Connect with us

ದಿನದ ಸುದ್ದಿ

ಕೊರೋನಾ ರೋಗ ನಿರೋಧಕ ಶಕ್ತಿವರ್ಧನೆ ತಂತ್ರಗಳು

Published

on

ಸುದ್ದಿದಿನ,ದಾವಣಗೆರೆ : ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ರೋಗನಿರೋಧಕ ಶಕ್ತಿವರ್ಧನೆ ಮತ್ತು ಸದೃಢ ಆರೋಗ್ಯಕ್ಕಾಗಿ ಆಯುರ್ವೇದ ಸಲಹಾ ಸೂಚಿಯಲ್ಲಿ ತಿಳಿಸಿರುವಂತೆ ಕೋವಿಡ್-19 ವೈರಸ್ ತಡೆಗಟ್ಟುವ ಹಂತ-ಎರಡು ತಂತ್ರವನ್ನು ಅನುಸರಿಸಲು ಸೂಚಿಸಲಾಗಿದೆ.

  • ಹಾಟ್ ಸ್ಪಾಟ್ ಮತ್ತು ಬಫರ್ ಝೋನ್ ವಲಯದಲ್ಲಿ ವಾಸಿಸುವ ಜನರು.
  • 60 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯವಂತ ವೃದ್ಧರು.
  • ಬೇರೆ ಖಾಯಿಲೆಗಳಿಂದ ಬಳಲುತ್ತಿರುವ 50 ವರ್ಷಕ್ಕಿಂತ ಮೇಲ್ಪಟ್ಟವರು.

ಆಗಾಗ್ಗೆ ಉಸಿರಾಟದ ಕಾಯಿಲೆಯ ಇತಿಹಾಸ ಹೊಂದಿರುವ ಯಾವುದೇ ವಯಸ್ಸಿನ ಜನರು, ಸುತ್ತುವರಿದ ಗಾಳಿ ಕಲುಷಿತ ಪ್ರದೇಶದಲ್ಲಿ ವಾಸಿಸುವ ಜನರು ಮತ್ತುಧೂಮಪಾನಿಗಳು (ಸಕ್ರಿಯ ಮತ್ತು ನಿಷ್ಕ್ರಿಯ) ಆರೋಗ್ಯ ಸೇವೆ ಕಾರ್ಯಕರ್ತರು ಈ ಮೇಲ್ಕಂಡ ವರ್ಗದವರು ಈ ಕೆಳಕಂಡ ಕಾರ್ಯತಂತ್ರಗಳನ್ನು ಅನುಸರಿಸಿ ರೋಗನಿರೋಧಕ ಶಕ್ತಿಯನ್ನು ವರ್ಧಿಸಿಕೊಂಡು ಸದೃಢ ಆರೋಗ್ಯವನ್ನು ಉತ್ತೇಜಿಸಿಕೊಳ್ಳಬಹುದಾಗಿರುತ್ತದೆ.

ನಿರೋಧಕ ಕಾರ್ಯತಂತ್ರ – 2ನೇ ಹಂತ
ಗುರಿ

  • ಉತ್ತಮ ಹಸಿವು, ಉತ್ತಮ ನಿದ್ರೆ, ಮಾನಸಿಕ ಶಾಂತಿಯನ್ನು ಕಾಪಾಡಲು ಮತ್ತು ಪೋಷಕಾಂಶವುಳ್ಳ ಆಹಾರವನ್ನು ಒದಗಿಸುವುದರ ಜೊತೆಗೆ ಅಲ್ಪ ಪ್ರಮಾಣದ ಔಷಧಿಯೊಂದಿಗೆ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುವುದು.
  • ಆರೋಗ್ಯವಂತ ವೃದ್ಧರು, ಬೇರೆ ಖಾಯಿಲೆಗಳಿಂದ ಬಳಲುತ್ತಿರುವ 50 ವರ್ಷಕ್ಕಿಂತ ಮೇಲ್ಪಟ್ಟವರು ಆರೋಗ್ಯ ಸೇವೆ ಕಾರ್ಯಕರ್ತರು, ಆಗಾಗ್ಗೆ ಉಸಿರಾಟದ ಕಾಯಿಲೆಯ ಇತಿಹಾಸ ಹೊಂದಿರುವ ಯಾವುದೇ ವಯಸ್ಸಿನ ಜನರು, ಸುತ್ತುವರಿದ ಗಾಳಿ ಕಲುಷಿತ ಪ್ರದೇಶದಲ್ಲಿ ವಾಸಿಸುವ ಜನರು ಮತ್ತು ಧೂಮಪಾನಿಗಳು(ಸಕ್ರಿಯ ಮತ್ತು ನಿಷ್ಕ್ರಿಯ), ಆಯುರ್ವೇದದಿಂದ ತಡೆಗಟ್ಟುವ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಸಿದ್ಧರಿರುವವರು.

ಕಾರ್ಯತಂತ್ರಗಳು

  1. ಬೇಗನೆ ಮಲಗುವುದು, ಬೇಗನೆ ಏಳುವುದು.
  2. ಹಲ್ಲುಜ್ಜಿದ ನಂತರ, 2 ಹನಿ ಅಣುತೈಲ ಅಥವಾ ಎಳ್ಳೆಣ್ಣೆಯನ್ನು ಮೂಗಿನ ಎರಡು ಹೊಳ್ಳೆಗಳಲ್ಲಿ ಹಾಕುವುದು (ಪ್ರತಿಮರ್ಷ ನಸ್ಯ)
  3. ತದನಂತರ 50 ಮಿಲೀ ತ್ರಿಫಲಾ ಕಷಾಯವನ್ನು (ನೆಲ್ಲಿಕಾಯಿ, ಅಳಲೆಕಾಯಿ, ತಾರೆಕಾಯಿ) 3-5 ನಿಮಿಷಗಳ ಕಾಲ ಮೌಖಿಕ ಕುಳಿಯಲ್ಲಿ (ಬಾಯಿಯಲ್ಲಿ) ಒಂದು ಚಿಟಿಕೆ ಟಂಕಣ ಭಸ್ಮ (ಶುದ್ಧೀಕರಿಸಿದ ಬೋರಕ್ಸ್) ದೊಂದಿಗೆ ಹಿಡಿದಿಟ್ಟುಕೊಳ್ಳುವುದು ಅಥವಾ 1 ಟೇಬಲ್ ಸ್ಪೂನ್ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು 3-5 ನಿಮಿಷಗಳ ಕಾಲ ಬಾಯಲ್ಲಿ ತಿರುಗಾಡಿಸಿ ಉಗಳಬೇಕು ನಂತರ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸುವುದು ಇದನ್ನು ದಿನಕ್ಕೆ ಎರಡು ಬಾರಿ ಮಾಡುವುದು.
  4. ಪುದೀನ ಎಲೆಗಳು ಹಾಗೂ ಅಜವಾಯನದೊಂದಿಗೆ ಕುದಿಸಿದ ನೀರಿನಿಂದ ಹಬೆ ತೆಗೆದುಕೊಳ್ಳುವುದು.
  5. ಮೂವತ್ತು ನಿಮಿಷಗಳ ಕಾಲ ದೇಹ ಸಡಿಲಗೊಳಿಸುವ ವ್ಯಾಯಾಮ, ಸೂರ್ಯ ನಮಸ್ಕಾರ (6 ಸುತ್ತು) ಯಾವುದಾದರೂ ನಾಲ್ಕು ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನ.
  6. 4 ತುಳಸಿ ಎಲೆಗಳು, ನಿಂಬೆರಸ, ಒಣ ದ್ರಾಕ್ಷಿಯೊಂದಿಗೆ ಈ ಕೆಳಗೆ ಹೇಳಿರುವ ಯಾವುದಾದರೊಂದು ಮೂಲಿಕೆಯನ್ನು ಅರ್ಧ ಗ್ರಾಂ ನಂತೆ ಸೇರಿಸಿ(ಪ್ರತಿದಿನ ಒಂದು ಮೂಲಿಕೆ) ಗಿಡಮೂಲಿಕೆ ಚಹಾವನ್ನು ತಯಾರಿಸಿ ದಿನಕ್ಕೆ ಒಂದರಿಂದ ಎರಡು ಭಾರಿ ಸೇವಿಸುವುದು.
    1) ದಾಲ್ಚಿನಿ
    2) ಕರಿಮೆಣಸು
    3) ಶುಂಠಿ
  7. ಅರಿಶಿನ, ಜೀರಿಗೆ, ಕೊತ್ತಂಬರಿ ಹಾಗೂ ಬೆಳ್ಳುಳ್ಳಿಯನ್ನು ದಿನನಿತ್ಯದ ಅಡಿಗೆಯಲ್ಲಿ ಉಪಯೋಗಿಸುವುದು.
  8. ಒಂದು ಲೀಟರ್ ಕುದಿಯುವ ನೀರಿಗೆ 8 ತುಳಸಿ ಎಲೆಗಳು ಅಥವಾ ಶುಂಠಿ, ಲಾವಂಚ ಸೇರಿಸಿ 2-3 ನಿಮಿಷಗಳ ಕಾಲ ಮತ್ತೆ ಕುದಿಸಿ ಸೋಸಿ ಕುಡಿಯುವುದು.
  9. ಪ್ರತಿದಿನ ಸಂಜೆ 10 ಗ್ರಾಂ ಅಮೃತಬಳ್ಳಿ ಕಾಂಡ ಅಥವಾ ಷಡಂಗ ಪಾನೀಯ ಕಷಾಯ ಚೂರ್ಣವನ್ನು 640 ಮಿ.ಲೀ. ನೀರಿಗೆ ಸೇರಿಸಿ 320 ಮಿ.ಲೀ. ಆಗುವವರೆಗು ಕುದಿಸಿ ಸೋಸಿ ತಯಾರಿಸಿದ ಅಮೃತಬಳ್ಳಿ ಪಾನೀಯ ಅಥವಾ ಷಡಂಗ ಪಾನೀಯವನ್ನು ಕುಡಿಯುವುದು.
  10. ಸಂಶಮನಿವಟಿ, 2 ಮಾತ್ರೆಗಳು, ದಿನಕ್ಕೆ ಎರಡು ಬಾರಿ, ಊಟದ ನಂತರ, 15 ದಿವಸಗಳ ಕಾಲ.
  11. 2 ಟೀ ಚಮಚ ಅಗಸ್ತ್ಯ ರಸಾಯನವನ್ನು ಬಿಸಿ ನೀರಿನೊಂದಿಗೆ ಸೇವಿಸುವುದು.
  12. ಒಂದು ಲೋಟ ಕುದಿಯುವ ಹಾಲಿಗೆ 1/3 ಟೀ ಚಮಚ ಅರಿಶಿನ ಪುಡಿ, 1/3 ಟೀ ಚಮಚ ಅಶ್ವಗಂಧ ಚೂರ್ಣವನ್ನು ಸೇರಿಸಿ, ನಂತರ ಹಾಲನ್ನು 2 ನಿಮಿಷ ಕುದಿಸಿ, ಸೋಸಿ ತಯಾರಿಸಿದ ಗೋಲ್ಡನ್ ಮಿಲ್ಕ್‍ನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಸೇವಿಸುವುದು.

ನಿಗದಿಪಡಿಸಿದ ಸಮಯ ವೈದ್ಯರ ಹೆಸರು ಮತ್ತು ತಜ್ಞತೆ ಮೊಬೈಲ್ ಸಂಖ್ಯೆ,ಆಯುರ್ವೇದ ವೈದ್ಯಾಧಿಕಾರಿಗಳು

  • ಬೆಳಗ್ಗೆ 08:00 ರಿಂದ ಮಧ್ಯಾಹ್ನ 12:00
  1. ಡಾ|| ಶಾಂತ ಮೂರ್ತಿ.ಎ. ಬಿ.ಎ.ಎಂ.ಎಸ್. 9448346798
  2. ಡಾ|| ಮಲ್ಲಿಕಾರ್ಜುನ.ಬಿ.ಎಸ್. ಬಿ.ಎ.ಎಂ.ಎಸ್. 9448415175
  3. ಡಾ|| ಕಿಶೋರಿ.ಕೆ.ಎಸ್. ಬಿ.ಎ.ಎಂ.ಎಸ್. 8197719498
  4. ಡಾ|| ಅನುರಾಧ.ಎಸ್.ಎಸ್. ಬಿ.ಎ.ಎಂ.ಎಸ್. 9986743079
  5. ಡಾ|| ಸಯ್ಯುದ್ ಶಂಷುದ್ದೀನ್. ಬಿ.ಎ.ಎಂ.ಎಸ್. 9448567574
  6. ಡಾ|| ಸುಧಾ.ಹೆಚ್.ಎಂ. ಬಿ.ಎ.ಎಂ.ಎಸ್., ಎಂ.ಎಸ್. (ಶಲ್ಯತಂತ್ರ). 9880132397
  7. ಡಾ|| ಸಿದ್ದೇಶ್.ಈ.ಬಿಸನಳ್ಳಿ. ಬಿ.ಎ.ಎಂ.ಎಸ್. 9663666426
  • ಮಧ್ಯಾಹ್ನ 12:00 ರಿಂದ ಸಂಜೆ 04:00
  1. ಡಾ|| ರೇವ್ಯಾ ನಾಯ್ಕ.ಟಿ. ಬಿ.ಎ.ಎಂ.ಎಸ್. 9886145132
  2. ಡಾ|| ಸುಚಿತ್ರಾ.ಎಸ್.ಎಸ್. ಬಿ.ಎ.ಎಂ.ಎಸ್., ಎಂ.ಡಿ. (ಕಾಯಚಿಕಿತ್ಸ). 9844428797
  3. ಡಾ|| ಸುರೇಶ್.ಎಂ.ಸಿ. ಬಿ.ಎ.ಎಂ.ಎಸ್. 9448423933
  4. ಡಾ|| ಸದಾಶಿವ.ಕೆ. ಬಿ.ಎ.ಎಂ.ಎಸ್. 9902183131
  5. ಡಾ|| ಶಾಲಿನಿ.ಡಿ. ಬಿ.ಎ.ಎಂ.ಎಸ್. 8762294359
  6. ಡಾ|| ದ್ಯಾವನ್ ಗೌಡ.ಬಿ.ಹೆಚ್. ಬಿ.ಎ.ಎಂ.ಎಸ್. 9448534506
  • ಸಂಜೆ 04:00 ರಿಂದ ರಾತ್ರಿ 08:00
  1. ಡಾ|| ಚಂದ್ರಕಾಂತ್.ಎಸ್.ನಾಗಸಮುದ್ರ. ಬಿ.ಎ.ಎಂ.ಎಸ್. 9449361108
  2. ಡಾ|| ಪ್ರೀತಿ.ಡಿ.ಎಸ್. ಬಿ.ಎ.ಎಂ.ಎಸ್. 9731155440
  3. ಡಾ|| ಲಿಂಗರಾಜೇಂದ್ರ.ಎನ್.ಕೆ. ಬಿ.ಎ.ಎಂ.ಎಸ್. 9448414906
  4. ಡಾ|| ಶಿಲ್ಪ.ಎಸ್.ಟಿ. ಬಿ.ಎ.ಎಂ.ಎಸ್. 9986081977

ಹೆಚ್ಚಿನ ಮಾಹಿತಿಗಾಗಿ ಈ ಮೇಲ್ಕಂಡ ಆಯುರ್ವೇದ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರ್‌ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಸರಾ,ದೀಪಾವಳಿ ಹಬ್ಬ ; ಹಣ ವಸೂಲಿಗೆ ಇಳಿದ ಖಾಕಿ ಪಡೆ

Published

on

  • ವಿಶೇಷ ವರದಿ : ಗಿರೀಶ್ ಕುಮಾರ್ ಗೌಡ, ಬಳ್ಳಾರಿ

5, 10 ಸಾವಿರ ರೂಪಾಯಿ ಪ್ರತಿ ಅಂಗಡಿ, ಲಾಡ್ಜ್, ಹೋಟೆಲ್ ಗಳಿಂದ ಹಣ ವಸೂಲಿಗೆ ಇಳಿದ ಖಾಕಿ ಪಡೆ.

ಸುದ್ದಿದಿನಡೆಸ್ಕ್:ದೇಶ ಹಾಗೂ ರಾಜ್ಯ ರಕ್ಷಣೆಗೆ ಪೋಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಾತ್ರ ಮುಖ್ಯವಾಗಿದೆ. ಆದರೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಹಾಗೂ ಇನ್ನಿತರ ತಾಲೂಕುಗಳಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಐದಾರು ಪೊಲೀಸ್ ಸಿಬ್ಬಂದಿಗಳು ಸೇರಿ ದುಡ್ಡಿನ ಮಾಮೂಲು ಎತ್ತುವ ಕಾರ್ಯಕ್ಕೆ ಮುಂದಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿವಿಧ ಪೋಲೀಸ್ ಠಾಣೆಯ ಕೆಲ ಸಿಬ್ಬಂದಿಗಳು ಸಾರ್ವಜನಿಕರ ಅಂಗಡಿ, ಹೋಟೆಲ್, ಲಾಡ್ಜ್, ಬಾರ್ ಹಾಗೂ ರೆಸ್ಟೋರೆಂಟ್, ಸಂಘ ಸಂಸ್ಥೆಗಳು ಅಧ್ಯಕ್ಷರ ಬಳಿ ಹಾಗೂ ಇನ್ನಿತರ ವ್ಯಾಪಾರ ಮಾಡುವವರ ಹತ್ತಿರ ಹಾಗೂ ಅವರ ಮಾಲೀಕರ ಬಳಿ ಹೋಗಿ ನಾವು ಪೋಲಿಸರು ದಸರ ಮತ್ತು ದೀಪಾವಳಿ ಹಬ್ಬಕ್ಕೆ ಮಾಮೂಲಿ ಕೊಡಿ ಎಂದು ದೌರ್ಜನ್ಯ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ಪೋಲೀಸ್ ಇಲಾಖೆಗೆ ನಾಚಿಕೆಗೇಡಿನ ಸಂಗತಿಯಾಗಿದೆ.

ಇನ್ನು ಈ ವಿಚಾರವಾಗಿ ಪೋಲೀಸ್ ಠಾಣೆಯಲ್ಲಿ ಯಾವ ಸಿಬ್ಬಂದಿಗಳು ಹೆಚ್ಚಿನ ಹಣದ ಸವಾಲು ಹಾಕುತ್ತಾರೋ ಅವರು ಈ ನಗರದಲ್ಲಿ ಇವರ ಠಾಣೆಗೆ ಬರುವ ವ್ಯಾಪ್ತಿಯಲ್ಲಿ ಹಣವನ್ನು ದಬ್ಬಾಳಿಕೆ ಮತ್ತು ದೌರ್ಜನ್ಯ ಮಾಡಿ ಹಣವನ್ನು ಕೀಳುತ್ತಾರೆ. ಇದರಿಂದ ನಗರದಲ್ಲಿ ವ್ಯಾಪಾರ, ವ್ಯವಹಾರ ಮಾಡುವವರು ಮನನೊಂದಿದ್ದಾರೆ.

ಅನೇಕ ವರ್ಷಗಳಿಂದ ಈ ದಸರಾ ದೀಪಾವಳಿ ಮಾಮೂಲಿ ಹಣ ವಸೂಲಿ ಮಾಡುವ ಕಾರ್ಯ ಇರಲಿಲ್ಲ. ಮತ್ತೆ 2024 ರಲ್ಲಿ ವಿಜಯನಗರ ಜಿಲ್ಲೆಯ ವಿವಿಧ ತಾಲೂಕಿನ ಪೋಲೀಸ್ ಠಾಣೆಯ ಕೆಲ ಸಿಬ್ಬಂದಿಗಳು ಠಾಣೆಯ ಪರವಾಗಿ ಹಣ ವಸೂಲಿಗೆ ಇಳಿದಿದ್ದಾರೆ ಎಂದು ಖಾಸಗಿ ಸಂಘದ ಅಧ್ಯಕ್ಷರೊಬ್ಬರು ತಿಳಿಸಿದರು‌.

ಲಕ್ಷಗಟ್ಟಲೆ ಹಣವನ್ನು ಸಾರ್ವಜನಿಕರಿಂದ ಅಂಗಡಿ ಮಾಲೀಕರಿಂದ ಪಡೆದು ನಂತರ ಠಾಣೆಯಲ್ಲಿ ಇರುವ ಪೋಲೀಸ್ ಅಧಿಕಾರಿಗಳಿಗೆ, ಎಸ್.ಐ ಮತ್ತು ಎ.ಎಸ್.ಐ ಹಾಗೂ ಮುಖ್ಯಪೇದೆ, ಪೇದೆಗಳಿಗೆ ಹಣವನ್ನು ಭಾಗ ಮಾಡಿ ಹಂಚಿಕೊಳ್ಳುತ್ತಾರೆ. ಸವಾಲು ಯಾರು ಮಾಡಿರುತ್ತಾರೋ ಅವರಿಗೆ ಲಕ್ಷಗಟ್ಟಲೆ ಹಣ ಬರುತ್ತದೆ. ಇವರುಗಳು ಬಹಳ ವರ್ಷಗಳಿಂದ ಇದ್ದ ಠಾಣೆಯಲ್ಲಿ ಉಳಿದುಕೊಂಡಿದ್ದಾರೆ.

ಇನ್ನು ನಗರದ ಶಾನ್ ಭೋಗ ಹೋಟೆಲ್ ಪಕ್ಕದಲ್ಲಿ ಇರುವ ರಸ್ತೆಯಲ್ಲಿ ನಿಂತುಕೊಂಡು ಐವರು ಪೊಲೀಸರು ಸಿವಿಲ್ ಡ್ರಸ್ ನಲ್ಲಿ ಇಳಿದು ಹಣ ವಸೂಲಿ ಮಾಡುತ್ತಿರುವ ದುರ್ಘಟನೆ ನಡೆದಿದೆ.


  • ಈ ವಿಷಯದ ಬಗ್ಗೆ ಏನಾದ್ರೂ ಆಧಾರಗಳು ಇದ್ದರೆ ಹೇಳಿ, ಸಿಸಿ ಕ್ಯಾಮರಗಳನ್ನು ಚೆಕ್ ಮಾಡಿಸುವೆ, ಈ ಕೂಡಲೇ ಡಿವೈಎಸ್ಪಿ ಅವರ ಬಳಿ ಮಾತನಾಡುತ್ತೇನೆ ಎಂದರು.

| ಹರಿಬಾಬು – ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ
ವಿಜಯನಗರ ಜಿಲ್ಲೆ


ಸವಾಲು ಹಾಕಿದ ಪೋಲೀಸ್ ಪೇದೆಗಳು ಒಂದು ಠಾಣೆಯಿಂದ ಐದಾರು ಸಿಬ್ಬಂದಿಗಳು ಸೇರಿ, ಅವರ ಠಾಣೆಯ ವ್ಯಾಪ್ತಿಗೆ ಬರುವ ಪ್ರತಿ ಅಂಗಡಿ, ಹೋಟೆಲ್, ಲಾಡ್ಜ್, ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಹೋಗಿ ಬುಕ್ ಕೊಟ್ಟು ನಿಮ್ಮ ಹೆಸರು ಬರೆದು 5 ಸಾವಿರ, 10 ಸಾವಿರ ಹಣ ಕೊಡಿ ದಸರಾ-ದೀಪಾವಳಿ ಮಾಮೂಲು ಎಂದು ಹಣವನ್ನು ವಸೂಲಿ ಮಾಡುತ್ತಿದ್ದಾರೆ.

ಪ್ರತಿಯೊಂದು ಠಾಣೆಯ ಪಿ.ಎಸ್.ಐ ಹಾಗೂ ಡಿವೈಎಸ್ಪಿ ಅವರಿಗೂ ಇದರ ಬಗ್ಗೆ ಮಾಹಿತಿ ಇರುತ್ತದೆ ಆದರೆ ಸಿಬ್ಬಂದಿಗಳು ಮಾತ್ರ ಬಲಿಯಾಗುತ್ತಾರೆ ಎನ್ನುವ ಆರೋಪ ಸಹ ಇದೆ.

ವಿಜಯನಗರ ಜಿಲ್ಲೆಯ ಪ್ರತಿಯೊಂದು ಠಾಣೆಯಲ್ಲಿ ಐದಾರು ಸಿಬ್ಬಂದಿಗಳು ಈ ಮಾಮೂಲು ತರುವ ಕೆಲಸ ಮಾಡುತ್ತಾರೆ ಅವರಿಗೆ ಯಾವುದೇ ಡ್ಯೂಟಿ ಸಹ ಇರೋಲ್ಲ. ಇದರಲ್ಲಿ ಎಸ್.ಬಿ, ಕ್ರೈಮ್ ಸಿಬ್ಬಂದಿಗಳು ಇರುತ್ತಾರೆ. ಅದೇ ಊರಿನ ಸಿಬ್ಬಂದಿಗಳು ಬಹಳ ವರ್ಷಗಳಿಂದ ಇದೇ ಕೆಲಸ ಮಾಡುತ್ತಾರೆ ಎನ್ನುವ ದೊಡ್ಡ ಆರೋಪ ಸಹ ಇದೆ.

ಈ ‘ಮಾಮೂಲು’ ವಿರುದ್ಧ ವಿಜಯನಗರ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಹರಿಬಾಬು ಅವರು ಕ್ರಮತೆಗೆದು ಕೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

Published

on

ಸುದ್ದಿದಿನ,ದಾವಣಗೆರೆ : ಕಳದೆ 15 ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತ ದೇಹ ಅಸ್ಥಿಪಂಜರದ ರೂಪದಲ್ಲಿ ಪೊದೆಯೊಂದರಲ್ಲಿ ಪತ್ತೆಯಾದ ಘಟನೆ ದಾವಣಗೆರೆ ತಾಲೂಕಿನ ಅಣಜಿ ಕೆರೆ ಏರಿಯ ಬಳಿ ನಡೆದಿದೆ.

ದಾವಣಗೆರೆ ತಾಲೂಕಿನ ಕಡ್ಲೇಬಾಳು ಗ್ರಾಮದ ತಿಪ್ಪೇಶ್ ಎಂಬಾತ ಕಳೆದ 15 ದಿನಗಳ ಹಿಂದೆ ಕಾಣೆಯಾಗಿದ್ದು ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ನಾಪತ್ತೆಯಾಗಿದ್ದ ತಿಪ್ಪೇಶ್ ಮೃತ ಬೈಕ್ ಪಕ್ಕದಲ್ಲೇ ಪೊದೆಯೊಂದರಲ್ಲಿ ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಗಿದೆ. ಕುರಿ ಮೇಯಿಸಲು ಹೋಗಿದ್ದ ಕುರಿಗಾಯಿಗಳು ಪೊದೆಯೊಳೆಗೆ ಬೈಕ್ ಹಾಗೂ ಅಸ್ಥಿಪಂಜರ ಕಂಡಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಬೈಕ್ ನಂಬರ್ ಪರಿಶೀಲಿಸಿದಾಗ ಕಡ್ಲೇಬಾಳು ಗ್ರಾಮದಲ್ಲಿ ನಾಪತ್ತೆಯಾಗಿದ್ದ ತಿಪ್ಪೇಶ್ ಎಂದು ವಿಷಯ ತಿಳಿದಿದ್ದು ಕೂಡಲೇ ಗ್ರಾಮಸ್ಥರನ್ನ ಕರೆಯಿಸಿ ಪರಿಶೀಲನೆ ನಡೆಸಿದಾಗ ತಿಪ್ಪೇಶ್ ಮೃತ ಎಂದು ಗೊತ್ತಾಗಿದ್ದು, ಇದೀಗ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಗಳೂರು | ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಪತ್ನಿ ಕೊಂದ ಪತಿ

Published

on

ಕೊಲೆಯಾದ ಸತ್ಯಮ್ಮ

ಸುದ್ದಿದಿನ,ದಾವಣಗೆರೆ : ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಪತ್ನಿಯನ್ನ ಪತಿ ಕೊಲೆ ಮಾಡಿರುವ ಘಟನೆ ಜಗಳೂರು ತಾಲೂಕಿನ ಹೊಸಬುಳ್ಳಾಪುರ ಗ್ರಾಮದಲ್ಲಿ ನಡೆದಿದೆ.

ಸತ್ಯಮ್ಮ ಎಂಬಾಕೆ ಪತಿಯಿಂದ ಕೊಲೆಯಾಗಿದ್ದು, ತಾಲೂಕಿನ ಹೊಸಬುಳ್ಳಾಪುರ ಗ್ರಾಮದ ಆಕೆಯನ್ನ ಕಳೆದ 12 ವರ್ಷಗಳ ಹಿಂದೆ ಜಗಳೂರು ತಾಲೂಕಿನ ಉಜ್ಜಪ್ಪವಡೆಯರಹಳ್ಳಿಯ ಅಣ್ಣಪ್ಪ ಎಂಬಾಂತ ಪ್ರೇಮಿಸಿ ಮದುವೆಯಾಗಿದ್ದ. ಇವರಿಬ್ಬರ ಸುಖ ಸಂಸಾರಕ್ಕೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಕೂಡ ಇತ್ತು. ಗಾರೆ ಕೆಲಸಕ್ಕೆ ಹೋಗುತ್ತಿದ್ದ ಅಣ್ಣಪ್ಪ ಕುಡಿತದ ಚಟಕ್ಕೆ ದಾಸನಾಗಿದ್ದ.

ಕುಡಿದು ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಅಣ್ಣಪ್ಪ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಎರಡು ಬಾರಿ ರಾಜಿ ಸಂದಾನ ಕೂಡ ನಡೆದಿದ್ದು ಪೊಲೀಸರು ಹೊಂದಿ ಕೊಂಡು ಹೋಗುವಂತೆ ಬುದ್ದಿ ಹೇಳಿದ್ದರು. ಆದರೂ ಕುಡಿದು ಬಂದು ಹೆಂಡತಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಅಣ್ಣಪ್ಪ ನಿತ್ಯ ದುಡ್ಡಿಗಾಗಿ ಹೆಂಡತಿಯನ್ನ ಪೀಡಿಸುತ್ತಿದ್ದ. ಅದೇ ರೀತಿ ಗೃಹಲಕ್ಷ್ಮಿ ಹಣ ಕಳೆದ ವಾರವಷ್ಟೇ ಸತ್ಯಮ್ಮನ ಅಕೌಂಟ್ ಗೆ ಬಂದಿದೆ. ಅತಿಯಾದ ಮಳೆಯಿಂದ ಕೂಲಿ ಕೆಲಸ ಇಲ್ಲದೇ ಪರದಾಡುತ್ತಿದ್ದ ಅಣ್ಣಪ್ಪ ಪತ್ನಿ ಸತ್ಯಮ್ಮಳಿಗೆ ಗೃಹ ಲಕ್ಷ್ಮಿ ಹಣ ಬಿಡಿಸಿಕೊಡುವಂತೆ ಪೀಡಿಸುತ್ತಿದ್ದನಂತೆ.

ಅಣ್ಣಪ್ಪನ ಕಾಟ ತಾಳಲಾರದೆ ಸತ್ಯಮ್ಮ ಮಗನೊಂದಿಗೆ ಅಸಗೋಡು ಗ್ರಾಮದ ಕೆನರಾ ಬ್ಯಾಂಕ್ ಶಾಖೆಗೆ ಹಣ ಬಿಡಿಸಿಕೊಳ್ಳಲು ಬಂದಾಗ ಹಿಂಬಾಲಿಸಿದ ಅಣ್ಣಪ್ಪ ಬ್ಯಾಂಕ್ ನಲ್ಲೆ ಹಣ ಕೊಡು ಎಂದು ಹೆಂಡತಿಯೊಂದಿಗೆ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ಕೊನೆಗೆ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಬಳಿಕ ಉಜ್ಜಪ್ಪರವಡೇರಹಳ್ಳಿ ಸಮೀಪದ ಜಮೀನಿಗೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದು, ಕೊಲೆ ಮಾಡಿ ಮೈನ್ಸ್ ವಯರ್ ಕೆಳಗೆ ಬಿಸಾಕಿ ಹೋಗಿದ್ದಾನೆ. ಅಲ್ಲದೆ ಕರೆಂಟ್ ಹೊಡೆದು ಸತ್ತೋಗಿದ್ದಾಳೆ ಎಂದು ಕಥೆ ಕಟ್ಟಿದ್ದನಂತೆ.

ಇನ್ನು ಸತ್ಯಮ್ಮ ಸತ್ತಾಗಿನಿಂದ ಅಣ್ಣಪ್ಪ ಹಾಗೂ ಆತನ ಕುಟುಂಭಸ್ಥರು ತಲೆಮರೆಸಿಕೊಂಡಿದ್ದು. ಮೃತದೇಹವನ್ನು ಜಿಲ್ಲಾಸ್ಪತ್ರೆಯ ರವಾನೆ ಮಾಡಿದ್ದು, ಕೊಲೆ ಆರೋಪಿ ಅಣ್ಣಪ್ಪ ವಿರುದ್ದ ಸತ್ಯಮ್ಮ ಸಂಬಂಧಿಕರು ಅಕ್ರೋಶ ಹೊರ ಹಾಕಿದ್ದು, ಆತನಿಗೆ ತಕ್ಕ ಶಿಕ್ಷೇಯಾಗಲಿ ಎಂದು ಹಿಡಿ ಶಾಪ ಹಾಕಿದರು.
ಇದೀಗ ಅಣ್ಣಪ್ಪ ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending