Connect with us

ರಾಜಕೀಯ

ವಾಜಪೇಯಿ ಜೀವನದ ತುಣುಕುಗಳು

Published

on

ಸುದ್ದಿದಿನ ವಿಶೇಷ | ಅಟಲ್ ಬಿಹಾರಿ ವಾಜಪೇಯಿ ಕೃಷ್ಣ ಬಿಹಾರಿ ಮತ್ತು ಕೃಷ್ಣಾ ದೇವಿ ದಂಪತಿಗೆ 1924ರ ಡಿಸೆಂಬರ್ 25ರಂದು ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ಜನಿಸಿದರು. ವಾಜಪೇಯಿ ಅವರ ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿ ಉತ್ತರ ಪ್ರದೇಶದ ಬತೇಶ್ವರ ಹಳ್ಳಿಯಿಂದ ಗ್ವಾಲಿಯರ್ ಗೆ ವಲಸೆ ಬಂದವರು.

ಅವರ ತಂದೆ ಕೃಷ್ಣ ಬಿಹಾರಿ ಶಾಲಾ ಶಿಕ್ಷಕರಾಗಿದ್ದರು‌. ಕವಿಯೂ ಹೌದು‌. ಸರಸ್ವತಿ ಶಿಶು ಮಂದಿರದಲ್ಲಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಆರಂಭಿಸಿದರು. ಗ್ವಾಲಿಯರ್ ನ ವಿಕ್ಟೋರಿಯಾ (ಈಗ ಲಕ್ಷ್ಮೀ ಬಾಯಿ) ಕಾಲೇಜಿನಲ್ಲಿ ಹಿಂದಿ, ಇಂಗ್ಲಿಷ್, ಸಂಸ್ಕೃತದಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪದವಿ  . ಖಾನಪುರದ ಡಿಎವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಗ್ವಾಲಿಯರ್ ನ ಆರ್ಯ ಸಮಾಜದ ಆರ್ಯ ಕುಮಾರ ಸಭಾದ ಮೂಲಕ ಸಾಮಾಜಿಕ ಜೀವನ ಆರಂಭಿಸುದರು. 1944ರಲ್ಲಿ ಕಾರ್ಯದರ್ಶಿಯಾಗಿ ನೇಮಕವಾದರು. 1939ರಲ್ಲಿ ಆರೆಸ್ಸೆಸ್ ನ ಸ್ವಯಂ ಸೇವಕ್ ಆಗಿ ಸೇರಿಕೊಂಡರು‌‌. ಬಾಬಾಸಾಹೇಬ್ ಆಪ್ಟೆ ಅವರಿಂದ ಪ್ರೇರಿತರಾದ ವಾಜಪೇಯಿ, ಆರೆಸ್ಸೆಸ್ ನ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಪೂರ್ಣಪ್ರಮಾಣ ಕಾರ್ಯಕರ್ತರಾದರು. 1947ರಲ್ಲಿ ಪ್ರಚಾರಕ್ ಆಗಿ ಗುರುತಿಸಿಕೊಂಡರು. ದೇಶ ವಿಭಜನೆಯ ಸಮಸ್ಯೆಯಿಂದ ಕಾನೂನು ವ್ಯಾಸಂಗ ಮೊಟಕುಗೊಳಿಸಿದರು.

ಉತ್ತರ ಪ್ರದೇಶಕ್ಕೆ ವಿಸ್ತಾರಕ್ ಆಗಿ ನೇಮಕಗೊಂಡರು. ಅಲ್ಲಿ ದೀನ್ ದಯಾಳ್ ಉಪಾಧ್ಯಾಯ ಅವರ ಮಾಸಪತ್ರಿಕೆ “ರಾಷ್ಟ್ರಧರ್ಮ”, ವಾರಪತ್ರಿಕೆ “ಪಾಂಚಜನ್ಯ”, ವೀರ್ ಅರ್ಜುನ್, ಸ್ವದೇಶ ಪತ್ರಿಕೆಯಲ್ಲಿ ಕಾರ್ಯನಿರತರಾದರು. ಜೀವನದಲ್ಲಿ ಮದುವೆಯಾಗದೇ ಬ್ರಹ್ಮಚರ್ಯ ಪಾಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

‘ಪ್ರಧಾನಿ ಮೋದಿ ಹೇಳಿದ ಸುಳ್ಳುಗಳ’ ಪಟ್ಟಿ ನೀಡಿದ ಸಿಎಂ ಸಿದ್ದರಾಮಯ್ಯ ; ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್

Published

on

ಸುದ್ದಿದಿನ ಡೆಸ್ಕ್ : ಚುನಾವಣಾ ಪ್ರಚಾರ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ನಮ್ಮ ಪ್ರಧಾನಮಂತ್ರಿ ಮೋದಿ ಅವರು ಲೋಕಸಭಾ ಚುನಾವಣಾ ಪ್ರಚಾರ ಕಾಲದಲ್ಲಿ ಹೇಳುತ್ತಿರುವ ಸುಳ್ಳುಗಳ ನೆನಪಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಸುಮ್ಮನೆ ಲೆಕ್ಕ ಹಾಕತೊಡಗಿದೆ. ಸದ್ಯಕ್ಕೆ ಇಷ್ಟು ನೆನಪಾಯಿತು. ಹೆಚ್ಚುವರಿಯಾಗಿ ನಿಮಗೆ ನೆನಪಾದರೆ ಇದಕ್ಕೆ ಸೇರಿಸಿಕೊಳ್ಳಿ. ಈ ಸುಳ್ಳುಗಳ ಸರಮಾಲೆ ಇಲ್ಲಿಗೆ ನಿಲ್ಲಲಾರದು, ಮುಂದುವರಿಯಲಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವ ಪ್ರಧಾನಮಂತ್ರಿಯೂ ಇಷ್ಟೊಂದು ನಿರ್ಲಜ್ಜವಾಗಿ ಈ ರೀತಿ ಹಸಿಹಸಿ ಸುಳ್ಳುಗಳನ್ನು ಹೇಳಿರಲಾರರು. ಯಾರೂ ಕೂಡಾ ಪ್ರಧಾನಮಂತ್ರಿ ಕುರ್ಚಿಯ ಘನತೆಯನ್ನು ಈ ರೀತಿ ಮಣ್ಣು ಪಾಲು ಮಾಡಿರಲಾರರು.
ಮತದಾನದ ದಿನ ದೇಶದ ಜನರಿಗೆ ಸತ್ಯ-ಸುಳ್ಳುಗಳನ್ನು ಅರಿತುಕೊಳ್ಳುವ ಸದ್ಬುದ್ದಿಯನ್ನು ದೇವರು ಕರುಣಿಸಲಿ ಎಂದು ಬೇಡಿಕೊಳ್ಳುವೆ ಎಂದಿದ್ದಾರೆ.

ನರೇಂದ್ರ ಮೋದಿಯವರು ಹೇಳಿದ ಸುಳ್ಳುಗಳು…

  1. ಎಸ್‌ಸಿ/ಎಸ್‌ಟಿ, ಒಬಿಸಿ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ನೀಡುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.
  2. ಸಂಪತ್ತಿನ ಸಮಾನ ಹಂಚಿಕೆಯ ನೆಪದಲ್ಲಿ ಕಾಂಗ್ರೆಸ್ ಪಕ್ಷ ಹಿಂದೂಗಳ ಆಸ್ತಿಯನ್ನು ಕಬಳಿಸಿ ಮುಸ್ಲಿಮರಿಗೆ ನೀಡಲಿದೆ.
  3. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಸೇರಿದಂತೆ ಜನರ ಚಿನ್ನ, ಆಸ್ತಿಯನ್ನು ಕಿತ್ತುಕೊಂಡು ಹೆಚ್ಚು ಮಕ್ಕಳು ಇರುವವರಿಗೆ, ನುಸುಳುಕೋರರಿಗೆ (ಮುಸ್ಲಿಮರಿಗೆ) ನೀಡಲಿದೆ.
  4. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಬಗ್ಗೆ ಸುಪ್ರಿಂ ಕೋರ್ಟ್‌ ನೀಡಿದ ತೀರ್ಪನ್ನು ಬದಲಾಯಿಸುತ್ತದೆ.
  5. ದೇಶದ ಸಂಪತ್ತಿನ ಮೊದಲ ಹಕ್ಕು ಮುಸ್ಲಿಮರಿಗೆ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದರು.
  6. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಜನರ ಪಿತ್ರಾರ್ಜಿತ ಆಸ್ತಿಗೆ ಶೇ.55ರಷ್ಟು ತೆರಿಗೆ ಹೇರಲಿದೆ.
  7. ಛತ್ರಪತಿ ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚೆನ್ನಮ್ಮ, ಮೈಸೂರಿನ ದೊರೆಗಳನ್ನು ಕಾಂಗ್ರೆಸ್‌‌ನವರು ನಿಂದಿಸುತ್ತಾರೆ.
  8. ಲೋಕಸಭಾ ಚುನಾವಣೆಯನ್ನು ವಿದೇಶಿ ಶಕ್ತಿಗಳು ನಿಯಂತ್ರಿಸುತ್ತಿದೆ.
  9. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಉಗ್ರರಿಗೆ ಪ್ರಧಾನಮಂತ್ರಿಯವರ ನಿವಾಸದಲ್ಲಿ ಸ್ವಾಗತ ಕೋರಲಾಗಿತ್ತು.
  10. 2008ರಲ್ಲಿ ಮುಂಬೈ ಪ್ರವೇಶಿಸಿದ ಹತ್ತು ಉಗ್ರರ ಜೊತೆಗೆ ಕಾಂಗ್ರೆಸ್‌ ಸಂಪರ್ಕ ಹೊಂದಿತ್ತು
  11. ರಾಜ, ಮಹಾರಾಜರನ್ನು ಟೀಕಿಸುವ ಕಾಂಗ್ರೆಸ್‌ ನವಾಬರನ್ನು ಟೀಕಿಸುವುದಿಲ್ಲ.
  12. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಿಮ್ಮೆಲ್ಲರ ಮನೆ ಮನೆಗೂ ದಾಳಿ ನಡೆಸಿ ನೀವು ಕೂಡಿಟ್ಟ ಸಂಪತ್ತನ್ನು ವಶಪಡಿಸಿ, ಅದನ್ನು ತನ್ನ ವೋಟ್ ಬ್ಯಾಂಕ್‌ಗೆ (ಮುಸ್ಲಿಮರಿಗೆ) ಮರು ಹಂಚಿಕೆ ಮಾಡುತ್ತದೆ.
  13. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರಕ್ಕೆ ಬಾಬ್ರಿ ಬೀಗ ಹಾಕುತ್ತದೆ.
  14. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತದ ಕ್ರಿಕೆಟ್ ತಂಡದಲ್ಲಿ ಬರೀ ಮುಸ್ಲಿಮರೇ ಇರುತ್ತಾರೆ.
  15. ಕಳೆದ ಐದು ವರ್ಷಗಳಿಂದ ಅದಾನಿ-ಅಂಬಾನಿಗಳನ್ನು ಪ್ರಶ್ನೆ ಮಾಡುತ್ತಿದ್ದ ರಾಹುಲ್ ಗಾಂಧಿ ಏಕಾಏಕಿ ಪ್ರಶ್ನೆ ಮಾಡುವುದನ್ನು ನಿಲ್ಲಿಸಿದ್ದೇಕೆ? ಹಣ ತುಂಬಿದ ಟೆಂಪೋಗಳು ಕಾಂಗ್ರೆಸ್ ಮನೆಗೆ ತಲುಪಿದೆ.

ಸುಳ್ಳುಗಳು ಮುಂದುವರಿಯಲಿದೆ… ಎಂದು ಮತ್ತೆ ವ್ಯಂಗ್ಯವಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಲೋಕಸಭಾ ಚುನಾವಣೆ | ದಾವಣಗೆರೆ ಕ್ಷೇತ್ರದಲ್ಲಿ ಶೇ 76.98 ಮತದಾನ ; ಮಾಯಕೊಂಡ ಗರಿಷ್ಠ ಸಂಖ್ಯೆಯಲ್ಲಿ ಹಕ್ಕು ಚಲಾವಣೆ : ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Published

on

ಸುದ್ದಿದಿನ,ದಾವಣಗೆರೆ : 18 ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ನಡೆದ ಮತದಾನದಲ್ಲಿ ಶೇ 76.98 ರಷ್ಟು ಮತದಾನವಾಗಿದ್ದು ಈವರೆಗೂ ನಡೆದ ಚುನಾವಣೆಗಳಲ್ಲಿ ಗರಿಷ್ಠ ಮತದಾನ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರ ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಕ್ಷೇತ್ರದಲ್ಲಿ ಒಟ್ಟು 1946 ಮತಗಟ್ಟೆಗಳಿಂದ 851990 ಪುರುಷ, 857117 ಮಹಿಳಾ, 137 ಇತರೆ ಸೇರಿ 1709244 ಮತದಾರರಿದ್ದಾರೆ. ಇದರಲ್ಲಿ 667742 ಪುರುಷ, 647964 ಮಹಿಳೆಯರು ಹಾಗೂ 40 ಇತರೆ ಸೇರಿ 1315746 ಮತದಾನವಾಗಿ ಶೇ 76.98 ರಷ್ಟು ಮತದಾನವಾಗಿದೆ.

ಕ್ಷೇತ್ರವಾರು ವಿವರದನ್ವಯ

ಜಗಳೂರು 100046 ಪುರುಷ, 98759 ಮಹಿಳೆ, 10 ಇತರೆ ಸೇರಿ 198815 ಮತದಾರರಲ್ಲಿ 78865 ಪುರುಷ, 74956 ಮಹಿಳೆ, 3 ಇತರೆ ಸೇರಿ 153824 ಮತದಾನ ಮಾಡಿ ಶೇ 77.37, ಹರಪನಹಳ್ಳಿ 112969 ಪುರುಷ, 110985 ಮಹಿಳೆ, 19 ಇತರೆ ಸೇರಿ 223973 ಮತದಾರರಲ್ಲಿ 88443 ಪುರುಷ, 84101 ಮಹಿಳೆ, 3 ಇತರೆ ಸೇರಿ 172547 ಮತದಾನವಾಗಿ ಶೇ 77.04 ರಷ್ಟು ಮತದಾನ ಮಾಡಲಾಗಿದೆ. ಹರಿಹರ 105510 ಪುರುಷ, 106870 ಮಹಿಳೆ, 17 ಇತರೆ ಸೇರಿ 212397 ಮತದಾರರಲ್ಲಿ 85515 ಪುರುಷ, 83116 ಮಹಿಳೆ, 7 ಇತರೆ ಸೇರಿ 168638 ಮತದಾನ ಮಾಡಿ ಶೇ 79.40 ರಷ್ಟು ಮತದಾನವಾಗಿದೆ.

ದಾವಣಗೆರೆ ಉತ್ತರ 124485 ಪುರುಷ, 128635 ಮಹಿಳೆ, 36 ಇತರೆ ಸೇರಿ 253156 ರಲ್ಲಿ 88445 ಪುರುಷ, 89773 ಮಹಿಳಾ, 12 ಇತರೆ ಸೇರಿ 178230 ಮತದಾನವಾಗಿ ಶೇ 70.40 ರಷ್ಟು ಮತದಾನವಾಗಿದೆ. ದಾವಣಗೆರೆ ದಕ್ಷಿಣ 109184 ಪುರುಷ, 111774 ಮಹಿಳಾ, 39 ಇತರೆ ಸೇರಿ 220997 ಮತದಾರರಲ್ಲಿ 77854 ಪುರುಷ, 77105 ಮಹಿಳಾ ಹಾಗೂ 8 ಇತರೆ ಸೇರಿ 154967 ಮತದಾನವಾಗಿ ಶೇ 70.12 ರಷ್ಟು ಮತದಾನವಾಗಿದೆ.

ಮಾಯಕೊಂಡ 97759 ಪುರುಷ, 97326 ಮಹಿಳೆ, 4 ಇತರೆ ಸೇರಿ 195089 ಮತದಾರರಲ್ಲಿ 82568 ಪುರುಷ, 79276 ಮಹಿಳಾ, 2 ಇತರೆ ಸೇರಿ 161846 ಮತದಾನವಾಗಿ ಶೇ 82.96 ರಷ್ಟು ಮತದಾನವಾಗಿದೆ. ಚನ್ನಗಿರಿ 101653 ಪುರುಷ, 102208 ಮಹಿಳೆ, 9 ಇತರೆ ಸೇರಿ 203870 ಮತದಾರರಲ್ಲಿ 82491 ಪುರುಷ, 78670 ಮಹಿಳಾ, 4 ಇತರೆ ಸೇರಿ 161165 ಮತದಾನವಾಗಿ ಶೇ 79.05 ರಷ್ಟು ಮತದಾನವಾಗಿದೆ. ಹೊನ್ನಾಳಿ ಕ್ಷೇತ್ರದಲ್ಲಿ 100384 ಪುರುಷ, 100560 ಮಹಿಳೆ, 3 ಇತರೆ ಸೇರಿ 200947 ಮತದಾರರಲ್ಲಿ 83561 ಪುರುಷ, 80967 ಮಹಿಳಾ, 1 ಇತರೆ ಸೇರಿ 164529 ಮತದಾನವಾಗಿ ಶೇ 81.88 ರಷ್ಟು ಮತದಾನವಾಗಿದೆ. 2019 ರ ಚುನಾವಣೆಯಲಿ ಶೇ 72.96 ರಷ್ಟು ಮತದಾನವಾಗಿತ್ತು.

ಮತ ಎಣಿಕೆ ಜೂನ್ 4

ಲೋಕಸಭಾ ಚುನಾವಣಾ ಮತದಾನ ಎಣಿಕೆಯು ಜೂನ್ 4 ರಂದು ಬೆಳಗ್ಗೆ 8 ರಿಂದ ತೋಳಹುಣಸೆಯಲ್ಲಿನ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿಯಲ್ಲಿ ನಡೆಯಲಿದ್ದು ಅಲ್ಲಿಯವರೆಗೆ ಲೋಕಸಭಾ ಕ್ಷೇತ್ರದ 30 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಕೇಂದ್ರ ಹಾಗೂ ರಾಜ್ಯ ಸಶಸ್ತ್ರ ಮೀಸಲು ಪಡೆ ಭದ್ರತೆಯೊಂದಿಗೆ ಭದ್ರವಾಗಿರಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಉತ್ತಮ ಮತದಾನ; ಚಿಕ್ಕೋಡಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಹಕ್ಕು ಚಲಾವಣೆ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕದಲ್ಲಿ ನಿನ್ನೆ ಸುಗಮ ಮತದಾನವಾಗಿದ್ದು, ಶೇಕಡ 70.41ರಷ್ಟು ಮತದಾನವಾಗಿದೆ.

ಬಾಗಲಕೋಟೆಯಲ್ಲಿ ಶೇಕಡ 70.10 ರಷ್ಟು, ಬೆಳಗಾವಿಯಲ್ಲಿ ಶೇಕಡ 71.00, ಬಳ್ಳಾರಿ 72.35, ಬೀದರ್ 63.55, ಬಿಜಾಪುರ 64.71, ಚಿಕ್ಕೋಡಿ 76.47, ದಾವಣಗೆರೆ 76.23, ಧಾರವಾಡ 72.12, ಕಲಬುರಗಿಯಲ್ಲ್ಲಿ 61.73, ಹಾವೇರಿಯಲ್ಲಿ 75.75, ಕೊಪ್ಪಳ 69.87, ರಾಯಚೂರು 61.81, ಶಿವಮೊಗ್ಗ 76.05 ಹಾಗೂ ಉತ್ತರ ಕನ್ನಡದಲ್ಲಿ ಶೇಕಡ 73.52 ರಷ್ಟು ಮತದಾನವಾಗಿದೆ. ಚಿಕ್ಕೋಡಿಯಲ್ಲಿ ಅತಿಹೆಚ್ಚು ಹಾಗೂ ಕಲಬುರಗಿಯಲ್ಲಿ ಅತಿ ಕಡಿಮೆ ಮತದಾನವಾಗಿದೆ.

ಕರ್ನಾಟಕದ ಕರಾವಳಿ, ಮಲೆನಾಡು, ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಮತದಾನ ನಡೆಯಿತು. ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದ ಕಾರಣದಿಂದಾಗಿ ಸುರಪುರ ವಿಧಾನಸಭೆಗೂ ನಿನ್ನೆ ಉಪಚುನಾವಣೆ ನಡೆಯಿತು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಹಾಗೂ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್ ಕಣದಲ್ಲಿದ್ದಾರೆ. ಕರ್ನಾಟಕದ ಸುರಪುರದಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಶೇಕಡ 73 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಂಕಿ-ಅಂಶಗಳು ತಿಳಿಸಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ11 hours ago

‘ಕಣ್ಣಪ್ಪ’ ಚಿತ್ರದ ವಿಶೇಷ ಪಾತ್ರದಲ್ಲಿ ಪ್ರಭಾಸ್‌ ನಟನೆ

ಸುದ್ದಿದಿನ ಡೆಸ್ಕ್ : ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ‘ಕಣ್ಣಪ್ಪ’ ಚಿತ್ರಕ್ಕೆ ಇನ್ನೊಬ್ಬ ಸ್ಟಾರ್‌ ನಟನ ಎಂಟ್ರಿಯಾಗಿದೆ. ಅದು ಬೇರಾರು ಅಲ್ಲ, ಪ್ರಭಾಸ್. ಈಗಾಗಲೇ ಅಕ್ಷಯ್‌ ಕುಮಾರ್‌,...

ದಿನದ ಸುದ್ದಿ13 hours ago

ಇದೇ 12 ರಂದು ದಾವಣಗೆರೆಯಲ್ಲಿ ಪಾರಂಪರಿಕ ಬೀಜೋತ್ಸವ; ಒಂದು ಸಾವಿರಕ್ಕೂ ಹೆಚ್ಚು ದೇಸಿ ಧಾನ್ಯಗಳ ಪ್ರದರ್ಶನ

ಸುದ್ದಿದಿನ, ದಾವಣಗೆರೆ : ದೇಸಿಯ ಬಿತ್ತನೆ ಬೀಜಗಳ ವೈವಿಧ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇದೇ 12ರಂದು ದಾವಣಗೆರೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ‘ಪಾರಂಪರಿಕ...

ದಿನದ ಸುದ್ದಿ18 hours ago

ಚನ್ನಗಿರಿ ಡಿಗ್ರಿ ಕಾಲೇಜಿನಲ್ಲಿ ಬಸವ ಜಯಂತಿ ಆಚರಣೆ

ಸುದ್ದಿದಿನ, ಚನ್ನಗಿರಿ : ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಮಾಡುವುದರ ಮೂಲಕ ಬಸವ...

ದಿನದ ಸುದ್ದಿ2 days ago

‘ಪ್ರಧಾನಿ ಮೋದಿ ಹೇಳಿದ ಸುಳ್ಳುಗಳ’ ಪಟ್ಟಿ ನೀಡಿದ ಸಿಎಂ ಸಿದ್ದರಾಮಯ್ಯ ; ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್

ಸುದ್ದಿದಿನ ಡೆಸ್ಕ್ : ಚುನಾವಣಾ ಪ್ರಚಾರ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ನಮ್ಮ ಪ್ರಧಾನಮಂತ್ರಿ ಮೋದಿ ಅವರು ಲೋಕಸಭಾ ಚುನಾವಣಾ ಪ್ರಚಾರ ಕಾಲದಲ್ಲಿ ಹೇಳುತ್ತಿರುವ ಸುಳ್ಳುಗಳ ನೆನಪಾಯಿತು ಎಂದು...

ದಿನದ ಸುದ್ದಿ3 days ago

ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ

ಸುದ್ದಿದಿನ, ಬೆಂಗಳೂರು : ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಾಳೆ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. ವಿದ್ಯಾರ್ಥಿಗಳು...

ದಿನದ ಸುದ್ದಿ3 days ago

ಲೋಕಸಭಾ ಚುನಾವಣೆ | ದಾವಣಗೆರೆ ಕ್ಷೇತ್ರದಲ್ಲಿ ಶೇ 76.98 ಮತದಾನ ; ಮಾಯಕೊಂಡ ಗರಿಷ್ಠ ಸಂಖ್ಯೆಯಲ್ಲಿ ಹಕ್ಕು ಚಲಾವಣೆ : ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಸುದ್ದಿದಿನ,ದಾವಣಗೆರೆ : 18 ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ನಡೆದ ಮತದಾನದಲ್ಲಿ ಶೇ 76.98 ರಷ್ಟು ಮತದಾನವಾಗಿದ್ದು ಈವರೆಗೂ...

ದಿನದ ಸುದ್ದಿ3 days ago

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಉತ್ತಮ ಮತದಾನ; ಚಿಕ್ಕೋಡಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಹಕ್ಕು ಚಲಾವಣೆ

ಸುದ್ದಿದಿನ ಡೆಸ್ಕ್ : ಕರ್ನಾಟಕದಲ್ಲಿ ನಿನ್ನೆ ಸುಗಮ ಮತದಾನವಾಗಿದ್ದು, ಶೇಕಡ 70.41ರಷ್ಟು ಮತದಾನವಾಗಿದೆ. ಬಾಗಲಕೋಟೆಯಲ್ಲಿ ಶೇಕಡ 70.10 ರಷ್ಟು, ಬೆಳಗಾವಿಯಲ್ಲಿ ಶೇಕಡ 71.00, ಬಳ್ಳಾರಿ 72.35, ಬೀದರ್...

ದಿನದ ಸುದ್ದಿ3 days ago

ದೇಶದ 93 ಲೋಕಸಭಾ ಕ್ಷೇತ್ರಗಳಿಗೆ ಸುಗಮ ಚುನಾವಣೆ; ಒಟ್ಟಾರೆ ಶೇಕಡ 64.58ರಷ್ಟು ಮತದಾನ

ಸುದ್ದಿದಿನ ಡೆಸ್ಕ್ : ದೇಶದ 93 ಲೋಕಸಭಾ ಕ್ಷೇತ್ರಗಳಿಗೆ ಶಾಂತಿಯುತ ಮತದಾನ ನಡೆದಿದೆ. ಕರ್ನಾಟಕದ 14, ಗುಜರಾತ್‌ನ 25, ಮಹಾರಾಷ್ಟ್ರ 11, ಉತ್ತರಪ್ರದೇಶ 10, ಮಧ್ಯಪ್ರದೇಶ 9,...

ದಿನದ ಸುದ್ದಿ3 days ago

ದಾವಣಗೆರೆ | ಲೋಕಸಭಾ ಚುನಾವಣೆ ; ಅಂದಾಜು ಶೇ 77 ರಷ್ಟು ಮತದಾನ

ಸುದ್ದಿದಿನ, ದಾವಣಗೆರೆ : ಇಂದು ನಡೆದ ಎರಡನೇ ಹಂತದ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಶೇ 77 ರಷ್ಟು ಮತದಾನ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ....

ದಿನದ ಸುದ್ದಿ4 days ago

ಮತಗಟ್ಟೆ ಸಿಬ್ಬಂದಿಗಳಿಗೆ ಹಬ್ಬದೂಟ

ಸುದ್ದಿದಿನ,ದಾವಣಗೆರೆ : ಮತದಾನ ಸಿಬ್ಬಂದಿಗೆ ಹಬ್ಬದೂಟ, ಹೋಳಿಗೆ, ಕರಿಗಡಬು ಊಟವನ್ನು ಮತಗಟ್ಟೆ ಸಿಬ್ಬಂದಿಗಳಿಗೆ ಸಿದ್ದಪಡಿಸಲಾಗಿದೆ. ಮತ್ತು ಮತಗಟ್ಟೆಗಳಲ್ಲಿ ನೀರಿನ ಕೊರತೆಯಾಗಬಾರದು, ಮತದಾರರಿಗೂ ಕುಡಿಯುವ ನೀರು ಸೇರಿದಂತೆ ನೆರಳು...

Trending