇ ಇದೆ. ಹೆರಿಗೆಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹುಟ್ಟಿನ ಕೆಲವೇಹೊತ್ತಿನಲ್ಲಿ ಶಿಶುಗಳ ಸಂಖ್ಯೆ ಎಷ್ಟು ಎಂದುರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸಿಕ್ಕ ಉತ್ತರಉಬ್ಬೇರಿಸುವಂತಿತ್ತು. ಅಸ್ಸಾಂ- ಉತ್ತರಪ್ರದೇಶ, ರಾಜಸ್ಥಾನ, ಒಡಿಶಾ, ಮಧ್ಯಪ್ರದೇಶ, ಛತ್ತಿಸ್ಗಡ, ಬಿಹಾರ,ಪಂಜಾಬ್ಗಳಲ್ಲಿ ಪ್ರತಿ ಒಂದು ಸಾವಿರಕ್ಕೆ 167 ಗರ್ಭಿಣಿಯರು-ಬಾಣಂತಿಯರು ಸಾವನ್ನಪ್ಪಿದ್ದಾರೆ. ಈದೇಶದಲ್ಲಿ 896 ರೋಗಿಗೆ ಒಬ್ಬ ವೈದ್ಯನಿದ್ದಾನೆ. ಹೀಗಾದರೆಹೇಗೆ ಫಿಟ್ ಇಂಡಿಯಾವಾಗಲು ಸಾಧ್ಯ? ಇವಷ್ಟೇ ಅಲ್ಲ ಹೆಚ್ಚುತ್ತಿರುವ ವಾಯುಮಾಲಿನ್ಯ,ಜಲಮಾಲಿನ್ಯಗಳಿಂದ ದೇಶದಾದ್ಯಂತ ಕ್ಯಾನ್ಸರ್ ಪೀಡಿತರಸಂಖ್ಯೆ, ಹೃದಯರೋಗಿಗಳ ಸಂಖ್ಯೆ ಗಣನೀಯವಾಗಿಹೆಚ್ಚಾಗುತ್ತಿದೆ. ಪ್ರಕೃತಿಯ ಮೇಲೆ ಮಾನವನಸವಾರಿಯಿಂದ ಪರಿಸರ ಹಾಳಾಗಿ ಹೋಗುತ್ತಿದೆ. ಜಗತ್ತಿನಅನೇಕ ದೇಶಗಳನ್ನು ಸುತ್ತಿ ಬಂದಿರುವ ಪ್ರಧಾನಿಯವರುಭಾರತ ‘ಫಿಟ್ ಇಂಡಿಯಾ’ ಆಗಬೇಕು ಎಂಬ ಕನಸನ್ನುಒಪ್ಪೋಣ. ಮಾಧ್ಯಮಗಳಲ್ಲಿ ಬೊಬ್ಬೆ ಹಾಕಿದರೆ ಫಿಟ್ಇಂಡಿಯಾವಾಗದು.ಅದನ್ನು ಕಾರ್ಯರೂಪಕ್ಕೆತರಬೇಕಾದರೆ ಹಳಿತಪ್ಪಿರುವ ಅರ್ಥವ್ಯವಸ್ಥೆಯನ್ನುಸರಿಪರಿಸಬೇಕು. ಉದ್ಯೋಗ ಸೃಷ್ಟಿ, ಪರಿಸರಸಮತೋಲನ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳುಅಭಿವೃದ್ಧಿ ಕಂಡು ಅದರ ಫಲ ಪ್ರತಿಯೊಬ್ಬ ನಾಗರಿಕನಮನೆಬಾಗಲಿಗೆ ಹೋದಾಗ ಮಾತ್ರವೇ ಫಿಟ್ಇಂಡಿಯಾವಾದೀತು. ಇವೆಲ್ಲದರಿಂದ ರೋಸಿ ಹೋದಯುವಜನತೆ ‘ಮೋದಿ ಕ್ವಿಟ್ ಇಂಡಿಯಾ’ ಎನ್ನವುದಕ್ಕೂಮೊದಲು ಜಾಗೃತರಾಗಿ. ಭಾರತವನ್ನು ಎಲ್ಲಾಅಂಶಗಳಿಂದಲೂ ಫಿಟ್ ಇಂಡಿಯಾ ಮಾಡಿ. ಆಗ ಎಲ್ಲವರ್ಗದ ಜನತೆಯೂ ‘ಫಿಟ್ ಇಂಡಿಯಾ’ ಚಳವಳಿಯನ್ನುಒಪ್ಪುತ್ತಾರೆ. ಸುದ್ದಿದಿನ.ಕಾಂ|ವಾಟ್ಸಾಪ್|9980346243