Connect with us

ಬಹಿರಂಗ

ಸಂವಿಧಾನ ದಿನಾಚರಣೆ ಹೇಗೆ ಗಣರಾಜ್ಯೋತ್ಸವವಾಯಿತು..?

Published

on

  • ಪರಶುರಾಮ್. ಎ

ಭಾರತದ ಪ್ರಜೆಗಳಾದ ನಮಗೆ ಜನವರಿ 26 ಹರ್ಷೋದ್ಘಾರದ ದಿನವೆಂದು ನೆನೆಯಲು ಖುಷಿ ಮತ್ತು ಸಂಕಟಗಳೆರಡನ್ನು ಹೊತ್ತು ಈ ಲೇಖನದಲ್ಲಿ ವಿಚಾರಗಳನ್ನು ಮಂಡಿಸುತ್ತೇನೆ. ಈ ಅವಕಾಶವನ್ನು ದೇಶ ಸೇವೆಗಾಗಿ ಎಂದೆ ನಾನು ಭಾವಿಸಿದ್ದೇನೆ. ಇತಿಹಾಸದಲ್ಲಿ ಮರೆಮಾಚಲ್ಪಟ್ಟ ಘಟನೆಯೊ ದುರಂತವೋ ಇಂದು ನಿಮಗೆ ಹಂಚಕೊಳ್ಳಲಿದ್ದೇನೆ.

ಜನವರಿ 26 ರಂದು ಎಲ್ಲೆಡೆಯು ಕೇಳಿ ಬರುತ್ತೀರುವುದೇನೆಂದೆರೆ ‘ಗಣರಾಜ್ಯ’ ಗಣರಾಜ್ಯ ದಿನವೆಂದು ಹಾಗೆಂದರೇನು ಎಂದು ಸ್ವಲ್ಪ ಗಮನ ಹರಿಸಿದರೆ ಆಗಸ್ಟ್ 15,1947 ರಂದು ಸ್ವಾತಂತ್ರ್ಯ ಬಂದಿದ್ದರಿಂದ ಸ್ವಾತಂತ್ರ್ಯ ದಿನಾಚರಣೆ, ನವೆಂಬರ್ 01.1956 ರಂದು ಯಾವ ದಿನ? ‘ಕನ್ನಡ ರಾಜ್ಯೋತ್ಸವ ದಿನ’. ಅಕ್ಟೋಬರ್ 02ಗಾಂಧೀ ಜಯಂತಿ ಹೀಗೆ ಜನವರಿ26 ರಂದು ಯಾವ ದಿನ? ಗಣರಾಜ್ಯ ದಿನವೇ? ಇದು ಮಾತ್ರ ಹೇಗೆ ಗಣರಾಜ್ಯ ದಿನವಾಯಿತು? ಸ್ವಲ್ಪ ಇವುಗಳ ಅರ್ಥದತ್ತ ಗಮನ ಹರಿಸೋಣಾ.

ಗಣ ಎಂದರೆ ‘ಪ್ರಜೆಗಳು’ ಎಂದು, ರಾಜ್ಯ ಎಂದರೆ ‘ಪ್ರಭುತ್ವ’. ಎಂಬರ್ಥವಲ್ಲವೇ ಅಂದರೆ ಈ ದಿನವನ್ನು ‘ಪ್ರಜಾಪ್ರಭುತ್ವ ದಿನ’ ಎಂದಾಯ್ತಲ್ಲವೇ?. ಇದರರ್ಥ ಇಂಗ್ಲೀಷ್‌ನಲ್ಲಿ ಏನಿದೆ ಎಂದರೆ ರಿಪಬ್ಲಿಕ್ ಅಂದರೆ ‘ಡೆಮೊಕ್ರಸಿ’ ಎಂದು. ಡೆಮೊ ಎಂದರೆ “ಪೀಪಲ್” ಹಾಗೂ ಕ್ರಸಿ ಯು “ರೂಲ್” ಎಂಬ ಅರ್ಥವನ್ನು ನೀಡುತ್ತದೆ. ಮತ್ತೊಂದು ಅರ್ಥ ಹೀಗಿದೆ “ಯಾವ ದೇಶವು ಸ್ವತಂತ್ರವಾಗಿದ್ದು, ಲಿಖಿತ ಸಂವಿಧಾನವನ್ನು ಹೊಂದಿದ್ದು ಅದರಂತೆ ರಾಜ್ಯದ ಆಡಳಿತವನ್ನು ನಡೆಸುತ್ತದೋ ಅಂತಃ ದೇಶವನ್ನು ಗಣರಾಜ್ಯವೆಂದು ಕರೆಯಲಾಗುತ್ತದೆ” ಅಂದರೆ ಜನಗಳ ಆಳ್ವಿಕೆ ಎಂದರ್ಥ.

ಹೀಗೇ ಕನ್ನಡದಲ್ಲಿ ‘ಪ್ರಜಾಪ್ರಭುತ್ವ ದಿನ’ ಇಂಗ್ಲೀಷ್‌ನಲ್ಲಿಯೂ ಜನರ ಆಳ್ವಿಕೆಯೆಂಬ ಅರ್ಥವಿರುವಾಗ ಒಟ್ಟಾರೆಯಾಗಿ “ಪ್ರಜಾಪ್ರಭುತ್ವ ಜಾರಿಗೆ ತಂದ ದಿನ” ಎನ್ನುವ ಅರ್ಥ ಬರುತ್ತದೆ. ಹಾಗಾದರೆ ಈ ದೇಶಕ್ಕೆ ಪ್ರಜಾಪ್ರಭುತ್ವ ಜಾರಿಗೆ ಬಂದಿದ್ದು ಅದು 26.ಜನವರಿ.1950 ಅಲ್ಲವೇ ಯಾವುದರ ಮೂಲಕ ಪ್ರಜಾಪ್ರಭುತ್ವ ಜಾರಿಗೆ ಬಂತು? “ಸಂವಿಧಾನ” ಜಾರಿಯಾಗುವ ಮೂಲಕ ಹೌದಲ್ಲವೇ? ಹಾಗಾದರೆ ನೇರವಾಗಿ ಈ ದಿನವನ್ನು “ಸಂವಿಧಾನ ದಿನಾಚರಣೆ” ಎಂದು ಕರೆಯಲು ಅಡ್ಡಿಯಾಗುವ ಅಂಶಗಳೇನು? ಈ ಬಗ್ಗೆ ವಿಚಾರಿಸಿದಾಗ ಅಂದಿನ ದಿನವನ್ನು ನೇರವಾಗಿ ಸಂವಿಧಾನ ದಿನಾಚರಣೆ ಎಂದು ಕರೆದರೆ ಆ ದಿನ ಇಡೀ ಭಾರತದ121 ಕೋಟಿ ಜನರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರವರ ತ್ಯಾಗ.

ಸೇವೆಗಳ ಬಗ್ಗೆ ಚಿಂತನೆ ಮಾಡಿ ಬಿಡುತ್ತಾರಲ್ಲ ಎಂಬ ಹುನ್ನಾರದಿಂದ ಇರಬಹುದೇ ಎಂಬ ಪ್ರಶ್ನೆ ಮೂಡುವುದು. ಈ ದಿನದ ಕ್ರೆಡಿಟ್ ಡಾ.ಬಿ.ಆರ್.ಅಂಬೇಡ್ಕರ್‌ರವರಿಗೆ ತಪ್ಪಿಸಬಹುದಲ್ಲ ಎನ್ನುವ ಏಕೈಕ ಉದ್ದೇಶದಿಂದ ಪರೋಕ್ಷ ಅರ್ಥದಲ್ಲಿ ‘ಗಣರಾಜ್ಯದಿನ’ ಎಂದು ನಮಗೆ ಇತಿಹಾಸಕಾರರು. ಪಂಡಿತರೆನಿಸಿಕೊಂಡುವವರು ಪರಿಚಯಿಸುತ್ತ ಬಂದಿದ್ದಾರೆ.
ಇಂದಿನ ಸಾಕಷ್ಟು ಮಂದಿ “ಗಣರಾಜ್ಯ ವೆಂದರೆ ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಿಸಿ ಎಲ್ಲಾ ರಾಜ್ಯಗಳನ್ನು ಒಕ್ಕೂಟದ ವ್ಯವಸ್ಥೆ ಒಳಗಡೆ ತಂದ ದಿನ ಎಂದು ಬಹುತೇಕರು ಭಾಷಣ ಮಾಡುತ್ತಾರೆ. ಹಾಗೇ ನಂಬಿಸಿದ್ದಾರೆ ಕೂಡಾ..!

ಅಷ್ಟಕ್ಕೂ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ನಡೆದದ್ದು ಜನವರಿ 26.1950ರಲ್ಲಿಯೇ? ಇಲ್ಲ ನವೆಂಬರ್ 1.1956 ರಲ್ಲಿ ಇದರಿಂದ ಮೊದಲ ರಾಜ್ಯವಾಗಿ ಆಂಧ್ರಪ್ರದೇಶ ಉದಯವಾಯಿತು. ಇಲ್ಲಿಂದ ಕರ್ನಾಟಕದ ರಾಜ್ಯ ಸ್ಥಾಪನೆಗೆ ನಾಂದಿಯಾಯಿತು. ನೋಡಿ ಇತಿಹಾಸದಲ್ಲಿ ಎಂತಹ ಗೊಂದಲವನ್ನು ತುರುಕಿಸಿದ್ದಾರೆ!. ನಮಗೆ ಅಂದರೆ ಭಾರತದ ಪ್ರಜೆಗಳಿಗೆ ಅನ್ಯಾಯ ಮಾಡಿದ್ದಾರೆ. ಇದೊಂದು ವ್ಯವಸ್ಥಿತ ಪಿತೂರಿಯೊ ಎಂದು ನಮಗೇಕೆ ಅನಿಸುತ್ತಿಲ್ಲ?

1950ರಿಂದಲೂ ಇಂತಹ ಅನ್ಯಾಯವನ್ನು ಮಾಡುತ್ತಿರುವ ಈ ದಿನದ ಮಹತ್ವವನ್ನು ಮರೆಮಾಚಿ ದೂರವಿಟ್ಟು ಜನಸಮೂಹದಿಂದ ಡಾ.ಬಿ.ಆರ್.ಅಂಬೇಡ್ಕರರ ಕೊಡುಗೆಗಳನ್ನು ದೂರವಿಟ್ಟು ರಾಜ್ಯಭಾರ ನಡೆಸಿರುವ ರಾಜಕಿಯ ಪಕ್ಷಗಳಿಗೆ ಈ ಪ್ರಶ್ನೆ ಎಲ್ಲರೂ ಕೇಳಲೇ ಬೇಕು. ಅಂಬೇಡ್ಕರರ ಕೊಡುಗೆ ಸಂವಿಧಾನಕ್ಕೆ ಏನೆಂದು ಗಮನಿಸಿದ ಸಂವಿಧಾನ ಸಭೆಯ ಉಪಾಧ್ಯಕ್ಷರೂ, ಕರಡು ರಚನಾ ಸಮಿತಿಯ ಸದಸ್ಯರು ಆಗಿದ್ದ ಶ್ರೀ ಟಿ.ಟಿ.ಕೃಷ್ಣಮಾಚಾರಿ ಹೇಳುತ್ತಾರೆ “ಸಂವಿಧಾನ ಕರಡು ಸಮಿತಿಗೆ 7 ಜನ ಸದಸ್ಯರಲ್ಲಿ ಒಬ್ಬರು ಮಧ್ಯದಲ್ಲಿ ರಾಜೀನಾಮೆ ನೀಡಿದರು ಮತ್ತು ಆ ಜಾಗವನ್ನು ತುಂಬಲಾಯಿತು ಎಂಬುದು ಈ ಸಭೆಗೆ ತಿಳಿದಿರಬಹುದು. ಆದರೆ ಒಬ್ಬರು ಮರಣವನ್ನು ಹೊಂದಿದರು ಮತ್ತೆ ಆ ಜಾಗಕ್ಕೆ ಯಾರನ್ನೂ ತುಂಬಲಿಲ್ಲ.

ಮತ್ತೊಬ್ಬರು ಅಮೇರಿಕಾದಲ್ಲಿ ಇದ್ದರು. ಅವರ ಜಾಗವನ್ನು ಬೇರೆಯವರಿಂದ ತುಂಬಲಿಲ್ಲ. ಮತ್ತೊಬ್ಬರು ರಾಜ್ಯದ ಆಡಳಿತ ಕಾರ್ಯಗಳಲಿ ನಿರತರಾಗಿದ್ದರು. ಮತ್ತೆ ಬೇರೆ ಒಬ್ಬರು ದೂರದ ದೆಹಲಿಯಲ್ಲಿ ಉಳಿದರು: ಈ ಕಾರಣ ಅವರ ಆರೋಗ್ಯ ಅವರನ್ನು ಅನುಮತಿಸಲಿಲ್ಲ. ನಂತರ ಸಂವಿಧಾನದ ಕರಡನ್ನು ರಚಿಸುವ ಭಾರ ಡಾ.ಬಿ.ಆರ್. ಅಂಬೇಡ್ಕರರವರ ಮೇಲೆ ಬಿತ್ತು ಅವರು ಆ ಕಾರ್ಯವನ್ನು ಒಂಟಿಯಾಗಿ ನಿಭಾಯಿಸಿದ ರೀತಿ ಶ್ಲಾಘನೀಯ ಮತ್ತು ನಾವೆಲ್ಲ ಯಾವುದೇ ಅನುಮಾಮಗಳಿಲ್ಲದೆ ಅವರಿಗೆ ಋಣಿಯಾಗಿರಬೇಕು”.

ಸಂವಿಧಾನ ಸಭೆಯ ಸದಸ್ಯರಾಗಿದ್ದ, ಸಂವಿಧಾನ ರಚನೆಗೆ ೧೫ ಜನ ಮಹಿಳೆಯರು ಸಹ ಕೊಡುಗೆಗಳನ್ನು ನೀಡಿರುವುದು ಒಂದು ಶ್ಲಾಘನೀಯ. ಹೀಗೆ ಸಂವಿಧಾನ ಕರಡು ರಚನೆ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಆರ್ ಅಂಬೇಡ್ಕರರವರು ಸಂವಿಧಾನ ಸಭೆಯ ಅಧ್ಯಕ್ಷರಾದ ಡಾ.ರಾಜೇಂದ್ರ ಪ್ರಸಾದ್‌ರವರಿಗೆ1949 ನವೆಂಬರ್ 25ರಂದು ಸಲ್ಲಿಸಿದರು. ಸಂವಿಧಾನ ಸಭೆಯ 284 ಸದಸ್ಯರು ಸಹಿ ಮಾಡಿ ನವೆಂಬರ್ 26.1949 ರಂದು ಅಂಗೀಕರಿಸಲಾಯಿತು. ಇದನ್ನು ನಮ್ಮ ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಕಾಣಬಹುದು.

1947 ಆಗಸ್ಟ್ 15ರಂದು ಬ್ರಿಟಿಷರಿಂದ ಸ್ವತಂತ್ರವಾದ ಭಾರತವು, 1950ರ ಜನವರಿ 26ರಂದು ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನು ಜಾರಿಗೆ ತರುವುದರ ಮೂಲಕ ಗಣರಾಜ್ಯವಾಯಿತು. ಹಿಂದೆ1930 ರ ಜನವರಿ 26 ರಂದು ‘ಪೂರ್ಣ ಸ್ವರಾಜ್ಯ’ ಬೇಕೆಂಬ ಹೋರಾಟದ ಪ್ರಾರಂಭವಾದ ಕಾರಣ ಇದರ ನೆನಪಿಗಾಗಿ 1950.ಜನವರಿ 26ರಂದು ನಮ್ಮ ಸಂವಿಧಾನ ಜಾರಿಗೆ ತರಲಾಯಿತು.

ಭಾರತದ ಸಂವಿಧಾನ ರಚನೆಯಲ್ಲಿ ವಿವಿಧ ದೇಶಗಳಿಂದ ಹಲವಾರು ಅಂಶಗಳನ್ನು ಎರವಲು ಪಡೆದು ಒಟ್ಟು 2ವರ್ಷ. 11ತಿಂಗಳು. 18ದಿನಗಳು ಸಂವಿಧಾನ ರಚನೆಗೆ ಕಾಲಾವಕಾಶ ತಲುಪಿತು. ನಂತರ ಇತ್ತೀಚಿನ ನಾಲ್ಕು ವರ್ಷಗಳಲ್ಲಿ ನವೆಂಬರ್ 26ರಂದು ಸಂವಿಧಾನ ದಿನವನ್ನಾಗಿ ಆಚರಿಸಿಲಾಗುತ್ತಿದೆ. ಹಾಗಾದರೆ ನವೆಂಬರ್26ಕ್ಕೂ. ಜನವರಿ 26ರ ಆಚರಣೆಗು ವ್ಯತ್ಯಾಸಗಳೇನು ಎಂಬ ಷಡ್ಯಂತ್ರ ಅರಿಯಬೇಕಾದ್ದು ನಮ್ಮಗಳ ಕರ್ತವ್ಯ. ಸಂವಿಧಾನದ ಪ್ರಸ್ತಾವನೆಯಲ್ಲಿ ನವೆಂಬರ್‌ನಲ್ಲಿ ಸಂವಿಧಾನವನ್ನು ನಮಗೆ ನಾವೆ ಅಂಗೀಕರಿಸಿಕೊಂಡಿರುವಾಗ ಇನ್ನೊಂದು ದಿನವನ್ನು ಬೇರೆ ಹೆಸರಿನಿಂದ ಈ ದಿನದ ಮಹತ್ವ ಮತ್ತು ಅಂಬೇಡ್ಕರರ ಕೊಡುಗೆ ಮರೆ ಮಾಚಿರುವ ಕಾರಣ ಅರಿಯಬೇಕು.

ಹೀಗೆ ಇತಿಹಾಸದಲ್ಲಿ ಅದೆಷ್ಟೋ ಮುಚ್ಚಿಡಲ್ಪಟ್ಟ ವಿಷಯಗಳಿವೆ, ಈಗ ನಮ್ಮ ಕರ್ತವ್ಯ ಏನೆಂದರೆ ಸಂವಿಧಾನವೇ ಅವಕಾಶ ಮಾಡಿಕೊಟ್ಟಿರುವಾಗ ವೈಜ್ಞಾನಿಕ ಮನೋಭಾವನೆ ಹೊಂದಿ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದಡಿಯಲ್ಲಿ ಸಂಶೋಧನೆಯ ಮೂಲಕ ಹೊರ ತಂದು ಜಗತ್ತಿಗೆ ತಿಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಓದುಗರಿಗೆ ಹಾಗೂ ವಿದ್ಯಾರ್ಥಿ ಮತ್ತು ಯುವ ಸಮುದಾಯಕ್ಕೆ ನನ್ನ ಮನವಿಯೇನೆಂದರೆ ಸರಿಯಾದ ಓದು ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ. ಅದರಲ್ಲೂ ಸಂವಿಧಾನ. ಮೀಸಲಾತಿ. ರಾಷ್ಟ್ರಭಕ್ತಿ ಹೀಗೆ ಇನ್ನೂ ಹಲವು ವಿಚಾರಗಳ್ಲಿ ನಮಗೆ ಗೊಂದಲವನ್ನು ಸೃಷ್ಠಿಸಿದ್ದಾರೆ.

ಆದ್ದರಿಂದ ವಿದ್ಯಾರ್ಥಿ ಮತ್ತು ಯುವ ಸಮುದಾಯಕ್ಕೆ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್‌ರವರ “ಸಂವಿಧಾನ ಓದು” ಎಂಬ ಪುಸ್ತಕ ಮತ್ತು ‘ಭಾರತದ ಸಂವಿಧಾನ’ ಓದಿ ಅರ್ಥೈಸಿಕೊಳ್ಳಬೇಕು ಎಂದು ಹೇಳುತ್ತೇನೆ. ಏಕೆಂದರೆ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್‌ದಾಸ್‌ರವರು ಹೇಳುವಂತೆ “ನಾವೆಲ್ಲರೂ ನಮ್ಮ ಸಂವಿಧಾನ ಓದಬೇಕು, ಅರ್ಥೈಸಬೇಕು.

ಸಂವಿಧಾನದ ಮೂಲತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಬದುಕಿನ ವಿಧಾನವಾಗಿಸಿಕೊಳ್ಳಬೇಕು. ಸಂವಿಧಾನದ ಪ್ರತಿಯೊಂದು ಆಶಯವನ್ನು ಅನುಷ್ಠಾನಗೊಳಿಸಲಿಕ್ಕೆ ಪ್ರಯತ್ನಿಸಬೇಕು. ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟ್ಟಿಸಬೇಕು”.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ‌ಪ್ರಕಟ

Published

on

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.

‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ

ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ  ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ  ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

Trending