ಲೈಫ್ ಸ್ಟೈಲ್
ಈಗ ತೂಕ ಇಳಿಸಿಕೊಳ್ಳುವದು ಡೊಳ್ಳು ಹೊಡೆದಷ್ಟೇ ಸುಲಭವಂತೆ..!
ಸದಾ ಕಾಲ ಗಂಡ, ಮನೆ, ಮಕ್ಕಳು ಅಂತ ದುಡಿಯುವ ಮಹಿಳೆ ನನಗೋಸ್ಕರ ಅಂತ ಸ್ವಾರ್ಥದಿಂದ ಬದುಕುವುದು ಕಡಿಮೆ. ಇಂದು ಜೀವನದ ಹಲವಾರು ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮಹಿಳೆ, ಅವಳ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗಗೆ ಅಷ್ಟಾಗಿ ತಲೆ ಕೆಡಸಿಕೊಳ್ಳುವವಳಲ್ಲ.
ಆದರೆ , ಆಧುನಿಕ ಮಹಿಳೆ ಇಂದಿನ ಜಗತ್ತಿಗೆ ಹೊಂದಿಕೊಂಡು ತನ್ನನ್ನು ತಾನು ಆರೋಗ್ಯವಂತಳಾಗಿ ; ಫಿಟ್ ಆಗಿದ್ದ ಇಚ್ಛಿಸುತ್ತಾಳೆ. ಸಮಾಜದ ಹಲವಾರು ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೂ.. ಎಲ್ಲರೆದುರು ಸೌಂದರ್ಯವತಿಯಂತೆ ಕಂಗೊಳಿಸಬೇಕು ಎಂಬ ಹಂಬಲ ಮಹಿಳಾಮಣಿಯರದು. ಅದಕ್ಕೆಂದೇ ಫಿಟ್ ನೆಸ್ ಮಂತ್ರ ಜಪಿಸುತ್ತಿದ್ದಾರೆ. ಯೋಗ , ಜಿಮ್, ಝುಂಬಾ, ಏರೋಬಿಕ್ಸ್, ನೃತ್ಯ.. ಹೀಗೆ ಹತ್ತು ಹಲವಾರು ರೀತಿಯಲ್ಲಿ “ಫಿಟ್ ನೆಸ್ ಫ್ರೀಕ್” ಗಳಾಗುತ್ತಿದ್ದಾರೆ.
ತಾರಾಮಣಿಯರಂತೆಯೇ ನಾವೂ ಕೂಡಾ ಕಾಣಬೇಕು ಎಂಬ ಹಂಬಲ ಇವರದು. ಸೆಲಿಬ್ರಿಟಿ ಗಳ ಫಿಟ್ ನೆಸ್ ಯೋಜನೆಗಳ ಅನುಕರಣೆ, ಜೀವನಶೈಲಿಯಲ್ಲಿ ಬದಲಾವಣೆಗೆ ಮುಂದಾಗಿದ್ದಾಳೆ.
ಏನಿದು ಪೌಂಡ್ ?
ಸದಾ ಸ್ಲಿಮ್ ಮತ್ತು ಟ್ರಿಮ್ ಆಗಿ ಕಾಣಬೇಕು ಎಂಬುದು ಹೆಂಗುಳೆಯರ ಹಂಬಲ. ಬಳ್ಳಿಯಂತೆ ಬಳಕುವ ಮೈಮಾಟ ಯಾರಿಗೆ ತಾನೇ ಬೇಡ! ಅದಕ್ಕೆಂದೇ ಮಹಿಳೆಯರು ದುಬಾರಿಯಾದರೂ ಮೋಹಕವಾಗಿ ,ಕಾಣಬೇಕು ಎಂದು, ಫಿಟ್ನೆಸ್ ಸೆಂಟರ್ ಗಳ ಮೊರೆ ಹೋಗಿದ್ದಾರೆ.
ಜುಂಬಾ, ಯೋಗ, ಏರಿಯಲ್ ಯೋಗ, ಕಾರ್ಡಿಯೋ, ಜಿಮ್, ಅಂತೆಲ್ಲಾ ಫಿಟ್ ನೆಸ್ ಸೆಂಟರ್ ಗಳ ಮೊರೆ ಹೋಗುತಿತರುವ ಮಹಳಾಮಣಿಯರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ.
ಅಮೇರಿಕಾ ದಿಂದ ಭಾರತಕ್ಕೆ ಹಾರಿ ಬಂದಿದೆ ಪೌಂಡ್ ಫಿಟ್ ನೆಸ್ ವರ್ಕ್ ಔಟ್. ಮೂಲತಃ ಅಮೇರಿಕಾ ದವರಾದ ಕ್ರಿಸ್ಟೀನ್ ಮತ್ತು ಖ್ರಿಸಿಟೀನಾ ಎಂಬ ಇಬ್ಬರು ಮಹಿಳೆಯರ ಕೊಡುಗೆ ಈ “ಪೌಂಡ್ ” … ಡ್ರಂಮ್ಮಿಗಗ್(ಡೊಳ್ಳು) ಮುಖಾಂತರ ಇಡೀ ದೇಹಕ್ಕೆ ವ್ಯಾಯಾಮ ಮಾಡಲಾಗುತ್ತದೆ. HIGH INTENSITY INTERNAL TRAINING ಒಳಗೊಂಡಿರುವ ಪೌಂಡ್ ( POUND) ವರ್ಕಔಟ್ ಸದ್ಯ ಇಡೀ ವಿಶ್ವದಲ್ಲಿ ಜನಪ್ರಿಯ ಗೂಂಡಿದೆ. ಈಗಾಗಲೇ ಜಗತ್ತಿನ ಅದೆಷ್ಟೋ ಮಂದಿ ಈ ಪೌಂಡ್ ಮ್ಯಾಜಿಕ್ ಗೆ ಫುಲ್ ಫಿದಾ ಆಗಿದ್ದಾರೆ. ಡ್ರಂ ಕಡ್ಡಿಗಳನ್ನ ನೆಲದ ಮೇಲೆ ಬಾರಿಸುತ್ತಾ… ಸಂಗೀತದೊಂದಿಗೆ ಬೆರೆತು.. ಬೆವರಿಳಿಸುವ ಬಗೆಯೇ “ಪೌಂಡ್ “… ದಿನಕ್ಕೆ 45 ನಿಮಿಷಗಳ ಪೌಂಡ್ ವರ್ಕ ಔಟ್ ಆರಾಮಾಗಿ ತಿಂಗಳಿಗೆ 2-3 kg ತೂಕ ಇಳಿಸುತ್ತದೆ. ಸುಮಾರು 800 calorie ಗಳನ್ನ ಸುಲಭವಾಗಿ ಕರಗಿಸುತ್ತದೆ. ತಿಂಗಳಲ್ಲಿ 5-6 ” ಸುತ್ತ ಅಳತೆ ಇಳಿಸುತ್ತದೆಯಂತೆ.
ಸಂಗೀತ ದೊಂದಿಗೆ ಡ್ರಮ್ಮಿಂಗ್ ಮಾಡುತ್ತಾ, ಸ್ಕ್ವಾಟ್, ಕ್ರಾಕ್ ಗಳ ಹೈ ಇಂಟೆಂಸಿಟೀ ವ್ಯಯಾಯಾ ಇದಾಗಿದೆ. ಸೊಂಟದ ಸುತ್ತಳತೆ, ಹಿಪ್ಸ್-ಥೈ ಗಳ ತೂಕ ಇಳಿಸಿಕೊಳ್ಳಲು ಉತ್ತಮ ವ್ಯಾಯಾಮವಂತೆ. ಚರ್ಮಕ್ಕೆ ಉತ್ತಮ ಟೋನಿಂಗ್ ನೀಡುತ್ತದೆ ಎನ್ನುತ್ತಾರೆ ಪೌಂಡ್ ಟ್ರೈನರ್ ಗಳು.
ಭಾರದಲ್ಲಿ ಪೌಂಡ್ !
ಇತ್ತೀಚೆಗೆ ಭಾರತಲ್ಲೂ ಹೆಸರು ಮಾಡುತ್ತಿರುವ “ಪೌಂಡ್ ವರ್ಕ್ ಔಟ್
“ಗೋವಾ, ಮುಂಬೈ, ಚೆನ್ನೈ, ಕೋಲ್ಕತಾದಲ್ಲಿ ಹೆಚ್ಚು ಗಮನ ಸೆಳೆದಿದೆ. ವಿದೇಶಿಯರೇ ಹೆಚ್ಚು ಇರುವ ಗೋವಾ ದಲ್ಲಿ ಇದು ತುಂಬಾ ಫೇಮಸ್ ! ಬೆಂಗಳೂರಿನಲ್ಲೂ ಶುರುವಾಗಿದೆ “ಪೌಂಡ್ ” ಕ್ರೇಜ್ !
ಏನನ್ನುತ್ತಾರೆ ಪೌಂಡ್ ಎಕ್ಸ್ಪರ್ಟ?
ಬೆಂಗಳೂರಿಗೆ ಪೌಂಡ್ ವರ್ಕ್ ಔಟ್ ಹೊಸತಾಗಿದ್ದು..ಬೆರಳಣಿಕೆ ಅಷ್ಟೇ ಟ್ರೈನರ್ ಗಳು ಲಭ್ಯವಿದ್ದಾರೆ. ಇನ್ನುಳಿದ ಫಿಟ್ ನೆಸ್ ವರ್ಕ್ ಔಟ್ ಗಿಂತಲೂ ವಿಭಿನ್ನವಾಗಿರುವ “ಪೌಂಡ್ ” ಸಂಗೀತ ಮತ್ತು ವ್ಯಾಯಾಮ ಸಿಹಿ ಮಿಶ್ರಣವಾಗಿದೆ.
ಬೆಂಗಳೂರಿನ ಪೌಂಡ್ ವರ್ಕ್ ಔಟ್ ಎಕ್ಸ್ಪರ್ಟ
ನಿಹಾರಿಕಾ( ನಿಕ್ಕಿ) ಬೆಂಗಳೂರಿನ ಪೌಂಡ್ ಟ್ರೈನರ್ ಹೀಗನ್ನುತ್ತಾರೆ… ಕಳೆದೆರಡು ವರ್ಷದ ಹಿಂದೆ, ಪ್ರಸವದ ನಂತರ ವಿಪರೀತ ದಡೂತಿ ಆಗಿದ್ದ ನಿಹಾರಿಕಾ.. ಈಗ 83 kg ಇಂದ 60 kg ಗೆ ತೂಕ ಇಳಿಸಿಕೊಂಡಿದ್ದಾರೆ.. ಕಳೆದ ಆರು ತಿಂಗಳಿಂದ ಪೌಂಡ್ ವರ್ಕ್ ಔಟ್ ಗೆ ತಮ್ಮನ್ನು
ಅರ್ಪಿಸಿಕೊಂಡಿರುವ ನಿಕ್ಕೀ.. ಬೆಂಗಳೂರಿನ ಕೆಲವೇ ಪೌಂಡ್ ಟ್ರೈನರ್ ಗಳಲ್ಲಿ ಒಬ್ಬರು. Gx ಸೆಂಟರ್ ನಲ್ಲಿ ಪೌಂಡ್ ಟ್ರೈನಿಂಗ್ ಮಗಿಸಿಕೊಂಡು.. ಪೌಂಡ್ ಟ್ರೈನರ್ ಆಗಿ ಗುರುತಿಸಿ ಕೊಂಡಿದ್ದಾರೆ 35 ವರ್ಷ ದ ಈ ಫಿಟ್ ಹೆಣ್ಣು.
“ಪೌಂಡ್ ಕೇವಲ ಸಂಗೀತದೊಂದಿಗಿನ ವ್ಯಾಯಾಮ ವಲ್ಲ.. ಇಲ್ಲಿ ಸಂಗೀತವೇ ವ್ಯಾಯಾಮ ವಾಗಿಬಿಡುತ್ತದೆ” ಎನ್ನುತ್ತಾರೆ ನಿಹಾರಿಕಾ.
ಈ ಪೌಂಡ್ ವರ್ಕ್ ಔಟ್ ಈಗ ಕೆಲವೇ ಫಿಟ್ ನೆಸ್ ಸೆಂಟರ್ ಗಳಲ್ಲಿ ಲಭ್ಯವಿದ್ದು ಇದರ ಮಹತ್ವ ವನ್ನು ಜನರಿಗೆ ತಲುಪಿಸಸುವ ಆಸೆ ನಿಹಾರಿಕಾರದ್ದು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ
ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.
ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.
ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243




