ದಿನದ ಸುದ್ದಿ
ರೈತರ ಹೋರಾಟದಲ್ಲಿ ರೈತರೊಂದಿಗೆ ನಿಂತ ವಾಷಿಂಗ್ ಮಷಿನ್ಗಳು..!

ದೇಶದ ಐತಿಹಾಸಿಕ ಹೋರಾಟದಲ್ಲಿ ನಿರತರಾಗಿರುವ ರೈತರ ಜೊತೆಗೆ ಇಡೀ ದೇಶವೇ ನಿಂತಿದೆ. ಇಂತಹ ಒಂದು ಹೋರಾಟದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದಾರೆ. ಕಳೆದ 50 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಠಿಕಾಣಿ ಹೂಡಿರುವ ರೈತರ ಬಟ್ಟೆ ಸ್ವಚ್ಛಗೊಳಿಸಲು ಸುಮಾರು 500ಕ್ಕೂ ಹೆಚ್ಚು ವಾಷಿಂಗ್ ಮಷಿನ್ಗಳು ಕಾರ್ಯನಿರ್ವಹಿಸುತ್ತಿವೆ.
ಪ್ರತಿಭಟನಾ ಸ್ಥಳದಲ್ಲಿ ಖಾಲ್ಸಾ ಏಡ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು, ರೈತರು ಮತ್ತು ಬೆಂಬಲಿಗರು ಇಲ್ಲಿ ವಾಷಿಂಗ್ ಮಷಿನ್ಗಳನ್ನು ಹಾಕಿದ್ದಾರೆ. ತಮ್ಮ ಕೈಯಲ್ಲಿ ಆದಷ್ಟು, ತಮ್ಮ ಶಕ್ತಿಗೆ ಮೀರಿದಷ್ಟು ಮಷಿನ್ಗಳನ್ನು ಇಲ್ಲಿಡುವ ಪ್ರಯತ್ನ ಮಾಡಿದ್ದಾರೆ.
ಖಾಲ್ಸಾ ಏಡ್ ಟಿಕ್ರಿ ಗಡಿಯೊಂದರಲ್ಲೇ 10 ಮಷಿನ್ಗಳನ್ನು ಬಳಕೆಯಲ್ಲಿವೆ. ಬೇರೆ ಬೇರೆ ಗಡಿಗಳಲ್ಲಿ ಕನಿಷ್ಠ ಆರು ವಾಷಿಂಗ್ ಮಷಿನ್ಗಳನ್ನು ಇದೊಂದೇ ಸಂಸ್ಥೆ ನೀಡಿದೆ. ಇದೆ ರೀತಿ ಪಂಜಾಬ್ನಿಂದ ಬಂದ ಇಬ್ಬರು ಯುವಕರ ತಂಡ ಸಿಂಘು ಗಡಿಯ ಆರಂಭದಲ್ಲೇ ಎರಡು ಮಷಿನ್ಗಳ ಮೂಲಕ ರೈತರ ಬಟ್ಟೆ ಒಗೆದು, ಒಣಗಿಸಿ ಕೊಡುವ ಕೆಲಸ ಮಾಡುತ್ತಿದ್ದಾರೆ.
ಗುರು ಕಾ ಲಂಗರ್ಗಳಲ್ಲಿ ಎರಡೆರಡು ವಾಷಿಂಗ್ ಮಷಿನ್ಗಳನ್ನು ಇಟ್ಟಿದ್ದಾಎಡ. ಈ ಮೂಲಕ ಲಂಗರ್ ಸೇವೆ ಮತ್ತು ಬಟ್ಟೆ ತೊಳೆದುಕೊಡುವ ಸೇವೆಯನ್ನು ಮಾಡಲಾಗುತ್ತಿದೆ.
ಪಂಜಾಬ್ನ ಲೂದಿಯಾನ ಮೂಲದ ಪ್ರಿನ್ಸ್ ಪಾಲ್ ಸಿಂಗ್ ಎಂಬುವರು ನಾಲ್ಕು ವಾಷಿಂಗ್ ಮಷಿನ್ಗಳನ್ನು ಸಿಂಘು ಗಡಿಯಲ್ಲಿ ಇಟ್ಟಿದ್ದು, ರೈತರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ದೆಹಲಿ ಚಲೋಗೆ ಸಾಥ್ ನೀಡಲು ಬಂದಿದ್ದ ಪ್ರಿನ್ಸ್ ಪಾಲ್ ಸಿಂಗ್ ಕೆಲ ದಿನಗಳು ಇಲ್ಲಿಯೇ ಟೆಂಟ್ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
ನಾವು ಇಲ್ಲಿಂದ 350 ಕಿಲೊಮೀಟರ್ ದೂರದಲ್ಲಿರುವ ಲೂದಿಯಾನದಿಂದ ಬಂದಿದ್ದೇವೆ. ಮೊದಲು ಇಲ್ಲಿಗೆ ಬಂದು ಟೆಂಟ್ ಹಾಕಿಕೊಂಡಿದ್ದ ಸಂದರ್ಭದಲ್ಲಿ ಬಟ್ಟೆ ಕೊಳೆಯಾಗಿತ್ತು. ಅವುಗಳನ್ನು ವಾಶ್ ಮಾಡಿಸಲು 350 ಕಿಲೋಮೀಟರ್ ದೂರ ಮತ್ತೆ ಪ್ರಯಾಣಿಸಬೇಕಾಯಿತು. ಸ್ವಂತ ಕಷ್ಟಕ್ಕೆ ಒಳಗಾದ ಮೇಲೆ ನನಗೆ ರೈತರ ಕಷ್ಟ ಅನುಭವಕ್ಕೆ ಬಂತು. ನಾನು ಮತ್ತೆ ಊರಿಗೆ ಹೋಗಿ ಅಲ್ಲಿಂದ ನಾಲ್ಕು ವಾಷಿಂಗ್ ಮಷಿನ್ಗಳನ್ನು ಕೊಂಡು ತಂದು ಇಲ್ಲಿ ಇಟ್ಟಿದ್ದೇನೆʼ ಎನ್ನುತ್ತಾರೆ.
ʼಮೊದಲಿಗೆ ನಾನೊಬ್ಬನೇ ಇದ್ದೆ. ಈಗ ಇಲ್ಲಿನ ಸ್ಥಳೀಯ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುವ ಯುವಕರು ಸಹಾಯಕ್ಕೆ ಬಂದಿದ್ದಾರೆ. ಜೊತೆಗೆ ಪ್ರತಿಭಟನೆಯಲ್ಲಿ ಇರುವ ಯುವಕರು ಸಾಥ್ ನೀಡುತ್ತಿದ್ದಾರೆ. ಪಕ್ಕದಲ್ಲಿರುವ ಮನೆ ಮಾಲೀಕ ಬಟ್ಟೆ ಒಗೆಯಲು ಬೇಕಾದ ನೀರು ಮತ್ತು ವಿದ್ಯುತ್ ಶಕ್ತಿ ವ್ಯವಸ್ಥೆಯನ್ನು ಉಚಿತವಾಗಿ ನೀಡಿದ್ದಾರೆʼ ಎಂದು ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ʼನಮ್ಮಗಳ ಜೊತೆಗೆ ಇಲ್ಲಿ ಹಲವು ಸಂಘಟನೆಗಳು ವಾಷಿಂಗ್ ಮಷಿನ್ ಹಾಕಿಕೊಂಡಿವೆ. ಅವರುಗಳನ್ನು ಹೊರತುಪಡಿಸಿ ನಮಗೆ ಪ್ರತಿದಿನ ಕನಿಷ್ಟ 300 ಜನ ರೈತರು ಬಟ್ಟೆ ನೀಡುತ್ತಾರೆ. ಬಟ್ಟೆ ವಾಶ್ ಮಾಡಿಕೊಡಲು 20 ನಿಮಿಷ ಸಮಯ ಕೇಳುತ್ತೇವೆ. ನಂತರ ಬಂದು ಕಲೆಕ್ಟ್ ಮಾಡಿಕೊಳ್ಳಲು ತಿಳಿಸಲಾಗುತ್ತದೆʼ.
ಇದೊಂದು ಸೇವೆ ಎಂದು ನಾವು ಪರಿಗಣಿಸಿದ್ದೇವೆ. ನಮ್ಮ ರೈತರ ಕಷ್ಟಕ್ಕೆ ನಾವು ನಿಲ್ಲಬೇಕು. ಇದು ದೇಶದ ಎಲ್ಲಾ ರೈತರ ಸಮಸ್ಯೆ ಇದು. ಕೇಂದ್ರ ಸರ್ಕಾರ ಮೂರು ಕಪ್ಪು ಕಾನೂನುಗಳನ್ನು ಪಾವಸ್ ಪಡೆಯುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ. ನಾನು ಇಲ್ಲಿ ಸೇವೆ ಸಲ್ಲಿಸುತ್ತಲೇ ಇರುತ್ತೇನೆʼ ಎಂದಿದ್ದಾರೆ ಪ್ರಿನ್ಸ್ ಪಾಲ್ ಸಿಂಗ್.
ಇದೇ ರೀತಿ ಹಲವು ವಾಷಿಂಗ್ ಮಷಿನ್ ಟೆಂಟ್ಗಳನ್ನು ಹಾಕಿರುವ ಜನ ಕೂಡ ಪ್ರತಿಭಟನೆ ಅಂತ್ಯವಾಗುವವರೆಗೂ ನಾವು ಸೇವೆ ಸಲ್ಲಿಸುತ್ತೇವೆ ಎನ್ನುತ್ತಾರೆ.
ಕೃಪೆ | ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೊರೋನ ಲಸಿಕೆ ಪಡೆದ ಸಂಸದ ಜಿ.ಎಂ.ಸಿದ್ದೇಶ್ವರ್

ಸುದ್ದಿದಿನ,ದಾವಣಗೆರೆ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮೂರನೇ ಹಂತದ ಕೋವಿಡ್-19 ಲಸಿಕೆ ನೀಡುವ ಅಭಿಯಾನವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳವಾರ ನಗರದ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ (69) ಹಾಗೂ ಅವರ ಪತ್ನಿ ಗಾಯತ್ರಮ್ಮ.ಜಿ.ಎಸ್ (66), ಹಿರಿಯ ನಾಗರೀಕರು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟ ಅನಾರೋಗ್ಯ ಪೀಡಿತರು ಸೇರಿದಂತೆ ಒಟ್ಟು 74 ಜನರು ಲಸಿಕೆ ಪಡೆದುಕೊಂಡರು.
ಈ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ ತಮ್ಮ ಮಡದಿಯೊಂದಿಗೆ ಲಸಿಕೆ ಪಡೆದು ಮಾತನಾಡಿ, ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದ ಕೊರೋನ ನಿಯಂತ್ರಣಕ್ಕೆ 10 ತಿಂಗಳೊಳಗಾಗಿ ಲಸಿಕೆ ಕಂಡುಹಿಡಿದಿರುವುದು ಅಭಿನಂದನಾರ್ಹ.
ಮೊದಲ ಹಂತದಲ್ಲಿ ಕೋವಿಡ್ ನಿಯಂತ್ರಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ನಂತರ ಕಂದಾಯ, ಪೌರಾಡಳಿತ, ಪಂಚಾಯತ್ ರಾಜ್ ಇಲಾಖೆ, ಪೊಲೀಸ್ ಇಲಾಖೆ ಫಲಾನುಭವಿಗಳಿಗೆ ನೀಡಲಾಗಿದೆ. ಈ ಲಸಿಕೆ ಸುರಕ್ಷಿತವಾಗಿದ್ದು, ಇದುವರೆಗೂ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿಸಿದರು.
ಮಾರ್ಚ್ 1 ರಂದು ಲಸಿಕೆ ಪಡೆಯಬೇಕಿತ್ತು. ಕಾರಣಾಂತರಗಳಿಂದ ಲಸಿಕೆ ಪಡೆಯಲು ಸಾಧ್ಯವಾಗಲಿಲ್ಲ. ಇಂದು ಸ್ವ-ಇಚ್ಚೆಯಿಂದ ನನ್ನ ಮಡದಿಯೊಂದಿಗೆ ಬಂದು ಲಸಿಕೆ ಪಡೆದಿದ್ದು, ಯಾವುದೇ ತೊಂದರೆಯಾಗಿಲ್ಲ. ಸುರಕ್ಷಿರಾಗಿದ್ದೇವೆ. ಲಸಿಕೆ ಪಡೆಯುವುದಕ್ಕು ಮುನ್ನ ಇಲ್ಲಿ ಲಸಿಕೆ ಪಡೆದ ಹಿರಿಯರನ್ನು ವಿಚಾರಿಸಿದ್ದು, ಯಾವುದೇ ರೀತಿಯ ಅಡ್ಡಪರಿಣಾಮ ಸಂಭವಿಸಿಲ್ಲ ಎಂದು ಭರವಸೆ ನೀಡಿದ್ದಾರೆ.
ಆದ್ದರಿಂದ ಲಸಿಕೆ ಪಡೆಯದ ಎಲ್ಲಾ ಹಿರಿಯ ನಾಗರೀಕರು ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲಾ ಅನಾರೋಗ್ಯ ಪೀಡಿತರು ಯಾವುದೇ ಭಯವಿಲ್ಲದೇ, ಹಿಂಜರಿಯದೆ ಲಸಿಕೆ ಪಡೆದುಕೊಂಡು ದೇಶಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ಅಭಿಯಾನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ ಮುಂಚೂಣಿ ಕೊರೋನ ವಾರಿಯರ್ಸ್ಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಮಾರ್ಚ್ 1 ರಿಂದ ಮೂರನೇ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಅಂತಹವರು ತಮ್ಮ ಆಧಾರ ಕಾರ್ಡ್ನೊಂದಿಗೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಶೇಕಡ 80 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದು, ನಂತರ ಮುಂಚೂಣಿ ಕೊರೋನ ವಾರಿಯರ್ಸ್ಗಳಲ್ಲಿ ಶೇಕಡ 70 ರಷ್ಟು ಜನರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇನ್ನೂ ಕಂದಾಯ ಇಲಾಖೆಯಲ್ಲಿ ಶೇಕಡ 55 ರಷ್ಟು ಹಾಗೂ ಇನ್ನಿತರರು ಸೇರಿ ಶೇಕಡ 60 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದು, ಲಸಿಕೆ ಪಡೆಯದವರಿಗೆ ಮಾ.6 ರವರೆಗೆ ಕಾಲವಕಾಶವಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
ಇದನ್ನೂ ಓದಿ | ಎ ಸಿ ಬಿ ಬಲೆಗೆ ಬಿದ್ದ ಕೊಪ್ಪಳದ ಬಿ ಇ ಓ ಮತ್ತು ಎಫ್ ಡಿ ಎ
ಮಾರ್ಚ್ 1 ರಿಂದ ಮೂರನೇ ಹಂತದ ಲಸಿಕೆ ಅಭಿಯಾನ ಪ್ರಾರಂಭವಾಗಿದ್ದು, ಮೊದಲ ದಿನ 11 ಜನ ಲಸಿಕೆ ಪಡೆದಿದ್ದರು. ಆದರೆ ಇಂದು ಸರ್ಕಾರಿ ಹಾಗೂ ಖಾಸಗಿ ಎರಡು ವಲಯಗಳು ಸೇರಿ 63 ಜನರು ಲಸಿಕೆ ಪಡೆದುಕೊಂಡಿದ್ದು, ಒಟ್ಟು 74 ಜನರು ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಮಂಗಳವಾರ ಸಂಸದರಾದ ಸಿದ್ದೇಶ್ವರ ಹಾಗೂ ಅವರ ಪತ್ನಿ ಲಸಿಕೆ ಹಾಕಿಸಿಕೊಂಡಿದ್ದು ಯಾವುದೇ ತೊಂದರೆಗಳು ಸಂಭವಿಸಿಲ್ಲ. ಆದ ಕಾರಣ ಯಾರು ಭಯ ಪಡದೇ, ಲಸಿಕೆ ಕುರಿತು ಪೂರ್ವಾಗ್ರಹ ಇಟ್ಟುಕೊಳ್ಳದೇ, ಧೈರ್ಯದಿಂದ ಮುಂದೆ ಬಂದು ಕೋವಿಶೀಲ್ಡ್ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರೊಂದಿಗೆ ತಮ್ಮ ಕುಟುಂಬದವರನ್ನು ರಕ್ಷಣೆ ಮಾಡಬೇಕು. ಕೊರೋನ ಮುಕ್ತ ದೇಶವನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಅಭಿಯಾನದಲ್ಲಿ ಸಂಸದರ ಪತ್ನಿ ಗಾಯತ್ರಮ್ಮ ಜಿ.ಎಸ್, ಕಾರ್ಪೋರೇಟರ್ ಆರ್.ಎಲ್.ಶಿವಪ್ರಕಾಶ್, ಆರ್ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀಕ್ಷಕ ನೀಲಕಂಠ, ಯುವ ಮುಖಂಡರಾದ ಶಿವಕುಮಾರ್, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎ ಸಿ ಬಿ ಬಲೆಗೆ ಬಿದ್ದ ಕೊಪ್ಪಳದ ಬಿ ಇ ಓ ಮತ್ತು ಎಫ್ ಡಿ ಎ

ಸುದ್ದಿದಿನ,ಕೊಪ್ಪಳ : ಬಂದ್ ಆಗಿರುವ ಶಾಲೆಯ ಡಿಪಾಸಿಟ್ ಅನ್ನು ವಾಪಾಸ್ ಪಡೆಯಲು ಮೂರುವರೆ (3.500ರೂ) ಲಂಚ ಕೇಳಿದ್ದ ಬಿ ಇ ಓ ಮತ್ತು ಎಫ್ ಡಿ ಎ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಭಾಗ್ಯನಗರದ ಎಸ್ ಎಸ್ ಕರ ಶಾಲೆಯ ಬಾಲಚಂದ್ರ ಕಬಾಡೆ ಎಂಬುವವರ ದೂರಿನ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಮೂರೂವರೆ ಸಾವಿರ ಲಂಚ ಪಡೆಯುವಾಗವಾಗ ಬಿಇಓ ಉಮಾದೇವಿ ಸೊನ್ನದ, ಎಫ್ ಡಿ ಎ ಎ ಆರುಂಧತಿ ಬಲೆಗೆ ಬಿದ್ದಿದ್ದಾರೆ. ಶಾಲೆ 2002ರಲ್ಲಿ ಆರಂಭವಾಗಿದ್ದು ೨೦೦೯ 2009 ರಲ್ಲಿ ಬಂದಾಗಿತ್ತು.
ಇದನ್ನೂ ಓದಿ | ಅಶ್ಲೀಲ ಸಿಡಿ ವೈರಲ್ | ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ; ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನ ನೀಡಿ
ಬಳ್ಳಾರಿ ಎಸ್ಪಿ ಗುರುನಾಥ ಮತ್ತೂರ ಮಾರ್ಗದರ್ಶನದಲ್ಲಿ ಡಿಎಸ್ಪಿ ಶಿವಕುಮಾರ್, ಎಸ್ ಐ ಎಸ್ ಎಸ್ ಬೀಳಗಿ, ಎಸೈ ಬಾಳನಗೌಡ ತಂಡವು ಈ ದಾಳಿ ನಡೆಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಶ್ಲೀಲ ಸಿಡಿ ವೈರಲ್ | ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ; ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನ ನೀಡಿ

ಸುದ್ದಿದಿನ, ಬೆಂಗಳೂರು : ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮುಜುಗರ ಆಗಬಾರದೆಂದು ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಅವರಿಗೆ ರವಾನೆ ಮಾಡಿದ್ದು ತಮ್ಮ ನಿಲುವನ್ನು ತಿಳಿಸಿದ್ದಾರೆ.
ಇದನ್ನೂ ಓದಿ | ಕೊಟ್ಟ ಮಾತಿನಂತೆ ನಡೆದ ಡಿ ಬಾಸ್ ದರ್ಶನ್; ಕುದುರೆಯ ತಡಿ ನೀಡಿ, ಎಸ್.ಎಸ್.ಮಲ್ಲಿಕಾರ್ಜುನಗೆ ಕೃತಜ್ಞತೆ
ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮುಜುಗರ ತಪ್ಪಿಸಲು, ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಪ್ರಕರಣದಲ್ಲಿ ನಾನು ಆರೋಪ ಮುಕ್ತನಾದ ಬಳಿಕ ನನಗೆ ಸಚಿವ ಸ್ಥಾನ ನೀಡಿ ಎಂದು ಸಿಎಂಬಿ.ಎಸ್.ಯಡಿಯೂರಪ್ಪಗೆ ರವಾನಿಸಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ರಾಜಕೀಯ7 days ago
ದೇವರಮನೆ ಶಿವಕುಮಾರ್ ಬಿಜೆಪಿ ಸೇರ್ಪಡೆ | ನಾವು ಯಾರಿಗೂ ಆಮಿಷ ಒಡ್ಡಿಲ್ಲ : ಸಂಸದ ಜಿಎಂ ಸಿದ್ದೇಶ್ವರ್
-
ಬಹಿರಂಗ7 days ago
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು..!
-
ಕ್ರೀಡೆ6 days ago
ಅತಿ ಕಡಿಮೆ ಪಂದ್ಯ ; 400 ವಿಕೆಟ್ : ದಾಖಲೆ ಬರೆದ ಸ್ಪಿನ್ನರ್ ಆರ್ ಅಶ್ವಿನ್
-
ಲೈಫ್ ಸ್ಟೈಲ್6 days ago
ರೆಸಿಪಿ | ಖರ್ಜೂರದ ಹೋಳಿಗೆ ಮಾಡೋದು ಹೇಗೆ ಗೊತ್ತಾ..?
-
ಕ್ರೀಡೆ6 days ago
ರಾಜ್ಯದ ಕ್ರೀಡಾ ವಿಜ್ಞಾನ ಸಂಸ್ಥೆಯಿಂದ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ
-
ದಿನದ ಸುದ್ದಿ5 days ago
ಅಸ್ಸಾಂ | ಅಥ್ಲೀಟ್ ಹಿಮಾ ದಾಸ್ ಡಿಎಸ್ಪಿಯಾಗಿ ನೇಮಕ ; ನನ್ನ ಮತ್ತು ತಾಯಿಯ ಕನಸು ನನಸಾದ ದಿನವಿದು : ಹಿಮಾ ಭಾವುಕ ನುಡಿ
-
ದಿನದ ಸುದ್ದಿ7 days ago
ಹೆಚ್.ಎ.ಎಲ್ ನಲ್ಲಿ ತರಬೇತಿಗಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ 25 ರೂ ಹೆಚ್ಚಳ ; ಇತಿಹಾಸದಲ್ಲೇ ಮೊದಲ ಸಲ ಒಂದೇ ತಿಂಗಳಲ್ಲಿ ಮೂರನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆಯಾಗಿದ್ದು..!