Connect with us

ಕ್ರೀಡೆ

ಐಪಿಎಲ್ | ಸಂಕ್ಷಿಪ್ತ ಸುದ್ದಿ

Published

on

ಸುದ್ದಿದಿನ ಡೆಸ್ಕ್ : ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7ವಿಕೆಟ್ ಜಯ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್‌ಗಳಲ್ಲಿ 8ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಹೈದ್ರಾಬಾದ್ ತಂಡ ಕೇವಲ 3 ವಿಕೆಟ್ ನಷ್ಟಕ್ಕೆ17.5 ಓವರ್‌ಗಳಲ್ಲಿ ಗುರಿ ತಲುಪಿದೆ.

ಇಂದು ಮಧ್ಯಾಹ್ನ3.30ಕ್ಕೆ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಸೆಣಸಲಿವೆ. ಸಂಜೆ 7.30ಕ್ಕೆ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಮತ್ತೊಂದು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಕ್ಕನ್ ಚಾರ್ಜರ್ಸ್ ಮುಖಾಮುಖಿಯಾಗಲಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

11 ವರ್ಷಗಳ ನಂತರ ಭಾರತ ತಂಡಕ್ಕೆ ಐಸಿಸಿ ಟಿ-20 ವಿಶ್ವಕಪ್ ಕಿರೀಟ ; ಗಣ್ಯರ ಮೆಚ್ಚುಗೆ

Published

on

ಸುದ್ದಿದಿನಡೆಸ್ಕ್:ಬಾರ್ಬಡೋಸ್ ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ 7 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ರೋಹಿತ್ ಶರ್ಮ ನೇತೃತ್ವದ ಭಾರತ ತಂಡ, 17 ವರ್ಷಗಳ ನಂತರ ಐಸಿಸಿ ಪುರುಷರ ಟಿ-20 ವಿಶ್ವಕಪ್ ಗೆದ್ದಸಾಧನೆ ಮಾಡಿದೆ.

ಭಾರತ ನೀಡಿದ 177 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತಗೊಂಡಿತು. ದಕ್ಷಿಣ ಆಫ್ರಿಕಾ ಪರ ಹೆನ್ರಿಚ್ ಕ್ಲಾಸೆನ್ 52 ರನ್ ಗಳಿಸಿದರೆ, ಭಾರತ ತಂಡದ ಪರ ಹಾರ್ದಿಕ್ ಪಾಂಡ್ಯ 3, ಜಸ್ ಪ್ರಿತ್ ಬುಮ್ರಾ ಮತ್ತು ಅರ್ಷ್ ದೀಪ್ ಸಿಂಗ್ ತಲಾ 2 ವಿಕೆಟ್ ಪಡೆದರು.

ಟೂರ್ನಿಯಲ್ಲಿ ಅತ್ಯುತ್ತಮ ಇನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಸಹಜವಾಗಿಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಹಾಗೆಯೇ 8 ಪಂದ್ಯಗಳಿಂದ 15 ವಿಕೆಟ್ ಉರುಳಿಸಿದ ವೇಗಿ ಜಸ್ ಪ್ರಿತ್ ಬುಮ್ರಾ ಟೂರ್ನಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. 2007ರ ನಂತರ ಭಾರತ ಟಿ20 ವಿಶ್ವಕಪ್ ಗೆದ್ದರೆ, 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಐಸಿಸಿ ಟ್ರೋಫಿ ತನ್ನದಾಗಿಸಿಕೊಂಡಿದೆ.

ಈ ಮಧ್ಯೆ, ಭಾರತ ತಂಡ 2ನೇ ಬಾರಿ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಕ್ರಿಕೆಟ್ ನ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ನಿವೃತ್ತಿ ಪ್ರಕಟಿಸಿದ್ದಾರೆ. 2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಮಹಿಳಾ ಏಕದಿನ ಕ್ರಿಕೆಟ್ : ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಗೆಲುವು

Published

on

ಸುದ್ದಿದಿನಡೆಸ್ಕ್:ದಕ್ಷಿಣ ಆಫ್ರಿಕಾ ಮಹಿಳೆಯರ ವಿರುದ್ಧ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಕ್ರಿಕೆಟ್ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಭಾರತದ ಮಹಿಳೆಯರು ಸರಣಿಯನ್ನು 3-0 ಅಂತರದಿಂದ ತಮ್ಮದಾಗಿಸಿಕೊಂಡಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿಗೆ ಆತಿಥ್ಯ ವಹಿಸಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ಮಹಿಳೆಯರು ತಮ್ಮ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದರು. ಸತತ ಮೂರು ಪಂದ್ಯಗಳಲ್ಲಿ ಪಾರಮ್ಯ ಮೆರೆಯುವ ಮೂಲಕ ತಾಯ್ನಾಡಿನಲ್ಲಿ ತಾವು ಎಷ್ಟು ಬಲವಂತರು ಎಂಬುದನ್ನು ಸಾಬೀತು ಮಾಡಿದರು.

ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವನಿತೆಯರಿಗೆ ಇನ್ನಿಲ್ಲದಂತೆ ಕಾಡಿದ್ದು, ಭಾರತ ತಂಡದ ಹಿರಿಯ ಬ್ಯಾಟರ್ ಸ್ಮೃತಿ ಮಂಧಾನ. ಮೊದಲೆರಡು ಪಂದ್ಯಗಳಲ್ಲಿ ಸತತ ಶತಕ ಬಾರಿಸಿದರು. ಮೂರನೇ ಪಂದ್ಯದಲ್ಲಿ ಶತಕದ ಅಂಚಿಗೆ ಬಂದು ಮೂರನೇ ಶತಕದಿಂದ ತಪ್ಪಿಸಿಕೊಂಡರು. ಮೊದಲ ಪಂದ್ಯದಲ್ಲಿ 117, ಎರಡನೇ ಪಂದ್ಯದಲ್ಲಿ 136 ರನ್ ಗಳಿಸಿದ್ದರು. ಮೂರನೇ ಪಂದ್ಯದಲ್ಲಿ ಭಾರತ ವನಿತೆಯರು ಪ್ರಯಾಸವಿಲ್ಲದೇ ಗೆಲುವು ಸಾಧಿಸಿದರು.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ವನಿತೆಯರು 50 ಓವರ್‌ಗಳಲ್ಲಿ 8 ವಿಕೆಟ್‌ಗೆ 215 ರನ್ ಗುರಿ ನೀಡಿದರು. ಭಾರತ 40.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 220 ರನ್ ಗಳಿಸಿತು. ಕೊನೆಯ ಪಂದ್ಯದಲ್ಲಿ ಸ್ಮೃತಿ ಮಂಧಾನ 83 ಎಸೆತಗಳಲ್ಲಿ 11 ಬೌಂಡರಿಗಳ ಸಮೇತ 90 ರನ್ ಗಳಿಸಿದರು. ಶೆಫಾಲಿ ವರ್ಮಾ 25, ಪ್ರಿಯಾ ಪೂನಿಯಾ 28, ನಾಯಕಿ ಹರ್ಮನ್‌ಪ್ರೀತ್ ಕೌರ್ 42 ಗಳಿಸಿದರು. ಕೊನೆಯಲ್ಲಿ ಜೆಮಿಮಾ ರೋಡ್ರಿಗಸ್ 19, ರಿಚಾ ಘೋಷ್ 6 ರನ್ ಗಳಿಸಿ ಗೆಲುವಿನ ಶಾಸ್ತ್ರ ಮುಗಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಹೊನ್ನಾಳಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

Published

on

ಸುದ್ದಿದಿನ,ಹೊನ್ನಾಳಿ:ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕ್ರೀಡಾಕೂಟದ ಉದ್ಘಾಟನೆಯನ್ನು ದೇವರಾಜ್ ಸಿ ಪಾಟೀಲ್ ಅವರು ಇಂದು ಮಾಡಿದರು.

ಈ ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕರಾದ ಡಾ.ಹರೀಶ್ .ಪಿ.ಎಸ್. ಉಪನ್ಯಾಸಕರಾದ ಡಾ.ಮಹಾಬಲೇಶ್ವರ,ಡಾ. ಕೊಟ್ರೇಶ್ ಬೆಳ್ಳುಳ್ಳಿ. ಮಂಜುನಾಥ್ ಗುರು. ನಾಗರಾಜ್ ನಾಯ್ಕ .ಪ್ರಶಾಂತ್ ಶರ್ಮ. ವಿಶ್ವನಾಥ ಡಿ ಆರ್. ಶ್ರೀನಿವಾಸ್. ಅಮೂಲ್ಯ. ಪುರುಷೋತ್ತಮ್. ಜಗದೀಶ್. ವಾಗೀಶ್. ಕರಿಬಸಪ್ಪ. ಕಿರಣ್ ಎಂ ಅಂಗಡಿ . ಅಶೋಕ್. ಪ್ರಕಾಶ್.ಸಂಜು. ರೆಹಮತ್. ದೊಡ್ಡಪ್ಪ. ಮುಂತಾದವರು ಭಾಗವಹಿಸಿದ್ದರು.

ಈ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಆಸಕ್ತಿಯಿಂದ ಪಾಲ್ಗೊಂಡು ಕ್ರೀಡಾಕೂಟದ ಉದ್ಘಾಟನೆಯನ್ನು ಯಶಸ್ವಿಗೊಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending