ದಿನದ ಸುದ್ದಿ
ಯಾದಗಿರಿ | ಮಹಾರಾಷ್ಟ್ರದಿಂದ ಆಗಮಿಸಿದ 72 ಜನಕ್ಕೆ ಕೊರೊನಾ ಸೋಂಕು
ಸುದ್ದಿದಿನ,ಯಾದಗಿರಿ : ಜಿಲ್ಲೆಯಲ್ಲಿ ಮೇ 23ರಂದು ಕೊರೊನಾ ಪಾಸಿಟಿವ್ ಪತ್ತೆಯಾದ 72 ಜನ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರ ರಾಜ್ಯದಿಂದ ಯಾದಗಿರಿ ಜಿಲ್ಲೆಗೆ ಮೇ 16ರಂದು ಆಗಮಿಸಿದ್ದರು ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಯಾದಗಿರಿ ತಾಲ್ಲೂಕಿನ ಮುದ್ನಾಳ ದೊಡ್ಡ ತಾಂಡಾದ 32 ವರ್ಷದ ಮಹಿಳೆ (ಪ್ರಕರಣ ಸಂಖ್ಯೆ ಪಿ-1749), ಮುದ್ನಾಳ ತಾಂಡಾದ 8 ವರ್ಷದ ಗಂಡುಮಗು (ಪಿ-1750), ಮುದ್ನಾಳ ತಾಂಡಾದ 10 ವರ್ಷದ ಹೆಣ್ಣುಮಗು (ಪಿ-1751), ಮುದ್ನಾಳ ದೊಡ್ಡ ತಾಂಡಾದ 28 ವರ್ಷದ ಮಹಿಳೆ (ಪಿ-1752), ಮುಂಡರಗಿ ತಾಂಡಾದ 11 ವರ್ಷದ ಗಂಡುಮಗು (ಪಿ-1753), ಮುದ್ನಾಳ ದೊಡ್ಡ ತಾಂಡಾದ 30 ವರ್ಷದ ಮಹಿಳೆ (ಪಿ-1754), ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ 6 ವರ್ಷದ ಹೆಣ್ಣುಮಗು (ಪಿ-1755), ಯರಗೋಳ ತಾಂಡಾದ 1 ವರ್ಷದ ಹೆಣ್ಣುಮಗು (ಪಿ-1756), ಚಿಂತನಳ್ಳಿ ತಾಂಡಾದ 30 ವರ್ಷದ ಮಹಿಳೆ (ಪಿ-1757), ಯಾದಗಿರಿ ನಗರದ ದುಖಾನವಾಡಿಯ 38 ವರ್ಷದ ಪುರುಷ (ಪಿ-1758).
ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ 30 ವರ್ಷದ ಮಹಿಳೆ (ಪಿ-1759), ಯಾದಗಿರಿ ತಾಲ್ಲೂಕಿನ ಬಸಂತಪೂರ ತಾಂಡಾದ 23 ವರ್ಷದ ಪುರುಷ (ಪಿ-1760), ಗುರುಮಠಕಲ್ ತಾಲ್ಲೂಕಿನ ಚಿಂತನಳ್ಳಿ ತಾಂಡಾದ 30 ವರ್ಷದ ಪುರುಷ (ಪಿ-1761), ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ 8 ವರ್ಷದ ಹೆಣ್ಣುಮಗು (ಪಿ-1762), ಗುರುಮಠಕಲ್ ತಾಲ್ಲೂಕಿನ ಯಂಪಾಡ್ ಗ್ರಾಮದ 20 ವರ್ಷದ ಮಹಿಳೆ (ಪಿ-1853), ಯಾದಗಿರಿ ತಾಲ್ಲೂಕಿನ ರಾಮಸಮುದ್ರ ಗ್ರಾಮದ 35 ವರ್ಷದ ಮಹಿಳೆ (ಪಿ-1854), ಗುರುಮಠಕಲ್ ತಾಲ್ಲೂಕಿನ ಯಂಪಾಡ್ ಗ್ರಾಮದ 2 ವರ್ಷದ ಗಂಡುಮಗು (ಪಿ-1855), ಯರಗೋಳ ತಾಂಡಾದ 45 ವರ್ಷದ ಪುರುಷ (ಪಿ-1856), ಯರಗೋಳ ತಾಂಡಾದ 40 ವರ್ಷದ ಮಹಿಳೆ (ಪಿ-1857), ಯರಗೋಳ ತಾಂಡಾದ 25 ವರ್ಷದ ಪುರುಷ (ಪಿ-1858).
ಯರಗೋಳ ತಾಂಡಾದ 18 ವರ್ಷದ ಮಹಿಳೆ (ಪಿ-1859), ಯರಗೋಳ ತಾಂಡಾದ 18 ವರ್ಷದ ಮಹಿಳೆ (ಪಿ-1860), ಯರಗೋಳ ತಾಂಡಾದ 18 ವರ್ಷದ ಪುರುಷ (ಪಿ-1861), ಯರಗೋಳ ತಾಂಡಾದ 17 ವರ್ಷದ ಯುವತಿ (ಪಿ-1862), ಯರಗೋಳ ತಾಂಡಾದ 14 ವರ್ಷದ ಗಂಡುಮಗು (ಪಿ-1863), ಯರಗೋಳ ತಾಂಡಾದ 40 ವರ್ಷದ ಮಹಿಳೆ (ಪಿ-1864), ಯರಗೋಳ ತಾಂಡಾದ 23 ವರ್ಷದ ಪುರುಷ (ಪಿ-1865), ಅಲ್ಲಿಪೂರ ತಾಂಡಾದ 48 ವರ್ಷದ ಮಹಿಳೆ (ಪಿ-1866), ಯರಗೋಳ ತಾಂಡಾದ 25 ವರ್ಷದ ಪುರುಷ (ಪಿ-1867), ಯರಗೋಳ ತಾಂಡಾದ 31 ವರ್ಷದ ಪುರುಷ (ಪಿ-1868).
ಯರಗೋಳ ತಾಂಡಾದ 27 ವರ್ಷದ ಪುರುಷ (ಪಿ-1869), ಯರಗೋಳ ತಾಂಡಾದ 7 ವರ್ಷದ ಹೆಣ್ಣುಮಗು (ಪಿ-1870), ಯರಗೋಳ ತಾಂಡಾದ 28 ವರ್ಷದ ಪುರುಷ (ಪಿ-1871), ಯರಗೋಳ ತಾಂಡಾದ 26 ವರ್ಷದ ಮಹಿಳೆ (ಪಿ-1872), ಯರಗೋಳ ತಾಂಡಾದ 47 ವರ್ಷದ ಪುರುಷ (ಪಿ-1873), ಯಾದಗಿರಿ ನಗರದ ದುಖಾನವಾಡಿಯ 14 ತಿಂಗಳ ಹೆಣ್ಣುಮಗು (ಪಿ-1874), ಅಲ್ಲಿಪೂರ ತಾಂಡಾದ 30 ವರ್ಷದ ಪುರುಷ (ಪಿ-1875), ಅಲ್ಲಿಪೂರ ತಾಂಡಾದ 24 ವರ್ಷದ ಪುರುಷ (ಪಿ-1876), ಅಲ್ಲಿಪೂರ ತಾಂಡಾದ 21 ವರ್ಷದ ಮಹಿಳೆ (ಪಿ-1877), ಅಲ್ಲಿಪೂರ ತಾಂಡಾದ 28 ವರ್ಷದ ಪುರುಷ (ಪಿ-1878).
ಯರಗೋಳ ತಾಂಡಾದ 30 ವರ್ಷದ ಮಹಿಳೆ (ಪಿ-1879), ಬಾಚವಾರ ತಾಂಡಾದ 8 ವರ್ಷದ ಹೆಣ್ಣುಮಗು (ಪಿ-1880), ಬಾಚವಾರ ತಾಂಡಾದ 6 ವರ್ಷದ ಹೆಣ್ಣುಮಗು (ಪಿ-1881), ಬಾಚವಾರ ತಾಂಡಾದ 23 ವರ್ಷದ ಪುರುಷ (ಪಿ-1882), ಬಾಚವಾರ ತಾಂಡಾದ 20 ವರ್ಷದ ಪುರುಷ (ಪಿ-1883), ಬಾಚವಾರ ತಾಂಡಾದ 21 ವರ್ಷದ ಹೆಣ್ಣುಮಗು (ಪಿ-1884), ಬಾಚವಾರ ತಾಂಡಾದ 10 ವರ್ಷದ ಹೆಣ್ಣುಮಗು (ಪಿ-1885), ಬಾಚವಾರ ತಾಂಡಾದ 24 ವರ್ಷದ ಪುರುಷ (ಪಿ-1886), ಬಾಚವಾರ ತಾಂಡಾದ 19 ವರ್ಷದ ಪುರುಷ (ಪಿ-1887), ಬಾಚವಾರ ತಾಂಡಾದ 42 ವರ್ಷದ ಪುರುಷ (ಪಿ-1888).
ಬಾಚವಾರ ತಾಂಡಾದ 17 ವರ್ಷದ ಯುವಕ (ಪಿ-1889), ಬಾಚವಾರ ತಾಂಡಾದ 15 ವರ್ಷದ ಯುವಕ (ಪಿ-1890), ಬಸವಂತಪುರ ತಾಂಡಾದ 26 ವರ್ಷದ ಪುರುಷ (ಪಿ-1891), ಬಸವಂತಪುರ ತಾಂಡಾದ 18 ವರ್ಷದ ಯುವಕ (ಪಿ-1892), ಅಲ್ಲಿಪೂರ ತಾಂಡಾದ 20 ವರ್ಷದ ಮಹಿಳೆ (ಪಿ-1893), ಅಲ್ಲಿಪೂರ ತಾಂಡಾದ 52 ವರ್ಷದ ಪುರುಷ (ಪಿ-1894), ಅಲ್ಲಿಪೂರ ತಾಂಡಾದ 48 ವರ್ಷದ ಮಹಿಳೆ (ಪಿ-1895), ಅಲ್ಲಿಪೂರ ತಾಂಡಾದ 22 ವರ್ಷದ ಮಹಿಳೆ (ಪಿ-1896), ಅಲ್ಲಿಪೂರ ತಾಂಡಾದ 21 ವರ್ಷದ ಪುರುಷ (ಪಿ-1897), ಅಲ್ಲಿಪೂರ ತಾಂಡಾದ 35 ವರ್ಷದ ಮಹಿಳೆ (ಪಿ-1898).
ಅಲ್ಲಿಪೂರ ತಾಂಡಾದ 17 ವರ್ಷದ ಯುವಕ (ಪಿ-1899), ಅಲ್ಲಿಪೂರ ತಾಂಡಾದ 55 ವರ್ಷದ ಪುರುಷ (ಪಿ-1900), ಯರಗೋಳ ತಾಂಡಾದ 48 ವರ್ಷದ ಮಹಿಳೆ (ಪಿ-1901), ಬಾಚವಾರ ತಾಂಡಾದ 32 ವರ್ಷದ ಪುರುಷ (ಪಿ-1902), ಅಲ್ಲಿಪೂರ ತಾಂಡಾದ 9 ವರ್ಷದ ಹೆಣ್ಣುಮಗು (ಪಿ-1903), ಅಲ್ಲಿಪೂರ ತಾಂಡಾದ 7 ವರ್ಷದ ಗಂಡುಮಗು (ಪಿ-1904), ಅಲ್ಲಿಪೂರ ತಾಂಡಾದ 38 ವರ್ಷದ ಪುರುಷ (ಪಿ-1905), ಅಲ್ಲಿಪೂರ ತಾಂಡಾದ 31 ವರ್ಷದ ಪುರುಷ (ಪಿ-1906), ಅಲ್ಲಿಪೂರ ತಾಂಡಾದ 21 ವರ್ಷದ ಮಹಿಳೆ (ಪಿ-1907), ಅಲ್ಲಿಪೂರ ತಾಂಡಾದ 32 ವರ್ಷದ ಮಹಿಳೆ (ಪಿ-1908), ಅಲ್ಲಿಪೂರ ತಾಂಡಾದ 17 ವರ್ಷದ ಯುವತಿ (ಪಿ-1909), ಅಲ್ಲಿಪೂರ ತಾಂಡಾದ 15 ವರ್ಷದ ಯುವತಿ (ಪಿ-1910) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ ಟಿಶ್ಯೂ ಪೇಪರ್ ಅನ್ನು ಬಳಸಬೇಕು. ಕೈ ಸ್ವಚ್ಛಗೊಳಿಸುವ ದ್ರಾವಣ (ಸ್ಯಾನಿಟೈಸರ್) ಅಥವಾ ನೀರು ಮತ್ತು ಸೋಪಿನಿಂದ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವಿಕೆಯನ್ನು ಮಾಡಬಾರದು.
ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಸಹಾಯವಾಣಿ ಸಂಖ್ಯೆ 104 ಅಥವಾ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 08473 253950 ಹಾಗೂ ವಾಟ್ಸ್‍ಆ್ಯಪ್ ಸಂಖ್ಯೆ 9449933946 ಗೆ ಸಂಪರ್ಕಿಸಬಹುದು. ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕೆಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಕಾರ್ಯಾರಂಭ ಸಮಾರಂಭ ; ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟನೆ
ಸುದ್ದಿದಿನ,ದಾವಣಗೆರೆ: ಖಾಸಗಿ ಬಸ್ ನಿಲ್ದಾಣ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದ್ದು ಈ ಬಸ್ ನಿಲ್ದಾಣವು ಸುಸಜ್ಜಿತ ಹಾಗೂ ಹಲವು ಸೌಲಭ್ಯಗಳನ್ನು ಹೊಂದಿದೆ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಅವರು (07) ರಂದು ಪಿ.ಬಿ ರಸ್ತೆಯಲ್ಲಿನ ಡಾ. ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಕಾರ್ಯಾರಂಭ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಈ ಬಸ್ ನಿಲ್ದಾಣ ಸ್ಮಾರ್ಟ್ ಸಿಟಿ’ ಯೋಜನೆಯಡಿ 20 ಕೋಟಿ ವೆಚ್ಚದಲ್ಲಿ ಸಿದ್ದಗೊಂಡು, ಈಚೆಗಷ್ಟೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುವ ಈ ಬಸ್ ನಿಲ್ದಾಣವು ಸುಸಜ್ಜಿತವಾಗಿದ್ದು, ಹತ್ತಾರು ಸೌಲಭ್ಯಗಳನ್ನು ಹೊಂದಿದೆ. 84 ಮಳಿಗೆ ಹಾಗೂ ಏಕಾಲಕ್ಕೆ 16 ಬಸ್ ನಿಲ್ಲಿಸಬಹುದಾಗಿದೆ. 200 ದ್ವೀಚಕ್ರ ವಾಹನ ನಿಲುಗಡೆಗೆ ಕೂಡ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸುಸಜ್ಜಿತ ಬಸ್ ನಿಲ್ದಾಣವನ್ನು ದಾವಣಗೆರೆ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಯಿತು. ಮಹಾನಗರ ಪಾಲಿಕೆ ಮೇಯರ್ ಚಮನ್ ಸಾಬ್, ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಉಪಮೇಯರ್ ಸೋಗಿ ಶಾಂತಕುಮಾರ್, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ಮಲ್ಲೇಶಪ್ಪ, ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷರಾದ ಉಮೇಶ್‍ರಾವ್ ಸಾಳಂಕಿ, ಹಾಗೂ ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು, ಖಾಸಗಿ ಬಸ್ ಏಜೆಂಟ್ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನಕ್ಕೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ಕೋರ್ಸುಗಳಾದ ದ್ವಿತೀಯ ಪಿ.ಯು.ಸಿ. ಮತ್ತು ಪದವಿ ,ಸ್ನಾತಕೋತ್ತರ ಪದವಿ ವಾರ್ಷಿಕ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಗೆ ಪ್ರೊತ್ಸಾಹಧನ ನೀಡಲು ಅನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಸಕ್ತ ಅಭ್ಯರ್ಥಿಗಳು ಸಮಾಜ ಕಲ್ಯಾಣ ಇಲಾಖಾ www.sw.kar.nic.in ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಿ. ಅರ್ಜಿ ಹಾಕಿದ ಪ್ರತಿಯೊಂದಿಗೆ ಅಗತ್ಯ ದಾಖಲೆಗಳನ್ನು ಪ್ರಾಂಶುಪಾಲರ ದೃಢೀಕರಣದೊಂದಿಗೆ ಆಯಾ ತಾಲ್ಲೂಕಿನ ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಜಂಟಿ ನಿರ್ದೇಶಕಾರಾದ ನಾಗರಾಜ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಸತಿ ಯೋಜನೆ ; ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪಾಲಿಕೆ ವ್ಯಾಪ್ತಿಯಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ; ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಿಥಿಲವಾಗಿರುವ ಮನೆಗಳು ಹಾಗೂ ಖಾಲಿ ನಿವೇಶನ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ವಾಜಪೇಯಿ ವಸತಿ ಯೋಜನೆಯಡಿ ಸಾಮಾನ್ಯದಡಿ 177 ಮನೆಗಳು ಲಬ್ಯವಿದ್ದು ಸಹಾಯಧನವಾಗಿ ರೂ.2.70 ಲಕ್ಷ ಮತ್ತು ಡಾ; ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪರಿಶಿಷ್ಟ ಪಂಗಡದ 18 ಮನೆಗಳು ಲಭ್ಯವಿದ್ದು ರೂ.3.50 ಲಕ್ಷ ಸಹಾಯಧನ ನೀಡಲಾಗುತ್ತದೆ.
ಆಸಕ್ತರು ಗಂಡ, ಹೆಂಡತಿ ಇಬ್ಬರ ಆಧಾರ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪತ್ರ, ಬ್ಯಾಂಕ್ ಪಾಸ್ ಬುಕ್, ಚಾಲ್ತಿ ಇ-ಸ್ವತ್ತು, ಇಸಿ ನಕಲು, 2 ಭಾವಚಿತ್ರ ಪ್ರತಿಯೊಂದಿಗೆ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಲು ಆಯುಕ್ತರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಎಂಬ್ರಾಯ್ಡರಿ ಮತ್ತು ಆರಿ ವರ್ಕ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
-
ದಿನದ ಸುದ್ದಿ6 days ago
ಗನ್ ಮಿಸ್ ಫೈರ್ | ಬಾಲಿವುಡ್ ನಟ ಗೋವಿಂದ ಆಸ್ಪತ್ರೆಗೆ ದಾಖಲು
-
ದಿನದ ಸುದ್ದಿ6 days ago
ದಿವಾಕರ. ಡಿ ಮಂಡ್ಯ ಅವರಿಗೆ ಪಿ ಎಚ್ ಡಿ ಪದವಿ
-
ದಿನದ ಸುದ್ದಿ6 days ago
ನಾಲ್ಕನೇ ಮದುವೆಗೆ ಸಜ್ಜಾದ್ರು ನಟಿ ವನಿತಾ ವಿಜಯಕುಮಾರ್
-
ದಿನದ ಸುದ್ದಿ5 days ago
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ ಜನ್ಮದಿನ ; ದೇಶದೆಲ್ಲೆಡೆ ಸ್ಮರಣೆ
-
ದಿನದ ಸುದ್ದಿ6 days ago
ಈ ದಿನ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನ