Connect with us

ರಾಜಕೀಯ

ಹೊನ್ನಾಳಿಯಲ್ಲಿ ಗರಿಗೆದರಿದ ಕಿಟ್ ರಾಜಕೀಯ; ದಾವಣಗೆರೆಯಲ್ಲಿಂದು ಸಿದ್ಧವಾಗಿದೆ ಅಖಾಡ..!

Published

on

ಸುದ್ದಿದಿನ, ದಾವಣಗೆರೆ: ಇಡೀ ಜಗತ್ತು ಕೊರೋನಾ ಸಂಕಟದಿಂದ ನಲುಗುತ್ತಿದೆ. ಆದರೆ ಇತ್ತ ಹೊನ್ನಾಳಿಯಲ್ಲಿ ಮಾತ್ರ ಕಿಟ್ ರಾಜಕೀಯ ಗಾಳಿ ಮಾತ್ರ ಜೋರಾಗಿದೆ. ಬಡಜನರಿಗೆ ಆಹಾರದ ಕಿಟ್ ವಿತರಣೆ ಮಾಡುವ ವಿಚಾರದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಜಿ.ಶಾಂತನಗೌಡ ಅವರ ನಡುವೆ ಬಿಗ್ ಫೈಟ್ ಆರಂಭವಾಗಿದೆ.

ಹೌದು, ಆಹಾರದ ಕಿಟ್ ವಿಚಾರದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸುಳ್ಳು ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಜಿ.ಶಾಂತನಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಷ್ಟದಲ್ಲಿರುವ ಜನರಿಗೆ 15 ಸಾವಿರಕ್ಕೂ ಹೆಚ್ಚು ಆಹಾರ ಕಿಟ್ ವಿತರಣೆ ಮಾಡಿದ್ದೇನೆ ಎಂದು ರೇಣುಕಾಚಾರ್ಯ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಶಾಂತಗೌಡ ಅವರು ಅದರ ರಿಯಾಲಿಟಿ ಚೆಕ್ ಕೂಡ ನಡೆಸಿದ್ದಾರೆ. ಈ ಕುರಿತು ಉಭಯ ನಾಯಕರ ನಡುವೆ ಮೊಬೈಲ್ ಮೂಲಕ ಸಣ್ಣ ಟಾಕ್ ವಾರ್ ಕೂಡ ನಡೆದಿದ್ದು, ಪ್ರಕರಣ ಇಂದು ಪತ್ರಿಕಾಗೋಷ್ಠಿಗೆ ಶಿಫ್ಟ್ ಆಗಿದೆ. ಸದ್ಯ ವಿಚಾರ ಸೋಮವಾರ ಟಿವಿ ಮಾಧ್ಯಗಳಿಗೆ ಆಹಾರವಾಗಿತ್ತು.

ರೇಣು ಪ್ರಚಾರದ ಗಿಮಿಕ್

ಕರೋನಾ ಸಂದರ್ಭದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಪ್ರಚಾರದ ಗಿಮಿಕ್ ಆರಂಭಿಸಿದ್ದಾರೆ ಎಂಬ ಆರೋಪಗಳು ಸಣ್ಣದಾಗಿ ಕೇಳಿ ಬರುತ್ತಿವೆ. ಆದರೆ ರೇಣುಕಾರ್ಯ ಅವರು ಇದನ್ನು ಖಡಖಂಡಿತವಾಗಿ ತಳ್ಳಿ ಹಾಕಿದ್ದಾರೆ. ನಾನು ಪ್ರತಿ ಹಳ್ಳಿಗಳಿಗೂ ತೆರಳಿ ಸಂಕಷ್ಟದಲ್ಲಿರುವ ಜನರಿಗೆ ಜಾಗೃತಿ ಮೂಡಿಸುವ ಕೆಲ ಮಾಡುತ್ತಿದ್ದೇನೆ ಎಂದು ವಿವಿಧ ಸಂದರ್ಭಗಳಲ್ಲಿ ಹೇಳಿಕೊಂಡು ಬಂದಿದ್ದಾರೆ. ಸದ್ಯ ಈ ಕುರಿತ ಪರ ವಿರೋಧ ಚರ್ಚೆಗಳು ಮಾತ್ರ ಹೊನ್ನಾಳಿ ಕ್ಷೇತ್ರದಲ್ಲಿ ಹಸಿಯಾಗಿವೆ.

ವಾರ್ ಆರಂಭವಾಗಿದ್ದು ಹೇಗೆ ?

ಶಾಸಕ ಎಂ.ಪಿ.ರೇಣುಚಾರ್ಯ ಅವರು 15 ಸಾವಿರ ಆಹಾರದ ಕಿಟ್ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಸ್ವತಃ ರೇಣುಕಾಚಾರ್ಯ ಅವರಿಗೆ ಕರೆ ಮಾಡಿದ ಮಾಜಿ ಶಾಸಕ ಜಿ.ಶಾಂತನಗೌಡ ಅವರು ಈ ಕುರಿತು ಪ್ರಶ್ನೆ ಮಾಡಿದ್ದರು. ಆಗ ಆಹಾರದ ಕಿಟ್ ವಿತರಣೆ ಮಾಡಿರುವ ಕುರಿತು ನಾನು ಲೆಕ್ಕ ಕೊಡುವ ಬಲ್ಲೆ ಎಂಬರ್ಥದಲ್ಲಿ ರೇಣುಕಾಚಾರ್ಯ ಹೇಳಿದ್ದರು. ನಂತರ ಶಾಸಕ ಜಿ.ಶಾಂತನಗೌಡ ಅವರು ತಾಲೂಕು ಕಚೇರಿಗೆ ತೆರಳಿ ರೇಣುಕಾಚಾರ್ಯ ಅವರಿಗೆ ಮೊಬೈಲ್ ಕರೆ ಮಾಡಿ ಆಕ್ಷೇಪ ವ್ಯಕ್ತಪಪಡಿಸಿದ್ದಾರೆ. ನಂತರ ರೇಣುಕಾಚಾರ್ಯ ಕೂಡ ಶಾಂತನಗೌಡ ಅವರಿಗೆ ತಿರುಗೇಟು ನೀಡಿದ್ದಾರೆ. ಸದ್ಯ ಇಡೀ ಪ್ರಕರಣ ಇಂದಿನ ಪತ್ರಿಕಾಗೋಷ್ಠಿವರೆಗೆ ಬಂದು ನಿಂತಿದೆ. ದಾವಣಗೆರೆಯಲ್ಲಿ ಮಂಗಳವಾರ ಉಭಯ ನಾಯಕರು ಈ ವಿಚಾರವಾಗಿ ಪತ್ರಿಕಾಗೋಷ್ಠಿ ಕರೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಕಲಿ ವೈದ್ಯರ ಹಾವಳಿಗೆ ಬ್ರೇಕ್ ಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕರ್ನಾಟಕ ಖಾಸಗಿ ಹೋಮಿಯೋಪಥಿಕ್ ವೈದ್ಯಕೀಯ ಮಹಾ ವಿದ್ಯಾಲಯಗಳ ಆಡಳಿತ ಸಂಘದ ವತಿಯಿಂದ ಡಾ.ಬಿ. ಆರ್.ಅಂಬೇಡ್ಕರ್ ಭವನದಲ್ಲಿ ಹಮಿಕೊಂಡಿದ್ದ ವಿಶ್ವ ಹೋಮಿಯೋಪತಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ವೈದ್ಯಕೀಯ ಕೋರ್ಸ್ ಮುಗಿಸದೆ ಇರುವವರು ಎಲ್ಲೆಂದರಲ್ಲಿ ಕ್ಲಿನಿಕ್‌ಗಳನ್ನು ತೆರೆದು ಚಿಕಿತ್ಸೆ ನೀಡುತ್ತಾರೆ. ಈ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ದೂರುಗಳು ಬಂದಿವೆ ಎಂದು ಹೇಳಿದರು. ಗ್ರಾಮೀಣ ಭಾಗದ ಜನರ ಅಮಾಯಕತೆಯನ್ನು ಕೆಲವರು ದುರುಪಯೋಗಪಡಿಸಿಕೊಂಡು ನಕಲಿ ಚಿಕಿತ್ಸೆ ನೀಡುತ್ತಾರೆ. ಇನ್ನು ಮುಂದೆ ಇದಕ್ಕೆ ಶಾಶ್ವತವಾದ ಕಡಿವಾಣ ಬೀಳಲಿದೆ ಎಂದು ಹೇಳಿದರು. ಕೆಲವು ಸಂದರ್ಭಗಳಲ್ಲಿ ನಕಲಿ ವೈದ್ಯರುಗಳಿಂದ ಅಮಾಯಕರ ಪ್ರಾಣಕ್ಕೂ ಕುತ್ತು ಬಂದಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಒಡಿಶಾದ ಸಿಎಂ ಆಗಿ ಬಿಜೆಪಿ ಹಿರಿಯ ನಾಯಕ ಮೋಹನ್ ಚರಣ್ ಮಾಂಝಿ ಪ್ರಮಾಣ ವಚನ

Published

on

ಸುದ್ದಿದಿನಡೆಸ್ಕ್: ಬಿಜೆಪಿ ಹಿರಿಯ ನಾಯಕ ಮೋಹನ್ ಚರಣ್ ಮಾಂಝಿ, ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಭೂಪೇಂದರ್ ಯಾದವ್ ಅವರ ಉಪಸ್ಥಿತಿಯಲ್ಲಿ ಭುವನೇಶ್ವರದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ನಾಯಕನನ್ನು ಆಯ್ಕೆ ಮಾಡಲಾಯಿತು.

ಭುವನೇಶ್ವರದ ಜನತಾ ಮೈದಾನದಲ್ಲಿ ಇಂದು ನಡೆಯುವ ಸಮಾರಂಭದಲ್ಲಿ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಂಝಿ, ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಒಡಿಶಾ ರಾಜ್ಯಪಾಲರಾದ ರಘುಬರ್ ದಾಸ್ ಅವರು, ನೂತನ ಮುಖ್ಯಮಂತ್ರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. 147 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 78 ಸ್ಥಾನಗಳನ್ನು ಗೆದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಬಹುಮತ ಗಳಿಸಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದಲ್ಲಿ ಬಿಜು ಜನತಾ ದಳದ 24 ವರ್ಷಗಳ ಆಡಳಿತ ಈ ಮೂಲಕ ಕೊನೆಗೊಂಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆಂಧ್ರಪದೇಶದ ಸಿಎಂ ಆಗಿ ಎನ್.ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ

Published

on

ಸುದ್ದಿದಿನಡೆಸ್ಕ್: ಆಂಧ್ರಪದೇಶದ ಮುಖ್ಯಮಂತ್ರಿಯಾಗಿದ ಎನ್.ಚಂದ್ರಬಾಬು ನಾಯ್ಡು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ವಿಜಯವಾಡದಲ್ಲಿ ನಡೆದ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಶಾಸಕರಿದ್ದ ಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು, ಆಂಧ್ರಪ್ರದೇಶ ವಿಧಾನಸಭೆಗೆ ಎನ್‌ಡಿಎ ನಾಯಕರಾಗಿ ಚಂದ್ರಬಾಬು ಅವರ ಹೆಸರನ್ನು ಸೂಚಿಸಿದರು. ಇದಕ್ಕೆ ಎಲ್ಲ ಎನ್‌ಡಿಎ ಶಾಸಕರು ಬೆಂಬಲ ಸೂಚಿಸಿದರು.

175 ಸದಸ್ಯಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟವು 164 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ವಿಜಯ ದಾಖಲಿಸಿತು. ಈ ಪೈಕಿ ಟಿಡಿಪಿ 135, ಜನಸೇನಾ 21 ಮತ್ತು ಬಿಜೆಪಿ 8 ಸ್ಥಾನಗಳಲ್ಲಿ ಜಯಗಳಿಸಿದೆ.

ಇದೇ ವೇಳೆ ನಿನ್ನೆ ನಡೆದ ಜನಸೇನಾ ಪಕ್ಷದ ಶಾಸಕಾಂಗ ಸಭೆಯಲ್ಲಿ ಪಕ್ಷದ ಪವನ್ ಕಲ್ಯಾಣ್ ಅವರನ್ನು ಆಂಧ್ರಪ್ರದೇಶ ವಿಧಾನಸಭೆಯ ಸಭಾನಾಯಕರನ್ನಾಗಿ ಆಯ್ಕೆ ಮಾಡಲಾಯಿತು.

ಶಾಸಕ ಎನ್.ಮನೋಹರ್, ಸಭಾ ನಾಯಕನ ಸ್ಥಾನಕ್ಕೆ ಪವನ್ ಕಲ್ಯಾಣ್ ಅವರ ಹೆಸರನ್ನು ಸೂಚಿಸಿದರು. ಇದಕ್ಕೆ ಎಲ್ಲ ಶಾಸಕರು ಅವಿರೋಧವಾಗಿ ಬೆಂಬಲ ಸೂಚಿಸಿದರು. ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿ ಎಂಬುದು ಇಲ್ಲ. ಅಮರಾವತಿ ಏಕೈಕ ರಾಜಧಾನಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending