Connect with us

ದಿನದ ಸುದ್ದಿ

ಹೊಸ ಚರಿತ್ರೆ ಬರೆಯಲಿರುವ ಜನವರಿ-26

Published

on

ಸ್ವಲ್ಪ ನೇರ ಮತ್ತು ವ್ಯಕ್ತಿಗತ ಪ್ರಶ್ನೆ, ಆ ದಿನಕ್ಕಾಗಿ ತಾವೇನು ಮಾಡಬಹುದು?

ಆತ್ಮೀಯರೆ,

“ಈ ಬಾರಿಯ ಗಣರಾಜ್ಯೋತ್ಸವ ಹೊಸ ಇತಿಹಾಸ ಬರಿಯಲಿದೆ”. ಇದರಲ್ಲಿ ಯಾವ ಸಂಶಯವೂ ಇಲ್ಲ. ಈಗ ದೆಹಲಿಯಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ರೈತರು ಮಾತ್ರವಲ್ಲದೆ ಇದಕ್ಕಿಂತಲೂ ಕನಿಷ್ಟ ಮೂರು ಪಟ್ಟು ಜನರು 26 ರ ಹೊತ್ತಿಗೆ ಬಂದು ಕೂಡಿಕೊಳ್ಳಲಿದ್ದಾರೆ. ಭಾರತದ ಧ್ವಜವನ್ನು ಕೈಯಲ್ಲಿಡಿದು ಕೆಂಪು ಕೋಟೆಯತ್ತ ಹೆಜ್ಜೆ ಹಾಕಲಿದ್ದಾರೆ.

ಅರ್ಧ ಪಂಜಾಬ್ ದೆಹಲಿಯಲ್ಲಿರಲಿದೆ. ಹರಿಯಾಣಾದ ಪ್ರತಿ ಮನೆಯಿಂದ ಒಬ್ಬರು, ಪ್ರತಿ ಹಳ್ಳಿಯಿಂದ 10 ಟ್ರಾಕ್ಟರ್ ಹೊರಟು ಬರಬೇಕೆಂದು ಖಾಪ್ ಪಂಚಾಯಿತಿಗಳೇ ಘೋಷಿಸಿಯಾಗಿವೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಮಹರಾಷ್ಟ್ರ ಎಲ್ಲಾ ಕಡೆಯಿಂದ ಜನರು ಬಂದು ಸೇರುವುದು ಈಗಾಗಲೇ ಪ್ರಾರಂಭವಾಗಿದೆ. ರೈತರು ಶಪಥ ಗೈದಿದ್ದಾರೆ. ಸಾಯುತ್ತೇವೆ ಆದರೆ ಹಿಂಸೆಗೆ ಇಳಿಯುವುದಿಲ್ಲ.

ಈ ಅಹಿಂಸಾತ್ಮಕ ಜನಸಾಗರವನ್ನು ಎದುರಿಸುವ ನೈತಿಕ ಶಕ್ತಿ ಸರ್ಕಾರಕ್ಕಿಲ್ಲ. ಅದರ ಯಾವ ಚಾಣಕ್ಯ ನೀತಿಗಳೂ ಫಲಿಸುತ್ತಿಲ್ಲ. ಅದರೆ ಅದಾನಿ ಅಂಬಾನಿಗಳ ಸೇವೆ ಬಿಡಲು ಸಿದ್ಧವಿಲ್ಲ. ಪರಿಣಾಮ ಹಸ್ತಿನಾಪುರದಲ್ಲಿ ಇತಿಹಾಸ ಮರುಕಳಿಸಲಿದೆ. ಜನವರಿ 26ರಂದು ದೆಹಲಿಯಲ್ಲಿ ಶಾಂತಿಯುತ ಕುರುಕ್ಷೇತ್ರ ನಡೆಯಲಿದೆ. ಫಲಿತಾಂಶವನ್ನು ಸಧ್ಯಕ್ಕೆ ವರ್ತಮಾನಕ್ಕೆ ಬಿಡೋಣ. ಈಗ ನಮ್ಮ ಮುಂದಿನ ಚರ್ಚೆ, ಅಂದಿಗಾಗಿ ಇಂದು ಮತ್ತು ಇಲ್ಲಿ ನಾವೇನು ಮಾಡೋಣ?

ದೆಹಲಿ ಹತ್ತಿರವಿದ್ದಿದ್ದರೆ, ಮೊದಲಿನಂತೆ ಸರಾಗವಾಗಿ ರೈಲು ಹತ್ತಿ ಟಿಕೆಟ್ ಇಲ್ಲದೆ ದೆಹಲಿಗೆ ಪಯಣಿಸುವಂತಿದ್ದರೆ, ನಾವೂ ಸಹ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕುರುಕ್ಷೇತ್ರದಲ್ಲಿ ಪಾಲ್ಗೊಳ್ಳಲು ಹೊರಡಬಹುದಿತ್ತು. ಆದರೆ ಅದು ಸಾಧ್ಯವಿಲ್ಲ. ಸಾಧ್ಯವಿರುವವರು ಅದಕ್ಕೂ ಹೊರಟರೆ ಒಳ್ಳೆಯದೆ. ಆದರೆ ನಾವೆಲ್ಲರೂ ಸೇರಿ ಅದೇ ದಿನ ಕರ್ನಾಟಕದಲ್ಲಿ ದುಡಿವವರ ದನಿ ಮೊಳಗುವಂತೆ ಮಾಡಲೇಬೇಕು. ಇದಕ್ಕಾಗಿಯೇ ಜನವರಿ 26ರಂದು ಬೆಂಗಳೂರಿನಲ್ಲಿ ರೈತ ಮತ್ತು ಸಮಸ್ತ ದುಡಿವ ಜನರ ಗಣರಾಜ್ಯೋತ್ಸವ ಪೆರೇಡಿಗೆ ಕರೆ ನೀಡಲಾಗಿದೆ. ಇದನ್ನು ಯಶಸ್ವಿಗೊಳಿಸಲು ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡಬೇಕು. ವೈಯಕ್ತಿಕವಾಗಿ ನಾನೇನು ಮಾಡಲಿದ್ದೇನೆ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಹಾಕಿಕೊಳ್ಳಬೇಕು.

ಕೆಲವು ಸಲಹೆಗಳು

1. ಜನವರಿ 25-26ನ್ನು ಈ ದೇಶದ ದುಡಿವ ಜನರಿಗೆಂದು ತೆಗೆದಿಡಲು ಸಾಧ್ಯವೆ? ನಿಮ್ಮ ಬಳಿ ಇರುವ ವಾಹನದ ಜೊತೆ, [ಕಾರು, ಟ್ರಾಕ್ಟರ್, ಜೀಪು, ಮೋಟಾರ್ ಬೈಕ್, ಸೈಕಲ್ ಯಾವುದಾದರೂ ಸರಿ] ಸಾಧ್ಯವಿರುವ ಮಿತ್ರರನ್ನು, ಕುಟುಂಬದ ಸದಸ್ಯರನ್ನು, ಜೊತೆಗೂಡಿಸಿಕೊಂಡು ಬೆಂಗಳೂರಿಗೆ ಬಂದು ಸೇರಲು ಸಿದ್ಧತೆ ಮಾಡಿಕೊಳ್ಳಬಹುದೆ?

2. ನಿಮ್ಮ ಊರಿನಲ್ಲಿ ಈಗಿನಿಂದಲೇ ನಿಮ್ಮದೇ ರೀತಿಯಲ್ಲಿ ಈ ಸಂದೇಶ ಎಲ್ಲರಿಗೂ ತಲುಪಿಸುವ ಕೆಲಸವನ್ನು ತಾವು ಮಾಡಬಹುದೆ? ನಾಳೆಯಿಂದ ಬರಲು ಪ್ರಾರಂಭವಾಗುವ ಪೋಸ್ಟರುಗಳನ್ನು ಶೇರ್ ಮಾಡಬಹುದೆ? ಕರಪತ್ರಗಳನ್ನು ಮಿತ್ರರಿಗೆ, ನೆರೆಹೊರೆಯವರಿಗೆ, ಏರಿಯಾಗಳಿಗೆ, ಸಾಧ್ಯವಾದರೆ ಹಳ್ಳಿಗಳಿಗೆ ತಲುಪಿಸಲು ಪ್ರಯತ್ನಿಸಬಹುದೆ?

3. ನಿಮ್ಮ ಸುತ್ತಮುತ್ತ ಇರುವ ಸಂಘಟನೆಗಳ ಸಭೆ ಕರೆದು ಎಲ್ಲರೂ ಸೇರಿ ಏನು ಮಾಡಬಹುದು ಎಂದು ಚರ್ಚಿಸಬಹುದೆ? ನಿಮ್ಮ ಪ್ರದೇಶದಲ್ಲಿ ನಿಮ್ಮದೇ ರೀತಿಯಲ್ಲಿ ಪ್ರಚಾರ ಜಾಥ ಹಮ್ಮಿಕೊಳ್ಳಬಹುದೆ?

4. ಬೆಂಗಳೂರಿನಲ್ಲಿ ಸುಮಾರು ಸಿದ್ಧತೆಯ ಕೆಲಸಗಳಿದ್ದು ವಾಲಂಟೀರ್ ಆಗಿ ಕೆಲಸ ಮಾಡಲು ಕೆಲವು ದಿನ ಮೊದಲು ಬೆಂಗಳೂರಿಗೆ ಬರಬಹುದೆ? ನಿಮ್ಮ ಮಿತ್ರರನ್ನು ಅಥವ ಸಂಘಟನೆಯ ಕಾರ್ಯಕರ್ತರನ್ನೂ ಈ ಪುಣ್ಯ ಕಾರ್ಯದಲ್ಲಿ ತೊಡಗಿಸಬಹುದೆ?

4. ದೂರದಿಂದ ಬರುತ್ತಿರುವ ಟ್ರಾಕ್ಟರುಗಳಿಗೆ ಡೀಸಲ್ ಹಾಕಿಸಲು, ಊಟದ ವ್ಯವಸ್ಥೆ ಮಾಡಲು, ಪ್ರಚಾರ ಸಾಮಗ್ರಿಯನ್ನು ಸಿದ್ಧಗೊಳಿಸಲು ಹಣ ಸಂಗ್ರಹ ಮಾಡಿಕೊಡಬಹುದೆ?

5. ಅಂದಿನ ಮೆರವಣಿಗೆಯನ್ನು ದೇಶಪ್ರೇಮದ ಸಂಕೇತವಾಗಿಸಲು ಒಂದಿಷ್ಟು ರಾಷ್ಟ್ರ ಧ್ವಜಗಳನ್ನು ಮಾಡಿಸಿ ಅಥವ ಕೊಂಡು 26ಕ್ಕೆ ತರಬಹುದೆ?

6. ನೀವು ಈ ಹೋರಾಟವನ್ನು ಬೆಂಬಲಿಸಿ ಮತ್ತು 26ಕ್ಕೆ ಬೆಂಗಳೂರು ಬರುವಂತೆ ಆಹ್ವಾನಿಸಿ, ನಿಮ್ಮದೇ ರೀತಿಯಲ್ಲಿ ಪುಟ್ಟ ವಿಡಿಯೋ ಅಥವ ಬರವಣಿಗೆಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಬಹುದೆ? ನಿಮಗೆ ಸಂಪರ್ಕದಲ್ಲಿರುವ ಪರ್ಯಾಯ ಮೀಡಿಯಾ ಅಥವ ಮುಖ್ಯವಾಹಿನಿ ಮೀಡಿಯಾಗಳಲ್ಲಿ ಇರುವ ಜನಪರ ಗೆಳೆಯ, ಗೆಳತಿಯರಿಗೆ ಕರೆ ಮಾಡಿ ಇದನ್ನು ತಮ್ಮದೇ ರೀತಿಯಲ್ಲಿ ಸುದ್ದಿ ಮಾಡುವಂತೆ ಕೇಳಿಕೊಳ್ಳಬಹುದೆ?

7. ಜನವರಿ 16ರಂದು ಇದರ ಕರ್ಟನ್ ರೈಸರ್ ಕಾರ್ಯಕ್ರಮ ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆಯಲಿದ್ದು, ಅದಕ್ಕೆ ದೆಹಲಿ ಹೋರಾಟಕ್ಕೆ ಮುಂದಾಳತ್ವ ನೀಡುತ್ತಿರುವ “ಸಂಯುಕ್ತ ಕಿಸಾನ್ ಮೋರ್ಚಾದ” ತಂಡ ಆಗಮಿಸಲಿದೆ. ಯೋಗೇಂದ್ರ ಯಾದವ್, ಮನ್ಜೀತ್ ಸಿಂಗ್ ಮತ್ತು ಯಧುವೀರ್ ಸಿಂಗ್ ಸಮಾಜದಲ್ಲಿ ಹರಿಬಿಡಲಾಗಿರುವ ಸುಳ್ಳು ಪ್ರಚಾರವನ್ನು ಮುಕ್ತ ಸಂವಾದದಲ್ಲಿ ಬಯಲುಗೊಳಿಸಲಿದ್ದಾರೆ. ಇದರಲ್ಲಿ ತಾವೂ ಭಾಗವಹಿಸಬಹುದೆ?

8. ನೇರವಾಗಿ ಕರ್ನಾಟಕವನ್ನು ಪ್ರತಿನಿಧಿಸಿ ಭಾಗವಹಿಸಿಸಲು ಹೋರಾಟಗಾರರ ತಂಡವೊಂದು 14ರಂದು ದೆಹಲಿಗೆ ಹೊರಟಿದ್ದು ಅದರ ಜೊತೆ ತಾವೂ ದೆಹಲಿಗೆ ಹೊರಡಬಹುದೆ?

ಆಯ್ಕೆಯ ಸ್ವಾತಂತ್ರ್ಯ ತಮ್ಮದು, ಮೇಲೆ ನಾನು ಸೂಚಿಸಿರುವ ವಿಧಾನವನ್ನೂ ಬಿಟ್ಟು ಬೇರೆಯದೇ ರೀತಿಯಲ್ಲಿ ನೀವು ಕೈಗೂಡಿಸಬಹುದು. ಕೈಗೂಡಿಸುತ್ತೀರಿ ಎಂಬ ಪೂರ್ಣ ವಿಶ್ವಾಸವೂ ಇದೆ. ಇದರ ಮಹತ್ವವನ್ನು ಒತ್ತಿ ಹೇಳಲು ಮತ್ತು ಸಾಧ್ಯತೆಗಳನ್ನು ತೆರೆದಿಡಲು ಮಾತ್ರ ಇದನ್ನು ಬರೆದಿದ್ದೇನೆ. ಜನವರಿ 26 ರಂದು ತಪ್ಪದೇ ಬೆಂಗಳೂರಿನಲ್ಲಿ ಭೇಟಿಯಾಗೋಣ. ಒಂದು ವೇಳೆ ನೀವು ದೆಹಲಿ ಕುರುಕ್ಷೇತ್ರಕ್ಕೇ ಹೋಗುವುದಾದರೆ ಬಂದ ನಂತರ ಭೇಟಿಯಾಗೋಣ.
‌ ‌‌‌‌
-ಸಿ.ಎಸ್.ದ್ವಾರಕಾನಾಥ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಸಮಾಜ ಸೇವಕ : ಇದು ಕೊರೊನಾ ಗೆದ್ದು ಬಂದವನ ಸೇವೆ

Published

on

  • ವರದಿ: ಗಿರಿಧರ್ ಕೊಂಪುಳೀರಾ

ಸುದ್ದಿದಿನ, ಕೊಡಗು : ಅಂದು ಸಣ್ಣದೊಂದು ಶೀತ ಜ್ವರ,ತನ್ನ ಮಗನಿಗೂ ಅದೇ ರೀತಿಯಾಗಿತ್ತು, ದೇವದೆಲ್ಲಡೆ ಅದೇನೋ ವಿಷಮ ಗಾಳಿಯಿಂದ ಖಾಯಿಲೆ ಹರಡುತಿದೆ,ಪರೀಕ್ಷಿಕೊಳ್ಳಿ ಎಂದು ಸರ್ಕಾರಗಳು ಪ್ರಚಾರ ಮಾಡುತ್ತಿದ್ದವು,ಯಾವುದಕ್ಕೂ ಪರೀಕ್ಷೆಗೆ ಹೋದರೆ ಸಾಲುಸಾಲು ಜನ ಮೂಗಿನಿಂದ,ಬಾಯಿಂದ ಸ್ಯಾಂಪಲ್ ಪಡೆಯುವುದು,ಇಷ್ಟು ಮಾಡುವುದಕ್ಕೆ ಒಂದು ದಿನವೇ ಸವೆದುಹೋಯಿತು, ಊಟವಿಲ್ಲ ನೀರಿಲ್ಲ,ತಾನೇಗೋ ಇರುತ್ತೇನೆ ಪುಟ್ಟ ಮಗನ ಕಥೆಯೇನು..?

ಹೌದು ಸಮಾಜ ಸೇವಕ ,ವೃತ್ತಿಯಲ್ಲಿ ವಕೀಲ,ಕೊಡಗಿನ ಹಿತ ಕಾಪಾಡಲು ಸದಾ ಮುಂದೆಯಿರುವ ಇವರ ಹೆಸರು
ಪವನ್ ಪೆಮ್ಮಯ್ಯ,ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿರುವ ಇವರು ಅದೆಲ್ಲಿಂದ ಕೊರೊನಾ ಒಕ್ಕರಿಸಿತೋ ಗೊತ್ತಿಲ್ಲ ದಿನನಿತ್ಯ ಸಾವಿರಾರು ಜನರು ಬರುವ ಜಿಲ್ಲಾ ನ್ಯಾಯಾಲಯ,ಜನರ ಮಧ್ಯೆಯೇ ಸೇವೆಗಳಲ್ಲಿ ಇರುವುದರಿಂದಲೋ ಕೊರೊನಾ ಪಾಸಿಟಿವ್ ಅಂತಾ ಧೃ಼ಡಪಟ್ಟು, ಆಸ್ಪತ್ರೆಯಲ್ಲಿ ಸಿಕ್ಕಿದ ಪುಡ್ಡು,ಬೆಡ್ಡು ಚಿಕಿತ್ಸೆಗೆ ಮಾತ್ರೆ ನುಂಗಿ ಕೊರೊನಾ ತನ್ನಿಂದ ಓಡಿಹೋಗುವಷ್ಟರ ಮಟ್ಟಿಗೆ ನಾಜೂಕಾಗಿ ಚಿಕಿತ್ಸೆ ತೆಗೆದುಕೊಂಡರು.

ಆಸ್ಪತ್ರೆಯಿಂದ ಯುದ್ದ ಗೆದ್ದ ಸಂಭ್ರಮವೇನೋ ಇತ್ತು ಆದರೆ ತಾನು ಕ್ವಾರಂಟೈನ್ ನಲ್ಲಿದ್ದ ಸಂದರ್ಭ ಆದ ಅನುಭವದಿಂದ ನಲುಗಿ ಇದೀಗ ಮತ್ತೆ ಜನರ ಮಧ್ಯೆ ಬಂದಿದ್ದಾರೆ.ಹೌದು ಕೊರೊನಾ ಪಾಸಿಟಿವ್ ಆಗಿ ನರಳುವ ರೋಗಿಗಳ ಕಷ್ಟ ಒಂದಡೆಯಾದರೆ,ಇನ್ನೊಂದೆಡೆ ಕೊರೊನಾ ಪೀಡಿತ ವ್ಯಕ್ತಿಯ ಮನೆಯವರ ಪಾಡು.

ಇದನ್ನೂ ಓದಿ |ಲಾಕ್ ಡೌನ್ ನಡುವೆ ಸಪ್ತಪದಿ ತುಳಿದ ನಟ ಚಂದನ್-ಕವಿತ

ಇದೀಗ ಲಾಕ್ ಡೌನ್,ಮಡಿಕೇರಿಯಲ್ಲಿ ಮಳೆ ಸಹ ಶುರುವಾಗಿದೆ.ಶುದ್ದ ಕುಡಿಯುವ ನೀರು ಆಸ್ಪತ್ರೆಯಲ್ಲಿದ್ದರೂ ಕುಡಿಯುವ ಹಾಗಿಲ್ಲ,ಮಕ್ಕಳು,ವೃದ್ದರೆನ್ನದೆ ಆಸ್ಪತ್ರೆಯತ್ತ ಮುಖ ಮಾಡುವ ಮಂದಿ ಹೊಟೇಲುಗಳಿಲ್ಲದೆ, ಆಹಾರಕ್ಕೂ ಪರದಾಡುವಂತಹವರಿಗೆ ಪವನ್ ಅನಧಾತರಾಗಿದ್ದಾರೆ.

ದಿನನಿತ್ಯ ಮಡಿಕೇರಿ ಜಿಲ್ಲಾಸಪ್ಪತ್ರೆ ಎದುರು ಒಂದೆರೆಡು ಯವಕರನ್ನು ಸೇರಿಸಿಕೊಂಡು ದಿನನಿತ್ಯ 300 ಮಂದಿಗೆ ತಾವೇ ಮನೆಯಲ್ಲಿ ತಯಾರಿಸಿ ಹೊಟ್ಟೆ ತುಂಬುವಷ್ಟು ನೀರು,ದೋಹ ತಣಿವಷ್ಟು ನೀರಿನ ವ್ಯವಸ್ಥೆಯನ್ನು ಆಸ್ಪತ್ರೆಯ ಬಳಿಯಲ್ಲೇ ಕೊರೊನಾದ ಸಕಲ ನಿಮ ಪಾಲಿಸಿಕೊಂಡು,ಅವರ ಬಳಿಗೆ ಬರುವವರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ.

ಆರಂಭದಲ್ಲಿ ಸ್ವಂತ ಖರ್ಚಿನಿಂದ ಸಣ್ಣ ಪ್ರಮಾಣದಲ್ಲಿ ಆರಂ‌ಭಿಸಿದ ಈ ಕಾರ್ಯಕ್ಕೆ,ಸ್ನೇಹಿತರು ಹಿತೈಶಿಗಳ ಪ್ರೋತ್ಸಾಹವಿದೆ. ಏನೇ ಆಗಲಿ ಸಮಾಜದಲ್ಲಿ ಕೊರೊನಾ ಜೊತೆಗೂ ಇತರರೊಂದಿಗೆ ಬೆರೆಯಬಹುದು,ಅವರ ಕಷ್ಟ ಸುಖದಲ್ಲಿ ಸುರಕ್ಷಿತವಾಗಿ ಭಾಗಿಯಾಗುತ್ತಿರುವುದಕ್ಕೆ ಇದಕ್ಕಿಂದ ಉದಾಹರಣೆ ಬೇಕಿಲ್ಲ.

ಕೃಪೆ : Mangalore information

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲೆಯಲ್ಲಿ 390 ಜನರಿಗೆ ಕೋವಿಡ್ ಸೋಂಕು ದೃಢ: 80 ಮಂದಿ ಬಿಡುಗಡೆ

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಶುಕ್ರವಾರದ ವರದಿಯಲ್ಲಿ 390 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 19,707 ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 182, ಚಳ್ಳಕೆರೆ 57, ಹಿರಿಯೂರು 28, ಹೊಳಲ್ಕೆರೆ 30, ಹೊಸದುರ್ಗ 77, ಮೊಳಕಾಲ್ಮುರು ತಾಲ್ಲೂಕಿನಲ್ಲಿ 16 ಪ್ರಕರಣ ಸೇರಿದಂತೆ ಒಟ್ಟು 390 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಶುಕ್ರವಾರ 80 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಶುಕ್ರವಾರ ಒಟ್ಟು 2139 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ.  ವರದಿಯಲ್ಲಿ 390 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಸೋಂಕಿತರ ಸಂಖ್ಯೆ 19,707 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ | ಲಾಕ್ ಡೌನ್ ನಡುವೆ ಸಪ್ತಪದಿ ತುಳಿದ ನಟ ಚಂದನ್-ಕವಿತ 

ಕೋವಿಡ್‍ನಿಂದ ಇಂದು ಇಬ್ಬರು ಮೃತರಾಗಿದ್ದು ಇದುವರೆಗೆ ಒಟ್ಟು 101 ಜನ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೆ 17,356 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 2,250 ಸಕ್ರಿಯ ಪ್ರಕರಣಗಳು ಇವೆ.
ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 1,59,469 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ.

ಈವರೆಗೆ 4,45,728 ಜನರ ಮಾದರಿ ಸಂಗ್ರಹಿಸಲಾಗಿದ್ದು, 4,23,932 ಜನರ ವರದಿ ನೆಗೆಟೀವ್ ಬಂದಿದೆ, ಉಳಿದ 1352 ಜನರ ವರದಿ ಬರುವುದು ಬಾಕಿ ಇದೆ. 737 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕøತಗೊಂಡಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಂಗನಾಥ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಲಾಕ್ ಡೌನ್ ನಡುವೆ ಸಪ್ತಪದಿ ತುಳಿದ ನಟ ಚಂದನ್-ಕವಿತ

Published

on

ಸುದ್ದಿದಿನ ಡೆಸ್ಕ್ : ಲಾಕ್ ಡೌನ್ ನಡುವೆ ನಟ ಚಂದನ್ ಗೌಡ ಮತ್ತು ಕವಿತಾ ಗೌಡ ಶುಕ್ರವಾರ ವಿವಾಹವಾದರು.

ಕೆಲವೇ ಆಪ್ತರ‌ ಸಮ್ಮುಖದಲ್ಲಿ ಇವರ ಕಲ್ಯಾಣವುನೆರವೇರಿತು. ಚಂದನ್ ಮಾಸ್ಕ್ ಧರಿಸಿಕೊಂಡೇ ಮಾಂಗಲ್ಯಧಾರಣೆ ಮಾಡಿದರು. ಸೋಷಿಯಲ್ ಮೀಡಿಯಾದಲ್ಲಿ ಮದುವೆ ಸಂಭ್ರಮ ಹಂಚಿಕೊಂಡ ಜೋಡಿಯು ಮದುವೆ ಫೋಟೋ ಪೋಸ್ಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending