ದಿನದ ಸುದ್ದಿ
ಅನ್ನದಾತನ ಉನ್ನತಿಗಾಗಿ ಸಮಾಜಮುಖಿ ಶ್ರಾವಣಾನುಷ್ಟಾನ ಕೈಗೊಂಡಿರುವ ತರಳಬಾಳು ಶ್ರೀ ಜಗದ್ಗುರುವರ್ಯರು

ಕನ್ನಡನಾಡಿನ ಹಬ್ಬ ಹರಿದಿನಗಳ ಸಂಖ್ಯೆಗೆ ಕಡಿವಾಣವ ಹಾಕುವ ಕಾರ್ಯ ಆ ವಿಧಾತನಿಂದಲೂ ಸಾಧ್ಯವಿಲ್ಲ.ಜನರ ಉದ್ದಾರಕ್ಕೂ ? ತಮ್ಮ ಅಸ್ತಿತ್ವದ ಕಡ್ಡಾಯ ಅಭಿವ್ಯಕ್ತಿಗೋ ? ಮುಗ್ಧ ಭಕ್ತರ ಭಾವನೆಯ ಬಂಡವಾಳದ ಸದುಪಯೋಗಕ್ಕೊ,? ಧಾರ್ಮಿಕ ದಬ್ಬಾಳಿಕೆಯ ಪ್ರತಿಷ್ಠೆಗೋ ? ಪ್ರಶ್ನೆ ಮಾಡಲು ಯಾವ ಬುದ್ಧಿವಂತನೂ ಇಲ್ಲ ಎನ್ನುವ ಪರಿಸ್ಥಿತಿಯ ಲಾಭ ಹಾಗೂ ಸ್ವಪ್ರಶಂಸೆಯಿಂದಲೊ ? ಈ ನೆಲದ ಕರ್ಮವೋ,ಎಂಬಂತೆ ನಿತ್ಯವೂ ಸರ್ವಅಲಂಕಾರ ಭೂಷಿತ ಸ್ವಘೋಷಿತ ದೇವಮಾನವ ಕಪಟ ಕಾವಿಧಾರಿಗಳಿಂದಅಡ್ಡ ಪಲ್ಲಕ್ಕಿ, ಉದ್ದಪಲ್ಲಕ್ಕಿ ,ಹೋಮ,ಹವನ,ಯಜ್ಞ ,ಲಕ್ಷ ಪೂಜೆ, ಕೋಟಿ ಪೂಜೆ ಹೀಗೆ ಹೊಸ ಹೆಸರಿಡಲು ಸಾಧ್ಯವಿರದಷ್ಟು ಅತೀರೇಖದ ಅವಿವೇಕಿಗಳ ನಾಟಕಕ್ಕೆ ಮುಗ್ದ ಸಮಾಜ ‘ಭಕ್ತರು ‘ ‘ ಶಿಷ್ಯರು’ ಎಂಬ ಹೆಸರಲ್ಲಿ ಕಣ್ಣಿದ್ದು ಕುರುಡರಾಗಿ,ಕಿವಿ ಇದ್ದು ಕಿವುಡರಾಗಿ ಅವರಾಡುವ,ಆಡಿಸುವ ಡೋಂಗಿ ನಾಟಕಕ್ಕೆ ಪ್ರೇಕ್ಷಕರಾಗಿ ಕೆಲವೊಮ್ಮೆ ದಿಢೀರ್ ಪಾತ್ರಧಾರಿಗಳಾಗಿ ಪ್ರಬುದ್ಧ ನಾಗರಿಕ ಸಮಾಜ ಹಂಗಿಸುವ ಗುಲಾಮರಂತೆ ಚಾಚು ತಪ್ಪದೆ ಕಾರ್ಯಪ್ರವೃತ್ತರಾಗಿರುವುದು ಸಮಾಜದ ದುರಂತವೇ ಸರಿ.
ಈ ಶ್ರಾವಣ ಮಾಸವೆಂದರೆ ಅದು ಪೂಜೆ ಅನುಷ್ಠಾನಗಳಿಗೆ ಒಳ್ಳೆಯ ಮಾರುಕಟ್ಟೆ. ಉತ್ಸವ ಹಾಗೂ ಪಲ್ಲಕ್ಕಿ ಪ್ರಿಯರಾದ ಕಾವಿಧಾರಿಗಳಿಗಂತೂ ಫುಲ್ ಕಲೆಕ್ಷನ್ ಹಾಗೂ ಸಂವಿಧಾನದಲ್ಲೇ ಉಲ್ಲೇಖ ಇಲ್ಲದ ಸ್ವಯಂ ಘೋಷಿತ ಕಾನೂನಿನ ನಿರ್ಮಾತೃಗಳಂತೆ
ತಮ್ಮ ಸರಹದ್ದಿನ ವ್ಯಾಪ್ತಿಯಲ್ಲಿ ಮತ್ತೋರ್ವ ಮಠಾಧೀಶರು ಬಂದರೆ ತಮ್ಮ ವ್ಯಾಪರಕ್ಕೆ ಎಲ್ಲಿ ಭಂಗ ಬರುತ್ತದೆಯೋ ಎಂಬ ಉದರ ಸಂಕಟದಿಂದ ತಮ್ಮ ಸುತ್ತಲಿನ ಅರೆಬೆಂದ ಮತಿಹೀನರನ್ನು ಧರ್ಮದ ಹೆಸರಿನಲ್ಲಿ ಎತ್ತಿಕಟ್ಟಿ ಧಮಕೀ ಹಾಕಿದ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ.ಇಂತಹ ವಿಷ ವರ್ತುಲದಲ್ಲಿ ಕಾಯಕವೇ ಕೈಲಾಸ ಅದುವೇ’ ಕರ್ತವ್ಯದ ಉದ್ದೇಶ’ ಎಂದು,ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ ಎಂಬ ಶರಣರ ಸಂಕಲ್ಪದಂತೆ ರೈತರ ಬದುಕು ನಿತ್ಯವೂ ಶ್ರಾವಣವಾಗಲೆಂದು ತ್ರೀಕಾಲವೂ ಅನ್ನಧಾತನ ಅಭ್ಯುಧಯಕ್ಕೆ ಕೈಂಕರ್ಯ ಬದ್ದರಾಗಿರುವ ರೈತಮೆಚ್ಚಿದ ಗುರುವಾಗಿ ಪ್ರತ್ಯಕ್ಷ ದೇವರೆಂದೇ ನಾಮಾಂಕಿತರಾದ ಪರಮ ಪೂಜನೀಯ ಶ್ರೀ ಮದುಜ್ಠಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಶ್ರಾವಣಾನುಷ್ಟಾನ ದೇಶವೇ ಮೆಚ್ಚುವಂತಹದ್ದು.
ಭರಪೂರ ಮಳೆಯ ಪರಿಣಾಮ ನಾಡಿನ ಎಲ್ಲಾ ಜಲಾಶಯಗಳು ಭರ್ತಿಯಾಗಿ ಪ್ರತಿದಿನವೂ 3 ರಿಂದ 4 ಲಕ್ಷ ಕ್ಯೂಸೆಕ್ಸ್ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿಯುತ್ತಿರುವ ದೃಶ್ಯವನ್ನು ಹಳ್ಳಿಯ ಜನ ತಮ್ಮ ಬಿರುಕುಬಿಟ್ಟ ಕೆರೆಯ ದಡಗಳಲ್ಲಿ ನಿಂತು ನೋಡುತ್ತಿದ್ದರೆ ಹೃದಯ ಕಲಕುತ್ತದೆ.ಆಳುವ ಸರ್ಕಾರಗಳ ದೂರದರ್ಶಿತ್ವದ ಶಾಶ್ವತ ರೈತ ಸ್ನೇಹಿ ಯೋಜನೆಗಳು ರೂಪುಗೊಳ್ಳದ ಫಲವಾಗಿ ಅನ್ನಧಾತ ಇಂದು ಆತ್ಮಹತ್ಯೆಯ ಜಾಡು ಹಿಡಿದಿದ್ದಾನೆ.
ತರಳಬಾಳು ಶ್ರೀ ಜಗದ್ಗುರುವರ್ಯರ ಮಾತಿನಲ್ಲಿಯೇ ಹೇಳುವುದಾದರೆ ರೈತರಿಗೆ ಯಾವ ಭಾಗ್ಯವೂ ಬೇಡ ಸಮರ್ಪಕವಾದ ನೀರು ಮತ್ತು ವಿದ್ಯುತ್ ನೀಡಿದರೆ ರೈತರೇ ಸರ್ಕಾರಕ್ಕೆ ಸಾಲ ನೀಡುವಂತಾಗುತ್ತಾರೆ ಎಂಬುದರಲ್ಲಿ ಎಷ್ಟೊಂದು ಅರ್ಥವಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಮೇಲಿನ ನಂಬಿಕೆ ಅನ್ನಧಾತನ ಮನದಲ್ಲಿ ಅಳಿದು. ಧಾರ್ಮಿಕ ನೇತಾರರ ಸಾಮಿಪ್ಯದಿ ನಮ್ಮ ಕಾರ್ಪಣ್ಯಕ್ಕೆ ಉತ್ತರವಿದೆ ಎಂಬ ಆಶಾಭಾವನೆ ಉಳಿದಿದೆ. ಸಂಪ್ರದಾಯಸ್ಥ ಸತ್ಯ ತತ್ವಾದಾರ್ಶ ಧಾರ್ಮಿಕ ಪೀಠದ ಅಧಿಪತಿಗಳಿಗೆ ಶ್ರಾವಣ ಮಾಸವನ್ನು ಸಮಾಜದ ಶ್ರೇಯೋಭಿವೃದ್ದಿಯ ಪೂಜಾ ಕೈಂಕರ್ಯಗಳ ಅಣಿಯಾಗಿದ್ದರೆ ಕಪಟ ಕಾವಿಧಾರಿಗಳಿಗೆ ಶ್ರಾವಣ ಮಾಸ ಕೇವಲ ಅತ್ಯುತ್ತಮ ವಹಿವಾಟಿನ ತಿಂಗಳಾಗಿದೆ. ಇವೆರೆಡಕ್ಕಿಂಲೂ ಬಿನ್ನವಾಗಿ ಬಸವ ಮರುಳಸಿದ್ದರ ವೈಚಾರಿಕ ತತ್ವ ಪರಂಪರೆಯ ವಿದ್ವತ್ತಿನ ಸಂಗಮವಾದ ತರಳಬಾಳು ಶ್ರೀ ಗಳು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ತರಳಬಾಳು ಕೇಂದ್ರದಲ್ಲಿ ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ, ಎಲ್ಲಾ ಪರಿಣಿತ ಎಂಜಿನಿಯರ್ ಗಳ ಸಭೆಯನ್ನು ತಮ್ಮ ಸಾನ್ನಿಧ್ಯದಲ್ಲಿ ಏರ್ಪಡಿಸಿ.ರಾಜಕೀಯ ರಂಗದ ಅಪರೂಪ ಜನಸ್ನೇಹಿ ಚಿಂತಕ ಬಿ.ಎಲ್.ಶಂಕರ್ ಅಧ್ಯಕ್ಷತೆಯಲ್ಲಿ ದಾವಣಗೆರೆಯಿಂದ ವ್ಯರ್ಥವಾಗಿ ಹರಿಯುತ್ತಿರುವ ಭದ್ರಾ ನದಿಯ ನೀರನ್ನು ಜಗಳೂರು ಹಾಗೂ ಭರಮಸಾಗರ ವ್ಯಾಪ್ತಿಯ ಕೆರೆಗಳಿಗೆ ಶೀಘ್ರವಾಗಿ ಮತ್ತು ಸಮರ್ಪಕವಾಗಿ ಹರಿಸುವ ವಿಸ್ತೃ ಯೋಜನೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸುತ್ತಿರುವ ಮಾಹಿತಿಯನ್ನು ಸಮಾಜ ಭಾಂಧವರಿಗೆ ತಿಳಿಸಲೇಬೇಕಾಗುತ್ತದೆ .
ರಾಜನಹಳ್ಳಿ ಏತ ನೀರಾವರಿಯ ಯೋಜನೆಯ1 ನೇ ಹಂತದ ಯೋಜನೆಯಲ್ಲಿ ದಾವಣಗೆರೆ ಮತ್ತು ಜಗಳೂರು ತಾಲ್ಲೂಕಿನ 23ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಳೆದ ವರ್ಷದಿಂದಲೇ ಜಾರಿಯಲ್ಲಿದೆ.ಆದರೂ ಹಲವು ತಾಂತ್ರಿಕ ದೋಷಗಳಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಫಲಪ್ರದವಾಗಿರಲಿಲ್ಲ, ಮಲೆನಾಡಿನಲ್ಲಿ ವಿಪರೀತ ಮಳೆಯಾಗಿ ತುಂಗಾ ಮತ್ತು ಭದ್ರಾ ಜಲಾಶಯಗಳು ತುಂಬಿ ಹರಿದು,ಹೆಚ್ಚುವರಿ ನೀರನ್ನು ಜಲಾಶಯಗಳಿಂದ ಹೊರಬಿಡುತ್ತಿದ್ದರೂ ಸಹ ತಾಂತ್ರಿಕ ಕಾರಣಗಳಿಂದ ಸುತ್ತಲಿನ ಕೆರೆಗಳಿಗೆ ನೀರು ಬಾರದರಿರುವುದು ಶ್ರೀಗಳ ಬೇಸರಕ್ಕೆ ಕಾರಣವಾಗಿದೆ. ಹೆಚ್ಚುವರಿ ನೀರಿನಿಂದ ಆಡಳಿತ ಮತ್ತು ಅಧಿಕಾರಿಗಳ ಜಾಗೃತಿವಹಿಸಿದ್ದರೆ ಎಲ್ಲಾ ಕೆರೆಗಳಿನ್ನು ತುಂಬಿಸಬಹುದಿತ್ತೆಂಬುದು ಮನೋ ಇಂಗಿತ.
ಈ ನಿಟ್ಟಿನಲ್ಲಿ ಈ ಯೋಜನೆಯಲ್ಲಿ ಇರುವ ದೋಷಗಳನ್ನು ಸರಿಪಡಿಸಿ 1 ನೇ ಹಂತದ ಯೋಜನೆಯ ಎಲ್ಲಾ ಕೆರೆಗಳಿಗೆ ಶತಾಯಗತಾಯ ನೀರು ತುಂಬಿಸುವಂತೆ ಶ್ರೀಗಳು ತಾಕೀತು ಮಾಡಿದರು.ಜಗಳೂರು ತರಳಬಾಳು ಹುಣ್ಣಿಮೆಯ ರೈತಕೊಡುಗೆ ಎನ್ನುವಂತೆ 2 ನೇ ಹಂತದ 2
ಯೋಜನೆಗಳಿಗೆ 500 ಕೋಟಿ ರೂಪಾಯಿ ಅನುದಾನ ಬಜೆಟ್ನಲ್ಲಿ ದೊರೆತಿದ್ದು,ಮೊದಲ ಹಂತದಲ್ಲಿ ಕಂಡುಬಂದ ಎಲ್ಲಾ ನ್ಯೂನತೆಗಳು 2 ನೇ ಹಂತದ ಕಾರ್ಯಯೋಜನೆಯಲ್ಲಿ ಪುನರಾವರ್ತನೆಯಾಗದಂತೆ ಎಚ್ಚರವಹಿಸಲು ಕ್ರಮವಹಿಸಿವ ಪರಮರ್ಶೆಯನ್ನು ಶ್ರೀಗಳು ನಡೆಸಿದರು.
ಜೊತೆಗೆ ಚಿಕ್ಕಮಂಗಳೂರು ಜಿಲ್ಲೆಯ ಹಬ್ಬೆ ಫಾಲ್ಸ್ ,ಮದಗದಕೆರೆ,ಅಯ್ಯನಕೆರೆ,ಲಿಂಗದಹಳ್ಳಿ ವ್ಯಾಪ್ತಿಯ ಎಲ್ಲಾ ಕೆರೆಗಳಿಗೆ ನೀರು ಹರಿಸುವ ಕುರಿತು ಶ್ರೀಗಳು ಸಮಾಲೋಚನೆ ನಡೆಸಿದರು. ಅಧಿಕಾರಿಗಳ ಮೇಲೆ ನಿಯಮಿತ ಒತ್ತಡ ಹಾಕಿದರೆ ಸಾರ್ವಜನಿಕ ಕೆಲಸಗಳು ಆಗುವುದು ಕಷ್ಟ ಎಂದು ಅರಿತಿರುವ ಶ್ರೀಗಳು ,ಈ ಸಭೆಯ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ಚೀಫ್ ಎಂಜಿನಿಯರ್ ಗಳು,ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಅಧಿಕಾರಿಗಳು ಹಾಜರಿದ್ದರು.
ರೈತಾಭ್ಯುದಯದ ಕಲ್ಯಾಣದ ಕನಸೇ ಶ್ರೀ ಜಗದ್ಗುರುವರ್ಯರ ಅಂತರಾಳದ ಆಶಯ ತ್ರೀಕಾಲವೂ ಸಮಾಜದ ಉತ್ಕೃಷ್ಟ ಉನ್ನತಿಗೆ ಶ್ರಮದಋಷಿಯಂತೆ ಕೈಂಕರ್ಯಬದ್ದರಾಗಿರುವ ಪರಮಾರಾಧ್ಯ ಶ್ರೀಗಳ ಪವಿತ್ರ ಪಾದಗಳಲ್ಲಿ ಭಕ್ತಿ ಪೂರ್ವಕ ಪ್ರಣಾಮಗಳನ್ನು ಸಲ್ಲಿಸಲಷ್ಟೇ ನಮಗೆ ಸಾಧ್ಯ.
-ಬಸವರಾಜ ಸಿರಿಗೆರೆ

ದಿನದ ಸುದ್ದಿ
ಹಾವೇರಿ | ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಸುದ್ದಿದಿನ,ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಲು ಕಾರಣನಾದ ಹಾನಗಲ್ ತಾಲೂಕಿನ ಯಳ್ಳೂರ ಗ್ರಾಮದ ಸುನೀಲಗೌಡ ಮಹಾದೇವಗೌಡ ಪಾಟೀಲ ಎಂಬಾತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಸಜೆ ಹಾಗೂ ರೂ.ಏಳು ಸಾವಿರ ದಂಡ ವಿಧಿಸಿ ಗುರುವಾರ ಹೆಚ್ಚುವರಿ ಜಿಲ್ಲಾ ವ ಸತ್ರ ಎಫ್.ಟಿ.ಎಸ್.ಸಿ.-1(ಪೊಕ್ಸೊ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಕೆ.ಎಸ್.ಜ್ಯೋತಿಶ್ರೀ ಅವರು ತೀರ್ಪು ನೀಡಿದ್ದಾರೆ.
ಆರೋಪಿ ಸುನೀಲಗೌಡ ಮಹಾದೇವಗೌಡ ಪಾಟೀಲ ಈತನು ಅಪ್ರಾಪ್ತ ಬಾಕಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಅವಳ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ರೇವಪ್ಪ ಕಟ್ಟಿಮನಿ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದನ್ನೂ ಓದಿ | ಕವಿತೆ | ಕಾಮಧೇನು
ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ 10 ವರ್ಷಗಳ ಕಠಿಣ ಸಜೆ ಹಾಗೂ ರೂ.ಏಳು ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಭಾದಿತಳಿಗೆ ರೂ.ಐದು ಲಕ್ಷ ಪರಿಹಾರ ನೀಡಲು ಆದೇಶಿಸಿ ತೀರ್ಪು ನೀಡಿದ್ದಾರೆ ಎಂದು ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದಮಂಡಿಸಿದ ಹೆಚ್ಚುವರಿ ಜಿಲ್ಲಾ ವ ಸತ್ರ ಎಫ್.ಟಿ.ಎಸ್.ಸಿ.-1(ಪೊಕ್ಸೊ) ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ವಿನಾಯಕ ಎಸ್.ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋವಿಡ್-19 ವ್ಯಾಕ್ಸಿನ್ ಡೇಟಾ ಎಂಟ್ರಿಗೆ ಜನ ಮಾಹಿತಿ ನೀಡ್ತಿಲ್ಲ ; ಲಸಿಕೆ ಹಾಕಿಸಿಕೊಳ್ಳೋಕೆ ಒಪ್ತಿಲ್ಲ..!

ಸುದ್ದಿದಿನ,ಬೆಂಗಳೂರು: ಕೊರೋನಾ ಎರಡನೇ ಅಲೆಯ ಆತಂಕದ ಮಧ್ಯೆ ಸಾರ್ವಜನಿಕರಿಗೆ ಕೋವಿಡ್-19 ವ್ಯಾಕ್ಸಿನ್ ವಿತರಣೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಹೈ ರಿಸ್ಕ್ ಕೇಸ್ ಮತ್ತೆ 50 ವರ್ಷ ಮೇಲ್ಪಟ್ಟವರ ಪಟ್ಟಿಯನ್ನು ಸಿದ್ಧಗೊಳಿಸಲು ಆರೋಗ್ಯ ಇಲಾಖೆಯು ಹರಸಾಹಸ ಪಡುತ್ತಿದೆ.
ಮನೆ ಮನೆಗಳ ಸರ್ವೇ ವೇಳೆ ಕೋವಿಡ್-19 ವ್ಯಾಕ್ಸಿನ್ ಡೇಟಾ ಎಂಟ್ರಿಗೆ ಸಾರ್ವಜನಿಕರು ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಿಯಾದ ಮಾಹಿತಿ ಸಿಗದ ಆಶಾ ಕಾರ್ಯಕರ್ತೆಯರು ಆರೋಗ್ಯಾಧಿಕಾರಿಗಳ ಪರದಾಟವನ್ನು ಪಬ್ಲಿಕ್ ಕನ್ಮಡ ಖಾಸಗಿವಾಹಿನಿಯು ವರದಿ ಮಾಡಿದೆ.
ಸಾರ್ವಜನಿಕರಿಗೆ ಮಾರ್ಚ್ 1 ರಿಂದ ಕೊರೊನಾ ಲಸಿಕೆಯನ್ನು ವಿತರಿಸಲು ಆರೋಗ್ಯ ಇಲಾಖೆಯು ತಯಾರಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಮತ್ತು ಹಲವು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲು ಇಲಾಖೆ ನಿರ್ಧಾರ ಮಾಡಿದೆ.
ಸಾರ್ವಜನಿಕರು ಸರಿಯಾದ ಮಾಹಿತಿ ನೀಡ್ತಿಲ್ಲ
ರಾಜ್ಯದಲ್ಲಿ 50 ವರ್ಷ ಮೇಲ್ಪಟ್ಟವರು ಮತ್ತು ಹಲವು ಕಾಯಿಲೆಯಿಂದ ಬಳಲುತ್ತಿರುವ ಜನ ಎಷ್ಟಿದ್ದಾರೆ ? ಎಷ್ಟು ವ್ಯಾಕ್ಸಿನ್ ಕೊಡಬೇಕು? ಫಲಾನುಭವಿಗಳು ಎಷ್ಟು ಮಂದಿ ಆಗುತ್ತಾರೆ ಎಂದು ತಿಳಿಯಲು ಸರ್ಕಾರ ಸರ್ವೇ ನಡೆಸುತ್ತಿದೆ.
ಈ ಸರ್ವೇಯನ್ನು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಸ್ವಯಂ ಸೇವಕರು ನಡೆಸುತ್ತಿದ್ದಾರೆ. ಆದರೆ ಸರ್ವೇ ವೇಳೆ ಸಾರ್ವಜನಿಕರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಆರೋಗ್ಯ ಸಿಬ್ಬಂದಿ ಜೊತೆ ಶನಿವಾರ ಕನ್ನಡ ಸುದ್ದಿವಾಹಿನಿ ಸರ್ವೇಗೆ ಇಳಿದಾಗ ಅಲ್ಲಿನ ವಾಸ್ತವ ಬಯಲಾಗಿದೆ.
ಇದನ್ನೂ ಓದಿ | ಕೃಷಿ ಸಿಂಚಾಯಿ ಯೋಜನೆ | ಸಹಾಯಧನ ಪಡೆಯಲು ಅರ್ಜಿ ಆಹ್ವಾನ
ಪ್ಯಾಲೇಸ್ ಗುಟ್ಟಹಳ್ಳಿಯ ಜಟಕಾಸ್ಟಾಂಡ್ ವಸತಿ ಗೃಹದ ಸಂಕೀರ್ಣದ ಬಳಿ ಸುದ್ದಿವಾಹಿನಿ ಸರ್ವೇಗೆ ಇಳಿದಾಗ ಅಲ್ಲಿನ ಮನೆಯವರು ಸ್ಪಂದಿಸಿದ್ದಾರೆ. ಆರೋಗ್ಯ ಸಿಬ್ಬಂದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ವ್ಯಾಕ್ಸಿನ್ ತೆಗೆದುಕೊಳ್ಳೋದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ.
ಬಾಂಧವ್ಯ ನಗರದಲ್ಲಿ ಸರ್ವೆಗೆ ಅಂತಾ ಒಂದು ಮನೆಗೆ ಸುದ್ದಿವಾಹಿನಿ ತಂಡ ತೆರಳಿದೆ ಅಲ್ಲಿನ ನಿವಾಸಿ ನಿಮಗೆ ಎಷ್ಟು ವಯಸ್ಸು ಎಂದರೆ ಅವರು ಒಂದು ಬಾರಿ 49 ವರ್ಷ ಎನ್ನುತ್ತಾರೆ. ಮತ್ತೊಮ್ಮೆ 51 ವರ್ಷ ಎನ್ನುತ್ತಾರೆ.
ಮನೆಯಲ್ಲಿಯೇ ಇದ್ದ ಅವರು ಆಧಾರ್ ಕಾರ್ಡ್ ವೋಟರ್ ಐಡಿ ಕೇಳಿದ್ರೆ ಇಲ್ಲ ಅಂತಾರೆ. ವ್ಯಾಕ್ಸಿನ್ ಮಾತ್ರ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಕೆಲವರು ನಾವು ಆರೋಗ್ಯವಾಗಿದ್ದು, ಲಸಿಕೆ ಬೇಡ ಅಂತ ಹೇಳುತ್ತಾರೆ ಎಂದು ವರದಿಯಲ್ಲಿ ಸುದ್ದಿವಾಹಿನಿ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ನಗರದ ಬಾರ್ & ರೆಸ್ಟೋರೆಂಟ್ಗಳ ಮೇಲೆ ತಂಬಾಕು ನಿಯಂತ್ರಣ ಅಧಿಕಾರಿಗಳ ದಾಳಿ

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದ ಅಬಕಾರಿ ಇಲಾಖೆಯ ವಲಯ-01 ರ ಸಹಯೋಗದೊಂದಿಗೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸರ್ವೇಕ್ಷಣಾಧಿಕಾರಿ ಹಾಗೂ ಕಾರ್ಯಕ್ರಮಾಧಿಕಾರಿಂ ಡಾ.ರಾಘವನ್.ಜಿ.ಡಿ ಅವರನ್ನು ಒಳಗೊಂಡ ತಂಡ ಫೆ.25 ರಂದು ಬಾರ್ & ರೆಸ್ಟೋರೆಂಟ್ಗಳ ಮೇಲೆ ದಾಳಿ ನಡೆಸಿ, ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದೆ.
30 ಕ್ಕಿಂತ ಹೆಚ್ಚು ಆಸನಗಳಿರುವ ಬಾರ್ & ರೆಸ್ಟೋರೆಂಟ್ಗಳಲ್ಲಿ ‘ನಿರ್ಧಿಷ್ಠ ಧೂಮಪಾನ ವಲಯವನ್ನು ಸ್ಥಾಪಿಸುವುದು ಹಾಗೂ ಬಾರ್ಗಳ ವ್ಯಾಪ್ತಿಯಲ್ಲಿ ಟೇಬಲ್ಗಳ ಮೇಲೆ ಬೆಂಕಿಪೊಟ್ಟಣ, ಲೈಟರ್, ಆ್ಯಶ್ಸ್ಟ್ರೇ ಮತ್ತು ಸಪ್ಲೇಯರ್ಸ ವತಿಯಿಂದ ಯಾವುದೇ ಸಿಗರೇಟು ಒದಗಿಸದಂತೆ ಮಾಲೀಕರು ಜವಾಬ್ದಾರಿಯಿಂದ ಎಚ್ಚರಿಕೆ ವಹಿಸಬೇಕು ಅಲ್ಲದೆ ಎಲ್ಲಾ ರೆಸ್ಟೋರೆಂಟ್ಗಳಲ್ಲಿರುವ ಕೆಲಸಗಾರರು ಕಡ್ಡಾಯವಾಗಿ ಪ್ರತಿ 15 ದಿನಕ್ಕೊಮ್ಮೆ ಕೋವಿಡ್-19 ಪರೀಕ್ಷೆಯನ್ನು ಮಾಡಿಸಬೇಕೆಂದು ಸೂಚಿಸಿದರು.
ಇದನ್ನೂ ಓದಿ |“ರೈತರ ಹಿತ ಕಾಯಲು ಸರ್ಕಾರ ಮಧ್ಯ ಪ್ರವೇಶಿಸುವ ಅತ್ಯಗತ್ಯ” ಕಾರ್ಯಗಾರ
ಕೋಟ್ಪಾ ಸೆಕ್ಷನ್-4 ರ ಅಡಿಯಲ್ಲಿ ನಿಯಮ ಉಲ್ಲಂಘನೆಯ 23 ಪ್ರಕರಣಗಳಿಗೆ ರೂ. 2300, ಸೆಕ್ಷನ್-6ಎ ಅಡಿಯಲ್ಲಿ 2 ಪ್ರಕರಣಕ್ಕೆ ರೂ. 200 ಸೇರಿದಂತೆ ಒಟ್ಟು 25 ಪ್ರಕರಣಗಳಿಗೆ 2500 ರೂ ದಂಡ ವಸೂಲಾಗಿದೆ ಎಂದರು.
ದಾಳಿಯಲ್ಲಿ ಅಬಕಾರಿ ನಿರೀಕ್ಷಕ ವಿನೋದ್.ಬಿ ಕಾಳಪ್ಪಗೋಳ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತ ದೇವರಾಜ್.ಕೆ.ಪಿ, ಅಬಕಾರಿ ಇಲಾಖೆಯ ಸಬ್ಇನ್ಸ್ಪೆಕ್ಟರ್ ಶಂಕರಪ್ಪ, ಕಾನ್ಸ್ಟೇಬಲ್ ಶಿವರಾಜ್ ಪಾಟೀಲ್ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್6 days ago
ವೀರ್ಯಾಣು ಬಲವೃದ್ಧಿಗೆ ಇಲ್ಲಿವೆ ಉಪಾಯಗಳು..!
-
ಅಂತರಂಗ6 days ago
ಅನಾಥರನ್ನಾಗಿಸದ ಅಂತಿಮ ಸಂಗಾತಿ
-
ದಿನದ ಸುದ್ದಿ6 days ago
ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ
-
ರಾಜಕೀಯ6 days ago
ಜನರನ್ನು ಕಷ್ಟಕ್ಕೆ ದೂಡಿ ಮೋದಿ ಸರ್ಕಾರ ಲಾಭಗಳಿಸುತ್ತಿದೆ : ಸೋನಿಯಾ ಗಾಂಧಿ ಕಿಡಿ
-
ಲೈಫ್ ಸ್ಟೈಲ್6 days ago
ಜಾನುವಾರುಗಳ ಲೋಹ ಕಾಯಿಲೆ
-
ದಿನದ ಸುದ್ದಿ5 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ರಾಜಕೀಯ7 days ago
ಮೋದಿಯವರ ನಿಜ ಬಣ್ಣ ಕಾಂಗ್ರೆಸ್ ಪಕ್ಷ ಬಯಲಿಗೆಳೆಯಲಿದೆ : ಸಿದ್ದರಾಮಯ್ಯ
-
ಲೈಫ್ ಸ್ಟೈಲ್5 days ago
ಏನಿದು ? ಗಡಿಮಾರಿ..!