ದಿನದ ಸುದ್ದಿ
ನಿರುದ್ಯೋಗ ಮತ್ತು ಮೋದಿಯ ‘ಫಿಟ್ ಇಂಡಿಯಾ’ ಚಳವಳಿ
- ಸೋಮನಗೌಡ.ಎಸ್.ಎಂ.ಕಟ್ಟಿಗೆಹಳ್ಳಿ
ಪ್ರಧಾನಿಮೋದಿ ಅವರು ಫಿಟ್ ಇಂಡಿಯಾ ಚಳವಳಿಗೆಚಾಲನೆ ನೀಡಲಿದ್ದಾರೆ ಎಂದು ನಿರೂಪಕಿ ಹೇಳುತ್ತಿದ್ದಂತೆಒಮ್ಮೆಲೆ ನನಗೆ ಕೇಳಿಸಿದ್ದು ‘ಕ್ವಿಟ್ ಇಂಡಿಯಾ’ ಚಳವಳಿನಾ’ಎಂದು! ಅನಂತರ ದಿಟ್ಟಿಸಿ ಸೂಕ್ಷ್ಮವಾಗಿಟಿವಿ ನೋಡಿದಾಗ ಮೋದಿ ಅವರು ‘ಸದೃಢ ಭಾರತ ಸಶಕ್ತಭಾರತ’ಕ್ಕೆ ದೈಹಿಕ ಚಟುವಟಿಕೆ ಮತ್ತು ಕ್ರೀಡೆಗಳಲ್ಲಿಎಲ್ಲರೂ ತೊಡಗಿಕೊಳ್ಳಿ ಎಂದು ಹೇಳುವ ಸಾರವೇ ಫಿಟ್ಇಂಡಿಯಾ ಚಳವಳಿ ಎಂದಾಗ ಅರ್ಥವಾಯಿತು.
‘ಹಮ್ ಫಿಟ್, ತೋ ಇಂಡಿಯಾ ಫಿಟ್’ ಹ್ಯಾಶ್ಟ್ಯಾಗ್‍ನಲ್ಲಿ ಕಳೆದ ವರ್ಷ ಕೇಂದ್ರದ ಕ್ರೀಡಾ ಸಚಿವರಾಜವರ್ಧನ ಸಿಂಗ್ ರಾಥೋಡ್ (ಈಗ ಮಾಜಿ) ಟ್ಟೀಟರ್‍ನಲ್ಲಿ ಫಿಟ್‍ನೆಸ್ ಸವಾಲೆಸೆದಿದ್ದರು. ಇದಕ್ಕೆಕ್ರೀಡಾಪಟುಗಳು, ಸಿನಿಮಾ ತಾರೆಯರು ಸವಾಲುಸ್ವೀಕರಿಸಿ ಯೋಗ, ಜಿಮ್, ಕಚೇರಿಯಲ್ಲೇ ವ್ಯಾಯಾಮಮಾಡಿ ಸಶಕ್ತ ಭಾರತಕ್ಕೆ ನಾವು ಬದ್ಧ ಎಂದು ಸಾಮಾಜಿಕಜಾಲತಾಣಗಳಲ್ಲಿ ಪ್ರಚಾರಗಿಟ್ಟಸಿಕೊಂಡಿದ್ದರು.
1942 ಆಗಸ್ಟ್ 8 ರಂದು ಕ್ರಿಪ್ಸ್ ಶಿಫಾರಸ್ಸುಗಳನ್ನುತಿರಸ್ಕರಿಸಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬಾಂಬೆಯಗೋವಳಿ ಮೈದಾನದಲ್ಲಿ ಸಭೆ ಸೇರಿ ‘ಭಾರತ ಬಿಟ್ಟುತೊಲಗಿ’ ಠರಾವನ್ನು ಅಂಗೀಕರಿಸಿತ್ತು. ಮಹಾತ್ಮಗಾಂಧಿಯವರು ‘ಬ್ರಿಟೀಷರು ತಕ್ಷಣ ಭಾರತ ಬಿಟ್ಟುತೊಲಗಿ. ಇಲ್ಲವಾದರೆ ಕಾನೂನು ಭಂಗ ಚಳವಳಿಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.ಭಾರತೀಯರಿಗೆ ‘ಮಾಡು ಇಲ್ಲವೇ ಮಡಿ’ ಎಂಬ ಕರೆನೀಡಿದ್ದರು.ಗಾಂಧೀಜಿಯವರು ಗುಜರಾತ್ ರಾಜ್ಯದವರು. ಈಗಪ್ರಧಾನಿ ಮೋದಿಯವರು ಕೂಡಾ ಗುಜರಾತ್ರಾಜ್ಯದವರೇ.‘ಕ್ವಿಟ್ ಇಂಡಿಯಾ’ ಚಳವಳಿಆರಂಭವಾಗಿದ್ದು 1942 ಆಗಸ್ಟ್ 8 ರಂದು.‘ಫಿಟ್ಇಂಡಿಯಾ’ ಚಳವಳಿ ಆರಂಭವಾಗಿದ್ದು 2019 ಆಗಸ್ಟ್29ರಂದು. ಆಗ ಭಾರತಕ್ಕೆ ಅಂಟಿದ್ದ ಬ್ರಿಟೀಷ್ ರೋಗತೊಳೆಯಲು ಕರೆ ನೀಡಿದ್ದು ಕ್ವಿಟ್ ಇಂಡಿಯಾ ಚಳವಳಿ.ಈಗ ಮೋದಿ ಅವರು ಸದೃಢ ಭಾರತ ಕಟ್ಟಲು ಫಿಟ್ಇಂಡಿಯಾ ಚಳವಳಿಗೆ ಕರೆ ನೀಡಿದ್ದಾರೆ.
ಕುಸಿಯುತ್ತಿರುವ ಆರ್ಥಿಕತೆಯಿಂದ ದೇಶತಲ್ಲಣಗೊಂಡಿದೆ. ಉದ್ಯೋಗಗಳು ಮರೀಚಿಕೆಯಾಗಿ. ಯುವಜನತೆ ಉದ್ಯೋಗವಿಲ್ಲದೇ ಬೀದಿಗೆ ಬಿದ್ದಿದ್ದಾರೆ. ಈದೇಶದ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಆರೋಗ್ಯ, ಬಡತನ, ಹಸಿವು, ದಾರಿದ್ರ್ಯ ಎಲ್ಲೆಲ್ಲೂ ಜೀವಂತವಾಗಿರುವಕಾಲದಲ್ಲಿ ಇಂಡಿಯಾ ‘ಫಿಟ್ ಇಂಡಿಯಾ’ ಆಗಿದೆಯೇ? ಎಂದು ಮೊದಲು ಪ್ರಧಾನಿಯವರು ಮನಗಾಣಬೇಕು.
ಸ್ವಾತಂತ್ರ್ಯ ಬಂದು 73 ವರ್ಷಗಳೇ ಕಳೆದಿವೆ. ಐತಿಹಾಸಿಕಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರಮೋದಿಯವರು ಈದೇಶದ ಬಡತನ ನಿವಾರಣೆ ಬಗ್ಗೆ, ಪರಿಸರ ರಕ್ಷಣೆಯ ಬಗ್ಗೆ ಮಾತನಾಡಿದ್ದರು.
2017ರಜುಲೈ 18ರಂದು ಕರ್ನಾಟಕದ ಗೋಕರ್ಣದ ದಲಿತಕುಟುಂಬದ ಮೂವರು ಹಸಿವಿನಿಂದ ಸತ್ತರು. ಕಳೆದಎರಡು ತಿಂಗಳ ಹಿಂದೆ ಆಂಧ್ರಪ್ರದೇಶದಲ್ಲಿ ಹಸಿವನ್ನುತಾಳಲಾರದೇ ಮಣ್ಣು ತಿಂದು ಇಬ್ಬರು ಮಕ್ಕಳುಮೃತಪಟ್ಟರು. ಈ ಸುದ್ದಿ ಇಡೀ ದೇಶದ ಹಸಿವು ಎಂಬಅಂಟು ಜಾಢ್ಯಕ್ಕೆ ಹಿಡಿದ ಕನ್ನಡಿ. ಆಹಾರದ ಹಕ್ಕುಅಭಿಯಾದನ ಭಾಗವಾಗಿ ಹಲವು ಸ್ವಯಂ ಸೇವಾಸಂಸ್ಥೆಗಳು ಸಿದ್ಧಪಡಿಸಿದ ಅಧ್ಯಯನ ವರದಿಯ ಪ್ರಕಾರ2015-2019ರವರೆಗೆ ಹಸಿವಿನಿಂದ ಸತ್ತವರ ಸಂಖ್ಯೆ 58. (ಜಾರ್ಖಂಡ್-16, ಉತ್ತರಪ್ರದೇಶ-16, ಒಡಿಶಾ-10, ಕರ್ನಾಟಕ-3, ದೆಹಲಿ-3, ಬಿಹಾರ-3, ಛತ್ತಿಸ್‍ಗಡ-3, ಆಂಧ್ರ-2 ರಾಜಸ್ಥಾನ-1, ಪ.ಬಂಗಾಳ-1) ಇದನ್ನುಮೊದಲು ಸರಿಪಡಿಸಿ ದಿಟ್ಟಕ್ರಮ ಕೈಗೊಂಡರೆ ಅದೇಅಲ್ಲವೇ ಫಿಟ್ ಇಂಡಿಯಾ?
2019 ಲೋಕಸಭೆಯ ಚುನಾವಣಾ ಆದ್ಯತಾವಿಷಯವಾಗಿ ಪ್ರಚಾರ ಮಾಡಿ,2ನೇ ಬಾರಿಗೆ ಆಡಳಿತಕ್ಕೆಬಂದ ಪ್ರಧಾನಿ ಮೋದಿ ಅವರ ಎನ್‍ಡಿಎ-2.0 ಸರ್ಕಾರಯುವಜನರಿಗೆ ಕೊಟ್ಟ ಉದ್ಯೋಗ ಭರವಸೆಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಉದ್ಯೋಗಕಳೆದುಕೊಂಡು ಬೀದಿಗೆ ಬಂದಿರುವ ನಿರುದ್ಯೋಗಿಗಳಸಂಖ್ಯೆ ದಿನೇ ದಿನೇ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಆಟೊಮೊಬೈಲ್ ಕ್ಷೇತ್ರ, ಜವಳಿ ಕ್ಷೇತ್ರ ಹೀಗೆ ಎಲ್ಲೆಲ್ಲೂಉದ್ಯೋಗ ಕಳೆದುಕೊಂಡು ಅಭದ್ರರಾಗಿದ್ದಾರೆ. ಪ್ರಧಾನಿಮೋದಿ ಅವರ ಎನ್‍ಡಿಎ-1 ಸರ್ಕಾರ ಕಳೆದ 5 ವರ್ಷಗಳಲ್ಲಿ ಪ್ರಮುಖ ಯೋಜನೆಗಳ ಮೂಲಕಸೃಷ್ಟಿಯಾಗಿರುವ ಉದ್ಯೋಗ 27.5ರಷ್ಟು.
2022ರೊಳಗೆ‘ಮೇಕ್ ಇನ್ ಇಂಡಿಯಾ’ ಯೋಜನೆಯೊಂದರಲ್ಲೇ 10 ಕೋಟಿ ಉದ್ಯೋಗ ನೀಡುವ ಭರವಸೆಯನ್ನು ಕೇಂದ್ರನೀಡಿತ್ತು. ಆದರೆ ಸೃಷ್ಟಿಯಾದ ಉದ್ಯೋಗಸಾಸಿವೆಯಷ್ಟು. ಅತಿವೃಷ್ಠಿ-ಅನಾವೃಷ್ಠಿಗಳಿಂದಕೃಷಿರಂಗದಲ್ಲೂ ಉದ್ಯೋಗ ಪ್ರಮಾಣ ಕುಂಠಿತವಾಗಿದೆ.ದ್ವಿದಳ ದಾನ್ಯಗಳ ಉತ್ಪಾದನೆ ಕಡಿಮೆಯಾಗಿ ಬೆಲೆಗಳುಗಗನಕ್ಕೇರುತ್ತಿವೆ.ದುಡಿಯುವ ಯುವಜನರಿಗೆಉದ್ಯೋಗ ಭದ್ರತೆಕೊಟ್ಟರೆ ಅಲ್ಲವೇ ಫಿಟ್ಇಂಡಿಯಾವಾಗೋದು. ಮೊಣಕೈಗೆ ಬೆಣ್ಣೆ ಹಚ್ಚಿ ತಿನ್ನಿಎನ್ನುವಂತಾಗಿದೆ ಯುವಜನರ ಪಾಡು.
ಸದಾಅಭದ್ರತೆಯಲ್ಲೇ ಬದುಕುವ ಜನತೆ ಆರ್ಥಿಕವಾಗಿಸದೃಢವಾಗದಿದ್ದರೆ ‘ಫಿಟ್ ಇಂಡಿಯಾ’ ಚಳವಳಿಹಾಸ್ಯಾಸ್ಪದವೆನ್ನಿಸುತ್ತದೆ.ಲಿಂಗಾನುಪಾತ ಪ್ರಮಾಣ ಕಳವಳಕಾರಿಯಾಗಿದೆ. ಭಾರತದಲ್ಲಿ ಹೆಣ್ಣುಮಕ್ಕಳ ಪ್ರಮಾಣ ಗಮನಾರ್ಹವಾಗಿಇಳಿಮುಖವಾಗಿದೆ ಎಂದು ಭಾರತೀಯ ರಿಜಿಸ್ಟ್ರಾರ್ಜನರಲ್ ಸಿದ್ಧಪಡಿಸಿದ ಅಂಕಿಅಂಶಗಳುಬೆಚ್ಚಿಬೀಳಿಸುವಂತಹದ್ದು. ಕರ್ನಾಟಕದಲ್ಲಿ 2007 ರಲ್ಲಿ1004ರಷ್ಟಿದ್ದ ಲಿಂಗಾನುಪಾತ 2016ರ ವೇಳೆಗೆ 896ಕ್ಕೆಕುಸಿದಿದೆ. ಆಂಧ್ರ, ತಮಿಳುನಾಡು, ತೆಲಂಗಾಣರಾಜ್ಯಗಳಲ್ಲಿ ಶಿಶುಮರಣ ಪ್ರಮಾಣ ಇಳಿಕೆಯಾಗಿದ್ದರುಲಿಂಗಾನುಪಾತದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ವಿಶ್ವಆರ್ಥಿಕ ವೇದಿಕೆ ಪ್ರಕಟಿಸಿರುವ ಜಾಗತಿಕ ಲಿಂಗತ್ವಅಸಮಾನತೆ ಸೂಚ್ಯಾಂಕದಲ್ಲಿ ಭಾರತವು 21ನೇಸ್ಥಾನದಲ್ಲಿದೆ. ಆರ್ಥಿಕ ಚಟುವಟಿಕೆ, ಉದ್ಯೋಗ, ಆರೋಗ್ಯ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆವಿಚಾರದಲ್ಲಿ ಭಾರತದ ಮುಂದೆ ಬಹುದೊಡ್ಡ ಸವಾಲುಇದೆ. ರಾಜಕೀಯ ಅಧಿಕಾರ, ಆರೋಗ್ಯ ಜೀವನ ನಿರೀಕ್ಷೆಮತ್ತು ಸಾಕ್ಷರತೆಯ ವಿಚಾರದಲ್ಲಿ ಲಿಂಗ ಸಮಾನತೆಹೆಚ್ಚಿರುವುದೇ ಜಾಗತಿಕ ಸೂಚ್ಯಾಂಕದಲ್ಲಿ ಭಾರತದ ಸ್ಥಾನಕುಸಿಯಲು ಕಾರಣ. ಮೊದಲು ಇಂತಹ ವಿಚಾರದಲ್ಲಿದೇಶ ಫಿಟ್ ಆಗಿದ್ದರೆ ಮಾತ್ರ ಸದೃಢ ಭಾರತವಾಗಲುಸಾಧ್ಯವಲ್ಲವೇ?
ತಾಯಂದಿರ ಮರಣ ಪ್ರಮಾಣ ಹೆಚ್ಚುತ್ತಲೇ ಇದೆ. ಹೆರಿಗೆಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹುಟ್ಟಿನ ಕೆಲವೇಹೊತ್ತಿನಲ್ಲಿ ಶಿಶುಗಳ ಸಂಖ್ಯೆ ಎಷ್ಟು ಎಂದುರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸಿಕ್ಕ ಉತ್ತರಉಬ್ಬೇರಿಸುವಂತಿತ್ತು. ಅಸ್ಸಾಂ- ಉತ್ತರಪ್ರದೇಶ, ರಾಜಸ್ಥಾನ, ಒಡಿಶಾ, ಮಧ್ಯಪ್ರದೇಶ, ಛತ್ತಿಸ್‍ಗಡ, ಬಿಹಾರ,ಪಂಜಾಬ್‍ಗಳಲ್ಲಿ ಪ್ರತಿ ಒಂದು ಸಾವಿರಕ್ಕೆ 167 ಗರ್ಭಿಣಿಯರು-ಬಾಣಂತಿಯರು ಸಾವನ್ನಪ್ಪಿದ್ದಾರೆ. ಈದೇಶದಲ್ಲಿ 896 ರೋಗಿಗೆ ಒಬ್ಬ ವೈದ್ಯನಿದ್ದಾನೆ. ಹೀಗಾದರೆಹೇಗೆ ಫಿಟ್ ಇಂಡಿಯಾವಾಗಲು ಸಾಧ್ಯ?
ಇವಷ್ಟೇ ಅಲ್ಲ ಹೆಚ್ಚುತ್ತಿರುವ ವಾಯುಮಾಲಿನ್ಯ,ಜಲಮಾಲಿನ್ಯಗಳಿಂದ ದೇಶದಾದ್ಯಂತ ಕ್ಯಾನ್ಸರ್ ಪೀಡಿತರಸಂಖ್ಯೆ, ಹೃದಯರೋಗಿಗಳ ಸಂಖ್ಯೆ ಗಣನೀಯವಾಗಿಹೆಚ್ಚಾಗುತ್ತಿದೆ. ಪ್ರಕೃತಿಯ ಮೇಲೆ ಮಾನವನಸವಾರಿಯಿಂದ ಪರಿಸರ ಹಾಳಾಗಿ ಹೋಗುತ್ತಿದೆ. ಜಗತ್ತಿನಅನೇಕ ದೇಶಗಳನ್ನು ಸುತ್ತಿ ಬಂದಿರುವ ಪ್ರಧಾನಿಯವರುಭಾರತ ‘ಫಿಟ್ ಇಂಡಿಯಾ’ ಆಗಬೇಕು ಎಂಬ ಕನಸನ್ನುಒಪ್ಪೋಣ. ಮಾಧ್ಯಮಗಳಲ್ಲಿ ಬೊಬ್ಬೆ ಹಾಕಿದರೆ ಫಿಟ್ಇಂಡಿಯಾವಾಗದು.ಅದನ್ನು ಕಾರ್ಯರೂಪಕ್ಕೆತರಬೇಕಾದರೆ ಹಳಿತಪ್ಪಿರುವ ಅರ್ಥವ್ಯವಸ್ಥೆಯನ್ನುಸರಿಪರಿಸಬೇಕು. ಉದ್ಯೋಗ ಸೃಷ್ಟಿ, ಪರಿಸರಸಮತೋಲನ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳುಅಭಿವೃದ್ಧಿ ಕಂಡು ಅದರ ಫಲ ಪ್ರತಿಯೊಬ್ಬ ನಾಗರಿಕನಮನೆಬಾಗಲಿಗೆ ಹೋದಾಗ ಮಾತ್ರವೇ ಫಿಟ್ಇಂಡಿಯಾವಾದೀತು. ಇವೆಲ್ಲದರಿಂದ ರೋಸಿ ಹೋದಯುವಜನತೆ ‘ಮೋದಿ ಕ್ವಿಟ್ ಇಂಡಿಯಾ’ ಎನ್ನವುದಕ್ಕೂಮೊದಲು ಜಾಗೃತರಾಗಿ. ಭಾರತವನ್ನು ಎಲ್ಲಾಅಂಶಗಳಿಂದಲೂ ಫಿಟ್ ಇಂಡಿಯಾ ಮಾಡಿ. ಆಗ ಎಲ್ಲವರ್ಗದ ಜನತೆಯೂ ‘ಫಿಟ್ ಇಂಡಿಯಾ’ ಚಳವಳಿಯನ್ನುಒಪ್ಪುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
ಸುದ್ದಿದಿನ,ಚಿತ್ರದುರ್ಗ:ಜಿಲ್ಲೆಯ ಬ್ಯಾಂಕ್ ಕಾಲೋನಿಯ ಸ್ಪೀಚ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಎರಡು ಅವಧಿಗೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಹೆಚ್.ರಾಮಚಂದ್ರಪ್ಪ (59 ವರ್ಷ) ಶನಿವಾರ ಬೆಳಗ್ಗೆ 10:35 ಕ್ಕೆ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯ ಕ್ರಿಯೆಯನ್ನು ಹೊಳಲ್ಕೆರೆ ಸಮೀಪದ ನೆಹರು ಕಾಲೋನಿಯ ಜಮೀನಿನಲ್ಲಿ ಇಂದು (ಭಾನುವಾರ, ಜೂನ್ 07 ರಂದು ಮಧ್ಯಾಹ್ನ 2 ಗಂಟೆಗೆ) ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸಂಪರ್ಕ ಮೊಬೈಲ್ ಸಂಖ್ಯೆ : 9740114246
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಶ್ರಯ ಯೋಜನೆ – ಆವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ : 2025-26 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಲು ಜೂನ್ 30 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ದಾವಣಗೆರೆ ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿನ ಅರ್ಹ ನಿವೇಶನ ಹಾಗೂ ವಸತಿ ರಹಿತ ಅಂಗವಿಕಲರು, ಹಿರಿಯ ನಾಗರಿಕರು, ಒಂಟಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರು, ತೃತೀಯ ಲಿಂಗಿಗಳು, ಸ್ವಚ್ಛತಾ ಕಾರ್ಮಿಕರು, PM SVanidhi (ಪಿ ಎಂ -ಸ್ವ ನಿಧಿ )ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳು ಮತ್ತು ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯಡಿ ಗುರುತಿಸಿದ ಕುಶಲ ಕರ್ಮಿಗಳು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ವಲಸೆ ಬಂದ ಕುಟುಂಬದವರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು http://pmayurban.gov.in ಆನ್ಲೈನ್ ವೆಬ್ ಸೈಟ್ ನಲ್ಲಿ ಸಲ್ಲಿಸಬಹುದು ಅಥವಾ ಖುದ್ದಾಗಿ ಮಹಾನಗರ ಪಾಲಿಕೆಯ ಆಶ್ರಯ ಶಾಖೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್ ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗರಿಕೆ ಹುಲ್ಲಿನ ಜ್ಯೂಸ್‌ನಲ್ಲಿದೆ ರಕ್ತದ ಕ್ಯಾನ್ಸರ್ ಗುಣಪಡಿಸುವ ಶಕ್ತಿ
ಗಿರೀಶ್ ಮುತ್ತು
ಗರಿಕೆ ಹುಲ್ಲಿನ ರಸದ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಿನೊಡಾನ್ ಡ್ಯಾಕ್ಟಿಲಾನ್ ಪ್ರೊಟೀನ್ ಎಂಬ ಅಂಶವಿದ್ದು, ಇದು ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಇದು ಜ್ವರದಂತಹ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಹಾಗಾಗೊ ವಾರಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಗರಿಕೆ ಹುಲ್ಲಿನ ರಸ ಅಥವಾ ಕಷಾಯದ ಸೇವನೆ ಮಾಡಬೇಕು
ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ರೀತಿಯ ವ್ಯಾಯಾಮ ಮತ್ತು ಡಯಟ್ ಮಾಡುತ್ತೇವೆ. ಈ ಮಳೆಗಾಲದಲ್ಲಿ ಅನೇಕ ಜನರು ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಹಲವು ಬಗೆಯ ಜ್ಯೂಸ್ ಕುಡಿಯುತ್ತಾರೆ. ಹಣ್ಣು, ತರಕಾರಿ ರಸ ಕುಡಿದು ಆರೋಗ್ಯವಾಗಿರಲು ಪ್ರಯತ್ನಿಸುತ್ತಾರೆ. ಆದರೆ ಈ ಒಂದು ಜ್ಯೂಸ್ ಅನ್ನು ನೀವು ಕುಡಿದರೆ ನಿಮ್ಮತ್ತ ಕಾಯಿಲೆಗಳು ಸುಳಿಯುವುದೇ ಇಲ್ಲ. ಅದುವೇ ಗರಿಕೆ ಹುಲ್ಲುನ ಜ್ಯೂಸ್.
ಹೌದು… ಆಯುರ್ವೇದ ವೈದ್ಯರು ಈ ಮೂಲಿಕೆಯು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡಬಹುದು. ಅಲ್ಲದೆ ಈ ಹುಲ್ಲಿನ ರಸವನ್ನು ಕುಡಿಯುವುದರಿಂದ ರಕ್ತದಲ್ಲಿರುವ ಕ್ಯಾನ್ಸರ್ ಕೋಶಗಳು ಕಡಿಮೆಯಾಗುವುದು ಮಾತ್ರವಲ್ಲದೆ ರಕ್ತ ಶುದ್ಧವಾಗಿರುತ್ತದೆ.
ಈ ಗರಿಕೆ ಹುಲ್ಲಿನಲ್ಲಿ ವಿಟಮಿನ್ ಎ, ಕೆ, ಸಿ ಮತ್ತು ವಿಟಮಿನ್ ಇ ಗಳು ಸಮೃದ್ಧವಾಗಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತದೊತ್ತಡ, ರಕ್ತಹೀನತೆ ಮತ್ತು ರಕ್ತ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸುತ್ತದೆ. ಹಾಗಾದರೆ ಗರಿಕೆ ಹುಲ್ಲಿನ ಜ್ಯೂಸ್‌ನ ಇತರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಗರಿಕೆ ರಸದ ಪ್ರಯೋಜನಗಳು
1. ಈ ಗರಿಕೆ ಹುಲ್ಲಿನ ಜ್ಯೂಸ್ ಎಲ್ಲಿಯೂ ಸಿಗುವುದಿಲ್ಲ. ಕೆಲವೆಡೆ ಮಾತ್ರ ಸಿಗುತ್ತದೆ. ಬೇರು ಮತ್ತು ಎಲೆಗಳು ಸೇರಿದಂತೆ ಗರಿಕೆ ಎಲ್ಲಾ ಭಾಗಗಳು ಔಷಧೀಯ ಗುಣಗಳನ್ನು ಹೊಂದಿದೆ. ಇದು ಕೆಲವು ಹಾನಿಕಾರಕ ವ್ಯಾಕ್ಸಿನಿಯಾ ವೈರಸ್ ಎಂಬ ಸೂಕ್ಷ್ಮಜೀವಿಯನ್ನು ನಾಶಪಡಿಸುವ ಗುಣವನ್ನು ಹೊಂದಿದೆ. ಹೀಗಾಗಿ ಈ ಜ್ಯೂಸ್ ಕುಡಿಯುವವರೂ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ.
2. ಮೂತ್ರಕೋಶದ ಕಲ್ಲುಗಳು, ದೇಹದ ಊತ, ಮಕ್ಕಳಲ್ಲಿ ದೀರ್ಘಕಾಲದ ನೆಗಡಿ, ಮೂಗು ಸೋರುವಿಕೆ, ನೆಗಡಿ, ಅತಿಸಾರ, ಕಣ್ಣಿನ ದೋಷಗಳು, ಮೆದುಳಿನ ರಕ್ತಸ್ರಾವದಂತಹ ಕಾಯಿಲೆಗಳಿಗೆ ಈ ರಸ ತುಂಬಾ ಒಳ್ಳೆಯದು.
3. ಅಲ್ಲದೆ ತೂಕ ನಷ್ಟ, ಕೊಲೆಸ್ಟ್ರಾಲ್ ಕಡಿತ, ನರರೋಗ, ರಕ್ತದ ಕ್ಯಾನ್ಸರ್ ಚಿಕಿತ್ಸೆ, ಕೆಮ್ಮು, ಹೊಟ್ಟೆ ನೋವು, ರಕ್ತಹೀನತೆ, ಸಂಧಿವಾತ, ಹೃದಯ ಅಸ್ವಸ್ಥತೆ, ಚರ್ಮ ರೋಗಗಳು ಇತ್ಯಾದಿಗಳಿಗೆ ಅತ್ಯುತ್ತಮ ಔಷಧವಾಗಿ ಕಾರ್ಯನಿರ್ವಹಿಸುತ್ತದೆ
4. ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ರಕ್ತದಿಂದ ವಿಷವನ್ನು ತೆಗೆದುಹಾಕುವಲ್ಲಿ ಗರಿಕೆ ರಸವು ಪರಿಣಾಮಕಾರಿಯಾಗಿದೆ.
5. ಗರಿಕೆ ಹುಲ್ಲಿನ ರಸ ಮತ್ತು ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಕುದಿಸಬೇಕು.. ನಂತರ ಚರ್ಮರೋಗಗಳಾದ ರಿಂಗ್‌ವರ್ಮ್ ಮತ್ತು ಒಣ ಚರ್ಮವನ್ನು ತ್ವರಿತವಾಗಿ ಗುಣ ಪಡಿಸುತ್ತದೆ.
6. ಗರಿಕೆ ಹುಲ್ಲು ಬೇಕಾದಷ್ಟು ಸಂಗ್ರಹಿಸಿ, ಸ್ವಲ್ಪ ಅರಿಶಿನವನ್ನು ಸೇರಿಸಿ ಪೇಸ್ಟ್ ಮಾಡಿ ದೇಹಕ್ಕೆ ಉಜ್ಜಿಕೊಂಡರೆ, ಒಂದು ಗಂಟೆ ಬಿಟ್ಟು ನಂತರ ಸ್ನಾನ ಮಾಡಿ. ಇದರಿಂದ ದೇಹದ ತುರಿಕೆ ನಿವಾರಣೆಯಾಗುತ್ತದೆ.
ಗರಿಕೆ ಹುಲ್ಲಿನ ರಸ ತಯಾರಿಸುವುದು ಹೇಗೆ?
*ತಾಜಾ ಗರಿಕೆ ಹುಲ್ಲು ಒಂದು ಹಿಡಿಯಷ್ಟು ತೆಗೆದುಕೊಂಡು ಸ್ವಚ್ಚವಾಗಿ ತೊಳೆದುಕೊಳ್ಳಿ.
* ಬಳಿಕ ಇದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.
* ಬಳಿಕ ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.
* ಚೆನ್ನಾಗಿ ಪೇಸ್ಟ್ ಆದ ಬಳಿಕ ಇದನ್ನು ಸೋಸಿಕೊಳ್ಳಬೇಕು.
* ಬಳಿಕ ಇದನ್ನು ಕುಡಿಯಬೇಕು. ಆದರೆ ಇದು ತಕ್ಷಣದ ಮನೆಮದ್ದಾಗಿದೆ. ಆದರೆ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಇದು ಕೊನೆಯ ಮದ್ದು ಅಲ್ಲ. ಹೀಗಾಗಿ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾದಾಗ ಮೊದಲು ವೈದ್ಯರನ್ನು ಸಂಪರ್ಕಿಸುವುದು ತುಂಬಾ ಅವಶ್ಯಕ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಕೀಲ ಎಲ್.ಎಚ್.ಅರುಣಕುಮಾರ್ ಮನವಿ
-
ದಿನದ ಸುದ್ದಿ3 days agoಮೊದಲ ಸಂಪುಟ ಸಭೆಯಲ್ಲೇ ಮಹತ್ವದ 5 ಘೋಷಣೆ ಮಾಡಿದ ಸಿಎಂ ಡಿಕೆಶಿ
-
ದಿನದ ಸುದ್ದಿ5 days agoದಾವಣಗೆರೆ ವಿಶ್ವವಿದ್ಯಾಲಯ | ಜೂನ್ 2 ರಿಂದ 4 ರವರೆಗೆ ‘ಭಾಷಾಂತರ ಕೌಶಲ್ಯ ತರಬೇತಿ ಶಿಬಿರ’
-
ಅಂಕಣ3 days agoಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ
-
ದಿನದ ಸುದ್ದಿ3 days agoಬಡವರ ಕಲ್ಯಾಣವೇ ನಮ್ಮ ಆಡಳಿತದ ಕೇಂದ್ರಬಿಂದು : ಸಿಎಂ ಡಿಕೆಶಿ
-
ದಿನದ ಸುದ್ದಿ3 days agoಬಿ.ಕೆ. ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ
-
ದಿನದ ಸುದ್ದಿ3 days agoಧನ್ಯವಾದಗಳು ಕರ್ನಾಟಕ : ಸಿಎಂ ಡಿಕೆ ಶಿವಕುಮಾರ್
-
ದಿನದ ಸುದ್ದಿ5 days agoಕುಂಬಳಕಾಯಿ ಬೀಜದಲ್ಲಿ ‘ ಜೀವ ಸಂಜೀವಿನಿ’ : ಮಿಸ್ ಮಾಡ್ದೆ ಓದಿ ; ಆರೋಗ್ಯದ ಗುಟ್ಟು ತಿಳಿಯಿರಿ

