ದಿನದ ಸುದ್ದಿ
ಸಾಮೂಹಿಕ ಅತ್ಯಚಾರಕ್ಕೆ ‘ದಲಿತ ಬಾಲಕಿ’ ಬಲಿ

ಬಾಬಸಾಹೇಬ ಅಂಬೇಡ್ಕರವರೆ ನೀವು ಬರೆದ ಸಂವಿಧಾನ ಯಥಾವತ್ತಾಗಿ ಜಾರಿಯಾಗಿದ್ದರೆ ಸಂವಿಧಾನ ಜಾರಿಯಾದ ಸಂವಿಧಾನ ದಿನಾಚರಣೆ (ಗಣರಾಜ್ಯೋತ್ಸವ) ಈ ದಿನದಂದು(24-01-2019 )ನನ್ನ ತಂಗಿ ಸಂಜನಾ ನಾಲ್ಕನೆ ಕ್ಲಾಸ್ ಹುಡುಗಿಗೆ ಸಾಮೂಹಿಕವಾಗಿ ಅತ್ಯಾಚಾರವಾಗಿ ಸಾಯುತ್ತಿರಲಿಲ್ಲವೇನೊ…? ಹೌದು ಸಂವಿಧಾನ ಜಾರಿಯಾಗಿ 60-70 ವರ್ಷ ವಾಯ್ತು ಎಂದು ಹೆಮ್ಮೆಯಿಂದ ಬೀಗುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ಬಸವನ ಬಾಗೆವಾಡಿ ತಾಲ್ಲೂಕಿನ ಲಿಂಗದಹಳ್ಳಿ ಸಾ;;ಹೊವಿನಹಿಪ್ಪರಗಿ ಗ್ರಾಮದಲ್ಲಿ ದಲಿತ ಜಾತಿಗೆ ಸೇರಿದ ಆ ಕುಟುಂಬದವರಿಗೆ ಒಬ್ಬ ಮಗಳಿದ್ದಾಳೆ ಆಕೆಯ ಹೆಸರು ಕು.ಸಂಜನಾ ಅಂತ.ಆಕೆ ನಾಲ್ಕನೆ ತರಗತಿ ಓದುತ್ತಿದ್ದು ಇಡೀ ಶಾಲೆಗೆ ಓದುವುದರಲ್ಲಿ ನಂಬರ್ ಒನ್ ಆಗಿದ್ದಳು ಕ್ರೀಡೆ ಹಾಗು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಅವಳನ್ನು ಯಾರು ಮೀರಿಸುತ್ತಿರಲಿಲ್ಲ.
ಅಂದು 24/01/2019 ರಂದು ಅವಳ ಬಾಳಲ್ಲ ನಡೆಯಬಾರದ ದುರಂತವೊದು ನಡೆಯಿತು. ಮನೆಯವರು ಕೂಲಿ ಮಾಡಲಿಕ್ಕೆ ಹೋದಾಗ ಆ ಬಾಲಕಿ ಒಬ್ಬಳೆ ಮನೆಯಲ್ಲುದ್ದು ಓದುತ್ತಿದ್ದಳು (ಪಾಪ ಆ ಮುಗ್ದ ಮಗು ಅದೆಷ್ಟು ಕನಸ್ಸಿಟ್ಟುಕೊಂಡಿತ್ತು ಯಾರು ಬಲ್ಲರು)ಆದರೆ ಈ ದೇಶದ ಜಾತಿ ಮನಸ್ಥಿತಿಯ ಮನುವಾದಿ ಸಂಸ್ಕೃತಿ ಯ ದಲಿತ (ಎಳೆ ಬಾಲಕಿ) ತುಂಬಾ ಕ್ರೌರ್ಯದಿಂದ ಚಿತ್ರಹಿಂಸೆಯಿಂದ ಸಾಮೂಹಿಕ ಅತ್ಯಚಾರ ಮಾಡಿರುವುದು ಭಾರತ ತಲೆತಗ್ಗಿಸುತಾಗಿದೆ.ಆಕೆಯ ಅತ್ಯಾಚಾರದ ವಿಷಯ ತಡವಾಗಿ ಬೆಳಕಿಗೆ ಬಂದರು ಪೋಲಿಸರಿಗೆ ದೂರು ಕೊಟ್ಟರು ಪೋಲಿಸರು ತಲೆ ಕೆಡಿಸಿಕೊಳ್ಳದೆ ಇರುವುದು ಅನುಮಾನವನ್ನು ಉಂಟು ಮಾಡುತ್ತದೆ.
ಯಾವೊದೊ ಸಣ್ಣಸಣ್ಣ ವಿಷಯವನ್ನು ದೊಡ್ಡದಾಗಿ ಬಿತ್ತರಿಸುವ ಮಾಧ್ಯಮಗಳು ಕಣ್ಮುಚ್ಚಿ ಕುಳಿತಿವೆ.. ಜಾತಿವಾದ ಹಾಗು ಗಂಡುಮಕ್ಕಳಿಲ್ಲದ ಆ ದೇವದಾಸಿ ಅನಿಷ್ಟ ಪದ್ದತಿಗೆ ಬಾಲಕಿ ಬಲಿಯಾಗಿದ್ದಾಳೆ. ಮಗಳು ಕ್ರೌರ್ಯಕಾಮದ ಅತ್ಯಾಚಾರದ ಕೂಪದಿಂದ ಸತ್ತಿದ್ದಾಳೆ. ಅದೇನೆ ಇರಲಿ ಸಂಜನಳ ಸಾವಿಗೆ ನ್ಯಾಯ ಸಿಗಬೇಕು.ಆದಷ್ಷು ಬೇಗ ಆಕ್ರೋರಿಗಳಿಗೆಗಲ್ಲುಶಿಕ್ಷೆಯಾಗಬೇಕು.ಇಲ್ಲವಾದರೆ ಸಂವಿಧಾನ ಸಮರ್ಪಣಾ ದಿನೋತ್ಸವಕ್ಕೆ ಯಾವುದೆ ಅರ್ಥ ಬರುವುದಿಲ್ಲ.ಬೇಟಿಬಚಾವೋ..ಬೇಟಿ ಬಡಾವೋಗಳಂತ ಸರ್ಕಾರದ ಯೋಜನೆಗಳು ಕೇವಲ ಶೋಕಿಸಿನ ಗೊಂಬೆಯಾಗುತ್ತವೆ.
– ಹುಚ್ಚಂಗಿ ಪ್ರಸಾದ್ ಸಂತೆಬೆನ್ನೂರು
ದಾವಣಗೆರೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
2 ಕೋಟಿ 20 ಲಕ್ಷ ಜನ, ಪಡಿತರ ಚೀಟಿಯ ಪ್ರಯೋಜನ ಪಡೆಯುತ್ತಿಲ್ಲ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಸುದ್ದಿದಿನಡೆಸ್ಕ್:ದೇಶಾದ್ಯಂತ 2 ಕೋಟಿ 20 ಲಕ್ಷ ಜನ, ಪಡಿತರ ಚೀಟಿಯ ಪ್ರಯೋಜನ ಪಡೆಯುತ್ತಿಲ್ಲ; ಅಂದಾಜು 34 ಲಕ್ಷ 60 ಸಾವಿರ ಚೀಟಿಗಳು ನಕಲಿ ಎಂಬ ಆರೋಪವಿದೆ.
ಅರ್ಹರನ್ನು ಪಡಿತರ ಚೀಟಿಗೆ ಸೇರಿಸಿ, ಅನರ್ಹರನ್ನು ಕೈಬಿಡುವಂತೆ, ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲಾಗಿದೆ ಎಂದು, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಪ್ರಲ್ಹಾದ ಜೋಶಿ, ಸ್ಪಷ್ಟಪಡಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ‘ಅಂತ್ಯೋದಯ ಅನ್ನ ಯೋಜನೆ’ ಅಡಿ, ಕಳೆದ 2000ದಿಂದ ಆರ್ಥಿಕವಾಗಿ ದುರ್ಬಲರು ಹಾಗೂ ವಿಶೇಷ ಚೇತನರಿಗೆ, ಅತಿ ಕಡಿಮೆ ಬೆಲೆಯಲ್ಲಿ, ತಿಂಗಳಿಗೆ 35 ಕಿಲೋ ಆಹಾರ ಧಾನ್ಯ ನೀಡಲಾಗುತ್ತಿದೆ. ಪ್ರತಿ ಕುಟುಂಬಗಳಿಗೆ 35 ಕಿಲೋ ಪಡಿತರ ವಿತರಿಸಲಾಗುತ್ತಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅನ್ನಭಾಗ್ಯ ಯೋಜನೆ | ನೇರ ನಗದು ವರ್ಗಾವಣೆ ಬದಲು ಅಕ್ಕಿ ವಿತರಣೆ

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಮುಖಾಂತರ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯ ಬದಲಾಗಿ ಫೆಬ್ರವರಿ-2025 ರ ಮಾಹೆಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ 05 ಕೆ.ಜಿ ಅಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲು ಸರ್ಕಾರ ಆದೇಶಿಸಿದೆ.
ಅದರಂತೆ ಫೆಬ್ರವರಿ-2025 ಮಾಹೆಯಲ್ಲಿ ವಿತರಿಸಬೇಕಾದ ಅಕ್ಕಿ ಪ್ರಮಾಣವನ್ನು ಸೇರಿ ಮಾರ್ಚ್-2025 ಮಾಹೆಯಲ್ಲಿ ವಿತರಿಸಲಾಗುವುದು. ಮಾರ್ಚ್ 1 ರಿಂದ ಮಾರ್ಚ್ 31 ರ ವರಗೆ ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಇ-ಕೆವೈಸಿ ಮಾಡುವ ಹಾಗೂ ಪಡಿತರ ವಿತರಣೆ ಕಾರ್ಯ ಜರುಗಲಿದ್ದು, ಪಡಿತರ ಚೀಟಿದಾರರು ಬಯೋ ನೀಡಿದ ತಕ್ಷಣವೇ ಪಡಿತರ ಪಡೆಯಬೇಕು.
ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರು ಯಾವುದೇ ಶುಲ್ಕ ನೀಡುವಂತಿಲ್ಲ. ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಿ ಕ್ರಮಕೈಗೊಳ್ಳಲಾಗುವುದು. ಅನಧಿಕೃತವಾಗಿ ಕಾಳಸಂತೆಯಲ್ಲಿ ಆಹಾರಧಾನ್ಯವನ್ನು ದಾಸ್ತಾನು/ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಕ್ರಮ ಕೈಗೊಳ್ಳಲಾಗುವುದು.
ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು ಇದ್ದಲ್ಲಿ ಸಹಾಯವಾಣಿ ಸಂಖ್ಯೆ 1967 ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಮನೆ ಬೋರ್ ವೆಲ್ ನೀರು ವಾಣಿಜ್ಯ ಉದ್ದೇಶಕ್ಕೆ ಬಳಕೆ ; ಕ್ರಮ ಕೈಗೊಳ್ಳಲು ಸರಸ್ವತಿ ಬಡಾವಣೆ ನಿವಾಸಿಗಳ ಆಗ್ರಹ

ಸುದ್ದಿದಿನ,ದಾವಣಗೆರೆ: ಅಂತರ್ಜಲ ಪ್ರಾಧಿಕಾರದ ನಿರಾಪೇಕ್ಷಣಾ ಪತ್ರವನ್ನು ಪಡೆಯದೆ ಮನೆಯ ಬೋರ್ ವೆಲ್ಲಿನಿಂದ ವಾಣಿಜ್ಯ ಉದ್ದೇಶಕ್ಕಾಗಿ ಸರತಿ ಸಾಲಿನಲ್ಲಿ ಸತತ ನಾಲ್ಕೈದು ವರ್ಷಗಳಿಂದ ಟ್ಯಾಂಕರ್ ಗಳ ಮೂಲಕ ದಿನಕ್ಕೆ 25 ರಿಂದ 50ಕ್ಕೂ ಹೆಚ್ಚು ಟ್ಯಾಂಕರ್ ನೀರನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದು, ಈ ಬಗ್ಗೆ ಜಿಲ್ಲಾ ಅಂರ್ತಜಲ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರಸ್ವತಿ ನಗರ ‘ಸಿ’ ಬ್ಲಾಕ್ನ ಎಲ್ಲಾ ನಿವಾಸಿಗಳು ಒತ್ತಾಯಿಸಿದ್ದಾರೆ.
ಸರಸ್ವತಿ ನಗರ ಬ್ಲಾಕ್ನ ನಿವಾಸಿ ತಮ್ಮ ಮನೆಯ ಬೋರ್ ವೆಲ್ ನಿಂದ ಒಂದೇ ಸಮನೆ ಸತತವಾಗಿ 4-5 ವರ್ಷಗಳಿಂದ ಸರತಿ ಸಾಲಿನಲ್ಲಿ ಟ್ಯಾಂಕರ್ಗಳ ಮೂಲಕ ದಿನಕ್ಕೆ 25 ರಿಂದ 50ಕ್ಕೂ ಹೆಚ್ಚು ಬಾರಿ ವಾಣಿಜ್ಯ ಉದ್ದೇಶಕ್ಕಾಗಿ ತಮ್ಮ ಪ್ರಾಧಿಕಾರದ ಅನುಮತಿ ಪಡೆಯದೆ ನೀರಿನ ಮಾರಾಟ ಮಾಡುತ್ತಿರುತ್ತಾರೆ. ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಬೋರ್ ವೆಲ್ ಗಳಲ್ಲಿ ಕಛೇರಿಯ ಹಿರಿಯ ಭೂ ವಿಜ್ಞಾನಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ಅದನ್ನು ಲೆಕ್ಕಿಸದೆ ದಿನೇದಿನೇ ಹೆಚ್ಚುಹೆಚ್ಚು, ಟ್ಯಾಂಕರ್ ನೀರನ್ನು ಮಾರಾಟ ಮಾಡುತ್ತಿದ್ದಾರೆ.
ಈ ಕುರಿತು ಕಾಲೋನಿಯ ನಿವಾಸಿಗಳು ಪಾಲಿಕೆ ಸದಸ್ಯ ಕೆ.ಎಂ.ವೀರೇಶ್ ಜತೆಗೂಡಿ ಚಂದ್ರಶೇಖರಪ್ಪ ಅವರಲ್ಲಿ ಹಲವು ಬಾರಿ ವಿನಂತಿಸಿದರೂ, ಲೆಕ್ಕಿಸದೆ ತಮ್ಮ ನೀರಿನ ಮಾರಾಟದ ಅರ್ಭಟವನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ಕಾಲೋನಿಯ ವಸತಿ ಪ್ರದೇಶದಿಂದ ಕೈಗಾರಿಕಾ ಪ್ರದೇಶವಾಗಿ ಮಾರ್ಪಟ್ಟಿದ್ದು, ಇಲ್ಲಿನ ಮಕ್ಕಳು ವೃದ್ಧರು ರಸ್ತೆಗಳಲ್ಲಿ ಓಡಾಡುವುದು ತುಂಬಾ ಕಷ್ಟವಾಗಿರುತ್ತದೆ, ಇದಲ್ಲದೇ ನಮ್ಮ ಕಾಲೋನಿಯ ಬೋರ್ ವೆಲ್ ಗಳಲ್ಲಿ ನೀರಿನ ಮಟ್ಟ ದಿನೇ-ದಿನೇ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಲಿದೆ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ದಾವಣಗೆರೆಯ ಬಹಳ ಕಾಲೋನಿಗಳಲ್ಲಿ ಮನೆ ಬೋರ್ ವೆಲ್ ಗಳಿಂದ ನೀರಿನ ಮಾರಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಆಯಾ ಕಾಲೋನಿಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಾಧಿಕಾರದ ಅನುಮತಿ ಪಡೆಯದೆ ವಾಣಿಜ್ಯ ಉದ್ದೇಶಕ್ಕಾಗಿ ನೀರು ಮಾರಾಟ ಮಾಡುತ್ತಿರುವ ಚಂದ್ರಶೇಖರಪ್ಪರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಬೇಕೆಂದು ಸರಸ್ವತಿ ನಗರ ‘ಸಿ’ ಬ್ಲಾಕಿನ ಎಲ್ಲಾ ನಿವಾಸಿಗಳು ಮನವಿ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days ago
ಸರ್ಕಾರಿ ವೈದ್ಯರು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಕಾರ್ಯ ನಿರ್ವಹಿಸುವುದು ಕಡ್ಡಾಯ:ಸಚಿವ ಶರಣಪ್ರಕಾಶ್ ಪಾಟೀಲ್
-
ದಿನದ ಸುದ್ದಿ3 days ago
ಸೌಜನ್ಯ ಸಾವು ; ನಾಡಿನಾದ್ಯಂತ ಜನಾಂದೋಲನ : ಹಿರಿಯ ಪತ್ರಕರ್ತ ಪುರಂದರ್ ಲೋಕಿಕೆರೆ
-
ದಿನದ ಸುದ್ದಿ5 days ago
ಮುಂದಿನ ನಾಯಕರಾಗಿ ತಯಾರಾಗಿ : ಪ್ರೊ ಇಗ್ನಿಸಿಯಸ್
-
ದಿನದ ಸುದ್ದಿ3 days ago
ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯೇ ಪೂರಕ : ಡಾ.ಬಾಬು
-
ದಿನದ ಸುದ್ದಿ1 day ago
ಮಾರ್ಚ್ 15 ರಂದು ಬೃಹತ್ ಉದ್ಯೋಗ ಮೇಳ ; ಸಂಜೆ ಬಿಐಇಟಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ಪ್ರಭ
-
ದಿನದ ಸುದ್ದಿ1 day ago
ದಾವಣಗೆರೆಯಲ್ಲಿ ಉದ್ಯೋಗ ಮೇಳ | ಬನ್ನಿ ಭಾಗವಹಿಸಿ, ಉದ್ಯೋಗ ಪಡೆಯಿರಿ
-
ದಿನದ ಸುದ್ದಿ1 day ago
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’
-
ದಿನದ ಸುದ್ದಿ1 day ago
ವಾಣಿಜ್ಯ ಮಳಿಗೆಗಳ ಹರಾಜು ದಿನಾಂಕ ಮುಂದೂಡಿಕೆ