ರಾಜಕೀಯ
“ನನ್ನ ರಾಜೀವ್ ನನಗೆ ಮರಳಿ ನೀಡಿ, ನಾನು ಹಿಂತಿರುಗಿ ಹೋಗುತ್ತೇನೆ” ಸೋನಿಯಾ ಗಾಂಧಿ ಮನಮಿಡಿವ ಪತ್ರ : ಮಿಸ್ ಮಾಡ್ದೆ ಓದಿ..!
- ಮೂಲ : ಸೋನಿಯಾ ಗಾಂಧಿ |ಅನುವಾದ : ರಾಮಚಂದ್ರ ಹುದುಗೂರು
” ನನ್ನ ರಾಜೀವ್ ನನಗೆ ಮರಳಿ ನೀಡಿ
ನಾನು ಹಿಂತಿರುಗಿ ಹೋಗುತ್ತೇನೆ
ನೀವು ಅವರನ್ನು ನನಗೆ ಹಿಂತಿರುಗಿಸದಿದ್ದರೆ ನಾನು ಇಲ್ಲಿಯೇ ಈ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತೇನೆ “
–ಸೋನಿಯಾ ಗಾಂಧಿ
ಏನಾಯಿತೆಂದು ನಿಮಗೆ ತಿಳಿದಿಲ್ಲ, ನಾನು ಹೇಗೆ ಭೇಟಿಮಾಡಿದೆ ಎಂದು ನಿಮಗೆ ತಿಳಿದಿಲ್ಲ. ಅವರ ಆ ಮುಗುಳ್ನಗೆ, ಎತ್ತರ ಅವರ ಆಕರ್ಷಣೆಯ ಕಣ್ಣುಗಳು, ಆ ವರ್ಚಸ್ಸು. ನಾನು ಅವರನ್ನು ಮೊದಲ ಬಾರಿಗೆ ನೋಡಿದಾಗ ನಾನು ಅವರನ್ನು ಎಷ್ಟು ಸಮಯ ನೋಡಿದೆ ಎಂದು ನನಗೆ ತಿಳಿಯಲಿಲ್ಲ.
ನಾನು ನನ್ನ ಸ್ನೇಹಿತನೊಬ್ಬನನ್ನು ಕೇಳಿದೆ ಅವರು ಯಾರು ಎಂದು. ಅವರು ಒಬ್ಬ ಭಾರತೀಯ, ಪಂಡಿತ್ ನೆಹರೂ ಅವರ ಕುಟುಂಬದ ಕುಡಿ ಎಂದಷ್ಟೇ ಉತ್ತರಿಸಿದನು.ನಾನು ನೋಡುತ್ತಲೇ ಇದ್ದೆ. ಮರುದಿನ ಊಟಕ್ಕೆ ಹೊರಟಾಗ ಅವರು ಕೂಡ ಅಲ್ಲಿದ್ದರು, ಆ ದಿನಗಳು ಎಷ್ಟು ಸಂತೋಷವಾಗಿತ್ತೆಂದರೆ ಅದು ಸ್ವರ್ಗವಾಗಿತ್ತು.
ನಾವು ನದಿಗಳ ಉದ್ದಕ್ಕೂ ಸವಾರಿ ಮಾಡುತ್ತಿದ್ದೆವು, ಕಾರಿನಲ್ಲಿ ಓಡುತ್ತಿದ್ದೆವು, ಕೈ ಕೈ ಹಿಡಿದು ಬೀದಿಗಳಲ್ಲಿ ನಡೆದಾಡುತ್ತಿದ್ದೆವು, ಇಬ್ಬರು ಸಿನಿಮಾಗಳನ್ನು ನೋಡುತ್ತಿದ್ದೆವು. ನಾವು ಒಬ್ಬರಿಗೊಬ್ಬರು ಪ್ರೀತಿಯನ್ನು ವ್ಯಕ್ತಪಡಿಸಿದ್ದು ನನಗೆ ನೆನಪಿಲ್ಲ, ಅದರ ಅಗತ್ಯವೂ ಇರಲಿಲ್ಲ, ಎಲ್ಲವೂ ಸಹಜವಾಗಿತ್ತು, ನಾವು ಇಬ್ಬರು ಒಬ್ಬರಿಗೊಬ್ಬರು ಹುಟ್ಟಿದ್ದೇವೆ ನಾವು ಒಟ್ಟಿಗೆ ಬದುಕುವ ಸಮಯ ಎಂದು ಆಗಲೇ ನಿರ್ಧರಿಸಿದೆವು.
ಇಂದಿರಾ ಗಾಂಧಿ ಆಗ ಪ್ರಧಾನಿಯಾಗಿದ್ದರು.
ಅವರು ಇಂಗ್ಲೆಂಡ್ ಬಂದಾಗ ರಾಜೀವ್ ಭಯ ದಿಂದಲೆ ನಾವು ಮದುವೆಯಾಗಲು ನಿಮ್ಮ ಅನುಮತಿ ಬೇಕೆಂದು ಇಂದಿರಾಜಿ ಗೆ ಕೇಳಿದ್ದರು ಇಂದಿರಾ ನಮ್ಮನ್ನು ಭಾರತಕ್ಕೆ ಬರಲು ಹೇಳಿದರು.
ಭಾರತದ ಯಾವುದೇ ಮೂಲೆಯಲ್ಲಿ ರಾಜೀವ್ ಅವರೊಂದಿಗೆ ಇರಲು ನನಗೆ ಧೈರ್ಯವಿದೆ. ಇಂದಿರಾ ಜಿ ಮದುವೆಗೆ ನೆಹರು ಜಿ ಉಡುಗೊರೆ ಕೊಟ್ಟಿದ್ದ ಆ ಗುಲಾಬಿ ಬಣ್ಣದ ಸೀರೆಯನ್ನು ನಾನು ಧರಿಸಿದ್ದೆ. ರಾಜೀವ್ ನಾನು ಒಂದಾದೆವು ನನ್ನ ಕನಸು ನನಸಾದ ಸಮಯ ಅದು,ನಾನು ಮತ್ತು ರಾಜೀವ್ ಒಟ್ಟಿಗೆ ಹೊಸ ಜೀವನವನ್ನು ಪ್ರಾರಂಭಿಸಿ ನಾನು ಇಲ್ಲಿಯೇ ನೆಲೆಸಿದೆ.
ದಿನಗಳು ಹೇಗೆ ಗತಿಸಿ ಹೋದವು ಎಂಬುದು ನನಗೆ ನೆನಪಿಲ್ಲ. ರಾಜೀವ್ ಸಹೋದರ ವಿಮಾನ ಅಪಘಾತದಲ್ಲಿ ಮೃತಪಟ್ಟಾಗ ಇಂದಿರಾ ಜಿ ಅವರಿಗೆ ರಾಜಕೀಯ ವಾರಸುದಾರರಾಗಿ ಬೆಂಬಲಕ್ಕೆ ನಿಂತೆವು. ರಾಜೀವ್ ರಾಜಕೀಯಕ್ಕೆ ಬರಲು ಪ್ರಾರಂಭಿಸಿದರು. ನನಗೆ ಅದು ಇಷ್ಟವಿಲ್ಲ, ಆದರೆ ನನ್ನ ಪ್ರಯತ್ನ ವಿಫಲ ವಾಯಿತು. ಭಾರತೀಯರಾದ ನೀವು ಹೆಂಡತಿಯ ಮಾತನ್ನು ತಾಯಿಯ ಮುಂದೆ ಕೇಳುವುದಿಲ್ಲ ಎಂಬ ಸತ್ಯ ಅರಿವಾಯಿತು. ಕುಟುಂಬಕ್ಕಾಗಿ ಸಮಯ ನೀಡದ
ಅವರು ರಾಜಕಾರಣಕ್ಕೆ ಬಂದರು, ಸಂಪೂರ್ಣ ವಾಗಿ ಅವರ ಸಮಯವನ್ನು ದೇಶ ಸೇವೆಗಾಗಿ ಕಾಯ್ದಿರಿಸಿದರು.
ಅವರು ದೇಶ ಸೇವೆಗಾಗಿ ಪರಿತಪಿಸುತ್ತದ್ದರು, ಬಡವ ಬಲ್ಲಿದರಿಗಾಗಿ ಸೇವೆ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತಿದ್ದೆ. ಸುಖ ಸಂತೋಷವಾಗಿದ್ದೇವೆ ಎಂದು ಕೊಳ್ಳುತ್ತಿದ್ದಾಗ ಅನಿರೀಕ್ಷಿತವಾಗಿ ಒಂದು ದಿನ ಮುಂಜಾನೆ ಇಂದಿರಾಜಿ ಮನೆಯಿಂದ ಹೊರಬಂದಾಗ ಗುಂಡಿನ ಸದ್ದು ಕೇಳಿತು, ಹೊರಗೆ ಬಂದು ನೋಡಿದೆ ಇಂದಿರಾಜಿಯ ದೇಹ ರಕ್ತ ಸಿಕ್ತವಾಗಿತ್ತು . ಇಂದಿರಾಜಿ ಜೊತೆ ನನ್ನ ಕೈಗಳು ರಕ್ತದಲ್ಲಿ ತೇವವಾಗಿದ್ದವು, ಅವರ ಜೊತೆಯಲ್ಲಿಯೇ ನಾನೂ ಸಹ ಆಸ್ಪತ್ರೆಗೆ ಹೊರಟೆ ಕೊನೆಗೆ
ನನ್ನ ಕೈ ಗಳಲ್ಲಿಯೇ ಅವರ ಆತ್ಮ ಜಾರಿ ಹೋಯಿತು. ನೀವು ಎಂದಾದರೂ ಸಾವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?
ರಾಜೀವ್ ಸಂಪೂರ್ಣವಾಗಿ ನಮ್ಮ (ಭಾರತ) ದೇಶಕ್ಕೆ ಸಮರ್ಪಿಸಿ ಕೊಂಡಿದ್ದರು. ನಾನು ಅವರೊಂದಿಗೆ ಪ್ರತಿ ಹಂತದಲ್ಲೂ ಸೇವಕಿಯಾಗಿದ್ದೆ. ಒಂದು ದಿನ ಅವರನ್ನೂ ಬಲಿಪಡೆದರು. ಇರಿತಕ್ಕೊಳಗಾದರು ಅದೃಷ್ಟವಶಾತ್ ಜೀವಹಾನಿಯಿಂದ ಪಾರಾದರು.ಮತ್ತೊಂದು ದಿನ ಅವರ ದೇಹ ಚೂರುಚೂರಾಯಿತು, ಆ ಚೂರಾದ ದೇಹವೂ ಮನೆಯ ಆವರಣಕ್ಕೆ ಬಂತು. ಅವರ ಮುಖವು ಬಟ್ಟೆಯಿಂದ ಮುಚ್ಚಲ್ಪಟ್ಟಿತ್ತು. ಹೊರ ಹೋಗುವಾಗ ನಗುತ್ತಿರುವ ಗುಲಾಬಿ ಹೂವಿನಂತಿದ್ದ ಮುಖ ಇನ್ನಿಲ್ಲದಾಗಿತ್ತು. ನನ್ನ ಮನೆಯಲ್ಲಿ ಒಬ್ಬರಲ್ಲ ಇಬ್ಬರು ಕುಟುಂಬ ಸದಸ್ಯರನ್ನು ಕಳೆದುಕೊಂಡೆ.
ಈ ದೇಶ ನನ್ನದು, ಈ ಪ್ರೀತಿಯನ್ನು ನನ್ನ ದೇಶದೊಂದಿಗೆ ಮಾತ್ರ ಹಂಚಿಕೊಳ್ಳ ಬಯಸಯತ್ತೇನೆ. ಕೊನೆಯ ಬಾರಿ ನಾನು ಅವರು ನೋಡಿದ ಮುಖವನ್ನು ಮರೆಯಲು ಬಯಸುತ್ತೇನೆ. ಆದರೆ ಮೊದಲು ನಾವು ಬೇಟಿಯಾದ ರೆಸ್ಟೋರೆಂಟ್, ಆ ಸಂಜೆ, ಆ ಮುಗುಳ್ನಗೆ ಮಾತ್ರ ನಾನು ನೆನಪಿಟ್ಟುಕೊಳ್ಳಲು ಬಯಸಿದ್ದೆ. ನಾನು ಈ ದೇಶದಲ್ಲಿ ರಾಜೀವ್ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ ರಾಜೀವ್ ಇಲ್ಲದೆ ಇನ್ನೂ ಹೆಚ್ಚು.
ಜವಾಬ್ದಾರಿಯನ್ನು ನಿರ್ವವಹಿಸಿದ್ದೇನೆ ಅಧಿಕಾರ ಇರುವವರೆಗೂ ಅವರ ಪರಂಪರೆಯನ್ನು ಮುರಿಯದಂತೆ ನಡೆದುಕೊಂಡು ಬಂದಿದ್ದೇನೆ.ಅದು ಈ ದೇಶದ ಸಮೃದ್ಧಿಯ ಅದ್ಭುತ ಕ್ಷಣಗಳನ್ನು ನನಗೆ ನೀಡಿದೆ. ನಾನು ಮನೆ ಮತ್ತು ಅವರ ಕುಟುಂಬವನ್ನು ಪರಿಪೂರ್ಣ ವಾಗಿ ನಿರ್ವಹಿಸಿದ್ದೇನೆ.ಪರಿಪೂರ್ಣ ಜೀವನವನ್ನು ನಡೆಸಿದ್ದೇನೆ. ನಾನು ನನ್ನ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದೇನೆ.ರಾಜೀವ್ ನೀಡಿದ ಭರವಸೆಗಳನ್ನೂ ನಾನು ಬಗೆಹರಿಸಿದ್ದೇನೆ.
ಸರ್ಕಾರಗಳು ಸುಂಟರಗಾಳಿ ಯಂತೆ ಬರುತ್ತವೆ ಹೋಗುತ್ತವೆ. ಈ ಸೋಲುಗಳು ಈಗ ನನಗೆ ವ್ಯತ್ಯಾಸವನ್ನುಂಟುಮಾಡುತ್ತವೆ ಎಂದು ನೀವು ಭಾವಿಸುತ್ತೀರಾ? ನೀವು ಮಾಡುವ ನಿಂದನೆಗಳು ಪರದೇಶಿ, ಬಾರ್ ಬಾಲೆ, ಜರ್ಸಿ ಹಸು, ವಿಧವೆ, ಕಳ್ಳಸಾಗಣೆದಾರಳು, ಪತ್ತೇದಾರಿ…ಇವು ನೀವು ನೀಡಿದ ಕೊಡುಗೆಗಳು. ನನ್ನ ಬಗ್ಗೆ ಒಂದು ಟಿವಿ ಮಾಧ್ಯಮ ಕೆಟ್ಟದಾಗಿ ಪ್ರಚಾರ ಮಾಡುತ್ತಿದೆ. ಅದು ಅನಿಯಂತ್ರಿತವಾಗಿ ತನ್ನ ಪ್ರವೃತ್ತಿಗಳೊಂದಿಗೆ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಪ್ರತಿನಿತ್ಯ ನಿಂದನೆ ಮಾಡುತ್ತಾರೆ.ಅವು ನನ್ನನ್ನು ಕಾಡುತ್ತಿವೆಯೇ? ಇಲ್ಲ ಆ ನಿಂದಕರ ಮೇಲೆ ನನಗೆ ಖಂಡಿತವಾಗಿಯೂ ದ್ವೇಷವಿಲ್ಲ ಅನುಕಂಪವಿದೆ.
ನೆನಪಿಡಿ ಕಣ್ಣು ಮುಂದೆಯೇ ಪ್ರೀತಿಪಾತ್ರರ ಶವವನ್ನು ನೋಡುವುದು ಎಷ್ಟು ದುಃಖಕರವಾದದ್ದು. ತುಂಬಾ ದುಃಖ ಅನುಭವಿಸಿದ ನಂತರ ನನ್ನ ಮನಸ್ಸು ಕಲ್ಲು ಬಂಡೆಯಾಯಿತು. ಆದರೂ ನೀವು ನನ್ನನ್ನು ದ್ವೇಷಿಸುತ್ತಿದ್ದೀರಿ. ನಾನು ಇಂದು ಹಿಂತಿರುಗಿ ಹೋಗುತ್ತೇನೆ ಆದರೆ ನನಗೆ ನನ್ನ ರಾಜೀವ್ ರನ್ನು ಹಿಂದಿರುಗಿಸಿ. ನೀವು ನನ್ನ ರಾಜೀವ್ ರನ್ನು ಹಿಂತಿರುಗಿಸದಿದ್ದರೆ ನೀವು ಶಾಂತಿಯುತವಾಗಿ ನನ್ನ ರಾಜೀವ್ ರ ಸುತ್ತಲಿರುವ ಮಣ್ಣಿನಲ್ಲಿ ಮಣ್ಣಾಗಲು ಬಿಡಿ.
(ಸೋನಿಯಾ ಗಾಂಧಿಯವರ ಪತ್ರದಿಂದ ಆಯ್ದ ಭಾಗ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ: ವಿವಿಐಎಸ್‌ನಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ
ಸುದ್ದಿದಿನ,ಬೆಂಗಳೂರು: ವಿಶ್ವ ವೆಂಕಟೇಶ್ವರ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ “ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ” ಎಂಬ ಆಶಯದೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಟ್ಟಾ ಬಾಲಾಜಿ ಬಾಬು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಅವರು, ದೇಶಭಕ್ತಿ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಪ್ರತಿಯೊಬ್ಬರೂ ತಮ್ಮ ಮೂಲಭೂತ ಕರ್ತವ್ಯಗಳನ್ನು ಅರಿತು, ತಮ್ಮ ಸಾಮರ್ಥ್ಯ, ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದರಲ್ಲಿ ಅಡಗಿದೆ ಎಂದು ಕರೆ ನೀಡಿದರು. ಪ್ರಾಮಾಣಿಕ ಪರಿಶ್ರಮ ಮತ್ತು ಜವಾಬ್ದಾರಿಯುತ ನಾಗರಿಕತ್ವವೇ ಬಲಿಷ್ಠ ಭಾರತದ ನಿರ್ಮಾಣಕ್ಕೆ ಅಡಿಪಾಯ ಎಂದರು.
ವಿದ್ಯಾರ್ಥಿಗಳ ಮನೋಜ್ಞ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಪ್ರದರ್ಶನಗಳು ಹಾಗೂ ಶಿಸ್ತುಬದ್ಧ ಮೆರವಣಿಗೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಕೊಡಿಪಾಳ್ಯ ಮತ್ತು ಕೆಂಗೇರಿಯಲ್ಲಿ 445 ಮೀಟರ್ ಇರುವ ವಿಶೇಷ ಧ್ವಜದೊಂದಿಗೆ ವಿದ್ಯಾರ್ಥಿಗಳ ಮೆರವಣಿಗೆ ಗಮನ ಸೆಳೆಯಿತು. ಶತಪ್ರತಿಶತ ಫಲಿತಾಂಶ ಸಾಧಿಸಿದ ಬೋಧಕ ಸಿಬ್ಬಂದಿಯನ್ನು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನೇರ ಪ್ರಸಾರವೂ ನಡೆಯಿತು. 2,500 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ವಿಶೇಷ ಮಧ್ಯಾಹ್ನದ ಊಟ ಮತ್ತು ಸಿಹಿತಿಂಡಿ ವ್ಯವಸ್ಥೆ ಮಾಡಲಾಗಿದ್ದು, ಒಗ್ಗಟ್ಟು ಮತ್ತು ದೇಶಪ್ರೇಮದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಈ ಸಂದರ್ಭದಲ್ಲಿ ವಿವಿಐಎಸ್ ನ ಅಕಾಡೆಮಿಕ್ ಅಡ್ವೈಸರ್ ಡಾ. ರಾಜೇಶ್ವರಿ ದತ್ತಾತ್ರಿ, ವಿವಿ ವಿದ್ಯಾಸಂಸ್ಥೆಯ ಡೀನ್ ಶ್ರೀ ಕಿಶೋರ್ ಕಟ್ಟ, ಪ್ರಾಂಶುಪಾಲೆ ಶ್ರೀಮತಿ ಲಕ್ಷ್ಮಿ ಟಿ.ಎನ್, ಕೆಪಿಸಿ ಪಿಯು ಕಾಲೇಜು ಪ್ರಾಂಶುಪಾಲರಾದ ಡಾ. ಐ. ಚೆನ್ನಾರೆಡ್ಡಿ, ಸಿಬಿಎಸ್‌ಇ ಪ್ರಾಂಶುಪಾಲರಾದ ಪ್ರೊ. ಪ್ರಹ್ಲಾದ, ಉಪಪ್ರಾಂಶುಪಾಲರಾದ ಶ್ರೀ ಮದನ್ ರಾಜ್, ಪ್ರಾಂಶುಪಾಲರಾದ ಡಾ. ಸುರೇಶ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ
ಸುದ್ದಿದಿನ,ಚಿತ್ರದುರ್ಗ : ಸ್ವಾತಂತ್ರ್ಯವೆಂದರೆ ಕೇವಲ ಹಕ್ಕುಗಳ ಅನುಭವವಲ್ಲ, ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಸಹ ಹೌದು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸದಾ ಸ್ಮರಿಸಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಪ್ರೇಮವನ್ನು ಬೆಳೆಸಿಕೊಂಡು ರಾಷ್ಟ್ರದ ಭವಿಷ್ಯದ ಉತ್ತಮ ನಾಗರಿಕರಾಗಬೇಕು ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷರಾದ ರೊ. ಯೋಗೀಶ್ ಸಹ್ಯಾದ್ರಿ ತಿಳಿಸಿದರು.
ನಗರದ ರೋಟರಿ ವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಬಳಿಕ ಮಾತನಾಡಿದ ಅವರು ಮಾತನಾಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿರುವುದು ಅನೇಕ ಮಹನೀಯರ ತ್ಯಾಗದ ಫಲ. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅಸಂಖ್ಯಾತ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಅರ್ಪಿಸಿದ್ದಾರೆ. ಅವರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಅವರು ಕಂಡ ಕನಸಿನ ಭಾರತವನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸದಾ ಸ್ಮರಿಸಿ, ಏಕತೆ, ಶಿಸ್ತು, ಶಿಕ್ಷಣ ಮತ್ತು ಸೇವೆಯ ಮೂಲಕ ಶ್ರೇಷ್ಠ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಅವರು ಕರೆ ನೀಡಿದರು. ಎಲ್ಲಾ ವಿದ್ಯಾರ್ಥಿಗಳು ದೇಶದ ಹೆಮ್ಮೆ ಮತ್ತು ಭವಿಷ್ಯದ ಆಶಾಕಿರಣಗಳಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ. PHF. PDG. ಮಧುಪ್ರಸಾದ್ ಕೆ. ಅವರು ವಹಿಸಿದ್ದರು. ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವುದು ಇಂದಿನ ಯುವಜನತೆಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ನಮಗೆ ಹಕ್ಕುಗಳನ್ನು ನೀಡಿದಂತೆ ಕರ್ತವ್ಯಗಳನ್ನೂ ನೀಡಿದೆ. ಸಂವಿಧಾನವನ್ನು ಗೌರವಿಸುವುದು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು, ಪರಿಸರವನ್ನು ಸಂರಕ್ಷಿಸುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ರೋಟರಿ ಟ್ರಸ್ಟ್ ನ ಖಜಾಂಚಿ ರೊ. ಸತ್ಯನಾರಾಯಣಾಚಾರ್,
ರೊ. ಜಿ.ಎ. ವಿಶ್ವನಾಥ್ ಬಾಬು, ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ಸದಸ್ಯರು, ಹಾಗೂ ರೊ. ಶಂಕರಪ್ಪ, ಆಡಳಿತಾಧಿಕಾರಿ, ರೋಟರಿ ವಿದ್ಯಾಲಯ, ಉಪಸ್ಥಿತರಿದ್ದು , ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ, ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ ಮಾಡಲು ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ರಾಷ್ಟ್ರದ ಅಭಿವೃದ್ಧಿಯ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಭಾಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ವಿದ್ಯಾರ್ಥಿಗಳ ಪೋಷಕರು ಕೂಡ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಉಮಾದೇವಿ ಹೆಚ್.ಎಂ. ಅವರು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಶಿಕ್ಷಕಿ ಜ್ಯೋತಿ ಆರ್. ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಹಿರಿಯ ಶಿಕ್ಷಕಿ ಗೌರಮ್ಮ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ರೋಟರಿ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ
ಸುದ್ದಿದಿನ,ದಾವಣಗೆರೆ: ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ, ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನವಿಲೇಹಾಳು ಗ್ರಾಮದಲ್ಲಿ ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ದೇಶದ ಏಕತೆ, ಸಾಮರಸ್ಯ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕುರಿತು ಸಂದೇಶ ನೀಡಲಾಯಿತು.
ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಜಾಫರ್ ಅವರು ಮಾತನಾಡಿ, ಸ್ವಾತಂತ್ರ್ಯವೆಂಬುದು ಕೇವಲ ಆಚರಣೆಗೆ ಸೀಮಿತವಾಗದೆ, ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ನ್ಯಾಯ ಹಾಗೂ ಅಭಿವೃದ್ಧಿಯ ಅವಕಾಶ ದೊರೆಯುವಂತಾಗಬೇಕು. ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳನ್ನು ಕೋರಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ
-
ದಿನದ ಸುದ್ದಿ1 day agoನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ
-
ದಿನದ ಸುದ್ದಿ1 day agoಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ
-
ದಿನದ ಸುದ್ದಿ12 hours agoಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ: ವಿವಿಐಎಸ್‌ನಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ




