Connect with us

ಲೈಫ್ ಸ್ಟೈಲ್

ಸಾವಯವ ಕೃಷಿಯಲ್ಲಿ ಸೈ ಎನಿಸಿಕೊಂಡ ‘ಶಂಕರೇಗೌಡ’..!

Published

on

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೇವಗಳ್ಳಿ ಗ್ರಾಮದ ಶಂಕರೇಗೌಡ ಅವರು ಒಟ್ಟು 5 ಎಕರೆ ಜಮೀನನ್ನು ಹೊಂದಿರುತ್ತಾರೆ. ಆದರೆ ಇವರು ಪ್ರಾರಂಭದಲ್ಲಿ ವ್ಯವಸಾಯವನ್ನು ಮಾಡದೆ ತನ್ನ ಬಳಿ ಇದ್ದ ಒಂದು ಟ್ರ್ಯಾಕ್ಟರನಲ್ಲಿ ಸುತ್ತಮುತ್ತಲಿನ ಜಮೀನನಲ್ಲಿ ಬಾಡಿಗೆಯನ್ನು ಹೊಡೆಯುವ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಕ್ರಮೇಣ ವ್ಯವಸಾಯದಿಂದಲೆ ನನ್ನ ಜೀವನ ಮುಂದುವರೆಯಬೇಕು ಎಂಬ ಆಚಲ ಮನಸ್ಸು ಮಾಡಿದ್ದು ಇಂದು ಇವರು ಸಾವಯವ ಕೃಷಿಯಲ್ಲಿ ಉತ್ತಮ ಆದಾಯ ಗಳಿಸಲು ಕಾರಣವಾಯಿತು.
’’ಆರಂಭ ಆರಾಮಗಿರಬೇಕು’’ ಎಂದು ವ್ಯವಸಾಯವನ್ನು ಪ್ರಾರಂಭಿಸಲು ಮುಂದಾದಾಗ ನನ್ನ 5 ಎಕೆರೆ ಭೂಮಿಯನ್ನು ಹಂತಹಂತವಾಗಿ ಹದಮಾಡಿ ಮೊದಲ ಬಾರಿಗೆ ಬಾಳೆಹಣ್ಣು ಬೆಳೆಯಲು ಮುಂದಾದೆ. ಆದರೆ ಇದರಿಂದ ತುಂಬಾ ನಷ್ಟವಾಯಿತು.

ನನಗೆ ಸಾವಯವ ಕೃಷಿ ಅಂದರೇ ನನಗೆ ಎಲ್ಲಿಲದ ಪ್ರೀತಿ, ಆಸಕ್ತಿ. ಆದರೇ ಇದರ ಬಗ್ಗೆ ನನಗೆ ಅಷ್ಟೋಂದು ತಿಳಿದಿರಲಿಲ್ಲ ನಂತರದ ದಿನಗಳಲ್ಲಿ ಸುತ್ತೂರಿನ ಜೆ.ಎಸ್.ಎಸ್. ಕೃಷಿ ವಿಜ್ಞಾನ ಕೇಂದ್ರದ ತರಬೇತಿಗೆ ತೆರಳಿ ಅಲ್ಲಿರುವ ತಜ್ಞರ ಮಾಹಿತಿಯ ಮೇರೆಗೆ ಸಾವಯವ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಲು ಸಾಧ್ಯವಾಯಿತು ಎಂದು ಕೃಷಿಕ ಶಂಕರೇಗೌಡ ಅವರು ಹೇಳುತ್ತಾರೆ.

ಶಂಕರೇಗೌಡರು ಮೊದಲು ಬಾಳೆಯ ವಿವಿಧ ತಳಿಗಳಾದ ಕಾಡುಬಾಳೆ, ನೇಂದ್ರನ್, ನಂಜನಗೂಡು ರಸಬಾಳೆ, ಪಚ್ಚಬಾಳೆ, ಏಲಕ್ಕಿ ಬಾಳೆಗಳ ಸುಮಾರು 400 ಗಿಡಗಳನ್ನು ಟ್ರೆಂಚ್ ಪದ್ದತಿಯಲ್ಲಿ ಬೆಳೆದರು. ಶಂಕರೇಗೌಡರಿಗೆ ಮೊದಲಿನಿಂದಲೂ ಸಾವಯವ ಕೃಷಿಯಲ್ಲಿ ಬಹಳ ಆಸಕ್ತಿ ಇರುವುದರಿಂದ ತಮ್ಮ ಭೂಮಿಯನ್ನು ಹಂತ ಹಂತವಾಗಿ ಸಂಪೂರ್ಣ ಸಾವಯವ ಭೂಮಿಯಾಗಿ ಪರಿವರ್ತಿಸಿದರು.

ಮುಂದುವರೆದು 8 ಗುಂಟೆ ಪ್ರದೇಶದಲ್ಲಿ ಅರಿಶಿಣ ಹಾಗೂ ಪರಂಗಿ 50 ಗಿಡ, ಹುಣಸೆ ಮರ 2, ತೆಂಗು-130, ನೇರಳೆ-2, ಹಲಸು-6, ಸೀಬೆ-40, ಮಾವು-6. ಮೊಸಂಬಿ-2, ಚಕ್ಕೊತಾ-1, ನೆಲ್ಲಿಕಾಯಿ-1, ನುಗ್ಗೆ-15, ಸೀತಾಫಲ-2, ಇರಳೆಕಾಯಿ-20, ಗಜನಿಂಬೆ-25, ನಿಂಬೆ-12, ಕರಿಬೇವು-15, ಸೊಪ್ಪುಗಳಾದ ಕೊತ್ತಂಬರಿ, ಸಬ್ಬಸಿಗೆ, ಹೊನಗೊನೆ, ಕೀರೆ, ಪುದೀನಾ, ಮೆಂತ್ಯಾ, ಇತ್ಯಾದಿ ಬೆಳೆಗಳನ್ನು ಬೆಳೆದಿದ್ದಾರೆ.

ಜಮೀನಿನ ಸುತ್ತಾ ಬದುಗಳಲ್ಲಿ ಸಿಲ್ವರ್ ಓಕ್-200, ಟೀಕ್-100, ಹೆಬ್ಬೇವು-20, ಕಹಿಬೇವು-6, ಜೇನು ಪೆಟ್ಟಿಗೆ-2, ಹಾಗೂ ಕುರಿಗಳು-15, ಕೋಳಿ-15, ಹೆಚ್.ಎಫ್ ಹಸು-2, ಮೆಣಸು-4, ಅಡಿಕೆ-2, ಮರಗೆಣಸು-5, ಶುಂಠಿ-1 ಗುಂಟೆ, ಹಾಗೂ 4 ಎರೆಹುಳು ಗೊಬ್ಬರ ಘಟಕಗಳನ್ನು ಹೊಂದಿದ್ದಾರೆ ಹಾಗೂ ಒಂದು ಬೋರ್‍ವೆಲ್ ಮತ್ತು ಕೃಷಿ ಇಲಾಖೆ ವತಿಯಿಂದ ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಲಾದ ಕೃಷಿಹೊಂಡವನ್ನು ಹೊಂದಿದ್ದು, ಇವುಗಳ ಮೂಲಕ ಬೆಳೆಗಳಿಗೆ ನೀರುಣಿಸುತ್ತಾರೆ.

ದಿನನಿತ್ಯ ಉಪಯೋಗಿಸುವಂತಹ ಪದಾರ್ಥಗಳು, ಸಾಂಬಾರ ಪದಾರ್ಥಗಳು, ಸೊಪ್ಪು, ಹಾಗೂ ತರಕಾರಿಗಳನ್ನು ಮಾತ್ರ ಬೆಳೆಯುತ್ತಿದ್ದರು, ಇವುಗಳಿಗೆ ಮಾರುಕಟ್ಟೆಯಲ್ಲಿ ಸದಾಕಾಲ ಬೇಡಿಕೆ ಇದ್ದೇ ಇರುತ್ತಿತ್ತು. ಇದನ್ನರಿತ ಶಂಕರೇಗೌಡರು ಕೃಷಿ ತಜ್ಞರ ಸಲಹೆಯ ಮೇರೆಗೆ ವಿವಿಧ ಹಂತಗಳಲ್ಲಿ ಕಟಾವಿಗೆ ಬರುವಂತೆ ಉಪಚರಿಸಿ, ಯತೇಚ್ಚವಾಗಿ ಜೀವಾಮೃತ ಮತ್ತು ಪಂಚಗವ್ಯಗಳನ್ನು ಬಳಸಿ ಬಿತ್ತನೆ ಮಾಡುತ್ತಿದ್ದರು.

ಇವರು ವಾರಕ್ಕೊಮ್ಮೆ ಭಾನುವಾರದ ದಿನ ತಮ್ಮಲ್ಲಿ ಲಭ್ಯವಿರುವ ಎಲ್ಲಾ ಬೆಳೆಗಳು ಮತ್ತು ಪದಾರ್ಥಗಳನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಯಾವುದೇ ಮದ್ಯವರ್ತಿಗಳ ಸಹಾಯವಿಲ್ಲದೆ ಮೈಸೂರಿನ ವಿವೇಕಾನಂದ ಸರ್ಕಲ್‍ನ ಬಳಿ ತಮ್ಮದೇ ಆದ ಒಂದು ಸಂತೆ (ಮಾರುಕಟ್ಟೆ) ಕಲ್ಪಿಸಿಕೊಂಡು ಇದರ ಮೂಲಕ ನಗರ ಪ್ರದೇಶದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ತಾಜಾ ಸಾವಯವ ತರಕಾರಿ ಮತ್ತು ಹಣ್ಣುಗಳನ್ನು ಪೂರೈಸುತ್ತಿದ್ದಾರೆ.

ಇವರ ಈ ರಾಸಾಯನಿಕ ಮುಕ್ತವಾದ ಸಾವಯವ ಪದಾರ್ಥಗಳೆಂದರೇ ಗ್ರಾಹಕರಿಗೆ ಎಲ್ಲಿಲ್ಲದ ಬೇಡಿಕೆ. ಒಂದು ವಾರಕ್ಕಾಗುವಷ್ಟು ದಿನಬಳಕೆ ಪದಾರ್ಥಗಳನ್ನು ಭಾನುವಾರದ ದಿನ ಶಂಕರೇಗೌಡರಿಂದ ಖರೀದಿಸುತ್ತಾರೆ. ಹಾಗೂ ಮತ್ತೇನಾದರೂ ಅವಶ್ಯಕತೆವಿರುವ ತರಕಾರಿ ಬೇಕಾದಲ್ಲಿ ಗ್ರಾಹಕರು ಶಂಕರೇಗೌಡರಿಗೆ ದೂರವಾಣಿಯ ಮೂಲಕ ಕರೆ ಮಾಡುವರು. ತಾವು ಬೆಳೆದ ಅರಿಶಿಣವನ್ನು ತಾವೇ ಸ್ವತಃ ಸಂಸ್ಕರಿಸಿ ಚನ್ನಾಗಿ ಒಣಗಿಸಿ ಪುಡಿಗೊಳಿಸಿ ಅದನ್ನು ಪ್ಯಾಕ್ ಮಾಡಿ, ಮಾರಾಟ ಮಾಡುತ್ತಾರೆ.

ಇವರ ಅರಿಶಿಣ ಪಾರ್ಸಲ್ ಮೂಲಕ ಉತ್ತರ ಕರ್ನಾಟಕದ ವಿವಿಧ ಭಾಗಗಳಿಗೆ ತಲುಪುತ್ತದೆ. ಏಕೆಂದರೇ ಇವರ ಗ್ರಾಹಕರು ಅಲ್ಲಿಯವರೆಗೂ ಸಹ ವ್ಯಾಪಿಸಿದ್ದಾರೆ ಎನ್ನುವುದು ಬಹಳ ಹೆಮ್ಮೆಯ ವಿಷಯ ಹಾಗೂ ಪೆÇಸ್ಟಲ್ ಮೂಲಕವೇ ಮನಿ ಆರ್ಡರ್ ಮಾಡಿ ಅಂಚೆ ಮೂಲಕವೇ ತಮಗೆ ಬೇಕಾದ ಪದಾರ್ಥವನ್ನು ಪಡೆಯುತ್ತಾರೆ.

ಕಳೆದ 7 ವರ್ಷಗಳಿಂದಲೂ ಸಹ ಯಾವುದೇ ರಾಸಾಯನಿಕಗಳನ್ನು ಭೂಮಿಗೆ ಸೋಕಿಸದೇ ಇರುವ ಶಂಕರೇಗೌಡರು ಕುರಿ ಮತ್ತು ಕೋಳಿ ಸಾಕಣೆಯನ್ನೂ ಸಹ ವಿಶಿಷ್ಟ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. 15 ಕುರಿಗಳು ಮತ್ತು 15 ಕೋಳಿಗಳನ್ನು ಸ್ಟಾಲ್ ಫೀಡಿಂಗ್ ಪದ್ದತಿಯಲ್ಲಿ ಸಾಕುತ್ತಿದ್ದು, ಇವುಗಳಿಂದ ಬಂದಂತಹ ಗೊಬ್ಬರಗಳನ್ನು ಚೆನ್ನಾಗಿ ಕಲಸಿ, ಅದನ್ನು ತಮ್ಮ ಭೂಮಿಗೆ ಸಿಂಪಡಿಸಿ, ಇದರ ಜೊತೆಗೆ 4 ಎರೆಹುಳು ಘಟಕಗಳನ್ನು ಕೃಷಿ ಇಲಾಖೆ ಸಹಾಯಧನದಲ್ಲಿ ನಿರ್ಮಿಸಿಕೊಂಡು ಇದರಿಂದ ಉತ್ಪಾದನೆಯಾಗುವ ಗೊಬ್ಬರವನ್ನೂ ಸಹ ತಮ್ಮ ಜಮೀನಿಗೆ ಬಳಸಿಕೊಳ್ಳುತ್ತಾರೆ.

ಹೆಚ್ಚು ಎರೆಹುಳು ಗೊಬ್ಬರ ಉತ್ಪಾದನೆ ಮಾಡುವ ಶಂಕರೇಗೌಡರು ಅದನ್ನು ಬೇರೇ ರೈತರಿಗೆ ಬೇಡಿಕೆಗನುಗುಣವಾಗಿ ಮಾರಾಟ ಮಾಡುತ್ತಾರೆ. ತೋಟಗಾರಿಕೆ ಇಲಾಖೆಯ ಸಹಾಯಧನದಲ್ಲಿ ಪಡೆದಿರುವ ಬಹುಪಯೋಗಿ ರೋಟರಿ ಟಿಲ್ಲರ್ ಯಂತ್ರವನ್ನು ಬಹಳ ಪರಿಣಾಮಕಾರಿಯಾಗಿ ಉಳುಮೆ ಮಾಡಲು, ಭೂಮಿ ಹದಾ ಮಾಡಲು, ಸಾಲು ತೆಗೆಯಲು, ಕಳೆ ತೆಗೆಯಲು, ಅಂತರಬೇಸಾಯ, ಹೀಗೇ ಹಲವಾರು ಚಟುವಟಿಕೆಗಳಿಗೆ ಬಳಸುತ್ತಾರೆ.

ಇಷ್ಟೆಲ್ಲಾ ವೈವಿಧ್ಯತೆ ಸಾಧಿಸಿರುವ ಇವರು ಮಾಸಿಕ ಅಂದಾಜು 35 ರಿಂದ 40 ಸಾವಿರ ರೂಗಳ ಆದಾಯ ಗಳಿಸುತ್ತಿದ್ದಾರೆ. ಕೆಲ ಆಸಕ್ತ ರೈತರು ಹಾಗೂ ಹೊರ ಜಿಲ್ಲೆ, ರಾಜ್ಯಗಳಿಂದ ಬಂದ ರೈತರುಗಳಿಗೆ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡುತ್ತಾ ಅವರಲ್ಲಿ ಸ್ಪೂರ್ತಿ ತುಂಬುವ ಕೆಲಸದಲ್ಲೂ ಸಹ ಆಸಕ್ತಿ ವಹಿಸುತ್ತಾರೆ.

ಅವರೆಲ್ಲರಿಗೂ ಸಹ ಏಕಬೆಳೆ ಪದ್ದತಿ ತ್ಯಜಿಸಿ ಬಹುಬೆಳೆ ಮತ್ತು ಮಿಶ್ರಬೆಳೆ ಪದ್ದತಿಯನ್ನು ಹಾಗೂ ರಾಸಾಯನಿಕ ಮುಕ್ತವಾದ ಸಾವಯವ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳುವ ರೈತನು ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ದಾರಿ ಹಿಡಿಯುವುದಿಲ್ಲ. ಬದಲಾಗಿ ನಾಲ್ಕು ಜನರಿಗೆ ಕೆಲಸ ನೀಡುವ ಸಾಹುಕಾರನಾಗಿ ಬೆಳೆಯುತ್ತಾನೆ, ಇದಕ್ಕೆ ಸ್ವತಃ ನಾನೇ ನೈಜ ಉದಾಹರಣೆ ಎನ್ನುತ್ತಾರೆ ಪ್ರಗತಿಪರ ರೈತ ಶಂಕರೇಗೌಡ ಅವರು. –

ಸಂಜಯ್.ಕೆ.ಬೆಳತ್ತೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

Published

on

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.

23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.

ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್‍ ಆಹ್ವಾನ

Published

on

ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್‍ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್‍ ಸಂಜೀವ್‍ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.

ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್‍ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.

ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್‍, ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ಒಂದು ಮೊಬೈಲ್‍ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್‍ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್

Published

on

ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.

ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.

ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.

ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending