Connect with us

ದಿನದ ಸುದ್ದಿ

ತತಕ್ಷಣ ಕೆರೆಗಳಿಗೆ ನೀರು ತುಂಬಿಸಿ: ಸಿ.ಎಸ್.ಪುಟ್ಟರಾಜು

Published

on

ಸುದ್ದಿದಿನ,ಮಂಡ್ಯ: ವಿಶ್ವೇಶ್ವರಯ್ಯ ನಾಲೆ ಹಾಗೂ ಹೇಮಾವತಿ ನಾಲೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳನ್ನು ತತಕ್ಷಣದಲ್ಲಿ ತುಂಬಿಸಲು ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಣ್ಣ ನೀರಾವರಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ತಿಳಿಸಿದ್ದಾರೆ.

ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನೀರಾವರಿ ಇಲಾಖೆ ಹಾಗೂ ಇಂಧನ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದೆಲ್ಲೆಡೆ ಉತ್ತಮ ಮಳೆಯಾದರೂ ಕಾವೇರಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೊನೆ ಭಾಗದ ಕೆರೆಗಳು ತುಂಬದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸದಂತಾಗಿದೆ ಎಂದರು.

ಕೃಷಿ ಚಟುವಟಿಕೆಗೆ, ನೀರೇ ಜೀವಾಳವಾಗಿದ್ದು, ಮಂಡ್ಯ ಜಿಲ್ಲೆಯ ರೈತರಿಗೆ ನೀರಿಗೆ ಸಂಬಂಧಿಸಿದಂತೆ ಯಾವುದೇ ತೊಂದರೆಗೊಳಗಾಗಬಾರದು. ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕಿದ್ದು, ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿದ್ರ್ಯಾಕ್ಷಿಣ್ಯವಾಗಿ ಕ್ರಮವಹಿಸಲು ಮುಂದಾಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾಲೆಗಳ ನಿರ್ಮಾಣಕ್ಕೆ ರೈತರಿಂದ ಪಡೆದಿರುವ ಭೂಮಿಗೆ ಪರಿಹಾರ ನೀಡಿಲ್ಲವೆಂದು ರೈತರಿಂದ ದೂರುಗಳು ಕೇಳಿಬಂದಿವೆ. ಅಭಿವೃದ್ಧಿ ಕಾರ್ಯಕ್ಕೆಂದು ರೈತರು ನೀಡಿರುವ ಭೂಮಿಗೆ ತತಕ್ಷಣದಲ್ಲಿ ಕಾವೇರಿ ನೀರಾವರಿ ನಿಗಮವು ಪರಿಹಾರವನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಕೈಗೊಳ್ಳಬೇಕಾಗುವ ಅಭಿವೃದ್ಧಿ ಕೆಲಸಗಳಿಗೆ ರೈತರು ಭೂಮಿಕೊಡಲು ಮುಂದಾಗುವುದಿಲ್ಲ. ವಿಷಯದ ಸೂಕ್ಷ್ಮತೆ ಅರಿತು ಅಧಿಕಾರಿಗಳು ಬಹಳ ಎಚ್ಚರ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ನೀರನ್ನು ನಿರ್ವಹಣೆ ಮಾಡುವ ಸವಡೆಗಳಿಗೆ ಸರಿಯಾಗಿ ಪತ್ರಿ ತಿಂಗಳು ಸಂಬಳವಾಗುತ್ತಿಲ್ಲ. ಕೋರ್ಟ್ ಆದೇಶವಿದ್ದರೂ ಕೆಲಸಕ್ಕೆ ಸರಿಯಾದ ಸಮಾನ ವೇತನ ನೀಡದಿರುವ, ಇತರೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತ ಬರುತ್ತಿದ್ದಾರೆ ಎಂದು ಸವಡೆಗಳು ಅಳಲನ್ನು ತೋಡಿಕೊಂಡಿದ್ದಾರೆ ಎಂದ ಸಚಿವರು, ಯಾವುದೇ ಕಾರಣಕ್ಕೂ ರೈತರು ತೊಂದರೆ ಅನುಭವಿಸಬಾರದು. ನೀರು ನಿರ್ವಹಣೆ ಮಾಡುವುದು ಸವಡೆಗಳ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಸವಡೆಗಳ ಸಮಸ್ಯೆಗಳನ್ನು ಅರಿತಿರುವುದರಿಂದ, ಸದ್ಯದಲ್ಲೇ ಅವರ ಸಮಸ್ಯೆಯನ್ನು ಮುಖ್ಯಮಂತ್ರಿಗಳು ಹಾಗೂ ಬಾರಿ ನೀರಾವರಿ ಸಚಿವರ ಗಮನಕ್ಕೆ ತಂದು, ಸವಡೆಗಳ ಸಮಸ್ಯೆಗಳಿಗೆ ಪರಿಹಾರ ಕೊಡಿಸಲಾಗುವುದು ಎಂದು ಹೇಳಿದರು.

ರೈತರಿಗೆ ವಿದ್ಯುತ್ ಬಹಳ ಅವಶ್ಯಕವಾಗಿದ್ದು, ಸೆಸ್ಕ್ ಅಧಿಕಾರಿಗಳು ಶಾಸಕರುಗಳೊಂದಿಗೆ ಚರ್ಚಿಸಿ, ವಿಧಾನಸಭಾ ಕ್ಷೇತ್ರವಾರು ಬೇಕಾಗುವ ಸಬ್ ಸ್ಟೇಷನ್‍ಗಳ ಪಟ್ಟಿಯನ್ನು ಸಿದ್ಧಪಡಿಸಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಶೀಘ್ರ ಸಲ್ಲಿಸಬೇಕು. ರೈತರಿಗೆ ವಿದ್ಯುತ್ ಸರಬರಾಜಿನಲ್ಲಿ ಕೊರತೆಯಾಗಬಾರದು ಎಂದು ಹೇಳಿದ ಸಚಿವರು ಗ್ರಾಮಾಂತರ ಪ್ರದೇಶದಲ್ಲಿ ರಾತ್ರಿಯ ವೇಳೆ ಹೆಚ್ಚಿನ ಸಮಯ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ, ರೈತರು ರಾತ್ರಿಯ ವೇಳೆ ನಿದ್ರಿಸದೆ ವಿದ್ಯುತ್‍ಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಸೆಸ್ಕ್ ಅಧಿಕಾರಿಗಳು ನಿರಂತರ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುವಂತೆ ಮುಂದಿನ 25 ವರ್ಷವನ್ನು ಗಮನದಲ್ಲಿಟ್ಟುಕೊಂಡು, ವಿಶೇಷ ಯೋಜನೆಯನ್ನು ರೂಪಿಸಿ ವರದಿಯನ್ನು ಸಲ್ಲಿಸಲು ತಿಳಿಸಿದರು.

ಮಂಡ್ಯ ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು, ಸೆಸ್ಕ್ ಅಧಿಕಾರಿಗಳು ವಿಶೇಷ ಯೋಜನೆಯನ್ನು ಸಿದ್ಧಪಡಿಸಬೇಕು. ಇಂಧನ ಖಾತೆ ಮುಖ್ಯಮಂತ್ರಿಯವರ ಬಳಿ ಇರುವುದರಿಂದ, ರೈತರ ಹಿತದೃಷ್ಟಿಯಿಂದ ಅಧಿಕಾರಿಗಳು ಬೇಡಿಕೆಗಳನ್ನು ಈಡೇರಿಸಲು ತುಂಬ ಸಮಯಾವಕಾಶ ಬೇಕಾಗುವುದಿಲ್ಲ. ಮುಂದಿನ ದಿನಗಳಲ್ಲಿ ಟ್ರಾನ್ಸ್‍ಫಾರ್ಮರ್ಸ್, ವಿದ್ಯುತ್ ಕಂಬ ಅಥವಾ ಯಾವುದೇ ವಸ್ತುಗಳ ಕೊರತೆ ನೆಪವನ್ನು ಸೆÀಸ್ಕ್ ಅಧಿಕಾರಿಗಳು ನೀಡದೆ, ನಿರಂತರ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಇಂಧನ ಇಲಾಖೆಯಲ್ಲಿ ಕಾರ್ಯೋನ್ಮಖರಾಗಬೇಕು ಎಂದು ತಿಳಿಸಿದರು.

ಶಾಸಕರುಗಳಾದ ಎಂ.ಶ್ರೀನಿವಾಸ್, ಅನ್ನದಾನಿ, ಸುರೇಶ್‍ಗೌಡ, ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಎನ್.ಅಪ್ಪಾಜಿಗೌಡ ಹಾಗೂ ಕೆ.ಟಿ.ಶ್ರೀಂಠೇಗೌಡ ಅವರುಗಳು ಮಾತನಾಡಿ ಮಂಡ್ಯ ಜಿಲ್ಲೆಯಲ್ಲಿರುವ ಬಹಳಷ್ಟು ನಾಲೆಗಳು ಇದ್ದೂ ಇಲ್ಲದಂತಾಗಿದೆ. ನಾಲೆಗಳಲ್ಲಿ ಗಿಡಗಂಟೆಗಳು ಬೆಳೆದುನಿಂತಿದ್ದು , ಹೂಳು ನಾಲೆಗಳನ್ನು ಆವರಿಸಿಕೊಂಡಿದೆ. ಮೊದಲು ಗಿಡÉಗಂಟೆಗಳು ಹಾಗೂ ಹೂಳನ್ನು ತೆರವುಗೊಳಿಸಬೇಕು. ನಾಲೆಗಳಿಗೆ ಸರಾಗವಾಗಿ ನೀರು ಬರದಿರಲು ಇದು ಒಂದು ಮುಖ್ಯ ಕಾರಣವಾಗಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು ಒಮ್ಮತದಲ್ಲಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪ್ರಸನ್ನ, ಅಧೀಕ್ಷಕ ಇಂಜಿನಿಯರ್ ಅಮರ್‍ನಾಥ್,ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಾಹಣಾಧಿಕಾರಿ ಯಾಲಕ್ಕಿಗೌಡ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ವಿಧಾನಪರಿಷತ್ ಚುನಾವಣೆ ; ಬಿರುಸಿನ ಪ್ರಚಾರ

Published

on

ಸುದ್ದಿದಿನ ಡೆಸ್ಕ್ : ವಿಧಾನಪರಿಷತ್ ಚುನಾವಣೆ ಪ್ರಯುಕ್ತ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದ ಸಮನ್ವಯ ಸಮಿತಿ ಸಭೆಯನ್ನು ಬೆಂಗಳೂರಿನ ಜೆಪಿ ಭವನದಲ್ಲಿಂದು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿರೋಧಪಕ್ಷದ ನಾಯಕ ಮತ್ತು ಬಿಜೆಪಿ ಮುಖಂಡ ಆರ್. ಅಶೋಕ, ಮಾಜಿ ಸಚಿವರಾದ ಕೆ.ಗೋಪಾಲಯ್ಯ, ಸಿ.ಎನ್. ಅಶ್ವಥ್ ನಾರಾಯಣ, ಮುನಿರತ್ನ, ಸಿ.ಪಿ.ಯೋಗೇಶ್ವರ್ ಮಾತನಾಡಿದರು.

ಇನ್ನೊಂದೆಡೆ, ಚಿತ್ರದುರ್ಗದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ವಿಧಾನಪರಿಷತ್ ಸದಸ್ಯ ಪುಟಣ್ಣಯ್ಯ ಮತಯಾಚಿಸಿದರು. ಇದೇ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ಪಿಂಚಣಿ ವ್ಯವಸ್ಥೆ ಬದಲಾವಣೆಗೆ ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆತ್ಮಕತೆ | ವಿಶ್ವವಿದ್ಯಾಲಯದ ವಿರುದ್ಧ ನಡೆಸಿದ ಎರಡು ಧರಣಿಗಳು

Published

on

  • ರುದ್ರಪ್ಪ ಹನಗವಾಡಿ

ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ, ಕುವೆಂಪು ಅವರ ಮಾನಸಪುತ್ರರೆಂದೇ ಖ್ಯಾತರಾಗಿದ್ದ ಕನ್ನಡದ ಗದ್ಯ ಬರಹಗಾರ ಪ್ರೊ. ದೇ.ಜ.ಗೌ. ಅವರು ಎರಡು ಅವಧಿಗೆ ಉಪಕುಲಪತಿಗಳಾಗಿದ್ದರು. ಅವರ ಆಡಳಿತಾವಧಿಯಲ್ಲಿಯೇ ಹಲವು ಹೊಸ ಇಲಾಖೆ ಮತ್ತು ಗಂಗೋತ್ರಿಯಲ್ಲಿನ ಅನೇಕ ಹೊಸ ಕಟ್ಟಡಗಳು ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಮಾಡಿಸಿದ್ದರು. ಹೀಗಿರುವಾಗ ನಾವು ಫೈನಲ್ ಎಂ.ಎ.ನಲ್ಲಿರುವಾಗ ಪ್ರಥಮ ಎಂ.ಎ., ಎಂ.ಎಸ್ಸಿ., ಎಂ.ಕಾಂ., ಗಳಲ್ಲಿ ಸೇರಿಸಿಕೊಳ್ಳುವಾಗ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ಬಂದ ಕಾರಣ ಸಮಾಜವಾದಿ ಯುವಜನ ಸಭಾ ವತಿಯಿಂದ ಪ್ರತಿಭಟಿಸಲು ತೀರ್ಮಾನಿಸಲಾಯಿತು.

ಮೊದಲನೆಯದಾಗಿ ವಿಶ್ವವಿದ್ಯಾಲಯದ ಪಿ.ಜಿ. ಗಳಲ್ಲಿ ಪ್ರವೇಶಾವಕಾಶಗಳು, ವಿದ್ಯಾರ್ಥಿಗಳು ಆಯಾ ವಿಷಯಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅವಕಾಶವನ್ನು ಪಡೆಯುತ್ತಿದ್ದರು. ನಾನು 1972-73ನೇ ಸಾಲಿನಲ್ಲಿ ಸೇರಿದಾಗಲೂ ಹಲವು ವಿಷಯಗಳಲ್ಲಿ ಪ್ರವೇಶಾವಕಾಶದ ಕೊನೆಯ ಹಂತದಲ್ಲಿ ಮಂತ್ರಿ ಮಹೋದಯರೋ ಇಲ್ಲ ವಿಶ್ವವಿದ್ಯಾಲಯದಲ್ಲಿನ ಪ್ರೊಫೆಸರ್‌ಗಳ ಶಿಫಾರಸ್ಸಿನಿಂದ ಒಂದೋ ಎರಡೋ ಕಡಿಮೆ ಅಂಕ ಪಡೆದವರಿಗೂ ಸೀಟು ಕೊಡುತ್ತಿದ್ದರು. ಇವೆಲ್ಲ ಬಹಳ ದಿನಗಳ ನಂತರ ತಿಳಿಯುತ್ತಿದ್ದವು. ಆದರೆ 1973-74 ಆರಂಭಿಕ ಪ್ರವೇಶದಲ್ಲಿ ಅನೇಕ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದಿದ್ದರೂ ಹಲವಾರು ವ್ಯಕ್ತಿಗಳ ಶಿಫಾರಸ್ಸಿನ ಹಿನ್ನೆಲೆಯಲ್ಲಿ 8-10 ವಿದ್ಯಾರ್ಥಿಗಳು ಹಲವಾರು ಸ್ನಾತಕೋತ್ತರ ಶಾಖೆಗಳಲ್ಲಿ ಸೇರ್ಪಡೆಯಾಗಿದ್ದರು.

ಅವುಗಳ ವಿರುದ್ಧ ಸಮಾಜವಾದಿ ಯುವಜನ ಸಭಾದ ವಿದ್ಯಾರ್ಥಿಗಳು ದೇವನೂರು ಮಹಾದೇವನ ನೇತೃತ್ವದಲ್ಲಿ ಕ್ರಾರ‍್ಡ್ ಹಾಲ್ ಎದುರು ಧರಣಿ ಕೂತಿದ್ದೆವು. ಸಣ್ಣದೊಂದು ಪೆಂಡಾಲ್ ಹಾಕಿಕೊಂಡು ವಿಶ್ವವಿದ್ಯಾಲಯದ ಅತ್ಯುನ್ನತ ಕಲಿಕಾ ಕೇಂದ್ರಗಳಲ್ಲಿ ಕ್ರಮಬದ್ಧವಲ್ಲದ ಪ್ರವೇಶಗಳನ್ನು ರದ್ದುಪಡಿಸಲು ಆಗ್ರಹಿಸಿ ಧರಣಿ ನಡೆಯುತ್ತಿತ್ತು. ಈ ಧರಣಿ ಪ್ರಾರಂಭವಾಗುತ್ತಿದ್ದಂತೆ ಎಲ್ಲೆಲ್ಲಿ ಎಷ್ಟೆಷ್ಟು ವಿದ್ಯಾರ್ಥಿಗಳನ್ನು ಶಿಫಾರಸ್ಸಿನ ಮೇರೆಗೆ ಪ್ರವೇಶ ಪಡೆದಿದ್ದಾರೆ ಎನ್ನುವ ಚರ್ಚೆ ಬಂದು ರಾಜ್ಯಶಾಸ್ತç ವಿಭಾಗದಲ್ಲಿ ಅತ್ಯಂತ ಹೆಚ್ಚು ಅನಧಿಕೃತ ಪ್ರವೇಶ ಆಗಿದ್ದವೆಂದು ತಿಳಿದು ಬಂದಿತ್ತು.

ಉಳಿದ ವಿಭಾಗಗಳಲ್ಲಿ ಒಂದು ಎರಡು ಹೀಗೆ ಇದ್ದರೆ, ಕೆ.ಬಿ.ವೈ. ತೋಟಪ್ಪನವರು ಮುಖ್ಯಸ್ಥರಾಗಿದ್ದ ರಾಜ್ಯಶಾಸ್ತç ವಿಭಾಗದಲ್ಲಿ ಅದು ಹೆಚ್ಚಾಗಿತ್ತು. ಹೀಗೆ ಧರಣಿ ಮಾಡುತ್ತಿದ್ದ ನಮ್ಮಲ್ಲಿಗೆ ಮಹೇಶ ರಾಜ್ಯಶಾಸ್ತç ವಿಭಾಗಕ್ಕೆ ಶಿಫಾರಸ್ಸಿನಲ್ಲೇ ಪ್ರವೇಶ ಪಡೆದವನು, ನಮಗೆಲ್ಲ ಇಡ್ಲಿ ಚಟ್ನಿ ಕಟ್ಟಿಸಿಕೊಂಡು ಬಂದು ಕೊಟ್ಟನು. ಅವನ ವಿರುದ್ಧವೇ ನಾವು ಧರಣಿ ಕೂತಿದ್ದರೂ, ಯಾವ ಭಾವಾವೇಶವೂ ಇಲ್ಲದೆ, ಅವನನ್ನು ನೋಡಿ ನಮಗೆ ಅತ್ಯಾಶ್ಚರ್ಯವಾಗಿತ್ತು. ಎಲ್ಲ ಅನಧಿಕೃತ ಪ್ರವೇಶಾರ್ಥಿಗಳನ್ನು ತೆಗೆದು ಹಾಕಿದರೆ ನನಗೇನು ಬೇಸರವಿಲ್ಲ. ನಮ್ಮಪ್ಪನಿಗೆ ಸ್ವಲ್ಪ ಬೇಜಾರಾಗಬಹುದೆಂದು ಹೇಳಿದ್ದು ಈಗ ನೆನಪಾಗುತ್ತಿದೆ. ನಮ್ಮ ಧರಣಿಯಿಂದಾಗಿ ಈಗಾಗಲೇ ಆಗಿರುವ ಪ್ರವೇಶಾರ್ಥಿಗಳನ್ನು ತೆಗೆದು ಹಾಕಲಿಲ್ಲ. ಮುಂದಿನ ವರ್ಷಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿ ಪ್ರೊಫೆಸರ್‌ಗಳು ಪ್ರವೇಶಗಳಿಗೆ ಅರ್ಹವಾದ ವಿದ್ಯಾರ್ಥಿಗಳ ಅರ್ಜಿಗಳನ್ನು ಕುಲಪತಿಗಳ ಅನುಮೋದನೆ ಪಡೆದು, ನಂತರ ಪ್ರವೇಶಾರ್ಥಿಗಳಿಗೆ ಪ್ರವೇಶ ನೀಡುವ ಪರಿಪಾಲನೆ ಜಾರಿಗೆ ಬಂದಿದ್ದೊಂದು ಎಸ್.ವೈ.ಎಸ್. ಸಂಘಟನೆಯ ಸಾಧನೆ.

ಜೊತೆಗೆ ನಾನೂ ಕೂಡ, ಕಳೆದ ವರ್ಷವಷ್ಟೇ ಪಾರ್ವತಕ್ಕನವರ ಶಿಫಾರಸ್ಸಿನಿಂದ ಮೂರನೇ ಲಿಸ್ಟ್ನಲ್ಲಿ ಸೀಟು ಪಡೆದುಕೊಂಡಿದ್ದು, ಆ ಬಗ್ಗೆ ನನ್ನೊಳಗೆ ಅಪರಾಧಿ ಭಾವ ಇದ್ದೇ ಇತ್ತು. ಆಗ ಇದೊಂದು ದೊಡ್ಡ ಮಟ್ಟದ ಅನ್ಯಾಯವೆಂದು ಯಾರೂ ಪರಿಗಣಿಸದೆ ಮುಚ್ಚಿ ಹೋಯಿತು. ಈಗ ಅಂತಹ ಶಿಫಾರಸ್ಸಿನವರ ಸಂಖ್ಯೆಯೇ ಜಾಸ್ತಿಯಾಗಿ, ಅದರ ವಿರುದ್ಧ ಹೋರಾಟ ರೂಪಿಸುವಂತೆ ಆಗಿದ್ದು, ನಾನೂ ಕೂಡ ಭಾಗವಹಿಸಿದ್ದು ಆ ಕಾಲಘಟ್ಟದ ಎಚ್ಚರಿಕೆಯಲ್ಲಿದ್ದ ಸಂಘಟನೆಯ ಶಕ್ತಿಯಾಗಿತ್ತು.

ನಮ್ಮ ಧರಣಿಯ ವಿವರ ಮತ್ತು ಅನಧಿಕೃತ ಪ್ರವೇಶಾರ್ಥಿಗಳು ಅರ್ಥಶಾಸ್ತ್ರ ವಿಭಾಗದಲ್ಲೂ ಆಗಿರುವ ಬಗ್ಗೆ ಬಂಡಾಯ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವುಗಳ ಪ್ರತಿಗಳನ್ನು ನಾನು ಸ್ವತಃ ಕ್ಲಾಸಿನಲ್ಲಿ ಹಂಚಿದ್ದೆ. ಆದರೆ ನಮ್ಮ ವಿಭಾಗದ ಮುಖ್ಯಸ್ಥರಾದ ಜಿ.ಟಿ. ಹುಚ್ಚಪ್ಪನವರು ಯಾವುದೇ ವಿಚಾರಣೆ ನಡೆಸದೆ ಸುಮ್ಮನಾಗಿದ್ದರು. ಅವರು, ಆಗ ತೋರಿದ ದೊಡ್ಡತನ ಮರೆಯಲಾಗಿಲ್ಲ. ಅವರು ಮನಸ್ಸು ಮಾಡಿದ್ದರೆ ನನಗೆ ಶೈಕ್ಷಣಿಕವಾಗಿ ತೊಂದರೆ ಕೊಡಬಹುದಾಗಿತ್ತು. ಆದರೆ ಹಿರಿಯರಾಗಿದ್ದ ಪ್ರೊ. ಜಿ.ಟಿ. ಹುಚ್ಚಪ್ಪ ಅವರು ದೊಡ್ಡತನದಿಂದಲೇ ನಡೆದುಕೊಂಡಿದ್ದರು. ಗಂಗೋತ್ರಿ ತುಂಬಾ ಎಲ್ಲ ವಿಭಾಗಗಳ ಹೊರಗೆ ಅನಧಿಕೃತ ಪ್ರವೇಶಾರ್ಥಿಗಳ ಕುರಿತು ಘೋಷವಾಕ್ಯಗಳನ್ನು ಬರೆದಿದ್ದೆವು. ವಿಜ್ಞಾನ ಮತ್ತು ರಾಜ್ಯಶಾಸ್ತç ವಿಭಾಗದಲ್ಲಿ ಆಗಿದ್ದ ಪ್ರವೇಶಾರ್ಥಿಗಳ ವಿವರಗಳನ್ನು ಬಾಟನಿ ವಿಭಾಗದಲ್ಲಿ ರೀಡರ್ ಆಗಿದ್ದ ಪ್ರೊ. ರಾಮಲಿಂಗಮ್ ಅವರೊಡನೆ ಇತರೆ ಅಧ್ಯಾಪಕರುಗಳು ಕೂಡ ನಮಗೆ ವಿವರ ನೀಡುತ್ತಿದ್ದರು. ಎಲ್ಲಾ ವಿಭಾಗಗಳ ಮತ್ತು ಕನ್ನಡ ಅಧ್ಯಯನ ಸಂಸ್ಥೆಯ ಗೋಡೆಯ ಮೇಲೂ ಕೂಡ ಬರೆದಿದ್ದೆವು. ಮಾರನೆ ದಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಹಾ.ಮಾ. ನಾಯಕ್ ಅವರು ಬಂದು ನೋಡಿ ಇದೆಲ್ಲಾ `ತಮ್ಮ ವಿದ್ಯಾರ್ಥಿ ಮಹಾದೇವನದೇ ಕೈವಾಡವೆಂದು ರೇಗಾಡಿದರೆಂತಲೂ, ಆತನಿಗೆ ತಕ್ಕ ಶಾಸ್ತಿ ಮಾಡುವುದಾಗಿ ಹೇಳಿದರೆಂದು’ ಆಲನಹಳ್ಳಿ ಕೃಷ್ಣ ಬಂದು ನನ್ನ ಬಳಿ ಹೇಳಿದರು.

ನಾನು ಮಹಾದೇವ ಬಂದಾಕ್ಷಣ ಅವನ ಕನ್ನಡ ವಿಭಾಗದಲ್ಲಿ ಆದ ಬೆಳವಣಿಗೆಯನ್ನು ತಿಳಿಸಿದೆ ಅದಕ್ಕವನು `ನಾವೆಲ್ಲ ಮಾಡುತ್ತಿರುವ ಹೋರಾಟದಲ್ಲಿ ನಿಮ್ಮಂತವರ ಬೆಂಬಲ ತಾತ್ವಿಕವಾಗಿ ಇರುವುದೆಂದು ಭಾವಿಸಿದ್ದೆವು, ಆದರೆ ನೀವು ಆಲನಹಳ್ಳಿ ಕೃಷ್ಣ ಅವರ ಬಳಿ ಆಡಿದ ಮಾತು ಕೇಳಿ ನನಗೆ ಜಿಗುಪ್ಸೆ ಮೂಡಿ ನಿಮ್ಮಂತಹವರ ಕೆಳಗೆ ವಿದ್ಯಾಭ್ಯಾಸ ಮುಂದುವರಿಸಲು ನಾಚಿಕೆಯಾಗುತ್ತದೆ’ ಎಂದು ಪತ್ರ ಬರೆದು ಹಾ.ಮಾ. ನಾಯಕ್ ಮತ್ತು ಪ್ರಜಾವಾಣಿ ಪತ್ರಿಕೆಗೂ ಕಳಿಸಿಕೊಟ್ಟುಬಿಟ್ಟ. ಇದಕ್ಕೆಲ್ಲ ಕಾರಣರಾದ ಆಲನಹಳ್ಳಿ ಅವರಿಗೆ ಪೀಕಲಾಟವಾಯಿತು. ಪೋಸ್ಟ್ ಹಾಕಿದ ಪತ್ರ ಹಾ.ಮಾ.ನಾ.ಗೆ ಮತ್ತು ಪ್ರಜಾವಾಣಿಗೆ ತಲುಪಿದರೂ ಪ್ರಕಟಿಸದಂತೆ ಪ್ರಜಾವಾಣಿಗೆ ಫೋನ್ ಮಾಡಲು ಪ್ರಯತ್ನಿಸಿದರು. ಆದರೆ ಹಾ.ಮಾ.ನಾ.ಗೆ ಬರೆದ ಪತ್ರ ತಲುಪಿ ಮಾದೇವನನ್ನು ಕರೆದು ಮಾತಾಡಿಸಿ, ಹಾ.ಮಾ.ನಾ. ನಾವುಗಳು ಮಾಡುತ್ತಿರುವ ಹೋರಾಟದ ಬಗ್ಗೆ ತಮ್ಮದೇನೂ ಅಭ್ಯಂತರವಿಲ್ಲವೆAದು ಹೇಳಿ ಕಳಿಸಿದರೆಂದು ನಂತರ ತಿಳಿಯಿತು. ಹಾಗಾಗಿ ಮಾದೇವ ಎಂ.ಎ. ಪೂರ್ತಿ ಮುಗಿಸುವ ತನಕ ಮತ್ತೇನು ತೊಂದರೆಯಾಗಲಿಲ್ಲ.

ನಮ್ಮ ಸೀನಿಯರ್ ಆಗಿದ್ದ ಬಸವಣ್ಯಪ್ಪ ಆಗಲೇ ಎಂ.ಎ. ಮುಗಿಸಿ ಪರ‍್ವತಕ್ಕನ ಸೋಷಿಯಾಲಜಿ ವಿಭಾಗದಲ್ಲಿ ಸಹಾಯಕ ನಿರ್ದೇಶಕನ ಕೆಲಸ ಮಾಡುತ್ತಿದ್ದ. ನಾನು ನನ್ನ ಎಸ್‌ವೈಎಸ್ ಚಟುವಟಿಕೆಗಳ ಬಗ್ಗೆ ಪತ್ರಿಕೆಗಳಲ್ಲಿ ವಿಶ್ವವಿದ್ಯಾಲಯದ ವಿಷಯ ಮುದ್ರಿಸಿ ತರಗತಿಯಲ್ಲಿ ಹಂಚಿದ ಬಗ್ಗೆ ತಿಳಿದು, ನನಗೆ ಎಚ್ಚರಿಕೆ ನೀಡಿ ನಿನಗೆ ಎಂ.ಎ.ನಲ್ಲಿ ಥರ್ಡ್ ಕ್ಲಾಸ್ ನೀಡಿ ಎಲ್ಲೂ ನಿನಗೆ ಕೆಲಸವಿದಲ್ಲದಂತೆ ಮಾಡುತ್ತಾರೆಂದು ತಿಳಿಸಿ ಆತಂಕ ವ್ಯಕ್ತಪಡಿಸಿದ್ದ. ಆದರೆ ಅಂತಹದ್ದೇನೂ ನಡೆಯದೆ ಫಲಿತಾಂಶ ಬಂದಾಗ ನಾನು ಎಂ.ಎ. ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾಗಿ ಹೊರಬಂದಿದ್ದೆ. ಅದಕ್ಕೆಲ್ಲ ಅಂದಿನ ಮುಖ್ಯಸ್ಥರಾಗಿದ್ದ ಪ್ರೊ. ಜಿ.ಟಿ. ಹುಚ್ಚಪ್ಪನವರ ವಿಶಾಲ ಹೃದಯದ ನಡವಳಿಕೆಯೇ ಕಾರಣವಾಗಿತ್ತು.

ಇನ್ನೊಂದು ಪ್ರಕರಣ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಸೋದರ ಸಂಬಂಧಿಯಾದ ಡಿ. ವಿಜಯರಾಜೇ ಅರಸ್ (ಡಿ.ವಿ. ಅರಸ್) ಅವರು ನೂತನ ರಿಜಿಸ್ಟಾçರ್ ಆಗಿ ಇದ್ದರು. ಅವರು ಬಿ.ಎ. (ಆರ‍್ಸ್) ಮಾಡಿ ಹಲವು ದೇಶಗಳನ್ನು ಸುತ್ತಿ ಬಂದ ಅನುಭವೀ ಆಡಳಿತಗಾರರಾಗಿದ್ದರು. ಅವರ ಆಡಳಿತ ಮತ್ತು ವೈಯಕ್ತಿಕ ಆಸಕ್ತಿಗೆ ತಕ್ಕಂತೆ ತಮ್ಮ ಛೇಂಬರ್‌ಗೆ ರೆಡ್ ಕಾರ್ಪೆಟ್ ಹಾಕಿಸಿಕೊಂಡದ್ದೊಂದು ದೊಡ್ಡ ಸುದ್ದಿಯಾಗಿತ್ತು. ಅದರ ವಿರುದ್ಧ ಎಸ್.ವೈ.ಎಸ್. ಧರಣಿ ಮಾಡಿ ಎಲ್ಲ ವಿದ್ಯಾರ್ಥಿಗಳಲ್ಲೂ ಚರ್ಚಿಸುವಂತೆ ಮತ್ತೆ ಪತ್ರಿಕೆಗಳಲ್ಲಿ ಬಂದು, ರಿಜಿಸ್ಟಾçರ್ ಅವರ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕೆಂದು ಧರಣಿ ಮಾಡಿದ್ದೆವು. ಈಗ ಯೋಚಿಸಿದರೆ ಆಗ ನಾವು ಮಾಡುತ್ತಿದ್ದ ಸಣ್ಣ ಸಣ್ಣ ಭ್ರಷ್ಟಾಚಾರ ಸ್ವಜನ ಪಕ್ಷಪಾತಗಳಿಗೆ ಪ್ರತಿಕ್ರಿಯಿಸುತ್ತಿದ್ದ ವಿದ್ಯಾರ್ಥಿ ಸಮೂಹ ಈಗ ಇಂತಹ ಯಾವುದೇ ಸ್ಪಂದನವನ್ನು ಕಾಣದೆ ಎಲ್ಲರೂ ತಮ್ಮ ತಮ್ಮ ಜಾತಿ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ಸಮಾಜದ ಸಮಷ್ಟಿ ಬೆಳವಣಿಗೆಯ ಬಗ್ಗೆ ನಿರುತ್ಸಾಹ ಎದ್ದು ಕಾಣುತ್ತದೆ. ವಿಶ್ವವಿದ್ಯಾಲಯಗಳಲ್ಲಿ ವರ್ಷಗಟ್ಟಲೆ ಅಧ್ಯಾಪಕರಿಲ್ಲದೆ ಇದ್ದರೂ,ಆ ಬಗ್ಗೆ ದಿವ್ಯ ನಿರ್ಲಕ್ಷ್ಯ ದಿಂದ ಇರುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳಲ್ಲಿ ಸಂಘಟಿತ ಹೋರಾಟಗಳು ಇಲ್ಲವಾಗಿವೆ.

ಈ ಮೇಲಿನ ಎರಡು ಧರಣಿಗಳು ಎಲ್ಲಾ ವಿದ್ಯಾರ್ಥಿ ದೆಸೆಯ ಸಮಾಜವಾದಿ ಯುವಜನ ಸಭಾದ ಸಂಘಟನೆಯ ಮುಖಾಂತರ ನಡೆದವುಗಳು. ವಿದ್ಯಾರ್ಥಿಗಳಾಗಿ ನಾವು ವಿಶ್ವವಿದ್ಯಾಲಯದಲ್ಲಿನ ಸಮಸ್ಯೆಗಳಿಗೆ ಏನೂ ಮಾಡಲಾರೆವು ಎಂದು ಕೈಚೆಲ್ಲಿ ಕೂರದೆ ಸಂಘಟಿತ ಪ್ರತಿಭಟನೆ ಮಾಡಿದಾಗ ಆಗುವ ಬದಲಾವಣೆಯನ್ನು ಕೂಡ ಕಣ್ಣೆದುರಿಗೆ ತೋರಿಸುವಂತಾಗಿದ್ದವು. ಮುಂದಿನ ದಿನಗಳಲ್ಲಿ ಅಧಿಕಾರಸ್ಥರಿಗೆ ಸರಿಯಾದ ಮಾರ್ಗದಲ್ಲಿ ನಡೆಯಲು ದಿಕ್ಸೂಚಿಯಾಗಿ ನಿಂತವು ಎಂಬುದರಲ್ಲಿ ಎರಡು ಮಾತಿಲ್ಲ.

ಓ ನನ್ನ ಮೈಸೂರೆ !

ನಮ್ಮೂರ ಹಾಲಿವಾಣದ ಮುಳ್ಳುಗಳು
ಓಡಾಡೋ ದಾರಿಯ ಕೊರಕಲುಗಳು
ಒಪ್ಪಾರೆ ನೆರಕೆಯ ಹೋಟೆಲುಗಳ ಕಿಲುಬು ಕಪ್ಪುಗಳು
ಒಟ್ಟಾರೆ ಒಂದೆರಡಲ್ಲ ಹೀಗೆ ನೂರಾರು ಸಿಕ್ಕುಗಳ
ಮಡಿ ಮೈಲಿಗೆ ದಾಟಿ…

ನೇರ ಹರಿಯೋ ರೈಲುಹತ್ತಿ ಮೈಸೂರು ತಲುಪಿದ್ದು
ಮಹಾರಾಜರೇ ಕಟ್ಟಿದ ಕಾಲೇಜು ಮೆಟ್ಟಿದ್ದು
ಅರಮನೆ, ಚಾಮುಂಡಿ ಬೆಟ್ಟ
ಎತ್ತೆತ್ತಲೋ ಕೊಂಡೊಯ್ಯುವ ರಸ್ತೆಗಳು
ಹೌಹಾರುವ ನೋಟಗಳು
ಎಲ್ಲ ಹೊತ್ತೊಗೆದಿತ್ತು ನನ್ನ
ಜನ್ಮ ಜನ್ಮಾಂತರದ ಹೊರೆಯ
ಕಣ್ಣಿಗಂಟಿದಾ ಪೊರೆಯ…

ದಿವ್ಯ ದೇಗುಲದಾ ಒಳಗೆ
ಬೆಳಕ ತೋರೋ ಪಂಡಿತರು
ಕಾಸಿ ಕಾಸಿ ಹಣಿಯೋ ಕುಲುಮೆಗಳು
ಬೆಳ್ಳಿ ಬಂಗಾರದ ಭಂಡಾರಗಳು
ಉAಡು ಉಡಲು ಇತ್ತ
ರಾಜನ ಹೆಸರಿನ ತಂಗುದಾಣ
ಅದುವೇ ಪಂಚಾಮೃತ…

ಇದ್ದವರೆಲ್ಲ, ಇಲ್ಲಿ ನನ್ನಂತವರಲ್ಲ
ಆಗಲೇ ಸಿಗರೇಟು ಹಚ್ಚಿ
ಕಥೆ ಬರೆಯೋ ಮಾದೇವ
ಟರ್ಲಿನ್ ಷರ್ಟನಲ್ಲಿ ಬಂಗಾರದ ಚೈನು ಹಾಕಿ
ವಿಶಾಲ ಹೃದಯ ತೋರೋ ರೆಡ್ಡಿ
ತಾಯಿಗಡುಸಿನ ತಾವು ತೋರೋ ಮಹೇಶ
ಅವಸರದಲ್ಲೂ ಉಡದಂತೆ ಹಿಡಿದು ಒಪ್ಪಿಸೋ ಅರ್ಕೇಶ
ಅಕ್ಷರಗಳನಾಡಿಸಿ ಮಣಿಸೋ ಭಕ್ತ
ಸಮತಟ್ಟಲಿ ಹರಿಯೋ ಹೊಳೆಯಂತೆ ಗೊಟ್ಟಿಗೆರೆ ಶಿವರಾಜ
ವಾರವೆಲ್ಲ ಉಣದಿದ್ದರೂ ಬಣ್ಣಗೆಡದ ರಾಕೆ…

ಇಂತವರೆಲ್ಲರ ಕೂಡಿ ಹಾಕಿ ಮಾತಾಡೋ
ನಂಜುAಡಸ್ವಾಮಿ, ವಕೀಲ ಟಿ.ಎನ್.ಎನ್., ದಾನಿ ಪಿ. ಮಲ್ಲೇಶ್
ಅನಂತರಂಗಾಚಾರ್, ರಾಮದಾಸ್
ನೆಲಮೂಲದ ನೆರವು ತೋರೋ
ನೆಲಮನೆಯ ದೇವೇಗೌಡ
ಆಂದೋಲನದಾಳಕ್ಕೂ ಮುಳುಗಿನಿಂತ
ರಾಜಶೇಖರ ಕೋಟಿ
ಅರೆಜೀವಗೊಂಡವರ
ಹೊರೆಹೊತ್ತು ಬರುವಾ ಕೃಷ್ಣಪ್ಪ
ರಿಪೇರಿಯಲ್ಲೇ ಓಡೋ ಜೀಪಲ್ಲಿ ತೇಜಸ್ವಿ
ಕ್ರಾಂತಿಕವನಗಳ ಕಟ್ಟು ಹೊತ್ತ
ಸಂಕ್ರಮಣದ ಚಂಪಾ
ಸ್ಫೋಟಕ ಸುದ್ಧಿಯ ಪ್ರೊ. ರಾಮಲಿಂಗ
ಯುವಕರ ಕಣ್ಣಲ್ಲಿ ಮಿಂಚು ಹರಿಸೋ
ಅನಂತಮೂರ್ತಿ, ಲಂಕೇಶ, ರಾಮಮೂರ್ತಿ
ವಿಚಾರವಾದಿಗಳ ರಥಕತೆಯ
ರ‍್ಮಲಿಂಗಂ, ಕೊವೂರ್, ಪೆರಿಯಾರ್
ಹೆಚ್. ನರಸಿಂಹಯ್ಯ, ಕುವೆಂಪು, ಬಸವಲಿಂಗಪ್ಪ…

ಬದುಕು ಬರಹಗಳೇ
ರಸವಾಗಿ ಕೊಸರಾಗಿ ಮೈವೆತ್ತ
ಎಲ್. ಬಸವರಾಜು, ಸುಜನಾ
ಹೀಗೆ ಹರಿಯುತ್ತದೆ
ನನ್ನರಿವಿನಾ ಹರವು…
ಬೆರಗಾಗಿ – ಬೆಳಕಾಗಿ
ಕೆನೆಮೊಸರ ಕಡೆದಂತೆ
ಸೊಗಸಾಗಿ ಬೆಳೆದಿದೆ
ಇಂದಿಗೂ ತಲೆದಿಂಬಾಗಿ
ತಲೆ ಎತ್ತಿ ತಿರುಗಾಡುವ
ಅಂಬಾಗಿ…

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆರನೇ ಹಂತದ ಲೋಕಸಭಾ ಚುನಾವಣೆ ಮತದಾನ ಶಾಂತಿಯುತ

Published

on

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ.

ಈ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಒಟ್ಟು 58 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು. 5 ಗಂಟೆಯ ವೇಳೆಗೆ ಬಂದ ವರದಿಯ ಪ್ರಕಾರ, 6ನೇ ಹಂತದ 58 ಕ್ಷೇತ್ರಗಳಲ್ಲಿ ಒಟ್ಟಾರೆ ಶೇಕಡ 57.70 ರಷ್ಟು ಮತದಾನವಾಗಿದೆ.

ಬಿಹಾರದಲ್ಲಿ ಶೇಕಡ 52.24, ಜಾರ್ಖಂಡ್‌ನಲ್ಲಿ ಶೇಕಡ 61.41, ಹರ್ಯಾಣzಲ್ಲಿ ಶೇಕಡ 55.93, ಒಡಿಶಾದಲ್ಲಿ ಶೇಕಡ 59.60, ಉತ್ತರಪ್ರದೇಶದಲ್ಲಿ 52.02 ಮತ್ತು ಪಶ್ಚಿಮಬಂಗಾಳದಲ್ಲಿ 77.99, ದೆಹಲಿಯಲ್ಲಿ 53.73 ಹಾಗೂ ಜಮ್ಮು-ಕಾಶ್ಮೀರದಲ್ಲಿ ಶೇಕಡ 51.35ರಷ್ಟು ಮತದಾನವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ9 mins ago

ವಿಧಾನಪರಿಷತ್ ಚುನಾವಣೆ ; ಬಿರುಸಿನ ಪ್ರಚಾರ

ಸುದ್ದಿದಿನ ಡೆಸ್ಕ್ : ವಿಧಾನಪರಿಷತ್ ಚುನಾವಣೆ ಪ್ರಯುಕ್ತ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದ ಸಮನ್ವಯ ಸಮಿತಿ ಸಭೆಯನ್ನು ಬೆಂಗಳೂರಿನ ಜೆಪಿ...

ದಿನದ ಸುದ್ದಿ9 hours ago

ಆತ್ಮಕತೆ | ವಿಶ್ವವಿದ್ಯಾಲಯದ ವಿರುದ್ಧ ನಡೆಸಿದ ಎರಡು ಧರಣಿಗಳು

ರುದ್ರಪ್ಪ ಹನಗವಾಡಿ ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ, ಕುವೆಂಪು ಅವರ ಮಾನಸಪುತ್ರರೆಂದೇ ಖ್ಯಾತರಾಗಿದ್ದ ಕನ್ನಡದ ಗದ್ಯ ಬರಹಗಾರ ಪ್ರೊ. ದೇ.ಜ.ಗೌ. ಅವರು ಎರಡು ಅವಧಿಗೆ ಉಪಕುಲಪತಿಗಳಾಗಿದ್ದರು. ಅವರ...

ದಿನದ ಸುದ್ದಿ22 hours ago

ಆರನೇ ಹಂತದ ಲೋಕಸಭಾ ಚುನಾವಣೆ ಮತದಾನ ಶಾಂತಿಯುತ

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. ಈ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ...

ದಿನದ ಸುದ್ದಿ23 hours ago

ಚನ್ನಗಿರಿ | ಆರೋಪಿ ಮೃತಪಟ್ಟ ಪ್ರಕರಣ ; ಅದು ಲಾಕಪ್ ಡೆತ್ ಅಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಸುದ್ದಿದಿನ,ದಾವಣಗೆರೆ : ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿ ಆರೋಪಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆರೋಪಿಗೆ ಮೂರ್ಛೆ ರೋಗವಿದ್ದು...

ಕ್ರೀಡೆ1 day ago

ಮಧ್ಯಾಹ್ನದ ಪ್ರಮುಖ ಸುದ್ದಿಗಳು 

ಸುದ್ದಿದಿನ ಕನ್ನಡ ನ್ಯೂಸ್ ಮಧ್ಯಾಹ್ನದ ಪ್ರಮುಖ ಸುದ್ದಿಗಳು  ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ಮತದಾನ ಪ್ರಗತಿಯಲ್ಲಿದೆ. 11 ಗಂಟೆಯ ವೇಳೆಗೆ ಬಂದ ವರದಿಯ ಪ್ರಕಾರ...

ದಿನದ ಸುದ್ದಿ2 days ago

ಈ ಹತ್ತು ಜಿಲ್ಲೆಗಳಲ್ಲಿ ಭಾರೀ ಮಳೆ

ಸುದ್ದಿದಿನ ಡೆಸ್ಕ್ ; ರಾಜ್ಯದ ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ತುಮಕೂರು, ಕೊಡುಗು ಜಿಲ್ಲೆಗಳ ಧಾರಾಕಾರ...

ದಿನದ ಸುದ್ದಿ2 days ago

ಬಂಡವಾಳ ಹೂಡಿಕೆಗೆ ರಾಜ್ಯ ಉತ್ತಮ ತಾಣ : ಡಿಸಿಎಂ ಡಿ.ಕೆ.ಶಿವಕುಮಾರ್

ಸುದ್ದಿದಿನ ಡೆಸ್ಕ್ : ಬಂಡವಾಳ ಹೂಡಿಕೆಗೆ ರಾಜ್ಯ ಉತ್ತಮ ತಾಣವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ...

ದಿನದ ಸುದ್ದಿ2 days ago

ಉಪೇಂದ್ರ UI ಸಿನೆಮಾ | ಇತಿಹಾಸ ನಿರ್ಮಿಸಲು ಸಜ್ಜು ; ಹಂಗೇರಿಯಲ್ಲಿ ಮ್ಯೂಸಿಕ್..!

“UI” ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಮೊದಲ ಬಾರಿಗೆ, ಹಂಗೇರಿಯ ಬುಡಾಪೆಸ್ಟ್‌ನಲ್ಲಿ 90-ಪೀಸ್ ಆರ್ಕೆಸ್ಟ್ರಾ ಭಾರತೀಯ ಚಲನಚಿತ್ರಕ್ಕಾಗಿ ಸಂಗೀತವನ್ನು ರೆಕಾರ್ಡ್ ಮಾಡುತ್ತಿದೆ. ಈ ಅದ್ಭುತ ಸಾಧನೆಯು...

ದಿನದ ಸುದ್ದಿ2 days ago

ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸರ್ಕಾರ ಸಿದ್ದ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ ಡೆಸ್ಕ್ : ಲೋಕಸಭೆ ಚುನಾವಣೆ ಫಲಿತಾಂಶ ಹೊರಬಂದ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ...

ದಿನದ ಸುದ್ದಿ2 days ago

ವಿಧಾನ ಪರಿಷತ್ ಚುನಾವಣೆ | ಮತದಾರರಿಗೆ ವೋಟರ್ ಸ್ಲಿಪ್ ವಿತರಣೆಗೆ ಸೂಚನೆ : ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್

ಸುದ್ದಿದಿನ,ದಾವಣಗೆರೆ : ರಾಜ್ಯ ವಿಧಾನ ಪರಿಷತ್ತಿನ ಸ್ಥಾನಗಳಿಗೆ ಜೂನ್ 3 ರಂದು ಚುನಾವಣೆ ನಡೆಯುತ್ತಿದ್ದು ಜಿಲ್ಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ತ ಶಿಕ್ಷಕರ ಹಾಗೂ ಪದವೀಧರರ...

Trending