ಲೈಫ್ ಸ್ಟೈಲ್
ಬಣ್ಣ ಬಣ್ಣದ ಮದರಂಗಿಯ ಮಾಯಾಲೋಕದಲ್ಲಿ..!

ಮನ ಮೋಹಕ ಈ ‘ ಶ್ವೇತ ‘ಮದರಂಗಿ
ಮೆಹೆಂದಿ ಮೋಹ ಯಾವ ಹೆಣ್ಣಿಗೆ ತಾನೇ ಇಲ್ಲ. ಪ್ರತಿ ಹೆಣ್ಣು ತನ್ನ ಕೈಗಳ ಮೇಲೆ ಮದರಂಗಿ ಯ ರಂಗು ಬಿಡಿಸಲು ಉತ್ಸುಕಳಾಗಿರುತ್ತಾಳೆ. ಹಿಂದಿನಿಂದಲೇ ಮದರಂಗಿ ಭಾರತೀಯ ಸಂಸ್ಕೃತಿ ಭಾಗವಾಗಿ ಹೋಗಿದೆ. ಸೌಂದರ್ಯ ದ ಜೊತೆಗೆ ಆರೋಗ್ಯ ದಾಯಕವೂ ಆಗಿರುವ ಮೆಹೆಂದಿ ಎಲ್ಲಾ ವಯೋಮಾನದವರಿಗೂ ಪ್ರೀತಿಪಾತ್ರದ್ಗಾಗಿದೆ.
ಹಬ್ಬ -ಮದುವೆ-ನಾಮಕರಣ ದಂತಹ ವಿಶೇಷ ಸಮಾರಂಭದಲ್ಲಿ, ಶುಭ ಸಂಕೇತ ಮೆಹಂದಿ ಅತ್ಯಗತ್ಯ. ಮದುವೆ ಯ ಹಲವಾರು ಪ್ರಮುಖ ಶಾಸ್ತ್ರ ಗಳಲ್ಲಿ ಮೆಹಂದಿ ಶಾಸ್ತ್ರವೂ ಒಂದು.
ಹಲವಾರೂ ವಿನ್ಯಾಸ ದ ಮೆಹಂದಿ ಡಿಸೈನ್ಗಳು ರೂಪಗೊಂಡಿದ್ದು, ಪ್ರತಿ ಸಮಾರಂಭಕ್ಕೆ ಹೊಂದುವ ವಿನ್ಯಾಸ ಗಳು ಕೈಗಳನ್ನು ಅಲಂಕರಿಸುತ್ತವೆ. ಬ್ರೈಡಲ್, ಅರೇಬಿಕ್, ಆಫ್ರಿಕನ್, ಟ್ರೈಬಲ್…ಹೀಗೆ ಹಲವಾರೂ ವಿನ್ಯಾಸ ದ ಮೆಹಂದಿ ಡಿಸೈನ್ ಲಭ್ಯವಿದೆ.
ವೈರಲ್ ಆಯ್ತು ವೈಟ್ ಮೆಹಂದಿ ಟ್ರೆಂಡ್!
ಸಾಮಾನ್ಯ ವಾಗಿ ಮೆಹಂದಿ ಅಂದ ಕೂಡಲೇ ಕಣ್ಣು ಮುಂದೆ ಬರುವುದು ಫಾಡವಾದ ಕೆಂಪು ಬಣ್ಣ. ಕೆಲವೊಮ್ಮೆ ಬಣ್ಣ ಸರಿಯಾಗಿ ಬರದಿದ್ದಾಗ ಕೇಸರಿ ಬಣ್ಗಕ್ಕೆ ತೃಪ್ತ ರಾಗಬೇಕಾಗುತ್ತದೆ. ಆದರೆ ಇದ್ದೆಲ್ಲಕ್ಕೂ ವಿಭಿನ್ನ ಎಂಬಂತೆ “ವೈಟ್ ಮೆಹಂದಿ” ಸದ್ದು ಮಾಡುತ್ತಿದೆ. ಇದೇನಿದು “ವೈಟ್ ಮೆಹಂದಿ “ಎನ್ನುತ್ತೀರಾ… ಹೌದು, ಈಗ ಶ್ವೇತ ಮೆಹಂದಿ ಕಾಲ!
ಜನ ತಮ್ಮ ಕೈಗಳ ಮೇಲೆ ಈ ಬಿಳಿ ಮೆಹಂದಿ ಡಿಸೈನ್ ಬಿಡಿಸಿ ಸಂಭ್ರಮಿಸುತ್ತಿದ್ದಾರೆ. ಕೇವಲ ಭಾರತದಲ್ಲಿ ಮಾತ್ರ ಅಲ್ಲ, ಇಡೀ ವಿಶ್ವದಲ್ಲಿ ಸದ್ದು ಮಾಡುತ್ತಿದೆ ‘ವೈಟ್ ಮೆಹಂದಿ’. ವೆಡ್ಡಿಂಗ್ ಫೋಟೋ ಶೂಟ್, ಫ್ಯಾಷನ್ ಶೋ, ರಾಂಪ್ ಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತಿದೆ.
ಗ್ಲಾಮರಸ್ ಗೋಲ್ಡನ್ ಮೆಹಂದಿ!
ಈ ಗ್ಲಾಮರಸ್ ಗೋಲ್ಡನ್ ಮೆಹಂದಿಯನ್ನು ಮದುವೆಯ ಮೆಹಂದಿ ಶಾಸ್ತ್ರ ದಲ್ಲಿ ..ಮದುಮಗಳ ಬ್ರೈಡಲ್ ಮೆಹಂದಿ ಯಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಫೋಟೋ ಶೂಟ್ ಗೆ ಹೇಳಿಮಾಡಿಸಿದಂತಿದೆ ಗೋಲ್ಡನ್ ಮೆಹಂದಿ ಕಮಾಲ್.
ಕುಂದನ್ ಮೆಹಂದಿ ಕಮಾಲ್ !
ಈಗಂತೂ ಬ್ರೈಡಲ್ ಮೆಹಂದಿ ಎಂದ ಕೂಡಲೇ ಹಲವಾರು ಡಿಸೈನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳಲ್ಲಿ ಕುಂದನ್ ಮೆಹಂದಿ ಡಿಸೈನ್ ಕೂಡಾ ಇತ್ತೀಚೆಗೆ ಗಮನ ಸೆಳೆದಿದೆ. ಹಿಂದಿನ ಸಾಂಪ್ರದಾಯಿಕ ಮೆಹಂದಿ ಗೆ ಕುಂದನ್ ಹರಳುಗಳನ್ನು ಅಂಟಿಸಲಾಗುತ್ತದೆ. ಮೆಹಂದಿ ಜಿವಲೆರಿ ಎಂದು ಹೆಸರಾಗಿರುವ ಈ ಕಲೆ ಮಹಿಳೆಯರ ಮನ ಗೆದ್ದಿದೆ.
ಗಮನಿಸಬೇಕಾದ ಅಂಶಗಳು
- ಕಳಪೆ ದರ್ಜೆಯ ಮೆಹಂದಿ ಯಿಂದ ದೂರವಿರಿ.
- ಮೆಹಂದಿ ಕೋನ್ ಕೊಳ್ಳುವಾಗ ತಯಾರಿಸುವ ದಿನಾಂಕ ಹಾಗೂ ಅದರ ಎಕ್ಸ್ಪೈರೀ ದಿನಾಂಕ ದ ಮೇಲೆ ಗಮನ ವಿರಲಿ.
- ಕೈ ಚರ್ಮಕ್ಕೆ ಸ್ವಲ್ಪ ವ್ಯತಿರಕ್ತ ಎನಿಸಿದರೂ ಕೂಡಲೇ ನೀರಿನಿಂದ ತೊಳೆದು ಬಿಡಿ.
- ಯಾವುದೇ ಬಣ್ಣದ ಮೆಹಂದಿ ಆಗಿರಲಿ ನಿಮ್ಮ ಚರ್ಮಕ್ಕೆ ಹೊಂದಿಕೊಂಡರೆ ಮಾತ್ರ ಬಳಸಿ.
- ಸಾಧ್ಯವಾದಷ್ಟು ಮದರಂಗಿ ಯನ್ನು ನೀವೇ ತಯಾರಿಸುವುದು ಉತ್ತಮ.

ಲೈಫ್ ಸ್ಟೈಲ್
ರೆಸಿಪಿ | ಖರ್ಜೂರದ ಹೋಳಿಗೆ ಮಾಡೋದು ಹೇಗೆ ಗೊತ್ತಾ..?

ಬೇಕಾಗುವ ಪದಾರ್ಥಗಳು
- ಖರ್ಜೂರ : ಅರ್ಧ ಕೆ.ಜಿ.
- ಸಕ್ಕರೆ : ಅರ್ಧ ಲೋಟ
- ಗಸಗಸೆ : ಸ್ವಲ್ಪ
- ಯಾಲಕ್ಕಿ : ಸ್ವಲ್ಪ
- ಹುರಿಗಡಲೆಹಿಟ್ಟು : 1-2 ಸೌಟು
- ಮೈದಾ : 2 ಲೋಟ
- ರವೆ : ಅರ್ಧ ಲೋಟ
- ಅಕ್ಕಿ ಹಿಟ್ಟು : ಸ್ವಲ್ಪ
- ತುಪ್ಪ : ಸ್ವಲ್ಪ
- ಉಪ್ಪು : ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಖರ್ಜೂರದ ತುಂಬು, ಬೀಜ ತೆಗೆದು ಸ್ವಚ್ಚಗೊಳಿಸಿಕೊಂಡ
ಒರಳಲ್ಲಿ ರುಬ್ಬಬೇಕು. ಖರ್ಜೂರ ಸಣ್ಣಗಾದ ಮೇಲೆ ಹುರಿದ ಗಸಗಸೆ, ಯಾಲಕ್ಕಿ, ಸಕ್ಕರೆ, ಹುರಿಗಡಲೆಹಿಟ್ಟು ಹಾಕಿ ರುಬ್ಬಿ ಹೂರಣವನ್ನು ಸಿದ್ಧಗೊಳಿಸಬೇಕು. ಹೋಳಿಗೆ ಹಿಟ್ಟಿನಂತೆ ಮೇಲೆ ಹೇಳಿದ ಪ್ರಮಾಣ ಹಿಟ್ಟನ್ನು ನಾದಿ ಕಣಕವನ್ನು ಸಿದ್ಧಗೊಳಿಸಬೇಕು. ಸ್ವಲ್ಪ ದಪ್ಪ ಲಟ್ಟಿಸಿ, ಅಂಗೈ ಅಗಲ ಹೋಳಿಗೆ ಲಟ್ಟಿಸಿ ಬೇಯಿಸಬೇಕು. ಬೇಯಿಸುವಾಗ ತುಪ್ಪ ಹಚ್ಚಬೇಕು. ಈ ಹೋಳಿಗೆ 8-10 ದಿನ ಇಟ್ಟರೂ ಕೆಡುವುದಿಲ್ಲ. ಇದು ಪೌಷ್ಟಿಕ ಆಹಾರವಾಗಿದ್ದು, ಖರ್ಜೂರದಲ್ಲಿ ಜೀವಸತ್ವ ಹೆಚ್ಚಾಗಿರುವುದು.
ಇದನ್ನೂ ಓದಿ : ನರದೌರ್ಬಲ್ಯ ನಿವಾರಣೆಗೆ ಬೆಳ್ಳುಳ್ಳಿ ಬಳಸಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್
ನರದೌರ್ಬಲ್ಯ ನಿವಾರಣೆಗೆ ಬೆಳ್ಳುಳ್ಳಿ ಬಳಸಿ

100 ಗ್ರಾಂ ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು
- ಸಾರಜನಕ : 3.5 ಗ್ರಾಂ
- ಪಿಷ್ಠ : 28.3 ಗ್ರಾಂ
- ಮೇದಸ್ಸು : 0.5 ಗ್ರಾಂ
- ಸುಣ್ಣ : 28 ಮಿಲಿಗ್ರಾಂ
- ರಂಜಕ : 310 ಮಿಲಿಗ್ರಾಂ
- ಕಬ್ಬಿಣ : 1.8 ಮಿಲಿಗ್ರಾಂ
- ನಿಯಾಸಿನ್ : 0.4 ಮಿಲಿಗ್ರಾಂ
- ಸಿ’ ಜೀವಸತ್ವ : 14 ಮಿಲಿಗ್ರಾಂ
ಬೆಳ್ಳುಳ್ಳಿಯಿಂದ ತಯಾರಿಸಬಹುದಾದ ಅಡುಗೆಗಳು
1. ಬೆಳ್ಳುಳ್ಳಿ ಮೆಣಸಿನಸಾರು
3. ಬೆಳ್ಳುಳ್ಳಿ ಚಟ್ಟಿಪುಡಿ.
2. ಬೆಳ್ಳುಳ್ಳಿ ಬಜ್ಜಿ
ಇದನ್ನೂ ಓದಿ | ಏನಿದು ? ಗಡಿಮಾರಿ..!
ಬೆಳ್ಳುಳ್ಳಿಯಲ್ಲಿರುವ ಔಷಧೀಯ ಗುಣಗಳು
1. ಬೆಳ್ಳುಳ್ಳಿಯನ್ನು ಆಹಾರದ ಜೊತೆ ಸೇವಿಸುವುದರಿಂದ ಹಸಿವು ಹೆಚ್ಚಾಗುತ್ತದೆ ನರದೌರ್ಬಲ್ಯ ನಿವಾರಣೆಯಾಗುತ್ತದೆ.
2. ಶೀತಕಾಲದಲ್ಲಿ ಉಂಟಾಗುವ ಕಿವಿ ನೋವಿಗೆ ಬೆಳ್ಳುಳ್ಳಿ ಹಾಕಿ ಕಾಯಿಸಿದ
3. ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ಕಿವಿಗೆ ಹಾಕುವುದರಿಂದ ನೋವು ಶಮನವಾಗುತ್ತದೆ. 3. ಸುಟ್ಟ ಬೆಳ್ಳುಳ್ಳಿಯ ಎರಡು ತೊಳೆಗಳನ್ನು ಮಕ್ಕಳಿಗೆ ತಿನ್ನಿಸುವುದರಿಂದ ಜಂತು ಹುಳುಗಳು ಸಾಯುತ್ತವೆ.
4. ಎರಡು ಬೆಳ್ಳುಳ್ಳಿ ತೊಳೆಗಳ ಜೊತೆಗೆ ಐದಾರು ತುಳಸಿ ಎಲೆಗಳನ್ನು ಬೆರೆಸಿ ಅರೆದು ಹಚ್ಚುವುದರಿಂದ ಹುಳುಕಡ್ಡಿ ನಿವಾರಣೆಯಾಗುತ್ತದೆ.
5. ಬೆಳ್ಳುಳ್ಳಿಯೊಡನೆ ಹರಳೆಣ್ಣೆಯನ್ನು ಹಾಕಿ ಕಾಯಿಸಿ ನಂತರ ಆರಿಸಿ ನೋವಿರುವ ಭಾಗಗಳಿಗೆ ಉಜ್ಜುವುದರಿಂದ ಊತ ಮತ್ತು ನೋವು ಕಡಿಮೆಯಾಗುತ್ತದೆ.
6. ಬಾಣಂತಿಯರ ಆಹಾರದ ಜೊತೆ ಬೆಳ್ಳುಳ್ಳಿಯನ್ನು ಬಳಸುವುದರಿಂದ ಶೀತದ ಬಾಧೆ ತಟ್ಟುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್
ಏನಿದು ? ಗಡಿಮಾರಿ..!

- ಡಾ.ಎನ್.ಬಿ.ಶ್ರೀಧರ್,ಶಿವಮೊಗ್ಗ
ಈಗ ಸ್ವಲ್ಪ ದಿನಗಳ ಹಿಂದೆ ಶಿವಮೊಗ್ಗದಿಂದ ಸಾಗರಕ್ಕೆ ಕಾರ್ಯನಿಮಿತ್ತ ಹೋಗುವಾಗ ರಸ್ತೆಯ ಬದಿಯಲ್ಲಿ ಒಂದು ಮರದ ಗಾಡಿ, ಅದಕ್ಕೆ ಎಳೆಯಲು ಎರಡು ಮರದ ರೆಂಬೆಗಳು, ಅದರ ಮೇಲೊಂದು ದೇವರ ದೇವತೆಯ ಮೂರ್ತಿ, ಅದರ ಕೈಲೊಂದು ಖಡ್ಗ, ಹಿಂದುಗಡೆ ಕಸಬರಿಗಳ ಮತ್ತು ಕಸದ ರಾಶಿ ಕಂಡೆ. ಕೆಲವೊಮ್ಮೆ ಗಂಡು ಮತ್ತು ಹೆಣ್ಣು ಇರುವ ಜೋಡಿ ಮೂರ್ತಿಗಳೂ ಸಹ ಕಂಡು ಬಂದವು.
ಒಂದಲ್ಲ ಎರಡಲ್ಲ.. ಶಿವಮೊಗ್ಗದಿಂದ ಸಾಗರದವರೆಗಿನ ರಸ್ತೆಯಲ್ಲೆ ಮೂರು ನಾಲ್ಕು ಈ ತರದ ಪ್ರತಿಕೃತಿಗಳು ಕಂಡು ಬರುತ್ತವೆ. ಬಹಳ ವರ್ಷಗಳಿಂದಲೂ ಇದು ಬಹಳ ಸಹಜವಾಗಿ ಕಂಡು ಬರುವ ಈ ದೃಶ್ಯ ಶಿವಮೊಗ್ಗ-ಹೊಸನಗರ, ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿಯೂ ಕಂಡು ಬರುವುದು ಸಾಮಾನ್ಯ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಆಚರಣೆ ಉತ್ತರ ಕರ್ನಾಟಕದಲ್ಲಿ ಕಾಣಸಿಗದು.
ಏನಿದರ ಅರ್ಥ ? ಅಂತ ನೋಡಲು ಹೋದಾಗ ಇದರ ಹೆಸರು “ಗಡಿಮಾರಿ” ಎಂದು ತಿಳಿದು ಬಂದಿತು. ಊರಲ್ಲಿ ಯಾವುದಾದರೂ ಸೋಂಕು ರೋಗ ಕಂಡು ಬಂದರೆ ಅಥವಾ ಇತರ ದುರ್ಘಟನೆಗಳು ನಡೆದರೆ ಆ ಘಟನೆಗೆ ಕಾರಣವಾದ ದುಷ್ಟ ಶಕ್ತಿಯನ್ನು ಊರ ಗಡಿ ದಾಟಿಸಲು ಈ ಪದ್ಧತಿ ಇದೆ ಎಂದು ಹಲವು ಹಿರಿಯರು ಹೇಳಿದರು.
ಈ ಬಗ್ಗೆ ಸದ್ಯದ ಯುವಕರಿಗೆ ಇರುವ ಮಾಹಿತಿ ಅಷ್ಟಕ್ಕಷ್ಟೇ. ಒಂದು ಊರಿನ ಗಡಿ ದಾಟಿಸುವಾಗ ಆ ಮೂರ್ತಿಯ ಜೊತೆಗೆ ಊರಲ್ಲಿರುವ ಕಸ, ಕಡ್ಡಿ ಇತ್ಯಾದಿಗಳನ್ನು ಹೇರಿಕೊಂಡು ಮತ್ತೊಂದು ಊರಿನ ಗಡಿಯ ಹತ್ತಿರ ಬಂದರೆ ಅವರ ಕೆಲಸ ಮುಗಿದಂತೆ.
ಮರದಿಂದ ತಯಾರಿಸಿದ ಬೊಂಬೆಗೆ ಕೆಂಪು, ಬಿಳಿ ಹಳದಿ ಮತ್ತು ಕಪ್ಪು ಬಣ್ಣ ಬಳಿದು ಅದನ್ನು ಚಿಕ್ಕ ಮರದ ಕೈಗಾಡಿಯಲ್ಲಿ ಕುಳ್ಳಿರಿಸಿ ಬೊಂಬೆಯ ಕುತ್ತಿಗೆಗೆ ಹೂವಿನ ಹಾರ ಹಾಕಿ ಪೂಜೆ ಮಾಡುತ್ತಾರೆ. ನಂತರ ಬೊಂಬೆಗೆ ಊದುಬತ್ತಿ ಇಟ್ಟು, ಆರತಿ ಬೆಳಗಿ ಊರಿನ ಜನರೆಲ್ಲ ಮಾರಿಯನ್ನು ಕೈಗಾಡಿಯ ಮುಖೇನ ದೂಡಿಕೊಂಡು ಬಂದು ತಮ್ಮ ಗ್ರಾಮದ ಗಡಿ ದಾಟಿಸಿ ಬಿಡುವುದು ಸಂಪ್ರದಾಯ.
ಕೆಲವೊಮ್ಮೆ ಮುಂದಿನ ಊರಿಗೆ ಒಯ್ಯದಿದ್ದರೆ, ಇದು ಇಟ್ಟಲ್ಲೇ ಕೊಳೆತು ಅಥವಾ ಗೆದ್ದಲು ಹಿಡಿದು ಮಣ್ಣು ಸೇರಲು ಹಲವಾರು ವರ್ಷಗಳು ಬೇಕಾಗುತ್ತವೆ. ಹೀಗಾಗಿ ಸಾಗರ, ತೀರ್ಥಹಳ್ಳಿಯ ರಸ್ತೆಯ ಇಕ್ಕೆಲಗಳಲ್ಲಿ ಇಂಥ ನೂರಾರು ಬೀದಿ ದೇವರು ಯಾವಾಗಲೂ ಕಂಡುಬರುತ್ತವೆ.
ರಾಜ್ಯದ ನಾನಾ ಭಾಗಗಳಲ್ಲಿ ನಾನಾ ರೀತಿಯ ಆಚರಣೆ, ನಂಬಿಕೆ ಈಗಲೂ ಜೀವಂತ. ಈ ನಂಬಿಕೆ ಅನ್ನುವುದು ಹಾಗೆ. ಅದು ಎಲ್ಲಿ, ಹೇಗೆ ಹುಟ್ಟಿಕೊಳ್ಳುತ್ತದೆಯೋ ಗೊತ್ತಿಲ್ಲ. ಅದು ಸಂಪ್ರದಾಯ ಅಥವಾ ಆಚರಣೆ ರೂಪದಲ್ಲಿ ಅವತರಿಸುತ್ತದೆ. ಇಂಥದ್ದೇ ಭಕ್ತಿಯ ಈ ಗಡಿ ಮಾರಿ ದೇವರು!!
ಈ ಗಡಿಮಾರಿಯ ಉಗಮಕ್ಕೆ ತರಹೆವಾರಿ ಕಥೆಗಳಿದ್ದರೂ ಯಾರೂ ಅಷ್ಟು ನಿಖರವಾದ ಮಾಹಿತಿ ನೀಡಲಿಲ್ಲ. ಸಾಗರ ಮತ್ತು ತೀರ್ಥಹಳ್ಳಿಯ ಹಳೆಯ ತಲೆಮಾರಿನ ರೈತರ ಪ್ರಕಾರ, ಇದು ಊರಿನ ಮಾರಿ ದೇವತೆಯಂತೆ. ಪ್ರತೀ ವರ್ಷ ಮಳೆಗಾಲಕ್ಕೂ ಮುನ್ನ ಹಳ್ಳಿಯ ಜನರು ಖಾಯಿಲೆ, ಕೋಟಲೆ, ಕಷ್ಟ-ನಷ್ಟ, ಬಡತನ, ದಾರಿದ್ರ್ಯಡಕ್ಕೆ ಈಡಾಗುತ್ತಿದ್ದರಂತೆ. ಹಸುಗಳು ಖಾಯಿಲೆ ಬೀಳುತ್ತಿದ್ದವಂತೆ.
ಇದನ್ನೂ ಓದಿ | ದಾವಣಗೆರೆ | ಫೆ.24 ರಂದು ಮಹಾನಗರಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ
ಇದಕ್ಕೆಲ್ಲ ಊರ ಮಾರಿಯ ಮುನಿಸೇ ಕಾರಣ ಎಂದುಕೊಂಡ ಹಳ್ಳಿಗರು ಊರಿನ ಮಾರಿಯನ್ನು ಊರಿನ ಗಡಿ ದಾಟಿಸಿ ಬರಲು ಇಂಥ ಆಚರಣೆಯನ್ನು ಶುರುವಿಟ್ಟುಕೊಂಡರಂತೆ. ಇನ್ನು ಹಲವಾರು ಅಂತೆ ಕಂತೆಗಳ ಬೊಂತೆಯೇ ಈ ನಂಬಿಕೆಯ ಹಿಂದಿವೆ.
ಅವರವರ ನಂಬಿಕೆಯಂತೆ ಪೂಜೆಗೊಂಡ ಈ “ಗಡಿಮಾರಿ” ಯನ್ನು ಊರು ದಾಟಿಸುವ ಪದ್ಧತಿಯೇ ವಿಶಿಷ್ಟ. ವಿವಿಧ ವಾಧ್ಯಗಳು, ಕೆಲವೊಮ್ಮೆ ಡೊಲ್ಲು, ತಮಟೆ ಮೆರವಣಿಗೆಯೊಂದಿಗೆ ಹೊರಟ ಮಂದಿ, ಗಡಿಮಾರಿಯನ್ನು ತಮ್ಮ ಊರಿನ ಗಡಿದಾಟಿಸಿ, ಮುಂದಿನ ಊರಿನ ಗಡಿಗೆ ಸೇರಿಸುತ್ತಾರೆ. ಹೀಗೆ ಗಡಿಮಾರಿ ಸಾಗಿ ಹೋದಂತೆ, ಹಿಂದೆ ದಾರಿಯುದ್ದಕ್ಕೂ, ಹಳೇ ಪೊರಕೆ, ಮೊರ, ಚಾಪೆ, ತಟ್ಟಿ, ಬುಟ್ಟಿ, ಒಡೆದ ಮಡಿಕೆ-ಕುಡಿಕೆ, ಹಳೆಯ ಬಟ್ಟೆಗಳನ್ನು ಎಸೆಯುತ್ತ ಹೋಗುತ್ತಾರೆ.
ಸ್ವಲ್ಪ ದಿನಗಳ ನಂತರ ತಮ್ಮ ಗಡಿಯಲ್ಲಿ ಕುಳಿತ ಈ ಗಡಿಮಾರಿಯನ್ನು ಮತ್ತೊಂದು ಗ್ರಾಮದ ಜನರು ತಮ್ಮ ಊರಿನಲ್ಲಿ ಸಂಗ್ರಹವಾದ ಹಳೆಯ ವಸ್ತುಗಳನ್ನು ಸೇರಿಸಿ ತಮ್ಮ ಊರಿಗೆ ಬಂದ ಗಡಿಮಾರಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ತಮ್ಮ ಮುಂದಿನ ಊರಿನ ಎಲ್ಲೆಗೆ ದಾಟಿಸುತ್ತಾರೆ.
ಹೀಗೆ ಎಲ್ಲೆಯಿಂದ ಎಲ್ಲೆಗೆ ಸಂಚಾರಿಸುತ್ತ ಹೋಗುವ ಗಡಿಮಾರಿಯನ್ನು ಕೊನೆಗೆ ಯಾವುದಾದರೊಂದು ನೀರಿರುವ ಜಾಗದಲ್ಲಿ ವಿಸರ್ಜಿಸುತ್ತಾರೆ. ಪ್ರತಿ ಊರಲ್ಲಿ ಕಾಯಿಲೆ ಕಸಾಲೆ ಕಷ್ಟ ಇದ್ದಾಗ ಈ “ಗಡಿಮಾರಿ” ದೇವರನ್ನು ತಯಾರಿಸಿ ಅವರ ಊರಿನ ಗಡಿ ದಾಟಿಸುತ್ತಾರೆ. ಅದಕ್ಕಾಗಿಯೇ ಹಲವಾರು ಗಡಿಮಾರಿಗಳು ನಮಗೆ ರಸ್ತೆಯ ಗುಂಟ ಕಾಣಲು ಸಿಗುವುದು.
ಪ್ರತಿಯೊಂದು ಆಚರಣೆಗೂ ಅದರದೇ ಆದ ಹಿನ್ನೆಲೆ ಇರುತ್ತದೆ. ಗಡಿಮಾರಿಯನ್ನು ಗಡಿಪಾರು ಮಾಡುವ ವಿಶಿಷ್ಟ ಆಚರಣೆಯ ಕಾರಣದಿಂದ, ಗ್ರಾಮವನ್ನು ಶುದ್ಧೀಕರಿಸುವ ಕ್ರಿಯೆ ಮೊದಲಾಗಿ, ಜನರು ತಮ್ಮ ಮನೆಯಲ್ಲಿರುವ ಹಳೆಯ ಸಾಮಾನುಗಳನ್ನು ಹೊರಗೆ ಹಾಕುವುದರಿಂದ, ಊರೆಲ್ಲ ಸ್ವಚ್ಛವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಕಡಿಮೆಯಾಗುವುದೆಂಬುದು ಇದರ ಹಿಂದಿನ ಗೂಢ ಮರ್ಮವಿರಬಹುದೇನೋ..!
ಈಗಲೂ ಅಲ್ಲಿ ಇಲ್ಲಿ ಇಂಥ ಆಚರಣೆಗಳು, ನಂಬಿಕೆಗಳು, ಆರಾಧನೆಗಳು ಇದ್ದರೂ, ಅಂದಿನ ಆರಾಧನಾ ವಿಧಾನಗಳಲ್ಲಿ ಜನಪದರಿಗಿದ್ದ ತನ್ಮಯತೆ, ಸಮರ್ಪಣಾ ಭಾವಗಳನ್ನು ಪ್ರಸ್ತುತ ಕಾಣಲು ಸಾಧ್ಯವಿಲ್ಲ. ಕೆಲವೊಮ್ಮೆ ರಸ್ತೆಯಲ್ಲಿ ಹೋಗುತ್ತಿರುವ ವಾಹನ ಸವಾರನ್ನು ಅಡ್ಡಗಟ್ಟಿ ಒತ್ತಾಯದಿಂದ ಹಣ ವಸೂಲಿ ಮಾಡಿ “ಎಣ್ಣೆ” ಹಾಕುವ ವಸೂಲಿ ದಂಧೆಯಾಗಿಯೂ ಗೋಚರಿಸುತ್ತದೆ.
ಇನ್ನು ಕೆಲವು ವರ್ಷ ಕಳೆದರೆ ಈ ಗಡಿಮಾರಿಗಳು ಗಡಿ ದಾಟಿದರೂ ಆಶ್ಚರ್ಯವಿಲ್ಲ! ಈ ಗಡಿಮಾರಿಯನ್ನು ಊರಿಂದ ಹೊರಗಟ್ಟುವ ದಿನ ಊರಿನ ಗಡಿಯಲ್ಲಿ ಕೋಳಿಯನ್ನು ಬಲಿಕೊಡುವ ಸಂಪ್ರದಾಯವೂ ಚಾಲ್ತಿಯಲ್ಲಿದೆ. ಇಲ್ಲಿ ಬಲಿ ನೀಡಿದ ಕೋಳಿಗಳನ್ನು ಹಳ್ಳಿಗರು ತಂತಮ್ಮ ಮನೆಗೆ ಕೊಂಡೊಯ್ದು ಹಬ್ಬದ ಅಡುಗೆ ಮಾಡಿ ಸವಿಯುತ್ತಾರೆ.
ಗಡಿಮಾರಿ ಓಡಿಸುವ ದಿನ ಮನೆಗೆ ನೆಂಟರಿಷ್ಟರು, ಬಂಧು ಬಳಗ ಬರುವ ವಾಡಿಕೆಯೂ ಇಡೀ ಊರಿನಲ್ಲಿ ಇದೊಂಥರಾ ಜಾತ್ರೆಯ ವಾತಾವರಣ ಸಷ್ಟಿಸುತ್ತದೆ. ಇದೊಂದು ಹಳ್ಳಿ ಜನರ ದುಗುಡ ನಿವಾರಣೆಯ ದಾರಿಯಾಗಿದೆ ಎಂದರು ಸಹ ಆಶ್ಚರ್ಯವಿಲ್ಲ..!
ಈ ಗಡಿಮಾರಿ ದೇವರು ಘಟ್ಟದ ಮೇಲಿನವರ ನಂಬಿಕೆಯಾದರೂ ಬೊಂಬೆ ತಯಾರಿಯಲ್ಲಿ ಕಲಾವಿದನ ಕೈಚಳಕ ಗಮನ ಸೆಳೆಯದೇ ಇರದು. ಬೊಂಬೆ ಕೆತ್ತನೆಯಲ್ಲಿ ನೈಪುಣ್ಯ ತೋರಿಸುವ ಕಲಾವಿದ, ಅದರ ಮುಖ, ಹುಬ್ಬು, ಕಣ್ಣು, ತುಟಿ, ಗಾಂಭೀರ್ಯ ಎಲ್ಲವನ್ನೂ ಚಿತ್ರಿಸಿದ ಚಂದಕ್ಕೆ ಬೆರಗಾಗಲೇಬೇಕು. ತಲೆತಲಾಂತರಗಳು ಉರುಳಿದರೂ ಇಂದಿಗೂ ಬೀದಿ ದೇವರು ಅದರದ್ದೇ ಆದ ಗತ್ತು-ಗೈರತ್ತುಗಳಿಂದ ಮಲೆನಾಡಿನ ಜನರ ಆರಾಧ್ಯ ದೇವತೆಯಾಗಿ ಉಳಿದಿದೆ.
ಇತ್ತೀಚೆಗೆ ಈ ಮೂರ್ತಿಗಳನ್ನು ತಯಾರಿಸುವವರು ಸಿಗದೇ, ಪೂರ್ತಿ ಕಸುಬು ಬಾರದವರು ತಯಾರಿಸುವುದರಿಂದ ಇವು ವಿಕಾರವಾಗಿ ಭೂತದಂತೆ ಕಾಣಿಸುವುದೂ ಇದೆ.
ಅದರಲ್ಲೂ ಪಶುಗಳಲ್ಲಿ ಸಾಮಾನ್ಯವಾಗಿ ಬರುವ ಕಾಲುಬಾಯಿ ಜ್ವರವೆಂಬ ವೈರಾಣು ಕಾಯಿಲೆ ಬಂದಾಗ ಈ ರೀತಿ ಗಡಿಮಾರಿಗಳು ಊರಿಂದ ಊರಿನ ಗಡಿಯಲ್ಲಿ ಕಂಡು ಬರುವುದು ಸಾಮಾನ್ಯ.
ಇದೊಂದು ಗ್ರಾಮೀಣ ಜನರ ಮನಸ್ಸಿನ ದುಗುಡ ತುಮುಲವನ್ನು ಹಗುರಗೊಳಿಸಲು ಇರುವ ಸಂಪ್ರದಾಯ ಹಾಗೇ ಇರಲಿ ಎಂದು ಸ್ವೀಕರಿಸಬೇಕೋ ಅಥವಾ ರೋಗಗಳನ್ನು ನಿಯಂತ್ರಿಸಲು ಉತ್ತಮ ಲಸಿಕೆಗಳು, ಉತ್ತಮ ತಂತ್ರಜ್ಞಾನವಿರುವ ಈ ಆಧುನಿಕ ಯುಗದಲ್ಲಿ ಇಂತಹ ಆಚರಣೆ ಎಷ್ಟರ ಮಟ್ಟಿಗೆ ಸರಿ ?! ಇದು ಮೌಢ್ಯವಲ್ಲವೇ? ಎಂಬ ಪ್ರಶ್ನೆಗಳಿಗೆಲ್ಲಾ ಓದುಗರೇ ಉತ್ತರಿಸಬೇಕು.!
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ6 days ago
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!
-
ಭಾವ ಭೈರಾಗಿ7 days ago
ಕರುಣಾಳು ಅವನು, ಅವನು ನನ್ನವನು..!
-
ದಿನದ ಸುದ್ದಿ6 days ago
ದಿಶಾ ಕೇಸ್ | ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ..! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು..!
-
ಲೈಫ್ ಸ್ಟೈಲ್6 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ದಿನದ ಸುದ್ದಿ7 days ago
ಬಡವರನ್ನು ಸಬಲೀಕರಣಗೊಳಿಸಲು ಉಚಿತ ಅನಿಲ ಸಂಪರ್ಕ ನೀಡಿದ್ದೇವೆ : ಪ್ರಧಾನಿ ಮೋದಿ
-
ಕ್ರೀಡೆ6 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್6 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ
-
ಭಾವ ಭೈರಾಗಿ6 days ago
ಕವಿತೆ | ಅವಳು