ರಾಜಕೀಯ
‘ಸೋನಿಯಾ ಗಾಂಧಿ’ ಮನುಜಪಥದ ಅಪ್ರತಿಮ ರಾಯಭಾರಿ..!

- ಗ್ಲಾಡ್ಸನ್ ಅಲ್ಮೇಡಾ
ಇಪ್ಪತ್ತು ವರುಷಗಳಿಂದ ಆಕೆಯ ಮೇಲೆ ಸತತವಾಗಿ ದಾಳಿ ಮಾಡಿದರೂ, ಆಕೆಯ ಚಾರಿತ್ರ್ಯವಧೆ ಮಾಡಿದರೂ, ಆಕೆಯ ಮಕ್ಕಳು, ಮೊಮ್ಮಕ್ಕಳನ್ನೂ ಬಿಡದೇ ಹೀಯಾಳಿಸಿದರೂ, ಇಲ್ಲಿನ ರಾಜಕೀಯ, ಇಲ್ಲಿನ ಪಕ್ಷಗಳು ಇದ್ಯಾವದರೊಂದಿಗೆ ಸಂಬಂಧನೇ ಇರದ ಆಕೆಯ ಹೆತ್ತವರನ್ನೂ ಬಿಡದೆ ನಿಂದಿಸಿದರೂ ಆ ತಾಯಿ ಒಮ್ಮೆಯೂ ತಿರುಗಿ ಉತ್ತರಿಸಿದ್ದಿಲ್ಲ.
ಅದೆಷ್ಟು ಆರೋಪಗಳು, ಅದೆಷ್ಟು ನಿಂದನೆಗಳು, ಅದೆಷ್ಟು ಕುಹಕಗಳು, ಅದೆಷ್ಟು ಕ್ರೌರ್ಯ. ಊಹುಂ! ಏನು ಮಾಡಿದರೂ ಆಕೆಯನ್ನು ಧೃತಿಗೆಡಿಸಲು ಆಗಿಲ್ಲ. ಎಂಥೆಂಥಾ ಫೊಟೋಶಾಪ್‍ಗಳು, ವಿಡಿಯೋಗಳು. ಆಕೆಯನ್ನು ಅರೆನಗ್ನಳನ್ನಾಗಿ ಚಿತ್ರಿಸಿ, ಯಾರ ಯಾರ ತೊಡೆಮೇಲಿ ಕುಳ್ಳಿರಿಸಿ, ಹಾಸಿಗೆ ಮೇಲೆ ಹೀಗೆ ಆಕೆಯ ಚಾರಿತ್ರ್ಯವಧೆಗೆ ಸಂಸ್ಕೃತಿ ರಕ್ಷಕರು, ದೇಶಭಕ್ತರೆನ್ನುವವರು ಇಳಿದಿರುವ ಆಳ ಇದೆಯಲ್ವಾ, ಅದು ತಮ್ಮ ಸಮಕಾಲೀನ ಮಾತ್ರವಲ್ಲ ಗತಕಾಲದಲ್ಲೂ ಯಾರೂ ಇಳಿದಿರಲಿಕ್ಕಿಲ್ಲ. ಆಕೆಯನ್ನು ಬಾರ್ ಡ್ಯಾನ್ಸರ್, ಅಪವಿತ್ರೆ, ಸೂಳೆ, ಕೀಪ್, ಜೆರ್ಸಿ ದನ, ಆಕೆಯ ಮಕ್ಕಳ ಹೈಬ್ರಿಡ್ ಕರುಗಳು ಎಂದೆಲ್ಲಾ ಜರಿದರು. ಅಬ್ಬಾ! ಎಂಥೆಂಥಾ ಬೈಗುಳಗಳು, ಎಂಥಾ ಅವಮಾನ. ಆದರೂ ಆ ತಾಯಿಯದ್ದು ಮಾತ್ರ ದಿವ್ಯ ನಿರ್ಲಕ್ಷ್ಯ.
ಇಂಥ ಅವಮಾನ, ನಿಂದನೆ, ಚಾರಿತ್ರ್ಯವಧೆ, ಹೀಯಾಳಿಕೆಯನ್ನೆದುರಿಸಿ, ತನ್ನನ್ನು ಹೀಯಾಳಿಸುತ್ತಿರುವವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಅವರ ಕಣ್ಣೆದುರಿನಲ್ಲೇ, ಅವರನ್ನೇ ಮಣಿಸಿ, ತನ್ನ ಪಕ್ಷವನ್ನು ಸತತ ಎರಡು ಬಾರಿ ಅಧಿಕಾರಕ್ಕೆ ತರಲು, ಸತತ ಇಪ್ಪತ್ತು ವರುಷಗಳ ಕಾಲ ಪಕ್ಷವನ್ನು ನಡೆಸಲು ಧೃಢ ನಿಶ್ಚಲ, ಅಟಲ ಮನೋಭಾವ, ಧೀಮಂತಿಕೆ ಹಾಗೂ ಎದೆಗಾರಿಕೆ ಬೇಕು.
ಆಕೆಯ ವಿದೇಶಿ ಮೂಲ, ಆಕೆಯ ಗಂಡನ ಕುಟುಂಬ ಇವೆಲ್ಲದಕ್ಕಿಂತ ಆಕೆಯನ್ನು ಮೂದಲಿಸುವವರಿಗೆ ಚುಚ್ಚುತ್ತಿರುವುದು ಆಕೆ ಮಹಿಳೆ ಎನ್ನುವ ಸತ್ಯ. ಯಾವುದೋ ದೇಶದಿಂದ, ಮದುವೆಯಾಗಿ ಈ ದೇಶಕ್ಕೆ ಬಂದು, ಈ ದೇಶದ ಭಾಷೆ, ಸಂಸ್ಕೃತಿ, ಉಡುಗೆ-ತೊಡುಗೆ, ಆಹಾರ, ಜನಜೀವನ ಎಲ್ಲವನ್ನೂ ಅಪ್ಪಿ, ತನ್ನ ಕಣ್ಣ ಮುಂದೆಯೇ ತನ್ನ ಮೈದುನ, ಅತ್ತೆ, ಗಂಡ ಎಲ್ಲರನ್ನೂ ಏಳೆಂಟು ವರುಷಗಳೊಳಗೆ ಭೀಕರವಾಗಿ ಕಳೆದುಕೊಂಡರೂ, ಒಮ್ಮೆಯೂ ವಿಚಲಿತರಾಗದೇ, ಒಮ್ಮೆಯೂ ತನ್ನ ಬೊಗಸೆ ಕಣ್ಣುಗಳಲ್ಲಿ ಹರಿದು ಬಂದ ಕಣ್ಣೀರಿನ ಒಂದೇ ಒಂದು ಹನಿ ಸಾರ್ವಜನಿಕರಿಗೆ ತೋರ್ಪಡಿಸದೇ, ತನ್ನವರೆಂದು ಯಾರೂ ಇಲ್ಲದಿದ್ದರೂ ತನ್ನ ಮಕ್ಕಳನ್ನು ಸಾಕಿ, ಸಲಹಿ, ಅವರಿಗೆ ವಿದ್ಯೆ, ಸಂಸ್ಕಾರ ಕೊಟ್ಟು ಬೆಳೆಸಿದ ಪರಿಯಿದೆಯಲ್ವಾ ಅದು ಅನನ್ಯ.
ತನ್ನ ಮೈದುನನ ದೇಹದ ಒಂಚೂರೂ ನೋಡಲು ಸಿಗಲಿಲ್ಲ ಆಕೆಗೆ, ಎಂಟೆದೆಯ ಅತ್ತೆಯ ಎದೆಯನ್ನೇ ಸೀಳಿದ ಗುಂಡುಗಳು ಆಕೆಯ ಕಣ್ಣೆದುರಲ್ಲೇ ಇದ್ದವು, ಕೊನೆಗೆ ತನ್ನ ಗಂಡನ ದೇಹ ಕೂಡಾ ಸಿಕ್ಕಿದ್ದು ಛಿದ್ರ ಛಿದ್ರವಾಗಿ. ಎಂಥಾ ಧೈರ್ಯವಂತರನ್ನೂ ಶಾಶ್ವತವಾಗಿ ಕಂಗೆಡಿಸಬಹುದಾದ ಘಟನೆಗಳಿವು.
ಆದರೆ ಆಕೆಯನ್ನಲ್ಲ. ತನ್ನ ಮನೆಯ ನಾಲ್ಕು ಗೋಡೆಗಳೊಳಗೆ ಆಕೆ ಅದೆಷ್ಟು ಬಾರಿ ಗಳಗಳನೇ ಅತ್ತಿದ್ದಾರೋ, ಅದೆಷ್ಟು ಬಾರಿ ತನ್ನೊಡಲ ಕುಡಿಗಳನ್ನು ಎದೆಗಪ್ಪಿ ಕಣ್ಣೀರಲ್ಲೇ ಮಿಂದಿದ್ದಾರೋ, ಅದೆಷ್ಟು ಬಾರಿ ಕನ್ನಡಿಯಲ್ಲಿ ತನ್ನನ್ನೇ ತಾನು ನೋಡುತ್ತಾ, ಕಣ್ಣುಗಳನ್ನು ತೇವ ಮಾಡಿಕೊಂಡಿದ್ದಾರೋ. ಆದರೆ ಹೊರಜಗತ್ತಿಗೆ ಆಕೆ ತನ್ನ ಯಾವುದೇ ನೋವನ್ನು, ಯಾವುದೇ ಅಂಜಿಕೆಯನ್ನು, ಯಾವುದೇ ಅಭದ್ರತೆಯನ್ನು ಎಂದೂ ತೋರ್ಪಡಿಸಿಲ್ಲ.
ಆಕೆಯದ್ದು ಅಸಾಧಾರಣ ವ್ಯಕ್ತಿತ್ವ, ಅತಿಮಾನುಷ ಸಹನೆ, ಅದ್ಭುತ ಜೀವನೋಲ್ಲಾಸ. ತನ್ನ ಪಾಲಿಗೆ ಬಂದದೆಲ್ಲವನ್ನೂ ಸಮಚಿತ್ತದಿಂದ ಒಪ್ಪಿ, ತನ್ನ ಗಂಡನ ಕೊಲೆಗಾರರನ್ನೇ ಕ್ಷಮಿಸಿ, ಎಂದೂ, ಯಾರನ್ನೂ ತೆಗಳದೇ, ಯಾರನ್ನೂ ನೋಯಿಸದೇ, ಸಾರ್ವಜನಿಕ ಜೀವನದಲ್ಲಿರುವ ನಾಯಕರು ಹೇಗಿರಬೇಕೆಂಬ ಅಲ್ಟಿಮೇಟ್ ಉದಾಹರಣೆಯನ್ನು ನಮ್ಮ ಮುಂದೆ ಇಟ್ಟಿರುವ ಈ ಶತಮಾನದ ಶ್ರೇಷ್ಟ ಮಹಿಳೆ ಆಕೆ.
ಆಕೆಯ ಜಾಗದಲ್ಲಿ ಇನ್ಯಾರಿದ್ದರೂ ಯಾವತ್ತೋ ಮಂಡಿಯೂರಿ ಬಿಡುತ್ತಿದ್ದಾರೇನೋ, ಯಾವತ್ತೋ ಸೋಲೊಪ್ಪಿ ಈ ದೇಶ, ಈ ಜನಗಳು, ಈ ಸಮಾಜದ ಸಹವಾಸವೇ ಬೇಡವೆಂದು ತನ್ನ ತವರು ಸೇರುತ್ತಿದ್ದರೇನೋ? ಮೈದುನನ ಅಂತ್ಯಸಂಸ್ಕಾರ, ಅತ್ತೆಯ ಅಂತ್ಯ ಸಂಸ್ಕಾರ ಹಾಗೂ ತನ್ನ ಗಂಡನ ಅಂತ್ಯಸಂಸ್ಕಾರದ ಸಮಯದಲ್ಲಿ ಆಕೆ ನಡೆದುಕೊಂಡಿರುವ ರೀತಿ ಕಣ್ಣಮುಂದೆ ಶಾಶ್ವತವಾಗಿ ಉಳಿಯಲಿದೆ. ಯಾಕೆಂದರೆ ಚಿನ್ನ ಶಬ್ದ ಮಾಡುವುದಿಲ್ಲ. ಶಬ್ದ ಮಾಡುವುದು ತಗಡು.
ತನ್ನನ್ನು ನಿಂದಿಸುತ್ತಿರುವವರನ್ನು, ಹೀಯಾಳಿಸುತ್ತಿರುವವರ ಬಗ್ಗೆ,ಅವಮಾನಿಸುತ್ತಿರುವವರ ಬಗ್ಗೆ ಆಕೆ ತಾಳಿರುವ ದಿವ್ಯ ನಿರ್ಲಕ್ಷ್ಯವೇ ಆಕೆಯ ವಿರೋಧಿಗಳ ಅವರನ್ನು ಧೃತಿಗೆಡಿಸಿದೆ, ಅವರ ಹುಚ್ಚಿನ, ಕ್ರೌರ್ಯದ ಸೀಮೆಗಳನ್ನು ದಾಟಿ ಅವರನ್ನು ಮೃಗಗಳನ್ನಾಗಿ ಮಾಡಿದೆ. ಏನೇನೂ ಮಾಡಿದರೂ ಆಕೆಯನ್ನು ವಿಚಲಿತರನ್ನಾಗಿಸಲು ಆಗದೇ, ಧೃತಿಗೆಡಿಸಲಾಗದೇ, ಅವರು ಹೊಡೆದ ಚೆಂಡು, ಹೊಡೆದ ವೇಗಕ್ಕಿಂತ ನೂರಿನ್ನೂರು ಪಟ್ಟು ಹೆಚ್ಚಿನ ವೇಗದಲ್ಲಿ ಹಿಂದೆ ಬಂದು ಅವರನ್ನೇ ನೆಲಕ್ಕಪ್ಪಳಿಸಿದೆ. Yet she is silent, she is resolute and she just keeps walking with her head held high.
ಆಕೆಯೇ ನಮ್ಮ ನಡುವಿನ ಕೌತುಕ ಹಾಗೂ ಅದ್ಬುತ ಸೋನೀಯಾ ಗಾಂಧಿ. ಆಕೆ ಕಾಂಗ್ರೇಸ್ ಅಲ್ಲ ಯಾವುದೇ ಪಕ್ಷದಲ್ಲಿದ್ದರೂ, ರಾಜಕೀಯದಲ್ಲಿಲ್ಲದಿದ್ದರೂ ನಾನು ಆಕೆಯ, ಆಕೆಯ ಗುಳಿಗೆನ್ನೆಯ, ನಿಷ್ಕಳಂಕ ಮುಗುಳ್ನಗೆಯ ಶಾಶ್ವತ ಫ್ಯಾನ್ ಆಗಿರುತ್ತಿದ್ದೆ ಯಾಕೆಂದರೆ ಆಕೆ ಬರೀ ಭಾರತೀಯಳಲ್ಲ, ಕೇವಲ ಮಹಿಳೆಯಲ್ಲ, ಬದಲಾಗಿ ಮನುಷತ್ವದ ಹಾಗೂ ಮನುಜಪಥದ ಅಲ್ಟಿಮೇಟ್ ಹಾಗೂ ಅಪ್ರತಿಮ ರಾಯಭಾರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದ ಶಾಸಕ ಕೆ.ಎಸ್.ಬಸವಂತಪ್ಪ

ಸುದ್ದಿದಿನ,ದಾವಣಗೆರೆ:2024ರ ಮಾರ್ಚ್ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಉಚಿತ ಲ್ಯಾಪ್‌ಟಾಪ್ ವಿತರಿಸಿದರು.
ಶಾಸಕ ನಿವಾಸದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದ ಶಾಸಕರು, ಇದೇ ಮಾ.21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಮಕ್ಕಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಎದುರಿಸುವ ಮೂಲಕ ಉತ್ತಮ ಅಂಕಗಳನ್ನು ಪಡೆಯುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ, ಇಸಿಒ ಗೋವಿಂದರಾಜ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2 ಕೋಟಿ 20 ಲಕ್ಷ ಜನ, ಪಡಿತರ ಚೀಟಿಯ ಪ್ರಯೋಜನ ಪಡೆಯುತ್ತಿಲ್ಲ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಸುದ್ದಿದಿನಡೆಸ್ಕ್:ದೇಶಾದ್ಯಂತ 2 ಕೋಟಿ 20 ಲಕ್ಷ ಜನ, ಪಡಿತರ ಚೀಟಿಯ ಪ್ರಯೋಜನ ಪಡೆಯುತ್ತಿಲ್ಲ; ಅಂದಾಜು 34 ಲಕ್ಷ 60 ಸಾವಿರ ಚೀಟಿಗಳು ನಕಲಿ ಎಂಬ ಆರೋಪವಿದೆ.
ಅರ್ಹರನ್ನು ಪಡಿತರ ಚೀಟಿಗೆ ಸೇರಿಸಿ, ಅನರ್ಹರನ್ನು ಕೈಬಿಡುವಂತೆ, ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲಾಗಿದೆ ಎಂದು, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಪ್ರಲ್ಹಾದ ಜೋಶಿ, ಸ್ಪಷ್ಟಪಡಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ‘ಅಂತ್ಯೋದಯ ಅನ್ನ ಯೋಜನೆ’ ಅಡಿ, ಕಳೆದ 2000ದಿಂದ ಆರ್ಥಿಕವಾಗಿ ದುರ್ಬಲರು ಹಾಗೂ ವಿಶೇಷ ಚೇತನರಿಗೆ, ಅತಿ ಕಡಿಮೆ ಬೆಲೆಯಲ್ಲಿ, ತಿಂಗಳಿಗೆ 35 ಕಿಲೋ ಆಹಾರ ಧಾನ್ಯ ನೀಡಲಾಗುತ್ತಿದೆ. ಪ್ರತಿ ಕುಟುಂಬಗಳಿಗೆ 35 ಕಿಲೋ ಪಡಿತರ ವಿತರಿಸಲಾಗುತ್ತಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅನ್ನಭಾಗ್ಯ ಯೋಜನೆ | ನೇರ ನಗದು ವರ್ಗಾವಣೆ ಬದಲು ಅಕ್ಕಿ ವಿತರಣೆ

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಮುಖಾಂತರ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯ ಬದಲಾಗಿ ಫೆಬ್ರವರಿ-2025 ರ ಮಾಹೆಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ 05 ಕೆ.ಜಿ ಅಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲು ಸರ್ಕಾರ ಆದೇಶಿಸಿದೆ.
ಅದರಂತೆ ಫೆಬ್ರವರಿ-2025 ಮಾಹೆಯಲ್ಲಿ ವಿತರಿಸಬೇಕಾದ ಅಕ್ಕಿ ಪ್ರಮಾಣವನ್ನು ಸೇರಿ ಮಾರ್ಚ್-2025 ಮಾಹೆಯಲ್ಲಿ ವಿತರಿಸಲಾಗುವುದು. ಮಾರ್ಚ್ 1 ರಿಂದ ಮಾರ್ಚ್ 31 ರ ವರಗೆ ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಇ-ಕೆವೈಸಿ ಮಾಡುವ ಹಾಗೂ ಪಡಿತರ ವಿತರಣೆ ಕಾರ್ಯ ಜರುಗಲಿದ್ದು, ಪಡಿತರ ಚೀಟಿದಾರರು ಬಯೋ ನೀಡಿದ ತಕ್ಷಣವೇ ಪಡಿತರ ಪಡೆಯಬೇಕು.
ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರು ಯಾವುದೇ ಶುಲ್ಕ ನೀಡುವಂತಿಲ್ಲ. ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಿ ಕ್ರಮಕೈಗೊಳ್ಳಲಾಗುವುದು. ಅನಧಿಕೃತವಾಗಿ ಕಾಳಸಂತೆಯಲ್ಲಿ ಆಹಾರಧಾನ್ಯವನ್ನು ದಾಸ್ತಾನು/ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಕ್ರಮ ಕೈಗೊಳ್ಳಲಾಗುವುದು.
ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು ಇದ್ದಲ್ಲಿ ಸಹಾಯವಾಣಿ ಸಂಖ್ಯೆ 1967 ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಮಾರ್ಚ್ 15 ರಂದು ಬೃಹತ್ ಉದ್ಯೋಗ ಮೇಳ ; ಸಂಜೆ ಬಿಐಇಟಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ಪ್ರಭ
-
ದಿನದ ಸುದ್ದಿ6 days ago
ಸರ್ಕಾರಿ ವೈದ್ಯರು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಕಾರ್ಯ ನಿರ್ವಹಿಸುವುದು ಕಡ್ಡಾಯ:ಸಚಿವ ಶರಣಪ್ರಕಾಶ್ ಪಾಟೀಲ್
-
ದಿನದ ಸುದ್ದಿ5 days ago
ಸೌಜನ್ಯ ಸಾವು ; ನಾಡಿನಾದ್ಯಂತ ಜನಾಂದೋಲನ : ಹಿರಿಯ ಪತ್ರಕರ್ತ ಪುರಂದರ್ ಲೋಕಿಕೆರೆ
-
ದಿನದ ಸುದ್ದಿ6 days ago
ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯೇ ಪೂರಕ : ಡಾ.ಬಾಬು
-
ದಿನದ ಸುದ್ದಿ4 days ago
ದಾವಣಗೆರೆಯಲ್ಲಿ ಉದ್ಯೋಗ ಮೇಳ | ಬನ್ನಿ ಭಾಗವಹಿಸಿ, ಉದ್ಯೋಗ ಪಡೆಯಿರಿ
-
ದಿನದ ಸುದ್ದಿ4 days ago
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’
-
ದಿನದ ಸುದ್ದಿ4 days ago
ದಾವಣಗೆರೆ | ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಶಿಕ್ಷಕರಿಂದ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ವಾಣಿಜ್ಯ ಮಳಿಗೆಗಳ ಹರಾಜು ದಿನಾಂಕ ಮುಂದೂಡಿಕೆ