Connect with us

ದಿನದ ಸುದ್ದಿ

‘ಗೂಗಲ್ ಪೇ’ಯಿಂದ ಬ್ಯಾಂಕ್ ಖಾತೆಯ ಹಣಕ್ಕೆ ಹಾಕಿದ್ರು ಕನ್ನ..!

Published

on

ಸುದ್ದಿದಿನ,ದಾವಣಗೆರೆ : ಸುಲಭದಾಯಕವಾಗಿ ಆನ್ ಲೈನ್ ಮುಖಾಂತರ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರೆ ಹುಷಾರಾಗಿರಿ. ಅಸುರಕ್ಷಿತ ಆನ್ ಲೈನ್ ವ್ಯವಹಾರದಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣಕ್ಕೆ ಅಪಾಯ ಬಂದೊದಗಲಿದೆ. ಅಸುರಕ್ಷಿತ ಆನ್ ಲೈನ್ ಆಪ್ ಗಳ ಬಗ್ಗೆ ಎಚ್ಚರವಿರಲಿ. ಇಲ್ಲವಾದರೆ ನಿಮ್ಮ ಬ್ಯಾಂಕ್ ಖಾತೆಯ ಹಣಕ್ಕೆ ಕನ್ನ ಬೀಳುವುದು ಖಚಿತ.

ಹೌದು, ಹೀಗೆ ಗೂಗಲ್ ಪೇ ಮುಖೇನ ತಮ್ಮ ಬ್ಯಾಂಕ್ ಖಾತೆಯಿಂದ ಪರಿಚಿತರ ಖಾತೆಗೆ ಹಣ ಕಳುಹಿಸಿದರೂ ಸಹ ಅದು ಜಮೆಯಾಗದೇ, ಆ ಕಂಪನಿಯ ಕಸ್ಟಮರ್ ಕೇರ್ ಗೆ ಕರೆ ಮಾಡಿದಾಗಲೂ ಸಹ ಖಾತೆಯಲ್ಲಿದ್ದ ಮತ್ತಷ್ಟು ಹಣ ಮಂಗಮಾಯವಾಗಿರುವ ಪ್ರತ್ಯೇಕ ಎರಡು ಪ್ರಕರಣಗಳು ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿವೆ.

ಮೋಸ ಹೋದ ತರಕಾರಿ ವ್ಯಾಪಾರಿ

ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿನ ತರಕಾರಿ ವ್ಯಾಪಾರಿ ಕೆ.ಪಿ. ಸುರೇಶ್ ಎಂಬಾತ ತನ್ನ ಸ್ನೇಹಿತನ ಖಾತೆಗೆ ಗೂಗಲ್ ಪೇ ಮುಖೇನ ಹಣ ಹಾಕಲು ಹೋಗಿ 75 ಸಾವಿರ ವಂಚನೆಗೊಳಗಾಗಿದ್ದಾರೆ.

ಇದೇ 15ರಂದು ತರಕಾರಿ ಮಾರುಕಟ್ಟೆಯಲ್ಲಿದ್ದಾಗ ತನ್ನ ಸ್ನೇಹಿತ ಅರುಣ್ ಬ್ಯಾಂಕ್ ಖಾತೆಗೆ ತರಕಾರಿ ವ್ಯಾಪಾರಕ್ಕೆ 35 ಸಾವಿರವನ್ನು ಸುರೇಶ್ ನು ಗೂಗಲ್ ಪೇ ಮೂಲಕ ತನ್ನ ಬ್ಯಾಂಕ್ ಖಾತೆಯಿಂದ ಕಳುಹಿಸಿದ್ದು, ಅದು ಸ್ನೇಹಿತ ಅರುಣ್ ಖಾತೆಗೆ ಜಮಾವಣೆಯೇ ಆಗಿಲ್ಲ. ಈ ಬಗ್ಗೆ ಸುರೇಶ್ ತಾನು ಖಾತೆ ಹೊಂದರುವ ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ಗೂಗಲ್ ಪೇ ಮುಖಾಂತರ ಹಣ ಸಂದಾಯ ಮಾಡಿದ್ದರಿಂದ ಬ್ಯಾಂಕ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಲಾಗಿದೆ.

ನಂತರ ಆತ ಗೂಗಲ್ ಪೇ ಕಸ್ಟಮರ್ ಕೇರ್ ಗೆ ಕರೆ ಮಾಡಿದಾಗ ಕರೆ ಸ್ವೀಕಾರವಾಗಿಲ್ಲ. ಸ್ವಲ್ಪ ಸಮಯದಲ್ಲಿ ಈತನ ಮೊಬೈಲ್ ನಂಬರ್ ಗೆ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿ ತಾನು ಗೂಗಲ್ ಪೇ ಕಸ್ಟಮರ್ ಕೇರ್ ನಿಂದ ಮಾತನಾಡುತ್ತಿರುವುದಾಗಿ ಪರಿಚಿತಗೊಂಡಾಗ ಸುರೇಶ್ ತನ್ನ ಖಾತೆಯಿಂದ ಹಣ ಕಡಿತವಾಗಿದ್ದು, ಮರುಪಾವತಿಗೆ ಕೇಳಿದಾಗ ಅಪರಿಚಿತನು ಹಣ ಮರುಪಾವತಿಸುವುದಾಗಿ ನೆಪ ಹೇಳಿ ಮೊಬೈಲ್ ನಲ್ಲಿರುವ ಗೂಗಲ್ ಪೇ ಓಪನ್ ಮಾಡಿಸಿ, ಖಾತೆಯಿಂದ ಕಡಿತವಾಗಿರುವ 35 ಸಾವಿರ ನಮೂದಿಸಲು ತಿಳಿಸಿ, ನಂತರ ಇದೇ ರೀತಿ ಮತ್ತೊಂದು ಬಾರಿ 35 ಸಾವಿರ ನಮೂದಿಸಲು ಹೇಳಿದ್ದು, ನಂತರ ಅದು ಸಕ್ಸಸ್ ಆಗದ ಕಾರಣ 5 ಸಾವಿರ ಮತ್ತೊಮ್ಮೆ ನಮೂದಿಸಲು ಹೇಳಿ, 24 ಗಂಟೆಯಲ್ಲಿ ನಿಮ್ಮ ಖಾತೆಗೆ ಹಣ ಜಮಾಯಾಗಲಿದೆ ಎಂದು ಅಪರಿಚಿತನು ನಂಬಿಸಿದ್ದಾನೆ.

ನಂತರ ಖಾತೆಗೆ ಹಣ ಮರುಪಾವತಿ ಆಗಿದ್ದಾಗ ತರಕಾರಿ ವ್ಯಾಪಾರಿ ತನ್ನ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿದಾಗ ಖಾತೆಯಿಂದ 40 ಸಾವಿರ ಕಡಿತವಾಗಿರುವ ಬಗ್ಗೆ ತಿಳಿದು ಬಂದಿದೆ. ಸ್ನೇಹಿತ ಅರುಣ ಖಾತೆಗೆ ಕಳುಹಿಸಿದರೂ ಜಮೆಯಾಗದ 35 ಸಾವಿರ ಜೊತೆಗೆ ಮೋಸ ಮಾಡಿ ಕಟಾವು ಮಾಡಿಕೊಂಡ 40 ಸಾವಿರ ಸೇರಿ ಒಟ್ಟು 75 ಸಾವಿರ ವಂಚನೆಯಾಗಿರುವುದಾಗಿ ತರಕಾರಿ ವ್ಯಾಪಾರಿ ದೂರು ನೀಡಿದ್ದಾನೆ.

ಹಣ ಕಳೆದುಕೊಂಡ ಎನ್ ಜಿಓ ನೌಕರ

ಎನ್ ಜಿಓ ನೌಕರ ಹೆಚ್.ಎನ್. ಸುನೀಲ್ ಎಂಬಾತ ತನ್ನ ತಂದೆ ನಿವೃತ್ತ ‘ಡಿ’ ನೌಕರ ಹನುಮಂತಪ್ಪ ಅವರ ಬ್ಯಾಂಕ್ ಖಾತೆಯಿಂದ ಇದೇ 19ರಂದು ಗೂಗಲ್ ಪೇ ಮುಖಾಂತರ ತನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡರೂ ಸಹ ಜಮೆಯಾಗದೇ ಗೂಗಲ್ ಪೇ ಕಸ್ಟಮರ್ ಕೇರ್ ಸಂರ್ಕಿಸಿದಾಗ ತನ್ನ ಹಾಗೂ ತನ್ನ ತಂದೆ ಇಬ್ಬರ ಖಾತೆಯಿಂದ ಒಟ್ಟು 53 ಸಾವಿರಕ್ಕೂ ಅಧಿಕ ಹಣ ಕಡಿತಗೊಂಡು ಮೋಸ ಹೋಗಿದ್ದಾರೆ.

ನನ್ನ ತಂದೆಯ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮುಖಾಂತರ ತನ್ನ ಬ್ಯಾಂಕ್ ಖಾತೆ ಎರಡು ಬಾರಿ ತಲಾ 20 ಸಾವಿರ ಹಣ ವರ್ಗಾವಣೆ ಮಾಡಿಕೊಂಡಿದ್ದು, ಅದು ಖಾತೆಗೆ ಜಮೆಯಾಗದಿದ್ದಾಗ, ಗೂಗಲ್ ಪೇ ಕಸ್ಟಮರ್ ಕೇರ್ ಸಂಪರ್ಕಿಸಿದ್ದು, ಅವರು ಇನ್ನೊಂದು ನಂಬರ್ ನಿಂದ ಫೋನ್ ಬರುವುದಾಗಿ ತಿಳಿಸಿ, ಮರುದಿನ ಕರೆ ಮಾಡಿ ಹಿಂದೆ ಭಾಷೆಯಲ್ಲಿ ಮಾತನಾಡಿ ಗೂಗಲ್ ಪೇ ಗೆ ಹೋಗಿ ಹೇಳಿದಂತೆ ಮಾಹಿತಿ ತುಂಬಿದರೆ ಹಣ ವಾಪಾಸ್ ಬರುವುದಾಗಿ ನಂಬಿಸಿ, ನನ್ನ ಅಕೌಂಟ್ ನಿಂದ 8901 ರೂ. ಹಾಗೂ ತಂದೆಯ ಅಕೌಂಟ್ ನಿಂದ 44,600 ರೂ. ಹಣ ಕಡಿತ ಮಾಡಿರುವುದಾಗಿ ಸುನೀಲ್ ದೂರು ನೀಡಿದ್ದಾರೆ.


  • ಗೂಗಲ್ ಪೇ ಅಸುರಕ್ಷಿತ

ಗೂಗಲ್ ಪೇ ಮುಖಾಂತರ ಆನ್ ಲೈನ್ ಹಣಕಾಸಿನ ವ್ಯವಹಾರವೇ ಅಸುರಕ್ಷಿತ. ಯಾವುದೇ ಸುರಕ್ಷಿತವಾದ ವ್ಯವಸ್ಥೆ ಇಲ್ಲ. ಗೂಗಲ್ ಪೇ ಕಸ್ಟಮರ್ ಕೇರ್ ಮೋಸವಾಗಿದ್ದು, ಅಪಾಯಕಾರಿ. ಹೀಗೆ ಹಣ ಕೈ ತಪ್ಪಿ ಹೋದಾಗ ಸಂಪರ್ಕಿಸುವ ಜನರಿಂದಲೇ ಬ್ಯಾಂಕ್ ಖಾತೆ ನಂಬರ್ ಹಾಗೂ ಇನ್ನಿತರ ಮಾಹಿತಿ ಪಡೆದು ಹಣ ವಂಚಿಸುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ಬ್ಯಾಂಕ್ ಗ್ರಾಹಕರು ಇಂತಹ ಅಸುರಕ್ಷಿತ ಹಣಕಾಸಿನ ಆನ್ ಲೈನ್ ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ. ಪೇಟಿಎಂ ಮುಖೇನ ಹಣಕಾಸಿನ ವ್ಯವಹಾರದ ಬಗ್ಗೆಯೂ ಜಾಗರೂಕರಾಗಬೇಕಿದೆ. ಖಾತೆ ಹೊಂದಿರುವ ಬ್ಯಾಂಕ್ ಗಳಿಂದಲ್ಲೇ ನೀಡುವ ಆನ್ ಲೈನ್ ಹಣಕಾಸಿನ ವ್ಯವಹಾರಕ್ಕೆ ಭದ್ರತೆ ಇರಲಿದೆ. ಹಾಗಾಗಿ ಜನ ಎಚ್ಚೆತ್ತುಕೊಳ್ಳಬೇಕು.

| ಮುಸ್ತಾಕ್ ಅಹ್ಮದ್, ಪಿಎಸ್ ಐ, ಸಿಇಎನ್ ಅಪರಾಧ ಪೊಲೀಸ್ ಠಾಣೆ


ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!

Published

on

ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಇಚ್ಛೆಯಂತೆ ಯುವಕನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.

ನಡೆದಿದ್ದೇನು?

ಕಿದೂರು ಕುಂಟಂಗೇರಡ್ಕದ ಪ್ರಫುಲ್ಲ (26) ಮತ್ತು ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ, ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು.

ಡೆತ್ ನೋಟ್‌ನಲ್ಲಿತ್ತು ಕೊನೆಯ ಆಸೆ

ತನ್ನ ಭಾವಿ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪ್ರಫುಲ್ಲ, ಕಳೆದ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. “ನನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಬೇಕು” ಎಂದು ಆಕೆ ತನ್ನ ಕೊನೆಯ ಆಸೆಯನ್ನು ಬರೆದಿಟ್ಟಿದ್ದರು.

ತಮಿಳುನಾಡಿನಲ್ಲಿ ಅಂತ್ಯಕ್ರಿಯೆ

ಯುವತಿಯ ಆಸೆಯಂತೆ ಉಭಯ ಕುಟುಂಬದವರು ಮಾತುಕತೆ ನಡೆಸಿದರು. ಅದರಂತೆ ನಿನ್ನೆ ಕಾಸರಗೋಡಿನಿಂದ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಪ್ರೇಮಿಗಳಿಬ್ಬರನ್ನು ಸಾವಿನಲ್ಲೂ ಒಂದಾಗಿಸಲಾಯಿತು.

ಅಂತ್ಯಸಂಸ್ಕಾರದ ವೇಳೆ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಮರುಗುವ ಪ್ರೇಮಕಥೆಗೆ ಕಂಬನಿಯ ವಿದಾಯ ಹೇಳಿದರು. ಈ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೋಮಾ ಕೋರ್ಸ್‌; ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: 2026-27ನೇ ಶೈಕ್ಷಣಿಕ ಸಾಲಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿನ ಮೂರು ವರ್ಷಗಳ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಹಾಗೂ ಎರಡನೇ ವರ್ಷದ ನೇರ ಪ್ರವೇಶಕ್ಕೆ (Lateral Entry) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ 2026 ರ ಜುಲೈ 01ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 23 ವರ್ಷ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 25 ವರ್ಷ ಮೀರಿರಬಾರದು. ಒಟ್ಟು 39 ಅಭ್ಯರ್ಥಿಗಳನ್ನು (ಪುರುಷ ಮತ್ತು ಮಹಿಳಾ) ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ. 2,500/- ಗಳ ಶಿಷ್ಯವೇತನ ನೀಡಲಾಗುವುದು., ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಡಿಪ್ಲೋಮಾ ಕೋರ್ಸ್‌ಗೆ ನೇರ ಪ್ರವೇಶಕ್ಕೆ https://khtigadag.ac.in/AdmissionForm.pdf ಎರಡನೇ ವರ್ಷದ ನೇರ ಪ್ರವೇಶಕ್ಕೆ (Lateral Entry) https://khtigadag.ac.in/Lateralentryadmissionform.pdf ಈ ಲಿಂಕ್‌ಗಳ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಮೇ 30 ರೊಳಗೆ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ, ಗದಗ-ಬೆಟಗೇರಿ-582102 ಇವರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಗಳಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಕಾಲೇಜು ರಸ್ತೆ, ನಿಟ್ಟುವಳ್ಳಿ, ದಾವಣಗೆರೆ ಅಥವಾ ದೂರವಾಣಿ ಸಂಖ್ಯೆ: 08192-262362 ಸಂಪರ್ಕಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ

Published

on

ಸುದ್ದಿದಿನ,ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂಬುದಾಗಿ ಉಪನ್ಯಾಸಕರೊಬ್ಬರಿಗೆ ಆಮಿಷ ತೋರಿಸಿದ ದುಷ್ಕರ್ಮಿಗಳು 14 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ದಾವಣಗೆರೆಯ ಭೂಮಿಕಾ ನಗರದ ನಿವಾಸಿಯಾಗಿರುವ 52 ವರ್ಷದ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹಣ ಕಳೆದುಕೊಂಡಿದ್ದಾರೆ.

ಉಪನ್ಯಾಸಕರು ಮೊದಲಿಗೆ ಟೆಲಿಗ್ರಾಂ ಮೂಲಕ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅಲ್ಲಿ ವಂಚಕರು ಹೇಳಿದಂತೆ ಹಲವು ಲಿಂಕ್​ಗಳನ್ನು ಕ್ಲಿಕ್ ಮಾಡುತ್ತಾ ಹೋಗಿದ್ದು, ಹಂತಹಂತವಾಗಿ ಹಣ ಕಳೆದುಕೊಂಡಿದ್ದಾರೆ.

ಲಾಭದ ನಿರೀಕ್ಷೆಯಲ್ಲಿದ್ದ ಉಪನ್ಯಾಸಕರಿಗೆ ಲಾಭ ಹೋಗಲಿ, ಅಸಲೂ ಬಾರದ ಕಾರಣ ಅನುಮಾನಗೊಂಡು ತಾನು ಹಣ ಕಳೆದುಕೊಂಡಿರುವುದು ದೃಢಪಟ್ಟಿದೆ.‌ ನಂತರ ಸೈಬರ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending